logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ವೃದ್ಧ ದಂಪತಿಗೆ ಮಗನಿಂದಲೇ ಹಲ್ಲೆ.ಕೊಲ್ಲಲು ನಡೆಸಿದ್ಧನಾ ಮಸಲತ್ತು..? ಅಳ್ನಾವರ:ತೇವಗೊಂಡಿರುವ ಕಣ್ಣುಗಳು,ಮುಖದಲ್ಲಿ ಆತಂಕದ ಛಾಯೆ,ಪ್ರತಿ ಕ್ಷಣ ಭಯದ ವಾತಾವರಣ.ಮುಪ್ಪಿಗೆ ಆಸರೆಯಾಗಬೇಕಿದ್ದ ಮಗನು ರಾಕ್ಷಸ ಕೃತ್ಯ ಎಸಗಿ ವೃದ್ಧ ದಂಪತಿಗಳ ನೆಮ್ಮದಿ ಕಸಿದುಕೊಂಡಿದ್ದಾನೆ. ಈ ಘೋರ ಘಟನೆಗೆ ಸಾಕ್ಷಿಯಾಗಿದ್ದು ಅಳ್ನಾವರ ತಾಲೂಕಿನ ಬೆನಚಿ ಗ್ರಾಮ.ಪುಂಡಲೀಕ ಹಾಗು ಮಲ್ಲವ್ವ ವುದ್ದ ದಂಪತಿಗೆ ಐನಾತಿ ಮಗನೊಬ್ಬ ನಿದ್ದಾನೆ ಅವನೇ ಪಕ್ಕಿರ ಹೊಸಮನಿ. ಅದೇನು ಪಾಪಾ ಮಾಡಿ ಹೆತ್ತರೋ ಇವನ್ನನ್ನ.ಮಗನಿಂದ ನೆಮ್ಮದಿ ಕಂಡುಕೊಳ್ಳ ಬೇಕಿದ್ದ ವೃದ್ಧ ದಂಪತಿಗಳಿಗೆ ಮವನಿಂದಲೇ ಜೀವ ಭಯ ಶುರುವಾಗಿದೆ.ಪ್ರತಿ ದಿನ ಕುಡಿದು ಬಂದು ವೃದ್ಧ ತಂದೆ ತಾಯಿಯನ್ನ ಮನಸೋ ಇಚ್ಛೆ ಬಡಿಯುತ್ತಾನೆ.ಬಾಯಿಗೆ ಬಂದ ಹಾಗೆ ಬೈಯ್ಯುತ್ತಾನೆ. ಬೈಟ್:ಮಲ್ಲವ್ವ ಹೊಸಮನಿ(ಆರೋಪಿ ಪಕ್ಕಿರನ ತಾಯಿ) ಅದೆಷ್ಟೋ ಬಾರಿ ಹಿರಿಯರನ್ನ ಕರೆದು ಇವನಿಗೆ ಬುದ್ದಿ ಹೇಳುವ ಪ್ರಯತ್ನ ನಡೆದಿದೆ,ಆದ್ರೆ ಅದು ಪ್ರಯೋಜನವಾಗಿಲ್ಲ.ಆದ್ರೆ ಪಕ್ಕಿರ ನ ಕಾಟ ಮಾತ್ರ ದಿನೇ ದಿನೇ ಎಲ್ಲೇ ಮೀರಿದೆ. ಬೈಟ್:ಪುಂಡಲೀಕ ಹೊಸಮನಿ(ಆರೋಪಿ ಪಕ್ಕಿರನ ತಂದೆ) ತಡೆದು ತಡೆದು ಬೇಸತ್ತ ವುದ್ದ ದಂಪತಿಗಳು ಜೀವ ಭಯದಿಂದ ನಲುಗಿ ಹೋಗಿದ್ದಾರೆ.ಅಸರೇಗಾಗಿ ಅಳ್ನಾವರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಇವರಿಗೆ ಕಾನೂನಿಂದ ಆದರೂ ಅಭಯ ಹಸ್ತ ಸಿಗುತ್ತಾ,ಆರಕ್ಷಕರು ಇವರ ಕಣ್ಣೀರು ಒರೆಸಿ ಕಾನೂನಿನ ಮೂಲಕ ನ್ಯಾಯ ಒದಗಿಸುತ್ತಾರಾ ಕಾದು ನೋಡಬೇಕಿದೆ. ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ

on 13 March
user_Vineetmiskin Alnavar
Vineetmiskin Alnavar
Photographer Alnavar, Dharwad•
on 13 March

ವೃದ್ಧ ದಂಪತಿಗೆ ಮಗನಿಂದಲೇ ಹಲ್ಲೆ.ಕೊಲ್ಲಲು ನಡೆಸಿದ್ಧನಾ ಮಸಲತ್ತು..? ಅಳ್ನಾವರ:ತೇವಗೊಂಡಿರುವ ಕಣ್ಣುಗಳು,ಮುಖದಲ್ಲಿ ಆತಂಕದ ಛಾಯೆ,ಪ್ರತಿ ಕ್ಷಣ ಭಯದ ವಾತಾವರಣ.ಮುಪ್ಪಿಗೆ ಆಸರೆಯಾಗಬೇಕಿದ್ದ ಮಗನು ರಾಕ್ಷಸ ಕೃತ್ಯ ಎಸಗಿ ವೃದ್ಧ ದಂಪತಿಗಳ ನೆಮ್ಮದಿ ಕಸಿದುಕೊಂಡಿದ್ದಾನೆ. ಈ ಘೋರ ಘಟನೆಗೆ ಸಾಕ್ಷಿಯಾಗಿದ್ದು ಅಳ್ನಾವರ ತಾಲೂಕಿನ ಬೆನಚಿ ಗ್ರಾಮ.ಪುಂಡಲೀಕ ಹಾಗು ಮಲ್ಲವ್ವ ವುದ್ದ ದಂಪತಿಗೆ ಐನಾತಿ ಮಗನೊಬ್ಬ ನಿದ್ದಾನೆ ಅವನೇ ಪಕ್ಕಿರ ಹೊಸಮನಿ. ಅದೇನು ಪಾಪಾ ಮಾಡಿ ಹೆತ್ತರೋ ಇವನ್ನನ್ನ.ಮಗನಿಂದ ನೆಮ್ಮದಿ ಕಂಡುಕೊಳ್ಳ ಬೇಕಿದ್ದ ವೃದ್ಧ ದಂಪತಿಗಳಿಗೆ ಮವನಿಂದಲೇ ಜೀವ ಭಯ ಶುರುವಾಗಿದೆ.ಪ್ರತಿ ದಿನ ಕುಡಿದು ಬಂದು ವೃದ್ಧ ತಂದೆ ತಾಯಿಯನ್ನ ಮನಸೋ ಇಚ್ಛೆ ಬಡಿಯುತ್ತಾನೆ.ಬಾಯಿಗೆ ಬಂದ ಹಾಗೆ ಬೈಯ್ಯುತ್ತಾನೆ. ಬೈಟ್:ಮಲ್ಲವ್ವ ಹೊಸಮನಿ(ಆರೋಪಿ ಪಕ್ಕಿರನ ತಾಯಿ) ಅದೆಷ್ಟೋ ಬಾರಿ ಹಿರಿಯರನ್ನ ಕರೆದು ಇವನಿಗೆ ಬುದ್ದಿ ಹೇಳುವ ಪ್ರಯತ್ನ ನಡೆದಿದೆ,ಆದ್ರೆ ಅದು ಪ್ರಯೋಜನವಾಗಿಲ್ಲ.ಆದ್ರೆ ಪಕ್ಕಿರ ನ ಕಾಟ ಮಾತ್ರ ದಿನೇ ದಿನೇ ಎಲ್ಲೇ ಮೀರಿದೆ. ಬೈಟ್:ಪುಂಡಲೀಕ ಹೊಸಮನಿ(ಆರೋಪಿ ಪಕ್ಕಿರನ ತಂದೆ) ತಡೆದು ತಡೆದು ಬೇಸತ್ತ ವುದ್ದ ದಂಪತಿಗಳು ಜೀವ ಭಯದಿಂದ ನಲುಗಿ ಹೋಗಿದ್ದಾರೆ.ಅಸರೇಗಾಗಿ ಅಳ್ನಾವರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಇವರಿಗೆ ಕಾನೂನಿಂದ ಆದರೂ ಅಭಯ ಹಸ್ತ ಸಿಗುತ್ತಾ,ಆರಕ್ಷಕರು ಇವರ ಕಣ್ಣೀರು ಒರೆಸಿ ಕಾನೂನಿನ ಮೂಲಕ ನ್ಯಾಯ ಒದಗಿಸುತ್ತಾರಾ ಕಾದು ನೋಡಬೇಕಿದೆ. ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ

  • user_User1449
    User1449
    Ballari, Karnataka
    😡
    on 14 March
  • user_Tayappa Belager
    Tayappa Belager
    ಯಾದಗಿರಿ, ಯಾದಗಿರಿ, ಕರ್ನಾಟಕ
    💣
    on 14 March
More news from ಕರ್ನಾಟಕ and nearby areas
  • ಧಾರವಾಡ: ಎಲ್ಲ ಶಾಸಕರು ಸಚಿವರಾಗಲು ಅರ್ಹತೆ ಪಡೆದಿದ್ದಾರೆ. ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ. ಅದು ಹೊಸಬರಿರಲಿ, ಫಸ್ಟ್ ಟೈಮ್ ಶಾಸಕರಾದವರಿರಲಿ. ಅವರಿಗೆ ಸಚಿವರಾಗಬೇಕು ಎಂಬ ಆಸೆ ಇದೆ. ಡಿಕೆಶಿ ಅವರ ಹೇಳಿಕೆ ಕೂಡ ನಾನು ನೋಡಿದೆ. ಏನೇ ಮಾಡಿದರೂ ಒಂದು ಲಿಮಿಟ್ಸ್ ಹಾಗೂ ಪಾರ್ಟಿ ಚೌಕಟ್ಟಿನಲ್ಲೇ ಎಲ್ಲವನ್ನೂ ಮಾತನಾಡಬೇಕು ಎಂದಿದ್ದಾರೆ. ಪಾರ್ಟಿ ಚೌಕಟ್ಟು ಬಿಟ್ಟು ವಿಷಯಗಳು ಹೊರ ಹೋಗಬಾರದು ಎಂದು ಅವರು ಹೇಳಿದ್ದಾರೆ. ಹೈಕಮಾಂಡ್‌ಗೆ ನಮ್ಮನ್ನೂ ಸಚಿವರನ್ನಾಗಿ ಮಾಡಲಿ ಎಂದು ಶಾಸಕರು ಹೋಗಿದ್ದಾರೆ. ಕೇಳುವ ಅಧಿಕಾರ ಎಲ್ಲರಿಗೂ ಇದೆ. ಅದೇ ಕಾರಣಕ್ಕೆ ಶಾಸಕರು ಹೋಗಿದ್ದಾರೆ ಅದೇನು ತಪ್ಪಲ್ಲ ಎಂದು ತಿಳಿಸಿದರು.
    1
    ಧಾರವಾಡ: ಎಲ್ಲ ಶಾಸಕರು ಸಚಿವರಾಗಲು ಅರ್ಹತೆ ಪಡೆದಿದ್ದಾರೆ. ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ. ಅದು ಹೊಸಬರಿರಲಿ, ಫಸ್ಟ್ ಟೈಮ್ ಶಾಸಕರಾದವರಿರಲಿ. ಅವರಿಗೆ ಸಚಿವರಾಗಬೇಕು ಎಂಬ ಆಸೆ ಇದೆ. ಡಿಕೆಶಿ ಅವರ ಹೇಳಿಕೆ ಕೂಡ ನಾನು ನೋಡಿದೆ. ಏನೇ ಮಾಡಿದರೂ ಒಂದು ಲಿಮಿಟ್ಸ್ ಹಾಗೂ ಪಾರ್ಟಿ ಚೌಕಟ್ಟಿನಲ್ಲೇ ಎಲ್ಲವನ್ನೂ ಮಾತನಾಡಬೇಕು ಎಂದಿದ್ದಾರೆ. ಪಾರ್ಟಿ ಚೌಕಟ್ಟು ಬಿಟ್ಟು ವಿಷಯಗಳು ಹೊರ ಹೋಗಬಾರದು ಎಂದು ಅವರು ಹೇಳಿದ್ದಾರೆ. ಹೈಕಮಾಂಡ್‌ಗೆ ನಮ್ಮನ್ನೂ ಸಚಿವರನ್ನಾಗಿ ಮಾಡಲಿ ಎಂದು ಶಾಸಕರು ಹೋಗಿದ್ದಾರೆ. ಕೇಳುವ ಅಧಿಕಾರ ಎಲ್ಲರಿಗೂ ಇದೆ. ಅದೇ ಕಾರಣಕ್ಕೆ ಶಾಸಕರು ಹೋಗಿದ್ದಾರೆ ಅದೇನು ತಪ್ಪಲ್ಲ  ಎಂದು ತಿಳಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    5 hrs ago
  • Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    1
    Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    user_✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    Auto parts store ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    14 hrs ago
  • ನಡೆಸಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಪ್ರಜಾಪ್ರಭುತ್ವದ ದಲ್ಲಿಪ್ರಶ್ನೆ ಕೇಳಿಕೊಂಡು ಪತ್ರ ಕೊಡಲು ಬಂದಿರುವ ಕೆಆರ್‌ಎಸ್ ಪಕ್ಷದ ಸೈನಿಕರು
    1
    ನಡೆಸಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಪ್ರಜಾಪ್ರಭುತ್ವದ ದಲ್ಲಿಪ್ರಶ್ನೆ ಕೇಳಿಕೊಂಡು ಪತ್ರ ಕೊಡಲು ಬಂದಿರುವ ಕೆಆರ್‌ಎಸ್ ಪಕ್ಷದ ಸೈನಿಕರು
    user_874792
    874792
    Farmer ಹಳಿಯಾಳ, ಉತ್ತರ ಕನ್ನಡ, ಕರ್ನಾಟಕ•
    5 hrs ago
  • 10 ನೇ ವರ್ಷದ ಸಂಭ್ರಮದಲ್ಲಿ ಆನ್ಲೈನ್ ಟಿವಿ ಗೆ ಟಿ. ಬಿ ಶೇಖರ್ ಅವರಿಂದ ಶುಭ ಹಾರೈಕೆಗಳು
    1
    10 ನೇ ವರ್ಷದ ಸಂಭ್ರಮದಲ್ಲಿ ಆನ್ಲೈನ್ ಟಿವಿ ಗೆ ಟಿ. ಬಿ ಶೇಖರ್ ಅವರಿಂದ ಶುಭ ಹಾರೈಕೆಗಳು
    user_Onlinetv24x7
    Onlinetv24x7
    ಹಾಸನ, ಹಾಸನ, ಕರ್ನಾಟಕ•
    14 hrs ago
  • ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು ​ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ​ "ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು ​ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
    1
    ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು 
​ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ 
ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.
​
"ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು 
​
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
    user_Udachappa tigari
    Udachappa tigari
    Photographer ಮುಂಡರಗಿ, ಗದಗ, ಕರ್ನಾಟಕ•
    2 hrs ago
  • "ಸಂಗೊಂದಿ ಡಾಕ್ಟರ್. ಬಿ .ಆರ್. ಅಂಬೇಡ್ಕರ್ ಅವರ 135 ನೇ ಜಯಂತಿಯ ಆಚರಣೆ" ಭೀಮ ಬಲ ನ್ಯೂಸ್ 24×7 ಕನ್ನಡ ಸುದ್ದಿ: ಬಾಗಲಕೋಟೆ : ಏಪ್ರಿಲ್ 14 ಬಾಗಲಕೋಟೆ ಜಿಲ್ಲೆಯ ಸಂಗೊಂದಿ ಗ್ರಾಮದಲ್ಲಿ ನಡೆದ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಜೈ ಭೀಮ ಯುವ ಘರ್ಜನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ.ಆರ್. ಮಾದರ ಅವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆಯ ಸಂಘಟನೆಯ ಎಲ್ಲ ಪದಾಧಿಕಾರಿಗಳು ಭಾಗಿಯಾಗಿದ್ದರು ಹಾಗೂ ಜಿಲ್ಲಾ ಅಧ್ಯಕ್ಷ ಮಂಜುನಾಥ್ .ಆರ್ .ಮಾದರ, ಮಲ್ಲು ಬಡಿಗೇರ, ಮಾತನಾಡಿ ಸಂಗೊಂದಿ ಗ್ರಾಮದಲ್ಲಿ ಬಿ .ಆರ್ .ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರಿಗೆ ಸಂಗೊಂದಿ ಗ್ರಾಮದ ಗುರು ಹಿರಿಯರು ಹಾಗೂ ಮಕ್ಕಳು ಪುಷ್ಪ ನಮನ ಸಲ್ಲಿಸಿದರು.ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟವನ್ನು ಸ್ಮರಿಸಿದರು. ಜಾತಿ ವ್ಯವಸ್ಥೆಯ ವಿರುದ್ಧ ಅವರು ನಡೆದ ಹೋರಾಟ ಮತ್ತು ಸಮಾನತೆಯ ಸಂದೇಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು "ಶಿಕ್ಷಣ ಸಂಘಟನೆ ಮತ್ತು ಹೋರಾಟ"ಎಂಬ ಅವರ ತತ್ವಗಳು ಇಂದಿಗೂ ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು. ದಲಿತ ಮುಖಂಡರು ಮಂಜುನಾಥ .ಆರ್.ಮಾದರ ,ಮಲ್ಲು ಬಡಿಗೇರ, ಆನಂದ ಮೂಗನೂರು, ಹರೀಶ್ ಮಾದರ, ದಾಳಪ್ಪ ಮಾದರ, ದುರ್ಗಪ್ಪ ಕೆರೂರು, ಮಹಾಂತೇಶ್ ಮಾದರ, ಚಂದ್ರು ಮಾದರ,ಯಮನಪ್ಪ ಮಾದರ, ಲಕ್ಷ್ಮಣ್ ಚಲವಾದಿ, ಬೆನ್ನಪ್ಪ ಮಾದರ, ಬೋಜು ಲಮಾಣಿ, ಹಾಗೂ ಯಲ್ಲಪ್ಪ ಮಾದರ ಹಾಗೂ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
    1
    "ಸಂಗೊಂದಿ ಡಾಕ್ಟರ್. ಬಿ .ಆರ್. ಅಂಬೇಡ್ಕರ್ ಅವರ 135 ನೇ ಜಯಂತಿಯ ಆಚರಣೆ"
ಭೀಮ ಬಲ ನ್ಯೂಸ್ 24×7 ಕನ್ನಡ ಸುದ್ದಿ:
ಬಾಗಲಕೋಟೆ : ಏಪ್ರಿಲ್ 14 ಬಾಗಲಕೋಟೆ ಜಿಲ್ಲೆಯ ಸಂಗೊಂದಿ ಗ್ರಾಮದಲ್ಲಿ ನಡೆದ ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಜೈ ಭೀಮ ಯುವ ಘರ್ಜನೆಯ ಜಿಲ್ಲಾ ಅಧ್ಯಕ್ಷ ಮಂಜುನಾಥ.ಆರ್. ಮಾದರ ಅವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆಯ ಸಂಘಟನೆಯ  ಎಲ್ಲ ಪದಾಧಿಕಾರಿಗಳು ಭಾಗಿಯಾಗಿದ್ದರು ಹಾಗೂ ಜಿಲ್ಲಾ ಅಧ್ಯಕ್ಷ ಮಂಜುನಾಥ್ .ಆರ್ .ಮಾದರ, ಮಲ್ಲು ಬಡಿಗೇರ, ಮಾತನಾಡಿ ಸಂಗೊಂದಿ ಗ್ರಾಮದಲ್ಲಿ  ಬಿ .ಆರ್ .ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರಿಗೆ ಸಂಗೊಂದಿ ಗ್ರಾಮದ ಗುರು ಹಿರಿಯರು ಹಾಗೂ ಮಕ್ಕಳು ಪುಷ್ಪ ನಮನ ಸಲ್ಲಿಸಿದರು.ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟವನ್ನು ಸ್ಮರಿಸಿದರು. ಜಾತಿ ವ್ಯವಸ್ಥೆಯ ವಿರುದ್ಧ ಅವರು ನಡೆದ ಹೋರಾಟ ಮತ್ತು ಸಮಾನತೆಯ ಸಂದೇಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು "ಶಿಕ್ಷಣ ಸಂಘಟನೆ  ಮತ್ತು ಹೋರಾಟ"ಎಂಬ ಅವರ ತತ್ವಗಳು ಇಂದಿಗೂ ಯುವಕರಿಗೆ ದಾರಿದೀಪವಾಗಿದೆ ಎಂದು ಹೇಳಿದರು.
ದಲಿತ ಮುಖಂಡರು ಮಂಜುನಾಥ .ಆರ್.ಮಾದರ ,ಮಲ್ಲು ಬಡಿಗೇರ,  ಆನಂದ  ಮೂಗನೂರು, ಹರೀಶ್ ಮಾದರ, ದಾಳಪ್ಪ ಮಾದರ, ದುರ್ಗಪ್ಪ ಕೆರೂರು, ಮಹಾಂತೇಶ್ ಮಾದರ, ಚಂದ್ರು ಮಾದರ,ಯಮನಪ್ಪ ಮಾದರ, ಲಕ್ಷ್ಮಣ್ ಚಲವಾದಿ, ಬೆನ್ನಪ್ಪ ಮಾದರ, ಬೋಜು ಲಮಾಣಿ, ಹಾಗೂ ಯಲ್ಲಪ್ಪ ಮಾದರ  ಹಾಗೂ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
    user_ಭೀಮ ಬಲ ನ್ಯೂಸ್ 24×7 ಕನ್ನಡ
    ಭೀಮ ಬಲ ನ್ಯೂಸ್ 24×7 ಕನ್ನಡ
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    5 hrs ago
  • ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಂಪಿ ರಮಣ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಮಾತನಾಡಿದ ಹಂಪಿ ರಮಣ ಅವರು, ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಲ್ಲಿ ಸದೃಡಗೊಳಿಸುವುದಾಗಿ ತಿಳಿಸಿದ್ದಾರೆ. ಮುಂಬರುವ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.
    1
    ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಂಪಿ ರಮಣ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಹಂಪಿ ರಮಣ ಅವರು, ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಲ್ಲಿ ಸದೃಡಗೊಳಿಸುವುದಾಗಿ ತಿಳಿಸಿದ್ದಾರೆ.
ಮುಂಬರುವ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.
    user_ASN News24Kannada
    ASN News24Kannada
    Newsagent Byadgi, Haveri•
    10 hrs ago
  • ಧಾರವಾಡ: ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಎರಡೂ ಬೈಕ್‌ಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಧಾರವಾಡದ ಮೆಹಬೂಬ್‌ನಗರದಲ್ಲಿ ನಡೆದಿದೆ. ಸಾದಿಕ್ ಶೆರೆವಾಡ ಎಂಬುವವರ ಮನೆ ಎದುರು ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಮೊದಲು ಮನೆ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು ಆನಂತರ ಎರಡೂ ಬೈಕ್‌ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ತಡರಾತ್ರಿ ಏಳೆಂಟು ಜನರ ತಂಡದಿಂದ ಈ ಕೃತ್ಯ ನಡೆದಿದೆ. ಸದ್ಯ ಸ್ಥಳಕ್ಕೆ ಎಸಿಪಿ ಪ್ರಶಾಂತ ಸಿದ್ಧನಗೌಡರ, ಸಿಪಿಐ ಪ್ರಭು ಗಂಗೇನಳ್ಳಿ ಅವರು ಭೇಟಿ ನೀಡಿ ಸಿಸಿಟಿವಿ ದೃಶ್ಯ ಸೇರಿದಂತೆ ಇತರ ಸಾಕ್ಷ್ಯಗಳ ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
    1
    ಧಾರವಾಡ: ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಎರಡೂ ಬೈಕ್‌ಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಧಾರವಾಡದ ಮೆಹಬೂಬ್‌ನಗರದಲ್ಲಿ ನಡೆದಿದೆ.
ಸಾದಿಕ್ ಶೆರೆವಾಡ ಎಂಬುವವರ ಮನೆ ಎದುರು ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಮೊದಲು ಮನೆ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು ಆನಂತರ ಎರಡೂ ಬೈಕ್‌ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ತಡರಾತ್ರಿ ಏಳೆಂಟು ಜನರ ತಂಡದಿಂದ ಈ ಕೃತ್ಯ ನಡೆದಿದೆ. ಸದ್ಯ ಸ್ಥಳಕ್ಕೆ ಎಸಿಪಿ ಪ್ರಶಾಂತ ಸಿದ್ಧನಗೌಡರ, ಸಿಪಿಐ ಪ್ರಭು ಗಂಗೇನಳ್ಳಿ ಅವರು ಭೇಟಿ ನೀಡಿ ಸಿಸಿಟಿವಿ ದೃಶ್ಯ ಸೇರಿದಂತೆ ಇತರ ಸಾಕ್ಷ್ಯಗಳ ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.