ಕುಮಾರಸ್ವಾಮಿ ಬಡಾವಣೆಯಲ್ಲಿ ಶಿವ - ಬಸವಣ್ಣನವರ ಜಯಂತಿ ಆಚರಣೆ ಸಮಾನತೆಯ ಸಂದೇಶ ಸಾರಿದ ಮಾನವತಾವಾದಿ ವಿಶ್ವಗುರು ಬಸವಣ್ಣ: ರುದ್ರಣ್ಣ ಚಂದರಗಿ ಬೆಳಗಾವಿ: 12ನೇ ಶತಮಾನದ ವಿಶ್ವಗುರು ಬಸವಣ್ಣನವರು ಸಮಾನತೆ, ಕಾಯಕ ನಿಷ್ಠೆ, ಮತ್ತು ಸಹೋದರತೆಯನ್ನು ಸಾರಿದ ಮಹಾನ್ ಚೇತನ. ಅವರು ಅನುಭವ ಮಂಟಪದ ಮೂಲಕ ಸರ್ವರಿಗೂ ಸಮಾನ ಅವಕಾಶ, ಅಂತರ್ಜಾತಿ ವಿವಾಹ, ಮಹಿಳಾ ಸಬಲೀಕರಣ, ಮತ್ತು ಕಾಯಕವೇ ಕೈಲಾಸ ಎಂಬ ತತ್ವ ಸಾರಿದವರು ಎಂದು ಬಿಜೆಪಿ ಮುಖಂಡ, ಎಚ್.ಡಿ.ಕುಮಾರಸ್ವಾಮಿ ಬಡಾವಣೆಯ ರಹವಾಸಿ ಸಂಘದ ಅಧ್ಯಕ್ಷರಾದ ರುದ್ರಣ್ಣ ಚಂದರಗಿ ಅವರು ಹೇಳಿದರು. ನಗರದ ಎಚ್.ಡಿ.ಕುಮಾರಸ್ವಾಮಿ ಬಡಾವಣೆಯ ರಹವಾಸಿ ಸಂಘದಿಂದ ಸೋಮಮವಾರ ನಡೆದ ಶಿವ ಮತ್ತು ಬಸವಣ್ಣನವರ ಜಯಂತಿ ಪ್ರಯುಕ್ತ , ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಕಾಯಕವೇ ಕೈಲಾಸ" ಎಂಬ ಮಂತ್ರದಡಿ ಸಮಾನತೆಯ ಸಮಾಜಕ್ಕಾಗಿ ಬದುಕಿದ ಬಸವಣ್ಣನವರ ತತ್ವಗಳು ನಮಗೆ ಸದಾ ದಾರಿದೀಪ. ಎಲ್ಲರೂ ಒಂದು ಕಲ್ಯಾಣ ರಾಜ್ಯ ಕಟ್ಟಿದ ಮಹಾನ್ ಚೇತನ, ಹೀಗಾಗಿ. ಅವರ ಆದರ್ಶಗಳನ್ನು ಪಾಲಿಸಿದರೊಂದಿಗೆ ಸಾಮಾಜಿಕ ನ್ಯಾಯ ಮತ್ತು ಮೌಲ್ಯಾಧಾರಿತ ಜೀವನ ನಡೆಸಬೇಕು ಎಂದು ಹೇಳಿದರು. ಧೈರ್ಯ, ಶೌರ್ಯ ಹಾಗೂ ಧೀಮಂತ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದ ಛತ್ರಪತಿ ಶಿವಾಜಿ ಅವರ ಆಡಳಿತ ಕೌಶಲ್ಯಗಳು ಅವರ ದೂರದೃಷ್ಟಿಯ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಚಿಕ್ಕ ವಯಸಿನಲ್ಲಿಯೇ ಆಸಾಧಾರಣ ನಾಯಕತ್ವ ಗುಣಗಳನ್ನು ಹೊಂದಿದ್ದ ಶಿವಾಜಿಯ ಆಡಳಿತವು ಪ್ರಗತಿಪರ ನೀತಿ ಹಾಗೂ ದಕ್ಷ ಆಡಳಿತದಿಂದ ಗುರುತಿಸಲಟ್ಟಿದೆ. ಜಾತಿ, ಧರ್ಮ, ಬೇಧಗಳನ್ನು ಮೀರಿ ಸಮಗ್ರ ಆಡಳಿತಕ್ಕೆ ಉತ್ತೇಜನ ನೀಡಿದ್ದರು ಛತ್ರಪತಿ ಶಿವಾಜಿ ಮಹಾರಾಜರು. ಅವರ ಆದರ್ಶ ಮೈಗೂಡಿಸಿಕೊಂಡು ಸಮಾಜ ಕಟ್ಟುವ ಕೆಲಸ ಮಾಡಬೇಕು ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಈವೇಳೆ ಮಲ್ಲಿಕಾರ್ಜುನ ರೊಟ್ಟಿ, ಶಿವಪುತ್ರ ಗಂಗಾಪುರ, ವೀರಪಾಕ್ಷಿ ನಿರಲಗಿಮಠ ಮಹಾದೇವ ಹೊಂಗಲ, ಲಕ್ಷ್ಮಣ ಅಕ್ಕನವರ, ಮಹಾದೇವ ಭೀಮನಾ ಯಕ, ಶಿವಪುತ್ರ ಪಟಕಳ, ವಿರುಪಾಕ್ಷಿನಿರಲಗಿಮಠ, ಶೋಭಾ ಹೊಸಮಠ, ಸುಧಾ ರೊಟ್ಟಿ ಮತ್ತು ಮಹಿ ಳಾ ಮಂಡಳ ಸದಸ್ಯರು ಸೇರಿದಂತೆ ಇತರರಿದ್ದರು.

- ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಹೊರವಲಯದಲ್ಲಿ ಇಂದು ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಚರಂಡಿಯಲ್ಲಿ ಬಿದ್ದಿದ್ದ ಅನಾಮಧೇಯ ವ್ಯಕ್ತಿಯೊಬ್ಬನ ಶವ ಇಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆನಚನಮರಡಿ ಕ್ರಾಸ್ ಬಳಿ ಇರುವ RJ ಪೆಟ್ರೋಲ್ ಬಂಕ್ ಹತ್ತಿರದ ಮುಖ್ಯ ರಸ್ತೆಯ ಚರಂಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಚರಂಡಿಯೊಳಗೆ ವ್ಯಕ್ತಿಯೊಬ್ಬ ಮೃತಪಟ್ಟು ಹಲವು ದಿನಗಳೇ ಕಳೆದಿರುವ ಶಂಕೆ ವ್ಯಕ್ತವಾಗಿದೆ. ಇಂದು ಅತಿಯಾದ ದುರ್ವಾಸನೆ ಬರುತ್ತಿದ್ದ ಕಾರಣ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಗೋಕಾಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಸದ್ಯ ಶವದ ಸುತ್ತ ಬಿಗಿ ಕಾವಲು ಹಾಕಲಾಗಿದೆ. ಮೃತ ವ್ಯಕ್ತಿ ಯಾರು? ಎಲ್ಲಿಯವನು? ಎಂಬ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಾವು ಕೊಲೆಯೋ ಅಥವಾ ಆಕಸ್ಮಿಕವಾಗಿ ಚರಂಡಿಗೆ ಬಿದ್ದು ಸಂಭವಿಸಿದ ಅಪಘಾತವೋ ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ1
- ಅಭಿಮಾನಿಗಳ ಮೇಲೆ ಕೆಂಡಾಮಂಡಲವಾದ ದಳಪತಿ ವಿಜಯ್: ಪ್ರಚಾರದ ವೇಳೆ ನಡೆದಿದ್ದೇನು? ಅಭಿಮಾನಿಗಳ ಮೇಲೆ ವಿಜಯ್ ಕೋಪ (VIDEO) ಟಿವಿಕೆ ಮುಖ್ಯಸ್ಥ ವಿಜಯ್ ತಮ್ಮ ಅಭಿಮಾನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ತಮಿಳುನಾಡು ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಅವರ ವಾಹನವನ್ನು ನೂರಾರು ಜನರು ಸುತ್ತುವರಿದರು. ಮುಂದೆ ಸಾಗಲು ಸಾಧ್ಯವಾಗದೆ ಪರಿಸ್ಥಿತಿ ಅಪಾಯಕಾರಿ ಎಂದು ಗ್ರಹಿಸಿದ ಅವರು, ಜನಸಮೂಹ ಪಕ್ಕಕ್ಕೆ ಸರಿಯುವಂತೆ ಕೋಪದಿಂದ ಒತ್ತಾಯಿಸಿದರು. ವಿಜಯ್ ಅವರ ಇತ್ತೀಚಿನ ಕ್ಯಾಲಿಗಳಲ್ಲಿ ಅಭಿಮಾನಿಗಳ ಅತಿಯಾದ ಉತ್ಸಾಹ ಸಮಸ್ಯೆ ಉಂಟುಮಾಡುತ್ತಿರುವುದು ಗೊತ್ತೇ1
- ..... ಪೊಲೀಸ್ ಅಧಿಕಾರಿ ಮೇಲೆ ..... ಅಧಿಕಾರಿಗಳಿಂದ ಕಿರುಕುಳ ವಿಡಿಯೋ ಮಾಡಿ ನ್ಯಾಯಕ್ಕಾಗಿ ಅಂಗಲಾಚಿದ ಇನ್ಸ್‌ಪೆಕ್ಟರ್ ಶ್ರೀನಿವಾಸ್ . . . #suddipoint #enrisamasse #policeofficer1
- Post by Uday Chougale1
- ಚಿಕ್ಕೋಡಿ:ಸ್ಲೋ ಆಗಿ ರೋಡ್ ಹಂಪ್ ದಾಟುತ್ತಿದ್ದ ಓಮಿನಿ ಕಾರಗೆ ಫಾಸ್ಟ್ ಆಗಿ ಬಂದ ಕೆಎಸ್ ಆರ್ ಟಿಸಿ ಬಸ್ ಹಿಂಬದಿಗೆ ಗುದ್ದಿದ ಘಟನೆ ಚಿಕ್ಕೋಡಿ ಪಟ್ಟಣದ ಇಂದಿರಾನಗರ ಬಳಿ ನಡೆದಿದೆ. ಇವತ್ತು ಬೆಳಗಿನಜಾವ ಈ ಘಟನೆ ನಡೆದಿದೆ.ಅಪಘಾತದ ದೃಶ್ಯ ಸ್ಥಳೀಯ ಅಂಗಡಿಯ ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದೆ.ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಓಮಿನಿ ಕಾರ ಮಾಲಿಕರ ಹಾಗೂ ಕೆಎಸ್ಆರ್ಟಿಸಿ ಚಾಲಕ,ನಿರ್ವಾಹಕ ಮಧ್ಯೆ ಮಾತಿನ ಚಕಮಕಿ ನಡೆಯಿತು.ಬಸ್ ನ ಡಿಕ್ಕಿಯಾದ ಪರಿಣಾಮ ಓಮಿನಿ ಕಾರಿನ ಹಿಂಭಾಗ ನುಜ್ಜುಗುಜ್ಜಾಗಿದೆ.ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.4
- ಈಗಲಾದರೂ ನಮ್ಮ ಜನ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ನಮ್ಮ ಜಾತಿಯ ನಾಯಕ ನಮ್ಮ ಸಮಾಜದ ನಾಯಕ ಅನ್ನೋದನ್ನ ಬಿಟ್ಟು ಅಭಿವೃದ್ಧಿ ಕಡೆ ಗಮನಕೊಟ್ಟರೆ ರಾಜ್ಯ ಅಭಿವೃದ್ಧಿ ಆಗಲಿಕ್ಕೆ ಮಾತ್ರ ಸಾಧ್ಯ1
- Post by @april14news1
- Post by @april14news1