logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆ ಚಿತ್ರದುರ್ಗದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನಲ್ಲಿ ವಿಶೇಷ ಪೂಜೆ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆ ಚಿತ್ರದುರ್ಗದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆ ವಿಶೇಷ ಪೂಜೆ ಹಮ್ಮಿಕೊಂಡಿದ್ದು ಈ ಹಿನ್ನೆಲೆ ನೀಲಕಂಠೇಶ್ವರ ಸ್ವಾಮಿ ದೇವರಿಗೆ ವಿಶೇಷವಾಗಿ ರೇಷ್ಮೆ ವಸ್ತ್ರಗಳಿಂದ ಮಹಾರಾಜರ ಅಲಂಕಾರ ಮಾಡಿದ್ದು ವಿವಿಧ ಬಗೆಯ ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಿದ್ದು ಮಹಾ ಮಂಗಳಾರತಿ ಬೆಳಗಿ ಪೂಜೆ ಸಲ್ಲಿಸಿದ್ದು ಸಂಸದ ಗೋವಿಂದ ಕಾರಜೋಳ ಹಾಗೂ ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಅವರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದು ಇದೇ ಸಂದರ್ಭದಲ್ಲಿ ಸಿಹಿಯನ್ನ ಸಹ ವಿತರಣೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರ ಪರ ಘೋಷಣೆಗಳನ್ನ ಕೂಗಿ ಹುಟ್ಟುಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ‌ ಟಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಬಿಜೆಪಿಯ ಅನೇಕ ಮುಖಂಡರು ಮತ್ತು ಮಹಿಳಾ ಕಾರ್ಯಕರ್ತರು ಹಾಜರಿದ್ದರು

3 hrs ago
user_Vinay P palekar
Vinay P palekar
ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
3 hrs ago

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆ ಚಿತ್ರದುರ್ಗದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನಲ್ಲಿ ವಿಶೇಷ ಪೂಜೆ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆ ಚಿತ್ರದುರ್ಗದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆ ವಿಶೇಷ ಪೂಜೆ ಹಮ್ಮಿಕೊಂಡಿದ್ದು ಈ ಹಿನ್ನೆಲೆ ನೀಲಕಂಠೇಶ್ವರ ಸ್ವಾಮಿ ದೇವರಿಗೆ ವಿಶೇಷವಾಗಿ ರೇಷ್ಮೆ ವಸ್ತ್ರಗಳಿಂದ ಮಹಾರಾಜರ ಅಲಂಕಾರ ಮಾಡಿದ್ದು ವಿವಿಧ ಬಗೆಯ ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಿದ್ದು ಮಹಾ ಮಂಗಳಾರತಿ ಬೆಳಗಿ ಪೂಜೆ ಸಲ್ಲಿಸಿದ್ದು ಸಂಸದ ಗೋವಿಂದ ಕಾರಜೋಳ ಹಾಗೂ ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಅವರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದು ಇದೇ ಸಂದರ್ಭದಲ್ಲಿ ಸಿಹಿಯನ್ನ ಸಹ ವಿತರಣೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರ ಪರ ಘೋಷಣೆಗಳನ್ನ ಕೂಗಿ ಹುಟ್ಟುಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ‌ ಟಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಬಿಜೆಪಿಯ ಅನೇಕ ಮುಖಂಡರು ಮತ್ತು ಮಹಿಳಾ ಕಾರ್ಯಕರ್ತರು ಹಾಜರಿದ್ದರು

More news from Karnataka and nearby areas
  • ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಆಚರಣೆ ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಘೋಷಿಸಿ ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಆಚರಣೆ ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಘೋಷಿಸಿ ತರಕಾರಿ ಮಾರುವ ಮೂಲಕ ವಿನೂತ ಪ್ರತಿಭಟನೆ ಕಳೆದ 12 ವರ್ಷಗಳ ಹಿಂದೆ ಪ್ರಧಾನಿ ಮೋದಿ ಘೋಷಿಸಿದಂತೆ 2 ಕೋಟಿ ಉದ್ಯೋಗ ಸೃಷ್ಠಿಸದೆ ಯುವಕರಿಗೆ ಅನ್ಯಾಯ ಮಾಡಿದ್ದು, ಅವರ ಹುಟ್ಟು ಹಬ್ಬವಾದ ಇಂದಿನ ದಿನವನ್ನು, ನಿರುದ್ಯೋಗ ದಿನವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ಡಿಸಿ ಕಚೇರಿ ಬಳಿ ತರಕಾರಿ ಮಾರುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.ಮೋದಿ‌ ನೇತೃತ್ವದ ಕೇಂದ್ರ ಸರ್ಕಾರ ಪದವೀಧರ ಯುವಕರ ಮೇಲೆ ನಿರುದ್ಯೋಗ ಎಂಬ ಗಧಾ ಪ್ರಹಾರ ನಡೆಸುತ್ತಿದೆ. ಉದ್ಯೋಗ್ಯವಿಲ್ಲದೆ ಯುವಕರು ಅತಂಕಕ್ಕೀಡಾಗಿದ್ದಾರೆ ಎಂದು ಆರೋಪಿಸಿ, ಸಾರ್ವಜನಿಕರಿಗೆ ತರಕಾರಿಯನ್ನು ಮಾರಾಟ ಮಾಡಿದರು.
    1
    ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಆಚರಣೆ

ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಘೋಷಿಸಿ
ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನಿಂದ ಆಚರಣೆ
ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಘೋಷಿಸಿ
ತರಕಾರಿ ಮಾರುವ ಮೂಲಕ ವಿನೂತ ಪ್ರತಿಭಟನೆ
ಕಳೆದ 12 ವರ್ಷಗಳ ಹಿಂದೆ ಪ್ರಧಾನಿ ಮೋದಿ ಘೋಷಿಸಿದಂತೆ 2 ಕೋಟಿ ಉದ್ಯೋಗ ಸೃಷ್ಠಿಸದೆ ಯುವಕರಿಗೆ ಅನ್ಯಾಯ ಮಾಡಿದ್ದು, ಅವರ ಹುಟ್ಟು ಹಬ್ಬವಾದ ಇಂದಿನ ದಿನವನ್ನು, ನಿರುದ್ಯೋಗ ದಿನವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್  ಡಿಸಿ ಕಚೇರಿ ಬಳಿ ತರಕಾರಿ ಮಾರುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.ಮೋದಿ‌ ನೇತೃತ್ವದ ಕೇಂದ್ರ ಸರ್ಕಾರ ಪದವೀಧರ ಯುವಕರ ಮೇಲೆ ನಿರುದ್ಯೋಗ ಎಂಬ ಗಧಾ ಪ್ರಹಾರ ನಡೆಸುತ್ತಿದೆ. ಉದ್ಯೋಗ್ಯವಿಲ್ಲದೆ ಯುವಕರು ಅತಂಕಕ್ಕೀಡಾಗಿದ್ದಾರೆ ಎಂದು ಆರೋಪಿಸಿ, ಸಾರ್ವಜನಿಕರಿಗೆ ತರಕಾರಿಯನ್ನು ಮಾರಾಟ ಮಾಡಿದರು.
    user_Nagesh BR Durgavara
    Nagesh BR Durgavara
    Photographer Chitradurga, Karnataka•
    1 hr ago
  • ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ ಮುರಿತು ಶಶಿ ಹುಲಿಕುಂಟೆ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ ಮುರಿತು ಶಶಿ ಹುಲಿಕುಂಟೆ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಪದ್ಧತಿಯನ್ನು (OPS) ಶೀಘ್ರದಲ್ಲೇ ಆರನೇ ಗ್ಯಾರಂಟಿಯಾಗಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ತಿಳಿಸಿದ್ದಾರೆ. ​ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಸಂವಾದ ನಡೆಸಿ ತದ ನಂತರ ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, "ಹಿಂದೆ ಎನ್‌ಪಿಎಸ್ ಜಾರಿಗೆ ತಂದವರೇ ಇಂದು ವಾಪಸ್‌ಗೆ ಒತ್ತಾಯಿಸುತ್ತಿರುವುದು ಮೊಸಳೆ ಕಣ್ಣೀರು. ಕಾಂಗ್ರೆಸ್ ಪಕ್ಷವು ಎಲ್ಲರನ್ನೂ ಸಮಾನತೆಯಿಂದ ಕಾಣುವ ಅಭಿವೃದ್ಧಿಪರ ಪಕ್ಷವಾಗಿದೆ. ನಾನು ಕೇವಲ ಚುನಾವಣೆಗೆ ಸೀಮಿತವಾಗದೆ, ಈ ಭಾಗದ ಪದವೀಧರರ ಸಂಘಟನೆ, ಉದ್ಯೋಗ, ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಮೂಲಕ ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ" ಎಂದರು. ರಾಜ್ಯ ಸರ್ಕಾರವು ಯುವಕರಿಗೆ ಉದ್ಯೋಗ ಕಲ್ಪಿಸಲು 75,000 ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಸಿದ್ದು, ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ಆದೇಶಿಸಿದೆ. ಪೊಲೀಸ್, ಅರಣ್ಯ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು. "ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 1,20,000 ಹಾಗೂ ಹೊಳಲ್ಕೆರೆಯಲ್ಲಿ 4,300 ಮತದಾರರಿದ್ದಾರೆ. ಈ ಹಿಂದೆ ಗೆದ್ದ ಬಿಜೆಪಿ ಶಾಸಕರು ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂಬ ಆಕ್ರೋಶ ಮತದಾರರಲ್ಲಿದೆ. ನಾನು ಗೆದ್ದು ಬಂದರೆ ಪ್ರತಿ ತಿಂಗಳು ಕ್ಷೇತ್ರಕ್ಕೆ ಭೇಟಿ ನೀಡಿ ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ​ಪಧವಿಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎ, ಜಯಪ್ಪ ತಾಲೂಕು ಮುಖಂಡರಾದ ನಾಗರಾಜಯ್ಯ, ರವಿಕುಮಾರ್, ಶಿವಕುಮಾರ್, ಚಂದ್ರಪ್ಪ, ಚಿತ್ತಪ್ಪ, ನಿವೃತ್ತ ನೌಕರರ ಸಂಘದ ಹೇಮಂತ್ ಗೌಡ, ವೆಂಕಟೇಶ್, ನೌಕರ ಸಂಘದ ಕಾರ್ಯದರ್ಶಿ ಶ್ರೀಧರ್, ಮೃತ್ಯುಂಜಯಪ್ಪ, ಮದ್ದೇರು ಶಿವಕುಮಾರ್, ಮಲ್ಲೇಶಪ್ಪ, ಉಪ್ಪರಿಗೇನಹಳ್ಳಿ ಹೇಮಂತ್ ಸೇರಿದಂತೆ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.
    1
    ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ ಮುರಿತು ಶಶಿ ಹುಲಿಕುಂಟೆ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ‘ಒಪಿಎಸ್’ ಜಾರಿ ಮುರಿತು ಶಶಿ ಹುಲಿಕುಂಟೆ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಪದ್ಧತಿಯನ್ನು (OPS) ಶೀಘ್ರದಲ್ಲೇ ಆರನೇ ಗ್ಯಾರಂಟಿಯಾಗಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ತಿಳಿಸಿದ್ದಾರೆ. ​ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಸಂವಾದ ನಡೆಸಿ ತದ ನಂತರ ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, "ಹಿಂದೆ ಎನ್‌ಪಿಎಸ್ ಜಾರಿಗೆ ತಂದವರೇ ಇಂದು ವಾಪಸ್‌ಗೆ ಒತ್ತಾಯಿಸುತ್ತಿರುವುದು ಮೊಸಳೆ ಕಣ್ಣೀರು. ಕಾಂಗ್ರೆಸ್ ಪಕ್ಷವು ಎಲ್ಲರನ್ನೂ ಸಮಾನತೆಯಿಂದ ಕಾಣುವ ಅಭಿವೃದ್ಧಿಪರ ಪಕ್ಷವಾಗಿದೆ. ನಾನು ಕೇವಲ ಚುನಾವಣೆಗೆ ಸೀಮಿತವಾಗದೆ, ಈ ಭಾಗದ ಪದವೀಧರರ ಸಂಘಟನೆ, ಉದ್ಯೋಗ,  ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಮೂಲಕ ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ" ಎಂದರು. ರಾಜ್ಯ ಸರ್ಕಾರವು ಯುವಕರಿಗೆ ಉದ್ಯೋಗ ಕಲ್ಪಿಸಲು 75,000 ಹುದ್ದೆಗಳ ಭರ್ತಿಗೆ ಸಿದ್ಧತೆ ನಡೆಸಿದ್ದು, ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ಆದೇಶಿಸಿದೆ. ಪೊಲೀಸ್, ಅರಣ್ಯ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು. "ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 1,20,000 ಹಾಗೂ ಹೊಳಲ್ಕೆರೆಯಲ್ಲಿ 4,300 ಮತದಾರರಿದ್ದಾರೆ. ಈ ಹಿಂದೆ ಗೆದ್ದ ಬಿಜೆಪಿ ಶಾಸಕರು ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂಬ ಆಕ್ರೋಶ ಮತದಾರರಲ್ಲಿದೆ. ನಾನು ಗೆದ್ದು ಬಂದರೆ ಪ್ರತಿ ತಿಂಗಳು ಕ್ಷೇತ್ರಕ್ಕೆ ಭೇಟಿ ನೀಡಿ ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ​ಪಧವಿಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎ, ಜಯಪ್ಪ ತಾಲೂಕು ಮುಖಂಡರಾದ ನಾಗರಾಜಯ್ಯ, ರವಿಕುಮಾರ್, ಶಿವಕುಮಾರ್, ಚಂದ್ರಪ್ಪ, ಚಿತ್ತಪ್ಪ, ನಿವೃತ್ತ ನೌಕರರ ಸಂಘದ ಹೇಮಂತ್ ಗೌಡ, ವೆಂಕಟೇಶ್, ನೌಕರ ಸಂಘದ ಕಾರ್ಯದರ್ಶಿ ಶ್ರೀಧರ್, ಮೃತ್ಯುಂಜಯಪ್ಪ, ಮದ್ದೇರು ಶಿವಕುಮಾರ್, ಮಲ್ಲೇಶಪ್ಪ, ಉಪ್ಪರಿಗೇನಹಳ್ಳಿ ಹೇಮಂತ್ ಸೇರಿದಂತೆ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ಸರ್ವಧರ್ಮ ಸಮಾನತೆ ಸಾರುವ ದೇವನು ಒಬ್ಬನೇ ನಾಮ ಹಲವು ಸರ್ವ ಧರ್ಮ ಸಮಾನತೆ ಸಾರುವ. ಚಳ್ಳಕೆರೆ ನಗರದ ಮಹದೇವಿಯ ರಸ್ತೆಯ ಇಬ್ರಾಹಿಂಪುರ ಓಂ ಗಣಪತಿ ಯುವಕ ಬಳಗದ ವತಿಯಿಂದ ದೇವನು ಒಬ್ಬನೇ ನಾಮವು ಹಲವು ಎನ್ನುವ ವಿನಾಯಕನ ಪ್ರತಿಷ್ಠಾಪನೆ ಮಾಡಲಾಗಿತ್ತು.
    1
    ಸರ್ವಧರ್ಮ ಸಮಾನತೆ ಸಾರುವ ದೇವನು ಒಬ್ಬನೇ ನಾಮ
ಹಲವು ಸರ್ವ ಧರ್ಮ ಸಮಾನತೆ ಸಾರುವ.
ಚಳ್ಳಕೆರೆ ನಗರದ ಮಹದೇವಿಯ ರಸ್ತೆಯ ಇಬ್ರಾಹಿಂಪುರ  ಓಂ ಗಣಪತಿ ಯುವಕ ಬಳಗದ ವತಿಯಿಂದ ದೇವನು ಒಬ್ಬನೇ ನಾಮವು ಹಲವು ಎನ್ನುವ ವಿನಾಯಕನ ಪ್ರತಿಷ್ಠಾಪನೆ ಮಾಡಲಾಗಿತ್ತು.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    12 hrs ago
  • ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ - ತಾಲೂಕಿನ ಗುಡೇಕೋಟೆ *ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಆರೋಗ್ಯ ತಪಾಸಣೆಗೈದರು , ಹಾಗೂ ತಪಾಸಣೆಗೆೊಳಗಾದರು. ಅವರು ಜನಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗಿಯಾಗಿದ ನಂತರ , ಆರೋಗ್ಯ ಸಿಬ್ಬಂದಿಯವರಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮತ್ತು ನೆರೆದಿದ್ದ ಹಲವರ ಆಪೇಕ್ಷೆಯ ಮೇರೆಗೆ , ಶಾಸಕರು ಹಲವರ ಕಣ್ಣು ಪರೀಕ್ಷೆ ಮಾಡಿ ಚಿಕಿತ್ಸೆ ಶಿಪಾರಸ್ಸು ಮಾಡಿದರು. ನಂತರ ಅವರು ಸಿ ವಿಟಮಿನ್ ಮಾತ್ರೆ ಸೇವನೆಯ ಮಹತ್ವವನ್ನು , ನೆರೆದವರಲ್ಲಿ ಜಾಗ್ರತೆ ಮೂಡಿಸಿದರು ಹಾಗೂ ಸ್ವತಃ ಅವರೇ ಮಾತ್ರೆ ಸೇವೆನ ಮಾಡಿ ಪ್ರೋತ್ಸಾಹಿಸಿದರು. ಇದಕ್ಕೂ ಮುನ್ನ ಅವರು ಎಸ್ಡಿ ಎಮ್ಸಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ , ಪ್ರೌಢ ಶಾಲಾ ಪ್ರಾಂಶುಪಾಲರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನಿರ್ಧೇಶನಗಳನ್ನು ನೀಡಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ - ತಾಲೂಕಿನ ಗುಡೇಕೋಟೆ
*ಗುಡೇಕೋಟೆ : ಆರೋಗ್ಯ ತಪಾಸಣೆಗೈದ ಹಾಗೂ ಒಳಗಾದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಆರೋಗ್ಯ ತಪಾಸಣೆಗೈದರು , ಹಾಗೂ ತಪಾಸಣೆಗೆೊಳಗಾದರು. ಅವರು ಜನಸೇವಾ ಆಂದೋಲನ ಕಾರ್ಯಕ್ರಮದಲ್ಲಿ  ಭಾಗಿಯಾಗಿದ ನಂತರ ,  ಆರೋಗ್ಯ ಸಿಬ್ಬಂದಿಯವರಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮತ್ತು ನೆರೆದಿದ್ದ ಹಲವರ ಆಪೇಕ್ಷೆಯ ಮೇರೆಗೆ , ಶಾಸಕರು ಹಲವರ ಕಣ್ಣು ಪರೀಕ್ಷೆ ಮಾಡಿ ಚಿಕಿತ್ಸೆ ಶಿಪಾರಸ್ಸು ಮಾಡಿದರು. ನಂತರ ಅವರು ಸಿ ವಿಟಮಿನ್ ಮಾತ್ರೆ ಸೇವನೆಯ ಮಹತ್ವವನ್ನು , ನೆರೆದವರಲ್ಲಿ ಜಾಗ್ರತೆ ಮೂಡಿಸಿದರು ಹಾಗೂ ಸ್ವತಃ ಅವರೇ ಮಾತ್ರೆ ಸೇವೆನ ಮಾಡಿ ಪ್ರೋತ್ಸಾಹಿಸಿದರು. ಇದಕ್ಕೂ ಮುನ್ನ ಅವರು ಎಸ್ಡಿ ಎಮ್ಸಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ , ಪ್ರೌಢ ಶಾಲಾ ಪ್ರಾಂಶುಪಾಲರಿಗೆ
ಅಗತ್ಯ ಸಲಹೆ ಸೂಚನೆಗಳನ್ನು ನಿರ್ಧೇಶನಗಳನ್ನು  ನೀಡಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    1 hr ago
  • ಸಾರ್ವಜನಿಕ ಸ್ಪಂದನೆ ಕುರಿತು ದೂರು: ಪಟ್ಟಣ ಪಂಚಾಯತ್‌ಗೆ ಲೋಕಾಯುಕ್ತ ಭೇಟಿ ಕೂಡ್ಲಿಗಿ: ಪಟ್ಟಣ ಪಂಚಾಯತ್ ಕಚೇರಿಗೆ ಬುದುವಾರ ದಿಢೀರನೆ ವಿಜಯನಗರ–ಬಳ್ಳಾರಿ ವಿಭಾಗದ ಲೋಕಾಯುಕ್ತರು ಡಿವೈಎಸ್ಪಿ ಎಸ್.ಎಸ್.ಬೀಳಗಿ, ಚಿತ್ರದುರ್ಗ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ಚಿತ್ರದುರ್ಗದ ಸಿಪಿಐಗಳಾದ ಬಸವರಾಜ ಪಾಟೀಲ್, ಸುಮಾ ಗೊರೆಬಾಳ ಸೇರಿದಂತೆ ಒಟ್ಟು ೧೬ ಸಿಬ್ಬಂದಿಯು ದಿಢೀರ್ ಆಗಮಿಸಿದ್ದರು. ಕಛೇರಿಗೆ ಸಂಬಂಧಿಸಿದ ಕಡತಗಳನ್ನು ಮುಖ್ಯಾಧಿಕಾರಿ ದಾದಾಪೀರ್ ಮೂಲಕ ಕಚೇರಿಯ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಪಟ್ಟಣ ಪಂಚಾಯತ್ ಕಚೇರಿಯ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಢೀರ್ ಭೇಟಿ ನಂತರ ಮಾಹಿತಿ ಕೇಳಲು, ದಾಖಲೆ ಪರಿಶೀಲಿಸಲು ಮುಂದಾಗಿದ್ದರಿಂದ ಪಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಾಕ್ ನೀಡಿದಂತಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದ ವೇಳೆ ಪಪಂ ಮುಖ್ಯಾಧಿಕಾರಿ ಎಚ್.ದಾದಾಪೀರ್ ಸೇರಿ ನಾನಾ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ದಾಖಲೆ ಪರಿಶೀಲನೆಗೆ ಸಹಕರಿಸಿದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದರು. ನಾನಾ ದೂರು ಆಧರಿಸಿ ಲೋಕಾಯುಕ್ತದಲ್ಲಿ ಸ್ವಯಂ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ, ಕೊಟ್ಟೂರು ಪಪಂ ಕಚೇರಿಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ಬಳ್ಳಾರಿ ಲೋಕಾಯುಕ್ತ ಡಿವೈಎಸ್ಪಿ ಎಸ್.ಎಸ್.ಬೀಳಗಿ ಅವರು ಮಾಹಿತಿ ತಿಳಿಸಿದರು.
    1
    ಸಾರ್ವಜನಿಕ ಸ್ಪಂದನೆ ಕುರಿತು ದೂರು: ಪಟ್ಟಣ ಪಂಚಾಯತ್‌ಗೆ ಲೋಕಾಯುಕ್ತ ಭೇಟಿ
ಕೂಡ್ಲಿಗಿ: ಪಟ್ಟಣ ಪಂಚಾಯತ್ ಕಚೇರಿಗೆ ಬುದುವಾರ ದಿಢೀರನೆ ವಿಜಯನಗರ–ಬಳ್ಳಾರಿ ವಿಭಾಗದ ಲೋಕಾಯುಕ್ತರು ಡಿವೈಎಸ್ಪಿ ಎಸ್.ಎಸ್.ಬೀಳಗಿ, ಚಿತ್ರದುರ್ಗ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ಚಿತ್ರದುರ್ಗದ ಸಿಪಿಐಗಳಾದ ಬಸವರಾಜ ಪಾಟೀಲ್, ಸುಮಾ ಗೊರೆಬಾಳ ಸೇರಿದಂತೆ ಒಟ್ಟು ೧೬ ಸಿಬ್ಬಂದಿಯು ದಿಢೀರ್ ಆಗಮಿಸಿದ್ದರು.
ಕಛೇರಿಗೆ ಸಂಬಂಧಿಸಿದ ಕಡತಗಳನ್ನು ಮುಖ್ಯಾಧಿಕಾರಿ ದಾದಾಪೀರ್ ಮೂಲಕ ಕಚೇರಿಯ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.
ಪಟ್ಟಣ ಪಂಚಾಯತ್ ಕಚೇರಿಯ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ. 
ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಢೀರ್ ಭೇಟಿ ನಂತರ ಮಾಹಿತಿ ಕೇಳಲು, ದಾಖಲೆ ಪರಿಶೀಲಿಸಲು ಮುಂದಾಗಿದ್ದರಿಂದ ಪಪಂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಾಕ್ ನೀಡಿದಂತಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದ ವೇಳೆ ಪಪಂ ಮುಖ್ಯಾಧಿಕಾರಿ ಎಚ್.ದಾದಾಪೀರ್ ಸೇರಿ ನಾನಾ ವಿಭಾಗದ  ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದು, ದಾಖಲೆ ಪರಿಶೀಲನೆಗೆ ಸಹಕರಿಸಿದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದರು. ನಾನಾ ದೂರು ಆಧರಿಸಿ ಲೋಕಾಯುಕ್ತದಲ್ಲಿ ಸ್ವಯಂ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ, ಕೊಟ್ಟೂರು ಪಪಂ ಕಚೇರಿಯಲ್ಲೂ ಸಹ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ಬಳ್ಳಾರಿ ಲೋಕಾಯುಕ್ತ ಡಿವೈಎಸ್ಪಿ ಎಸ್.ಎಸ್.ಬೀಳಗಿ ಅವರು ಮಾಹಿತಿ ತಿಳಿಸಿದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    23 hrs ago
  • ಭದ್ರಾ ಡ್ಯಾಂನಿಂದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಇಂದಿನಿಂದ 15 ದಿನಗಳ ಕಾಲ ನೀರು ಬಿಡುಗಡೆ: ರೈತರ ಹೋರಾಟದ ಬೆನ್ನಲ್ಲೇ ಸರ್ಕಾರದ ಮಹತ್ವದ ನಿರ್ಧಾರ ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಶಾಂತಿಸಾಗರ ಹಾಗೂ ಮಲೆಬೆನ್ನೂರು ಭಾಗಗಳಲ್ಲಿ ನೀರಿಗಾಗಿ ರೈತರು ಮತ್ತು ಸಾರ್ವಜನಿಕರು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ಈ ಕುರಿತು ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಜಲಸಂಪನ್ಮೂಲ ಸಚಿವರು ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಮಧು ಬಂಗಾರಪ್ಪ ಹಾಗೂ ಉನ್ನತಾಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಆದೇಶದ ಪ್ರಮುಖ ಮುಖ್ಯಾಂಶಗಳು: ಸಮಯಾವಧಿ: ಸೆಪ್ಟೆಂಬರ್ 17ರ ಮಧ್ಯರಾತ್ರಿ 12.00 ಗಂಟೆಯಿಂದ ಅಕ್ಟೋಬರ್ 02, 2026ರವರೆಗೆ ಒಟ್ಟು 15 ದಿನಗಳ ಕಾಲ ನೀರು ಹರಿಸಲಾಗುತ್ತದೆ. ಉದ್ದೇಶ: ಜನರ ಹಾಗೂ ಜಾನುವಾರುಗಳ ಕುಡಿಯುವ ನೀರು, ಅಂತರ್ಜಲ ವೃದ್ಧಿ ಮತ್ತು ಕೆರೆಗಳನ್ನು ತುಂಬಿಸಲು ಆದ್ಯತೆ ನೀಡಲಾಗಿದೆ. ಬೆಳೆಗಳಿಗೆ ಬಳಸುವಂತಿಲ್ಲ: ಈ ನೀರನ್ನು ಕೇವಲ ಕುಡಿಯುವ ಹಾಗೂ ಅಗತ್ಯ ಬಳಕೆಗೆ ಮಾತ್ರ ಮೀಸಲಿಡಲಾಗಿದ್ದು, ಬೆಳೆಗಳಿಗೆ ಅಥವಾ ನೀರಾವರಿಗೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಕ್ರಮ ತಡೆ: ಅನಧಿಕೃತವಾಗಿ ನೀರು ಎತ್ತುವುದು, ಈಜಾಡುವುದು, ದನಕರಗಳನ್ನು ತೊಳೆಯುವುದು ಹಾಗೂ ಬಟ್ಟೆ ಒಳೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮುನ್ನೆಚ್ಚರಿಕೆ: ಡಿಸೆಂಬರ್ 2026ರವರೆಗೆ ಕುಡಿಯುವ ನೀರಿಗೆ ಕೊರತೆಯಾಗದಂತೆ ಸದ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನೀರಾವರಿ ಇಲಾಖೆಯ ನಿಯಮಾವಳಿಗಳಿಗೆ ರೈತರು ಮತ್ತು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಕೋರಿದ್ದಾರೆ.
    1
    ಭದ್ರಾ ಡ್ಯಾಂನಿಂದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ಇಂದಿನಿಂದ 15 ದಿನಗಳ ಕಾಲ ನೀರು ಬಿಡುಗಡೆ: ರೈತರ ಹೋರಾಟದ ಬೆನ್ನಲ್ಲೇ ಸರ್ಕಾರದ ಮಹತ್ವದ ನಿರ್ಧಾರ


ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಶಾಂತಿಸಾಗರ ಹಾಗೂ ಮಲೆಬೆನ್ನೂರು ಭಾಗಗಳಲ್ಲಿ ನೀರಿಗಾಗಿ ರೈತರು ಮತ್ತು ಸಾರ್ವಜನಿಕರು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ಈ ಕುರಿತು ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಜಲಸಂಪನ್ಮೂಲ ಸಚಿವರು ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಮಧು ಬಂಗಾರಪ್ಪ ಹಾಗೂ ಉನ್ನತಾಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ.
ಆದೇಶದ ಪ್ರಮುಖ ಮುಖ್ಯಾಂಶಗಳು:
ಸಮಯಾವಧಿ: ಸೆಪ್ಟೆಂಬರ್ 17ರ ಮಧ್ಯರಾತ್ರಿ 12.00 ಗಂಟೆಯಿಂದ ಅಕ್ಟೋಬರ್ 02, 2026ರವರೆಗೆ ಒಟ್ಟು 15 ದಿನಗಳ ಕಾಲ ನೀರು ಹರಿಸಲಾಗುತ್ತದೆ.
ಉದ್ದೇಶ: ಜನರ ಹಾಗೂ ಜಾನುವಾರುಗಳ ಕುಡಿಯುವ ನೀರು, ಅಂತರ್ಜಲ ವೃದ್ಧಿ ಮತ್ತು ಕೆರೆಗಳನ್ನು ತುಂಬಿಸಲು ಆದ್ಯತೆ ನೀಡಲಾಗಿದೆ.
ಬೆಳೆಗಳಿಗೆ ಬಳಸುವಂತಿಲ್ಲ: ಈ ನೀರನ್ನು ಕೇವಲ ಕುಡಿಯುವ ಹಾಗೂ ಅಗತ್ಯ ಬಳಕೆಗೆ ಮಾತ್ರ ಮೀಸಲಿಡಲಾಗಿದ್ದು, ಬೆಳೆಗಳಿಗೆ ಅಥವಾ ನೀರಾವರಿಗೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅಕ್ರಮ ತಡೆ: ಅನಧಿಕೃತವಾಗಿ ನೀರು ಎತ್ತುವುದು, ಈಜಾಡುವುದು, ದನಕರಗಳನ್ನು ತೊಳೆಯುವುದು ಹಾಗೂ ಬಟ್ಟೆ ಒಳೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಮುನ್ನೆಚ್ಚರಿಕೆ: ಡಿಸೆಂಬರ್ 2026ರವರೆಗೆ ಕುಡಿಯುವ ನೀರಿಗೆ ಕೊರತೆಯಾಗದಂತೆ ಸದ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ನೀರಾವರಿ ಇಲಾಖೆಯ ನಿಯಮಾವಳಿಗಳಿಗೆ ರೈತರು ಮತ್ತು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಕೋರಿದ್ದಾರೆ.
    user_ಪ್ರವೀಣ್ ಅಧ್ಯಕ್ಷ NAYAKA
    ಪ್ರವೀಣ್ ಅಧ್ಯಕ್ಷ NAYAKA
    Local News Reporter Bhadravati, Shivamogga•
    2 hrs ago
  • ದಾವಣಗೆರೆ : ರಾಜ್ಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದ ಜಿ.ಎಂ. ಸಿದ್ದೇಶ್ವರ ದಾವಣಗೆರೆ: ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮುಂದಿನ ರಾಜಕೀಯ ನಡೆ ಹಾಗೂ ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಸಂಘಟನೆಯ ವಿಚಾರಗಳ ಬಗ್ಗೆಯೂ ಅವರು ಮಾತನಾಡಿದರು.ಇದೇ ವೇಳೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ತಮ್ಮ ನಡುವಿನ ರಾಜಕೀಯ ಸಂಬಂಧ, ದಾವಣಗೆರೆ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಸೇರಿದಂತೆ ಹಲವು ವಿಚಾರಗಳು ಸುದ್ದಿಗೋಷ್ಠಿಯಲ್ಲಿ ಚರ್ಚೆಗೆ ಬಂದವು. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಈ ಹೇಳಿಕೆಗಳು ರಾಜ್ಯ ರಾಜಕಾರಣಕ್ಕೆ ಅವರು ಮರಳುವ ಸಾಧ್ಯತೆಗಳ ಕುರಿತು ಚರ್ಚೆಗೆ ಕಾರಣವಾಗಿವೆ.
    1
    ದಾವಣಗೆರೆ : ರಾಜ್ಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದ ಜಿ.ಎಂ. ಸಿದ್ದೇಶ್ವರ
ದಾವಣಗೆರೆ: ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮುಂದಿನ ರಾಜಕೀಯ ನಡೆ ಹಾಗೂ ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಸಂಘಟನೆಯ ವಿಚಾರಗಳ ಬಗ್ಗೆಯೂ ಅವರು ಮಾತನಾಡಿದರು.ಇದೇ ವೇಳೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ತಮ್ಮ ನಡುವಿನ ರಾಜಕೀಯ ಸಂಬಂಧ, ದಾವಣಗೆರೆ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಸೇರಿದಂತೆ ಹಲವು ವಿಚಾರಗಳು ಸುದ್ದಿಗೋಷ್ಠಿಯಲ್ಲಿ ಚರ್ಚೆಗೆ ಬಂದವು.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಈ ಹೇಳಿಕೆಗಳು ರಾಜ್ಯ ರಾಜಕಾರಣಕ್ಕೆ ಅವರು ಮರಳುವ ಸಾಧ್ಯತೆಗಳ ಕುರಿತು ಚರ್ಚೆಗೆ ಕಾರಣವಾಗಿವೆ.
    user_Nandheesh kumar ac
    Nandheesh kumar ac
    ಭದ್ರಾವತಿ, ಶಿವಮೊಗ್ಗ, ಕರ್ನಾಟಕ•
    2 hrs ago
  • ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೋದಿ ಹುಟ್ಟುದಿನವನ್ನ ಜಿಲ್ಲಾ ಕಾಂಗ್ರೆಸ್ ವತಿಯಿಂದ ತರಕಾರಿ ಮಾರುವ ಮೂಲಕ ಉಲಕ ನಿರುದ್ಯೋಗ ದಿನವನ್ನಾಗಿ ಆಚರಣೆ ಮಾಡಲಾಯಿತು. ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೋದಿ ಹುಟ್ಟುದಿನವನ್ನ ಜಿಲ್ಲಾ ಕಾಂಗ್ರೆಸ್ ವತಿಯಿಂದ ತರಕಾರಿ ಮಾರುವ ಮೂಲಕ ಉಲಕ ನಿರುದ್ಯೋಗ ದಿನವನ್ನಾಗಿ ಆಚರಣೆ ಮಾಡಲಾಯಿತು. ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನ ಅಧ್ಯಕ್ಷರಾದ ಕಾರೇಹಳ್ಳಿ ಉಲ್ಲಾಸ್ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಆಚರಿಸಿದ್ದು ವಿಶೇಷವಾಗಿ ತರಕಾರಿ ಮಾರುವ ಮೂಲಕ ವಿನೂತ ಪ್ರತಿಭಟನೆ ನಡೆಸಿದರು.‌ ಕಳೆದ 12 ವರ್ಷಗಳ ಹಿಂದೆ ಪ್ರಧಾನಿ ಮೋದಿ ಘೋಷಿಸಿದಂತೆ 2 ಕೋಟಿ ಉದ್ಯೋಗ ಸೃಷ್ಠಿಸದೆ ಯುವಕರಿಗೆ ಅನ್ಯಾಯ ಮಾಡಿದ್ದು, ಅವರ ಹುಟ್ಟು ಹಬ್ಬವಾದ ಇಂದಿನ ದಿನವನ್ನು, ನಿರುದ್ಯೋಗ ದಿನವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ಡಿಸಿ ಕಚೇರಿ ಬಳಿ ತರಕಾರಿ ಮಾರುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಮೋದಿ‌ ನೇತೃತ್ವದ ಕೇಂದ್ರ ಸರ್ಕಾರ ಪದವೀಧರ ಯುವಕರ ಮೇಲೆ ನಿರುದ್ಯೋಗ ಎಂಬ ಗಧಾ ಪ್ರಹಾರ ನಡೆಸುತ್ತಿದೆ. ಉದ್ಯೋಗ್ಯವಿಲ್ಲದೆ ಯುವಕರು ಅತಂಕಕ್ಕೀಡಾಗಿದ್ದಾರೆ ಎಂದು ಆರೋಪಿಸಿ, ಸಾರ್ವಜನಿಕರಿಗೆ ತರಕಾರಿಯನ್ನು ಮಾರಾಟ ಮಾಡಿದರು.
    1
    ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ
ಮೋದಿ ಹುಟ್ಟುದಿನವನ್ನ ಜಿಲ್ಲಾ ಕಾಂಗ್ರೆಸ್ ವತಿಯಿಂದ ತರಕಾರಿ ಮಾರುವ ಮೂಲಕ ಉಲಕ ನಿರುದ್ಯೋಗ ದಿನವನ್ನಾಗಿ ಆಚರಣೆ ಮಾಡಲಾಯಿತು.
ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ
ಮೋದಿ ಹುಟ್ಟುದಿನವನ್ನ ಜಿಲ್ಲಾ ಕಾಂಗ್ರೆಸ್ ವತಿಯಿಂದ ತರಕಾರಿ ಮಾರುವ ಮೂಲಕ ಉಲಕ ನಿರುದ್ಯೋಗ ದಿನವನ್ನಾಗಿ ಆಚರಣೆ ಮಾಡಲಾಯಿತು. ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್ ನ ಅಧ್ಯಕ್ಷರಾದ ಕಾರೇಹಳ್ಳಿ ಉಲ್ಲಾಸ್ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಮೋದಿ ಹುಟ್ಟು ದಿನವನ್ನು ನಿರುದ್ಯೋಗಿ ದಿನವನ್ನಾಗಿ ಆಚರಿಸಿದ್ದು ವಿಶೇಷವಾಗಿ
ತರಕಾರಿ ಮಾರುವ ಮೂಲಕ ವಿನೂತ ಪ್ರತಿಭಟನೆ ನಡೆಸಿದರು.‌ ಕಳೆದ 12 ವರ್ಷಗಳ ಹಿಂದೆ ಪ್ರಧಾನಿ ಮೋದಿ ಘೋಷಿಸಿದಂತೆ 2 ಕೋಟಿ ಉದ್ಯೋಗ ಸೃಷ್ಠಿಸದೆ ಯುವಕರಿಗೆ ಅನ್ಯಾಯ ಮಾಡಿದ್ದು, ಅವರ ಹುಟ್ಟು ಹಬ್ಬವಾದ ಇಂದಿನ ದಿನವನ್ನು, ನಿರುದ್ಯೋಗ ದಿನವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಯೂತ್ ಕಾಂಗ್ರೆಸ್  ಡಿಸಿ ಕಚೇರಿ ಬಳಿ ತರಕಾರಿ ಮಾರುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಮೋದಿ‌ ನೇತೃತ್ವದ ಕೇಂದ್ರ ಸರ್ಕಾರ ಪದವೀಧರ ಯುವಕರ ಮೇಲೆ ನಿರುದ್ಯೋಗ ಎಂಬ ಗಧಾ ಪ್ರಹಾರ ನಡೆಸುತ್ತಿದೆ. ಉದ್ಯೋಗ್ಯವಿಲ್ಲದೆ ಯುವಕರು ಅತಂಕಕ್ಕೀಡಾಗಿದ್ದಾರೆ ಎಂದು ಆರೋಪಿಸಿ, ಸಾರ್ವಜನಿಕರಿಗೆ ತರಕಾರಿಯನ್ನು ಮಾರಾಟ ಮಾಡಿದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.