logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ದಸೂಡಿ ಮಜುರೆ ಗಿಲ್ಲ್ಯಾನಾಯಕನ ತಾಂಡದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಗೌತಮ್ ದೇವಸ್ಥಾನದ ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿ ರಾಜನಾಯಕ ಅವರ ಪುತ್ರ ಗೌತಮ್ ತನ್ನ ಅಣ್ಣ ಮತ್ತು ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದ. ಕೆರೆಯಲ್ಲಿದ್ದ ತೆಪ್ಪವನ್ನು ಹತ್ತಿ ಸಂಭ್ರಮಿಸುವಾಗ, ಆ ತೆಪ್ಪ ಪಲ್ಟಿಯಾಗಿದೆ. ಜೊತೆಯಲ್ಲಿದ್ದವರು ಪ್ರಾಣ ಉಳಿಸಿಕೊಳ್ಳಲು ದಡ ಸೇರಿದ್ದಾರೆ. ಆದರೆ, ಈಜಲು ಬಾರದ ಗೌತಮ್ ನೀರಿನ ಆಳಕ್ಕೆ ಸಿಲುಕಿ ದುರಂತ ಅಂತ್ಯ ಕಂಡಿದ್ದಾನೆ. ನಿನ್ನೆ ರಾತ್ರಿಯಿಡೀ ಮಗನಿಗಾಗಿ ಕಾಯುತ್ತಿದ್ದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂದು ಮುಂಜಾನೆ ಅದೇ ಕೆರೆಯಲ್ಲಿ ಗೌತಮ್‌ನ ಮೃತದೇಹ ಪತ್ತೆಯಾಗಿದೆ. ಈ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. "ಕಾಲೇಜಿಗೆ ಹೋಗಿ ಬರುತ್ತೇನೆ" ಎಂದು ಹೇಳಿ ಹೋಗಿದ್ದ ಮಗ ಶವವಾಗಿ ಮನೆಗೆ ಮರಳಿರುವುದು ಆ ಪೋಷಕರ ಪಾಲಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.

1 hr ago
user_Huliyarkiran
Huliyarkiran
ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
1 hr ago
9777db3f-05ce-4afb-bce5-6283a07939cf

ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ದಸೂಡಿ ಮಜುರೆ ಗಿಲ್ಲ್ಯಾನಾಯಕನ ತಾಂಡದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಗೌತಮ್ ದೇವಸ್ಥಾನದ ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿ ರಾಜನಾಯಕ ಅವರ ಪುತ್ರ ಗೌತಮ್ ತನ್ನ ಅಣ್ಣ ಮತ್ತು ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದ. ಕೆರೆಯಲ್ಲಿದ್ದ ತೆಪ್ಪವನ್ನು ಹತ್ತಿ ಸಂಭ್ರಮಿಸುವಾಗ, ಆ ತೆಪ್ಪ ಪಲ್ಟಿಯಾಗಿದೆ. ಜೊತೆಯಲ್ಲಿದ್ದವರು ಪ್ರಾಣ ಉಳಿಸಿಕೊಳ್ಳಲು ದಡ ಸೇರಿದ್ದಾರೆ. ಆದರೆ, ಈಜಲು ಬಾರದ ಗೌತಮ್ ನೀರಿನ ಆಳಕ್ಕೆ ಸಿಲುಕಿ ದುರಂತ ಅಂತ್ಯ ಕಂಡಿದ್ದಾನೆ. ನಿನ್ನೆ ರಾತ್ರಿಯಿಡೀ ಮಗನಿಗಾಗಿ ಕಾಯುತ್ತಿದ್ದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂದು ಮುಂಜಾನೆ ಅದೇ ಕೆರೆಯಲ್ಲಿ ಗೌತಮ್‌ನ ಮೃತದೇಹ ಪತ್ತೆಯಾಗಿದೆ. ಈ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. "ಕಾಲೇಜಿಗೆ ಹೋಗಿ ಬರುತ್ತೇನೆ" ಎಂದು ಹೇಳಿ ಹೋಗಿದ್ದ ಮಗ ಶವವಾಗಿ ಮನೆಗೆ ಮರಳಿರುವುದು ಆ ಪೋಷಕರ ಪಾಲಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.

More news from ಕರ್ನಾಟಕ and nearby areas
  • ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಾಡು ಸಮೀಪವಿರುವ ಶ್ರೀ ಗುರು ಗೋ ಸೇವಾ ಪರಿವಾರದಲ್ಲಿ ಭಾನುವಾರ, ಮೇ 31, 2026 ರಂದು ಉಚಿತ ಪಂಚಗವ್ಯ ಪ್ರಾಶನ ಮತ್ತು ಅಗ್ನಿಹೋತ್ರ ಪ್ರತ್ಯಕ್ಷತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ಬಂಧುಗಳು ಬೆಳಿಗ್ಗೆ 6:00 ಗಂಟೆಗೆ ಸರಿಯಾಗಿ ಆಗಮಿಸಬೇಕೆಂದು ತಿಳಿಸಲಾಗಿದೆ. ಅಗ್ನಿಹೋತ್ರ ಪ್ರತ್ಯಕ್ಷತೆಯು ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭವಾಗಲಿದ್ದು, ಪಂಚಗವ್ಯ ಪ್ರಾಶನವು ಬೆಳಗ್ಗೆ 6:30ಕ್ಕೆ ನೆರವೇರಲಿದೆ. ಶ್ರೀ ಗುರು ಗೋ ಸೇವಾ ಪರಿವಾರ ಗೋ ಮಂದಿರ, ಯಳನಾಡು ಇಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವಿಶೇಷ ಸೂಚನೆಯ ಪ್ರಕಾರ, ಅಂದು ಅಧಿಕಮಾಸದ ಹುಣ್ಣಿಮೆ ಇರುವುದರಿಂದ ಗೋಪೂಜೆ ಮತ್ತು ಗೋವುಗಳಿಗೆ ಗೋಗ್ರಾಸವನ್ನು ನೀಡಲು ಕೂಡ ಅವಕಾಶವಿರುತ್ತದೆ. ಈ ಮೂಲಕ ಆಸಕ್ತರು ಈ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.
    1
    ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಾಡು ಸಮೀಪವಿರುವ ಶ್ರೀ ಗುರು ಗೋ ಸೇವಾ ಪರಿವಾರದಲ್ಲಿ ಭಾನುವಾರ, ಮೇ 31, 2026 ರಂದು ಉಚಿತ ಪಂಚಗವ್ಯ ಪ್ರಾಶನ ಮತ್ತು ಅಗ್ನಿಹೋತ್ರ ಪ್ರತ್ಯಕ್ಷತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ಬಂಧುಗಳು ಬೆಳಿಗ್ಗೆ 6:00 ಗಂಟೆಗೆ ಸರಿಯಾಗಿ ಆಗಮಿಸಬೇಕೆಂದು ತಿಳಿಸಲಾಗಿದೆ. ಅಗ್ನಿಹೋತ್ರ ಪ್ರತ್ಯಕ್ಷತೆಯು ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭವಾಗಲಿದ್ದು, ಪಂಚಗವ್ಯ ಪ್ರಾಶನವು ಬೆಳಗ್ಗೆ 6:30ಕ್ಕೆ ನೆರವೇರಲಿದೆ. ಶ್ರೀ ಗುರು ಗೋ ಸೇವಾ ಪರಿವಾರ ಗೋ ಮಂದಿರ, ಯಳನಾಡು ಇಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ವಿಶೇಷ ಸೂಚನೆಯ ಪ್ರಕಾರ, ಅಂದು ಅಧಿಕಮಾಸದ ಹುಣ್ಣಿಮೆ ಇರುವುದರಿಂದ ಗೋಪೂಜೆ ಮತ್ತು ಗೋವುಗಳಿಗೆ ಗೋಗ್ರಾಸವನ್ನು ನೀಡಲು ಕೂಡ ಅವಕಾಶವಿರುತ್ತದೆ. ಈ ಮೂಲಕ ಆಸಕ್ತರು ಈ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    15 hrs ago
  • ಚಳ್ಳಕೆರೆ ನಗರದಿಂದ ನಗರಂಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ದೊಡ್ಡ ಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ. ಈ ರಸ್ತೆಗಳಲ್ಲಿ ಪ್ರಯಾಣಿಸುವುದು ವಾಹನ ಸವಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ನಗರದ ಮುಖ್ಯ ರಸ್ತೆಯಿಂದ ನಗರಂಗೆರೆಗೆ ಸಾಗುವ ದಾರಿಯಲ್ಲಿ ಬಿದ್ದಿರುವ ದೊಡ್ಡ ಗುಂಡಿಗಳಿಂದ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ನಗರಕ್ಕೆ ಸಮೀಪದಲ್ಲೇ ಇರುವ ನಗರಂಗೆರೆಗೆ ತೆರಳಲು ಬೈಕ್ ಸವಾರರು ಹಾಗೂ ಆಟೋ ಚಾಲಕರು ರಸ್ತೆಯುದ್ದಕ್ಕೂ ಬಿದ್ದಿರುವ ಗುಂಡಿಗಳಿಂದಾಗಿ 'ಬಿದ್ದು ಎದ್ದು' ಓಡಾಡಬೇಕಾದ ಪರಿಸ್ಥಿತಿ ಬಂದಿದೆ. ಇದೇ ರಸ್ತೆಯಲ್ಲಿ ರೈಲು ಸೇತುವೆ ಇರುವುದರಿಂದ, ಮಳೆ ಬಂದಾಗ ಸೇತುವೆ ಕೆಳಗೆ ನೀರು ತುಂಬಿಕೊಂಡು ವಾಹನ ಸವಾರರಿಗೆ ಇಲ್ಲಿ ಸಂಚರಿಸುವುದು ಇನ್ನಷ್ಟು ಕಷ್ಟಕರವಾಗುತ್ತದೆ. ನಗರಂಗೆರೆ ನಗರ ಸಮೀಪದ ಗ್ರಾಮವಾಗಿರುವುದರಿಂದ ಶಾಲಾ ಮಕ್ಕಳು, ಮಹಿಳೆಯರು ಮತ್ತು ವ್ಯಾಪಾರಸ್ಥರು ನಗರಕ್ಕೆ ಬರಲು ದ್ವಿಚಕ್ರ ವಾಹನ ಮತ್ತು ಆಟೋಗಳನ್ನು ಅವಲಂಬಿಸಿದ್ದಾರೆ. ಆದರೆ ರಸ್ತೆಯು ಸಂಪೂರ್ಣವಾಗಿ ಹಾಳಾಗಿರುವುದರಿಂದ, ಈ ಗುಂಡಿಗಳು ಆಟೋ ಚಾಲಕರಿಗೆ ಹೇಳತೀರದ ತಲೆನೋವನ್ನು ತಂದೊಡ್ಡಿವೆ. ಈ ರಸ್ತೆ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಸಂಚಾರಕ್ಕೆ ಸಂಚುಕಾರವಾಗಿ ಪರಿಣಮಿಸಿವೆ.
    1
    ಚಳ್ಳಕೆರೆ ನಗರದಿಂದ ನಗರಂಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ದೊಡ್ಡ ಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ. ಈ ರಸ್ತೆಗಳಲ್ಲಿ ಪ್ರಯಾಣಿಸುವುದು ವಾಹನ ಸವಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ನಗರದ ಮುಖ್ಯ ರಸ್ತೆಯಿಂದ ನಗರಂಗೆರೆಗೆ ಸಾಗುವ ದಾರಿಯಲ್ಲಿ ಬಿದ್ದಿರುವ ದೊಡ್ಡ ಗುಂಡಿಗಳಿಂದ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ನಗರಕ್ಕೆ ಸಮೀಪದಲ್ಲೇ ಇರುವ ನಗರಂಗೆರೆಗೆ ತೆರಳಲು ಬೈಕ್ ಸವಾರರು ಹಾಗೂ ಆಟೋ ಚಾಲಕರು ರಸ್ತೆಯುದ್ದಕ್ಕೂ ಬಿದ್ದಿರುವ ಗುಂಡಿಗಳಿಂದಾಗಿ 'ಬಿದ್ದು ಎದ್ದು' ಓಡಾಡಬೇಕಾದ ಪರಿಸ್ಥಿತಿ ಬಂದಿದೆ. ಇದೇ ರಸ್ತೆಯಲ್ಲಿ ರೈಲು ಸೇತುವೆ ಇರುವುದರಿಂದ, ಮಳೆ ಬಂದಾಗ ಸೇತುವೆ ಕೆಳಗೆ ನೀರು ತುಂಬಿಕೊಂಡು ವಾಹನ ಸವಾರರಿಗೆ ಇಲ್ಲಿ ಸಂಚರಿಸುವುದು ಇನ್ನಷ್ಟು ಕಷ್ಟಕರವಾಗುತ್ತದೆ.

ನಗರಂಗೆರೆ ನಗರ ಸಮೀಪದ ಗ್ರಾಮವಾಗಿರುವುದರಿಂದ ಶಾಲಾ ಮಕ್ಕಳು, ಮಹಿಳೆಯರು ಮತ್ತು ವ್ಯಾಪಾರಸ್ಥರು ನಗರಕ್ಕೆ ಬರಲು ದ್ವಿಚಕ್ರ ವಾಹನ ಮತ್ತು ಆಟೋಗಳನ್ನು ಅವಲಂಬಿಸಿದ್ದಾರೆ. ಆದರೆ ರಸ್ತೆಯು ಸಂಪೂರ್ಣವಾಗಿ ಹಾಳಾಗಿರುವುದರಿಂದ, ಈ ಗುಂಡಿಗಳು ಆಟೋ ಚಾಲಕರಿಗೆ ಹೇಳತೀರದ ತಲೆನೋವನ್ನು ತಂದೊಡ್ಡಿವೆ. ಈ ರಸ್ತೆ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಸಂಚಾರಕ್ಕೆ ಸಂಚುಕಾರವಾಗಿ ಪರಿಣಮಿಸಿವೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ಬಿಗ್‌ಬಾಸ್ ಖ್ಯಾತಿಯ ಜಾನವಿ ಇಂದು ಬೆಳಿಗ್ಗೆ (ಮೇ 30, 2026) ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಸೇರ್ಪಡೆಯಾದ ತಕ್ಷಣ, ಅವರು ಮಾಜಿ ಪ್ರಧಾನ ಮಂತ್ರಿ ಶ್ರೀ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು.
    1
    ಬಿಗ್‌ಬಾಸ್ ಖ್ಯಾತಿಯ ಜಾನವಿ ಇಂದು ಬೆಳಿಗ್ಗೆ (ಮೇ 30, 2026) ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಸೇರ್ಪಡೆಯಾದ ತಕ್ಷಣ, ಅವರು ಮಾಜಿ ಪ್ರಧಾನ ಮಂತ್ರಿ ಶ್ರೀ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು.
    user_Manish
    Manish
    Local News Reporter ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    17 hrs ago
  • ಶಾಸಕ ಸಿ.ಬಿ. ಸುರೇಶ್ ಬಾಬು ಅವರು ಹುಳಿಯಾರು ಪದವೀಧರ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಹುಳಿಯಾರಿನ ಬಿ.ಎಂ.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪದವಿ ಪೂರೈಸಿದ ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಳೆದ 14 ವರ್ಷಗಳಿಂದ ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಮತ್ತಷ್ಟು ಹೆಜ್ಜೆ ಮುಂದೆ ಹೋಗಿ, ಬಿ.ಎ., ಬಿಕಾಂ ಸೇರಿದಂತೆ ವಿವಿಧ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಗತಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕರು ವಿವರಿಸಿದರು. ಈ ಉಚಿತ ತರಬೇತಿಯಡಿಯಲ್ಲಿ ಎಫ್‌ಡಿಎ, ಎಸ್‌ಡಿಎ, ಬ್ಯಾಂಕಿಂಗ್ ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ಆದ್ಯತೆ ನೀಡಲಾಗುವುದು. ಈ ಎಲ್ಲಾ ತರಬೇತಿಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲು ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ದಾವಣಗೆರೆಯ ಇನ್‌ಸೈಟ್ ಅಕಾಡೆಮಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. "ಪ್ರತಿಯೊಂದು ಮನೆಯ ಮಗುವು ವಿದ್ಯಾವಂತರಾಗಿ, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಪೋಷಕರು ಕಷ್ಟಪಟ್ಟು ಓದಿಸಿದ ಮಕ್ಕಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ನಮ್ಮ ಮೇಲಿದೆ" ಎಂದು ಶಾಸಕರು ನುಡಿದರು. ಇದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಮೂಡುವಂತೆ ಸಲಹೆ ನೀಡಿದ ಅವರು, ಕೇವಲ ವಿದ್ಯೆಯಷ್ಟೇ ಅಲ್ಲದೆ, ಬೇರೆಯವರಿಗೆ ಸಹಾಯ ಮಾಡುವ ಮನೋಭಾವವನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. "ಸಾಂಸ್ಕೃತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಮಾತ್ರ ದೇಶದ ಉನ್ನತಿಗೆ ಸಹಕಾರಿಯಾಗುತ್ತದೆ" ಎಂದು ಕರೆ ನೀಡಿದರು.
    1
    ಶಾಸಕ ಸಿ.ಬಿ. ಸುರೇಶ್ ಬಾಬು ಅವರು ಹುಳಿಯಾರು ಪದವೀಧರ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಹುಳಿಯಾರಿನ ಬಿ.ಎಂ.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪದವಿ ಪೂರೈಸಿದ ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಳೆದ 14 ವರ್ಷಗಳಿಂದ ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಮತ್ತಷ್ಟು ಹೆಜ್ಜೆ ಮುಂದೆ ಹೋಗಿ, ಬಿ.ಎ., ಬಿಕಾಂ ಸೇರಿದಂತೆ ವಿವಿಧ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಗತಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕರು ವಿವರಿಸಿದರು. ಈ ಉಚಿತ ತರಬೇತಿಯಡಿಯಲ್ಲಿ ಎಫ್‌ಡಿಎ, ಎಸ್‌ಡಿಎ, ಬ್ಯಾಂಕಿಂಗ್ ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಗಳಿಗೆ ಆದ್ಯತೆ ನೀಡಲಾಗುವುದು. ಈ ಎಲ್ಲಾ ತರಬೇತಿಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲು ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ದಾವಣಗೆರೆಯ ಇನ್‌ಸೈಟ್ ಅಕಾಡೆಮಿಯವರೊಂದಿಗೆ ಮಾತುಕತೆ ನಡೆಸಲಾಗಿದೆ.

"ಪ್ರತಿಯೊಂದು ಮನೆಯ ಮಗುವು ವಿದ್ಯಾವಂತರಾಗಿ, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಪೋಷಕರು ಕಷ್ಟಪಟ್ಟು ಓದಿಸಿದ ಮಕ್ಕಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ನಮ್ಮ ಮೇಲಿದೆ" ಎಂದು ಶಾಸಕರು ನುಡಿದರು. ಇದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಮೂಡುವಂತೆ ಸಲಹೆ ನೀಡಿದ ಅವರು, ಕೇವಲ ವಿದ್ಯೆಯಷ್ಟೇ ಅಲ್ಲದೆ, ಬೇರೆಯವರಿಗೆ ಸಹಾಯ ಮಾಡುವ ಮನೋಭಾವವನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. "ಸಾಂಸ್ಕೃತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಮಾತ್ರ ದೇಶದ ಉನ್ನತಿಗೆ ಸಹಕಾರಿಯಾಗುತ್ತದೆ" ಎಂದು ಕರೆ ನೀಡಿದರು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    18 hrs ago
  • ಆರ್‌ಸಿಬಿ ಮತ್ತು ಗುಜರಾತ್ ನಡುವೆ ನಡೆಯಲಿರುವ ಐಪಿಎಲ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ, ಚಿತ್ರದುರ್ಗದ ಯುವ ಚಿತ್ರ ಕಲಾವಿದ ಮನೋಜ್ ತಮ್ಮ ನೆಚ್ಚಿನ ತಂಡಕ್ಕೆ ವಿಶಿಷ್ಟ ರೀತಿಯಲ್ಲಿ ಶುಭ ಹಾರೈಸಿದ್ದಾರೆ. ಈ ಬಾರಿ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲಲಿ ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಲು, ಮನೋಜ್ ಕೊಹ್ಲಿ ಕಪ್ ಎತ್ತಿ ಹಿಡಿದಿರುವ ಚಿತ್ರವನ್ನು ರಕ್ತದಲ್ಲಿ ಬಿಡಿಸಿದ್ದಾರೆ.
    1
    ಆರ್‌ಸಿಬಿ ಮತ್ತು ಗುಜರಾತ್ ನಡುವೆ ನಡೆಯಲಿರುವ ಐಪಿಎಲ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ, ಚಿತ್ರದುರ್ಗದ ಯುವ ಚಿತ್ರ ಕಲಾವಿದ ಮನೋಜ್ ತಮ್ಮ ನೆಚ್ಚಿನ ತಂಡಕ್ಕೆ ವಿಶಿಷ್ಟ ರೀತಿಯಲ್ಲಿ ಶುಭ ಹಾರೈಸಿದ್ದಾರೆ. ಈ ಬಾರಿ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲಲಿ ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಲು, ಮನೋಜ್ ಕೊಹ್ಲಿ ಕಪ್ ಎತ್ತಿ ಹಿಡಿದಿರುವ ಚಿತ್ರವನ್ನು ರಕ್ತದಲ್ಲಿ ಬಿಡಿಸಿದ್ದಾರೆ.
    user_ನ್ಯೂಸ್ ಕಿಂಗ್
    ನ್ಯೂಸ್ ಕಿಂಗ್
    Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.