logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಿಂಧನೂರು ಕ್ಷೇತ್ರದಲ್ಲಿ 43,115 ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಸಿಂಧನೂರು: ರಾಷ್ಟ್ರೀಯ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಬಳಿಕ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 43,115 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರ್ ದೇಸಾಯಿ ತಿಳಿಸಿದ್ದಾರೆ. ಮಂಗಳವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರದಲ್ಲಿ 2,40,941 ಮತದಾರರಿದ್ದರು. ಪರಿಷ್ಕರಣೆ ವೇಳೆ ಮೃತಪಟ್ಟ 6,778, ಶಾಶ್ವತವಾಗಿ ಸ್ಥಳಾಂತರಗೊಂಡ 31,954, ಗೈರುಹಾಜರಿದ್ದ 1,555 ಹಾಗೂ ಡಬಲ್ ಮತದಾರರಾಗಿದ್ದ 2,805 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇತರ ಕಾರಣಗಳಿಂದ 23 ಮತದಾರರ ಹೆಸರನ್ನೂ ಡಿಲೀಟ್ ಮಾಡಲಾಗಿದೆ. 2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಒಟ್ಟು 17.90ರಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ನಗರ ವ್ಯಾಪ್ತಿಯಲ್ಲಿ 20,799 ಹಾಗೂ ಗ್ರಾಮೀಣ ಪ್ರದೇಶದಲ್ಲಿ 22,351 ಮತದಾರರ ಹೆಸರುಗಳು ಡಿಲೀಟ್ ಆಗಿವೆ. ಅರ್ಹ ಮತದಾರರ ಹೆಸರು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದರೆ, ನಿಗದಿತ 13 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ ಎಂದು ಅವರು ತಿಳಿಸಿದರು. ಈ ಹಿಂದೆ ಕ್ಷೇತ್ರದಲ್ಲಿ 269 ಮತಗಟ್ಟೆಗಳಿದ್ದವು. 1,200ಕ್ಕೂ ಅಧಿಕ ಮತದಾರರಿರುವ ಕಾರಣ ಮಾಡಶಿರವಾರ, ಪಗಡದಿನ್ನಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರು ವಿ.ಹೆಚ್.ಎ. ಆ್ಯಪ್ ಮೂಲಕ ಮತದಾರರ ಸೇರ್ಪಡೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅರುಣ್ ಕುಮಾರ್ ದೇಸಾಯಿ ಹೇಳಿದರು.

17 hrs ago
user_K2 kannada News
K2 kannada News
ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
17 hrs ago

ಸಿಂಧನೂರು ಕ್ಷೇತ್ರದಲ್ಲಿ 43,115 ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಸಿಂಧನೂರು: ರಾಷ್ಟ್ರೀಯ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಬಳಿಕ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 43,115 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರ್ ದೇಸಾಯಿ ತಿಳಿಸಿದ್ದಾರೆ. ಮಂಗಳವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರದಲ್ಲಿ 2,40,941 ಮತದಾರರಿದ್ದರು. ಪರಿಷ್ಕರಣೆ ವೇಳೆ ಮೃತಪಟ್ಟ 6,778, ಶಾಶ್ವತವಾಗಿ ಸ್ಥಳಾಂತರಗೊಂಡ 31,954, ಗೈರುಹಾಜರಿದ್ದ 1,555 ಹಾಗೂ ಡಬಲ್ ಮತದಾರರಾಗಿದ್ದ 2,805 ಮಂದಿಯ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇತರ ಕಾರಣಗಳಿಂದ 23 ಮತದಾರರ ಹೆಸರನ್ನೂ ಡಿಲೀಟ್ ಮಾಡಲಾಗಿದೆ. 2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಒಟ್ಟು 17.90ರಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ನಗರ ವ್ಯಾಪ್ತಿಯಲ್ಲಿ 20,799 ಹಾಗೂ ಗ್ರಾಮೀಣ ಪ್ರದೇಶದಲ್ಲಿ 22,351 ಮತದಾರರ ಹೆಸರುಗಳು ಡಿಲೀಟ್ ಆಗಿವೆ. ಅರ್ಹ ಮತದಾರರ ಹೆಸರು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದರೆ, ನಿಗದಿತ 13 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ ಎಂದು ಅವರು ತಿಳಿಸಿದರು. ಈ ಹಿಂದೆ ಕ್ಷೇತ್ರದಲ್ಲಿ 269 ಮತಗಟ್ಟೆಗಳಿದ್ದವು. 1,200ಕ್ಕೂ ಅಧಿಕ ಮತದಾರರಿರುವ ಕಾರಣ ಮಾಡಶಿರವಾರ, ಪಗಡದಿನ್ನಿ ಹಾಗೂ ಬೂದಿಹಾಳ ಗ್ರಾಮಗಳಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರು ವಿ.ಹೆಚ್.ಎ. ಆ್ಯಪ್ ಮೂಲಕ ಮತದಾರರ ಸೇರ್ಪಡೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅರುಣ್ ಕುಮಾರ್ ದೇಸಾಯಿ ಹೇಳಿದರು.

More news from Vijayapura and nearby areas
  • ವಿಜಯಪುರ ನಗರದಲ್ಲಿ ಮಂಗಳವಾರ ಈದ್ ಮಿಲಾದ ಅಂಗವಾಗಿ ಮುಸ್ಲೀಮ ಭಾಂದವರು ಭವ್ಯ ಮೆರೆವಣಿಗೆ ನಡೆಯತು
    1
    ವಿಜಯಪುರ ನಗರದಲ್ಲಿ ಮಂಗಳವಾರ ಈದ್ ಮಿಲಾದ ಅಂಗವಾಗಿ ಮುಸ್ಲೀಮ ಭಾಂದವರು ಭವ್ಯ ಮೆರೆವಣಿಗೆ ನಡೆಯತು
    user_Sharanugouda Patil
    Sharanugouda Patil
    Muddebihal, Vijayapura•
    2 hrs ago
  • ಇಳಕಲ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಪೊಲೀಸರಿಂದ ಪಥಸಂಚಲನ ಇಳಕಲ್ಲ : ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಪಾಟೀಲ ಹಾಗೂ ಕ್ರೈಂ ಪಿಎಸ್‌ಐ ಸಿ. ಬಿ. ಕಿರಶ್ಯಾಳ ಅವರ ನೇತೃತ್ವದಲ್ಲಿ ಪಥಸಂಚಲನ ಜರುಗಿತು. ಪೊಲೀಸ್ ಠಾಣೆಯಿಂದ ಆರಂಭಗೊAಡ ಪಥಸಂಚಲನವು ಕಂಠಿ ವೃತ್ತ, ದ್ವಾರಕಾ ಲಾಡ್ಜ್, ಗ್ರಾಮ ಚಾವಡಿ, ಗಾಂಧಿ ಚೌಕ್, ಬಜಾರ್ ಬಸವಣ್ಣನ ಗುಡಿ, ಕೊಪ್ಪರದಪೇಟೆ ಹಾಗೂ ಪಶು ಆಸ್ಪತ್ರೆ ಮಾರ್ಗವಾಗಿ ಸಂಚರಿಸಿ ಪೊಲೀಸ್ ಬಯಲಿನಲ್ಲಿ ಮುಕ್ತಾಯಗೊಂಡಿತು. ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಸಾರ್ವಜನಿಕರಲ್ಲಿ ಸುರಕ್ಷತಾ ಭಾವ ಮೂಡಿಸಲು ಈ ಪಥಸಂಚಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
    2
    ಇಳಕಲ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಪೊಲೀಸರಿಂದ ಪಥಸಂಚಲನ
ಇಳಕಲ್ಲ : ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ  ನಡೆಯಿತು.
ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಪಾಟೀಲ ಹಾಗೂ ಕ್ರೈಂ ಪಿಎಸ್‌ಐ ಸಿ. ಬಿ. ಕಿರಶ್ಯಾಳ ಅವರ ನೇತೃತ್ವದಲ್ಲಿ ಪಥಸಂಚಲನ ಜರುಗಿತು. 
ಪೊಲೀಸ್ ಠಾಣೆಯಿಂದ ಆರಂಭಗೊAಡ ಪಥಸಂಚಲನವು ಕಂಠಿ ವೃತ್ತ, ದ್ವಾರಕಾ ಲಾಡ್ಜ್, ಗ್ರಾಮ ಚಾವಡಿ, ಗಾಂಧಿ ಚೌಕ್, ಬಜಾರ್ ಬಸವಣ್ಣನ ಗುಡಿ, ಕೊಪ್ಪರದಪೇಟೆ ಹಾಗೂ ಪಶು ಆಸ್ಪತ್ರೆ ಮಾರ್ಗವಾಗಿ ಸಂಚರಿಸಿ ಪೊಲೀಸ್ ಬಯಲಿನಲ್ಲಿ ಮುಕ್ತಾಯಗೊಂಡಿತು.
ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಸಾರ್ವಜನಿಕರಲ್ಲಿ ಸುರಕ್ಷತಾ ಭಾವ ಮೂಡಿಸಲು ಈ ಪಥಸಂಚಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    14 hrs ago
  • ಸರ್ವಸ್ವವನ್ನು ಮೆಟ್ಟಿ ನಿಲ್ಲುವಂತ ಶಕ್ತಿ ಮಹಿಳೆಗೆ ಇದೆ:- ಡಾ ಹೀರಾ ಕುಷ್ಟಗಿ:- ಹೆಣ್ಣನ್ನು ಹೆಣ್ಣಾಗಿ ನೋಡುವದಕ್ಕಿಂತ ಹೆಣ್ಣನ್ನು ಒಬ್ಬ ಸರಿ ಸಮಾನವಾದ ಮನುಷ್ಯರಂತೆ ನೋಡಬೇಕು ಹೆಣ್ಣಿಗೆ ಈ ಜಗತ್ತನ್ನು ಗೆಲ್ಲುವ ಶಕ್ತಿ ಒಬ್ಬ ಮಹಿಳೆಗೆ ಇದ್ದು ಹೆಣ್ಣು ಏನಾನ್ನಾದರು ಸಾಧಿಸಬಲ್ಲಳು ಅದಕ್ಕಾಗಿ ಬಿ.ಎ ಪದವಿಯಲ್ಲಿ ಓದುತ್ತಿರುವ ಮಹಿಳೆಯರು ಹೆಚ್ಚು ಅಂಕ ತೆಗೆಯುವ ಮೂಲಕ ಒಳ್ಳೆಯ ಅಭ್ಯಾಸವನ್ನು ಮಾಡಿ ತಂದೆ ತಾಯಿಗಳ ಕೀರ್ತಿ ಮತ್ತು ಕಾಲೇಜಿನ ಕೀರ್ತಿ ಗಳಿಸಬೇಕು ಎಂದು ಡಾ.ನಾಗರಾಜ ಹೀರಾ ಜಿಲ್ಲಾ ನೋಡಲ್ ಅಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಇವರು ಹೇಳಿದರು. ಇಲ್ಲಿನ ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಆನರ್ಸ್ ಎಂಬುವದು ಬಡವರು ಕಲಿಯುವ ವಿದ್ಯಯಲ್ಲ ಆನಸ್೯ ಎಂದರೆ ಬದುಕುವ ಕಲೆ ಈ ಒಂದು ಶಿಕ್ಷಣ ಇಡೀ ಜಗತ್ತಿನ ಪ್ರಕ್ರಿಯೆಯಲ್ಲಿ ಬಿ.ಎ ಪದವಿ ಆನರ್ಸ್ ಶಿಕ್ಷಣವಾಗಿದೆ. ಆದರೆ ಇವತ್ತಿನ ಶಿಕ್ಷಣ ತಂತ್ರಜ್ಞಾನದ ಮೂಲಕ ನಾವುಗಳು ಶಿಕ್ಷಣ ಪಡೆಯಬೇಕಾಗಿದೆ. ಅದಕ್ಕಾಗಿ ನಿತ್ಯ ನಿರಂತರ ಶಿಕ್ಷಣ ಪಡೆದಾಗ ಮಾತ್ರ ನಾವುಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಹೆಣ್ಣು ಮಕ್ಕಳು ಎಂದರೆ ಒಂದು ಮಾಹಿತಿ ಕೇಂದ್ರವಿದ್ದಂತೆ ಆದರೆ ಇತಿಹಾಸದ ಪುಟಗಳಲ್ಲಿ ನಾವುಗಳು ನೋಡಿದಾಗ ಎಲ್ಲಾ ಪುಟಗಳಲ್ಲಿ ಹೆಣ್ಣು ಮೊದಲನೆಯ ಸ್ಥಾನದಲ್ಲಿ ಇದ್ದಾಳೆ.ಈ ಜಗತ್ತು ಸೃಷ್ಟಿಯಾಗಿದ್ದು ಹೆಣ್ಣಿನಿಂದ ಹೆಣ್ಣಿನಿಂದ ಮಾಹಾ ಭಾರತ, ಹೆಣ್ಣಿನಿಂದ ರಾಮಾಯಣ ಅದಕ್ಕಾಗಿ ಪ್ರತಿಯೊಬ್ಬರು ಯಾರು ಕೂಡ ಹೆದರದೆ ಉತ್ತಮ ಶಿಕ್ಷಣವಂತರಾಗಿ ಬಡವರಾದರೆ ಸರಿ ಶ್ರೀಮಂತರಾದರೆ ಸರಿ ಯಾರು ಯಾವ ಪದವಿ ಆಯ್ಕೆ ಮಾಡಿಕೊಳ್ಳುತ್ತಾರೆ ಅವರ ಮೇಲೆ ಆಲಂಬನೆ ಆಗಿರುತ್ತದೆ. ಇವತ್ತಿನ ದಿನಮಾನದಲ್ಲಿ ಚಲವದಿದ್ದರೆ ಈ ಜಗತ್ತಿನಲ್ಲಿ ಏನಾದರೂ ಸಾಧಿಸಬಹುದು ಸಾಧನೆ ಸಾಲಿನಲ್ಲಿ ‌ನಿಂತು ಈ ಕಾಲೇಜಿನ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣದ ಮೂಲಕ ಅಂಕವನ್ನು ಪಡೆದು ಕಾಲೇಜಿನ ಕೀರ್ತಿ ತರುವ ಮೂಲಕ ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ ಬಾಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ.ಪ.ಪೂ.ಕಾಲೇಜು ದೋಟಿಹಾಳ ಉಪನ್ಯಾಸಕಿ ಶ್ರೀಮತಿ ಪ್ರಿಯದರ್ಶಿನಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಪ್ರಥಮ ದರ್ಜೆಯ ಗುತ್ತಿಗೆದಾರ ರಮೇಶ ಕಾಪ್ಸೆ ಕಾರ್ಯಕ್ರಮ ಉದ್ಘಾಟಿಸಿದರು. ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ ಕಾಲೇಜು ಅಧ್ಯಕ್ಷರಾದ ಹನಮಂತಪ್ಪ ಚೌಡ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಸಿದ್ರಾಮಪ್ಪ ವಂದಾಲಿ, ಮಾಜಿ ಪಿ ಕಾಡ್೯ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ಸೂರ್ಯಕಾಂತ ದೇಸಾಯಿ, ಮಾ.ಹೊ.ಮ.ಪ.ಕಲಾ ಕಾಲೇಜು ‌ಪ್ರಾಂಶುಪಾಲರಾದ ತಿಪ್ಪಣ್ಣ ಬಿಜಕಲ್, ದ್ಯಾಮಣ್ಣ ಕಟ್ಟಿಹೊಲ, ಸತ್ಯಪ್ಪ ರಾಜೂರು, ಎ.ವಾಯ್.ಲೋಕರೆ, ಕ.ಕಾ.ನಿ.ಪತ್ರಕರ್ತರ ಸಂಘದ ಅಧ್ಯಕ್ಷರಾದ ಪವಾಡೆಪ್ಪ ಚೌಡ್ಕಿ, ಮಂಜುನಾಥ ಮಾಹಾಲಿಂಗಪೂರ, ಮುಖೇಶ ನಿಲೋಗಲ್, ಶಶಿಧರ ಕುಂಬಾರ, ಸಂಗಮೇಶ ಬಿಳಿಯಪ್ಪನವರ್, ಸುಂದರಕುಮಾರ ಚೌಡ್ಕಿ ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಹಲವರು ಉಪಸ್ಥಿತರಿದ್ದರು.
    2
    ಸರ್ವಸ್ವವನ್ನು ಮೆಟ್ಟಿ ನಿಲ್ಲುವಂತ ಶಕ್ತಿ ಮಹಿಳೆಗೆ ಇದೆ:- ಡಾ ಹೀರಾ
ಕುಷ್ಟಗಿ:- ಹೆಣ್ಣನ್ನು ಹೆಣ್ಣಾಗಿ ನೋಡುವದಕ್ಕಿಂತ ಹೆಣ್ಣನ್ನು ಒಬ್ಬ ಸರಿ ಸಮಾನವಾದ ಮನುಷ್ಯರಂತೆ  ನೋಡಬೇಕು ಹೆಣ್ಣಿಗೆ ಈ ಜಗತ್ತನ್ನು ಗೆಲ್ಲುವ ಶಕ್ತಿ ಒಬ್ಬ ಮಹಿಳೆಗೆ ಇದ್ದು ಹೆಣ್ಣು ಏನಾನ್ನಾದರು  ಸಾಧಿಸಬಲ್ಲಳು ಅದಕ್ಕಾಗಿ ಬಿ.ಎ ಪದವಿಯಲ್ಲಿ ಓದುತ್ತಿರುವ ಮಹಿಳೆಯರು ಹೆಚ್ಚು ಅಂಕ ತೆಗೆಯುವ ಮೂಲಕ ಒಳ್ಳೆಯ ಅಭ್ಯಾಸವನ್ನು ಮಾಡಿ ತಂದೆ ತಾಯಿಗಳ ಕೀರ್ತಿ ಮತ್ತು ಕಾಲೇಜಿನ ಕೀರ್ತಿ ಗಳಿಸಬೇಕು ಎಂದು ಡಾ.ನಾಗರಾಜ ಹೀರಾ ಜಿಲ್ಲಾ ನೋಡಲ್ ಅಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಇವರು ಹೇಳಿದರು.
ಇಲ್ಲಿನ ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಆನರ್ಸ್ ಎಂಬುವದು ಬಡವರು ಕಲಿಯುವ ವಿದ್ಯಯಲ್ಲ ಆನಸ್೯  ಎಂದರೆ ಬದುಕುವ ಕಲೆ ಈ ಒಂದು ಶಿಕ್ಷಣ ಇಡೀ ಜಗತ್ತಿನ ಪ್ರಕ್ರಿಯೆಯಲ್ಲಿ   ಬಿ.ಎ ಪದವಿ ಆನರ್ಸ್ ಶಿಕ್ಷಣವಾಗಿದೆ. ಆದರೆ ಇವತ್ತಿನ ಶಿಕ್ಷಣ ತಂತ್ರಜ್ಞಾನದ ಮೂಲಕ ನಾವುಗಳು ಶಿಕ್ಷಣ ಪಡೆಯಬೇಕಾಗಿದೆ.  ಅದಕ್ಕಾಗಿ ನಿತ್ಯ ನಿರಂತರ ಶಿಕ್ಷಣ ಪಡೆದಾಗ ಮಾತ್ರ ನಾವುಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಹೆಣ್ಣು ಮಕ್ಕಳು ಎಂದರೆ ಒಂದು ಮಾಹಿತಿ ಕೇಂದ್ರವಿದ್ದಂತೆ ಆದರೆ ಇತಿಹಾಸದ ಪುಟಗಳಲ್ಲಿ ನಾವುಗಳು ನೋಡಿದಾಗ ಎಲ್ಲಾ ಪುಟಗಳಲ್ಲಿ ಹೆಣ್ಣು ಮೊದಲನೆಯ ಸ್ಥಾನದಲ್ಲಿ ಇದ್ದಾಳೆ.ಈ ಜಗತ್ತು ಸೃಷ್ಟಿಯಾಗಿದ್ದು ಹೆಣ್ಣಿನಿಂದ ಹೆಣ್ಣಿನಿಂದ ಮಾಹಾ ಭಾರತ, ಹೆಣ್ಣಿನಿಂದ ರಾಮಾಯಣ ಅದಕ್ಕಾಗಿ ಪ್ರತಿಯೊಬ್ಬರು ಯಾರು ಕೂಡ ಹೆದರದೆ ಉತ್ತಮ ಶಿಕ್ಷಣವಂತರಾಗಿ ಬಡವರಾದರೆ ಸರಿ ಶ್ರೀಮಂತರಾದರೆ ಸರಿ ಯಾರು ಯಾವ ಪದವಿ ಆಯ್ಕೆ ಮಾಡಿಕೊಳ್ಳುತ್ತಾರೆ ಅವರ ಮೇಲೆ ಆಲಂಬನೆ ಆಗಿರುತ್ತದೆ. ಇವತ್ತಿನ ದಿನಮಾನದಲ್ಲಿ ಚಲವದಿದ್ದರೆ ಈ ಜಗತ್ತಿನಲ್ಲಿ ಏನಾದರೂ ಸಾಧಿಸಬಹುದು ಸಾಧನೆ ಸಾಲಿನಲ್ಲಿ ‌ನಿಂತು ಈ ಕಾಲೇಜಿನ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣದ ಮೂಲಕ  ಅಂಕವನ್ನು ಪಡೆದು ಕಾಲೇಜಿನ ಕೀರ್ತಿ ತರುವ ಮೂಲಕ ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ ಬಾಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ.ಪ.ಪೂ.ಕಾಲೇಜು ದೋಟಿಹಾಳ ಉಪನ್ಯಾಸಕಿ ಶ್ರೀಮತಿ ಪ್ರಿಯದರ್ಶಿನಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಪ್ರಥಮ ದರ್ಜೆಯ ಗುತ್ತಿಗೆದಾರ ರಮೇಶ ಕಾಪ್ಸೆ ಕಾರ್ಯಕ್ರಮ ಉದ್ಘಾಟಿಸಿದರು.
ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ ಕಾಲೇಜು ಅಧ್ಯಕ್ಷರಾದ ಹನಮಂತಪ್ಪ ಚೌಡ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಸಿದ್ರಾಮಪ್ಪ ವಂದಾಲಿ, ಮಾಜಿ ಪಿ ಕಾಡ್೯ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ಸೂರ್ಯಕಾಂತ ದೇಸಾಯಿ, ಮಾ.ಹೊ.ಮ.ಪ.ಕಲಾ ಕಾಲೇಜು ‌ಪ್ರಾಂಶುಪಾಲರಾದ ತಿಪ್ಪಣ್ಣ ಬಿಜಕಲ್,  ದ್ಯಾಮಣ್ಣ ಕಟ್ಟಿಹೊಲ, ಸತ್ಯಪ್ಪ ರಾಜೂರು, ಎ.ವಾಯ್.ಲೋಕರೆ, ಕ.ಕಾ.ನಿ.ಪತ್ರಕರ್ತರ ಸಂಘದ ಅಧ್ಯಕ್ಷರಾದ ಪವಾಡೆಪ್ಪ ಚೌಡ್ಕಿ, ಮಂಜುನಾಥ ಮಾಹಾಲಿಂಗಪೂರ, ಮುಖೇಶ ನಿಲೋಗಲ್, ಶಶಿಧರ ಕುಂಬಾರ, ಸಂಗಮೇಶ ಬಿಳಿಯಪ್ಪನವರ್, ಸುಂದರಕುಮಾರ ಚೌಡ್ಕಿ ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಹಲವರು ಉಪಸ್ಥಿತರಿದ್ದರು.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    15 hrs ago
  • ಇಳಕಲ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2111ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ ಇಳಕಲ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2111ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 2111ನೇ ಮಧ್ಯವರ್ಜನ ಶಿಬಿರ ನಗರದ ಅನುಭವ ಮಂಟಪದಲ್ಲಿ ನಡೆಯಿತು. ಈ ಮಧ್ಯವರ್ಜನ ಶಿಬಿರವನ್ನು ನಗರಸಭೆಯ ಅಧ್ಯಕ್ಷರಾದ ಸುಧಾರಣಿ ಸಂಗಮ್, ಸದಸ್ಯರಾದ ರೇಷ್ಮಾ ಮಾರನಬಸರಿ, ಸವಿತಾ ಚಲವಾದಿ, ಯಲ್ಲಪ್ಪ ರಾಜಾಪೂರ,ಹನಮಂತ ತುಂಬದ, ಮಾಹಾಂತೇಶ ಹನಮನಾಳ ಹಾಗೂ ಧರ್ಮಸ್ಥಳ ಸಂಘದ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
    3
    ಇಳಕಲ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  2111ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ

ಇಳಕಲ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  2111ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ
ಬಾಗಲಕೋಟೆ ಜಿಲ್ಲೆಯ ಇಳಕಲ್  ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 2111ನೇ ಮಧ್ಯವರ್ಜನ ಶಿಬಿರ ನಗರದ ಅನುಭವ ಮಂಟಪದಲ್ಲಿ ನಡೆಯಿತು. 
ಈ ಮಧ್ಯವರ್ಜನ ಶಿಬಿರವನ್ನು ನಗರಸಭೆಯ ಅಧ್ಯಕ್ಷರಾದ ಸುಧಾರಣಿ  ಸಂಗಮ್, ಸದಸ್ಯರಾದ ರೇಷ್ಮಾ ಮಾರನಬಸರಿ, ಸವಿತಾ ಚಲವಾದಿ, ಯಲ್ಲಪ್ಪ ರಾಜಾಪೂರ,ಹನಮಂತ ತುಂಬದ, ಮಾಹಾಂತೇಶ ಹನಮನಾಳ ಹಾಗೂ  ಧರ್ಮಸ್ಥಳ ಸಂಘದ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    21 hrs ago
  • ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ. ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ.
    1
    ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ.
ಅಫಜಲಪುರ: ಹೆದ್ದಾರಿಯ ಮೇಲೆ ನಿಂತು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು: ಬಸ್ ನಿಲ್ದಾಣದ ನಿರ್ಮಾಣಕ್ಕೆ ಗ್ರಾಮಸ್ಥರ ಮನವಿ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    3 hrs ago
  • ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಕೆಪಿಟಿಸಿಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ ರಾಯಚೂರು : ಪರಿಷ್ಕೃತ ಕನಿಷ್ಠ ವೇತನ ಜಾರಿ, ಶಾಸನಬದ್ದ ಸೌಲಭ್ಯಗಳನ್ನು ಒದಗಿಸುವುದು ವಜಾಗೊಳಿಸಿರುವುದನ್ನು ಹಾಗೂ ಕಾನೂನುಬಾಹಿರವಾಗಿ ಕಾರ್ಮಿಕರನ್ನು ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕರ ಸಂಘ (ಎಐಯುಟಿಯು ಸಿಎಐಪಿಎಫ್) ಜಿಲ್ಲಾ ಘಟಕದ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೆಪಿಟಿಸಿಎಲ್ ವ್ಯಾಪ್ತಿಯ 110 ಕೆವಿ ಹಾಗೂ 220 ಕೆವಿ ವಿದ್ಯುತ್‌ ಉಪಕೇಂದ್ರಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಪಾಳಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ 22-05-2026ರಿಂದ ಜಾರಿಗೆ ಬಂದಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಪಾವತಿಸುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಈಗಾಗಲೇ ಸಂಬಂಧಿಸಿದ ಕಚೇರಿಗೆ ಮನವಿ ಸಲ್ಲಿಸಿದ್ದರೂ ಗುತ್ತಿಗೆದಾರರು ಪರಿಷ್ಕೃತ ವೇತನವನ್ನು ಪಾವತಿಸದೆ, ಹೊಸ ವೇತನ ರದ್ದಾಗಿದೆ ಎಂಬ ನೆಪ ಹೇಳಿ ಹಳೆಯ ವೇತನ ವನ್ನೇ ಪಾವತಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಪರಿಷ್ಕೃತ ವೇತನದ ಆಧಾರದ ಮೇಲೆ ಬಿಲ್ ಪಾವತಿಯಾಗುತ್ತಿರು ವುದು ಗಮನಕ್ಕೆ ಬಂದಿದ್ದು, ಕೆಪಿಟಿಸಿಎಲ್ ಅಧಿಕಾರಿಗಳು ಈ ಕುರಿತು ಸೂಕ್ತ ನಿರ್ದೇಶನ ನೀಡದಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸಿ, ಬಾಕಿ ಇರುವ ವೇತನದ ಮೊತ್ತವನ್ನು ಕೂಡಲೇ ಪಾವತಿಸಬೇಕು. ಎಲ್ಲ ಕಾರ್ಮಿಕರಿಗೆ ಇಎಸ್‌ಐ, ಪಿಎಫ್ ಸೇರಿದಂತೆ ಶಾಸನಬದ್ಧ ಸೌಲಭ್ಯಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
    1
    ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಕೆಪಿಟಿಸಿಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ರಾಯಚೂರು : ಪರಿಷ್ಕೃತ ಕನಿಷ್ಠ ವೇತನ ಜಾರಿ, ಶಾಸನಬದ್ದ ಸೌಲಭ್ಯಗಳನ್ನು ಒದಗಿಸುವುದು ವಜಾಗೊಳಿಸಿರುವುದನ್ನು ಹಾಗೂ ಕಾನೂನುಬಾಹಿರವಾಗಿ ಕಾರ್ಮಿಕರನ್ನು ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕರ ಸಂಘ (ಎಐಯುಟಿಯು ಸಿಎಐಪಿಎಫ್) ಜಿಲ್ಲಾ ಘಟಕದ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೆಪಿಟಿಸಿಎಲ್ ವ್ಯಾಪ್ತಿಯ 110 ಕೆವಿ ಹಾಗೂ 220 ಕೆವಿ ವಿದ್ಯುತ್‌ ಉಪಕೇಂದ್ರಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಪಾಳಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ 22-05-2026ರಿಂದ ಜಾರಿಗೆ ಬಂದಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಪಾವತಿಸುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಈಗಾಗಲೇ ಸಂಬಂಧಿಸಿದ ಕಚೇರಿಗೆ ಮನವಿ ಸಲ್ಲಿಸಿದ್ದರೂ ಗುತ್ತಿಗೆದಾರರು ಪರಿಷ್ಕೃತ ವೇತನವನ್ನು ಪಾವತಿಸದೆ, ಹೊಸ ವೇತನ ರದ್ದಾಗಿದೆ ಎಂಬ ನೆಪ ಹೇಳಿ ಹಳೆಯ ವೇತನ ವನ್ನೇ ಪಾವತಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಇತರೆ ಜಿಲ್ಲೆಗಳಲ್ಲಿ ಪರಿಷ್ಕೃತ ವೇತನದ ಆಧಾರದ ಮೇಲೆ ಬಿಲ್ ಪಾವತಿಯಾಗುತ್ತಿರು ವುದು ಗಮನಕ್ಕೆ ಬಂದಿದ್ದು, ಕೆಪಿಟಿಸಿಎಲ್ ಅಧಿಕಾರಿಗಳು ಈ ಕುರಿತು ಸೂಕ್ತ ನಿರ್ದೇಶನ ನೀಡದಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸಿ, ಬಾಕಿ ಇರುವ ವೇತನದ ಮೊತ್ತವನ್ನು ಕೂಡಲೇ ಪಾವತಿಸಬೇಕು. ಎಲ್ಲ ಕಾರ್ಮಿಕರಿಗೆ ಇಎಸ್‌ಐ, ಪಿಎಫ್ ಸೇರಿದಂತೆ ಶಾಸನಬದ್ಧ ಸೌಲಭ್ಯಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    18 hrs ago
  • ಕರ್ನಾಟಕದಲ್ಲಿ ಗಣಪತಿಗೆ ಮೆರವಣಿಗೆಗೆ ಡಿಜೆ ಅನುಮತಿ ಇಲ್ಲಾ ಎಂದ ಗೃಹ ಮಂತ್ರಿ ಪಿಯಾಂಕ :ಖರ್ಗೆ ವಿರುದ್ಧ ಬಿ ಜೆ ಪಿ ಮುಖಂಡರು ಗಣಪತಿಗೆ ಯಾಕೆ ಡಿಜಿ ಇಲ್ಲಾ ಗೃಹ ಮಂತ್ರಿಯ ರೆ ಮುಸಾಲ್ಮಾನರಿಗೆ ನಾಲಕ್ಕು ಐದು ಸಲಾ ಮೈಕ್ ಹಚ್ಚಿ ನಮಾಜ್ ಮಾಡುತ್ತಾರೆ ನಮಗ ಏಕೆ ಇಲ್ಲ ಹೇಳಿ ಗೃಹ ಮಂತ್ರಿ ಯರೆ ನಮಗೂ ಡಿಜಿ ಪರ್ಮಿಷನ್ ಕೊಡಬೇಕು ಇಲ್ಲಾಂದ್ರೆ ನಾವು ಬಿಡುವುದಿಲ್ಲ ಬಿಜೆಪಿ ಮುಖಂಡ ರಾಜ ಹೇಳಿಕೆ
    1
    ಕರ್ನಾಟಕದಲ್ಲಿ ಗಣಪತಿಗೆ ಮೆರವಣಿಗೆಗೆ ಡಿಜೆ ಅನುಮತಿ ಇಲ್ಲಾ ಎಂದ ಗೃಹ ಮಂತ್ರಿ ಪಿಯಾಂಕ :ಖರ್ಗೆ ವಿರುದ್ಧ ಬಿ ಜೆ ಪಿ ಮುಖಂಡರು
ಗಣಪತಿಗೆ ಯಾಕೆ ಡಿಜಿ ಇಲ್ಲಾ ಗೃಹ ಮಂತ್ರಿಯ ರೆ ಮುಸಾಲ್ಮಾನರಿಗೆ ನಾಲಕ್ಕು ಐದು  ಸಲಾ ಮೈಕ್ ಹಚ್ಚಿ ನಮಾಜ್ ಮಾಡುತ್ತಾರೆ ನಮಗ ಏಕೆ ಇಲ್ಲ ಹೇಳಿ ಗೃಹ ಮಂತ್ರಿ ಯರೆ ನಮಗೂ ಡಿಜಿ ಪರ್ಮಿಷನ್ ಕೊಡಬೇಕು  ಇಲ್ಲಾಂದ್ರೆ ನಾವು ಬಿಡುವುದಿಲ್ಲ ಬಿಜೆಪಿ ಮುಖಂಡ  ರಾಜ  ಹೇಳಿಕೆ
    user_Sharanugouda Patil
    Sharanugouda Patil
    Muddebihal, Vijayapura•
    13 hrs ago
  • ಇಳಕಲ್‌ದ ಮಹಾಂತೇಶ ಅಂಗಡಿ ನಿವಾಸದಲ್ಲಿ ಪೂಜ್ಯ ಶ್ರೀ ರುದ್ರಾರಾಧ್ಯ ಶ್ರೀಗಳಿಂದ ವಿಶೇಷ ಪೂಜೆ ಪವಿತ್ರ ಶ್ರಾವಣ ಮಾಸದ ನಿಮಿತ್ತ ಇಳಕಲ್ಲ ನಗರದ ಭಕ್ತರಾದ ಮಹಾಂತೇಶ ಅಂಗಡಿ ಅವರ ನಿವಾಸದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಶ್ರೀಗುರುಗಿರಿಸಿದ್ದೇಶ್ವರ ನಿಜೈಕ್ಯ ಕ್ಷೇತ್ರ ಶ್ರೀಮಠದ ಪರಮಪೂಜ್ಯ ವೇದಮೂರ್ತಿ ರುದ್ರಾರಾಧ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ಮಂಗಳವಾರ ನೆರವೇರಿತು. ಶ್ರೀಗಳು ಇಷ್ಟಲಿಂಗ ಪೂಜೆ ಹಾಗೂ ಪೂಜಾ ವಿಧಿವಿಧಾನ ಹಾಗೂ ೧೦೮ ಜಂಗಮರಾಧನೆ ಹಾಗೂ ಪ್ರಸಾದ ಸೇವೆ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿ ಹರಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಾಂತೇಶ ಅಂಗಡಿ, ಅವರ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ನಗರದ ಪ್ರಮುಖ ಗಣ್ಯರು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದು, ತೀರ್ಥ-ಪ್ರಸಾದ ಸ್ವೀಕರಿಸಿದರು.
    1
    ಇಳಕಲ್‌ದ ಮಹಾಂತೇಶ ಅಂಗಡಿ ನಿವಾಸದಲ್ಲಿ ಪೂಜ್ಯ ಶ್ರೀ ರುದ್ರಾರಾಧ್ಯ ಶ್ರೀಗಳಿಂದ ವಿಶೇಷ ಪೂಜೆ
ಪವಿತ್ರ ಶ್ರಾವಣ ಮಾಸದ ನಿಮಿತ್ತ ಇಳಕಲ್ಲ ನಗರದ ಭಕ್ತರಾದ ಮಹಾಂತೇಶ ಅಂಗಡಿ ಅವರ ನಿವಾಸದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಶ್ರೀಗುರುಗಿರಿಸಿದ್ದೇಶ್ವರ ನಿಜೈಕ್ಯ ಕ್ಷೇತ್ರ ಶ್ರೀಮಠದ ಪರಮಪೂಜ್ಯ ವೇದಮೂರ್ತಿ ರುದ್ರಾರಾಧ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ಮಂಗಳವಾರ ನೆರವೇರಿತು.
ಶ್ರೀಗಳು ಇಷ್ಟಲಿಂಗ ಪೂಜೆ ಹಾಗೂ ಪೂಜಾ ವಿಧಿವಿಧಾನ ಹಾಗೂ ೧೦೮ ಜಂಗಮರಾಧನೆ ಹಾಗೂ ಪ್ರಸಾದ ಸೇವೆ  ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿ ಹರಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಾಂತೇಶ ಅಂಗಡಿ, ಅವರ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ನಗರದ ಪ್ರಮುಖ ಗಣ್ಯರು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದು, ತೀರ್ಥ-ಪ್ರಸಾದ ಸ್ವೀಕರಿಸಿದರು.
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    14 hrs ago
  • ರಾಯಚೂರು ಜಿಲ್ಲೆಯ ದಲಿತ ಮುಖಂಡ ಭೂಮಾನಂದನ ಕೊಲೆ ಮತ್ತು ಅಶ್ವಿನಿಅತ್ಯಾಚಾರ ಕೊಲೆ ಖಂಡಿಸಿ ನಗರದಲ್ಲಿ ಪ್ರತಿಭಟನೆ ಬಳ್ಳಾರಿ / ಕಂಪ್ಲಿ : ರಾಯಚೂರು ಜಿಲ್ಲೆಯ ದಲಿತ ಮುಖಂಡ ಭೂಮಾನಂದನ ಕೊಲೆ ಮತ್ತು ಅಶ್ವಿನಿ ಅತ್ಯಾಚಾರ ಕೊಲೆ ಖಂಡಿಸಿ, ಸಮಾನ ಮನಸ್ಕರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಕಂದಾಯ ಅಧಿಕಾರಿ ಸುರೇಶ್‌ಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ಕಾರಕ್ಕೆ ರವಾನಿಸಿದರು. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಯುವಕ ಭೂಮಾನಂದನ ಕೊಲೆ ಮತ್ತು ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಯುವತಿ ಅಶ್ವಿನಿ ಅತ್ಯಾಚಾರ ಮತ್ತು ಕೊಲೆಯನ್ನು ತೀವ್ರವಾಗಿ ಖಂಡಿಸಿದ್ದು ದಿನೇ ದಿನೇ ದಲಿತರ ಮೇಲೆ ದೌರ್ಜನ್ಯಗಳು, ಕೊಲೆಗಳು, ಅತ್ಯಾಚಾರಗಳು ಸಂಭವಿಸುತ್ತಿದ್ದು ಇದಕ್ಕೆ ನೇರ ಸರ್ಕಾರವೇ ಹೊಣೆ ಹಾಗೂ ನೊಂದ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಮತ್ತು ಸರ್ಕಾರವು ಉದ್ಯೋಗ ಮತ್ತು ಪರಿಹಾರ ಕೊಡಬೇಕು. ಹಾಗೂ ಆರೋಪಿಗಳನ್ನು ಕೂಡಲೆ ಬಂಧಿಸಿ ಕಾನೂನಾತ್ಮಕವಾಗಿ ತನಿಖೆ ನಡೆಸಿ, ಈ ಕೃತ್ಯವನ್ನು ಮಾಡಿದವರಿಗೆ ಸಂಪೂರ್ಣ ವಿಚಾರಣೆ ನಡೆಸಿ ಆದಷ್ಟು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಒತ್ತಾಯ ಮಾಡುತ್ತೇವೆ |
    1
    ರಾಯಚೂರು ಜಿಲ್ಲೆಯ ದಲಿತ
ಮುಖಂಡ ಭೂಮಾನಂದನ ಕೊಲೆ ಮತ್ತು ಅಶ್ವಿನಿಅತ್ಯಾಚಾರ ಕೊಲೆ ಖಂಡಿಸಿ ನಗರದಲ್ಲಿ ಪ್ರತಿಭಟನೆ 
ಬಳ್ಳಾರಿ / ಕಂಪ್ಲಿ : ರಾಯಚೂರು ಜಿಲ್ಲೆಯ ದಲಿತ
ಮುಖಂಡ ಭೂಮಾನಂದನ ಕೊಲೆ ಮತ್ತು ಅಶ್ವಿನಿ
ಅತ್ಯಾಚಾರ ಕೊಲೆ ಖಂಡಿಸಿ, ಸಮಾನ ಮನಸ್ಕರ
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು
ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಕಂದಾಯ
ಅಧಿಕಾರಿ ಸುರೇಶ್‌ಗೆ ಮನವಿ ಪತ್ರ ಸಲ್ಲಿಸುವ ಮೂಲಕ
ಸರ್ಕಾರಕ್ಕೆ ರವಾನಿಸಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ
ಸುಂಕೇಶ್ವರಹಾಳ ಗ್ರಾಮದ ಯುವಕ ಭೂಮಾನಂದನ
ಕೊಲೆ ಮತ್ತು ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ
ಯುವತಿ ಅಶ್ವಿನಿ ಅತ್ಯಾಚಾರ ಮತ್ತು ಕೊಲೆಯನ್ನು
ತೀವ್ರವಾಗಿ ಖಂಡಿಸಿದ್ದು ದಿನೇ ದಿನೇ ದಲಿತರ ಮೇಲೆ
ದೌರ್ಜನ್ಯಗಳು, ಕೊಲೆಗಳು, ಅತ್ಯಾಚಾರಗಳು
ಸಂಭವಿಸುತ್ತಿದ್ದು ಇದಕ್ಕೆ ನೇರ ಸರ್ಕಾರವೇ ಹೊಣೆ ಹಾಗೂ
ನೊಂದ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಮತ್ತು
ಸರ್ಕಾರವು ಉದ್ಯೋಗ ಮತ್ತು ಪರಿಹಾರ ಕೊಡಬೇಕು.
ಹಾಗೂ ಆರೋಪಿಗಳನ್ನು ಕೂಡಲೆ ಬಂಧಿಸಿ
ಕಾನೂನಾತ್ಮಕವಾಗಿ ತನಿಖೆ ನಡೆಸಿ, ಈ ಕೃತ್ಯವನ್ನು
ಮಾಡಿದವರಿಗೆ ಸಂಪೂರ್ಣ ವಿಚಾರಣೆ ನಡೆಸಿ ಆದಷ್ಟು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಒತ್ತಾಯ ಮಾಡುತ್ತೇವೆ 
|
    user_Channakeshava Press ಗಡಿ ವಾಣಿ
    Channakeshava Press ಗಡಿ ವಾಣಿ
    ಕಂಪ್ಲಿ, ಬಳ್ಳಾರಿ, ಕರ್ನಾಟಕ•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.