ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಆ ಮೂಲಕ ಯುಗಾದಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜೀ ನೇತೃತ್ವದಲ್ಲಿ ದೇಗುಲದಲ್ಲಿ ಬೆಳಗಿನ ಜಾವ 4ರಿಂದ 5ರವರೆಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಏಕವಾರು ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ನೆರವೇರಿಸಿದ ಬಳಿಕ ಮಹಾಮಂಗಳಾರತಿ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬೇಡಗಂಪಣ ಅರ್ಚಕರು ಮೊದಲು ಬ್ರಹ್ಮ ದಾರದ ಪೂಜೆ ನೆರವೇರಿಸಿ ತೇರಿನ ಸುತ್ತ ಪ್ರದಕ್ಷಿಣೆ ಹಾಕಿ ಅರಿಶಿಣ ದಾರವನ್ನು ಕಟ್ಟಲಾಯಿತು. ಸಂಪ್ರದಾಯದಂತೆ ತಳಿಗೆ ಮನೆಯ ಪೂಜೆ ನೆರವೇರಿಸಿ ಲಾಯಿತು. ದೇವರ ಮೂರ್ತಿಯನ್ನು ಬಿಳೆಕುದುರೆ ವಾಹನ ದಲ್ಲಿ ಕೂರಿಸಿ ಛತ್ರಿ, ಚಾಮರ ಹಾಗೂ ಮಂಗಳವಾದ್ಯ ದೊಂದಿಗೆ ದೇಗುಲ ಹಾಗೂ ತೇರಿನ ಸುತ್ತಲು 3 ಬಾರಿ ಪ್ರದಕ್ಷಿಣೆ ಹಾಕಲಾಯಿತು. ಸಂಪ್ರದಾಯದಂತೆ ಮಹಾರಥೋತ್ಸವಕ್ಕೂ ಮುನ್ನಾ ಸಾಲೂರು ಶ್ರೀಗಳ ಪಾದಪೂಜೆಯನ್ನು ಬೇಡಗಂಪಣ ಅರ್ಚಕರು ನೇರವೇರಿಸಿದರು. ಬೇಡಗಂಪಣ ಸಮುದಾಯದ 108 ಮಕ್ಕಳು ಬೆಲ್ಲದಾರತಿಯನ್ನು ಮಹಾರಥೋತ್ಸವಕ್ಕೆ ಸಮರ್ಪಿಸಿದರು. ಮಹಾರಥೋತ್ಸವದ ನಂತರ ಸಾಲೂರು ಬೃಹನ್ಮಠದ ಶ್ರೀಗಳ ಗುರು ಬ್ರಹ್ಮೋತ್ಸವ ಜರುಗಿತು ಗುರು ಬ್ರಹ್ಮೋತ್ಸವದ ನಂತರ ಅನ್ನ ಬ್ರಹ್ಮೋತ್ಸವವು ನಡೆಯಿತು ಎಲ್ಲಾ ಧಾರ್ಮಿಕ ಪೂಜಾ ಕೈಂಕರ್ಯಗಳು ಸಂಪನ್ನಗೊಂಡ ನಂತರ ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಡಾ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರು ಭಕ್ತರಿಗೆ ಬೇವು ಬೆಲ್ಲ ವಿತರಿಸಿದರು. ಪ್ರಾಧಿಕಾರದ ಕಾರ್ಯದರ್ಶಿಗಳಾದ ಎಈ ರಘು ಮತ್ತು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಶಿಧರ್ ಮತ್ತು ಕೊಳ್ಳೇಗಾಲ ಉಪ ವಿಭಾಗದ ಉಪಾಧಿಕ್ಷಕರಾದ ಧರ್ಮೇಂದ್ರ ಹಾಗೂ ಬೇಡಗಂಪಣ ಸಮುದಾಯದ ಅರ್ಚಕರು ಮುಖಂಡರು ಶ್ರೀ ಕ್ಷೇತ್ರದ ಸದ್ಭಕ್ತರ ಸಮಕ್ಷಮದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಆ ಮೂಲಕ ಯುಗಾದಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜೀ ನೇತೃತ್ವದಲ್ಲಿ ದೇಗುಲದಲ್ಲಿ ಬೆಳಗಿನ ಜಾವ 4ರಿಂದ 5ರವರೆಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ
ಏಕವಾರು ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ನೆರವೇರಿಸಿದ ಬಳಿಕ ಮಹಾಮಂಗಳಾರತಿ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬೇಡಗಂಪಣ ಅರ್ಚಕರು ಮೊದಲು ಬ್ರಹ್ಮ ದಾರದ ಪೂಜೆ ನೆರವೇರಿಸಿ ತೇರಿನ ಸುತ್ತ ಪ್ರದಕ್ಷಿಣೆ ಹಾಕಿ ಅರಿಶಿಣ ದಾರವನ್ನು ಕಟ್ಟಲಾಯಿತು. ಸಂಪ್ರದಾಯದಂತೆ ತಳಿಗೆ ಮನೆಯ ಪೂಜೆ ನೆರವೇರಿಸಿ ಲಾಯಿತು. ದೇವರ ಮೂರ್ತಿಯನ್ನು ಬಿಳೆಕುದುರೆ ವಾಹನ ದಲ್ಲಿ ಕೂರಿಸಿ ಛತ್ರಿ, ಚಾಮರ ಹಾಗೂ ಮಂಗಳವಾದ್ಯ
ದೊಂದಿಗೆ ದೇಗುಲ ಹಾಗೂ ತೇರಿನ ಸುತ್ತಲು 3 ಬಾರಿ ಪ್ರದಕ್ಷಿಣೆ ಹಾಕಲಾಯಿತು. ಸಂಪ್ರದಾಯದಂತೆ ಮಹಾರಥೋತ್ಸವಕ್ಕೂ ಮುನ್ನಾ ಸಾಲೂರು ಶ್ರೀಗಳ ಪಾದಪೂಜೆಯನ್ನು ಬೇಡಗಂಪಣ ಅರ್ಚಕರು ನೇರವೇರಿಸಿದರು. ಬೇಡಗಂಪಣ ಸಮುದಾಯದ 108 ಮಕ್ಕಳು ಬೆಲ್ಲದಾರತಿಯನ್ನು ಮಹಾರಥೋತ್ಸವಕ್ಕೆ ಸಮರ್ಪಿಸಿದರು. ಮಹಾರಥೋತ್ಸವದ ನಂತರ ಸಾಲೂರು ಬೃಹನ್ಮಠದ ಶ್ರೀಗಳ ಗುರು ಬ್ರಹ್ಮೋತ್ಸವ ಜರುಗಿತು ಗುರು ಬ್ರಹ್ಮೋತ್ಸವದ ನಂತರ ಅನ್ನ ಬ್ರಹ್ಮೋತ್ಸವವು ನಡೆಯಿತು ಎಲ್ಲಾ ಧಾರ್ಮಿಕ ಪೂಜಾ ಕೈಂಕರ್ಯಗಳು ಸಂಪನ್ನಗೊಂಡ ನಂತರ ಸಾಲೂರು
ಬೃಹನ್ಮಠದ ಪೀಠಾಧಿಪತಿಗಳಾದ ಡಾ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರು ಭಕ್ತರಿಗೆ ಬೇವು ಬೆಲ್ಲ ವಿತರಿಸಿದರು. ಪ್ರಾಧಿಕಾರದ ಕಾರ್ಯದರ್ಶಿಗಳಾದ ಎಈ ರಘು ಮತ್ತು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಶಿಧರ್ ಮತ್ತು ಕೊಳ್ಳೇಗಾಲ ಉಪ ವಿಭಾಗದ ಉಪಾಧಿಕ್ಷಕರಾದ ಧರ್ಮೇಂದ್ರ ಹಾಗೂ ಬೇಡಗಂಪಣ ಸಮುದಾಯದ ಅರ್ಚಕರು ಮುಖಂಡರು ಶ್ರೀ ಕ್ಷೇತ್ರದ ಸದ್ಭಕ್ತರ ಸಮಕ್ಷಮದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
- ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ: ಮಾಜಿ ಶಾಸಕರಿಗೆ ಕೆ. ಕೃಷ್ಣಮೂರ್ತಿ ಸವಾಲು ಮಾಗಡಿ: ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಜಿ ಶಾಸಕರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಅಭಿವೃದ್ಧಿ ವಿಚಾರವಾಗಿ ಅವರು ಎಲ್ಲಿಗಾದರೂ ಬರಲಿ, ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಅವರು ಸವಾಲು ಹಾಕಿದ್ದಾರೆ. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆ.ಕೃಷ್ಣಮೂರ್ತಿ ಅವರ ಆರೋಪಗಳಿಗೆ ನಾನು ಉತ್ತರ ನೀಡುವ ಅಗತ್ಯವಿಲ್ಲ ಅವರು ಯಾರು ಗೊತ್ತಿಲ್ಲ ಎಂದಿದ್ದಾರೆ ಅವರನ್ನು ನಾನು ಗೆಲ್ಲಿಸಬೇಕಾದ ವೇಳೆ ನಾನು ಯಾರು ಎಂದು ಗೊತ್ತಿರಲಿಲ್ಲವೇ ಮಜಿ ಶಾಸಕರ ಆರೋಪಗಳಿಗೆ ನಮ್ಮ ಪಕ್ಷದ ಮುಖಂಡರು ಉತ್ತರ ನೀಡಲು ಸಿದ್ದರಿದ್ದೇವೆ, ಮಾಜಿ ಶಾಸಕರು ಕಾಂಗ್ರೆಸ್ ಮುಖಂಡರ ಮೇಲೆ ಅನಗತ್ಯವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ನಾಯಕರಾದ ಬಾಲಣ್ಣನವರ ವ್ಯಕ್ತಿತ್ವದ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಆರೋಪಗಳಿಗೆ ದಾಖಲೆ ನೀಡಲಿ: ಮಾಜಿ ಶಾಸಕರು ಮಾಡುತ್ತಿರುವ 600 ಕೋಟಿ ಹಗರಣ ಅಥವಾ ಗೌರಮ್ಮನಕೆರೆಯ ಮಣ್ಣು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಮಣ್ಣು ಮಾರಾಟ ಮಾಡಿ ಜೀವನ ನಡೆಸುವ ಅಗತ್ಯ ಶಾಸಕರಿಗಿಲ್ಲ ಇಂಥಹ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಅವರ ಬಳಿ ದಾಖಲೆಗಳಿದ್ದರೆ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು. ಚರ್ಚೆಗೆ ದಿನಾಂಕ ನಿಗದಿಪಡಿಸಿ: "ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾವಂತೂ ಸಿದ್ಧ. ಮಾಜಿ ಶಾಸಕರೇ ಅಥವಾ ಮಾಧ್ಯಮದವರೇ ಒಂದು ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಲಿ. ನಾವು ನಮ್ಮ ನಾಯಕರೊಂದಿಗೆ ಬಂದು ಪ್ರತಿಯೊಂದಕ್ಕೂ ದಾಖಲೆ ಸಮೇತ ಉತ್ತರ ನೀಡುತ್ತೇವೆ ಎಂದು ಕೆ. ಕೃಷ್ಣಮೂರ್ತಿ ಹೇಳಿದರು. ಜನರೇ ತೀರ್ಪು ನೀಡುತ್ತಾರೆ: ನಾವು ಮಾಡಿದ ಕೆಲಸಗಳನ್ನು ನಾವೇ ಹೇಳಿಕೊಳ್ಳುವ ಅಗತ್ಯವಿಲ್ಲ, ಜನರು ಅದನ್ನು ಗಮನಿಸುತ್ತಿದ್ದಾರೆ. ಮಾಜಿ ಶಾಸಕರು ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ಮುಖಂಡರಾದ ಅಗ್ರೋ ಪುರುಷೋತ್ತಮ್, ಶಿವಕುಮಾರು, ಕಲ್ಕೆರೆ ಶಿವಣ್ಣ, ವೆಂಕಟೇಶ್ ಇತರರು ಇದ್ದರು. 1
- Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User1
- ಹೈದರಾಬಾದ್‌ನ ಹೋಟೆಲ್ ಒಂದರಲ್ಲಿ ಆಹಾರಕ್ಕಾಗಿ ಬಂದ ಭಿಕ್ಷುಕನ ಮೇಲೆ ಸಿಬ್ಬಂದಿ ಬಿಸಿನೀರು ಸುರಿದಿರುವ ಆರೋಪ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಇಬ್ರಾಹಿಂ ಖಾನ್ ವಿಡಿಯೋ ಮಾಡಿ ಬಹಿರಂಗಪಡಿಸಿದ ಬಳಿಕ ಅದು ವೈರಲ್ ಆಗಿದೆ. ಗ್ರಾಹಕರಿಗೆ ತೊಂದರೆ ಉಂಟುಮಾಡುತ್ತಿದ್ದಾನೆ ಎಂಬ ಕಾರಣ ಹೇಳಿ ಸಿಬ್ಬಂದಿ ಈ ರೀತಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕೃತ್ಯವನ್ನು ಸಾಮಾಜಿಕ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದು, ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.1
- ಸೂರ್ಯನ ಬಿಸಿಲಿನ ತಾಪಕ್ಕೆ ನೀರನ್ನು ಅರಸಿ ಬಂದ ನಾಯಿಗೆ. ನೀರುಣಿಸಿ ಮಾನವೀಯತೆ ಮೆರೆದ ಮಾನವ ನೀರನ್ನು ಅರಸಿ ಬಂದ ನಾಯಿಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬರು ನಾಯಿ ಯ ಬಾಯಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ ಸಾರ್ವಜನಿಕರು ತಮ್ಮ ತಮ್ಮ ಮನೆಯ ಮುಂದೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವುದಕ್ಕೆ ನೀರಿ ನ ವ್ಯವಸ್ಥೆ ಮಾಡಬೇಕಾಗಿರುವುದು ಮಾನವ ಧರ್ಮ ದಯವಿಟ್ಟು ಪ್ರಾಣಿ ಪಕ್ಷಿಗಳಿಗೆ ನಿಮ್ಮ ಮನೆ ಹಾಗೂ ಊರಿನಲ್ಲಿ ಕುಡಿಯುವುದಕ್ಕೆ ವ್ಯವಸ್ಥೆ ಮಾಡಿ .1
- ದೊಡ್ಡಬಳ್ಳಾಪುರ ಬಾಡಿಗೆ ಮನೆಯಲ್ಲಿ ವಾಸವಿರುವ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಕಳ್ಳತನ ಗೀತಂ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಘಟನೆ ಒಂದೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೂರು ಲ್ಯಾಪ್ ಟಾಪ್ ಗಳ ಕಳ್ಳತನ ಲ್ಯಾಪ್‌ಟಾಪ್ ಕಳ್ಳತನ ಮಾಡಿಕೊಂಡು ಹೊರ ಹೋಗುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆ ಲ್ಯಾಪ್ ಟಾಪ್ ಕಳೆದಿರುವುದರಿಂದ ವೃತ್ತಿಪರ ಪ್ರಾಜೆಕ್ಟ್ ತಯಾರಿಸಲು ಮುಂದಾಗಿದ್ದ ವಿದ್ಯಾರ್ಥಿಗಳಿಗೆ ಸಂಕಷ್ಟ ಆಂದ್ರಮೂಲದ ಎಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಸಂಕಷ್ಟ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿ2
- Tod ಶ್ರೀನಿವಾಸಪುರ ತಾಲ್ಲೂಕಿನ ವಳಗೇರನಹಳ್ಳಿ ಕ್ರಾಸ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಅಪಘಾತವಾಗಿ ರಸ್ತೆ ಬಳಿ ಉರುಳಿ ಬಿದ್ದಿದ್ದು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಜೆಡಿಎಸ್ ಮುಖಂಡರಾದ ಸಿ.ಎಂ.ಆರ್ ಶ್ರೀನಾಥ್ ಅಣ್ಣನವರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಧೈರ್ಯ ತುಂಬಿ ನಂತರ ಅಲ್ಲಿಂದಲೇ ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಿ ನಂತರ ಕೆ.ಎಸ್.ಆರ್.ಟಿ.ಸಿ ಡಿ.ಸಿ ರವರಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ವಿವರಿಸಿ ತಕ್ಷಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದರು... true news kolar1
- ಮಾಗಡಿ ; ವಿಶ್ವ ವಿಖ್ಯಾತ ಬೆಂಗಳೂರು ನಿರ್ಮಾತೃ ಧರ್ಮಪ್ರಭು ಕೆಂಪೇಗೌಡರಿಗೆ ನಿಲ್ಲಲು ಮಾಗಡಿಯಲ್ಲಿ ನೆಲೆ ಇಲ್ಲದಂತಾಗಿದೆ. ಧರ್ಮದ ಹಾದಿಯಲ್ಲಿ ನಡೆದ ಕೆಂಪೇಗೌಡರಿಗೆ ಮಾಗಡಿಯಲ್ಲಿ ನೆಲೆ ಇಲ್ಲ ಎಂದರೆ ನಾಡಿಗೆ ಅವಮಾನ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಟಿ.ಎನ್.ಶ್ರೀನಿವಾಸ್ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಎಚ್.ಎಂ.ಕೃಷ್ಣಮೂರ್ತಿಯೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಯಿತು. ಕೆಂಪೇಗೌಡರ ಪ್ರತಿಮೆಯನ್ನು ಗೌರವಯುತವಾಗಿ ಸ್ಥಳಾಂತರಿಸಲು ಕೋರ್ಟ್ ಆದೇಶ ನೀಡಿದ್ದರಿಂದ ನಾವೂ ಕೂಡ ಕೋರ್ಟ್ ಆದೇಶಕ್ಕೆ ತಲೆಭಾಗಿ ಗೌರವ ಕೊಡುತ್ತೇವೆ. ಆದರೆ ಪುರಸಭೆ ಅಧಿಕಾರಿಗಳು ರಾತ್ರೊರಾತ್ರಿ ಪ್ರತಿಮೆಯ ಬಳಿಯ ಮೆಟ್ಟಿಲ್ಲನ್ನು ತೆರವುಗೊಳಿಸುವ ಅನಿವಾರ್ಯತೆ ಏನಿತ್ತು. ಅದರಲ್ಲೂ ಅಮಾವಾಸ್ಯೆ ದಿನವೇ ಮೆಟ್ಟಿಲು ಕಿತ್ತು ಹಾಕಿದ್ದು ಒಂದೆಡೆಯಾದರೆ ಅಂದಿನಿಂದ ಕೆಂಪೇಗೌಡ ಪ್ರತಿಮೆ ಗೌರವಕ್ಕಾದರೂ ಹೂವಿನ ಹಾರ ಹಾಕದೆ ಅವಮಾನಿಸಲಾಗಿದೆ. ಜತೆಗೆ ದಿಕ್ಕುದೆಸೆ ಇಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರತಿಮೆ ಸ್ಥಳಾಂತರಕ್ಕೆ ಯೋಜನೆ ರೂಪಿಸಿ ಕಾಮಗಾರಿಯೂ ನಡೆದಿದೆ. ಈಗ ಇದೊಂದು ವಿವಾಧಾತ್ಮಕ ಸ್ಥಳಾವಾಗಿದೆ. ಕೆಂಪೇಗೌಡರು ಸತ್ಯದ ಹಾದಿಯಲ್ಲಿ ನಡೆದಿದ್ದರು. ಅವರನ್ನು ಅವಮಾನಿಸುವವರು ಎಂದಿಗೂ ಉದ್ಧಾರವಾಗುವುದಿಲ್ಲ. ಅದರ ಫಲ ಅವರೇ ಉಣ್ಣಬೇಕಿದೆ. ಕಾದು ನೋಡುತ್ತೇನೆ ಎಂದು ಹೆಸರೇಳದೆ ಶಾಸಕರ ವಿರುದ್ಧ ಹರಿಹಾಯ್ದರು. ಈಗಾಗಲೇ ಅಡಿಗೆ 45 ರೂ ನಂತೆ ನಂತೆ 60/70 ವಿಸ್ತೀರ್ಣದ ಸ್ಥಳವನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ಪುರಸಭೆ ನೀಡಿದೆ. ನಮಗೂ ಕೆಂಪೇಗೌಡರ ಹೆಸರಿನಲ್ಲಿ 1 ಎಕರೆ ಜಮೀನು ಸರ್ಕಾರ ಮಂಜೂರು ಮಾಡಿಕೊಡಲಿ ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ಜಮಾ ಮಾಡುತ್ತೇನೆ. ಇಲ್ಲೊಂದು ಸುಂದರವಾದ ಪಾರ್ಕ್ ನಿರ್ಮಿಸಿ ಜನರ ಆರೋಗ್ಯಕ್ಕೆ ಮುಂದಾಗುವುದಾಗಿ ಮನವಿ ಮಾಡಿದ ಅವರು. ಈಗಿನ ಕೆಂಪೇಗೌಡರ ಪ್ರತಿಮೆಯ ಮೆಟ್ಟಿಲು ತೆರವುಗೊಳಿಸಿರುವುದರಿಂದ ಪ್ರತಿಮೆಗೆ ಹಾರ ಹಾಕಲಾಗದ ಪರಿಸ್ಥಿತಿ ತಂದೊಡ್ಡಿರುವ ಪುರಸಭೆ ಅಧಿಕಾರಿಗಳು ನಾಡಪ್ರಭು ಕೆಂಪೇಗೌಡ ಅವರಿಗೆ ಅಗೌರವ ತೋರಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು ನನ್ನ ಸ್ವಂತ ದುಡಿಮೆಯ ಹಣದಲ್ಲಿ ಸುಂದರವಾದ ಕಂಚಿನ ಕೆಂಪೇಗೌಡರ ಪ್ರತಿಮೆಯನ್ನು ಪುರಸಭಾ ಆವರಣದಲ್ಲಿ ಕಳೆದ 22 ವರ್ಷಗಳ ಹಿಂದೆ ಅನೇಕ ಮಠಮಾನ್ಯಗಳ ಶ್ರೀಗಳರು, ಸಚಿವರು, ಶಾಸಕರು, ಗಣ್ಯರು, ರೈತರು, ಅಭಿಮಾನಿಗಳ ನೇತೃತ್ವದಲ್ಲಿ ಪ್ರತಿಮೆಯನ್ನು ಪ್ರತಿμÁ್ಠಪಿಸಿ, ಆದ್ದೂರಿಯಾಗಿ ಕಾರ್ಯಕ್ರಮ ರೂಪಿಸುವ ಮೂಲಕ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗಿತ್ತು. ಅನ್ನಸಂತರ್ಪಣೆ ಸಹ ಅವಿರತವಾಗಿ ನಡೆದಿತ್ತು. ಈ ಮೂಲಕ ಕೆಂಪೇಗೌಡರ ಇತಿಹಾಸವನ್ನು ಮರುಕಳಿಸುವಂತ ಕೆಲಸವನ್ನು ಮಾಡಿ ತೋರಿಸಿದ್ದೆ. ಹೀಗಾಗಿ ಆವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಆದರೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಸರ್ಕಾರ ಇದೆ ಎಂದು ದೆಹಲಿಯಿಂದ ಕಲ್ಕತ್ತಗೆ ಎಂಬಂತೆ ತೊಗಲಕ್ ದರ್ಬಾರ್ ನಡೆಸುತ್ತಿದ್ದಾರೆ. ಅವರ ತಾಳಕ್ಕೆ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಹಿಂದೆ ಶಾಸಕರ ತಾಳಕ್ಕೆ ಕುಣಿದ ಕೆಲವು ಅಧಿಕಾರಿಗಳು ನೇಣಿನ ಕುಣಿಕೆಗೆ ತಲೆಯೊಡ್ಡಬೇಕಾಯಿತು. ಈಗ ಅವರ ಕುಟುಂಬಗಳು ಶೋಚನೀಯಸ್ಥಿತಿ ತಲುಪಿವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅವರ ನಡೆ ವಿರುದ್ಧ ಆಕ್ರೋಶ ಹೊರಹಾಕಿದರು. ಭಾರಿ ವಿವಾಧಕ್ಕೆ ಒಳಗಾದ ಧರ್ಮಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ; 2008 ರಲ್ಲಿ ಪುರಸಭೆ ಆಡಳಿತ ಮಂಡಲಿ ರೆಜ್ಯುಲೇಷನ್ ಮಾಡಿ ಪ್ರತಿಮೆ ಸ್ಥಾಪನೆಗೆ 50/50 ಸ್ಥಳ ಮಂಜೂರು ಮಾಡಿತ್ತು. ಈಗ ಕೆಂಪೇಗೌಡರ ಪ್ರತಿಮೆ ಸ್ಥಳವನ್ನು ಸೇರಿಸಿಕೊಂಡಂತೆ ಸುಮಾರು 2 ಎಕರೆ ಪ್ರದೇಶದಲ್ಲಿ100 ಬೆಡ್ಡಿನ ಹೈಟೆಕ್ ಆಸ್ಪತ್ರೆ ನಿರ್ಮಿಸಲು ಶಾಸಕರು ಮುಂದಾಗಿದ್ದಾರೆ. ಕೆಂಪೇಗೌಡರ ಪ್ರತಿಮೆಯನ್ನು ಉಳಿಸಿಕೊಂಡು ಆಸ್ಪತ್ರೆ ನಿರ್ಮಿಸಬಹುದಿತ್ತು. ಕೆಂಪೇಗೌಡರ ಕೋಟೆ ಕಂದಕ ಮುಚ್ಚದಂತೆ ನಾನು ಕೋರ್ಟ್ ಮೊರೆ ಹೋಗಿದ್ದರಿಂದ ನನ್ನ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿರುವ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಕ್ಷೇತ್ರದಲ್ಲಿ ಲೂಟಿಗೆ ಇಳಿದಿದ್ದಾರೆ. ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ಅಧಿಕಾರಿಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಎಚ್.ಎಂ.ಕೃಷ್ಣಮೂರ್ತಿ ಆರೋಪಿಸಿದರು. ತಾಪಂ ಮಾಜಿ ಸದಸ್ಯ ಸಿ.ಜಯರಾಮ್ ಮಾತನಾಡಿ, ಧರ್ಮಪ್ರಭು ಕೆಂಪೆಗೌಡರು ಸರ್ವಧರ್ಮಪ್ರಿಯರು, ಎಲ್ಲ ವರ್ಗದ ಜನರಿಗೂ ಒಂದೊಂದು ಪೇಟೆಯನ್ನು ಕಟ್ಟಿಕೊಟ್ಟ ಮಹಾನೀಯರ ಪ್ರತಿಮೆಗೆ ದಕ್ಕೆಯಾಗುತ್ತಿದೆ. ಶಾಸಕರ ಸರ್ವಾಧಿಕಾರ ಇಲ್ಲಿ ನಡೆಯುತ್ತಿದೆ. ನಾವೂ ಅವರ ಪ್ರತಿಮೆಗೆ ಅವಮಾನಿಸಿದರೆ ಅವರ ಹೃದಯಕ್ಕೆ ಅವಮಾನಿಸಿದಂತೆ. ಮುಂದಿನ ದಿನಗಳಲ್ಲಿ ಅದರ ಪರಿಣಾಮವನ್ನು ಅವರೇ ಉಣ್ಣಬೇಕಿದೆ ಎಂದು ಕಿಡಿಕಾರಿದರು. ನಿಸರ್ಗ ಪರಚರಣ ಟ್ರಸ್ಟ್ ಅಧ್ಯಕ್ಷ ಎಚ್.ಎನ್,ಶಿವಲಿಂಗಯ್ಯ ಮಾತನಾಡಿ, ಗೌರವಯುತವಾಗಿ ಕೆಂಪೇಗೌಡರ ಪ್ರತಿಮೆಯನ್ನು ಸ್ಥಳಾಂತರಿಸಲು ಕೋರ್ಟ್ ಆದೇಶ ನೀಡಿದೆ. ಇಲ್ಲಿರುವ ಮರಗಿಡಗಳನ್ನು ತೆರವುಗೊಳಿಸಬಾರದು. ತೆರವುಗೊಳಿಸಬೇಕಾದರೆ ಕಾನೂನಾತ್ಮಕವಾಗಿ ತೆರವುಗೊಳಿಸಬೇಕೆಂದು ತಾಕೀತು ಮಾಡಿದೆ. ಆದರೆ ಈಗಾಗಲೆ ಪುರಸಭೆ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳವನ್ನು ಆರೋಗ್ಯ ಇಲಾಖೆಗೆ ವರ್ಗಾಯಿಸಿದೆ. ಆರೋಗ್ಯ ಇಲಾಖೆಗೆ ವರ್ಗಾಯಿಸಿದ ಮೇಲೆ ಪ್ರತಿಮೆಯ ಮೆಟ್ಟಿಲು ಕಿತ್ತು ಹಾಕಲು ಇವರಿಗೇನು ಹಕ್ಕಿದೆ. ಇದೊಂದು ರಾಹಕೀಯ ಶಡ್ಯಂತರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಕ್ಸ್ ; ಸರ್ಕಾರದ ಮತ್ತು ಕೋರ್ಟ್ ಆದೇಶವನ್ನು ಪಾಲಿಸುವುದು ನಮ್ಮ ಕೆಲಸ. ನಾವು ಯಾರ ಒತ್ತಡಕ್ಕೂ ಮಣಿದಿಲ್ಲ, ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಗೆ ಜಮೀನು ವರ್ಗಾಯಿಸಲು ಅದೇಶ ನೀಡಿದ್ದರಿಂದ ವರ್ಗಾಯಿಸಿದ್ದೇವೆ. ಪ್ರತಿಮೆ ತೆರವುಗೊಳಿಸಲು ಕೋರ್ಟ್ ಆದೇಶವಿರುವುದರಿಂದ ಸಂಬಂಧಪಟ್ಟರು ಸ್ಥಳಾಂತರಿಸಲಿದ್ದಾರೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನೀವೇನಿದ್ದರೂ ಕೇಳುವುದಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು. ನಮ್ಮದೇನು ಅಭ್ಯಂತರವಿಲ್ಲ. ನಾವು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೆವೆ. ಟಿ.ಎನ್.ಶ್ರೀನಿವಾಸ್ ಮುಖ್ಯಾಧಿಕಾರಿ ಪುರಸಭೆ ಮಾಗಡಿ. ಜೆಡಿಎಸ್ ಮುಖಂಡ ತಮ್ಮಣ್ಣಗೌಡ, ಮಾಡಬಾಳ್ ಕೆಂಪೇಗೌಡ, ಸಾಗರ್, ಎನ್‍ಇಎಸ್ ಆನಂದ್, ದೊಡ್ಡಿ ಗೋಪಿ, ನಾಗರಾಜು, ಶಿವಶಂಕರ್, ಮೂರ್ತಿ, ಮೋಹನ್, ರಾಜೇಶ್, ಶಿವಣ್ಣ, ಕುಮಾರ್, ಆರ್‍ಐ ರವಿ, ಎಂಜಿನಿಯರ್ ಪ್ರಶಾಂತ್ ಶೆಟ್ಟಿ ಇತರರು ಇದ್ದರು.1
- ಸುಳ್ಳು ಹೇಳುತ್ತಿದ್ದಾರೆ ನನ್ನ ಬಗ್ಗೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಂದು ಸತ್ಯವನ್ನ ಹೇಳಿಕೊಂಡ ಎ ಪಿ ರಾಘವ್ ಚಡ್ಡಾ1
- ದೇವನಹಳ್ಳಿ ಮದ್ಯ ಪ್ರಾಚ್ಯ ದೇಶಗಳಲ್ಲಿ ಯುದ್ದ ಮುಂದುವರೆದ ಹಿನ್ನೆಲೆ, ಡೊಮೆಸ್ಟಿಕ್ ಸಿಲಿಂಡರ್ ಗ್ಯಾಸ್ ಗೂ ಜನ ಪರದಾಟ, ದೇವನಹಳ್ಳಿ ಪಟ್ಟಣದ ಹೆಚ್.ಪಿ ಗ್ಯಾಸ್ ನಲ್ಲಿ ಅಡುಗೆ ಸಿಲಿಂಡರ್ ಗೆ ಮುಗಿಬಿದ್ದ ಜನ, ಹೆಚ್.ಪಿ ಗ್ಯಾಸ್ ಬುಕ್ ಮಾಡಿ 20 ದಿನಗಳು ಕಳೆದು ಇದೀಗ ಕೆಲವೇ ಕೆಲವು ಸಿಲಿಂಡರ್ ಗಳು ಮಾತ್ರ ಹಂಚಿಕೆ ಕೆಲವೇ ಕೆಲವು ಸಿಲಿಂಡರ್ ಗಳು ಪಡೆಯಲು ಹೆಚ್ .ಪಿ ಗ್ಯಾಸ್ ಕಚೇರಿ ಮುಂದೆ ಕ್ಯೂನಿಂತ ಜನ, ಹೆಚ್. ಪಿ ಗ್ಯಾಸ್ ವಿರುದ್ದ ಜನರ ಆಕ್ರೋಶ, ಕಳೆದ 20 ದಿನಗಳ ಹಿಂದೆ ಬುಕ್ ಮಾಡಿದ್ರು, ಒಟಿಪಿ ಪಡೆದು ಸಿಲಿಂಡರ್ ಕೊಡ್ತಿಲ್ಲ ಅಂತಾ ಆಕ್ರೋಶ, ನಾ ಮುಂದು ತಾ ಮುಂದು ಅಂತಾ ಅಡುಗೆ ಸಿಲಿಂಡರ್ ಗಳು ಪಡೆಯಲು ನೂಕು ನೂಗ್ಗಲು, ಟಾಟಾ ಏಸ್ ಗಾಡಿಯಲ್ಲಿ 50 ಸಿಲಿಂಡರ್ ಗಳು ತುಂಬಿಕೊಂಡುಬಂದಿರೋ ಹೆಚ್.ಪಿ ಸಿಬ್ಬಂದಿ, ನಾನು ಬುಕ್ ಮಾಡಿದ್ದೇನೆ ನಮಗೆ ಕೊಡಿ ನಮಗೆ ಕೊಡಿ ಅಂತಾ ದುಂಬಾಲು ಬಿದ್ದ ಜನ, 20 ದಿನಗಳಿಂದ ಅಡುಗೆ ಸಿಲಿಂಡರ್ ಪೂರೈಕೆ ಹಾಗ್ತಿಲ್ಲ ಅಂತಾ ಗ್ಯಾಸ್ ಕಚೇರಿ ಬಳಿ ಮಹಿಳೆಯರ ಆಕ್ರೋಶ, ಸಚಿವ ಕೆಹೆಚ್ ಮುನಿಯಪ್ಪ ಸ್ವ ಕ್ಷೇತ್ರದಲ್ಲಿ ಅಡುಗೆ ಸಿಲಿಂಡರ್ ಗಳಿಗೂ ಆಹಾಕರ, ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣ1