ಅವಲಕ್ಕಿ ಅವಾಂತರಕ್ಕೆ 55 ಮಕ್ಕಳು ಅಸ್ವಸ್ಥ;ಅಫಜಲಪುರದಲ್ಲಿ ಭುಗಿಲೆದ್ದ ಆಕ್ರೋಶ!ರಾಜ್ಯ ಹೆದ್ದಾರಿ ತಡೆದು ಆಕ್ರೋಶ ಅವಲಕ್ಕಿ ಅವಾಂತರಕ್ಕೆ 55 ಮಕ್ಕಳು ಅಸ್ವಸ್ಥ;ಅಫಜಲಪುರದಲ್ಲಿ ಭುಗಿಲೆದ್ದ ಆಕ್ರೋಶ!ರಾಜ್ಯ ಹೆದ್ದಾರಿ ತಡೆದು ಆಕ್ರೋಶ ಕರಜಗಿ ಮೊರಾರ್ಜಿ ವಸತಿ ಶಾಲೆಯಲ್ಲಿ ಆತಂಕ; ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ — ಮುಖ್ಯೋಪಾಧ್ಯಾಯ ಸೇರಿ 4 ಮಂದಿ ಅಮಾನತು ಅಫಜಲಪುರ: ತಾಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೆಳಗಿನ ಉಪಹಾರ ಸೇವಿಸಿದ 55 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಅಸ್ತವ್ಯಸ್ತರಾದ ಘಟನೆ ಸೋಮವಾರ ನಡೆದಿದೆ. ಘಟನೆ ಬಳಿಕ ವಿದ್ಯಾರ್ಥಿಗಳ ಪೋಷಕರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿ, ಅಫಜಲಪುರ ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ತಾಲೂಕು ಪಂಚಾಯಿತಿ ಕಚೇರಿ ಎದುರು ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಸಂಚಾರಕ್ಕೆ ಅಡಚಣೆಯಾಗಿ, ಸುಮಾರು ನಾಲ್ಕು ಗಂಟೆಗಳ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ತಾಲೂಕಿನ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಹುತೇಕ ಕಡುಬಡ ಕುಟುಂಬಗಳ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಒಟ್ಟು 230 ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ವಾಸವಾಗಿದ್ದಾರೆ. ಗಬ್ಬು ನಾರುತ್ತಿದ್ದ ಅವಲಕ್ಕಿ ಸೇವನೆಗೆ ಸೂಚನೆ? ಬೆಳಗಿನ ಉಪಹಾರಕ್ಕಾಗಿ ಶಾಲೆಯಲ್ಲಿ ಅವಲಕ್ಕಿ ಉಸಲಿ ತಯಾರಿಸಲಾಗಿತ್ತು. ಆದರೆ ತಯಾರಿಸಿದ ಅವಲಕ್ಕಿಯಿಂದ ಗಬ್ಬು ವಾಸನೆ ಬರುತ್ತಿದ್ದರೂ ಅದನ್ನೇ ಮಕ್ಕಳಿಗೆ ನೀಡಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ಇದನ್ನು ಗಮನಿಸಿದ ಕೆಲವು ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರ ಗಮನಕ್ಕೆ ತಂದಿದ್ದಾರೆ. ಬಳಿಕ ಬೇರೆ ಉಪಹಾರ ತಯಾರಿಸಲಾಗಿತ್ತು ಎನ್ನಲಾಗಿದೆ. ಆದರೆ ಅದಕ್ಕೂ ಮುನ್ನ ಅವಲಕ್ಕಿ ಸೇವಿಸಿದ್ದ ಕೆಲವು ವಿದ್ಯಾರ್ಥಿಗಳು ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ಶಾಲೆಯ ಸಿಬ್ಬಂದಿ ಕೂಡಲೇ ಮಕ್ಕಳನ್ನು ಅಫಜಲಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಹೋರಾಟಗಾರರು ಆಸ್ಪತ್ರೆಗೆ ಧಾವಿಸಿ ಮಕ್ಕಳ ಆರೋಗ್ಯ ವಿಚಾರಿಸಿ, ಶಾಲೆಯಲ್ಲಿನ ಆಹಾರ ವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಘಟನೆಯನ್ನು ಖಂಡಿಸಿ ಪ್ರತಿಭಟನಾಕಾರರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಶಾಸಕರು ಸ್ಥಳಕ್ಕೆ ಆಗಮಿಸಬೇಕು. ಘಟನೆಗೆ ಕಾರಣರಾದವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ನಾಲ್ವರು ಅಮಾನತು ಕೆಲವು ಗಂಟೆಗಳ ಬಳಿಕ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ನಿರ್ದೇಶಕಿ ಪ್ರೀತಿ ರೊತ್ಮನಿ, ಅಫಜಲಪುರ ಶಾಸಕ ಎಂ.ವೈ. ಪಾಟೀಲ ಸೇರಿದಂತೆ ಅಧಿಕಾರಿಗಳು ಆಗಮಿಸಿ, ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದರು. ನಂತರ ಪ್ರತಿಭಟನಾಕಾರರ ಮನವಿಯನ್ನು ಆಲಿಸಿ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳಲಾಯಿತು. ಘಟನೆಗೆ ಸಂಬಂಧಿಸಿದಂತೆ ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯೋಪಾಧ್ಯಾಯ, ವಸತಿ ನಿಲಯ ಪಾಲಕ, ಅಡುಗೆ ಸಹಾಯಕಿ ಹಾಗೂ ವಸತಿ ನಿಲಯಕ್ಕೆ ಆಹಾರ ಸರಬರಾಜು ಮಾಡುತ್ತಿದ್ದ ಗುತ್ತಿಗೆದಾರರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಅಸ್ವಸ್ಥಗೊಂಡ 55 ಮಕ್ಕಳ ಪೈಕಿ ಬಹುತೇಕ ವಿದ್ಯಾರ್ಥಿಗಳಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇಬ್ಬರು ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಕ್ಕಳ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ವೈದ್ಯರು ದೃಢಪಡಿಸಿರುವುದು ಸಮಾಧಾನದ ಸಂಗತಿಯಾಗಿದೆ. ಆದರೆ, ವಸತಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಮಕ್ಕಳ ಆರೋಗ್ಯದ ಜೊತೆಗೆ ಅವರ ವಿದ್ಯಾಭ್ಯಾಸಕ್ಕೂ ತೊಂದರೆ ಉಂಟುಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಆಹಾರದ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆ ನಡೆಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಭೀಮರಾವ್ ಗೌರ, ಶ್ರೀಮಂತ ಬಿರಾದಾರ, ಜಮೀಲ ಗೌಂಡಿ, ಪ್ರಮೋದ್ ಭೋವಿವಡ್ಡರ, ರಾಜು ಉಕಲಿ, ಬೈಲಪ್ಪ ನಂದರಗಿ, ಮುತ್ತು ಕುರಿಮನಿ, ಸದಾಶಿವ ಕ್ಷತ್ರಿಯ, ಶರಣಗೌಡ ಪಾಟೀಲ, ಗಣಪತಿ ಪುಲಾರಿ, ಅರ್ಜುನ ಇಟಗಾರ, ಗಂಗು ಸೊನ್ನ, ಅಶೋಕ ಪರೀಟ, ಸಿದ್ದು ನ್ಯಾವನೂರ, ಆಶಿಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

- ಹೂ ಮಳೆ ಸುರಿದು ಪೊಲೀಸ್ ಅಧಿಕಾರಿಗೆ ಅದ್ದೂರಿಯಾಗಿ ಬೀಳ್ಕೋಡುಗೆ ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು. ಅಫಜಲಪುರ ತಾಲೂಕಿನ ರೇವೂರ ಪೊಲೀಸ್ ಠಾಣೆ ಪಿ.ಎಸ್.ಐ.ಕಮಲು ಅವರಿಗೆ ಠಾಣಾ ಸಿಬ್ಬಂದಿಗಳು ಹೂ ಮಳೆ ಸುರಿದು ಅಭಿನಂದನೆ ಸಲ್ಲಿಸಿ ಅದ್ದೂರಿಯಾಗಿ ಬೀಲಕ್ಕೋಡುಗೆ ಮಾಡಿದರು.1
- ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕಲುಷಿತ ಆಹಾರ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಿತೀನ ಗುತ್ತೇದಾರ ಆಗ್ರಹ ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮಕ್ಕಳಿಗೆ ಕಲುಷಿತ ಆಹಾರ ನೀಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಲು ನಿತೀನ ಗುತ್ತೇದಾರ ಆಗ್ರಹ1
- ಕೋಲಿ ಸಮಾಜದ ಯುವ ಅಟೋ ಚಾಲಕ ದತ್ತು ಖುರ್ಚಿ ಮೇಲೆ ಗಂಭೀರ ಮಾರಣಾಂತಿಕ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ1
- ಮಹಾನ್ ಗುರು ಎಚ್ ಟಿ ಕುಲಕರ್ಣಿ ಅವರಿಗೆ ಅನಂತ ಕೋಟಿ ನಮನಗಳು ಎಚ್ ಟಿ ಕುಲಕರ್ಣಿ ಗುರುಗಳ ಅಂತಿಮ ಸಂಸ್ಕಾರ1
- ಸಿಸಿ ರಸ್ತೆ ಕಾಮಾಗಾರಿ ವೇಳೆ ಐತಿಹಾಸಿಕ ಪುರಾತನ ಮೂರ್ತಿ ಪತ್ತೆ* ಸಿಸಿ ರಸ್ತೆ ಕಾಮಗಾರಿ ಮಾಡುವೆ ವೇಳೆಯಲ್ಲಿ ಐರಿಹಾಸಿಕ ಪುರಾತನದ ಮೂರ್ತಿ ಪತ್ತೆಯಾಗಿದ್ದು ಶ್ರೀ ಸೂರ್ಯನಾರಾಯಣ ದೇವರ ಶಿಲಾ ಮೂರ್ತಿ ಎಂದು ತಿಳಿದು ಬಂದಿದೆ.ರುಕ್ಮಿಣಿ - ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಹೊಲಕುಂದಾ ಗ್ರಾಮದ ವಿಠ್ಠಲ ದೇವಸ್ಥಾನದ ಆವರಣದಲ್ಲಿನ ಸಿಸಿ ರಸ್ತೆ ಕಾಮಾಗಾರಿ ವೇಳೆ ಪತ್ತೆಯಾಗಿದೆ.2.1 ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ , ಎರಡೂ ಕೈಗಳಲ್ಲಿ ಕಮಲ ಹೂವುಗಳು ಹೊಂದಿರುವ ಮೂರ್ತಿಯಾಗಿದ್ದು, ಸಂಧ್ಯಾದೇವಿ, ಛಾಯಾದೇವಿ ಹಾಗೂ ಸಪ್ತ ಅಶ್ವಗಳ ಕೆತ್ತನೆ ಒಳಗೊಂಡಿದೆ. ಸಂಶೋಧಕರ ಪ್ರಾಥಮಿಕ ಅಭಿಪ್ರಾಯದಂತೆ ರಾಷ್ಟ್ರಕೂಟರ ಕಾಲದ ಶಿಲ್ಪ ಎನ್ನುವ ಸಾಧ್ಯತೆ ಇದೆ1
- ಇಂಗನಕಲ: ಶರಣಪ್ಪಾ D ಹಾಲಕಾಯಿ ಸಾಹುಕಾರ ಅವರು ಭಜನಾ ಮಂಡಳಿಗೆ ಪ್ರಸಾದ ಸೇವೆ ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಭಿಷೇಕ ಹಾಲಕಾಯಿ ಉಪಸ್ಥಿತರಿದ್ದರು2
- ವಿಜಯಪುರ ವಿಮಾನ ನಿಲ್ದಾಣ : ಮೂರು ತಿಂಗಳಲ್ಲಿ ವಿಮಾನ ಹಾರಾಟದ ನಿರೀಕ್ಷೆ ವಿಜಯಪುರ : ಅರ್ಧಕ್ಕೆ ನಿಲ್ಲುವ ಭೀತಿಯಲ್ಲಿದ್ದ ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ಮರುಜೀವ ನೀಡಿ, ಶೀಘ್ರವೇ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ.ಪಾಟೀಲ್‌ರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ್ ಗಣಿಹಾರ ತಿಳಿಸಿದರು. ಶುಕ್ರವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ತಾಂತ್ರಿಕ ಹಾಗೂ ಕಾನೂನು ಸಂಕಷ್ಟಕ್ಕೆ ಸಿಲುಕಿ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಯೋಜನೆಗೆ ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕಿದೆ. ಮುಂದಿನ ಮೂರೇ ತಿಂಗಳಲ್ಲಿ ವಿಮಾನ ಹಾರಾಟ ಆರಂಭವಾಗುವ ಆಶಾವಾದ ಮೂಡಿದೆ ಎಂದು ಗಣಿಹಾರ ಹೇಳಿದರು.1
- ಹೋರಾಟವೇ ಜೀವನ – ಕೋಲಿ ಸಮಾಜದ ಧ್ವನಿಯಾಗಿ ಸಂತೋಷ್ ಬೆಣ್ಣೂರು ಅವರ ಪಯಣ1