ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ: ವೈಭವದ ಮಹಾರಥೋತ್ಸವ, ಕುತೂಹಲ ಮೂಡಿಸಿದ ದೇವಿಯ ಕಾರ್ಣಿಕೆ. ಕುಷ್ಟಗಿ, ಮೇ 10: ತಾಲೂಕಿನ ಗುಮಗೇರಾ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವು ಭಕ್ತಿಭಾವ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಅದ್ದೂರಿಯಾಗಿ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಅಲಂಕಾರ, ಹೋಮ-ಹವನ, ಮಹಾಮಂಗಳಾರತಿ, ಅಗ್ನಿಕುಂಡ ಹಾಯುವ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ದೇವಸ್ಥಾನದಲ್ಲಿ ನೆರವೇರಿದವು. ಬೆಳಿಗ್ಗೆ ಭಕ್ತರು ದೇವಾಲಯದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು. ಜಾತ್ರೆಯ ಅಂಗವಾಗಿ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಸಂಜೆ ಸುಂದರವಾಗಿ ಅಲಂಕೃತಗೊಂಡ ಮಹಾರಥದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಜನೆ, ಭಾಜಾ-ಭಜಂತ್ರಿ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಸಾವಿರಾರು ಭಕ್ತರು “ಜೈ ದುರ್ಗಾದೇವಿ” ಎಂದು ಜಯಘೋಷ ಕೂಗುತ್ತ ರಥೋತ್ಸವದಲ್ಲಿ ಭಾಗವಹಿಸಿ ಉತ್ತತ್ತಿ ಹಾಗೂ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥಬೀದಿಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಕಂಗೊಳಿಸಿ ಜಾತ್ರೆಯ ವೈಭವವನ್ನು ಇನ್ನಷ್ಟು ಹೆಚ್ಚಿಸಿತು. ಶನಿವಾರ ಬೆಳಗಿನ ಜಾವ ಸುಮಾರು 5.30 ಗಂಟೆಗೆ ಪವಿತ್ರ ಅಗ್ನಿಕುಂಡ ಹಾಯುವ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ಪೂಜಾರಿಗಳು ಧಗಧಗಿಸುವ ಕೆಂಡದ ಮೇಲೆ ನಡೆದು ದೇವಿಯ ಕೃಪೆಗೆ ಪಾತ್ರರಾದರು. ಈ ದೃಶ್ಯವನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಭಕ್ತರು ಸೇರಿದ್ದರು. --------ಕುತೂಹಲ ಕೆರಳಿಸಿದ ದೇವಿಯ ಕಾರ್ಣಿಕೆ-------- ಜಾತ್ರೆಯ ಪ್ರಮುಖ ಆಕರ್ಷಣೆಯಾದ ಕಾರ್ಣಿಕೆಯಲ್ಲಿ ಈ ಬಾರಿ “ಹತ್ತಿ ಗಿಡಕ್ಕೆ ಬಾನದ ಬುತ್ತಿ ಕಟ್ಟಿನಿ, ಉಚ್ಚಿಕೊಂಡು ಉಂಡ್ರಲೋ ಮಕ್ಳ” ಎಂದು ದೈವವಾಣಿ ನುಡಿಯಲಾಯಿತು. ಕಾರ್ಣಿಕೆಯ ಈ ನುಡಿ ಈ ಭಾಗದ ಕೃಷಿ ಹಾಗೂ ಜನಜೀವನದ ಕುರಿತು ಆಶಾದಾಯಕ ಸಂದೇಶ ನೀಡುತ್ತದೆ ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿ ಹತ್ತಿ ಬೆಳೆಯು ಸಮೃದ್ಧವಾಗಿ ಬೆಳೆಯಲಿದ್ದು, ರೈತರ ಬದುಕು ಹಸನಾಗಲಿದೆ ಎಂಬ ನಂಬಿಕೆ ವ್ಯಕ್ತವಾಗಿದೆ. “ಉಚ್ಚಿಕೊಂಡು ಉಂಡ್ರಲೋ” ಎಂಬ ಪದಗಳು ಜನರು ಯಾವುದೇ ಕೊರತೆಯಿಲ್ಲದೆ ಸುಖ-ಸಮೃದ್ಧಿಯಿಂದ ಬದುಕುವ ಸಂಕೇತವೆಂದು ವಿಶ್ಲೇಷಿಸಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದರು. ವರದಿ : ಭೀಮಸೇನರಾವ್ ಕುಲಕರ್ಣಿ ಜಿಎಂ ನ್ಯೂಸ್, ಕುಷ್ಟಗಿ
ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ: ವೈಭವದ ಮಹಾರಥೋತ್ಸವ, ಕುತೂಹಲ ಮೂಡಿಸಿದ ದೇವಿಯ ಕಾರ್ಣಿಕೆ. ಕುಷ್ಟಗಿ, ಮೇ 10: ತಾಲೂಕಿನ ಗುಮಗೇರಾ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವು ಭಕ್ತಿಭಾವ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಅದ್ದೂರಿಯಾಗಿ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಗೆ ವಿಶೇಷ ಪೂಜೆ, ಅಲಂಕಾರ, ಹೋಮ-ಹವನ, ಮಹಾಮಂಗಳಾರತಿ, ಅಗ್ನಿಕುಂಡ ಹಾಯುವ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ದೇವಸ್ಥಾನದಲ್ಲಿ ನೆರವೇರಿದವು. ಬೆಳಿಗ್ಗೆ ಭಕ್ತರು ದೇವಾಲಯದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು.
ಜಾತ್ರೆಯ ಅಂಗವಾಗಿ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಸಂಜೆ ಸುಂದರವಾಗಿ ಅಲಂಕೃತಗೊಂಡ ಮಹಾರಥದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಜನೆ, ಭಾಜಾ-ಭಜಂತ್ರಿ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಸಾವಿರಾರು ಭಕ್ತರು “ಜೈ ದುರ್ಗಾದೇವಿ” ಎಂದು ಜಯಘೋಷ ಕೂಗುತ್ತ ರಥೋತ್ಸವದಲ್ಲಿ ಭಾಗವಹಿಸಿ ಉತ್ತತ್ತಿ ಹಾಗೂ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥಬೀದಿಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಕಂಗೊಳಿಸಿ ಜಾತ್ರೆಯ ವೈಭವವನ್ನು
ಇನ್ನಷ್ಟು ಹೆಚ್ಚಿಸಿತು. ಶನಿವಾರ ಬೆಳಗಿನ ಜಾವ ಸುಮಾರು 5.30 ಗಂಟೆಗೆ ಪವಿತ್ರ ಅಗ್ನಿಕುಂಡ ಹಾಯುವ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ಪೂಜಾರಿಗಳು ಧಗಧಗಿಸುವ ಕೆಂಡದ ಮೇಲೆ ನಡೆದು ದೇವಿಯ ಕೃಪೆಗೆ ಪಾತ್ರರಾದರು. ಈ ದೃಶ್ಯವನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಭಕ್ತರು ಸೇರಿದ್ದರು. --------ಕುತೂಹಲ ಕೆರಳಿಸಿದ ದೇವಿಯ ಕಾರ್ಣಿಕೆ-------- ಜಾತ್ರೆಯ ಪ್ರಮುಖ ಆಕರ್ಷಣೆಯಾದ ಕಾರ್ಣಿಕೆಯಲ್ಲಿ ಈ ಬಾರಿ “ಹತ್ತಿ ಗಿಡಕ್ಕೆ ಬಾನದ ಬುತ್ತಿ ಕಟ್ಟಿನಿ, ಉಚ್ಚಿಕೊಂಡು ಉಂಡ್ರಲೋ ಮಕ್ಳ” ಎಂದು ದೈವವಾಣಿ ನುಡಿಯಲಾಯಿತು. ಕಾರ್ಣಿಕೆಯ ಈ ನುಡಿ ಈ ಭಾಗದ ಕೃಷಿ ಹಾಗೂ
ಜನಜೀವನದ ಕುರಿತು ಆಶಾದಾಯಕ ಸಂದೇಶ ನೀಡುತ್ತದೆ ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿ ಹತ್ತಿ ಬೆಳೆಯು ಸಮೃದ್ಧವಾಗಿ ಬೆಳೆಯಲಿದ್ದು, ರೈತರ ಬದುಕು ಹಸನಾಗಲಿದೆ ಎಂಬ ನಂಬಿಕೆ ವ್ಯಕ್ತವಾಗಿದೆ. “ಉಚ್ಚಿಕೊಂಡು ಉಂಡ್ರಲೋ” ಎಂಬ ಪದಗಳು ಜನರು ಯಾವುದೇ ಕೊರತೆಯಿಲ್ಲದೆ ಸುಖ-ಸಮೃದ್ಧಿಯಿಂದ ಬದುಕುವ ಸಂಕೇತವೆಂದು ವಿಶ್ಲೇಷಿಸಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದರು. ವರದಿ : ಭೀಮಸೇನರಾವ್ ಕುಲಕರ್ಣಿ ಜಿಎಂ ನ್ಯೂಸ್, ಕುಷ್ಟಗಿ
- ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿ: ಅಧಿಕಾರ ಸ್ವೀಕಾರ ಚೈನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸ್ಥಾಪಕ ದಳಪತಿ ವಿಜಯ್ ಅವರು ಇಂದು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರಮಟ್ಟದ ಗಣ್ಯರು ಮತ್ತು ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರು ಸಾಕ್ಷಿಯಾದರು.1
- ಗುಳೇದಗುಡ್ಡದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಮೇ 10ರಂದು ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಆಯೋಜಿಸಿದ್ದಾರೆ. ಆಸಂಗಿ ರಸ್ತೆಯ ಕಾಟವಾ ಫಾರ್ಮಹೌಸ್‌ನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಸ್ಥರು, ನಿವೃತ್ತ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಇದು ಗುರುಗಳಿಗೆ ಗೌರವ ಸಲ್ಲಿಸಿ, ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅದ್ಭುತ ಅವಕಾಶವಾಗಿದೆ.1
- ಗದಗ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ನಗರದ ತೋಂಟದಾರ್ಯ ಇಂಜನೀಯರ್ ಕಾಲೇಜ್ ಬಳಿ ಲಾರಿಯನ್ನು ಬೆಟಗೇರಿ ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಸುಮಾರು 14 ಲಕ್ಷ ಮೌಲ್ಯದ ಅಂದಾಜು 34,720 ಕೆಜಿ ಅನ್ನಭಾಗ್ಯ ಅಕ್ಕಿ, ಹಾಗೂ ಮಧ್ಯಪ್ರದೇಶ ಮೂಲದ MP-09 DN-7251 ನಂಬರಿನ 29 ಲಕ್ಷ ಮೌಲದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಪೊಲೀಸ ಅಧಿಕಾರಿಗಳು ತಿಳಿಸಿದ್ದಾರೆ. ಈ ಲಾರಿಯು ವಿಜಯನಗರ ಜಿಲ್ಲೆ ಹರಪನಹಳ್ಳಿ ಕಡೆಯಿಂದ ಇಳಕಲ್ ಮಾರ್ಗವಾಗಿ ಗುಜರಾತ್'ಗೆ ಹೊರಟಿತ್ತು ಎಂದು ತಿಳಿದಿದೆ, ಈಗ ಸಧ್ಯ ಲಾರಿ ಚಾಲಕನನ್ನು ಪೊಲೀಸ್ ವಶಕ್ಕೆಪಡೆದಿದ್ದಾರೆ. ಅಲ್ಲದೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ವಶಕ್ಕೆ ಪಡೆದ ಅಕ್ಕಿ ಮೂಟೆಗಳನ್ನು KFCSC ಗೋಡೌನ್ ಗೆ ಸಾಗಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಗೋದಾಮಿಗೆ ಎಸ್ಪಿ ರೋಹನ್ ಜಗದೀಶ್, ಗದಗ ಬೆಟಗೇರಿ ಆಹಾರ ನೀರಿಕ್ಷಕ ಜಗದೀಶ್ ಅಮಾತಿ ಅವರು ಭೇಟಿ ಪರಿಶೀಲನೆ ನೆಡೆಸಿದ್ದಾರೆ.1
- ವಿಜಯಪುರ ಜಿಲ್ಲೆಯಲ್ಲಿ ಹೆಣ್ಣು ಮಗು ಜನಿಸಿದ್ದಕ್ಕೆ ಆಸ್ಪತ್ರೆಯಲ್ಲೇ ಪತ್ನಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದಾನೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಜನಸಂಖ್ಯೆ ಕಡಿಮೆ ಇದ್ದರೂ ಇಂತಹ ಕೃತ್ಯ ನಡೆದಿರುವುದು ಆಘಾತ ಮೂಡಿಸಿದೆ.1
- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಕಬ್ಬು ಕೃಷಿಯು ಸ್ಥಳೀಯ ರೈತರ ಪ್ರಮುಖ ಆದಾಯ ಮೂಲವಾಗಿದೆ. ಸದ್ಯ ಕಬ್ಬು ಬೆಳೆಗಾರರು ಇಳುವರಿ ಮತ್ತು ಬೆಲೆಯಂತಹ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ವರ್ಷ ಉತ್ತಮ ಇಳುವರಿ ಹಾಗೂ ಲಾಭದಾಯಕ ಬೆಲೆ ಸಿಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.1
- ತಮಿಳುನಾಡಿನಲ್ಲಿ ನೂತನ ಸಿಎಂ ಆಗಿ ವಿಜಯ್ ಗೆ ರಾಹುಲ್ ಗಾಂಧಿ ಸಾತ್ ನೀಡಿದರು1
- ಬಾಗಲಕೋಟೆ ಮೂಲದ ಭೀಮ ಬಲ ನ್ಯೂಸ್ 24×7 ಕನ್ನಡ ವಾಹಿನಿಯ ಸಂಪಾದಕರಾಗಿ ಹನಮಂತ ಸಂಗೊಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ಸುದ್ದಿಗಳಿಗೆ ಒತ್ತು ನೀಡುವ ಈ ವಾಹಿನಿಗೆ ಇವರು ನೇತೃತ್ವ ವಹಿಸಿದ್ದಾರೆ.1
- ಬಿಜೆವೈಎಂ ಕಾರ್ಯಕರ್ತನಿಗೆ ಸಹ ಸದಸ್ಯನಿಂದ ಗುಂಡೇಟುmm.....m.... ಉತ್ತರಪ್ರದೇಶದ ಲಕ್ಟೋದ ಮೆಹಂದಿಗಂಜ್ ಪ್ರದೇಶದಲ್ಲಿ ಶನಿವಾರ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಕಾರ್ಯಕರ್ತ ಶ್ಯಾಮ್ ಚೇತನ್ ತಿವಾರಿ ಅವರನ್ನು ಸಹ ಸದಸ್ಯನೊಬ್ಬಗುಂಡು ಹಾರಿಸಿ ಗಾಯಗೊಳಿಸಿದ್ದಾನೆ. ಬಂಧಿತ ಆರೋಪಿ ವೈಭವ್ ಬಾ ಕೂಡ ಅದೇ ಪ್ರದೇಶದ ನಿವಾಸಿಯಾಗಿದ್ದು, ಬಿಜೆವೈಎಂ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ.1