logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಆರ್‌ಟಿಒ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಪೊಲೀಸ್-ಬಾಂಬ್ ದಳದ ತೀವ್ರ ಪರಿಶೀಲನೆ ನಗರದ ಆರ್‌ಟಿಒ ಕಚೇರಿಗೆ ಶುಕ್ರವಾರ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳವು ಶ್ವಾನಗಳೊಂದಿಗೆ ಕಚೇರಿಯಲ್ಲಿ ತೀವ್ರ ಪರಿಶೀಲನೆ ನಡೆಸಿತು. ಕಚೇರಿ ಆವರಣದ ಒಳಭಾಗದ ಜೊತೆಗೆ ಹೊರಗಡೆ ನಿಲ್ಲಿಸಿದ್ದ ವಾಹನಗಳನ್ನೂ ಸೂಕ್ಷ್ಮವಾಗಿ ತಪಾಸಣೆ ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ದುಷ್ಕರ್ಮಿಗಳು ಇಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೂಲ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

2 hrs ago
user_Veega News Kannada
Veega News Kannada
Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
2 hrs ago

ಆರ್‌ಟಿಒ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಪೊಲೀಸ್-ಬಾಂಬ್ ದಳದ ತೀವ್ರ ಪರಿಶೀಲನೆ ನಗರದ ಆರ್‌ಟಿಒ ಕಚೇರಿಗೆ ಶುಕ್ರವಾರ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳವು ಶ್ವಾನಗಳೊಂದಿಗೆ ಕಚೇರಿಯಲ್ಲಿ ತೀವ್ರ ಪರಿಶೀಲನೆ ನಡೆಸಿತು. ಕಚೇರಿ ಆವರಣದ ಒಳಭಾಗದ ಜೊತೆಗೆ ಹೊರಗಡೆ ನಿಲ್ಲಿಸಿದ್ದ ವಾಹನಗಳನ್ನೂ ಸೂಕ್ಷ್ಮವಾಗಿ ತಪಾಸಣೆ ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ದುಷ್ಕರ್ಮಿಗಳು ಇಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೂಲ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

More news from ಕರ್ನಾಟಕ and nearby areas
  • ಬೂದಿಕೋಟೆ ಹೋಬಳಿಯ ಭೀಮಗಾನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಸುತ್ತಮುತ್ತ ಹಲವು ವರ್ಷಗಳಿಂದ ಸ್ವಚ್ಛತೆ ಕೊರತೆಯಿಂದ ಕಸದ ರಾಶಿ ತುಂಬಿಕೊಂಡಿದೆ. ಗ್ರಾಮಸ್ಥರು ಮನೆಗಳ ಕಸವನ್ನು ಶಾಲೆಯ ಬಳಿ ಎಸೆಯುತ್ತಿರುವುದರಿಂದ ದುರ್ನಾತ ವ್ಯಾಪಕವಾಗಿದ್ದು, ಹಾವುಗಳಂತಹ ವಿಷ ಜಂತುಗಳು ಶಾಲಾ ಕೊಠಡಿಗಳೊಳಗೆ ಪ್ರವೇಶಿಸುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ. ಇದರಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಗಂಭೀರ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
    1
    ಬೂದಿಕೋಟೆ ಹೋಬಳಿಯ ಭೀಮಗಾನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಸುತ್ತಮುತ್ತ ಹಲವು ವರ್ಷಗಳಿಂದ ಸ್ವಚ್ಛತೆ ಕೊರತೆಯಿಂದ ಕಸದ ರಾಶಿ ತುಂಬಿಕೊಂಡಿದೆ. ಗ್ರಾಮಸ್ಥರು ಮನೆಗಳ ಕಸವನ್ನು ಶಾಲೆಯ ಬಳಿ ಎಸೆಯುತ್ತಿರುವುದರಿಂದ ದುರ್ನಾತ ವ್ಯಾಪಕವಾಗಿದ್ದು, ಹಾವುಗಳಂತಹ ವಿಷ ಜಂತುಗಳು ಶಾಲಾ ಕೊಠಡಿಗಳೊಳಗೆ ಪ್ರವೇಶಿಸುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ. ಇದರಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಗಂಭೀರ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • 'ಲೈಂಗಿಕ ಆಸೆ ತೀರಿಸಿದರೆ ಮಾತ್ರ ಊಟ'.. ಕಾಶ್ಮೀರಿ ಮಹಿಳೆಯರ ಮೇಲೆ ದೌರ್ಜನ್ಯ POK-ನಲ್ಲಿ ಕಾಶ್ಮೀರ ಮಹಿಳೆಯರ ಮೇಲೆ ಉಗ್ರರ ದೌರ್ಜನ್ಯಗಳ ಬಗ್ಗೆ ಪಾಕ್ ಧರ್ಮಗುರು ಮುಪ್ತಿ ಸಯೀದ್‌ ಖಾನ್ ಹೇಳಿರುವ ವಿಡಿಯೋ ಬಹಿರಂಗವಾಗಿದೆ. ಪಾಕಿಸ್ತಾನದಿಂದ ನುಸುಳಿರುವ ಉಗ್ರರು ನಿರಾಶ್ರಿತರ ಶಿಬಿರಗಳಲ್ಲಿನ ಅಸಹಾಯಕ ಮಹಿಳೆಯರು, ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಆ ಮಹಿಳೆಯರಿಗೆ ತಿನ್ನಲು ರೊಟ್ಟಿ ಬೇಕಾದರೆ ಇಂತಹ ದುಸ್ಥಿತಿ ಎದುರಿಸಬೇಕಿದೆ ಎಂದಿದ್ದಾರೆ. ಇದರೊಂದಿಗೆ ನುಸುಳುವಿಕೆಯನ್ನು ಪಾಕ್ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದು ಗುಪ್ತಚರ ವಲಯಗಳು ಹೇಳುತ್ತಿವೆ. ✍️ವರದಿ: ಸುರೇಂದ್ರ ಶಿವಮೊಗ್ಗ....
    1
    'ಲೈಂಗಿಕ ಆಸೆ ತೀರಿಸಿದರೆ ಮಾತ್ರ ಊಟ'.. ಕಾಶ್ಮೀರಿ ಮಹಿಳೆಯರ ಮೇಲೆ ದೌರ್ಜನ್ಯ
POK-ನಲ್ಲಿ ಕಾಶ್ಮೀರ ಮಹಿಳೆಯರ ಮೇಲೆ ಉಗ್ರರ ದೌರ್ಜನ್ಯಗಳ ಬಗ್ಗೆ ಪಾಕ್ ಧರ್ಮಗುರು ಮುಪ್ತಿ ಸಯೀದ್‌ ಖಾನ್ ಹೇಳಿರುವ ವಿಡಿಯೋ ಬಹಿರಂಗವಾಗಿದೆ.
ಪಾಕಿಸ್ತಾನದಿಂದ ನುಸುಳಿರುವ ಉಗ್ರರು ನಿರಾಶ್ರಿತರ ಶಿಬಿರಗಳಲ್ಲಿನ ಅಸಹಾಯಕ ಮಹಿಳೆಯರು, ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಆ ಮಹಿಳೆಯರಿಗೆ ತಿನ್ನಲು ರೊಟ್ಟಿ ಬೇಕಾದರೆ ಇಂತಹ ದುಸ್ಥಿತಿ ಎದುರಿಸಬೇಕಿದೆ ಎಂದಿದ್ದಾರೆ. ಇದರೊಂದಿಗೆ ನುಸುಳುವಿಕೆಯನ್ನು ಪಾಕ್ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದು ಗುಪ್ತಚರ ವಲಯಗಳು ಹೇಳುತ್ತಿವೆ.
✍️ವರದಿ: ಸುರೇಂದ್ರ ಶಿವಮೊಗ್ಗ....
    user_Surendra Shimoga
    Surendra Shimoga
    Shuru News Publisher Bengaluru South, Bengaluru Urban•
    10 hrs ago
  • ದೇವನಹಳ್ಳಿ ಕೆಂಪೇಗೌಡ ಏರ್ ಪೋರ್ಟಿನಲ್ಲಿ ಪ್ರಯಾಣಿಕರ ಪರದಾಟ. ನೆನ್ನೆ ಬೆಂಗಳೂರಿನಿಂದ ಚನೈಗೆ ತೆರಳಲು ಬಂದಿದ್ದ ಪ್ರಯಾಣಿಕರು ಅತಂತ್ರ. ಸ್ಪೈಸ್ ಜೆಟ್ ಸಂಸ್ಥೆಯ ಕೊರೆಂಡನ್ ಏರ್ ಲೈನ್ಸ್ ವಿಮಾನದಲ್ಲಿ ಅವ್ಯವಸ್ಥೆ. ಒಂದು ಗಂಟೆ ರನ್ ವೇ ನಲ್ಲಿ ಸುತ್ತಾಡಿಸಿ ಆಮೇಲೆ ಫ್ಲೈಟ್ ಕ್ಯಾನ್ಸಲ್ ಸಂದೇಶ. ವಿಮಾನ ಟೇಕ್ ಆಫ್ ಆಗಲು ಪರ್ಮಿಷನ್ ಸಿಗದ ಹಿನ್ನಲೆ ರನ್ ವೇನಲ್ಲೇ ಸುತ್ತಾಟ. ಫ್ಲೈಟ್ ಕ್ಯಾನ್ಸಲ್ ಹಿನ್ನೆಲೆ ಏರ್ಲೈನ್ಸ್ ಸಿಬ್ಬಂದಿ ನಡುವೆ ಪ್ರಯಾಣಿಕರ ವಾಗ್ವಾದ. ಬದಲಿ ವಿಮಾನ ಏರ್ಪಾಡು ಮಾಡುವಂತೆ ಸಿಬ್ಬಂದಿ ವಿರುದ್ಧ ಆಕ್ರೋಶ. ಏರ್ಲೈನ್ಸ್ ಸಿಬ್ಬಂದಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದ ಪ್ರಯಾಣಿಕರು. ಪೊಲೀಸರ ಮದ್ಯಪ್ರವೇಶದಿಂದ ತಿಳಿಯಾದ ಸಮಸ್ಯೆ. ಟಿಕೆಟ್ ಪ್ರೈಸ್ ಮರುಪಾವತಿ ಮಾಡಲು ಒಪ್ಪಿಕೊಂಡ ಕಾರಣ ಪ್ರಯಾಣಿಕರು ಕೂಲ್. ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಘಟನೆ.
    4
    ದೇವನಹಳ್ಳಿ ಕೆಂಪೇಗೌಡ ಏರ್ ಪೋರ್ಟಿನಲ್ಲಿ  ಪ್ರಯಾಣಿಕರ ಪರದಾಟ.
ನೆನ್ನೆ ಬೆಂಗಳೂರಿನಿಂದ ಚನೈಗೆ ತೆರಳಲು ಬಂದಿದ್ದ ಪ್ರಯಾಣಿಕರು ಅತಂತ್ರ.
ಸ್ಪೈಸ್ ಜೆಟ್ ಸಂಸ್ಥೆಯ ಕೊರೆಂಡನ್ ಏರ್ ಲೈನ್ಸ್ ವಿಮಾನದಲ್ಲಿ ಅವ್ಯವಸ್ಥೆ.
ಒಂದು ಗಂಟೆ ರನ್ ವೇ ನಲ್ಲಿ ಸುತ್ತಾಡಿಸಿ ಆಮೇಲೆ ಫ್ಲೈಟ್ ಕ್ಯಾನ್ಸಲ್ ಸಂದೇಶ.
ವಿಮಾನ ಟೇಕ್ ಆಫ್ ಆಗಲು ಪರ್ಮಿಷನ್ ಸಿಗದ ಹಿನ್ನಲೆ ರನ್ ವೇನಲ್ಲೇ ಸುತ್ತಾಟ.
ಫ್ಲೈಟ್ ಕ್ಯಾನ್ಸಲ್ ಹಿನ್ನೆಲೆ ಏರ್ಲೈನ್ಸ್ ಸಿಬ್ಬಂದಿ ನಡುವೆ ಪ್ರಯಾಣಿಕರ ವಾಗ್ವಾದ.
ಬದಲಿ ವಿಮಾನ ಏರ್ಪಾಡು ಮಾಡುವಂತೆ ಸಿಬ್ಬಂದಿ ವಿರುದ್ಧ ಆಕ್ರೋಶ.
ಏರ್ಲೈನ್ಸ್ ಸಿಬ್ಬಂದಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದ ಪ್ರಯಾಣಿಕರು.
ಪೊಲೀಸರ ಮದ್ಯಪ್ರವೇಶದಿಂದ ತಿಳಿಯಾದ ಸಮಸ್ಯೆ.
ಟಿಕೆಟ್ ಪ್ರೈಸ್ ಮರುಪಾವತಿ ಮಾಡಲು ಒಪ್ಪಿಕೊಂಡ ಕಾರಣ ಪ್ರಯಾಣಿಕರು ಕೂಲ್.
ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಘಟನೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    4 hrs ago
  • Post by Gulam Muhammad
    1
    Post by Gulam Muhammad
    user_Gulam Muhammad
    Gulam Muhammad
    ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    15 hrs ago
  • ಮಾಗಡಿ : ​ ಕೆಂಪೇಗೌಡ ಪ್ರತಿಮೆ ಸ್ಥಳಾಂತರ ವಿಚಾರದಲ್ಲಿ ಕುಚೋದ್ಯನೇ, ಗಲಭೆ, ಪ್ರಚೋದನೆ ಸೃಷ್ಠಿಸಬಾರದು ಇದರಿಂದ ಶಾಂತಿ ಹದೆಗೆಡುತ್ತದೆ ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಎಚ್.ಎಂ.ಕೃಷ್ಣಮೂರ್ತಿಗೆ ತಿರುಗೇಟ್ ನೀಡಿದರು. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರ ಆರೋಗ್ಯ ದೃಷ್ಠಿಯಿಂದ 42 ಕೋಟಿರೂ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲ್ಲಿ ಪೂಜೆ ನೆರವೇರಿಸಲಾಗಿದೆ ಟೆಂಡರ್ ಪ್ರಕ್ರಿಯೆಯೂ ಆಗಿದ್ದು ಜಾಗವನ್ನು ಬಿಟ್ಟುಕೊಡಬೇಕಿದೆ ಆಸ್ಪತ್ರೆ ನಿರ್ಮಾಣದ ಜಾಗದಲ್ಲಿ ಕೆಂಪೇಗೌಡ ಪ್ರತಿಮೆ ಇದ್ದು ಈ ಪ್ರತಿಮೆಯನ್ನು ತೆರವುಗೊಳಿಸದಂತೆ ಎಚ್.ಎಂ.ಕೃಷ್ಣಮೂರ್ತಿ ಹೈಕೋರ್ಟ್ ಮೊರೆಹೊಗಿದ್ದು ಪ್ರತಿಮೆ ಗೆ ಧಕ್ಕೆ ಆಗದಂತೆ ಸ್ಥಳಾಂತರಿಸಲು ಹೈಕೋರ್ಟ್ ಸೂಚಿಸಿದಂತೆ ಸ್ಥಳಾಂತರಿಸಲು ಮೆಟ್ಟಿಲು ತೆರವುಗೊಳಿಸುವುದಕ್ಕೆ ಇಲ್ಲಸಲ್ಲದ ಆರೋಪಮಾಡುವುದು ಸರಿಯಲ್ಲ, ಕಾನೂನಾತ್ಮಕವಾಗಿ ಮರಗಳನ್ನು ತೆರವುಗೊಳಿಸಿ ಎಂದು ಆದೇಶವಿದೆ ಒರೆತು ಸ್ಟೇ ನೀಡಿಲ್ಲ ಎಂದರು. ಈಗಿರುವ ಪ್ರತಿಮೆಗೆ ಯಾವುದೇ ಧಕ್ಕೆ ಬಾರದಂತೆ ಪೂರ್ವಾಭಿಮುಖದಿಂದ ಉತ್ತರಾಭಿ ಮುಖವಾಗಿ ಸ್ಥಾಪಿಸಲಾಗುವುದು ಎಂದರು. ಶ್ರೀಮಂತರು ನಗರ ಪ್ರದೇಶದ ಆಸ್ಪತ್ರೆಗೆ ಹೋಗುತ್ತಾರೆ ಶ್ರೀಸಾಮಾನ್ಯರು ಎಲ್ಲಿಗೆ ಹೋಗಲು ಸಾಧ್ಯ, ಶಾಸಕರು ಮನೆ ನಿರ್ಮಿಸುತ್ತಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಆಸ್ಪತ್ರೆ ನಿರ್ಮಾಣವಾದ ನಂತರ ಶಾಸಕರ ಸಂಬಂಧಿಕರು ಚಿಕಿತ್ಸೆಪಡೆಯಲು ಬರುವುದಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಲಿ ಅಡೆ,ತಡೆಹೊಡ್ಡುವುದು, ಜನರಿಗೆ ಧಿಕ್ಕು ತಪ್ಪಿಸುವ ಹೇಳಿಕೆ ನೀಡುವುದು ಬೇಡ ಎಂದು ಕೆಂಪೇಗೌಡ ಅಭಿವೃದ್ದಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣನಮೂರ್ತಿಗೆ ಮನವಿ ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಭವನ ಶಿಥಿಲವಾದ ಕಾರಣ ತರವುಗೊಳಿಸಿ ಹೊಸ ಭವನ ನಿರ್ಮಾಣಮಾಡಲಾಗುತ್ತಿದೆ. ಸರಕಾರಿ ಇಲಾಖೆಗಳನ್ನು ತೆರವುಗೊಳಿಸಿ ಶಾಸಕರ ಕಿಸೆಸೇರುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ, 2018ರಲ್ಲಿ ಕೋಟೆ ಜಾಗ ಕೆಶಿಫ್ ರಸ್ತೆಗೆ ಭೂಸ್ವಾಧಿನವಾಗಿದೆ ಈ ಹಣ ಸೋಮೇಶ್ವರ ದೇವಾಲಯದ ಖಾತೆಗೆ 70 ಲಕ್ಷರೂ ಜಮೆಯಾಗಿದೆ ಆ ವೇಳೆ ಎಚ್.ಸಿ.ಬಾಲಕೃಷ್ಣ ಶಾಸಕರಾಗಿರಲಿಲ್ಲ ಈ ಹಣ ಎಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದನ್ನು ಬಿಟ್ಟು ಶಾಸಕರ ವಿರುದ್ದ ಆರೋಪಮಾಡುವುದು ಸರಿಯಲ್ಲ ಎಂದು ಲೇವಡಿ ಮಾಡಿದರು. ಆಸ್ಪತ್ರೆ ಕಾಮಗಾರಿ ಇನ್ನೂ ಆರಂಭಿಸಿಲ್ಲ ಈಗಿರುವಾಗ ಎರಡು ವರ್ಷದಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಎನ್ನುತ್ತಾರೆ ಅವರಿಗೆ ಕಳಕಳಿ ಇದ್ದರೆ ಕಾಮಗಾರಿ ನಡೆಯುವ ವೇಳೆ ವೀಕ್ಷಿಸಲಿ ಅದನ್ನು ಬಿಟ್ಟು ಬಿಟ್ಟು ಇಲ್ಲಸಲ್ಲದ ಆರೋಪಮಾಡುವುದು ಎಷ್ಟು ಸರಿ. ಅಭಿವೃದ್ದಿ ವಿಚಾರದಲ್ಲಿ ಚರ್ಚೆಗೆ ಬರಲಿ ಚರ್ಚೆಗೆ ನಾವು ಸಿದ್ದರಿದ್ದೇವೆ ದಿನಾಂಕ, ಸ್ಥಳ, ಸಮಯ ನಿಗಧಿಪಡಿಸಿ ಎಂದು ಸವಾಲು ಹಾಕಿದರು. ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು ಮಾತನಾಡಿ, ಎಚ್.ಎಂ.ಕೃಷ್ಣಮೂರ್ತಿ ಅಭಿವೃದ್ದಿ ವಿಚಾರದಲ್ಲಿ ಚರ್ಚಿಸಲಿ ಅದನ್ನು ಬಿಟ್ಟು ಶಾಸಕರ ಬಗ್ಗೆ ಅಗುರವಾಗಿ, ಏಕವಚನದಲ್ಲಿ ಮಾತನಾಡಿದರೆ ತಕ್ಕಪಾಠ ಕಲಿಸಲಾಗುವುದು, ಅಭಿವೃದ್ದಿಗೆ ಸಹಕಾರ ನೀಡಲಿ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡದೆ ಆಸ್ಪತ್ರೆ ನಿರ್ಮಾಣಕ್ಕೆ ವಿರೊಧಿಸುವುದು ಸರಿಯಲ್ಲ ಇದು ಸಾರ್ವಜನಿಕರ ಸ್ವತ್ತು. ಕಾನೂನಾತ್ಮಕವಾಗಿಯೇ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರು ಮುಂದಾಗಿದ್ದಾರೆ ಜೇಡ್ರಹಳ್ಳಿ ಕೃಷ್ಣಪ್ಪ, ಮರೂರು ಸಾಗರ್ ಗೌಡ ಮಾಗಡಿ ಸರಕಾರಿ ಆಸ್ಪತ್ರೆಯಲ್ಲಿ ಎಷ್ಟು ದಿನ ಚಿಕಿತ್ಸೆ ಪಡೆದಿದ್ದಾರೆ ತಿಳಿಸಲಿ ಆಸ್ಪತ್ರೆ ನಿರ್ಮಾಣದ ವಿಚಾರದಲ್ಲಿ ಮಾತನಾಡಲು ಇವರಿಗೆ ಹಕ್ಕಿಲ್ಲ ಎಂದು ಲೇವಡಿ ಮಾಡಿದರು. ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕೆಂಪೇಗೌಡರ ಬಗ್ಗೆ ಎಲ್ಲರಿಗೂ ಅಭಿಮಾನ, ಗೌರವವಿದೆ ಅದರಂತೆ ಆಸ್ಪತ್ರೆಯೂ ಪ್ರಮುಖವಾಗಿದೆ ಯಾವುದೇ ಧಕ್ಕೆ ಬಾರದಂತೆ ಪ್ರತಿಮೆ ಸ್ಥಳಾಂತರಿಸಲಾಗುತ್ತಿದೆ, ಆಸ್ಪತ್ರೆ ನಿರ್ಮಾಣಕ್ಕೆ ಯಾರು ಅಡ್ಡಿಪಡಿಸಬಾರದು. 100 ಕೋಟಿರೂ ವೆಚ್ಚದಲ್ಲಿ ಕೋಟೆ ಅಭಿವೃದ್ದಿಪಡಿಸಿ ಮಧ್ಯದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಉದ್ದೇಶವಿದೆ, ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ಯೂನಿವರ್ ಸಿಟಿ ಆಗುತ್ತಿರುವುದರಿಂದ ಮಾಗಡಿಯಲ್ಲಿ ಸುಸರ್ಜಿತ ಆಸ್ಪತ್ರೆ ನಿರ್ಮಾಣವಾಗುವುದರಿಂದ ನುರಿತ ವೈದ್ಯರು ಬರಲಿದ್ದಾರೆ ಇದರಿಂದ ಬಡವರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಬಹುದು ಅಭಿವೃದ್ದಿಗೆ ಕಾಲು ಏಳೆಯದೆ ಕೈಜೋಡಿಸಿ ಎಂದು ಮನವಿ ಮಾಡಿದರು. ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗ್ರೋಪುರುಷೋತ್ತಮ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಕಲ್ಕೆರೆ ಶಿವಣ್ಣ, ಪುರಸಭೆ ಮಾಜಿ ಅಧ್ಯಕ್ಷ ರಂಗಹನುಮಯ್ಯ, ಮಾಜಿ ಸದಸ್ಯರಾದ ರೂಪೇಶ್, ಆಶ್ವಥ್, ಟಿಎಪಿಸಿಎಂಎಸ್ ನಿರ್ದೆಶಕ ರಮೇಶ್, ದೊಡ್ಡಿ ಲೋಕೇಶ್, ತಿರುಮಲೆ ವೆಂಕಟೇಶ್ ಇದ್ದರು.
    3
    ಮಾಗಡಿ : ​  ಕೆಂಪೇಗೌಡ ಪ್ರತಿಮೆ ಸ್ಥಳಾಂತರ ವಿಚಾರದಲ್ಲಿ ಕುಚೋದ್ಯನೇ, ಗಲಭೆ, ಪ್ರಚೋದನೆ ಸೃಷ್ಠಿಸಬಾರದು ಇದರಿಂದ ಶಾಂತಿ ಹದೆಗೆಡುತ್ತದೆ  ಎಂದು ಮಾಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ  ಎಚ್.ಎಂ.ಕೃಷ್ಣಮೂರ್ತಿಗೆ ತಿರುಗೇಟ್ ನೀಡಿದರು. 
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರ ಆರೋಗ್ಯ ದೃಷ್ಠಿಯಿಂದ 42 ಕೋಟಿರೂ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲ್ಲಿ ಪೂಜೆ ನೆರವೇರಿಸಲಾಗಿದೆ ಟೆಂಡರ್ ಪ್ರಕ್ರಿಯೆಯೂ ಆಗಿದ್ದು ಜಾಗವನ್ನು ಬಿಟ್ಟುಕೊಡಬೇಕಿದೆ ಆಸ್ಪತ್ರೆ ನಿರ್ಮಾಣದ ಜಾಗದಲ್ಲಿ  ಕೆಂಪೇಗೌಡ ಪ್ರತಿಮೆ ಇದ್ದು ಈ ಪ್ರತಿಮೆಯನ್ನು ತೆರವುಗೊಳಿಸದಂತೆ ಎಚ್.ಎಂ.ಕೃಷ್ಣಮೂರ್ತಿ ಹೈಕೋರ್ಟ್ ಮೊರೆಹೊಗಿದ್ದು ಪ್ರತಿಮೆ ಗೆ ಧಕ್ಕೆ ಆಗದಂತೆ ಸ್ಥಳಾಂತರಿಸಲು ಹೈಕೋರ್ಟ್ ಸೂಚಿಸಿದಂತೆ ಸ್ಥಳಾಂತರಿಸಲು ಮೆಟ್ಟಿಲು ತೆರವುಗೊಳಿಸುವುದಕ್ಕೆ ಇಲ್ಲಸಲ್ಲದ ಆರೋಪಮಾಡುವುದು ಸರಿಯಲ್ಲ, ಕಾನೂನಾತ್ಮಕವಾಗಿ ಮರಗಳನ್ನು ತೆರವುಗೊಳಿಸಿ ಎಂದು ಆದೇಶವಿದೆ ಒರೆತು ಸ್ಟೇ ನೀಡಿಲ್ಲ ಎಂದರು.
ಈಗಿರುವ ಪ್ರತಿಮೆಗೆ ಯಾವುದೇ ಧಕ್ಕೆ ಬಾರದಂತೆ ಪೂರ್ವಾಭಿಮುಖದಿಂದ  ಉತ್ತರಾಭಿ ಮುಖವಾಗಿ ಸ್ಥಾಪಿಸಲಾಗುವುದು ಎಂದರು. 
ಶ್ರೀಮಂತರು ನಗರ ಪ್ರದೇಶದ ಆಸ್ಪತ್ರೆಗೆ ಹೋಗುತ್ತಾರೆ ಶ್ರೀಸಾಮಾನ್ಯರು ಎಲ್ಲಿಗೆ ಹೋಗಲು ಸಾಧ್ಯ, ಶಾಸಕರು ಮನೆ ನಿರ್ಮಿಸುತ್ತಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಆಸ್ಪತ್ರೆ ನಿರ್ಮಾಣವಾದ ನಂತರ ಶಾಸಕರ ಸಂಬಂಧಿಕರು ಚಿಕಿತ್ಸೆಪಡೆಯಲು ಬರುವುದಿಲ್ಲ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಲಿ ಅಡೆ,ತಡೆಹೊಡ್ಡುವುದು, ಜನರಿಗೆ ಧಿಕ್ಕು ತಪ್ಪಿಸುವ ಹೇಳಿಕೆ ನೀಡುವುದು  ಬೇಡ ಎಂದು  ಕೆಂಪೇಗೌಡ ಅಭಿವೃದ್ದಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣನಮೂರ್ತಿಗೆ ಮನವಿ ಮಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನ ಶಿಥಿಲವಾದ ಕಾರಣ ತರವುಗೊಳಿಸಿ ಹೊಸ ಭವನ ನಿರ್ಮಾಣಮಾಡಲಾಗುತ್ತಿದೆ. ಸರಕಾರಿ ಇಲಾಖೆಗಳನ್ನು ತೆರವುಗೊಳಿಸಿ ಶಾಸಕರ ಕಿಸೆಸೇರುತ್ತಿದೆ ಎಂದು ಆರೋಪಿಸುವುದು ಸರಿಯಲ್ಲ, 2018ರಲ್ಲಿ  ಕೋಟೆ ಜಾಗ ಕೆಶಿಫ್ ರಸ್ತೆಗೆ ಭೂಸ್ವಾಧಿನವಾಗಿದೆ ಈ ಹಣ ಸೋಮೇಶ್ವರ ದೇವಾಲಯದ  ಖಾತೆಗೆ 70  ಲಕ್ಷರೂ ಜಮೆಯಾಗಿದೆ ಆ ವೇಳೆ ಎಚ್.ಸಿ.ಬಾಲಕೃಷ್ಣ ಶಾಸಕರಾಗಿರಲಿಲ್ಲ  ಈ ಹಣ ಎಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದನ್ನು ಬಿಟ್ಟು ಶಾಸಕರ ವಿರುದ್ದ ಆರೋಪಮಾಡುವುದು ಸರಿಯಲ್ಲ ಎಂದು ಲೇವಡಿ ಮಾಡಿದರು.
ಆಸ್ಪತ್ರೆ ಕಾಮಗಾರಿ ಇನ್ನೂ ಆರಂಭಿಸಿಲ್ಲ ಈಗಿರುವಾಗ ಎರಡು ವರ್ಷದಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಎನ್ನುತ್ತಾರೆ ಅವರಿಗೆ ಕಳಕಳಿ ಇದ್ದರೆ ಕಾಮಗಾರಿ ನಡೆಯುವ ವೇಳೆ ವೀಕ್ಷಿಸಲಿ ಅದನ್ನು ಬಿಟ್ಟು ಬಿಟ್ಟು ಇಲ್ಲಸಲ್ಲದ ಆರೋಪಮಾಡುವುದು ಎಷ್ಟು ಸರಿ.  ಅಭಿವೃದ್ದಿ ವಿಚಾರದಲ್ಲಿ ಚರ್ಚೆಗೆ ಬರಲಿ ಚರ್ಚೆಗೆ  ನಾವು ಸಿದ್ದರಿದ್ದೇವೆ  ದಿನಾಂಕ, ಸ್ಥಳ, ಸಮಯ ನಿಗಧಿಪಡಿಸಿ ಎಂದು ಸವಾಲು ಹಾಕಿದರು. 
ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರು ಮಾತನಾಡಿ, ಎಚ್.ಎಂ.ಕೃಷ್ಣಮೂರ್ತಿ ಅಭಿವೃದ್ದಿ ವಿಚಾರದಲ್ಲಿ ಚರ್ಚಿಸಲಿ ಅದನ್ನು ಬಿಟ್ಟು  ಶಾಸಕರ ಬಗ್ಗೆ ಅಗುರವಾಗಿ, ಏಕವಚನದಲ್ಲಿ ಮಾತನಾಡಿದರೆ ತಕ್ಕಪಾಠ ಕಲಿಸಲಾಗುವುದು, ಅಭಿವೃದ್ದಿಗೆ ಸಹಕಾರ ನೀಡಲಿ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡದೆ ಆಸ್ಪತ್ರೆ ನಿರ್ಮಾಣಕ್ಕೆ ವಿರೊಧಿಸುವುದು ಸರಿಯಲ್ಲ ಇದು ಸಾರ್ವಜನಿಕರ ಸ್ವತ್ತು. ಕಾನೂನಾತ್ಮಕವಾಗಿಯೇ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರು ಮುಂದಾಗಿದ್ದಾರೆ ಜೇಡ್ರಹಳ್ಳಿ ಕೃಷ್ಣಪ್ಪ, ಮರೂರು ಸಾಗರ್ ಗೌಡ ಮಾಗಡಿ  ಸರಕಾರಿ ಆಸ್ಪತ್ರೆಯಲ್ಲಿ ಎಷ್ಟು ದಿನ ಚಿಕಿತ್ಸೆ ಪಡೆದಿದ್ದಾರೆ ತಿಳಿಸಲಿ  ಆಸ್ಪತ್ರೆ ನಿರ್ಮಾಣದ ವಿಚಾರದಲ್ಲಿ ಮಾತನಾಡಲು ಇವರಿಗೆ ಹಕ್ಕಿಲ್ಲ ಎಂದು ಲೇವಡಿ ಮಾಡಿದರು.
ಕುದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕೆಂಪೇಗೌಡರ ಬಗ್ಗೆ ಎಲ್ಲರಿಗೂ ಅಭಿಮಾನ, ಗೌರವವಿದೆ ಅದರಂತೆ ಆಸ್ಪತ್ರೆಯೂ ಪ್ರಮುಖವಾಗಿದೆ ಯಾವುದೇ ಧಕ್ಕೆ ಬಾರದಂತೆ ಪ್ರತಿಮೆ ಸ್ಥಳಾಂತರಿಸಲಾಗುತ್ತಿದೆ, ಆಸ್ಪತ್ರೆ ನಿರ್ಮಾಣಕ್ಕೆ ಯಾರು ಅಡ್ಡಿಪಡಿಸಬಾರದು. 100 ಕೋಟಿರೂ ವೆಚ್ಚದಲ್ಲಿ ಕೋಟೆ ಅಭಿವೃದ್ದಿಪಡಿಸಿ ಮಧ್ಯದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಉದ್ದೇಶವಿದೆ, ರಾಮನಗರದಲ್ಲಿ  ರಾಜೀವ್ ಗಾಂಧಿ ಆರೋಗ್ಯ ಯೂನಿವರ್ ಸಿಟಿ ಆಗುತ್ತಿರುವುದರಿಂದ ಮಾಗಡಿಯಲ್ಲಿ ಸುಸರ್ಜಿತ ಆಸ್ಪತ್ರೆ ನಿರ್ಮಾಣವಾಗುವುದರಿಂದ ನುರಿತ ವೈದ್ಯರು ಬರಲಿದ್ದಾರೆ ಇದರಿಂದ ಬಡವರಿಗೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಬಹುದು ಅಭಿವೃದ್ದಿಗೆ ಕಾಲು ಏಳೆಯದೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗ್ರೋಪುರುಷೋತ್ತಮ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಕಲ್ಕೆರೆ ಶಿವಣ್ಣ, ಪುರಸಭೆ ಮಾಜಿ ಅಧ್ಯಕ್ಷ ರಂಗಹನುಮಯ್ಯ, ಮಾಜಿ ಸದಸ್ಯರಾದ ರೂಪೇಶ್, ಆಶ್ವಥ್, ಟಿಎಪಿಸಿಎಂಎಸ್ ನಿರ್ದೆಶಕ ರಮೇಶ್, ದೊಡ್ಡಿ ಲೋಕೇಶ್, ತಿರುಮಲೆ ವೆಂಕಟೇಶ್ ಇದ್ದರು.
    user_Siddalinga siddalinga
    Siddalinga siddalinga
    ಮಾಗಡಿ, ರಾಮನಗರ, ಕರ್ನಾಟಕ•
    5 hrs ago
  • KOLAR KI.AWAAZ KOUSAR NEWS. KOLAR
    1
    KOLAR KI.AWAAZ KOUSAR NEWS. KOLAR
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    38 min ago
  • Post by ಅರವಿಂದ್ ರಾಜೀವ್
    1
    Post by ಅರವಿಂದ್ ರಾಜೀವ್
    user_ಅರವಿಂದ್ ರಾಜೀವ್
    ಅರವಿಂದ್ ರಾಜೀವ್
    ಬೆಂಗಳೂರು ಉತ್ತರ, ಬೆಂಗಳೂರು ನಗರ, ಕರ್ನಾಟಕ•
    1 hr ago
  • 'ರಾಮಾಯಣ' ಟೀಸರ್.. ರಾಮನ ಲುಕ್ ರಿವೀಲ್! ರಣ್‌ಬೀ‌ರ್ ಕಪೂರ್, ಯಶ್ ಅಭಿನಯದ 'ರಾಮಾಯಣ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹನುಮ ಜಯಂತಿ ಅಂಗವಾಗಿ 'ರಾಮ' ಹೆಸರಿನಲ್ಲಿ ನಿರ್ಮಾಪಕರು ವಿಶೇಷ ವಿಡಿಯೋ ರಿಲೀಸ್ ಮಾಡಿದ್ದಾರೆ. 2.38 ನಿಮಿಷಗಳ ವಿಡಿಯೋದಲ್ಲಿ ರಾಮನಾಗಿ ರಣ್‌ಬೀ‌ರ್ ಲುಕ್, VFX, BGM ಗಮನ ಸೆಳೆಯುತ್ತಿವೆ. ನಿತೇಶ್ ತಿವಾರಿ ಈ ಪೌರಾಣಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ವರ್ಷ ದೀಪಾವಳಿ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಪಾರ್ಟ್-2 ಮುಂದಿನ ವರ್ಷದ ದೀಪಾವಳಿಗೆ ಬರಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ✍️ವರದಿ: ಸುರೇಂದ್ರ ಶಿವಮೊಗ್ಗ....
    2
    'ರಾಮಾಯಣ' ಟೀಸರ್.. ರಾಮನ ಲುಕ್ ರಿವೀಲ್!
ರಣ್‌ಬೀ‌ರ್ ಕಪೂರ್, ಯಶ್ ಅಭಿನಯದ 'ರಾಮಾಯಣ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹನುಮ ಜಯಂತಿ ಅಂಗವಾಗಿ 'ರಾಮ' ಹೆಸರಿನಲ್ಲಿ ನಿರ್ಮಾಪಕರು ವಿಶೇಷ ವಿಡಿಯೋ ರಿಲೀಸ್ ಮಾಡಿದ್ದಾರೆ. 2.38 ನಿಮಿಷಗಳ ವಿಡಿಯೋದಲ್ಲಿ ರಾಮನಾಗಿ ರಣ್‌ಬೀ‌ರ್ ಲುಕ್, VFX, BGM ಗಮನ ಸೆಳೆಯುತ್ತಿವೆ. ನಿತೇಶ್ ತಿವಾರಿ ಈ ಪೌರಾಣಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ವರ್ಷ ದೀಪಾವಳಿ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಪಾರ್ಟ್-2 ಮುಂದಿನ ವರ್ಷದ ದೀಪಾವಳಿಗೆ ಬರಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
✍️ವರದಿ: ಸುರೇಂದ್ರ ಶಿವಮೊಗ್ಗ....
    user_Surendra Shimoga
    Surendra Shimoga
    Shuru News Publisher Bengaluru South, Bengaluru Urban•
    10 hrs ago
  • ಕಾಫಿ ಶಾಪ್ ಬಳಿ ಡ್ರಗ್ಸ್ ಗಲಾಟೆ ಸಿಬ್ಬಂದಿ-ಯುವಕರ ನಡುವೆ ಹಲ್ಲೆ ಪ್ರಕರಣಮಂಗಳವಾರ ರಾತ್ರಿ ಕೊತ್ತನೂರಿನ ಭಾರತಿ ಸಿಟಿಯ ಕಾಫಿ ಶಾಪ್ ಬಳಿ ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪಿನ ನಡುವೆ ಗಲಾಟೆ ನಡೆದ ಘಟನೆ ಆತಂಕ ಮೂಡಿಸಿದೆ. ಹೋಟೆಲ್ ಬಳಿ ಕೆಲ ಯುವಕರು ಸಿರಿಂಜ್ ಮೂಲಕ ಮಾದಕ ದ್ರವ್ಯ ಸೇವಿಸುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಅವರನ್ನು ಪ್ರಶ್ನಿಸಿ ಹೊರಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಆಕ್ರೋಶಗೊಂಡ ಯುವಕರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಪ್ರತಿಯಾಗಿ ಸಿಬ್ಬಂದಿಯೂ ಹಲ್ಲೆ ನಡೆಸಿದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪ್ರಕರಣ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    1
    ಕಾಫಿ ಶಾಪ್ ಬಳಿ ಡ್ರಗ್ಸ್ ಗಲಾಟೆ
ಸಿಬ್ಬಂದಿ-ಯುವಕರ ನಡುವೆ ಹಲ್ಲೆ ಪ್ರಕರಣಮಂಗಳವಾರ ರಾತ್ರಿ ಕೊತ್ತನೂರಿನ ಭಾರತಿ ಸಿಟಿಯ ಕಾಫಿ ಶಾಪ್ ಬಳಿ ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪಿನ ನಡುವೆ ಗಲಾಟೆ ನಡೆದ ಘಟನೆ ಆತಂಕ ಮೂಡಿಸಿದೆ. ಹೋಟೆಲ್ ಬಳಿ ಕೆಲ ಯುವಕರು ಸಿರಿಂಜ್ ಮೂಲಕ ಮಾದಕ ದ್ರವ್ಯ ಸೇವಿಸುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಅವರನ್ನು ಪ್ರಶ್ನಿಸಿ ಹೊರಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಆಕ್ರೋಶಗೊಂಡ ಯುವಕರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಪ್ರತಿಯಾಗಿ ಸಿಬ್ಬಂದಿಯೂ ಹಲ್ಲೆ ನಡೆಸಿದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಪ್ರಕರಣ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.