logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊಳ್ಳೇಗಾಲ = ತಮಿಳುನಾಡಿನ ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ನಂಜುಂಡಯ್ಯ ಅವರು ನೀಡಿರುವ ಶಿಕ್ಷಣ ಮತ್ತು ಸಾಮಾಜಿಕ ಸೇವೆಗೆ ಅಮೆರಿಕನ್ ವಿಸ್ಡಮ್ ಪೀಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರಕಿದೆ, ಯಳಂದೂರು ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಡಾ.ಆರ್. ನಂಜುಂಡಯ್ಯ ಅವರಿಗೆ ಗೌರವ ಡಾಕ್ಟರೇಟ್ ದೊರಕಿದ್ದು,ಅವರನ್ನು ಶಾಲೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಇತ್ತೀಚೆಗೆ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ನಂಜುಂಡಯ್ಯ ಅವರು ನೀಡಿರುವ ಶಿಕ್ಷಣ ಮತ್ತು ಸಾಮಾಜಿಕ ಸೇವೆಗೆ ಅಮೆರಿಕನ್ ವಿಸ್ಡಮ್ ಪೀಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರಕಿದೆ,ಹಾಗಾಗಿ ಶಾಲೆಯಲ್ಲಿ‌ ಅವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಂಜುಂಡಯ್ಯ ಅವರು, ನಾನು ಯಳಂದೂರು ತಾಲೂಕಿನವನೇ ಆಗಿದ್ದು ಇಲ್ಲಿನ ಶಾಲೆಯಲ್ಲಿ ಉಪ ಪ್ರಾಂಶುಪಾಲನಾಗಿ ಸೇವೆ ಸಲ್ಲಿಸುತ್ತಿರುವ ವೇಳೆ ನನಗೆ ಪ್ರಶಸ್ತಿ ಸನ್ಮಾನಗಳು ಅರಸಿ ಬರುತ್ತಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು. ಇದು ನಾನು ಮಾಡುವ ಕೆಲಸದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನಮ್ಮ ಶಾಲೆಯಲ್ಲಿ ಈಗ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಶಾಲೆಯಲ್ಲಿ ಹತ್ತು ಹಲವು ಸುಧಾರಣೆಗಳನ್ನು ತರಲು ನಮ್ಮ ಶಿಕ್ಷಕ ಹಾಗೂ ಸಿಬ್ಬಂಧಿ ವರ್ಗದವರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು. 2026-27 ನೇ ಸಾಲಿನ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ಈ ಬಾರಿ ನಮ್ಮ ಶಾಲೆಯ ಸುಪರ್ದಿಗೆ ಬಂದಿದ್ದು ಎಲ್ಲಾ ಜವಾಬ್ದಾರಿಯನ್ನು ನಮ್ಮ ಮೇಲಿದೆ, ಇದನ್ನು ಉತ್ತಮವಾಗಿ ಆಯೋಜಿಸುವ ನಿಟ್ಟಿನಲ್ಲಿ ಎಲ್ಲರ ನೆರವನ್ನೂ ಪಡೆದುಕೊಳ್ಳಲಾಗುವುದು ಎಂದು ಹೇಳಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸ್ಟೀವನ್ ಮಾತನಾಡಿ, ಆರ್.ನಂಜುಂಡಯ್ಯ ಒಬ್ಬ ಉತ್ತಮ ಶಿಕ್ಷಕರಾಗುವ ಜೊತೆಗೆ ಸಮಾಜಪರ, ಬಡ ಮಕ್ಕಳ ಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದಾರೆ. ಸದಾ ಚಟುವಟಿಕೆಯಿಂದ ಇರುವ ಇವರು ಶಾಲೆಯಲ್ಲಿ ಶಿಕ್ಷಣ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಅನೇಕ ಕ್ರಮ ವಹಿಸುತ್ತಿದ್ದಾರೆ. ತಮ್ಮ ಸಹ ಶಿಕ್ಷಕರ ಜೊತೆಗೆ ಉತ್ತಮ ಸಂಬಂಧ ಸಾಧಿಸಿ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇವರ ಪಾತ್ರ ಅಮೋಘವಾಗಿದೆ. ಇವರ ಸೇವೆಯನ್ನು ಗುರುತಿಸಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭ್ಯವಾಗಿರುವುದು, ಈಗ ಇವರಿಗೆ ಡಾಕ್ಟರೇಟ್ ಪದವಿ ಲಭಿಸಿರುವುದು ಇದಕ್ಕೆ ಇವರು ಅರ್ಹ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ತ್ರೀವೇಣಿ, ಮಹೇಶ್, ಪುಟ್ಟಸ್ವಾಮಿ, ಹೇಮಂತ್‌ಕುಮಾರ್, ಆಶಾ, ಮಂಜುಳಾ, ಸುಭಾಷಿಣಿ, ಗೀತಾ, ಮಹೇಶ್‌ಕುಮಾರ್, ಕೀರ್ತಿ, ಶ್ರೀಧರ್‌ನಾಯಕ್ ಸೇರಿದಂತೆ ಅನೇಕರು ಹಾಜರಿದ್ದರು.

10 hrs ago
user_ಎನ್. ನಟರಾಜ್
ಎನ್. ನಟರಾಜ್
Kollegal, Chamarajanagara•
10 hrs ago
affba5b4-1a5d-4a20-9406-32b1a85a4838

ಕೊಳ್ಳೇಗಾಲ = ತಮಿಳುನಾಡಿನ ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ನಂಜುಂಡಯ್ಯ ಅವರು ನೀಡಿರುವ ಶಿಕ್ಷಣ ಮತ್ತು ಸಾಮಾಜಿಕ ಸೇವೆಗೆ ಅಮೆರಿಕನ್ ವಿಸ್ಡಮ್ ಪೀಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರಕಿದೆ, ಯಳಂದೂರು ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಡಾ.ಆರ್. ನಂಜುಂಡಯ್ಯ ಅವರಿಗೆ ಗೌರವ ಡಾಕ್ಟರೇಟ್ ದೊರಕಿದ್ದು,ಅವರನ್ನು ಶಾಲೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಇತ್ತೀಚೆಗೆ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಸಮಾರಂಭದಲ್ಲಿ ನಂಜುಂಡಯ್ಯ ಅವರು ನೀಡಿರುವ ಶಿಕ್ಷಣ ಮತ್ತು ಸಾಮಾಜಿಕ ಸೇವೆಗೆ ಅಮೆರಿಕನ್ ವಿಸ್ಡಮ್ ಪೀಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರಕಿದೆ,ಹಾಗಾಗಿ ಶಾಲೆಯಲ್ಲಿ‌ ಅವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಂಜುಂಡಯ್ಯ ಅವರು, ನಾನು ಯಳಂದೂರು ತಾಲೂಕಿನವನೇ ಆಗಿದ್ದು ಇಲ್ಲಿನ ಶಾಲೆಯಲ್ಲಿ ಉಪ ಪ್ರಾಂಶುಪಾಲನಾಗಿ ಸೇವೆ ಸಲ್ಲಿಸುತ್ತಿರುವ ವೇಳೆ ನನಗೆ ಪ್ರಶಸ್ತಿ ಸನ್ಮಾನಗಳು ಅರಸಿ ಬರುತ್ತಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು. ಇದು ನಾನು ಮಾಡುವ ಕೆಲಸದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನಮ್ಮ ಶಾಲೆಯಲ್ಲಿ ಈಗ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಶಾಲೆಯಲ್ಲಿ ಹತ್ತು ಹಲವು ಸುಧಾರಣೆಗಳನ್ನು ತರಲು ನಮ್ಮ ಶಿಕ್ಷಕ ಹಾಗೂ ಸಿಬ್ಬಂಧಿ ವರ್ಗದವರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು. 2026-27 ನೇ ಸಾಲಿನ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ಈ ಬಾರಿ ನಮ್ಮ ಶಾಲೆಯ ಸುಪರ್ದಿಗೆ ಬಂದಿದ್ದು ಎಲ್ಲಾ ಜವಾಬ್ದಾರಿಯನ್ನು ನಮ್ಮ ಮೇಲಿದೆ, ಇದನ್ನು ಉತ್ತಮವಾಗಿ ಆಯೋಜಿಸುವ ನಿಟ್ಟಿನಲ್ಲಿ ಎಲ್ಲರ ನೆರವನ್ನೂ ಪಡೆದುಕೊಳ್ಳಲಾಗುವುದು ಎಂದು ಹೇಳಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸ್ಟೀವನ್ ಮಾತನಾಡಿ, ಆರ್.ನಂಜುಂಡಯ್ಯ ಒಬ್ಬ ಉತ್ತಮ ಶಿಕ್ಷಕರಾಗುವ ಜೊತೆಗೆ ಸಮಾಜಪರ, ಬಡ ಮಕ್ಕಳ ಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದಾರೆ. ಸದಾ ಚಟುವಟಿಕೆಯಿಂದ ಇರುವ ಇವರು ಶಾಲೆಯಲ್ಲಿ ಶಿಕ್ಷಣ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಅನೇಕ ಕ್ರಮ ವಹಿಸುತ್ತಿದ್ದಾರೆ. ತಮ್ಮ ಸಹ ಶಿಕ್ಷಕರ ಜೊತೆಗೆ ಉತ್ತಮ ಸಂಬಂಧ ಸಾಧಿಸಿ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇವರ ಪಾತ್ರ ಅಮೋಘವಾಗಿದೆ. ಇವರ ಸೇವೆಯನ್ನು ಗುರುತಿಸಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭ್ಯವಾಗಿರುವುದು, ಈಗ ಇವರಿಗೆ ಡಾಕ್ಟರೇಟ್ ಪದವಿ ಲಭಿಸಿರುವುದು ಇದಕ್ಕೆ ಇವರು ಅರ್ಹ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ತ್ರೀವೇಣಿ, ಮಹೇಶ್, ಪುಟ್ಟಸ್ವಾಮಿ, ಹೇಮಂತ್‌ಕುಮಾರ್, ಆಶಾ, ಮಂಜುಳಾ, ಸುಭಾಷಿಣಿ, ಗೀತಾ, ಮಹೇಶ್‌ಕುಮಾರ್, ಕೀರ್ತಿ, ಶ್ರೀಧರ್‌ನಾಯಕ್ ಸೇರಿದಂತೆ ಅನೇಕರು ಹಾಜರಿದ್ದರು.

More news from ಕರ್ನಾಟಕ and nearby areas
  • ಚಾಮರಾಜನಗರದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ರವರಿಂದ ವಿನೂತನ ಪ್ರತಿಭಟನೆ ಚಾಮರಾಜನಗರದ ಬಸವೇಶ್ವರ ಚಲನಚಿತ್ರ ಮಂದಿರದ ಮುಂಭಾಗ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಇಂದು ತಮಿಳುನಾಡಿಗೆ ಕಾವೇರಿ ನೀರು ಹರಿಯುವುದನ್ನು ತಕ್ಷಣ ನಿಲ್ಲಿಸಬೇಕೆಂದು ಸರ್ಕಾರಕ್ಕೆ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು. ಚಾಮರಾಜನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಬಸವೇಶ್ವರ ಚಲನಚಿತ್ರ ಮಂದಿರದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಶ್ರೀ ವಿಜಯರವರ ಜನನಾಯಗನ್ ಚಲನಚಿತ್ರವು ಪ್ರದರ್ಶನ ಗೊಳ್ಳುತ್ತಿತ್ತು ಇಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಪ್ರದರ್ಶನವನ್ನು ನಿಲ್ಲಿಸಿ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು
    3
    ಚಾಮರಾಜನಗರದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ರವರಿಂದ ವಿನೂತನ ಪ್ರತಿಭಟನೆ
ಚಾಮರಾಜನಗರದ ಬಸವೇಶ್ವರ ಚಲನಚಿತ್ರ ಮಂದಿರದ ಮುಂಭಾಗ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಇಂದು ತಮಿಳುನಾಡಿಗೆ ಕಾವೇರಿ ನೀರು ಹರಿಯುವುದನ್ನು ತಕ್ಷಣ ನಿಲ್ಲಿಸಬೇಕೆಂದು ಸರ್ಕಾರಕ್ಕೆ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು. ಚಾಮರಾಜನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಬಸವೇಶ್ವರ ಚಲನಚಿತ್ರ ಮಂದಿರದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಶ್ರೀ ವಿಜಯರವರ ಜನನಾಯಗನ್ ಚಲನಚಿತ್ರವು ಪ್ರದರ್ಶನ ಗೊಳ್ಳುತ್ತಿತ್ತು ಇಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಪ್ರದರ್ಶನವನ್ನು ನಿಲ್ಲಿಸಿ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು
    user_ಶಿವಕುಮಾರ ಬಿ
    ಶಿವಕುಮಾರ ಬಿ
    Pharmacist ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    16 hrs ago
  • ಮಂಡ್ಯ ಬ್ರಿಡ್ಜ್ ಹದಗೆಟ್ಟಿದೆ ಸರಿ ಮಾಡಿಸಿಕೊಡಿ ಅಂತ ಸಾಮಾಜಿಕ ಜಾಲ ತಾಣದಲ್ಲಿ ಶಾಸಕರಿಗೆ ಆಗ್ರಹಿಸಿದ ಯುವಕ ವಿಡಿಯೋ ವೈರಲ್ ಮಂಡ್ಯ - ಬ್ರಿಡ್ಜ್ ಹದಗೆಟ್ಟಿದೆ ಸರಿ ಮಾಡಿಸಿಕೊಡಿ ಅಂತ ಸಾಮಾಜಿಕ ಜಾಲ ತಾಣದಲ್ಲಿ ಆಗ್ರಹಿಸಿದ ಯುವಕ ವಿಡಿಯೋ ವೈರಲ್, ಮಂಡ್ಯದ ಅರಕೇಶ್ವರ ಸ್ವಾಮಿ ದೇವಾಲಯದ ರಸ್ತೆಯಲ್ಲಿ‌ಬರುವ ಬ್ರಿಡ್ಜ್ ಹಳ್ಳ ಬಿದ್ದಿದೆ ಈ ರಸ್ತೆಯಲ್ಲಿ ಹಲವಾರು ವಾಹನ ಓಡಾಡುತ್ತಿದ್ದು ಶಾಲಾವಾಹನಗಳು ಹೆಚ್ಚಾಗಿ ಒಡಾಡುತ್ತಿದ್ದು ಅತಾಚುರ್ಯ ವಾಗುವ ಮೊದಲು ಸರಿಪಡಿಸಿ ಅಂತ ಯುವಕ ಮನವಿ ಮಾಡಿದ್ದಾನೆ.
    1
    ಮಂಡ್ಯ ಬ್ರಿಡ್ಜ್ ಹದಗೆಟ್ಟಿದೆ  ಸರಿ ಮಾಡಿಸಿಕೊಡಿ ಅಂತ ಸಾಮಾಜಿಕ ಜಾಲ ತಾಣದಲ್ಲಿ ಶಾಸಕರಿಗೆ  ಆಗ್ರಹಿಸಿದ ಯುವಕ ವಿಡಿಯೋ ವೈರಲ್
ಮಂಡ್ಯ - ಬ್ರಿಡ್ಜ್ ಹದಗೆಟ್ಟಿದೆ  ಸರಿ ಮಾಡಿಸಿಕೊಡಿ ಅಂತ ಸಾಮಾಜಿಕ ಜಾಲ ತಾಣದಲ್ಲಿ ಆಗ್ರಹಿಸಿದ ಯುವಕ ವಿಡಿಯೋ ವೈರಲ್, ಮಂಡ್ಯದ ಅರಕೇಶ್ವರ ಸ್ವಾಮಿ ದೇವಾಲಯದ ರಸ್ತೆಯಲ್ಲಿ‌ಬರುವ ಬ್ರಿಡ್ಜ್ ಹಳ್ಳ ಬಿದ್ದಿದೆ ಈ ರಸ್ತೆಯಲ್ಲಿ ಹಲವಾರು ವಾಹನ ಓಡಾಡುತ್ತಿದ್ದು ಶಾಲಾವಾಹನಗಳು ಹೆಚ್ಚಾಗಿ ಒಡಾಡುತ್ತಿದ್ದು ಅತಾಚುರ್ಯ ವಾಗುವ ಮೊದಲು ಸರಿಪಡಿಸಿ ಅಂತ ಯುವಕ ಮನವಿ ಮಾಡಿದ್ದಾನೆ.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    4 hrs ago
  • Post by ರಾಮಲಿಂಗೇಗೌಡ ಎನ್
    1
    Post by ರಾಮಲಿಂಗೇಗೌಡ ಎನ್
    user_ರಾಮಲಿಂಗೇಗೌಡ ಎನ್
    ರಾಮಲಿಂಗೇಗೌಡ ಎನ್
    Tailor ಮದ್ದೂರು, ಮಂಡ್ಯ, ಕರ್ನಾಟಕ•
    9 hrs ago
  • ಮೈಸೂರು: ಸಂಗೀತವೇ ಉಸಿರಾಗಿದ್ದ ಗಾನಗಾನಕೋಗಿಲೆ, ಪದ್ಮಭೂಷಣ ಡಾ. ಎಸ್. ಜಾನಕಿ ಅಮ್ಮನವರಿಗೆ ಮೈಸೂರಿನ ಕಲಾಭಿಮಾನಿಗಳು ಕಣ್ಣೀರಿನ ನುಡಿನಮನ ಸಲ್ಲಿಸಿದರು. ಮೈಸೂರಿನ ರಾಮಕೃಷ್ಣ ನಗರದ ಗಂಧರ್ವ ಸಂಗೀತ ಅಕಾಡೆಮಿಯಲ್ಲಿ "ಶ್ರದ್ಧಾಂಜಲಿ ಮತ್ತು ಗೀತಾ ಗಾಯನ" ಕಾರ್ಯಕ್ರಮವನ್ನು ಭಾವನಾತ್ಮಕವಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಎಸ್. ಜಾನಕಿ ಅಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ನಂತರ ಸಭಿಕರೆಲ್ಲರೂ ಕೆಲ ಕ್ಷಣ ಮೌನಾಚರಣೆ ಮಾಡಿ ತಮ್ಮ ಪ್ರೀತಿಯ ಅಮ್ಮನ ಆತ್ಮಕ್ಕೆ ಶಾಂತಿ ಕೋರಿದರು. ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಆರ್‌.ಮಹೇಂದ್ರ ಮಾತನಾಡಿ, ಸಂಗೀತಕ್ಕೆ ಯಾವುದೇ ಧರ್ಮ ಜಾತಿ ಬೇಕಾಗಿಲ್ಲ. ಜಾನಕಿ ಅಮ್ಮನವರನ್ನು ನಾವು ದೈಹಿಕವಾಗಿ ಕಳೆದುಕೊಂಡಿದ್ದೇವೆ. ಆದರೆ, ಮಾನಸಿಕವಾಗಿ ಅವರು ಇಂದಿಗೂ ನಮ್ಮೊಟ್ಟಿಗೆ ಇದ್ದಾರೆ. ಸಂಗೀತಗಾರರಿಗೆ ಸರಸ್ವತಿಯೇ ಆದ ಅವರು, ಕೊನೆಯ ಕ್ಷಣಗಳಲ್ಲಿ ಮೈಸೂರನ್ನೇ ಆಯ್ಕೆ ಮಾಡಿಕೊಂಡು ಇಲ್ಲೇ ನೆಲೆಸಿದ್ದರು. ಇದು ನಮ್ಮ ಪುಣ್ಯ ಎಂದು ಹೇಳಿದರು. ಜಾನಕಿ ಅಮ್ಮನವರ ವ್ಯಕ್ತಿತ್ವವನ್ನು ನೆನೆದ ಆರ್.ಮಹೇಂದ್ರ ಅವರು, ಅವರು ಹಾಡುವ ಶೈಲಿ, ವಾಯ್ಸ್ ಮಾಡ್ಯುಲೇಷನ್ ಇಂದಿಗೂ ಗಾಯಕರಿಗೆ ಮಾದರಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನ ಪಾತ್ರಗಳಿಗೂ ಅವರು ತಮ್ಮ ಕಂಠ ನೀಡಿದ್ದಾರೆ. 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ ಅವರದ್ದು ಎಂದು ಸ್ಮರಿಸಿದರು. ನಾನು ಕೂಡ ಅವರೊಂದಿಗೆ ಎರಡು ವೇದಿಕೆಯಲ್ಲಿ ಹಾಡುವ ಅವಕಾಶ ಪಡೆದಿದ್ದೆ. ಅದು ಮರೆಯಲಾಗದ ಕ್ಷಣ. ಮೊದಲ ಬಾರಿ ಅವರನ್ನು ಭೇಟಿಯಾದಾಗ ತಮ್ಮ ಮಕ್ಕಳಂತೆ ನೋಡಿಕೊಂಡು, ಕೈ ತುತ್ತು ತಿನಿಸಿದರು. ಅಷ್ಟೊಂದು ಆತ್ಮೀಯತೆ. ನಾನು ಸಂಗೀತ ಕಲಿಯುತ್ತಿದ್ದಾಗ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನನಗೆ ಚಿನ್ನದ ಪದಕವನ್ನು ಅವರ ಕೈಯಿಂದಲೇ ಪಡೆದಿದ್ದೆ. ಅಂತಹ ಸರಳ, ಸಾರ್ಥಕ ಜೀವನ ನಡೆಸಿದ ಮಹಾನ್ ಕಲಾವಿದೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟರು. ನುಡಿನಮನದ ನಂತರ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಹಿರಿಯ ಗಾಯಕರು ಜಾನಕಿ ಅಮ್ಮನವರು ಹಾಡಿರುವ ಸುಪ್ರಸಿದ್ಧ ಗೀತೆಗಳನ್ನು ಹಾಡಿ ಗೀತಾ ಗಾಯನದ ಮೂಲಕ ನಮನ ಸಲ್ಲಿಸಿದರು. ಅವರ ಕಂಠದ ಪ್ರತಿಧ್ವನಿ ಸಭಾಂಗಣದಲ್ಲಿ ಮೊಳಗಿದಾಗ ಹಲವರ ಕಣ್ಣುಗಳು ತೇವಗೊಂಡವು. ಸ್ವರ ಮೌನವಾದರೂ, ಆ ಸ್ವರದ ಶಕ್ತಿ ಇಂದಿಗೂ ಕೋಟಿ ಹೃದಯಗಳಲ್ಲಿ ಜೀವಂತವಾಗಿದೆ ಎಂಬುದನ್ನು ಈ ಶ್ರದ್ಧಾಂಜಲಿ ಮತ್ತೊಮ್ಮೆ ಸಾಬೀತುಪಡಿಸಿತು. ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ನಿವೃತ್ತ ಎಇಇ ಸುರೇಶ್, ಗಾಯಕರಾದ ಲಕ್ಷ್ಮಣ್, ಮೀನಾಕುಮಾರಿ, ಬಸವರಾಜು, ಚೇತನ್, ಡಾ.ಜಗದೀಶ್, ಸಂಜಯ್, ದಿನೇಶ್, ಡಾ. ರತ್ನ ಹಾಲಪ್ಪಗೌಡ, ರಾಜೇಶ್ವರಿ, ಮಹೇಶ್, ಮಂಜುನಾಥ್ ಎಂ, ಪವಿತ್ರ, ಎಂ. ನಟರಾಜ್, ಸೇರಿದಂತೆ ಅನೇಕ ಸಂಗೀತ ಪ್ರಿಯರು ಮತ್ತು ಮಕ್ಕಳು ಭಾಗವಹಿಸಿದ್ದರು.
    3
    ಮೈಸೂರು: 
ಸಂಗೀತವೇ ಉಸಿರಾಗಿದ್ದ ಗಾನಗಾನಕೋಗಿಲೆ, ಪದ್ಮಭೂಷಣ ಡಾ. ಎಸ್. ಜಾನಕಿ ಅಮ್ಮನವರಿಗೆ ಮೈಸೂರಿನ ಕಲಾಭಿಮಾನಿಗಳು ಕಣ್ಣೀರಿನ ನುಡಿನಮನ ಸಲ್ಲಿಸಿದರು. 
ಮೈಸೂರಿನ ರಾಮಕೃಷ್ಣ ನಗರದ ಗಂಧರ್ವ ಸಂಗೀತ ಅಕಾಡೆಮಿಯಲ್ಲಿ  "ಶ್ರದ್ಧಾಂಜಲಿ ಮತ್ತು ಗೀತಾ ಗಾಯನ" ಕಾರ್ಯಕ್ರಮವನ್ನು ಭಾವನಾತ್ಮಕವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಎಸ್. ಜಾನಕಿ ಅಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ನಂತರ ಸಭಿಕರೆಲ್ಲರೂ ಕೆಲ ಕ್ಷಣ ಮೌನಾಚರಣೆ ಮಾಡಿ ತಮ್ಮ ಪ್ರೀತಿಯ ಅಮ್ಮನ ಆತ್ಮಕ್ಕೆ ಶಾಂತಿ ಕೋರಿದರು.
ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಆರ್‌.ಮಹೇಂದ್ರ ಮಾತನಾಡಿ, ಸಂಗೀತಕ್ಕೆ ಯಾವುದೇ ಧರ್ಮ ಜಾತಿ ಬೇಕಾಗಿಲ್ಲ. ಜಾನಕಿ ಅಮ್ಮನವರನ್ನು ನಾವು ದೈಹಿಕವಾಗಿ ಕಳೆದುಕೊಂಡಿದ್ದೇವೆ. ಆದರೆ, ಮಾನಸಿಕವಾಗಿ ಅವರು ಇಂದಿಗೂ ನಮ್ಮೊಟ್ಟಿಗೆ ಇದ್ದಾರೆ. ಸಂಗೀತಗಾರರಿಗೆ ಸರಸ್ವತಿಯೇ ಆದ ಅವರು, ಕೊನೆಯ ಕ್ಷಣಗಳಲ್ಲಿ ಮೈಸೂರನ್ನೇ ಆಯ್ಕೆ ಮಾಡಿಕೊಂಡು ಇಲ್ಲೇ ನೆಲೆಸಿದ್ದರು. ಇದು ನಮ್ಮ ಪುಣ್ಯ ಎಂದು ಹೇಳಿದರು.
ಜಾನಕಿ ಅಮ್ಮನವರ ವ್ಯಕ್ತಿತ್ವವನ್ನು ನೆನೆದ ಆರ್.ಮಹೇಂದ್ರ ಅವರು, ಅವರು ಹಾಡುವ ಶೈಲಿ, ವಾಯ್ಸ್ ಮಾಡ್ಯುಲೇಷನ್ ಇಂದಿಗೂ ಗಾಯಕರಿಗೆ ಮಾದರಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನ ಪಾತ್ರಗಳಿಗೂ ಅವರು ತಮ್ಮ ಕಂಠ ನೀಡಿದ್ದಾರೆ. 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ ಅವರದ್ದು ಎಂದು ಸ್ಮರಿಸಿದರು.
ನಾನು ಕೂಡ ಅವರೊಂದಿಗೆ ಎರಡು ವೇದಿಕೆಯಲ್ಲಿ ಹಾಡುವ ಅವಕಾಶ ಪಡೆದಿದ್ದೆ. ಅದು ಮರೆಯಲಾಗದ ಕ್ಷಣ. ಮೊದಲ ಬಾರಿ ಅವರನ್ನು ಭೇಟಿಯಾದಾಗ ತಮ್ಮ ಮಕ್ಕಳಂತೆ ನೋಡಿಕೊಂಡು, ಕೈ ತುತ್ತು ತಿನಿಸಿದರು. ಅಷ್ಟೊಂದು ಆತ್ಮೀಯತೆ. ನಾನು ಸಂಗೀತ ಕಲಿಯುತ್ತಿದ್ದಾಗ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನನಗೆ ಚಿನ್ನದ ಪದಕವನ್ನು ಅವರ ಕೈಯಿಂದಲೇ ಪಡೆದಿದ್ದೆ. ಅಂತಹ ಸರಳ, ಸಾರ್ಥಕ ಜೀವನ ನಡೆಸಿದ ಮಹಾನ್ ಕಲಾವಿದೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟರು.
ನುಡಿನಮನದ ನಂತರ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಹಿರಿಯ ಗಾಯಕರು ಜಾನಕಿ ಅಮ್ಮನವರು ಹಾಡಿರುವ ಸುಪ್ರಸಿದ್ಧ ಗೀತೆಗಳನ್ನು ಹಾಡಿ ಗೀತಾ ಗಾಯನದ ಮೂಲಕ ನಮನ ಸಲ್ಲಿಸಿದರು. ಅವರ ಕಂಠದ ಪ್ರತಿಧ್ವನಿ ಸಭಾಂಗಣದಲ್ಲಿ ಮೊಳಗಿದಾಗ ಹಲವರ ಕಣ್ಣುಗಳು ತೇವಗೊಂಡವು.
ಸ್ವರ ಮೌನವಾದರೂ, ಆ ಸ್ವರದ ಶಕ್ತಿ ಇಂದಿಗೂ ಕೋಟಿ ಹೃದಯಗಳಲ್ಲಿ ಜೀವಂತವಾಗಿದೆ ಎಂಬುದನ್ನು ಈ ಶ್ರದ್ಧಾಂಜಲಿ ಮತ್ತೊಮ್ಮೆ ಸಾಬೀತುಪಡಿಸಿತು.
ಈ ಸಂದರ್ಭದಲ್ಲಿ ಪಿಡಬ್ಲ್ಯೂಡಿ ನಿವೃತ್ತ ಎಇಇ ಸುರೇಶ್, ಗಾಯಕರಾದ ಲಕ್ಷ್ಮಣ್, ಮೀನಾಕುಮಾರಿ, ಬಸವರಾಜು, ಚೇತನ್, ಡಾ.ಜಗದೀಶ್, ಸಂಜಯ್, ದಿನೇಶ್, ಡಾ. ರತ್ನ ಹಾಲಪ್ಪಗೌಡ, ರಾಜೇಶ್ವರಿ, ಮಹೇಶ್, ಮಂಜುನಾಥ್ ಎಂ, ಪವಿತ್ರ, ಎಂ. ನಟರಾಜ್, ಸೇರಿದಂತೆ ಅನೇಕ ಸಂಗೀತ ಪ್ರಿಯರು ಮತ್ತು ಮಕ್ಕಳು ಭಾಗವಹಿಸಿದ್ದರು.
    user_Mysore update
    Mysore update
    Voice of people Mysuru, Karnataka•
    7 hrs ago
  • All About,Day Dreamers who are dreaming to become famous overnight by spreading selfish propaganda *ಭಾರತ ನಲ್ಲಿ ವೈರಲ್*
    1
    All About,Day Dreamers who are dreaming to become famous overnight by spreading selfish propaganda 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    8 hrs ago
  • ಪ್ರತಿಭಟನೆಯಲ್ಲಿ ವಯೋವೃದ್ದೆ‌, ಅಭಿನಂದಿಸಿದ ಕುಮಾರ್‌ ಬಂಗಾರಪ್ಪ ಪ್ರತಿಭಟನೆಯಲ್ಲಿ‌ ಬಾಗಿ ಮಂಡ್ಯ-ಕರ್ನಾಟಕ ರಾಜ್ಯ ರೈತಸಂಘ,ದಲಿತ‌ಸಂಘರ್ಷ ಸಮಿತಿ,ಹಾಗೂ ಕಬ್ಬುಬೆಳೆಗಾರರ ಒಕ್ಕೂಟದಿಂದ ಕಾವೇರಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಚಲನಚಿತ್ರ ನಟ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬೇಟಿ ನೀಡಿ ತಮ್ಮ ಬೆಂಬಲ ವ್ಯಕ್ತ‌ಪಡಿಸಿದ್ರು‌ ವಯೋವೃದ್ದೆ ಪ್ರತಿಭಟನೆಯಲ್ಲಿ ಬಾಗವಹಿಸಿದ್ದನ್ನ‌ಕಂಡು ಸಂತಸ‌ಪಟ್ಟು ಅವರನ್ನ ಅಭಿನಂದಿಸಿದ್ರು,ನಂತರ ಅಲ್ಲೇ‌ಪ್ರತಿಭನಾಕಾರ ರೊಂದಿಗೆ‌ ಕುಳಿತು ಘೋಷಣೆ ಕೂಗಿದ್ರು.
    1
    ಪ್ರತಿಭಟನೆಯಲ್ಲಿ ವಯೋವೃದ್ದೆ‌, ಅಭಿನಂದಿಸಿದ ಕುಮಾರ್‌ ಬಂಗಾರಪ್ಪ ಪ್ರತಿಭಟನೆಯಲ್ಲಿ‌ ಬಾಗಿ
ಮಂಡ್ಯ-ಕರ್ನಾಟಕ ರಾಜ್ಯ ರೈತಸಂಘ,ದಲಿತ‌ಸಂಘರ್ಷ ಸಮಿತಿ,ಹಾಗೂ ಕಬ್ಬುಬೆಳೆಗಾರರ ಒಕ್ಕೂಟದಿಂದ ಕಾವೇರಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಚಲನಚಿತ್ರ ನಟ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬೇಟಿ ನೀಡಿ ತಮ್ಮ ಬೆಂಬಲ ವ್ಯಕ್ತ‌ಪಡಿಸಿದ್ರು‌ ವಯೋವೃದ್ದೆ ಪ್ರತಿಭಟನೆಯಲ್ಲಿ ಬಾಗವಹಿಸಿದ್ದನ್ನ‌ಕಂಡು ಸಂತಸ‌ಪಟ್ಟು ಅವರನ್ನ ಅಭಿನಂದಿಸಿದ್ರು,ನಂತರ ಅಲ್ಲೇ‌ಪ್ರತಿಭನಾಕಾರ ರೊಂದಿಗೆ‌ ಕುಳಿತು ಘೋಷಣೆ ಕೂಗಿದ್ರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    4 hrs ago
  • Post by ರಾಮಲಿಂಗೇಗೌಡ ಎನ್
    1
    Post by ರಾಮಲಿಂಗೇಗೌಡ ಎನ್
    user_ರಾಮಲಿಂಗೇಗೌಡ ಎನ್
    ರಾಮಲಿಂಗೇಗೌಡ ಎನ್
    Tailor ಮದ್ದೂರು, ಮಂಡ್ಯ, ಕರ್ನಾಟಕ•
    16 hrs ago
  • All About,Anyone plz identify for what Our Then MCC Commissioner mentioning about Which private properties *ಭಾರತ ನಲ್ಲಿ ವೈರಲ್*
    1
    All About,Anyone plz identify for what Our Then MCC Commissioner mentioning about Which private properties 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    12 hrs ago
  • ಕಾವೇರಿ ಕಾವು ಖಾಲಿ ತಟ್ಟೆ-ಲೋಟ ಹಿಡಿದು ಪ್ರತಿಭಟನೆ, ವಿಜಯ್ ಪೋಸ್ಟರ್ ಹರಿದು ಆಕ್ರೋಶ ಚಾಮರಾಜನಗರ, ಜು. 31: ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ತಮಿಳು ನಟ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ 'ಜನನಾಯಗನ್' ಚಿತ್ರದ ಪ್ರದರ್ಶನವನ್ನು ವಿರೋಧಿಸಿ ರೈತರು ಶನಿವಾರ ನಗರದ ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಖಾಲಿ ತಟ್ಟೆ ಮತ್ತು ಲೋಟ ಹಿಡಿದು ಬಾರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ವಿರುದ್ಧವೂ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಿತ್ರಮಂದಿರದ ಆಡಳಿತ ಮಂಡಳಿ ದಿನದ ನಾಲ್ಕು ಪ್ರದರ್ಶನಗಳನ್ನು ರದ್ದುಪಡಿಸಿತು. ಯಾವುದೇ ಕಾರಣಕ್ಕೂ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾನಿರತ ರೈತರು ಎಚ್ಚರಿಕೆ ನೀಡಿದರು.
    1
    ಕಾವೇರಿ ಕಾವು ಖಾಲಿ ತಟ್ಟೆ-ಲೋಟ ಹಿಡಿದು ಪ್ರತಿಭಟನೆ, ವಿಜಯ್ ಪೋಸ್ಟರ್ ಹರಿದು ಆಕ್ರೋಶ


ಚಾಮರಾಜನಗರ, ಜು. 31: ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ತಮಿಳು ನಟ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ 'ಜನನಾಯಗನ್' ಚಿತ್ರದ ಪ್ರದರ್ಶನವನ್ನು ವಿರೋಧಿಸಿ ರೈತರು ಶನಿವಾರ ನಗರದ ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಖಾಲಿ ತಟ್ಟೆ ಮತ್ತು ಲೋಟ ಹಿಡಿದು ಬಾರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ವಿರುದ್ಧವೂ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಿತ್ರಮಂದಿರದ ಆಡಳಿತ ಮಂಡಳಿ ದಿನದ ನಾಲ್ಕು ಪ್ರದರ್ಶನಗಳನ್ನು ರದ್ದುಪಡಿಸಿತು. ಯಾವುದೇ ಕಾರಣಕ್ಕೂ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾನಿರತ ರೈತರು ಎಚ್ಚರಿಕೆ ನೀಡಿದರು.
    user_ಚಾಮರಾಜನಗರ ಸುದ್ದಿ ಮನೆ
    ಚಾಮರಾಜನಗರ ಸುದ್ದಿ ಮನೆ
    ಪತ್ರಕರ್ತ ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.