logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿರುವ ಬಸವ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ ಕಾಲೇಜು) ರಾಜ್ಯಮಟ್ಟದ ಪ್ರತಿಷ್ಠಿತ ಇಂಡಿಯಾ ಎಲೈಟ್ ಇನ್ಸ್ಟಿಟ್ಯೂಷನಲ್ ಎಕ್ಸಲೆನ್ಸ್ ಪ್ರಶಸ್ತಿ- 2026ಕ್ಕೆ ಆಯ್ಕೆಯಾಗಿದೆ. ಎಡುಅವಾರ್ಡ್ಸ್ ಇಂಡಿಯಾ ಸಂಸ್ಥೆಯು ಬಸವ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಮತ್ತು ಭರವಸೆಯ ಕೈಗಾರಿಕಾ ತರಬೇತಿ ಸಂಸ್ಥೆ ಎಂದು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಬಸವ ಐಟಿಐ ಸಂಸ್ಥೆಯ ಪ್ರಾಂಶುಪಾಲ ತಿಪ್ಪಣ್ಣ ಎಂ ಹೊಸಮನಿ ಹಾಗೂ ಉಪನ್ಯಾಸಕಿ ಸುಮಾ ಟಿ. ಹೊಸಮನಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಗುಣಮಟ್ಟದ ಶಿಕ್ಷಣವನ್ನು ನೀಡಿದಕ್ಕಾಗಿ ಬಸವ ಕೈಗಾರಿಕಾ ತರಬೇತಿ ಸಂಸ್ಥೆಗೆ ಈ ರಾಜ್ಯಮಟ್ಟದ ಗೌರವ ಸಂದಿದೆ.

2 hrs ago
user_ಬಸವರಾಜ ಭೋಗಾವತಿ
ಬಸವರಾಜ ಭೋಗಾವತಿ
Local News Reporter ಮಾನ್ವಿ, ರಾಯಚೂರು, ಕರ್ನಾಟಕ•
2 hrs ago
0c4f90ec-dd7a-4f44-b2a1-8c7fae021141

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿರುವ ಬಸವ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ ಕಾಲೇಜು) ರಾಜ್ಯಮಟ್ಟದ ಪ್ರತಿಷ್ಠಿತ ಇಂಡಿಯಾ ಎಲೈಟ್ ಇನ್ಸ್ಟಿಟ್ಯೂಷನಲ್ ಎಕ್ಸಲೆನ್ಸ್ ಪ್ರಶಸ್ತಿ- 2026ಕ್ಕೆ ಆಯ್ಕೆಯಾಗಿದೆ. ಎಡುಅವಾರ್ಡ್ಸ್ ಇಂಡಿಯಾ ಸಂಸ್ಥೆಯು ಬಸವ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಮತ್ತು ಭರವಸೆಯ ಕೈಗಾರಿಕಾ ತರಬೇತಿ ಸಂಸ್ಥೆ ಎಂದು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಬಸವ ಐಟಿಐ ಸಂಸ್ಥೆಯ ಪ್ರಾಂಶುಪಾಲ ತಿಪ್ಪಣ್ಣ ಎಂ ಹೊಸಮನಿ ಹಾಗೂ ಉಪನ್ಯಾಸಕಿ ಸುಮಾ ಟಿ. ಹೊಸಮನಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಗುಣಮಟ್ಟದ ಶಿಕ್ಷಣವನ್ನು ನೀಡಿದಕ್ಕಾಗಿ ಬಸವ ಕೈಗಾರಿಕಾ ತರಬೇತಿ ಸಂಸ್ಥೆಗೆ ಈ ರಾಜ್ಯಮಟ್ಟದ ಗೌರವ ಸಂದಿದೆ.

More news from ಕರ್ನಾಟಕ and nearby areas
  • ಮಡಿವಾಳ ಸಮಾಜದ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
    1
    ಮಡಿವಾಳ ಸಮಾಜದ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    Pharmacist ಸಿಂದಗಿ, ವಿಜಯಪುರ, ಕರ್ನಾಟಕ•
    3 hrs ago
  • ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಪಿಎಸ್ ಶಾಲೆಗಳಲ್ಲಿನ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಿದೆ.
    1
    ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಪಿಎಸ್ ಶಾಲೆಗಳಲ್ಲಿನ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಿದೆ.
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    2 hrs ago
  • ವಿಜಯಪುರ/ಹುಬ್ಬಳ್ಳಿ: ಜಿ.ಎಸ್.ಸಿ.ಎಸ್.ಟಿ.ಇ.ಓ (GSCSTEO) ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಬೃಹತ್ ಸಮಾವೇಶವು ಅತ್ಯಂತ ಯಶಸ್ವಿಯಾಗಿ ಮತ್ತು ಐತಿಹಾಸಿಕವಾಗಿ ನೆರವೇರಿತು. ಸತತ ಎರಡನೇ ವರ್ಷವೂ ಇಂತಹ ಬೃಹತ್ ಸಮಾಜಮುಖಿ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಯೋಜಿಸಿ, 650ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವು ನೀಡಿದ ಸಂಘಟನೆಯ ಕಾರ್ಯವೈಖರಿಯನ್ನು ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಶ್ರೀ ಜಗದ್ಗುರು ಚಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಶರಣರು ಹಾಗೂ ನೀಲಜಿ ಆಶ್ರಮದ ಶ್ರೀ ಪೂಜ್ಯ ಮಹಾದೇವ ಮಹಾರಾಜರು ವಹಿಸಿ ಆಶೀರ್ವಚನ ನೀಡಿದರು. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕರಾದ ಶ್ರೀ ಪ್ರಸಾದ್ ಅಬ್ಬಯ್ಯ ಮತ್ತು ಬೆಳಗಾವಿಯ ಯುವ ಮುಖಂಡರಾದ ಶ್ರೀ ರಾಹುಲ್ ಸತೀಶ್ ಜಾರಕಿಹೊಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಚಿದಾನಂದ ಎಮ್. ಕಾಂಬಳೆ ಮತ್ತು ಸಂಘಟಕ ಶ್ರೀ ವಿಲಾಸ್ ಶಿವಪೂಜಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಮಾರಂಭದಲ್ಲಿ ಮಾತನಾಡಿದ ಶಾಸಕ ಪ್ರಸಾದ್ ಅಬ್ಬಯ್ಯ, ಇಷ್ಟು ಅದ್ದೂರಿ ಮತ್ತು ಶಿಸ್ತುಬದ್ಧ ಕಾರ್ಯಕ್ರಮ ಆಯೋಜಿಸಿದ್ದು ಐತಿಹಾಸಿಕ ದಾಖಲೆಯಾಗಿದೆ ಎಂದು ಬಣ್ಣಿಸಿದರು. ನೌಕರರ ಹಿತರಕ್ಷಣೆ ಮಾತ್ರವಲ್ಲದೆ, ವಧು-ವರರ ಕಲ್ಯಾಣ ಹಾಗೂ ವಿದ್ಯಾರ್ಥಿಗಳ ಉನ್ನತಿಗಾಗಿ ಸಂಘಟನೆ ಮಾಡುತ್ತಿರುವ ಕೆಲಸಗಳು ಮಾದರಿಯಾಗಿವೆ ಎಂದು ಶ್ಲಾಘಿಸಿದರು. ವಿವಿಧ ಜಿಲ್ಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಪಾಲಕರ ತಾಳ್ಮೆಯನ್ನು ಮೆಚ್ಚಿದ ಅವರು, ಮುಂದಿನ ವರ್ಷವೂ ಸಂಘಟನೆಯೊಂದಿಗೆ ಸದಾ ಇರುವುದಾಗಿ ಭರವಸೆ ನೀಡಿದರು. ಇದಲ್ಲದೆ, ಸಂಘಕ್ಕೆ ವೈಯಕ್ತಿಕವಾಗಿ ಧನಸಹಾಯ ಘೋಷಿಸಿದರು. ಸಮುದಾಯಕ್ಕಾಗಿ ಸಂಘವು ಮಾಡುತ್ತಿರುವ ನಿರಂತರ ಸೇವೆ ಹಾಗೂ ಸತತ 2ನೇ ವರ್ಷವೂ 650 ವಿದ್ಯಾರ್ಥಿಗಳಿಗೆ ಇಂತಹ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿರುವುದನ್ನು ಗಮನಿಸಿ, ಸಂಘದ ಮುಂದಿನ ಸ್ವಂತ ಸೌಲಭ್ಯಗಳಿಗಾಗಿ ಸರ್ಕಾರದಿಂದ ಒಂದು ಸಿಎ (Civic Amenity) ಸೈಟ್ ಮಂಜೂರು ಮಾಡಿಕೊಡಲಾಗುವುದು ಎಂದು ಶಾಸಕ ಶ್ರೀ ಪ್ರಸಾದ್ ಅಬ್ಬಯ್ಯ ಘೋಷಿಸಿದರು. ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಹೇಶ್ ಪೋತದಾರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶ್ರೀ ರಾಹುಲ್ ಭಾವಿದೊಡ್ಡಿ, ಹುಬ್ಬಳ್ಳಿ ನಿರ್ದೇಶಕರಾದ ಶ್ರೀ ಸುಭಾಷಚಂದ್ರ ನಾಟೀಕಾರ್, ಹಾರೂಗೇರಿ ಮುಖ್ಯಾಧಿಕಾರಿ ಶ್ರೀ ಬಸವರಾಜ ಮನಗೂಳಿ, ಹೆಸ್ಕಾಂ ಎಇಇ ಶ್ರೀ ರಾಜಶೇಖರ ಹಾದಿಮನಿ, ಕೆಬಿಜೆಎನ್‌ಎಲ್ ಎಇಇ ಶ್ರೀ ಪ್ರಕಾಶ್ ಕಾಂಬಳೆ ಉಪಸ್ಥಿತರಿದ್ದರು. ಇವರೊಂದಿಗೆ ವಿಜಯಪುರ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಪರಶುರಾಮ ಲಂಬು, ಜಿಲ್ಲಾಧ್ಯಕ್ಷರಾದ ಶ್ರೀ ರಾಜಶೇಖರ ಯಡಹಳ್ಳಿ, ಶ್ರೀ ದಿಲೀಪ ಪ್ರಭಾಕರ, ಶ್ರೀ ಉಮೇಶ ಸಿಂಗೆ, ಶ್ರೀ ರಮೇಶ ಗಂಜಾಳ ಹಾಗೂ ಸಂಘದ ನೂರಾರು ಪ್ರಮುಖ ಪದಾಧಿಕಾರಿಗಳು, ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    1
    ವಿಜಯಪುರ/ಹುಬ್ಬಳ್ಳಿ: ಜಿ.ಎಸ್.ಸಿ.ಎಸ್.ಟಿ.ಇ.ಓ (GSCSTEO) ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಬೃಹತ್ ಸಮಾವೇಶವು ಅತ್ಯಂತ ಯಶಸ್ವಿಯಾಗಿ ಮತ್ತು ಐತಿಹಾಸಿಕವಾಗಿ ನೆರವೇರಿತು. ಸತತ ಎರಡನೇ ವರ್ಷವೂ ಇಂತಹ ಬೃಹತ್ ಸಮಾಜಮುಖಿ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಯೋಜಿಸಿ, 650ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವು ನೀಡಿದ ಸಂಘಟನೆಯ ಕಾರ್ಯವೈಖರಿಯನ್ನು ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಶ್ರೀ ಜಗದ್ಗುರು ಚಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಶರಣರು ಹಾಗೂ ನೀಲಜಿ ಆಶ್ರಮದ ಶ್ರೀ ಪೂಜ್ಯ ಮಹಾದೇವ ಮಹಾರಾಜರು ವಹಿಸಿ ಆಶೀರ್ವಚನ ನೀಡಿದರು. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕರಾದ ಶ್ರೀ ಪ್ರಸಾದ್ ಅಬ್ಬಯ್ಯ ಮತ್ತು ಬೆಳಗಾವಿಯ ಯುವ ಮುಖಂಡರಾದ ಶ್ರೀ ರಾಹುಲ್ ಸತೀಶ್ ಜಾರಕಿಹೊಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಚಿದಾನಂದ ಎಮ್. ಕಾಂಬಳೆ ಮತ್ತು ಸಂಘಟಕ ಶ್ರೀ ವಿಲಾಸ್ ಶಿವಪೂಜಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಸಮಾರಂಭದಲ್ಲಿ ಮಾತನಾಡಿದ ಶಾಸಕ ಪ್ರಸಾದ್ ಅಬ್ಬಯ್ಯ, ಇಷ್ಟು ಅದ್ದೂರಿ ಮತ್ತು ಶಿಸ್ತುಬದ್ಧ ಕಾರ್ಯಕ್ರಮ ಆಯೋಜಿಸಿದ್ದು ಐತಿಹಾಸಿಕ ದಾಖಲೆಯಾಗಿದೆ ಎಂದು ಬಣ್ಣಿಸಿದರು. ನೌಕರರ ಹಿತರಕ್ಷಣೆ ಮಾತ್ರವಲ್ಲದೆ, ವಧು-ವರರ ಕಲ್ಯಾಣ ಹಾಗೂ ವಿದ್ಯಾರ್ಥಿಗಳ ಉನ್ನತಿಗಾಗಿ ಸಂಘಟನೆ ಮಾಡುತ್ತಿರುವ ಕೆಲಸಗಳು ಮಾದರಿಯಾಗಿವೆ ಎಂದು ಶ್ಲಾಘಿಸಿದರು. ವಿವಿಧ ಜಿಲ್ಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಪಾಲಕರ ತಾಳ್ಮೆಯನ್ನು ಮೆಚ್ಚಿದ ಅವರು, ಮುಂದಿನ ವರ್ಷವೂ ಸಂಘಟನೆಯೊಂದಿಗೆ ಸದಾ ಇರುವುದಾಗಿ ಭರವಸೆ ನೀಡಿದರು. ಇದಲ್ಲದೆ, ಸಂಘಕ್ಕೆ ವೈಯಕ್ತಿಕವಾಗಿ ಧನಸಹಾಯ ಘೋಷಿಸಿದರು. ಸಮುದಾಯಕ್ಕಾಗಿ ಸಂಘವು ಮಾಡುತ್ತಿರುವ ನಿರಂತರ ಸೇವೆ ಹಾಗೂ ಸತತ 2ನೇ ವರ್ಷವೂ 650 ವಿದ್ಯಾರ್ಥಿಗಳಿಗೆ ಇಂತಹ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿರುವುದನ್ನು ಗಮನಿಸಿ, ಸಂಘದ ಮುಂದಿನ ಸ್ವಂತ ಸೌಲಭ್ಯಗಳಿಗಾಗಿ ಸರ್ಕಾರದಿಂದ ಒಂದು ಸಿಎ (Civic Amenity) ಸೈಟ್ ಮಂಜೂರು ಮಾಡಿಕೊಡಲಾಗುವುದು ಎಂದು ಶಾಸಕ ಶ್ರೀ ಪ್ರಸಾದ್ ಅಬ್ಬಯ್ಯ ಘೋಷಿಸಿದರು.

ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಹೇಶ್ ಪೋತದಾರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶ್ರೀ ರಾಹುಲ್ ಭಾವಿದೊಡ್ಡಿ, ಹುಬ್ಬಳ್ಳಿ ನಿರ್ದೇಶಕರಾದ ಶ್ರೀ ಸುಭಾಷಚಂದ್ರ ನಾಟೀಕಾರ್, ಹಾರೂಗೇರಿ ಮುಖ್ಯಾಧಿಕಾರಿ ಶ್ರೀ ಬಸವರಾಜ ಮನಗೂಳಿ, ಹೆಸ್ಕಾಂ ಎಇಇ ಶ್ರೀ ರಾಜಶೇಖರ ಹಾದಿಮನಿ, ಕೆಬಿಜೆಎನ್‌ಎಲ್ ಎಇಇ ಶ್ರೀ ಪ್ರಕಾಶ್ ಕಾಂಬಳೆ ಉಪಸ್ಥಿತರಿದ್ದರು. ಇವರೊಂದಿಗೆ ವಿಜಯಪುರ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಪರಶುರಾಮ ಲಂಬು, ಜಿಲ್ಲಾಧ್ಯಕ್ಷರಾದ ಶ್ರೀ ರಾಜಶೇಖರ ಯಡಹಳ್ಳಿ, ಶ್ರೀ ದಿಲೀಪ ಪ್ರಭಾಕರ, ಶ್ರೀ ಉಮೇಶ ಸಿಂಗೆ, ಶ್ರೀ ರಮೇಶ ಗಂಜಾಳ ಹಾಗೂ ಸಂಘದ ನೂರಾರು ಪ್ರಮುಖ ಪದಾಧಿಕಾರಿಗಳು, ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    user_ಪುಲಿಯನ್ ಸಾಮ್ರಾಜ್ಯ ಪತ್ರಿಕೆ
    ಪುಲಿಯನ್ ಸಾಮ್ರಾಜ್ಯ ಪತ್ರಿಕೆ
    Newspaper publisher ಅಳಮೇಲ, ವಿಜಯಪುರ, ಕರ್ನಾಟಕ•
    13 hrs ago
  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ ಕೋಟೆನಾಡು ಚಿತ್ರದುರ್ಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯಲ್ಲಿ ಒಟ್ಟು ಐದು ಮಂದಿ ಶಾಸಕರು ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಶಾಸಕರಾದ ಟಿ. ರಘುಮೂರ್ತಿ, ಎನ್.ವೈ. ಗೋಪಾಲಕೃಷ್ಣ, ಬಿ.ಜಿ‌. ಗೋವಿಂದಪ್ಪ, ಕೆ.ಸಿ. ವೀರೇಂದ್ರ ಮತ್ತು ಎಂಎಲ್‌ಸಿ ಡಿ.ಟಿ‌. ಶ್ರೀನಿವಾಸ್ ಅವರ ನಡುವೆ ಮಂತ್ರಿಗಿರಿಗಾಗಿ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿದೆ.
    1
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಬೆನ್ನಲ್ಲೇ ಕೋಟೆನಾಡು ಚಿತ್ರದುರ್ಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯಲ್ಲಿ ಒಟ್ಟು ಐದು ಮಂದಿ ಶಾಸಕರು ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಶಾಸಕರಾದ ಟಿ. ರಘುಮೂರ್ತಿ, ಎನ್.ವೈ. ಗೋಪಾಲಕೃಷ್ಣ, ಬಿ.ಜಿ‌. ಗೋವಿಂದಪ್ಪ, ಕೆ.ಸಿ. ವೀರೇಂದ್ರ ಮತ್ತು ಎಂಎಲ್‌ಸಿ ಡಿ.ಟಿ‌. ಶ್ರೀನಿವಾಸ್ ಅವರ ನಡುವೆ ಮಂತ್ರಿಗಿರಿಗಾಗಿ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿದೆ.
    user_ನ್ಯೂಸ್ ಕಿಂಗ್
    ನ್ಯೂಸ್ ಕಿಂಗ್
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    13 hrs ago
  • ಶಹಾಪುರ ನಗರದ ಹಳೆ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ತೀವ್ರ ಪರದಾಡುತ್ತಿದ್ದಾರೆ. ಪ್ರಯಾಣಿಕರ ಆಪಾದನೆಯ ಪ್ರಕಾರ, ಕುಳಿತುಕೊಳ್ಳಲು ಆಸನಗಳ ಕೊರತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಅವರನ್ನು ತೀವ್ರವಾಗಿ ಬಾಧಿಸುತ್ತಿದೆ. ಬೇಸಿಗೆ ಕಾಲದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದಿರುವುದು ಹಾಗೂ ನಿಲ್ದಾಣದಲ್ಲಿ ಫ್ಯಾನ್‌ಗಳ ಅಲಭ್ಯತೆ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಅಲ್ಲದೆ, ನಿಲ್ದಾಣದೊಳಗಿರುವ ಮಳಿಗೆಯವರು ಹೆಚ್ಚಿನ ಜಾಗವನ್ನು ಅತಿಕ್ರಮಿಸಿಕೊಂಡಿದ್ದರಿಂದ ಆವರಣ ಇಕ್ಕಟ್ಟಾಗಿದೆ. ಇಡೀ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಕಂಡುಬರುತ್ತಿದ್ದು, ಸ್ವಚ್ಛತೆ ಹಾಗೂ ಸುರಕ್ಷತೆಯ ಸಂಪೂರ್ಣ ಕೊರತೆಯಿಂದ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    1
    ಶಹಾಪುರ ನಗರದ ಹಳೆ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ತೀವ್ರ ಪರದಾಡುತ್ತಿದ್ದಾರೆ. ಪ್ರಯಾಣಿಕರ ಆಪಾದನೆಯ ಪ್ರಕಾರ, ಕುಳಿತುಕೊಳ್ಳಲು ಆಸನಗಳ ಕೊರತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಅವರನ್ನು ತೀವ್ರವಾಗಿ ಬಾಧಿಸುತ್ತಿದೆ.

ಬೇಸಿಗೆ ಕಾಲದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದಿರುವುದು ಹಾಗೂ ನಿಲ್ದಾಣದಲ್ಲಿ ಫ್ಯಾನ್‌ಗಳ ಅಲಭ್ಯತೆ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಅಲ್ಲದೆ, ನಿಲ್ದಾಣದೊಳಗಿರುವ ಮಳಿಗೆಯವರು ಹೆಚ್ಚಿನ ಜಾಗವನ್ನು ಅತಿಕ್ರಮಿಸಿಕೊಂಡಿದ್ದರಿಂದ ಆವರಣ ಇಕ್ಕಟ್ಟಾಗಿದೆ. ಇಡೀ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಕಂಡುಬರುತ್ತಿದ್ದು, ಸ್ವಚ್ಛತೆ ಹಾಗೂ ಸುರಕ್ಷತೆಯ ಸಂಪೂರ್ಣ ಕೊರತೆಯಿಂದ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    18 hrs ago
  • ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಮ್ಮನಜೋಗಿಯಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳು ಅಪು ಬಿರಾದಾರ ಅವರ ತೋಟದಲ್ಲಿದ್ದ ಬಾಳೆ ಗಿಡಗಳನ್ನು ಕಡಿದು ಹಾಕಿ ನಾಶಪಡಿಸಿದ್ದಾರೆ.
    1
    ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಮ್ಮನಜೋಗಿಯಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳು ಅಪು ಬಿರಾದಾರ ಅವರ ತೋಟದಲ್ಲಿದ್ದ ಬಾಳೆ ಗಿಡಗಳನ್ನು ಕಡಿದು ಹಾಕಿ ನಾಶಪಡಿಸಿದ್ದಾರೆ.
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    22 hrs ago
  • ಕಲಬುರಗಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಒಬ್ಬ ಹೋರಾಟಗಾರರು ವರಿಷ್ಠಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
    1
    ಕಲಬುರಗಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಒಬ್ಬ ಹೋರಾಟಗಾರರು ವರಿಷ್ಠಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
    user_Kisan news kannada
    Kisan news kannada
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    2 hrs ago
  • ಹುಬ್ಬಳ್ಳಿಯ ವಿದ್ಯಾನಗರ ವ್ಯಾಪ್ತಿಯಲ್ಲಿ ಯುವತಿಯೊಬ್ಬಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಯುವಕನಿಗೆ ಆಕೆ ಚಪ್ಪಲಿ ಏಟು ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾನಗರ ಶಿಗ್ಗಾವಿ ಫ್ಲಾಟ್‌ನಲ್ಲಿರುವ ಬಿಗ್ ಬಾಸ್ ಸಲೂನ್‌ನಲ್ಲಿ ಕೆಲಸ ಮಾಡುವ ಮುಸ್ಲಿಂ ಯುವಕನೊಬ್ಬ, ಯುವತಿಯ ಪ್ರಾಣ ತಿನ್ನುವಂತೆ ಪ್ರೀತಿಸಲು ಪೀಡಿಸುತ್ತಿದ್ದ ಎಂದು ವರದಿಯಾಗಿದೆ. ಈ ಯುವಕನ ಕಿರುಕುಳದಿಂದ ರೋಸಿಹೋದ ಸಂತ್ರಸ್ತ ಯುವತಿ ಮತ್ತು ಆಕೆಯ ಪೋಷಕರು ಸೇರಿ, ಆ ಯುವಕನಿಗೆ ಚಪ್ಪಲಿ ಏಟು ನೀಡಿದ್ದು ಮಾತ್ರವಲ್ಲದೆ, ತೀವ್ರವಾಗಿ ತಳಿದು ಧರ್ಮದ ದೆಟ್ ಹಾಕಿದ್ದಾರೆ.
    1
    ಹುಬ್ಬಳ್ಳಿಯ ವಿದ್ಯಾನಗರ ವ್ಯಾಪ್ತಿಯಲ್ಲಿ ಯುವತಿಯೊಬ್ಬಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಯುವಕನಿಗೆ ಆಕೆ ಚಪ್ಪಲಿ ಏಟು ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾನಗರ ಶಿಗ್ಗಾವಿ ಫ್ಲಾಟ್‌ನಲ್ಲಿರುವ ಬಿಗ್ ಬಾಸ್ ಸಲೂನ್‌ನಲ್ಲಿ ಕೆಲಸ ಮಾಡುವ ಮುಸ್ಲಿಂ ಯುವಕನೊಬ್ಬ, ಯುವತಿಯ ಪ್ರಾಣ ತಿನ್ನುವಂತೆ ಪ್ರೀತಿಸಲು ಪೀಡಿಸುತ್ತಿದ್ದ ಎಂದು ವರದಿಯಾಗಿದೆ.

ಈ ಯುವಕನ ಕಿರುಕುಳದಿಂದ ರೋಸಿಹೋದ ಸಂತ್ರಸ್ತ ಯುವತಿ ಮತ್ತು ಆಕೆಯ ಪೋಷಕರು ಸೇರಿ, ಆ ಯುವಕನಿಗೆ ಚಪ್ಪಲಿ ಏಟು ನೀಡಿದ್ದು ಮಾತ್ರವಲ್ಲದೆ, ತೀವ್ರವಾಗಿ ತಳಿದು ಧರ್ಮದ ದೆಟ್ ಹಾಕಿದ್ದಾರೆ.
    user_Sharanugouda Patil
    Sharanugouda Patil
    ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.