logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೆಆರ್‌ಎಸ್‌ನಲ್ಲಿ ನೀರಿದ್ದಾಗ ಮಾತ್ರ ತಮಿಳುನಾಡಿಗೆ ನೀರು ಬಿಡುವುದಾಗಿ ರಾಜ್ಯ ಸರಕಾರ ಘೋಷಣೆ ಮಾಡಬೇಕು- ವೆಂಕಟಗಿರಿ ಯಯ್ಯ ಮಂಡ್ಯ: ಕೇಂದ್ರ ಸರಕಾರ ರಾಷ್ಟೀಯಸ ಜಲನೀತಿ ರೂಪಿಸುವವರೆಗೂ ಕೆಆರ್‌ಎಸ್‌ನಲ್ಲಿ ನೀರಿದ್ದಾಗ ಮಾತ್ರ ತಮಿಳುನಾಡಿಗೆ ನೀರು ಬಿಡುವುದಾಗಿ ರಾಜ್ಯ ಸರಕಾರ ಘೋಷಣೆ ಮಾಡಬೇಕು ಎಂದು ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಕಾವೇರಿ ನೀರು ನಿಯಂತ್ರಣಾ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸಬಾರದು. ಸ್ವಾತಂತ್ರö್ಯ ಪೂರ್ವದ 1924ರ ಕಾವೇರಿ ಒಪ್ಪಂದವನ್ನುದ ಆಧಾರದ ಮೇಲೆ ಸ್ವತಂತ್ರ್ಯ ಭಾರತದ ವಿವಿಧ ನ್ಯಾಯಾಲಯ ಮತ್ತು ಪ್ರಾಧಿಕಾರಗಳ ಅಸಂವಿಧಾನಿಕ ಆದೇಶ ಗಳನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು. ಕಾವೇರಿ ನದಿ ನೀರು ಹಂಚಿಕೆ ಸಂಬಂಧ 1924ರ ಒಪ್ಪಂದವು 50 ವರ್ಷಗಳ ಅವಧಿಗೆ ಸೀಮಿತವಾಗಿ 1974ಕ್ಕೆ ಅಂತಿಮಗೊಂಡಿದೆ. ಸಂವಿಧಾನದ ಅನುಚ್ಛೇದ 262ರಂದು ದೇಶದ ಮತ್ತು ಅಂತರಾಜ್ಯಗಳ ಎಲ್ಲ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವುದು ಸರಕಾರಗಳ ಬದ್ಧತೆಯಾಗಿದೆ. ಅಂತರ ರಾಜ್ಯ ಜಲವಿವಾದ ಪರಿಹಾರ ಕಾಯ್ದೆ ಸಂವಿಧಾನ ವಿರೋಧಿಯಾಗಿದ್ದು, 1924ರ ಮೈಸೂರು- ತಮಿಳುನಾಡು ನಡುವಿನ ಒಪ್ಪಂದಕ್ಕೆ ಇಂದಿಗೂ ಕೇಂದ್ರ ಹಾಗೂ ರಾಜ್ಯ ಸರಕಾಗಳು ಇಂದಿಗೂ ತಲೆ ಬಾಗಿರುವುದು ಖಂಡನಾರ್ಹ ಎಂದು ಕಿಡಿ ಕಾರಿದರು. ಇಲ್ಲಿಂದ ಹರಿಬಿಟ್ಟ ನೀರು ಸಂಗ್ರಹಿಸಿಟ್ಟುಕೊಳ್ಳದ ತಮಿಳುನಾಡು ಸರಕಾರಸಮುದ್ರಕ್ಕೆಹರಿಬಿಡುತ್ತಿದೆ. ಬಿಕ್ಕಟ್ಟು ಬಗೆಹರಿಸು ನೀಡು ಬಿಡುವ ಹಕ್ಕನ್ನು ಕೇಂದ್ರ ಸರಕಾರ ತಮ್ಮಲ್ಲೆ ಇರಿಸಿಕೊಂಡು ರಾಷ್ಟಿçÃಯ ಜಲನೀತಿ ರೂಪಿಸಬೇಕು. ಅಲ್ಲಿವರೆಗೂ ರಾಜ್ಯ ಸರಕಾರ ಇದ್ದಾಗ ಮಾತ್ರ ತಮಿಳುನಾಡಿಗೆ ನೀರು ಬಿಡಲು ಮುಂದಾಗಬೇಕು. ಇಲ್ಲವಾದಲ್ಲಿ ತೀವ್ರತರದ ಚಳುವಳಿಗೆ ಮುಂದಾಗಬೇಕಾಗುವುದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಆನಂದ, ಮಹಿಳಾ ಜಿಲ್ಲಾಧ್ಯಕ್ಷೆ ಸುಶ್ಮಿತ, ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಸಿದ್ದಯ್ಯ,ತಲ್ಲೊಕು ಅಧ್ಯಕ್ಷರಾದ ಕುಮಾರ್, ಬಸಸವರಾಜು, ಸದಸ್ಯ ಚಂದ್ರು ಇದ್ದರು.

1 hr ago
user_Arunprasad G B
Arunprasad G B
Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
1 hr ago

ಕೆಆರ್‌ಎಸ್‌ನಲ್ಲಿ ನೀರಿದ್ದಾಗ ಮಾತ್ರ ತಮಿಳುನಾಡಿಗೆ ನೀರು ಬಿಡುವುದಾಗಿ ರಾಜ್ಯ ಸರಕಾರ ಘೋಷಣೆ ಮಾಡಬೇಕು- ವೆಂಕಟಗಿರಿ ಯಯ್ಯ ಮಂಡ್ಯ: ಕೇಂದ್ರ ಸರಕಾರ ರಾಷ್ಟೀಯಸ ಜಲನೀತಿ ರೂಪಿಸುವವರೆಗೂ ಕೆಆರ್‌ಎಸ್‌ನಲ್ಲಿ ನೀರಿದ್ದಾಗ ಮಾತ್ರ ತಮಿಳುನಾಡಿಗೆ ನೀರು ಬಿಡುವುದಾಗಿ ರಾಜ್ಯ ಸರಕಾರ ಘೋಷಣೆ ಮಾಡಬೇಕು ಎಂದು ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಕಾವೇರಿ ನೀರು ನಿಯಂತ್ರಣಾ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸಬಾರದು. ಸ್ವಾತಂತ್ರö್ಯ ಪೂರ್ವದ 1924ರ ಕಾವೇರಿ ಒಪ್ಪಂದವನ್ನುದ ಆಧಾರದ ಮೇಲೆ ಸ್ವತಂತ್ರ್ಯ ಭಾರತದ ವಿವಿಧ ನ್ಯಾಯಾಲಯ ಮತ್ತು ಪ್ರಾಧಿಕಾರಗಳ ಅಸಂವಿಧಾನಿಕ ಆದೇಶ ಗಳನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು. ಕಾವೇರಿ ನದಿ ನೀರು ಹಂಚಿಕೆ ಸಂಬಂಧ 1924ರ ಒಪ್ಪಂದವು 50 ವರ್ಷಗಳ ಅವಧಿಗೆ ಸೀಮಿತವಾಗಿ 1974ಕ್ಕೆ ಅಂತಿಮಗೊಂಡಿದೆ. ಸಂವಿಧಾನದ ಅನುಚ್ಛೇದ 262ರಂದು ದೇಶದ ಮತ್ತು ಅಂತರಾಜ್ಯಗಳ ಎಲ್ಲ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವುದು ಸರಕಾರಗಳ ಬದ್ಧತೆಯಾಗಿದೆ. ಅಂತರ ರಾಜ್ಯ ಜಲವಿವಾದ ಪರಿಹಾರ ಕಾಯ್ದೆ ಸಂವಿಧಾನ ವಿರೋಧಿಯಾಗಿದ್ದು, 1924ರ ಮೈಸೂರು- ತಮಿಳುನಾಡು ನಡುವಿನ ಒಪ್ಪಂದಕ್ಕೆ ಇಂದಿಗೂ ಕೇಂದ್ರ ಹಾಗೂ ರಾಜ್ಯ ಸರಕಾಗಳು ಇಂದಿಗೂ ತಲೆ ಬಾಗಿರುವುದು ಖಂಡನಾರ್ಹ ಎಂದು ಕಿಡಿ ಕಾರಿದರು. ಇಲ್ಲಿಂದ ಹರಿಬಿಟ್ಟ ನೀರು ಸಂಗ್ರಹಿಸಿಟ್ಟುಕೊಳ್ಳದ ತಮಿಳುನಾಡು ಸರಕಾರಸಮುದ್ರಕ್ಕೆಹರಿಬಿಡುತ್ತಿದೆ. ಬಿಕ್ಕಟ್ಟು ಬಗೆಹರಿಸು ನೀಡು ಬಿಡುವ ಹಕ್ಕನ್ನು ಕೇಂದ್ರ ಸರಕಾರ ತಮ್ಮಲ್ಲೆ ಇರಿಸಿಕೊಂಡು ರಾಷ್ಟಿçÃಯ ಜಲನೀತಿ ರೂಪಿಸಬೇಕು. ಅಲ್ಲಿವರೆಗೂ ರಾಜ್ಯ ಸರಕಾರ ಇದ್ದಾಗ ಮಾತ್ರ ತಮಿಳುನಾಡಿಗೆ ನೀರು ಬಿಡಲು ಮುಂದಾಗಬೇಕು. ಇಲ್ಲವಾದಲ್ಲಿ ತೀವ್ರತರದ ಚಳುವಳಿಗೆ ಮುಂದಾಗಬೇಕಾಗುವುದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಆನಂದ, ಮಹಿಳಾ ಜಿಲ್ಲಾಧ್ಯಕ್ಷೆ ಸುಶ್ಮಿತ, ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಸಿದ್ದಯ್ಯ,ತಲ್ಲೊಕು ಅಧ್ಯಕ್ಷರಾದ ಕುಮಾರ್, ಬಸಸವರಾಜು, ಸದಸ್ಯ ಚಂದ್ರು ಇದ್ದರು.

More news from ಕರ್ನಾಟಕ and nearby areas
  • *ಅರ್ಹ ಮತದಾರರು ಹೊರಗುಳಿಯದಂತೆ, ಅನರ್ಹರು ಸೇರ್ಪಡೆಯಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ- ಡಾ. ಕುಮಾರ ಮಂಡ್ಯ, ಜುಲೈ 31: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಕಾರ್ಯವನ್ನು ನಿಗದಿತ ವೇಳಾಪಟ್ಟಿಯಂತೆ ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ಮತದಾರರು ಪಟ್ಟಿಗೆ ಸೇರ್ಪಡೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯ ಶುದ್ಧತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು ಚುನಾವಣಾ ಆಯೋಗದ ಪ್ರಮುಖ ಆದ್ಯತೆಯಾಗಿದ್ದು, ಪ್ರತಿಯೊಂದು ಮಾಹಿತಿಯನ್ನು ನಿಖರವಾಗಿ ಪರಿಶೀಲಿಸಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಮನೆ ಮನೆಗೆ ಭೇಟಿ ನೀಡಿ ವಿತರಿಸಲಾದ ಗಣತಿ ನಮೂನೆಗಳನ್ನು ಹಿಂಪಡೆಯುವ ಕಾರ್ಯ ಪ್ರಗತಿಯಲ್ಲಿದ್ದು, ಆಗಸ್ಟ್ 8, 2026 ನಮೂನೆ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮತದಾರರು ಭರ್ತಿ ಮಾಡಿದ ನಮೂನೆಗಳನ್ನು ನಿಗದಿತ ಅವಧಿಯೊಳಗೆ ಹಿಂದಿರುಗಿಸುವ ಮೂಲಕ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ಜಿಂಗಲ್‌ಗಳನ್ನು ಅಳವಡಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ ಒಟ್ಟು 15,75,849 ಮತದಾರರ ಪೈಕಿ ಇದುವರೆಗೆ 13,94,203 (88.47%) ಮತದಾರರ ಗಣತಿ ನಮೂನೆಗಳನ್ನು ಗಣಕೀಕರಣ ಮಾಡಲಾಗಿದೆ. ಜೊತೆಗೆ 1,49,347 (9.48%) ಮತದಾರರನ್ನು ASDDO (Absent, Shifted, Death, Duplicate, Others) ವಿಭಾಗದಡಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು. ಗುರುತಿಸಲಾದವರ ಪೈಕಿ 41,589 ಮಂದಿ ಮೃತ ಮತದಾರರು, 17,240 ಮಂದಿ ಗೈರು ಮತದಾರರು, 76,720 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರು, 13,377 ಮಂದಿ ಪುನರಾವರ್ತಿತ ಮತದಾರರು ಹಾಗೂ 421 ಮಂದಿ ಗಣತಿ ನಮೂನೆಯನ್ನು ಹಿಂದಿರುಗಿಸಲು ನಿರಾಕರಿಸಿರುವ ಮತದಾರರಾಗಿದ್ದಾರೆ ಎಂದು ಸಭೆಯಲ್ಲಿ ವಿವರಿಸಿದರು. ಮನೆ ಮನೆ ಸಮೀಕ್ಷೆಯಲ್ಲಿ ಈಗಾಗಲೇ ವಿತರಿಸಲಾದ ನಮೂನೆಗಳ ಪೈಕಿ 32,299 (2.05%) ನಮೂನೆಗಳ ಸಂಗ್ರಹಣೆ ಹಾಗೂ ಗಣಕೀಕರಣ ಬಾಕಿಯಿದ್ದು, ಮುಂದಿನ ಮೂರುರಿಂದ ನಾಲ್ಕು ದಿನಗಳೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಪ್ರತಿ ದಿನದ ಪ್ರಗತಿ ವಿವರವನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮಾಧ್ಯಮಗಳಿಗೆ ನಿಯಮಿತವಾಗಿ ನೀಡಲಾಗುತ್ತಿದ್ದು, ಸಂಪೂರ್ಣ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ, ASDDO ವಿಭಾಗದಡಿ ಗುರುತಿಸಲಾದ ಮತದಾರರ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಲು ವಿಶೇಷ ತಂಡಗಳನ್ನು ರಚಿಸಿ ಮರುಪರಿಶೀಲನೆ ನಡೆಸುವಂತೆ ಮೇಲ್ವಿಚಾರಕರಿಗೆ ಸೂಚನೆ ನೀಡಲಾಗುತ್ತದೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ತಪ್ಪದೇ ಉಳಿಯುವಂತೆ ಹಾಗೂ ಅನರ್ಹರ ಸೇರ್ಪಡೆಯಾಗದಂತೆ ನಿಖರ ಪರಿಶೀಲನೆಗೆ ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಆಗಸ್ಟ್ 17, 2026ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಬಳಿಕ ಆಗಸ್ಟ್ 17ರಿಂದ ಸೆಪ್ಟೆಂಬರ್ 16, 2026ರವರೆಗೆ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು. ಈ ಅವಧಿಯನ್ನು ಸದುಪಯೋಗಪಡಿಸಿಕೊಂಡು ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷರಾದ ಸಿ.ಡಿ ಗಂಗಾಧರ,ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರ್ ರಾದ ರವಿಶಂಕರ್ ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಉಪಸ್ಥಿತರಿದ್ದರು.
    1
    *ಅರ್ಹ ಮತದಾರರು ಹೊರಗುಳಿಯದಂತೆ, ಅನರ್ಹರು ಸೇರ್ಪಡೆಯಾಗದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ- ಡಾ. ಕುಮಾರ
ಮಂಡ್ಯ, ಜುಲೈ 31: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಕಾರ್ಯವನ್ನು ನಿಗದಿತ ವೇಳಾಪಟ್ಟಿಯಂತೆ ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ಮತದಾರರು ಪಟ್ಟಿಗೆ ಸೇರ್ಪಡೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯ ಶುದ್ಧತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು ಚುನಾವಣಾ ಆಯೋಗದ ಪ್ರಮುಖ ಆದ್ಯತೆಯಾಗಿದ್ದು, ಪ್ರತಿಯೊಂದು ಮಾಹಿತಿಯನ್ನು ನಿಖರವಾಗಿ ಪರಿಶೀಲಿಸಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮನೆ ಮನೆಗೆ ಭೇಟಿ ನೀಡಿ ವಿತರಿಸಲಾದ ಗಣತಿ ನಮೂನೆಗಳನ್ನು ಹಿಂಪಡೆಯುವ ಕಾರ್ಯ ಪ್ರಗತಿಯಲ್ಲಿದ್ದು, ಆಗಸ್ಟ್ 8, 2026 ನಮೂನೆ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮತದಾರರು ಭರ್ತಿ ಮಾಡಿದ ನಮೂನೆಗಳನ್ನು ನಿಗದಿತ ಅವಧಿಯೊಳಗೆ ಹಿಂದಿರುಗಿಸುವ ಮೂಲಕ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ಜಿಂಗಲ್‌ಗಳನ್ನು ಅಳವಡಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 15,75,849 ಮತದಾರರ ಪೈಕಿ ಇದುವರೆಗೆ 13,94,203 (88.47%) ಮತದಾರರ ಗಣತಿ ನಮೂನೆಗಳನ್ನು ಗಣಕೀಕರಣ ಮಾಡಲಾಗಿದೆ. ಜೊತೆಗೆ 1,49,347 (9.48%) ಮತದಾರರನ್ನು ASDDO (Absent, Shifted, Death, Duplicate, Others) ವಿಭಾಗದಡಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.
ಗುರುತಿಸಲಾದವರ ಪೈಕಿ 41,589 ಮಂದಿ ಮೃತ ಮತದಾರರು, 17,240 ಮಂದಿ ಗೈರು ಮತದಾರರು, 76,720 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರು, 13,377 ಮಂದಿ ಪುನರಾವರ್ತಿತ ಮತದಾರರು ಹಾಗೂ 421 ಮಂದಿ ಗಣತಿ ನಮೂನೆಯನ್ನು ಹಿಂದಿರುಗಿಸಲು ನಿರಾಕರಿಸಿರುವ ಮತದಾರರಾಗಿದ್ದಾರೆ ಎಂದು ಸಭೆಯಲ್ಲಿ ವಿವರಿಸಿದರು.
ಮನೆ ಮನೆ ಸಮೀಕ್ಷೆಯಲ್ಲಿ ಈಗಾಗಲೇ ವಿತರಿಸಲಾದ ನಮೂನೆಗಳ ಪೈಕಿ 32,299 (2.05%) ನಮೂನೆಗಳ ಸಂಗ್ರಹಣೆ ಹಾಗೂ ಗಣಕೀಕರಣ ಬಾಕಿಯಿದ್ದು, ಮುಂದಿನ ಮೂರುರಿಂದ ನಾಲ್ಕು ದಿನಗಳೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಪ್ರತಿ ದಿನದ ಪ್ರಗತಿ ವಿವರವನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮಾಧ್ಯಮಗಳಿಗೆ ನಿಯಮಿತವಾಗಿ ನೀಡಲಾಗುತ್ತಿದ್ದು, ಸಂಪೂರ್ಣ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ, ASDDO ವಿಭಾಗದಡಿ ಗುರುತಿಸಲಾದ ಮತದಾರರ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಲು ವಿಶೇಷ ತಂಡಗಳನ್ನು ರಚಿಸಿ ಮರುಪರಿಶೀಲನೆ ನಡೆಸುವಂತೆ ಮೇಲ್ವಿಚಾರಕರಿಗೆ ಸೂಚನೆ ನೀಡಲಾಗುತ್ತದೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ತಪ್ಪದೇ ಉಳಿಯುವಂತೆ ಹಾಗೂ ಅನರ್ಹರ ಸೇರ್ಪಡೆಯಾಗದಂತೆ ನಿಖರ ಪರಿಶೀಲನೆಗೆ ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಆಗಸ್ಟ್ 17, 2026ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಬಳಿಕ ಆಗಸ್ಟ್ 17ರಿಂದ ಸೆಪ್ಟೆಂಬರ್ 16, 2026ರವರೆಗೆ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು. ಈ ಅವಧಿಯನ್ನು ಸದುಪಯೋಗಪಡಿಸಿಕೊಂಡು ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮೈಸೂರು ಸಕ್ಕರೆ ಕಂಪನಿ ನಿಯಮಿತ ಅಧ್ಯಕ್ಷರಾದ ಸಿ.ಡಿ ಗಂಗಾಧರ,ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರ್ ರಾದ ರವಿಶಂಕರ್ ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಉಪಸ್ಥಿತರಿದ್ದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    40 min ago
  • ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ,ಪ್ರತಿಭಟನೆ ಮದ್ದೂರು-ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ರಾಜ್ಯ ಸರ್ಕಾರದ ಆದೇಶವನ್ನು ವಿರೋಧಿಸಿ ಹಾಗೂ ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ, ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿನೋದ್ ಬಾಬಾ ನೇತೃತ್ವದಲ್ಲಿ ಕೆಸ್ತೂರು ವೃತ್ತ ಘಟಕದ ವತಿಯಿಂದ ಶನಿವಾರ ರಸ್ತೆತಡೆ ಪ್ರತಿಭಟನೆ ನಡೆಸಲಾಯಿತು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ರೈತರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಪರಿಣಾಮ ಸುಮಾರು ಎರಡು ಕಿಲೋಮೀಟರ್ವರೆಗೆ ವಾಹನಗಳ ಸಂಚಾರ ದಟ್ಟಣೆ ಉಂಟಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿನೋದ್ ಬಾಬಾ, ಕೆಆರ್ಎಸ್ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಕಬ್ಬು ಹಾಗೂ ವಿವಿಧ ತೋಟಗಾರಿಕೆ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ರಾಜ್ಯದ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    1
    ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ,ಪ್ರತಿಭಟನೆ
ಮದ್ದೂರು-ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ರಾಜ್ಯ ಸರ್ಕಾರದ ಆದೇಶವನ್ನು ವಿರೋಧಿಸಿ ಹಾಗೂ ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ, ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿನೋದ್ ಬಾಬಾ ನೇತೃತ್ವದಲ್ಲಿ ಕೆಸ್ತೂರು ವೃತ್ತ ಘಟಕದ ವತಿಯಿಂದ ಶನಿವಾರ ರಸ್ತೆತಡೆ ಪ್ರತಿಭಟನೆ ನಡೆಸಲಾಯಿತು.
ಬೆಳಿಗ್ಗೆ 11 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ರೈತರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಪರಿಣಾಮ ಸುಮಾರು ಎರಡು ಕಿಲೋಮೀಟರ್ವರೆಗೆ ವಾಹನಗಳ ಸಂಚಾರ ದಟ್ಟಣೆ ಉಂಟಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿನೋದ್ ಬಾಬಾ, ಕೆಆರ್ಎಸ್ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿರುವ ಕಬ್ಬು ಹಾಗೂ ವಿವಿಧ ತೋಟಗಾರಿಕೆ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ರಾಜ್ಯದ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    user_Vanitha
    Vanitha
    ಮದ್ದೂರು, ಮಂಡ್ಯ, ಕರ್ನಾಟಕ•
    2 hrs ago
  • ಆಗಸ್ಟ್ 15ರ ಐತಿಹಾಸಿಕ ರಕ್ತದಾನ ಶಿಬಿರ ಅಂಗವಾಗಿ ಮಳವಳ್ಳಿ ಪಟ್ಟಣದಲ್ಲಿ ಅಳವಡಿಸಿರುವ ಸ್ವಾಗತ ಕಮಾನುಗಳ ಉದ್ಘಾಟಿಸಿದ ಶ್ರೀಗಳು ಮಳವಳ್ಳಿ : ಬರುವ ಆಗಸ್ಟ್ 15 ರಂದು 80ನೇ ಸ್ವಾತಂತ್ರ್ಯೋ ತ್ಸದ ಅಂಗವಾಗಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಆಯೋಜಿ ಸಿರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಅಂಗವಾಗಿ ಮಳವಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಬೃಹತ್ ಸ್ವಾಗತ ಮಹಾದ್ವಾರ ಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಶನಿವಾರ ಮಧ್ಯಾಹ್ನ 12. 30 ರ ಸಮಯದಲ್ಲಿ ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾ ಣದ ಮುಂಭಾಗ ಮೈಸೂರು ರಸ್ತೆಯಲ್ಲಿ ಅಳವಡಿಸಿರುವ ರಕ್ತದಾನಿಗಳ ಸ್ವಾಗತ ಮಹಾ ದ್ವಾರವನ್ನು‌ ಕುಂದೂರು ರಸ ಸಿದ್ದೇಶ್ವರ ಮಠದ ಶ್ರೀ ನಂಜುಂ ಡಸ್ವಾಮಿ ಅವರು ಉದ್ಘಾಟಿಸಿ ದರೆ ಇದೇ ರಸ್ತೆಯ ಇನ್ನೊಂದು ದ್ವಾರದ ಕಮಾನನ್ನು ರಾಜ ಸ್ತಾನ್ ಸಮಾಜದ ಮೋಹನ್ ಲಾಲ್ ಉದ್ಘಾಟಿಸಿದರು. ಪೇಟೆ ವೃತ್ತದ ಬಳಿಯ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ‌ ಅಳವಡಿಸಿ ರುವ ಸ್ವಾಗತ ಕಮಾನನ್ನು ರಾಜಸ್ತಾನ್ ಸಮಾಜದ ಮುಖಂಡರಾದ ಮದನ್ ಲಾಲ್ ಉದ್ಘಾಟಿಸಿದರೆ ಇನ್ನೊಂದು ಬದಿಯ‌ ಕಮಾನನ್ನು ಟಿಎಪಿಸಿ ಎಂಎಸ್ ಅಧ್ಯಕ್ಷರಾದ ದ್ಯಾಪೇ ಗೌಡ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶ್ರೀ ನಂಜುಂಡ ಸ್ವಾಮಿ ಅವರು ರಕ್ತದಾನ ಮಹಾದಾನವಾಗಿದ್ದು ಇಂತಹದೊಂದು ರಕ್ತದಾನ ಶಿಬಿರವನ್ನು ಮಳವಳ್ಳಿಯಲ್ಲಿ ಏರ್ಪಡಿಸಿರುವುದು ನಿಜಕ್ಕೂ ಐತಿಹಾಸಿಕ ಎಂದು ಪ್ರಶಂಸಿಸಿ ದರು ಪಕ್ಷಾತೀತವಾಗಿ ಜಾತ್ಯಾತೀ ತವಾಗಿ ಆಯೋಜಿಸಿರುವು ಟೀಮ್ ಮಳವಳ್ಳಿಯ ಎಲ್ಲಾ ಸದ್ಬಕ್ತರ ಈ ಕಾರ್ಯ ಮಳವ ಳ್ಳಿಯ ಕೀರ್ತಿಪತಾಕೆ ನಾಡಿನೆ ಲ್ಲಡೆ ಹರಡುವಂತೆ ಮಾಡಿದೆ ಎಂದು ಶ್ಲಾಘಿಸಿದ ಶ್ರೀಗಳು ಈ ಶಿಬಿರ ಯಶಸ್ವಿಯಾಗಲಿ ಇಂತಕ ಮಹತ್ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಟೀಮ್ ಮಳವಳ್ಳಿಯ ಎಲ್ಲಾ ಭಕ್ತರಿಗೂ ಭಗವಂತ ನೀಡಲಿ ಎಂದು ಶುಭ ಹಾರೈಸಿದರು.‌ ಪುರಸಭೆಯ ಮಾಜಿ ಉಪಾಧ್ಯಕ್ಷ ನಂದ ಕುಮಾರ್, ನೀವೃತ್ತ ಸೈನಿಕ ಸುರೇಶ್, ಮುಖಂಡರಾದ ಎಟಿಎಂ ಸ್ವಾಮಿ, ಗುಂಡ, ಬದ್ರಿ ಸೇರಿ ಹಲವಾರು ಮುಖಂಡರ ಜೊತೆ ಟೀಮ್ ಮಳವಳ್ಳಿಯ ಹಲವಾರು ಕಾರ್ಯಕರ್ತರು ಈ ವೇಳೆ ಹಾಜರಿದ್ದರು.
    1
    ಆಗಸ್ಟ್ 15ರ ಐತಿಹಾಸಿಕ ರಕ್ತದಾನ ಶಿಬಿರ ಅಂಗವಾಗಿ ಮಳವಳ್ಳಿ ಪಟ್ಟಣದಲ್ಲಿ ಅಳವಡಿಸಿರುವ ಸ್ವಾಗತ ಕಮಾನುಗಳ ಉದ್ಘಾಟಿಸಿದ ಶ್ರೀಗಳು
ಮಳವಳ್ಳಿ : ಬರುವ ಆಗಸ್ಟ್ 15 ರಂದು 80ನೇ ಸ್ವಾತಂತ್ರ್ಯೋ ತ್ಸದ ಅಂಗವಾಗಿ ಟೀಮ್ ಮಳವಳ್ಳಿ ಯುವಕ ಮಿತ್ರರ ಬಳಗದ ವತಿಯಿಂದ ಆಯೋಜಿ ಸಿರುವ ಐತಿಹಾಸಿಕ ಬೃಹತ್ ರಕ್ತದಾನ ಶಿಬಿರದ ಅಂಗವಾಗಿ ಮಳವಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಬೃಹತ್ ಸ್ವಾಗತ ಮಹಾದ್ವಾರ ಗಳ ಉದ್ಘಾಟನಾ ಕಾರ್ಯಕ್ರಮ  ಜರುಗಿತು. ಶನಿವಾರ ಮಧ್ಯಾಹ್ನ 12. 30 ರ ಸಮಯದಲ್ಲಿ ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾ ಣದ ಮುಂಭಾಗ ಮೈಸೂರು ರಸ್ತೆಯಲ್ಲಿ ಅಳವಡಿಸಿರುವ ರಕ್ತದಾನಿಗಳ  ಸ್ವಾಗತ ಮಹಾ ದ್ವಾರವನ್ನು‌ ಕುಂದೂರು ರಸ ಸಿದ್ದೇಶ್ವರ ಮಠದ ಶ್ರೀ ನಂಜುಂ ಡಸ್ವಾಮಿ ಅವರು ಉದ್ಘಾಟಿಸಿ ದರೆ ಇದೇ ರಸ್ತೆಯ ಇನ್ನೊಂದು ದ್ವಾರದ ಕಮಾನನ್ನು ರಾಜ ಸ್ತಾನ್ ಸಮಾಜದ ಮೋಹನ್ ಲಾಲ್ ಉದ್ಘಾಟಿಸಿದರು.  ಪೇಟೆ ವೃತ್ತದ ಬಳಿಯ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ‌ ಅಳವಡಿಸಿ ರುವ ಸ್ವಾಗತ ಕಮಾನನ್ನು ರಾಜಸ್ತಾನ್ ಸಮಾಜದ ಮುಖಂಡರಾದ ಮದನ್ ಲಾಲ್ ಉದ್ಘಾಟಿಸಿದರೆ ಇನ್ನೊಂದು ಬದಿಯ‌ ಕಮಾನನ್ನು ಟಿಎಪಿಸಿ ಎಂಎಸ್ ಅಧ್ಯಕ್ಷರಾದ ದ್ಯಾಪೇ ಗೌಡ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶ್ರೀ ನಂಜುಂಡ ಸ್ವಾಮಿ ಅವರು ರಕ್ತದಾನ ಮಹಾದಾನವಾಗಿದ್ದು ಇಂತಹದೊಂದು ರಕ್ತದಾನ ಶಿಬಿರವನ್ನು ಮಳವಳ್ಳಿಯಲ್ಲಿ ಏರ್ಪಡಿಸಿರುವುದು ನಿಜಕ್ಕೂ ಐತಿಹಾಸಿಕ ಎಂದು ಪ್ರಶಂಸಿಸಿ ದರು ಪಕ್ಷಾತೀತವಾಗಿ ಜಾತ್ಯಾತೀ ತವಾಗಿ  ಆಯೋಜಿಸಿರುವು ಟೀಮ್ ಮಳವಳ್ಳಿಯ ಎಲ್ಲಾ ಸದ್ಬಕ್ತರ ಈ ಕಾರ್ಯ ಮಳವ ಳ್ಳಿಯ ಕೀರ್ತಿಪತಾಕೆ ನಾಡಿನೆ ಲ್ಲಡೆ ಹರಡುವಂತೆ ಮಾಡಿದೆ ಎಂದು ಶ್ಲಾಘಿಸಿದ ಶ್ರೀಗಳು ಈ ಶಿಬಿರ ಯಶಸ್ವಿಯಾಗಲಿ ಇಂತಕ ಮಹತ್ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ಟೀಮ್ ಮಳವಳ್ಳಿಯ ಎಲ್ಲಾ ಭಕ್ತರಿಗೂ ಭಗವಂತ ನೀಡಲಿ ಎಂದು ಶುಭ ಹಾರೈಸಿದರು.‌ ಪುರಸಭೆಯ ಮಾಜಿ ಉಪಾಧ್ಯಕ್ಷ ನಂದ ಕುಮಾರ್, ನೀವೃತ್ತ ಸೈನಿಕ ಸುರೇಶ್, ಮುಖಂಡರಾದ ಎಟಿಎಂ ಸ್ವಾಮಿ, ಗುಂಡ, ಬದ್ರಿ ಸೇರಿ ಹಲವಾರು ಮುಖಂಡರ ಜೊತೆ ಟೀಮ್ ಮಳವಳ್ಳಿಯ ಹಲವಾರು ಕಾರ್ಯಕರ್ತರು ಈ ವೇಳೆ ಹಾಜರಿದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    7 hrs ago
  • ತಮಿಳುನಾಡಿ ಗೆ ನೀರು ಬಿಡದಂತೆ ಸರ್ಕಾರ ತೀರ್ಮಾನ ಗೊಳ್ಳುವಂತೆ ಕಾರ್ಯಕರ್ತರಿಂದ ರಸ್ತೆ ತಡೆ ಪ್ರತಿಭಟನೆ ಮಳವಳ್ಳಿ: ತಮಿಳುನಾಡಿಗೆ ಕಾವೇರಿ ನೀರು ನಿರ್ವಾಹಣ ಮಂಡಳಿ ಆದೇಶದಂತೆ ಕಾವೇರಿನೀರು ಬಿಡಲು ಹೊರಟಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲಸಂಘಟನೆಯ ಕಾರ್ಯಕರ್ತರು ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗೇಟ್ ಬಳಿ ರಸ್ತೆತಡೆ ಹಾಗೂ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೇವಿಪುರಬಸವರಾಜು ನೇತೃತ್ವದಲ್ಲಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ, ಒಂದು ದಿನಕ್ಕೆ 3500 ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಾಹಣಾ ಮಂಡಳಿ ಆದೇಶ ಮಾಡಿದ್ದು, ರಾಜ್ಯ ಸರ್ಕಾರ ಆ ಆದೇಶವನ್ನು ತಿರಸ್ಕಾರ ಮಾಡಬೇಕು. ನಾಳೆ ವಿಧಾನಸಭೆ ಯಲ್ಲಿ ಸರ್ವಸದಸ್ಯರ ಸಭೆಯಲ್ಲಿ ರಾಜ್ಯ ಸರ್ಕಾರ ಕರೆದಿದ್ದು, ಎಲ್ಲಾ ಶಾಸಕರು ತಮಿಳುನಾಡಿಗೆ ನೀರು ಬಿಡದಂತೆ ತೀರ್ಮಾನ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇನ್ನೂ ಇದೇ ವೇಳೆ ತಾಲ್ಲೂಕು ಅಧ್ಯಕ್ಷ ದೇವಿಪುರ ಬಸವರಾಜು ಮಾತನಾಡಿ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗೆ ಕುಡಿಯಲು ನೀರಿಲ್ಲ , ತಮಿಳುನಾಡಿಗೆ ನೀರು ಬಿಡಬೇಕಂತೆ ಇದು ಸಾಧ್ಯವಿಲ್ಲ , ನೀರು ಬಿಟ್ಟರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ದೇವಿಪುರ ಬಸವರಾಜು, ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ, ಸೋ.ಶಿ ಪ್ರಕಾಶ, ಪ್ರಭುಲಿಂಗು, ಶಿವನಂಜು, ಭೂಮಿಗೌಡ, ಚೌಡೇಗೌಡ, ಮಲ್ಲೇಶ್, ಗಿರೀಶ್, ಹನುಮಂತ, ಕೃಷ್ಣ, ಲಿಂಗಪಟ್ಟಣ ಬಸವರಾಜು, ಮಹೇಶ್ ಸೇರಿದಂತೆ ಹಲವರು ಇದ್ದರು.
    1
    ತಮಿಳುನಾಡಿ ಗೆ ನೀರು  ಬಿಡದಂತೆ ಸರ್ಕಾರ ತೀರ್ಮಾನ ಗೊಳ್ಳುವಂತೆ  ಕಾರ್ಯಕರ್ತರಿಂದ  ರಸ್ತೆ ತಡೆ ಪ್ರತಿಭಟನೆ
ಮಳವಳ್ಳಿ: ತಮಿಳುನಾಡಿಗೆ  ಕಾವೇರಿ ನೀರು ನಿರ್ವಾಹಣ ಮಂಡಳಿ ಆದೇಶದಂತೆ       ಕಾವೇರಿನೀರು ಬಿಡಲು ಹೊರಟಿರುವುದನ್ನು  ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲಸಂಘಟನೆಯ ಕಾರ್ಯಕರ್ತರು ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗೇಟ್ ಬಳಿ ರಸ್ತೆತಡೆ ಹಾಗೂ  ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೇವಿಪುರಬಸವರಾಜು ನೇತೃತ್ವದಲ್ಲಿ  ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ  ರೈತ ಸಂಘದ  ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ,  ಒಂದು  ದಿನಕ್ಕೆ 3500 ಕ್ಯೂಸೆಕ್ಸ್   ನೀರು ಬಿಡುವಂತೆ ಕಾವೇರಿ ನೀರು ನಿರ್ವಾಹಣಾ ಮಂಡಳಿ ಆದೇಶ ಮಾಡಿದ್ದು, ರಾಜ್ಯ ಸರ್ಕಾರ  ಆ  ಆದೇಶವನ್ನು ತಿರಸ್ಕಾರ ಮಾಡಬೇಕು. ನಾಳೆ  ವಿಧಾನಸಭೆ ಯಲ್ಲಿ ಸರ್ವಸದಸ್ಯರ ಸಭೆಯಲ್ಲಿ  ರಾಜ್ಯ ಸರ್ಕಾರ ಕರೆದಿದ್ದು, ಎಲ್ಲಾ ಶಾಸಕರು  ತಮಿಳುನಾಡಿಗೆ  ನೀರು ಬಿಡದಂತೆ  ತೀರ್ಮಾನ ತೆಗೆದುಕೊಳ್ಳುವಂತೆ  ಆಗ್ರಹಿಸಿದರು.
ಇನ್ನೂ ಇದೇ ವೇಳೆ  ತಾಲ್ಲೂಕು ಅಧ್ಯಕ್ಷ  ದೇವಿಪುರ ಬಸವರಾಜು ಮಾತನಾಡಿ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗೆ ಕುಡಿಯಲು ನೀರಿಲ್ಲ , ತಮಿಳುನಾಡಿಗೆ  ನೀರು  ಬಿಡಬೇಕಂತೆ  ಇದು ಸಾಧ್ಯವಿಲ್ಲ , ನೀರು ಬಿಟ್ಟರೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ  ತಾಲ್ಲೂಕು ಅಧ್ಯಕ್ಷ ದೇವಿಪುರ ಬಸವರಾಜು,
ಜಿಲ್ಲಾ ಉಪಾಧ್ಯಕ್ಷ ರಾಮಲಿಂಗೇಗೌಡ, ಸೋ.ಶಿ ಪ್ರಕಾಶ, ಪ್ರಭುಲಿಂಗು, ಶಿವನಂಜು, ಭೂಮಿಗೌಡ, ಚೌಡೇಗೌಡ, ಮಲ್ಲೇಶ್, ಗಿರೀಶ್, ಹನುಮಂತ, ಕೃಷ್ಣ, ಲಿಂಗಪಟ್ಟಣ ಬಸವರಾಜು, ಮಹೇಶ್ ಸೇರಿದಂತೆ ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    9 hrs ago
  • All About,Anyone when if question them for Transparency they will Anytime Speak Contridectary Statements and blaming the Residents *ಭಾರತ ನಲ್ಲಿ ವೈರಲ್*
    1
    All About,Anyone when if question them for Transparency they will Anytime Speak Contridectary Statements and blaming the Residents 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    43 min ago
  • ಕನ್ನಡ ಸ್ಯಾಂಡಲ್ ವುಡ್ ಹೀರೋ ರಾವಣ ಪಾತ್ರದಲ್ಲಿ ಯಶ್ ಅವರು ಕಂಡುಬಂದ ದೃಶ್ಯ ಕನ್ನಡ ಸ್ಯಾಂಡಲ್ ವುಡ್ ಹೀರೋ ರಾವಣ ಪಾತ್ರದಲ್ಲಿ ಯಶ್ ಅವರು ಕಂಡುಬಂದ ದೃಶ್ಯ
    1
    ಕನ್ನಡ ಸ್ಯಾಂಡಲ್ ವುಡ್ ಹೀರೋ  ರಾವಣ ಪಾತ್ರದಲ್ಲಿ  ಯಶ್ ಅವರು  ಕಂಡುಬಂದ ದೃಶ್ಯ  
ಕನ್ನಡ ಸ್ಯಾಂಡಲ್ ವುಡ್ ಹೀರೋ  ರಾವಣ ಪಾತ್ರದಲ್ಲಿ  ಯಶ್ ಅವರು  ಕಂಡುಬಂದ ದೃಶ್ಯ
    user_ವೇದಾ ರಣ್ಯಾ
    ವೇದಾ ರಣ್ಯಾ
    ಮೈಸೂರು, ಮೈಸೂರು, ಕರ್ನಾಟಕ•
    2 hrs ago
  • ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮೈಸೂರು_ ನಂಜನಗೂಡು ರಸ್ತೆ ತಡೆ ಪ್ರತಿಭಟನೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಮೈಸೂರು–ಊಟಿ ರಸ್ತೆಯ ನಂಜನಗೂಡು ಬಿ.ಡಿ.ಒ. ಕಚೇರಿ ಎದುರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ರಾಜ್ಯದ ನೀರಿನ ಹಿತಾಸಕ್ತಿಯನ್ನು ಕಾಪಾಡುವಂತೆ ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
    1
    ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮೈಸೂರು_ ನಂಜನಗೂಡು ರಸ್ತೆ ತಡೆ ಪ್ರತಿಭಟನೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಮೈಸೂರು–ಊಟಿ ರಸ್ತೆಯ ನಂಜನಗೂಡು ಬಿ.ಡಿ.ಒ. ಕಚೇರಿ ಎದುರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ರಾಜ್ಯದ ನೀರಿನ ಹಿತಾಸಕ್ತಿಯನ್ನು ಕಾಪಾಡುವಂತೆ ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
    user_Ashwini
    Ashwini
    ಮೈಸೂರು, ಮೈಸೂರು, ಕರ್ನಾಟಕ•
    5 hrs ago
  • ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತ ಕೈಜೋಡಿಸಬೇಕು-ವೆಂಕಟೇಶ್ ಸಮಾಜವನ್ನು ಡ್ರಗ್ಸ್ ಹಾಗೂ ಮಾದಕ ವಸ್ತುಗಳ ಹಾವಳಿಯಿಂದ ಮುಕ್ತಗೊಳಿಸಲು ಯುವಜನತೆ ಜವಾಬ್ದಾರಿಯುತವಾಗಿ ಕೈಜೋಡಿಸಬೇಕು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ವ್ಯಸನಗಳಿಂದ ದೂರವಿರುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯವೆಂಕಟೇಶ್ ತಿಳಿಸಿದರು. ಇಂದು ಮಂಡ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಡ್ಯ. ಪೊಲೀಸ್‌ ಇಲಾಖೆ ಹಾಗೂ ಮಂಡ್ಯ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಮ.ನಿ.ಪ್ರ.ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ* ವ್ಯಸನ ಮುಕ್ತ ದಿನಾಚರಣೆ ಮಾದಕ (ಡ್ರಗ್ಸ್) ವ್ಯಸನ ವಿರೋಧಿ, ಬಾಲ್ಯವಿವಾಹ, ಪೋಕೋ ಕಾಯ್ದೆ ಬಾಲಗರ್ಭಿಣಿ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು. ಮಾದಕ ವಸ್ತು ಬಳಕೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯ ಹಾಳಾಗುತ್ತದೆ. ಇಂದಿನ ಯುವ ಜನತೆ ಭಗತ್ ಸಿಂಗ್.ವಿವೇಕಾನಂದ. ಅಂಬೇಡ್ಕರ್ ರವರ ಆದರ್ಶವನ್ನು ಪಾಲಿಸಬೇಕು ಡ್ರಗ್ಸ್ ಮುಕ್ತ ಭಾರತಕ್ಕೆ ಯುವ ಜನತೆ ಸಂಕಲ್ಪ ಮಾಡಬೇಕು ಎಂದರು ಯುವಕರು ಯಾವುದೇ ರೀತಿಯ ಮಾದಕ ವಸ್ತುಗಳಿಗೆ ಬಲಿಯಾಗದೆ ಆರೋಗ್ಯಕರ, ಶಿಸ್ತುಬದ್ಧ ಹಾಗೂ ಜವಾಬ್ದಾರಿಯುತ ಜೀವನ ನಡೆಸುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು. ಡ್ರಗ್ಸ್ ಎಂಬ ಮಾದಕ ವಸ್ತುಗಳು ವಿಶ್ವದಾದ್ಯಂತ ಯುವಜನತೆಯ ಭವಿಷ್ಯವನ್ನು ಹಾಳುಮಾಡುತ್ತಿರುವ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಬೆಳೆಯುತ್ತಿವೆ. ಕ್ಷಣಿಕ ಸುಖ ಮತ್ತು ದುಷ್ಟ ಸಹವಾಸದ ಕಾರಣದಿಂದ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತದೆ. ಒಮ್ಮೆ ವ್ಯಸನಕ್ಕೆ ಒಳಗಾದರೆ ಅದರಿಂದ ಹೊರಬರುವುದು ಅತ್ಯಂತ ಕಷ್ಟಕರವಾಗಿರುವುದರಿಂದ ಪ್ರತಿಯೊಬ್ಬ ಯುವಕ-ಯುವತಿಯೂ ವ್ಯಸನಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು. ಮಾದಕ ವಸ್ತುಗಳು ಮಾನವನ ಮೆದುಳು, ನರಮಂಡಲ ಹಾಗೂ ದೇಹದ ವಿವಿಧ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಕುಟುಂಬ ಮತ್ತು ಸಮಾಜದ ನೆಮ್ಮದಿಯನ್ನೂ ಹಾಳುಮಾಡುತ್ತವೆ. ಆದ್ದರಿಂದ ಯುವಜನತೆ ವ್ಯಸನದ ದುಷ್ಪರಿಣಾಮಗಳ ಬಗ್ಗೆ ತಮ್ಮ ಸ್ನೇಹಿತರು, ಸಹಪಾಠಿಗಳು ಹಾಗೂ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಸಾಮಾಜಿಕ ಜವಾಬ್ದಾರಿಯನ್ನು ವಹಿಸಬೇಕು ಎಂದು ತಿಳಿಸಿದರು. ವ್ಯಸನಮುಕ್ತ ಮನಸ್ಸಿನಿಂದಲೇ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ. ದೈಹಿಕವಾಗಿ ಸದೃಢರಾಗಿದ್ದರೆ ಮಾನಸಿಕವಾಗಿಯೂ ಸದೃಢರಾಗಲು ಸಾಧ್ಯ. ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಡ್ರಗ್ಸ್ ಹಾಗೂ ಇತರೆ ದುಶ್ಚಟಗಳಿಂದ ಸಂಪೂರ್ಣವಾಗಿ ದೂರವಿರಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಂಡು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಶಾಲಾ-ಕಾಲೇಜುಗಳ ಸುತ್ತಮುತ್ತ ಅಥವಾ ಸಮಾಜದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆ ಅಥವಾ ಮಾರಾಟ ನಡೆಯುತ್ತಿರುವುದು ಕಂಡುಬಂದರೆ ಮೌನವಾಗಿರದೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕು. ಹದಿಹರೆಯದ ಮಕ್ಕಳು ವ್ಯಸನದ ಬಲೆಗೆ ಸಿಲುಕದಂತೆ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ತಿಳಿಸಿದರು. ಯುವಜನತೆ ವ್ಯಸನಮುಕ್ತ ಜೀವನವನ್ನು ಅಳವಡಿಸಿಕೊಂಡು ದೇಶಪ್ರೇಮ, ಕಾನೂನು ಪಾಲನೆ, ಪೋಷಕರಿಗೆ ಗೌರವ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ಯುವಕ-ಯುವತಿಯ ಸಂಕಲ್ಪದಿಂದಲೇ ಡ್ರಗ್ಸ್ ಮುಕ್ತ, ಆರೋಗ್ಯವಂತ ಹಾಗೂ ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ವೆಂಕಟೇಶ್ ಅಭಿಪ್ರಾಯಪಟ್ಟರು. ಪ್ರಾಸ್ತವಿಕ ನುಡಿಗಳನ್ನಾಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಎನ್. ಟಿ. ಯೋಗೇಶ್ ಮಾತನಾಡಿ ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಜಾಗೃತಿ ಹಾಗೂ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಭಿಕ್ಷೆಯ ರೂಪದಲ್ಲಿ ವ್ಯಸನ ಮುಕ್ತ ಮಾಡಲು ಪ್ರತಿಜ್ಞೆಯನ್ನು ಮಾಡಿದವರು ಮಹಾಂತ ಶಿವಯೋಗಿ ಸ್ವಾಮೀಜಿಗಳು ಅವರ ಜಯಂತಿ ಆಚರಣೆ ಆದರ್ಶನಿಯ ಎಂದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ನಿರ್ದೇಶಕ ಮಹದೇವ್ ರವರು ಮಾತನಾಡಿ ಹೆಣ್ಣು ಮಕ್ಕಳು ತಮ್ಮ ಮೇಲೆ ನಡೆಯುವ ಯಾವುದೇ ದೌರ್ಜನ್ಯವನ್ನು ಸಮಾಜ ಮುಂದೆ ಧೈರ್ಯವಾಗಿ ಎದುರಿಸುವ ಸಾಮರ್ಥ್ಯವನ್ನು ರೂಡಿಸಿಕೊಳ್ಳಬೇಕು. ಹೊರಗೆ ಹೋದ ಹೆಣ್ಣು ಮಕ್ಕಳು ಜಾಗೃತಿಯಿಂದ ಇರುವುದು ಸೂಕ್ತ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್ ಸೈಕಾಲಜಿಸ್ಟ್ ಮೊಹಮದ್ ಸುಹೇಲ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದರ ಬಗ್ಗೆ ಸಮಾಜದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಧೂಮಪಾನ, ಮದ್ಯಪಾನ ಹಾಗೂ ಇತರೆ ಮಾದಕ ವಸ್ತುಗಳ ಸೇವನೆಯಿಂದ ಮೆದುಳಿನಲ್ಲಿ ಡೋಪಮೀನ್ ಸೇರಿದಂತೆ ಕೆಲವು ರಾಸಾಯನಿಕಗಳ ಉತ್ಪತ್ತಿಯಾಗಿ ತಾತ್ಕಾಲಿಕ ಸಂತೋಷದ ಅನುಭವ ಉಂಟಾಗುತ್ತದೆ. ಆದರೆ ಇದೇ ಕ್ರಮೇಣ ಚಟವಾಗಿ ವ್ಯಕ್ತಿಯನ್ನು ವ್ಯಸನಕ್ಕೆ ದೂಡುತ್ತದೆ. ವ್ಯಸನವು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಜೀವನದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ಇಂದಿನ ಸ್ಪರ್ಧಾತ್ಮಕ ಜೀವನ, ಮಾನಸಿಕ ಒತ್ತಡ, ಆತಂಕ, ಸ್ನೇಹಿತರ ಪ್ರಭಾವ ಹಾಗೂ ಸಾಮಾಜಿಕ ಜಾಲತಾಣಗಳ ಪರಿಣಾಮದಿಂದ ಕೆಲ ಯುವಕರು ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆ. ಯಾವುದೇ ಸಮಸ್ಯೆಗೆ ಮಾದಕ ವಸ್ತುಗಳು ಪರಿಹಾರವಲ್ಲ. ಒತ್ತಡ ನಿವಾರಣೆಗೆ ಯೋಗ, ಧ್ಯಾನ, ಕ್ರೀಡೆ, ಸಂಗೀತ, ಪುಸ್ತಕ ಓದು ಹಾಗೂ ಕುಟುಂಬದವರೊಂದಿಗೆ ಮುಕ್ತ ಸಂವಾದ ನಡೆಸುವಂತಹ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ಸಂಪೂರ್ಣ ದೂರವಿದ್ದು ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣದತ್ತ ಗಮನಹರಿಸಬೇಕು. ಪೋಷಕರು ಮಕ್ಕಳ ವರ್ತನೆ, ಸ್ನೇಹ ಬಳಗ ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ಕಾಳಜಿ ವಹಿಸಿ, ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದರೆ ತಕ್ಷಣ ತಜ್ಞರ ಸಲಹೆ ಪಡೆಯಬೇಕು ಎಂದು ಅವರು ತಿಳಿಸಿದರು. ಇದೆ ಸಂದರ್ಭದಲ್ಲಿ ವ್ಯಸನ ಮುಕ್ತ ಸಮಾಜಕ್ಕೆ ಕೈಜೋಡಿಸುವುದಾಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು. ವೇದಿಕೆಯಲ್ಲಿ ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಪುಷ್ಪಲತಾ ಎಂ. ಸಿ.ತಂಬಾಕು ನಿಯಂತ್ರಣ ಕೋಶ ಅಧಿಕಾರಿಗಳಾದ ತಿಮ್ಮರಾಜು. ಸಿ ಡಬ್ಲ್ಯೂ ಸಿ ಅಧ್ಯಕ್ಷರಾದ ಸುಮಿತ್ರ. ಮುಖಂಡರಾದ ಚಿಕ್ಕಯ್ಯ. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಬಿ. ಎಸ್. ಅನುಪಮಾ. ರಕ್ಷಣಾ ಅಧಿಕಾರಿ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    1
    ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತ ಕೈಜೋಡಿಸಬೇಕು-ವೆಂಕಟೇಶ್
ಸಮಾಜವನ್ನು ಡ್ರಗ್ಸ್ ಹಾಗೂ ಮಾದಕ ವಸ್ತುಗಳ ಹಾವಳಿಯಿಂದ ಮುಕ್ತಗೊಳಿಸಲು ಯುವಜನತೆ ಜವಾಬ್ದಾರಿಯುತವಾಗಿ ಕೈಜೋಡಿಸಬೇಕು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ವ್ಯಸನಗಳಿಂದ ದೂರವಿರುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯವೆಂಕಟೇಶ್ ತಿಳಿಸಿದರು.
ಇಂದು ಮಂಡ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಡ್ಯ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಡ್ಯ. ಪೊಲೀಸ್‌ ಇಲಾಖೆ ಹಾಗೂ ಮಂಡ್ಯ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಮ.ನಿ.ಪ್ರ.ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ* ವ್ಯಸನ ಮುಕ್ತ ದಿನಾಚರಣೆ
ಮಾದಕ (ಡ್ರಗ್ಸ್) ವ್ಯಸನ ವಿರೋಧಿ, ಬಾಲ್ಯವಿವಾಹ, ಪೋಕೋ ಕಾಯ್ದೆ ಬಾಲಗರ್ಭಿಣಿ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತು ಬಳಕೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯ ಹಾಳಾಗುತ್ತದೆ. ಇಂದಿನ ಯುವ ಜನತೆ ಭಗತ್ ಸಿಂಗ್.ವಿವೇಕಾನಂದ. ಅಂಬೇಡ್ಕರ್ ರವರ ಆದರ್ಶವನ್ನು ಪಾಲಿಸಬೇಕು ಡ್ರಗ್ಸ್ ಮುಕ್ತ ಭಾರತಕ್ಕೆ ಯುವ ಜನತೆ ಸಂಕಲ್ಪ ಮಾಡಬೇಕು ಎಂದರು
ಯುವಕರು ಯಾವುದೇ ರೀತಿಯ ಮಾದಕ ವಸ್ತುಗಳಿಗೆ ಬಲಿಯಾಗದೆ ಆರೋಗ್ಯಕರ, ಶಿಸ್ತುಬದ್ಧ ಹಾಗೂ ಜವಾಬ್ದಾರಿಯುತ ಜೀವನ ನಡೆಸುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಡ್ರಗ್ಸ್ ಎಂಬ ಮಾದಕ ವಸ್ತುಗಳು ವಿಶ್ವದಾದ್ಯಂತ ಯುವಜನತೆಯ ಭವಿಷ್ಯವನ್ನು ಹಾಳುಮಾಡುತ್ತಿರುವ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಬೆಳೆಯುತ್ತಿವೆ. ಕ್ಷಣಿಕ ಸುಖ ಮತ್ತು ದುಷ್ಟ ಸಹವಾಸದ ಕಾರಣದಿಂದ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತದೆ. ಒಮ್ಮೆ ವ್ಯಸನಕ್ಕೆ ಒಳಗಾದರೆ ಅದರಿಂದ ಹೊರಬರುವುದು ಅತ್ಯಂತ ಕಷ್ಟಕರವಾಗಿರುವುದರಿಂದ ಪ್ರತಿಯೊಬ್ಬ ಯುವಕ-ಯುವತಿಯೂ ವ್ಯಸನಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ಮಾದಕ ವಸ್ತುಗಳು ಮಾನವನ ಮೆದುಳು, ನರಮಂಡಲ ಹಾಗೂ ದೇಹದ ವಿವಿಧ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಕುಟುಂಬ ಮತ್ತು ಸಮಾಜದ ನೆಮ್ಮದಿಯನ್ನೂ ಹಾಳುಮಾಡುತ್ತವೆ. ಆದ್ದರಿಂದ ಯುವಜನತೆ ವ್ಯಸನದ ದುಷ್ಪರಿಣಾಮಗಳ ಬಗ್ಗೆ ತಮ್ಮ ಸ್ನೇಹಿತರು, ಸಹಪಾಠಿಗಳು ಹಾಗೂ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಸಾಮಾಜಿಕ ಜವಾಬ್ದಾರಿಯನ್ನು ವಹಿಸಬೇಕು ಎಂದು ತಿಳಿಸಿದರು.
ವ್ಯಸನಮುಕ್ತ ಮನಸ್ಸಿನಿಂದಲೇ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ. ದೈಹಿಕವಾಗಿ ಸದೃಢರಾಗಿದ್ದರೆ ಮಾನಸಿಕವಾಗಿಯೂ ಸದೃಢರಾಗಲು ಸಾಧ್ಯ. 
ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಡ್ರಗ್ಸ್ ಹಾಗೂ ಇತರೆ ದುಶ್ಚಟಗಳಿಂದ ಸಂಪೂರ್ಣವಾಗಿ ದೂರವಿರಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಂಡು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಶಾಲಾ-ಕಾಲೇಜುಗಳ ಸುತ್ತಮುತ್ತ ಅಥವಾ ಸಮಾಜದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆ ಅಥವಾ ಮಾರಾಟ ನಡೆಯುತ್ತಿರುವುದು ಕಂಡುಬಂದರೆ ಮೌನವಾಗಿರದೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕು. ಹದಿಹರೆಯದ ಮಕ್ಕಳು ವ್ಯಸನದ ಬಲೆಗೆ ಸಿಲುಕದಂತೆ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ತಿಳಿಸಿದರು.
ಯುವಜನತೆ ವ್ಯಸನಮುಕ್ತ ಜೀವನವನ್ನು ಅಳವಡಿಸಿಕೊಂಡು ದೇಶಪ್ರೇಮ, ಕಾನೂನು ಪಾಲನೆ, ಪೋಷಕರಿಗೆ ಗೌರವ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ಯುವಕ-ಯುವತಿಯ ಸಂಕಲ್ಪದಿಂದಲೇ ಡ್ರಗ್ಸ್ ಮುಕ್ತ, ಆರೋಗ್ಯವಂತ ಹಾಗೂ ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ವೆಂಕಟೇಶ್ ಅಭಿಪ್ರಾಯಪಟ್ಟರು.
ಪ್ರಾಸ್ತವಿಕ ನುಡಿಗಳನ್ನಾಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಎನ್. ಟಿ. ಯೋಗೇಶ್ ಮಾತನಾಡಿ ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಜಾಗೃತಿ ಹಾಗೂ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಭಿಕ್ಷೆಯ ರೂಪದಲ್ಲಿ ವ್ಯಸನ ಮುಕ್ತ ಮಾಡಲು ಪ್ರತಿಜ್ಞೆಯನ್ನು ಮಾಡಿದವರು ಮಹಾಂತ ಶಿವಯೋಗಿ ಸ್ವಾಮೀಜಿಗಳು ಅವರ ಜಯಂತಿ ಆಚರಣೆ ಆದರ್ಶನಿಯ ಎಂದರು.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ನಿರ್ದೇಶಕ ಮಹದೇವ್ ರವರು ಮಾತನಾಡಿ ಹೆಣ್ಣು ಮಕ್ಕಳು ತಮ್ಮ ಮೇಲೆ ನಡೆಯುವ ಯಾವುದೇ ದೌರ್ಜನ್ಯವನ್ನು ಸಮಾಜ ಮುಂದೆ ಧೈರ್ಯವಾಗಿ ಎದುರಿಸುವ ಸಾಮರ್ಥ್ಯವನ್ನು ರೂಡಿಸಿಕೊಳ್ಳಬೇಕು. ಹೊರಗೆ ಹೋದ ಹೆಣ್ಣು ಮಕ್ಕಳು ಜಾಗೃತಿಯಿಂದ ಇರುವುದು ಸೂಕ್ತ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್ ಸೈಕಾಲಜಿಸ್ಟ್ ಮೊಹಮದ್ ಸುಹೇಲ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದರ ಬಗ್ಗೆ ಸಮಾಜದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಧೂಮಪಾನ, ಮದ್ಯಪಾನ ಹಾಗೂ ಇತರೆ ಮಾದಕ ವಸ್ತುಗಳ ಸೇವನೆಯಿಂದ ಮೆದುಳಿನಲ್ಲಿ ಡೋಪಮೀನ್ ಸೇರಿದಂತೆ ಕೆಲವು ರಾಸಾಯನಿಕಗಳ ಉತ್ಪತ್ತಿಯಾಗಿ ತಾತ್ಕಾಲಿಕ ಸಂತೋಷದ ಅನುಭವ ಉಂಟಾಗುತ್ತದೆ. ಆದರೆ ಇದೇ ಕ್ರಮೇಣ ಚಟವಾಗಿ ವ್ಯಕ್ತಿಯನ್ನು ವ್ಯಸನಕ್ಕೆ ದೂಡುತ್ತದೆ. ವ್ಯಸನವು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಜೀವನದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಜೀವನ, ಮಾನಸಿಕ ಒತ್ತಡ, ಆತಂಕ, ಸ್ನೇಹಿತರ ಪ್ರಭಾವ ಹಾಗೂ ಸಾಮಾಜಿಕ ಜಾಲತಾಣಗಳ ಪರಿಣಾಮದಿಂದ ಕೆಲ ಯುವಕರು ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆ. ಯಾವುದೇ ಸಮಸ್ಯೆಗೆ ಮಾದಕ ವಸ್ತುಗಳು ಪರಿಹಾರವಲ್ಲ. ಒತ್ತಡ ನಿವಾರಣೆಗೆ ಯೋಗ, ಧ್ಯಾನ, ಕ್ರೀಡೆ, ಸಂಗೀತ, ಪುಸ್ತಕ ಓದು ಹಾಗೂ ಕುಟುಂಬದವರೊಂದಿಗೆ ಮುಕ್ತ ಸಂವಾದ ನಡೆಸುವಂತಹ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ಸಂಪೂರ್ಣ ದೂರವಿದ್ದು ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣದತ್ತ ಗಮನಹರಿಸಬೇಕು. ಪೋಷಕರು ಮಕ್ಕಳ ವರ್ತನೆ, ಸ್ನೇಹ ಬಳಗ ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ಕಾಳಜಿ ವಹಿಸಿ, ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದರೆ ತಕ್ಷಣ ತಜ್ಞರ ಸಲಹೆ ಪಡೆಯಬೇಕು ಎಂದು ಅವರು ತಿಳಿಸಿದರು.
ಇದೆ ಸಂದರ್ಭದಲ್ಲಿ ವ್ಯಸನ ಮುಕ್ತ ಸಮಾಜಕ್ಕೆ ಕೈಜೋಡಿಸುವುದಾಗಿ ವಿದ್ಯಾರ್ಥಿಗಳಿಗೆ 
ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು.
ವೇದಿಕೆಯಲ್ಲಿ ವಾರ್ತಾ ಇಲಾಖೆಯ  ವಾರ್ತಾ ಸಹಾಯಕರಾದ ಪುಷ್ಪಲತಾ ಎಂ. ಸಿ.ತಂಬಾಕು ನಿಯಂತ್ರಣ ಕೋಶ ಅಧಿಕಾರಿಗಳಾದ ತಿಮ್ಮರಾಜು. ಸಿ ಡಬ್ಲ್ಯೂ ಸಿ ಅಧ್ಯಕ್ಷರಾದ ಸುಮಿತ್ರ. ಮುಖಂಡರಾದ ಚಿಕ್ಕಯ್ಯ. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರಾದ ಬಿ. ಎಸ್. ಅನುಪಮಾ. ರಕ್ಷಣಾ ಅಧಿಕಾರಿ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    42 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.