logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮುಧೋಳ : ಸರಕಾರದ ಮಹತ್ವಾಂಕ್ಷೆಯ ಯೋಜನೆಗಳಲ್ಲಿಮುಧೋಳ : ಸರಕಾರದ ಮಹತ್ವಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಪ್ರಜಾಸೇವೆ ಸೆ.5 ರಂದು ಆರಂಭವಾಗಲಿದೆ. ಪ್ರತಿ ಶನಿವಾರ ನಡೆಯುವ ಪ್ರಜಾಸೇವೆ ಸಭೆಯಲ್ಲಿ ಜನರ ಅಹವಾಲು ಸ್ವೀಕರಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ತಹಸೀಲ್ದಾ‌ರ್ ಡಾ.ಚಿಕ್ಕಪ್ಪನಾಯಕ ತಿಳಿಸಿದ್ದಾರೆ. ಮುಧೋಳ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪ್ರಜಾಸೇವೆ ಸಭೆ ಲೋಕಾಪುರದಲ್ಲಿಶಾಸಕ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮುಧೋಳ ತಾಲೂಕಿನಲ್ಲಿ ಮೊದಲ ಸಭೆ ನಡೆಸಲು ನಿರ್ಧಾರ ಕೈಗೊಂಡರೆ ಶಾಸಕರ ಜತೆ ಚರ್ಚಿಸಲಾಗುವುದು. ಸೆಪ್ಟೆಂಬರ್ ತಿಂಗಳ ಎರಡನೇ ಶನಿವಾರ ನಗರದ ಡಾ.ಅಂಬೇಡ್ಕ‌ರ್ ಸಮುದಾಯ ಭವನದಲ್ಲಿ ಸಭೆ ಆಯೋಜಿಸಲಾಗುವುದು. ಮೂರನೇ ಶನಿವಾರ ಬೆಳಗಲಿ ಪಟ್ಟಣದಲ್ಲಿ ಹಾಗೂ ನಾಲ್ಕನೇ ಶನಿವಾರ ಮಂಟೂರ ಗ್ರಾಮದಲ್ಲಿ ಸಭೆ ಆಯೋಜಿಸಲು ಶಾಸಕರು ದಿನಾಂಕ ನಿಗದಿಪಡಿಸಿದ್ದಾರೆ ಎಂದು ತಹಸೀಲ್ದಾ‌ರ್ ಅವರು ಪತ್ರಿಕೆಗೆ ತಿಳಿಸಿದ್ದಾರೆ

1 hr ago
user_GV NEWS
GV NEWS
ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
1 hr ago
afe1582e-fe89-41a2-9c79-5a5c20c4e14b

ಮುಧೋಳ : ಸರಕಾರದ ಮಹತ್ವಾಂಕ್ಷೆಯ ಯೋಜನೆಗಳಲ್ಲಿಮುಧೋಳ : ಸರಕಾರದ ಮಹತ್ವಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಪ್ರಜಾಸೇವೆ ಸೆ.5 ರಂದು ಆರಂಭವಾಗಲಿದೆ. ಪ್ರತಿ ಶನಿವಾರ ನಡೆಯುವ ಪ್ರಜಾಸೇವೆ ಸಭೆಯಲ್ಲಿ ಜನರ ಅಹವಾಲು ಸ್ವೀಕರಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ತಹಸೀಲ್ದಾ‌ರ್ ಡಾ.ಚಿಕ್ಕಪ್ಪನಾಯಕ ತಿಳಿಸಿದ್ದಾರೆ. ಮುಧೋಳ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪ್ರಜಾಸೇವೆ ಸಭೆ ಲೋಕಾಪುರದಲ್ಲಿಶಾಸಕ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮುಧೋಳ ತಾಲೂಕಿನಲ್ಲಿ ಮೊದಲ ಸಭೆ ನಡೆಸಲು ನಿರ್ಧಾರ ಕೈಗೊಂಡರೆ ಶಾಸಕರ ಜತೆ ಚರ್ಚಿಸಲಾಗುವುದು. ಸೆಪ್ಟೆಂಬರ್ ತಿಂಗಳ ಎರಡನೇ ಶನಿವಾರ ನಗರದ ಡಾ.ಅಂಬೇಡ್ಕ‌ರ್ ಸಮುದಾಯ ಭವನದಲ್ಲಿ ಸಭೆ ಆಯೋಜಿಸಲಾಗುವುದು. ಮೂರನೇ ಶನಿವಾರ ಬೆಳಗಲಿ ಪಟ್ಟಣದಲ್ಲಿ ಹಾಗೂ ನಾಲ್ಕನೇ ಶನಿವಾರ ಮಂಟೂರ ಗ್ರಾಮದಲ್ಲಿ ಸಭೆ ಆಯೋಜಿಸಲು ಶಾಸಕರು ದಿನಾಂಕ ನಿಗದಿಪಡಿಸಿದ್ದಾರೆ ಎಂದು ತಹಸೀಲ್ದಾ‌ರ್ ಅವರು ಪತ್ರಿಕೆಗೆ ತಿಳಿಸಿದ್ದಾರೆ

More news from ಕರ್ನಾಟಕ and nearby areas
  • ಈದ್ ಮಿಲಾದ್ ಹಿನ್ನೆಲೆ‌ ಪೊಲೀಸರಿಂದ‌ ಮುಧೋಳ‌ ನಗರದಲ್ಲಿ ಪಥ ಸಂಚಲನ ಮುಧೋಳ : ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ‌ ಪೊಲೀಸ್ ಪಥ ಸಂಚಲನ ನಡೆಯಿತು. ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ‌ ಪಥ ಸಂಚಲನ ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ್, ತಂಬಾಕ್‌ ಚೌಕ್, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು.
    2
    ಈದ್ ಮಿಲಾದ್ ಹಿನ್ನೆಲೆ‌ ಪೊಲೀಸರಿಂದ‌ ಮುಧೋಳ‌ ನಗರದಲ್ಲಿ ಪಥ ಸಂಚಲನ
ಮುಧೋಳ : ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ‌ ಪೊಲೀಸ್ ಪಥ ಸಂಚಲನ ನಡೆಯಿತು.
ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ‌ ಪಥ ಸಂಚಲನ ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ್, ತಂಬಾಕ್‌ ಚೌಕ್, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು.
    user_ಗೋವಿಂದಪ್ಪ ತಳವಾರ
    ಗೋವಿಂದಪ್ಪ ತಳವಾರ
    ಮುಧೋಳ, ಬಾಗಲಕೋಟೆ, ಕರ್ನಾಟಕ•
    10 hrs ago
  • ಮುಧೋಳದಲ್ಲಿ ಈದ್ ಮಿಲಾದ್: ಶಾಂತಿ ಸುವ್ಯವಸ್ಥೆಗಾಗಿ ಪೊಲೀಸರ ಆಕರ್ಷಕ ಪಥಸಂಚಲನ ಮುಧೋಳ: ನಾಳೆಯ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಂಗಳವಾರ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು. ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ ಈ ಪಥಸಂಚಲನವು ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ, ತಂಬಾಕ್ ಚೌಕ, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿತು. ಈ ವೇಳೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಮಾತನಾಡಿದ ಸಿಪಿಐ ಎಂ. ನಾಗರಡ್ಡಿ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಹಬ್ಬದ ವಾತಾವರಣವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಪಥಸಂಚಲನದಲ್ಲಿ ಸಿಪಿಐ ಎಂ. ನಾಗರಡ್ಡಿ, ಮುಧೋಳ ಪಿಎಸ್‌ಐ ಅಜೀತಕುಮಾರ ಹೊಸಮನಿ, ಲೋಕಾಪುರ ಪಿಎಸ್‌ಐ ಕಾಡಪ್ಪ ಜಕ್ಕಣ್ಣವರ, ಕ್ರೈಂ ಪಿಎಸ್‌ಐ ಪ್ರಕಾಶ ಮುರನಾಳ ಹಾಗೂ ಇಲಾಖೆಯ ಸಿಬ್ಬಂದಿಯಾದ ವಸಂತ್ ಬೀಳಗಿ, ಮಲ್ಲು ವಗ್ಗೇನವರ, ಹಣಮಂತ ಮಾದರ, ಮನೋಹರ ಕುರಿ ಸೇರಿದಂತೆ ಗೃಹ ರಕ್ಷಕ ದಳದ ಸಿಬ್ಬಂದಿ ಒಟ್ಟು 180ಕ್ಕೂ ಹೆಚ್ಚು ಅಧಿಕ ಸಿಬ್ಬಂದಿ ಭಾಗವಹಿಸಿದ್ದರು.
    1
    ಮುಧೋಳದಲ್ಲಿ ಈದ್ ಮಿಲಾದ್: ಶಾಂತಿ ಸುವ್ಯವಸ್ಥೆಗಾಗಿ ಪೊಲೀಸರ ಆಕರ್ಷಕ ಪಥಸಂಚಲನ
ಮುಧೋಳ: ನಾಳೆಯ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಂಗಳವಾರ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು.
ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ ಈ ಪಥಸಂಚಲನವು ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ, ತಂಬಾಕ್ ಚೌಕ, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿತು.
ಈ ವೇಳೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಮಾತನಾಡಿದ ಸಿಪಿಐ ಎಂ. ನಾಗರಡ್ಡಿ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಹಬ್ಬದ ವಾತಾವರಣವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.
ಪಥಸಂಚಲನದಲ್ಲಿ ಸಿಪಿಐ ಎಂ. ನಾಗರಡ್ಡಿ, ಮುಧೋಳ ಪಿಎಸ್‌ಐ ಅಜೀತಕುಮಾರ ಹೊಸಮನಿ, ಲೋಕಾಪುರ ಪಿಎಸ್‌ಐ ಕಾಡಪ್ಪ ಜಕ್ಕಣ್ಣವರ, ಕ್ರೈಂ ಪಿಎಸ್‌ಐ ಪ್ರಕಾಶ ಮುರನಾಳ ಹಾಗೂ ಇಲಾಖೆಯ ಸಿಬ್ಬಂದಿಯಾದ ವಸಂತ್ ಬೀಳಗಿ, ಮಲ್ಲು ವಗ್ಗೇನವರ, ಹಣಮಂತ ಮಾದರ, ಮನೋಹರ ಕುರಿ ಸೇರಿದಂತೆ ಗೃಹ ರಕ್ಷಕ ದಳದ ಸಿಬ್ಬಂದಿ ಒಟ್ಟು 180ಕ್ಕೂ ಹೆಚ್ಚು ಅಧಿಕ ಸಿಬ್ಬಂದಿ ಭಾಗವಹಿಸಿದ್ದರು.
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    12 hrs ago
  • ಈದ್ ಮಿಲಾದ್ ಹಿನ್ನೆಲೆ ಜಮಖಂಡಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಈದ್ ಮಿಲಾದ್ ಮೆರವಣಿಗೆ ಸೇರಿದಂತೆ ಇನ್ನಿತರ ಹಬ್ಬಗಳಲ್ಲಿ ಡಿಜೆ ಬಳಕೆಗೆ ಅವಕಾಶ ಇಲ್ಲ ಶಾಂತಿಯುತ ಹಬ್ಬಕ್ಕೆ ಸಾರ್ವಜನಿಕರ ಸಹಕಾರ ಕೋರಿದ ಎಸ್‌ಪಿ ಸಿದ್ದಾರ್ಥ ಗೋಯಲ್
    1
    ಈದ್ ಮಿಲಾದ್ ಹಿನ್ನೆಲೆ ಜಮಖಂಡಿಯಲ್ಲಿ ಬಿಗಿ ಪೊಲೀಸ್ ಭದ್ರತೆ

ಈದ್ ಮಿಲಾದ್ ಮೆರವಣಿಗೆ ಸೇರಿದಂತೆ ಇನ್ನಿತರ ಹಬ್ಬಗಳಲ್ಲಿ ಡಿಜೆ ಬಳಕೆಗೆ ಅವಕಾಶ ಇಲ್ಲ

ಶಾಂತಿಯುತ ಹಬ್ಬಕ್ಕೆ ಸಾರ್ವಜನಿಕರ ಸಹಕಾರ ಕೋರಿದ ಎಸ್‌ಪಿ ಸಿದ್ದಾರ್ಥ ಗೋಯಲ್
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    9 hrs ago
  • ಜಿಲ್ಲೆಯಲ್ಲಿ ಬಾಕಿರುವ ಬಿಲ್ಲನ್ನು ಶೀಘ್ರದಲ್ಲೇ ಪಾವತಿಸಲು ಸೂಚನೆ ನೀಡಲಾಗಿದೆ: ಡಿಸಿ ಸಂಗಪ್ಪ
    1
    ಜಿಲ್ಲೆಯಲ್ಲಿ ಬಾಕಿರುವ ಬಿಲ್ಲನ್ನು ಶೀಘ್ರದಲ್ಲೇ ಪಾವತಿಸಲು ಸೂಚನೆ ನೀಡಲಾಗಿದೆ: ಡಿಸಿ ಸಂಗಪ್ಪ
    user_Shabbir Bijapur
    Shabbir Bijapur
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    8 hrs ago
  • ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ‌ ಯರಗಲ್ಲ ಭೇಟಿನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ‌ ಯರಗಲ್ಲ ಭೇಟಿ ಮುಧೋಳ : ನಗರದಲ್ಲಿನ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿನ ಸಿಬ್ಬಂದಿ‌ ಕೊರತೆ ಹಾಗೂ ಅವ್ಯವಸ್ಥೆ ವಿರುದ್ಧ ಭೀಮ್ ಆರ್ಮಿ ಮೂಲ‌ ನಿವಾಸಿ ಏಕತಾ ಪರಿಷತ್‌ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ರಾಜಕುಮಾರ ಯರಗಲ್ಲ ಅವರು ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು.
    1
    ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ‌ ಯರಗಲ್ಲ ಭೇಟಿನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ‌ ಯರಗಲ್ಲ ಭೇಟಿ
ಮುಧೋಳ : ನಗರದಲ್ಲಿನ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿನ ಸಿಬ್ಬಂದಿ‌ ಕೊರತೆ ಹಾಗೂ ಅವ್ಯವಸ್ಥೆ ವಿರುದ್ಧ ಭೀಮ್ ಆರ್ಮಿ ಮೂಲ‌ ನಿವಾಸಿ ಏಕತಾ ಪರಿಷತ್‌ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ರಾಜಕುಮಾರ ಯರಗಲ್ಲ ಅವರು ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು.
    user_Ambarish M Hadapad
    Ambarish M Hadapad
    Newspaper advertising department ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    9 hrs ago
  • ಭಿರಡಿ ಶ್ರೀ ಮಹಾದೇವ ಜಾತ್ರೆಗೆ ದೇಣಿಗೆಯ ನೀಡಿದ ಭಕ್ತರಿಗೆ ಸನ್ಮಾನ
    1
    ಭಿರಡಿ ಶ್ರೀ ಮಹಾದೇವ ಜಾತ್ರೆಗೆ ದೇಣಿಗೆಯ ನೀಡಿದ ಭಕ್ತರಿಗೆ ಸನ್ಮಾನ
    user_ಅಮರ ವಾಹಿನಿ ಕನ್ನಡ news
    ಅಮರ ವಾಹಿನಿ ಕನ್ನಡ news
    ರಾಯಬಾಗ, ಬೆಳಗಾವಿ, ಕರ್ನಾಟಕ•
    42 min ago
  • "ಡೆವಿಲ್ ರಿಪೋರ್ಟರ "ಕಿರು ಚಿತ್ರ ಚಿತ್ರೀಕರಣದಲ್ಲಿ ನಿಜವಾದ ಪಿಶಾಚಿಯ ಧ್ವನಿ ರಿಕಾರ್ಡಿಂಗ ಆಗಿದೆ... ಗಾಭರಿಯಾದ ಸಂಕಲನಕಾರ ಮುಕೇಶಕುಮಾರ ಲಂಬುಗೋಳ..! ಕಳೆದ ತಿಂಗಳಿನಿಂದ ಚಿತ್ರೀಕರಣ ಆಗುತ್ತಿದ್ದ ಕೆ.ಸಿ.ಯೂಟೂಬ ಅರ್ಪಿಸುತ್ತಿರುವ "ಡೆವಿಲ್ ರಿಪೋರ್ಟರ" ಕಿರುಚಿತ್ರದ ಚಿತ್ರೀಕರಣದಲ್ಲಿ ಹಾರರ್ ಘಟನೆ ನಿಜವಾಗಿ ಜರುಗಿ ಚಿತ್ರ ತಂಡಕ್ಕೆ ಶಾಕ್ ಆಗಿದೆ. ಹುಕ್ಕೇರಿಯ ಪತ್ರಕರ್ತ ದಿ.ಪ್ರಕಾಶ ದೇಶಪಾಂಡೆಯವರ ಲೇಖನ ಆಧಾರಿತ ಈ ಕಿರುಚಿತ್ರವನ್ನು ಬಸವರಾಜ ಪಟ್ಟಣಶೆಟ್ಟಿಯವರು ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಅವರು 1987 ರಲ್ಲೇ ಚಿತ್ರ ರಂಗದಲ್ಲಿದ್ದ ಹಿರಿಯ ಅನುಭವಿಕ ನಿರ್ದೇಶಕರು. ಆಶ್ಚರ್ಯ ಎಂದರೆ ಪತ್ರಕರ್ತರಾದ ಮುಕೇಶಕುಮಾರ ಲಂಬುಗೋಳ ಮತ್ತು ಮಹಾಲಿಂಗ ಗಗ್ಗರಿಯವರು ನಡು ರಾತ್ರಿಯ ಪಿಶಾಚಿಯ ಕಾಟಕ್ಕೆ ಹೆದರಿ ಹಾಳು ಬಿದ್ದಿರುವ ಹಿಡಕಲ್ ಡ್ಯಾಮದಿಂದ ಹತ್ತರಗಿ ಹೆದ್ದಾರಿಗೆ ಹೋಗುವ ನಿರ್ಜನ... ಕಾಡಿನ ಪಕ್ಕದ ಬಸ್ ನಿಲ್ದಾಣದಲ್ಲಿ ಹೋಗಿ ಕೂಡುತ್ತಾರೆ. ಅಲ್ಲಿ ಹೆದರುತ್ತ ಕೂತಿರುವ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು. ಆಗ ಸ್ಥಳದಲ್ಲಿದ್ದವರು ಆರೇಳು ಜನ ಪುರುಷರು ಮಾತ್ರ. ಇದನ್ನು ಎಡಿಟಿಂಗ ಮಾಡುವಾಗ ಅಪರಿಚಿತ ಹೆಣ್ಣು ನಗುವ ಧ್ವನಿ ರಿಕಾರ್ಡ ಆಗಿದೆ. ಆ ಧ್ವನಿ ಎಲ್ಲಿಂದ ಬಂತು...! ಆ ನಿರ್ಜನ ರಾತ್ರಿಯಲ್ಲಿ ಚಿತ್ರ ತಂಡ ಬಿಟ್ಟರೆ ಯಾರೂ ಇರಲಿಲ್ಲ. ಇದು ನಿಜಕ್ಕೂ ಡೆವಿಲ್ ಧ್ವನಿಯೇ....! ತಾವೇ ನೋಡಿ. ಮನುಷ್ಯರ ಕಣ್ಣಿಗೆ ಕಾಣದ ಕೆಲ ಅತೀಂದ್ರಿಯ ಶಕ್ತಿಗಳು ಕ್ಯಾಮರಾ ಕಣ್ಣಿಗೆ ಕಾಣುತ್ತವೆ...ಕೇಳುತ್ತವೆ ಎನ್ನವದಕ್ಕೆ ಇದೇ ಸಾಕ್ಷಿ..! 🙏
    4
    "ಡೆವಿಲ್ ರಿಪೋರ್ಟರ "ಕಿರು ಚಿತ್ರ ಚಿತ್ರೀಕರಣದಲ್ಲಿ  ನಿಜವಾದ ಪಿಶಾಚಿಯ ಧ್ವನಿ ರಿಕಾರ್ಡಿಂಗ ಆಗಿದೆ... ಗಾಭರಿಯಾದ ಸಂಕಲನಕಾರ ಮುಕೇಶಕುಮಾರ ಲಂಬುಗೋಳ..!
ಕಳೆದ ತಿಂಗಳಿನಿಂದ ಚಿತ್ರೀಕರಣ ಆಗುತ್ತಿದ್ದ ಕೆ.ಸಿ.ಯೂಟೂಬ ಅರ್ಪಿಸುತ್ತಿರುವ "ಡೆವಿಲ್ ರಿಪೋರ್ಟರ" ಕಿರುಚಿತ್ರದ ಚಿತ್ರೀಕರಣದಲ್ಲಿ ಹಾರರ್ ಘಟನೆ ನಿಜವಾಗಿ ಜರುಗಿ ಚಿತ್ರ ತಂಡಕ್ಕೆ ಶಾಕ್ ಆಗಿದೆ. 
ಹುಕ್ಕೇರಿಯ ಪತ್ರಕರ್ತ ದಿ.ಪ್ರಕಾಶ ದೇಶಪಾಂಡೆಯವರ ಲೇಖನ ಆಧಾರಿತ ಈ ಕಿರುಚಿತ್ರವನ್ನು ಬಸವರಾಜ ಪಟ್ಟಣಶೆಟ್ಟಿಯವರು ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಅವರು 1987 ರಲ್ಲೇ ಚಿತ್ರ ರಂಗದಲ್ಲಿದ್ದ ಹಿರಿಯ ಅನುಭವಿಕ ನಿರ್ದೇಶಕರು. ಆಶ್ಚರ್ಯ ಎಂದರೆ ಪತ್ರಕರ್ತರಾದ ಮುಕೇಶಕುಮಾರ ಲಂಬುಗೋಳ ಮತ್ತು ಮಹಾಲಿಂಗ ಗಗ್ಗರಿಯವರು ನಡು ರಾತ್ರಿಯ ಪಿಶಾಚಿಯ ಕಾಟಕ್ಕೆ ಹೆದರಿ ಹಾಳು ಬಿದ್ದಿರುವ  ಹಿಡಕಲ್ ಡ್ಯಾಮದಿಂದ ಹತ್ತರಗಿ ಹೆದ್ದಾರಿಗೆ ಹೋಗುವ ನಿರ್ಜನ... ಕಾಡಿನ  ಪಕ್ಕದ ಬಸ್ ನಿಲ್ದಾಣದಲ್ಲಿ ಹೋಗಿ ಕೂಡುತ್ತಾರೆ. ಅಲ್ಲಿ ಹೆದರುತ್ತ ಕೂತಿರುವ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು. ಆಗ ಸ್ಥಳದಲ್ಲಿದ್ದವರು ಆರೇಳು ಜನ ಪುರುಷರು ಮಾತ್ರ. 
ಇದನ್ನು ಎಡಿಟಿಂಗ ಮಾಡುವಾಗ ಅಪರಿಚಿತ ಹೆಣ್ಣು ನಗುವ ಧ್ವನಿ ರಿಕಾರ್ಡ ಆಗಿದೆ. ಆ ಧ್ವನಿ ಎಲ್ಲಿಂದ ಬಂತು...! ಆ ನಿರ್ಜನ ರಾತ್ರಿಯಲ್ಲಿ ಚಿತ್ರ ತಂಡ ಬಿಟ್ಟರೆ ಯಾರೂ ಇರಲಿಲ್ಲ. ಇದು ನಿಜಕ್ಕೂ ಡೆವಿಲ್ ಧ್ವನಿಯೇ....! ತಾವೇ ನೋಡಿ. ಮನುಷ್ಯರ ಕಣ್ಣಿಗೆ ಕಾಣದ ಕೆಲ ಅತೀಂದ್ರಿಯ ಶಕ್ತಿಗಳು ಕ್ಯಾಮರಾ ಕಣ್ಣಿಗೆ ಕಾಣುತ್ತವೆ...ಕೇಳುತ್ತವೆ ಎನ್ನವದಕ್ಕೆ ಇದೇ ಸಾಕ್ಷಿ..!
🙏
    user_Basavraj Pattansheti
    Basavraj Pattansheti
    Artist ಗೋಕಾಕ, ಬೆಳಗಾವಿ, ಕರ್ನಾಟಕ•
    12 hrs ago
  • ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಭೀಮ್ ಆರ್ಮಿ ಬೃಹತ್ ಹೋರಾಟ ಮುಧೋಳ : ನಗರದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಜರುಗಿತು. ಡಾ.ಅಂಬೇಡ್ಕರ್ ವೃತ್ತದಿಂದ ಸರ್ಕಾರಿ ಆಸ್ಪತ್ರೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಮಾರ್ಗದುದ್ದಕ್ಕೂ‌ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು, ಗುಣಮಟ್ಟದ ಚಿಕಿತ್ಸೆಗೆ‌ ನೀಡಬೇಕು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆಸ್ಪತ್ರೆ ಆವರಣದಲ್ಲಿನ ಸಭೆಯಲ್ಲಿ ಮಾತನಾಡಿದ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುನೀಲ ಕಂಬೋಗಿ, ವಿವಿಧ ರೋಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರ ಕೊರತೆ, ವೈದ್ಯಕೀಯ ಸಿಬ್ಬಂದಿಯ ಅಸಮರ್ಪಕ ಲಭ್ಯತೆ, ಅಗತ್ಯ ಚಿಕಿತ್ಸೆಯಲ್ಲಿ ವಿಳಂಬ ಹಾಗೂ ಆಸ್ಪತ್ರೆಯ ಕೆಲ ವೈದ್ಯರನ್ನು ನಿಯೋಜನೆಯ ಮೇಲೆ ಬೇರೆ ಸರ್ಕಾರಿ ಆಸ್ಪತ್ರೆಗಳಿಗೆ ನಿಯೋಜಿಸಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಬೇರೆ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೇವೆಗಳು ಸಿಗದೆ ಪರದಾಡುವಂತಾಗಿದೆ ಎಂದು ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರಿಗೆ ಪ್ರಮುಖ ಸರ್ಕಾರಿ ಆರೋಗ್ಯ ಸೇವಾ ಕೇಂದ್ರವಾಗಿದೆ. ಆದರೆ ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರು ಸೂಕ್ತ ಚಿಕಿತ್ಸೆ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿದರು. ರಾಜ್ಯ ಸಂಚಾಲಕ ಅನಿಲ ಬರಗಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ಮುಧೋಳ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಬೇರೆ ಆಸ್ಪತ್ರೆಗೆ ನಿಯೋಜನೆ ಮಾಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಖಾಲಿ ಇರುವ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಭರ್ತಿ ಮಾಡಿ ಆಸ್ಪತ್ರೆಯ ಅವಶ್ಯಕತೆಯನ್ನು ಶೀಘ್ರದಲ್ಲಿಯೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಗೆ ಗುಣಮಟ್ಟದ ಮತ್ತು ಸಮಯೋಚಿತ ಚಿಕಿತ್ಸೆ ದೊರೆಯುವಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಹಾಗೂ ಮುಧೋಳ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಎಂದು ಆಗ್ರಹಿಸಿದರು. ರಾಜ್ಯ ಘಟಕದ ಅಧ್ಯಕ್ಷ ಲವಿತ ಮೇತ್ರಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವ ಬಡವರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಮಾನದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಡಿಎಚ್‍ಒ ಡಾ.ರಾಜಕುಮಾರ ಯರಗಲ್ ಮಾತನಾಡಿ, ಇಲ್ಲಿಂದ ನಿಯೋಜನೆಗೊಂಡ ನಾಲ್ಕು ವೈದ್ಯರ ನಿಯೋಜನೆ ಆದೇಶವನ್ನು ರದ್ದು ಮಾಡಲಾಗಿದೆ ಎಂದು ಪತ್ರಗಳನ್ನು ಪ್ರತಿಭಟನಾ ಕಾರರಿಗೆ ತೋರಿಸಿದರು. ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಿಕ ಮನವಿ ಸ್ವೀಕರಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ, ಡಾ, ಅಶೋಕ ಸೂರ್ಯವಂಶಿ, ಮುಖಂಡರಾದ ಸದಾಶಿವ ಬಾಡಗಂಡಿ, ಸುಂದರ ದೊಡಮನಿ, ಪುಟ್ಟು ಮೇತ್ರಿ, ಮಹಾದೇವಿ ಅಮಲಝರಿ, ಗೀತಾ, ರವಿ ಬೆಳಗಲಿ, ಮಹಾದೇವ ಮೀಸಿ, ಭೀಮಸಿ ಭಜಂತ್ರಿ, ಶೇಖರ ಬಾಗಿ ಮುಂತಾದವರು ಇದ್ದರು.
    1
    ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಭೀಮ್ ಆರ್ಮಿ ಬೃಹತ್ ಹೋರಾಟ
ಮುಧೋಳ : ನಗರದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಜರುಗಿತು.
ಡಾ.ಅಂಬೇಡ್ಕರ್ ವೃತ್ತದಿಂದ ಸರ್ಕಾರಿ ಆಸ್ಪತ್ರೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಮಾರ್ಗದುದ್ದಕ್ಕೂ‌ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು, ಗುಣಮಟ್ಟದ ಚಿಕಿತ್ಸೆಗೆ‌ ನೀಡಬೇಕು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆಸ್ಪತ್ರೆ ಆವರಣದಲ್ಲಿನ ಸಭೆಯಲ್ಲಿ ಮಾತನಾಡಿದ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುನೀಲ ಕಂಬೋಗಿ, ವಿವಿಧ ರೋಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರ ಕೊರತೆ, ವೈದ್ಯಕೀಯ ಸಿಬ್ಬಂದಿಯ ಅಸಮರ್ಪಕ ಲಭ್ಯತೆ, ಅಗತ್ಯ ಚಿಕಿತ್ಸೆಯಲ್ಲಿ ವಿಳಂಬ ಹಾಗೂ ಆಸ್ಪತ್ರೆಯ ಕೆಲ ವೈದ್ಯರನ್ನು ನಿಯೋಜನೆಯ ಮೇಲೆ ಬೇರೆ ಸರ್ಕಾರಿ ಆಸ್ಪತ್ರೆಗಳಿಗೆ ನಿಯೋಜಿಸಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಬೇರೆ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೇವೆಗಳು ಸಿಗದೆ ಪರದಾಡುವಂತಾಗಿದೆ ಎಂದು ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರಿಗೆ ಪ್ರಮುಖ ಸರ್ಕಾರಿ ಆರೋಗ್ಯ ಸೇವಾ ಕೇಂದ್ರವಾಗಿದೆ. ಆದರೆ ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರು ಸೂಕ್ತ ಚಿಕಿತ್ಸೆ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿದರು.
ರಾಜ್ಯ ಸಂಚಾಲಕ ಅನಿಲ ಬರಗಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ.  ಮುಧೋಳ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಬೇರೆ ಆಸ್ಪತ್ರೆಗೆ ನಿಯೋಜನೆ ಮಾಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಖಾಲಿ ಇರುವ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಭರ್ತಿ ಮಾಡಿ ಆಸ್ಪತ್ರೆಯ ಅವಶ್ಯಕತೆಯನ್ನು ಶೀಘ್ರದಲ್ಲಿಯೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಗೆ ಗುಣಮಟ್ಟದ ಮತ್ತು ಸಮಯೋಚಿತ ಚಿಕಿತ್ಸೆ ದೊರೆಯುವಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಹಾಗೂ ಮುಧೋಳ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಎಂದು ಆಗ್ರಹಿಸಿದರು.
ರಾಜ್ಯ ಘಟಕದ ಅಧ್ಯಕ್ಷ ಲವಿತ ಮೇತ್ರಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವ ಬಡವರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಮಾನದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಡಿಎಚ್‍ಒ ಡಾ.ರಾಜಕುಮಾರ ಯರಗಲ್ ಮಾತನಾಡಿ, ಇಲ್ಲಿಂದ ನಿಯೋಜನೆಗೊಂಡ ನಾಲ್ಕು ವೈದ್ಯರ ನಿಯೋಜನೆ ಆದೇಶವನ್ನು ರದ್ದು ಮಾಡಲಾಗಿದೆ ಎಂದು ಪತ್ರಗಳನ್ನು ಪ್ರತಿಭಟನಾ ಕಾರರಿಗೆ ತೋರಿಸಿದರು.  ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಿಕ ಮನವಿ ಸ್ವೀಕರಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ, ಡಾ, ಅಶೋಕ ಸೂರ್ಯವಂಶಿ, ಮುಖಂಡರಾದ ಸದಾಶಿವ ಬಾಡಗಂಡಿ, ಸುಂದರ ದೊಡಮನಿ, ಪುಟ್ಟು ಮೇತ್ರಿ, ಮಹಾದೇವಿ ಅಮಲಝರಿ, ಗೀತಾ, ರವಿ ಬೆಳಗಲಿ, ಮಹಾದೇವ ಮೀಸಿ, ಭೀಮಸಿ ಭಜಂತ್ರಿ, ಶೇಖರ ಬಾಗಿ ಮುಂತಾದವರು ಇದ್ದರು.
    user_ಗೋವಿಂದಪ್ಪ ತಳವಾರ
    ಗೋವಿಂದಪ್ಪ ತಳವಾರ
    ಮುಧೋಳ, ಬಾಗಲಕೋಟೆ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.