ಮುಗ್ರೋಡಿ ಸಂಜಯನಗರ ಬಳಿ ಮನೆಗೆ ವಿದ್ಯುತ್ ಸ್ಪರ್ಶದಿಂದ ಬೆಂಕಿ ಅಪಾರ ನಷ್ಟ ಪ್ರದೇಶಕ್ಕೆ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾ ಭೇಟಿ ಅಧಿಕಾರಿಗಳೊಂದಿಗೆ ಚರ್ಚೆ ಮುಗ್ರೋಡಿ ಸಂಜಯನಗರ ಬಳಿ ಸುಲೋಚನರವರ ಮನೆಗೆ ವಿದ್ಯುತ್ ಸ್ಪರ್ಶದಿಂದ ಬೆಂಕಿ ತಗಲಿ ಮನೆಯ ಎಲ್ಲಾ ಸೊತ್ತುಗಳು ನಾಶವಾಗಿದ್ದು, ಅಪಾರ ನಷ್ಟವಾಗಿರುವ ಬಗ್ಗೆ ಅಧಿಕಾರಿಗಳಾದ ಮೆಸ್ಕಾಂ AEE ಶಿವಕುಮಾರ್, JE ಸುಬ್ರಹ್ಮಣ್ಯ ಹಾಗೂ ಗ್ರಾಮ ಲೆಕ್ಕಾಧಿಕಾರಿ ಧರ್ಮ ಇವರುಗಳೊಂದಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಮತ್ತು ನಷ್ಟ ಉಂಟಾದ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ, ಮೆಸ್ಕಾಂ,ಅಧಿಕಾರಿಗಳ ವರದಿಯನ್ನು ಪಡೆದು ಕೂಡಲೇ ಪರಿಹಾರವನ್ನು ಒದಗಿಸಿಕೊಡಬೇಕೆಂದು ಸೂಚಿಸಿದರು. ಈ ಪ್ರದೇಶದಲ್ಲಿ ಅನೇಕ ಎಲೆಕ್ಟ್ರಿಕ್ ಕಂಬಗಳ ವಯರ್‌ಗಳು ನೇತಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರು ಇದನ್ನು ಸರಿಪಡಿಸದೇ ನಿರ್ಲಕ್ಷತನ ವಹಿಸಿದರೇ, ಇಲಾಖೆಯು ದಂಡ ತೆರಬೇಕೆಂದು ಎಚ್ಚರಿಕೆಯನ್ನು ನೀಡಿದರು. ಈ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಬಗ್ಗೆ ತನಿಖೆ ನಡೆಸಿ, ಮನೆಯವರ ಬಟ್ಟೆ ಬರೆ ಶಾಲಾ ಫೀಸ್ ಕಟ್ಟುವಂತಹ ಹಣ ಎಲ್ಲಾ ದಾಖಲೆಗಳು ಬೆಂಕಿಗೆ ಅಹುತಿಯಾಗಿದ್ದು, ಈ ಬಗ್ಗೆ ಪರಿಹಾರ ಒದಗಿಸಿಕೊಡಬೇಕೆಂದು ಇಲಾಖೆಗೆ ಸೂಚಿಸಿದರು ಇದೇ ರೀತಿ ಮಹಾಕಾಳಿಪಡ್ಪು ಜೆಪ್ಪು ಇಲ್ಲಿ ಇತ್ತೀಚೆಗೆ ಮೃತರಾಗಿದ್ದ, ವರುಣ್‌ರವರಿಗೆ ಈ ವರೆಗೆ ಪರಿಹಾರ ಒದಗಿಸಿಲ್ಲ ಎಂದು ತೀವ್ರ ಅಸಮಾದಾನ ವ್ಯಕ್ತಪಡಿಸಿದರು.ಕೂಡಲೇ ಪರಿಹಾರ ಒದಗಿಸಿಕೊಡಬೇಕೆಂದು ಸೂಚಿಸಿದರು.

- ಅರಕಲಗೂಡು : ರಾಮನಾಥಪುರದಿಂದ ಸಾಲಿಗ್ರಾಮ ಕ್ಕೆ ತೆರಳುವ ಮಾರ್ಗ ಮಧ್ಯೆ ಎರಡು ಕಾರುಗಳು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪೋಟೋಗ್ರಾಫರ್ ಸ್ಥಳದಲ್ಲೇ ಮೃತ. ಅರಕಲಗೂಡು ತಾಲ್ಲೂಕಿನ ಕಟ್ಟೇಪುರ ಗ್ರಾಮದ ನವೀನ (30) ಪೋಟೋಗ್ರಾಫರ್ ಮೃತ ವ್ಯಕ್ತಿ ಕುಟುಂಬಸ್ಥರ ಆಕ್ರಂದನ ಮುಗಿಲಮಟ್ಟಿದೆ. ಅರಕಲಗೂಡು ತಾಲ್ಲೂಕು ಛಾಯಾಗ್ರಾಹಕರ ಸಂಘ ಸಂತಾಪ ಸೂಚಿಸಿದೆ #caraccidents #photographer #Salegrama #Kattepura #Arkalgud1
- *ಭಾರತ ನಲ್ಲಿ ವೈರಲ್*1
- ಮೈಸೂರು: ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ಜಲ ಸಮಾಧಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ನಿಸರ್ಗಧಾಮ ಕಾವೇರಿ ನದಿಯಲ್ಲಿ ನಡೆದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಚಾರ್ವಿ(15), ರಮ್ಯ, (16 ) ಮೃತ ದುದೈವಿಗಳು. ಮತ್ತೋರ್ವ ವಿದ್ಯಾರ್ಥಿನಿ ಸುಚಿತ್ರ ಸ್ಥಿತಿ ಗಂಭೀರವಾಗಿದೆ. ತಲಕಾಡು ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಕ್ಕೆ ಬಂದಿದ್ದ ಅಕ್ಷಯಲಿಯ ನವಜೀವನ ಚಾಮರಾಜಪೇಟೆ ಬೆಂಗಳೂರು ಎನ್‌ಜಿಒ ಸಂಸ್ಥೆಯ 71 ವಿದ್ಯಾರ್ಥಿಗಳು ಬಂದು ಕಾವೇರಿ ನದಿ ನೀರಿನಲ್ಲಿ ಆಟ ಆಡುತ್ತಿದ್ದಾಗ ಮೂರು ಜನ ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿರುತ್ತಾರೆ. ವಿದ್ಯಾರ್ಥಿನಿಯರು ಕಿರುಚಿ ಕೊಂಡಾಗ ಸ್ಥಳದಲ್ಲಿದ್ದ ಸ್ಥಳೀಯರು ಈಜಿಕೊಂಡು ರಕ್ಷಣೆ ಮಾಡಿ, ನದಿಯಿಂದ ವಿದ್ಯಾರ್ಥಿನಿಯರನ್ನು ವರೆಗೆ ತೆಗೆದು ಮೂವರನ್ನು ತಲಕಾಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಮೂವರಲ್ಲಿ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮತ್ತೊರ್ವ ವಿದ್ಯಾರ್ಥಿನಿ ಸುಚಿತ್ರರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹವನ್ನು ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- Post by Suresh Belagere1
- ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿದ ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಕಾಲ ಲೋಕಸಭಾ ಅಧಿವೇಶನ ಕರದಿದ್ದು ವಿಶೇಷ ಅಧಿವೇಶನವಾಗಿತ್ತು. ಮಹಿಳೆಯರ ವಿಶೇಷ ಮೀಸಲಾತಿ ಸೌಲಭ್ಯವನ್ನ ತಕ್ಷಣದಿಂದ ಜಾರಿಗೆ ಬರಲು ದೇಶದಲ್ಲಿ ಕಾನೂನು ರೂಪಿಸಲು ಕರೆದಿಧ್ದರು. 2029 ರ ನಂತರ ಎಂಬ ಬಾವನೆ ಇದ್ದು ಅದನ್ನ ತಿದ್ದುಪಡಿ ಮಾಡಿ ತರಲು ಹೊರಟಿದ್ದು ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ಬಿಲ್ ಅನ್ನ ಪಾಸ್ ಮಾಡಲು ಬಿಡಲಿಲ್ಲ ಎಂದು ತಿಳಿಸಿದರು1
- 🚩🚩🚩🚩3
- ಭಾರತ ಸರಕಾರದ ಕ್ರೀಡಾ ಸಚಿವಾಲಯದ ಅಡಿಯಲ್ಲಿನ ಫಿಟ್ ಇಂಡಿಯಾ ಮಿಷನ್ , ಹಾಗೂ ಕರ್ನಾಟಕ ಸರಕಾರದ ನಿರ್ದೇಶನದಂತೆ ದ.ಕ. ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಸ್ವಚ್ಛ ಭಾರತ್ ಮಿಷನ್ (ಗ್ರಾ) ಇದರ ನೋಡಲ್ ಅಧಿಕಾರಿ ಹಾಗೂ ಉಪ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಯಡಿ "ಸಂಡೇಸ್ ಆನ್ ಸೈಕಲ್- ಸ್ವಚ್ಛತಾ ರೈಡ್" ಸ್ವಚ್ಛತೆಗಾಗಿ ಸೈಕಲ್ ಜಾಥಾ ಕಾರ್ಯಕ್ರಮವನ್ನು ನಗರದ ಮಂಗಳಾ ಕ್ರೀಡಾಂಗಣ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ವಿವಿಧ ಕಾಲೇಜಿನ ಶಾಲಾ ಮಕ್ಕಳು, ಸ್ವಚ್ಛತಾ ಕಾರ್ಮಿಕರು, ಪಂಚಾಯತ್ ಸಿಬ್ಬಂದಿಗಳು ಹಾಗೂ ಸ್ವ.ಭಾ.ಮಿ(ಗ್ರಾ) ಜಿಲ್ಲಾ ಸಮಾಲೋಚಕರು ಭಾಗವಹಿಸಿದ್ದರು.1
- ಅರಕಲಗೂಡು: ಮಹಾಪುರುಷರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ, ಸಮಾಜದ ಅಭ್ಯದಯಕ್ಕಾಗಿಕ್ಕೆ ಶ್ರಮಿಸಿದ ಇವರ ಜಯಂತಿಯನ್ನು ಎಲ್ಲ ಸಮುದಾಯವರೂ ಒಟ್ಟಾಗಿ ಆಚರಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ ಎಂದು ಶಾಸಕ ಎ. ಮಂಜು ತಿಳಿಸಿದರು. ತಹಶೀಲ್ದಾರ್ ಕೆ.ಸಿ.ಸೌಮ್ಯ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜ್, ಮುಖಂಡರಾದ ನೈಗೆರೆ ಚನ್ನಕೇಶವೇಗೌಡ, ಎನ್. ರವಿಕುಮಾರ್, ಕೆ.ಸಿ.ಲೋಕೇಶ್, ಮಾಗಲು ಬಸವರಾಜ್, ವೀರಾಜ್, ಡಿಎಸ್ ಎಸ್ ಮುಖಂಡ ಚಂದ್ರಣ್ಣ, ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಮಲ್ಲೇಶ್ ಉಪಸ್ಥಿತದ್ದರು.1
- *ಭಾರತ ನಲ್ಲಿ ವೈರಲ್*1