ಶರಣರ ಸದ್ಗುಣಗಳು ಮನುಕುಲಕ್ಕೆ ಮಾರ್ಗದರ್ಶಿ, ಹೊಸಮಠದ ಬಸವಲಿಂಗ ಮಹಾಸ್ವಾಮಿಗಳು. ಶಿಗ್ಗಾವಿ : ಶರಣರ ಸದ್ಗುಣಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿದ್ದು, ಅದರಿಂದ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಾಗಿದೆ. ಹೀಗಾಗಿ ಶರಣರು ನುಡಿದಂತೆ ನಡೆದು ತೋರಿದ್ದಾರೆ ಆದ್ದರಿಂದ ಇಂತಹ ಶರಣ ಸಂಸ್ಕೃತಿ ಉತ್ಸವಗಳಲ್ಲಿ ಭಾಗವಹಿಸಿ ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಹಾವೇರಿ ಹೊಸಮಠದ ಬಸವಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಹಾಗೂ ಲಿಂಗೈಕ್ಯ ಬಸವಲಿಂಗ ಸ್ವಾಮೀಜಿಗಳ ಪುಣ್ಯಾರಾಧನೆ ಅಂಗವಾಗಿ ನಡೆದ “33ನೇ ಶರಣ ಸಂಸ್ಕೃತಿ ಉತ್ಸವ-2026” ಮತ್ತು ಪಟ್ಟರಾಜ ಕವಿಗವಾಯಿಗಳ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಹರಿಜನ ಮಾತನಾಡಿ, ಶರಣು ಸಂಸ್ಕೃತಿಯಿಂದ ನಾಡಿನ ವಿವಿಧ ರಂಗದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಆದರು ಅಧುನಿಕತೆ ಅಬ್ಬರದಲ್ಲಿ ವಿದೇಶಿ ಶಿಕ್ಷಣದ ಪ್ರಭಾವಕ್ಕೆ ಒಳಗಾಗಿ ಮೂಲ ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವದ ಮೂಲಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಬದುಕು ಅರಿತು ನಡೆಯುವ ಕಡೆ ಮಾರ್ಗದರ್ಶಿಯಾಗಿದೆ ಎಂದರು. ಗದಗ ವೀರೇಶ್ವರ ಪುಣ್ಯಾಶ್ರಮದ ಪ್ರವಚನಕಾರ ಕುಮಾರಶಾಸ್ತ್ರಿ ವೆಂಕಟಾಪುರಮಠ ಅವರು " ಪುಟ್ಟರಾಜ ಕವಿ ಗವಾಯಿಗಳ ಜೀವನ ಚರಿತ್ರೆ " ಕುರಿತು ಮಾತನಾಡಿ, ಬಾಲ್ಯದ ಕಣ್ಣು ಕಳೆದು ಕಳೆದುಕೊಂಡ ಪುಟ್ಟರಾಜರು ಮುಂದೆ ಈಡೀ ನಾಡಿಗೆ ಬೆಳಕಾಗಿ ನಿಂತರು. ಸಮಾಜ ಸೇವಾ ಕಾರ್ಯದಲ್ಲಿ ನಿರತರಾದರು. ಸಂಗೀತ, ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದರು. ಶಿಕ್ಷಣ ಮತ್ತು ದಾಸೋಹಕ್ಕೆ ಮಹತ್ವ ನೀಡಿದ್ದಾರೆ ಎಂದರು. ಗುತ್ತಿಗೆದಾರ ಅರ್ಜುನ ಹಂಚಿನಮನಿ ಮಾತನಾಡಿ, ಗುರಿ ಇರಬೇಕು ಹಿಂದೆ ಗುರು ಇರಬೇಕು, ಮಠದಲ್ಲಿ ಶಕ್ತಿ ಇದೆ, ಭಕ್ತಿಯಿದ್ದಲೇ ಯಶಸ್ಸು ಇದೆ, ತಾಯಿ ಮಡಿಲು ತಂದೆ ಹೆಗಲು ಸ್ವರ್ಗಕ್ಕಿಂತ ಹೆಚ್ಚು, ತಂದೆ ತಾಯಿಗಿಂತ ದೊಡ್ಡವರಿಲ್ಲ, ಗೌರವದಿಂದ ಬಾಳಬೇಕಿದೆ ಎಂದರು. ವಿರಕ್ತಮಠದ ಬಸವಲಿಂಗ ದೇವರು ಹಾಗೂ ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿದರು, ವಿರಕ್ತಮಠದ ಸಂಗನಬಸವ ಮಹಾಸ್ವಾಮೀಗಳು ನೇತೃತ್ವ ವಹಿಸಿದ್ದರು, ಗುತ್ತಿಗೆದಾರ ಮಂಜುನಾಥ ಕಾರಡಗಿ, ಪಿಂಜಾರ ಸಮಾಜದ ಅದ್ಯಕ್ಷ ಶರೀಫ ನದಾಫ, ಮೌಲಾಸಾಬ ತಹಶೀಲ್ದಾರ, ಚಂದ್ರು ಕೊತಂಬ್ರಿ, ದೇವಪ್ಪ ಸೊರಟೂರ, ಪತ್ರಕರ್ತ ಸದಾಶಿವ ಹಿರೇಮಠ ಸೇರಿದಂತೆ ಪಂಡಿತ್ ಪಟ್ಟರಾಜ ಕವಿಗವಾಯಿಗಳ ಕಲಾ ಸಂಸ್ಥೆಯ ಸದಸ್ಯರು, ಸಮಿತಿ ಸದಸ್ಯರು ಇದ್ದರು, ಕಾರ್ಯಕ್ರಮದಲ್ಲಿ ಧರ್ಮಕಾರ್ಯದ ಹಾಗೂ ಪ್ರಸಾದ ಸೇವೆಯ ದಾನಿಗಳನ್ನ ಸನ್ಮಾನಿಸಲಾಯಿತು, ಪ್ರೋ. ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು, ಶಸಾಪ ಅದ್ಯಕ್ಷ ಸಿ ಡಿ ಯತ್ನಳ್ಳಿ ಸ್ವಾಗತಿಸಿದರು
ಶರಣರ ಸದ್ಗುಣಗಳು ಮನುಕುಲಕ್ಕೆ ಮಾರ್ಗದರ್ಶಿ, ಹೊಸಮಠದ ಬಸವಲಿಂಗ ಮಹಾಸ್ವಾಮಿಗಳು. ಶಿಗ್ಗಾವಿ : ಶರಣರ ಸದ್ಗುಣಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿದ್ದು, ಅದರಿಂದ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಾಗಿದೆ. ಹೀಗಾಗಿ ಶರಣರು ನುಡಿದಂತೆ ನಡೆದು ತೋರಿದ್ದಾರೆ ಆದ್ದರಿಂದ ಇಂತಹ ಶರಣ ಸಂಸ್ಕೃತಿ ಉತ್ಸವಗಳಲ್ಲಿ ಭಾಗವಹಿಸಿ ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಹಾವೇರಿ ಹೊಸಮಠದ ಬಸವಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಹಾಗೂ ಲಿಂಗೈಕ್ಯ ಬಸವಲಿಂಗ ಸ್ವಾಮೀಜಿಗಳ ಪುಣ್ಯಾರಾಧನೆ ಅಂಗವಾಗಿ ನಡೆದ “33ನೇ ಶರಣ ಸಂಸ್ಕೃತಿ ಉತ್ಸವ-2026” ಮತ್ತು ಪಟ್ಟರಾಜ
ಕವಿಗವಾಯಿಗಳ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಹರಿಜನ ಮಾತನಾಡಿ, ಶರಣು ಸಂಸ್ಕೃತಿಯಿಂದ ನಾಡಿನ ವಿವಿಧ ರಂಗದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಆದರು ಅಧುನಿಕತೆ ಅಬ್ಬರದಲ್ಲಿ ವಿದೇಶಿ ಶಿಕ್ಷಣದ ಪ್ರಭಾವಕ್ಕೆ ಒಳಗಾಗಿ ಮೂಲ ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವದ ಮೂಲಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಬದುಕು ಅರಿತು ನಡೆಯುವ ಕಡೆ ಮಾರ್ಗದರ್ಶಿಯಾಗಿದೆ ಎಂದರು. ಗದಗ ವೀರೇಶ್ವರ ಪುಣ್ಯಾಶ್ರಮದ ಪ್ರವಚನಕಾರ ಕುಮಾರಶಾಸ್ತ್ರಿ ವೆಂಕಟಾಪುರಮಠ ಅವರು " ಪುಟ್ಟರಾಜ ಕವಿ ಗವಾಯಿಗಳ ಜೀವನ ಚರಿತ್ರೆ
" ಕುರಿತು ಮಾತನಾಡಿ, ಬಾಲ್ಯದ ಕಣ್ಣು ಕಳೆದು ಕಳೆದುಕೊಂಡ ಪುಟ್ಟರಾಜರು ಮುಂದೆ ಈಡೀ ನಾಡಿಗೆ ಬೆಳಕಾಗಿ ನಿಂತರು. ಸಮಾಜ ಸೇವಾ ಕಾರ್ಯದಲ್ಲಿ ನಿರತರಾದರು. ಸಂಗೀತ, ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದರು. ಶಿಕ್ಷಣ ಮತ್ತು ದಾಸೋಹಕ್ಕೆ ಮಹತ್ವ ನೀಡಿದ್ದಾರೆ ಎಂದರು. ಗುತ್ತಿಗೆದಾರ ಅರ್ಜುನ ಹಂಚಿನಮನಿ ಮಾತನಾಡಿ, ಗುರಿ ಇರಬೇಕು ಹಿಂದೆ ಗುರು ಇರಬೇಕು, ಮಠದಲ್ಲಿ ಶಕ್ತಿ ಇದೆ, ಭಕ್ತಿಯಿದ್ದಲೇ ಯಶಸ್ಸು ಇದೆ, ತಾಯಿ ಮಡಿಲು ತಂದೆ ಹೆಗಲು ಸ್ವರ್ಗಕ್ಕಿಂತ ಹೆಚ್ಚು, ತಂದೆ ತಾಯಿಗಿಂತ ದೊಡ್ಡವರಿಲ್ಲ, ಗೌರವದಿಂದ ಬಾಳಬೇಕಿದೆ ಎಂದರು. ವಿರಕ್ತಮಠದ ಬಸವಲಿಂಗ
ದೇವರು ಹಾಗೂ ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿದರು, ವಿರಕ್ತಮಠದ ಸಂಗನಬಸವ ಮಹಾಸ್ವಾಮೀಗಳು ನೇತೃತ್ವ ವಹಿಸಿದ್ದರು, ಗುತ್ತಿಗೆದಾರ ಮಂಜುನಾಥ ಕಾರಡಗಿ, ಪಿಂಜಾರ ಸಮಾಜದ ಅದ್ಯಕ್ಷ ಶರೀಫ ನದಾಫ, ಮೌಲಾಸಾಬ ತಹಶೀಲ್ದಾರ, ಚಂದ್ರು ಕೊತಂಬ್ರಿ, ದೇವಪ್ಪ ಸೊರಟೂರ, ಪತ್ರಕರ್ತ ಸದಾಶಿವ ಹಿರೇಮಠ ಸೇರಿದಂತೆ ಪಂಡಿತ್ ಪಟ್ಟರಾಜ ಕವಿಗವಾಯಿಗಳ ಕಲಾ ಸಂಸ್ಥೆಯ ಸದಸ್ಯರು, ಸಮಿತಿ ಸದಸ್ಯರು ಇದ್ದರು, ಕಾರ್ಯಕ್ರಮದಲ್ಲಿ ಧರ್ಮಕಾರ್ಯದ ಹಾಗೂ ಪ್ರಸಾದ ಸೇವೆಯ ದಾನಿಗಳನ್ನ ಸನ್ಮಾನಿಸಲಾಯಿತು, ಪ್ರೋ. ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು, ಶಸಾಪ ಅದ್ಯಕ್ಷ ಸಿ ಡಿ ಯತ್ನಳ್ಳಿ ಸ್ವಾಗತಿಸಿದರು
- ದಾವಣಗೆರೆ : ನಗರದ ರಾಮ್ ಆ್ಯಂಡ್ ಕೋ ವೃತ್ತದಲ್ಲಿ ಹೋಳಿ ಹಬ್ಬದ ನಿಮಿತ್ತ ಯುವತಿಯರು ಡಿಜೆ ಸದ್ದಿಗೆ ಭರ್ಜರಿ ಡ್ಯಾನ್ಸ್ ಮಾಡಿದರು. ಇವರ ಜತೆ ಮಕ್ಕಳು ಸಹ ಹೆಜ್ಜೆ ಹಾಕಿದರು.1
- Post by Sharanugouda Patil1
- ಬಾಗಲಕೋಟೆ: ಶಿವಾಜಿ ಮೂರ್ತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ಹಿನ್ನೆಲೆ ನಗರದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿರುವ ನಡುವೆಯೇ ವಿವಾದಿತ ಸ್ಥಳದ ಸಮೀಪದಿಂದ ಮತ್ತೆ ಹೊಳಿ ಹಬ್ಬದ ಅಂಗವಾಗಿ ಕಾಮದಹನ ಮೆರವಣಿಗೆ ನಡೆಸಲಾಗಿದೆ. ಯುವಕರು ಕಾಮದಹನ ಆಚರಣೆಯ ಮೆರವಣಿಗೆಯನ್ನು ನಡೆಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದರು. ಪಂಕ ಮಸೀದಿ ಸಮೀಪಕ್ಕೆ ಮೆರವಣಿಗೆ ಬಂದಾಗ ಕೆಲವು ಯುವಕರು ಘೋಷಣೆಗಳನ್ನು ಕೂಗಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಕೆಲಕಾಲ ಪೊಲೀಸರು ಹಾಗೂ ಹಿಂದು ಕಾರ್ಯಕರ್ತರ ನಡುವೆ ವಾಗ್ವಾದವೂ ನಡೆಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಪೊಲೀಸರು ಕಣ್ಣಿಡುತ್ತಿದ್ದಾರೆ. ಘಟನೆ ಬಾಗಲಕೋಟೆ ನಗರದ ಪಂಕ ಮಸೀದಿ ಮುಂಭಾಗದಲ್ಲಿ ನಡೆದಿದೆ.1
- ಗುಳೇದಗುಡ್ಡ: ಹೋಳಿ ಹಬ್ಬದ ಅಂಗವಾಗಿ ಬುಧವಾರ ಗುಳೇದಗುಡ್ಡ ಪಟ್ಟಣದಲ್ಲಿ ಯುವಕರು, ಮಹಿಳೆಯರು, ಮಕ್ಕಳ ಸೇರಿದಂತೆ ಒಬ್ಬರಿಗೊಬ್ಬರು ಪರಸ್ಪರ ಬಣ್ಣ ಎರಚುವ ಮೂಲಕ ಸಂಭ್ರಮದಿಂದ ಬಣ್ಣದೋಕುಳಿ ಆಚರಿಸಿ,ಬಣ್ಣದಲ್ಲಿ ಮಿಂದೆದ್ದು ಕುಣಿದು ಕುಪ್ಪಳಿಸಿದರು.1
- ರಾಜ್ಯದ ವೈದ್ಯಕೀಯ ಕ್ಷೇತ್ರದಲ್ಲಿ ಸರ್ಕಾರ ತೋರಿಸುತ್ತಿರುವ ತಾರತಮ್ಯ ಹಾಗೂ ಹಲವು ದಿನಗಳಿಂದ ಬಾಕಿ ಉಳಿದಿರುವ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ವೈದ್ಯರು ಅನಿರ್ದಿಷ್ಟ ಅವಧಿಯ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಳ್ಳಾರಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಅವರು ತಿಳಿಸಿದಂತೆ, ಮಾರ್ಚ್ 11, 2026 ರಿಂದ ಮಾರ್ಚ್ 15, 2026ರವರೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ವೈದ್ಯರು ಕಪ್ಪುಪಟ್ಟಿ ಧರಿಸಿ ಸೇವೆ ಸಲ್ಲಿಸಲಿದ್ದಾರೆ. ಈ ಅವಧಿಯಲ್ಲಿ ಹೊರರೋಗಿಗಳ ವಿಭಾಗವನ್ನು ಹೊರತುಪಡಿಸಿ ಕೇವಲ ತುರ್ತು ಸೇವೆಯನ್ನು ಮಾತ್ರ ನಿರ್ವಹಿಸುವುದಾಗಿ ಅವರು ಹೇಳಿದ್ದಾರೆ. ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮಾರ್ಚ್ 16, 2026ರಿಂದ ತುರ್ತು ಚಿಕಿತ್ಸೆಯನ್ನೂ ಸ್ಥಗಿತಗೊಳಿಸಿ ಸಂಪೂರ್ಣ ಅನಿರ್ದಿಷ್ಟ ಅವಧಿ ಮುಷ್ಕರಕ್ಕೆ ತೆರಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಾಗಲಕೋಟೆ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಹೇಶ್ ಕೋಣಿ ಅವರು, “ನಮ್ಮ ಸಂಘ ಮತ್ತು ಮೇಲಧಿಕಾರಿಗಳು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿದ್ದೇವೆ. ಜಿಲ್ಲಾಧ್ಯಕ್ಷರು ತಿಳಿಸಿದಂತೆ ಹೊರರೋಗಿಗಳ ಸೇವೆಯನ್ನು ನಿಲ್ಲಿಸಿ ತುರ್ತು ಚಿಕಿತ್ಸೆಯನ್ನು ಮಾತ್ರ ನೀಡುತ್ತೇವೆ. ಬೇಡಿಕೆ ಈಡೇರದಿದ್ದಲ್ಲಿ ತುರ್ತು ಚಿಕಿತ್ಸೆಯನ್ನೂ ತೊರೆಯುತ್ತೇವೆ,” ಎಂದು ತಿಳಿಸಿದ್ದಾರೆ. ವೈದ್ಯರ ಈ ನಿರ್ಧಾರದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಸರ್ಕಾರ ಮತ್ತು ವೈದ್ಯರ ಸಂಘದ ನಡುವೆ ಶೀಘ್ರವೇ ಸಮಾಲೋಚನೆ ನಡೆಯುತ್ತದೆಯೇ ಎಂಬುದು ಕಾದು ನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ. ಇಂತಹ ಇನ್ನಷ್ಟು ಅಪ್ಡೇಟ್‌ಗಳಿಗಾಗಿ ನಮ್ಮ ಚಾನೆಲ್ ಅನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡುವುದು ಮರೆಯಬೇಡಿ. ಧನ್ಯವಾದಗಳು.1
- ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ ಗೋರಬಾಳ ಗ್ರಾಮದಿಂದ ಆಗಮಿಸಿದ ಶ್ರೀಶೈಲ ಮಲ್ಲಯ್ಯನ ಕಂಬಿಗೆ, ಭಕ್ತಾದಿಗಳಿಗೆ ಭಕ್ತಿ ಭಾವದಿಂದ ಸ್ವಾಗತಿಸಿದರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನದಲ್ಲಿ ಮಲ್ಲಯ್ಯನ ಕಂಬಿಗೆ ಗ್ರಾಮಸ್ಥರಿಂದ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರಿಂದ ಮಲ್ಲಯ್ಯನ ಪಾದಯಾತ್ರೆಗಳಿಗೆ, ಹಣ್ಣುಗಳನ್ನು ಪಾನಕಗಳನ್ನು ನೀಡಿ ಭಕ್ತಿ ಮೆರೆದರು. ವರದಿಗಾರರು; ಶರಣಗೌಡ ಕಂದಕೂರ2
- #onlinetv24x71
- ದಾವಣಗೆರೆ : ನಗರದ ರಾಮ್ ಆ್ಯಂಡ್ ಕೋ ಸರ್ಕಲ್ ನಲ್ಲಿ ಹೋಳಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಏರಿಯಾ ಹೋಳಿ ಹಬ್ಬಕ್ಕೆ ಫೇಮೇಸ್ ಆಗಿದ್ದು, ರಾಮ್ ಆ್ಯಂಡ್ ಕೋ ವೃತ್ತದಲ್ಲಿ ಯುವಕ-ಯುವತಿಯರು ಕಿಕ್ಕಿರಿದು ಸೇರಿ ಹೋಳಿ ಆಚರಿಸಿದರು.1
- ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ಭರ್ಜರಿ ಕಲರ್‌ಫುಲ್ ಹೋಳಿ ಸಂಭ್ರಮ ಜೋರಾಗಿ ನಡೆಯಿತು. ಎಸ್.ಆರ್.ಎ ಮೈದಾನದಲ್ಲಿ ಆಯೋಜಿಸಿದ್ದ ರಂಗಿನ ಹೋಳಿ ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿ ಬಣ್ಣದಾಟದಲ್ಲಿ ಮಿಂದೇಳಿದರು. ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಡಿಜೆ ಆಪರೇಟರ್‌ಗಳಾದ ರಷ್ಯಾದ ಮೀನಾ ಹಾಗೂ ಭಾರತದ ಆರಿಯಾ ಡಿಜೆ ಸದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಡಿಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿ ಹೋಳಿ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರು ನೇತೃತ್ವದಲ್ಲಿ ಈ ಹೋಳಿ ಉತ್ಸವವನ್ನು ಆಯೋಜಿಸಲಾಗಿದ್ದು, ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.1