Shuru
Apke Nagar Ki App…
ಅಂಗನವಾಡಿ ಕೇಂದ್ರ 10 ರ ಭೂಮಿ ಪೂಜೆ : ನೆರವೇರಿಸಿದ ಕಾಂಗ್ರೆಸ್ ಪಕ್ಷದ ಯುವ ಧುರೀಣರು ಸಮಾಜ ಸೇವಕರಾದ ಚಿದಾನಂದ ಲ ಸವದಿ ಅಥಣಿ : ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ 20ರಲ್ಲಿ 20,ಲಕ್ಷ,ರೂ,ಗಳಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕೇಂದ್ರ 10ರ ಭೂಮಿ ಪೂಜೆಯನ್ನು ಕಾಂಗ್ರೆಸ್ ಪಕ್ಷದ ಯುವ ಧುರೀಣರು ಸಮಾಜ ಸೇವಕರಾದ ಚಿದಾನಂದ ಲ ಸವದಿಯವರ ನೇತೃತ್ವದಲ್ಲಿ ಪುರಸಭೆ ಸದಸ್ಯರು ಹಾಗೂ ಪ್ರಮುಖರು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
Dr RAMANNA.S.D
ಅಂಗನವಾಡಿ ಕೇಂದ್ರ 10 ರ ಭೂಮಿ ಪೂಜೆ : ನೆರವೇರಿಸಿದ ಕಾಂಗ್ರೆಸ್ ಪಕ್ಷದ ಯುವ ಧುರೀಣರು ಸಮಾಜ ಸೇವಕರಾದ ಚಿದಾನಂದ ಲ ಸವದಿ ಅಥಣಿ : ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ 20ರಲ್ಲಿ 20,ಲಕ್ಷ,ರೂ,ಗಳಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕೇಂದ್ರ 10ರ ಭೂಮಿ ಪೂಜೆಯನ್ನು ಕಾಂಗ್ರೆಸ್ ಪಕ್ಷದ ಯುವ ಧುರೀಣರು ಸಮಾಜ ಸೇವಕರಾದ ಚಿದಾನಂದ ಲ ಸವದಿಯವರ ನೇತೃತ್ವದಲ್ಲಿ ಪುರಸಭೆ ಸದಸ್ಯರು ಹಾಗೂ ಪ್ರಮುಖರು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
More news from ಕರ್ನಾಟಕ and nearby areas
- ಭಿರಡಿ ಶ್ರೀ ಮಹಾದೇವ ಜಾತ್ರೆಗೆ ದೇಣಿಗೆಯ ನೀಡಿದ ಭಕ್ತರಿಗೆ ಸನ್ಮಾನ1
- ಈದ್ ಮಿಲಾದ್ ಹಿನ್ನೆಲೆ ಜಮಖಂಡಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಈದ್ ಮಿಲಾದ್ ಮೆರವಣಿಗೆ ಸೇರಿದಂತೆ ಇನ್ನಿತರ ಹಬ್ಬಗಳಲ್ಲಿ ಡಿಜೆ ಬಳಕೆಗೆ ಅವಕಾಶ ಇಲ್ಲ ಶಾಂತಿಯುತ ಹಬ್ಬಕ್ಕೆ ಸಾರ್ವಜನಿಕರ ಸಹಕಾರ ಕೋರಿದ ಎಸ್‌ಪಿ ಸಿದ್ದಾರ್ಥ ಗೋಯಲ್1
- ಮುಂದಿನ ತಿಂಗಳ ಮೊದಲ ಶನಿವಾರ ಲೋಕಾಪುರದಲ್ಲಿ ಪ್ರಜಾಸೇವಾ ಆಂದೋಲನ ಮುಧೋಳ : ಸರ್ಕಾರದ ಮಟ್ಟದಲ್ಲಿ ನೂತನವಾಗಿ ಕಾರ್ಯರಂಭಗೊಂಡಿರುವ ಪ್ರಜಾಸೇವಾ ಇಲಾಖೆಯಿಂದ ಸೆ.5ರಂದು ತಾಲೂಕಿನ ಲೋಕಾಪುರ ಪಟ್ಟಣದಲ್ಲಿ ಪ್ರಜಾಸೇವಾ ಆಂದೋಲನ ಆರಂಭಗೊಳ್ಳಲಿದೆ ಎಂದು ತಹಶಿಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು. ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಶನಿವಾರ ಆಯ್ದ ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಮೊದಲ ಹಾಗೂ ಎರಡನೇ ಶನಿವಾರ ಸಚಿವರು ಆಂದೋಲನ ಹಮ್ಮಿಕೊಳ್ಳುವ ಗ್ರಾಮವನ್ನು ಆಯ್ಕೆ ಮಾಡುತ್ತಾರೆ. ಎರಡು ಹಾಗೂ ಮೂರನೇ ಶನಿವಾರ ಶಾಸಕರಯ ಸ್ಥಳ ಆಯ್ಕೆ ಮಾಡಲಿದ್ದಾರೆ ಎಂದರು. ಆಂದೋಲನದ ವೇಳೆ ಸರ್ಕಾರವೇ ಜನರ ಬಳಿ ತೆರಳಿ ಅವರ ಕುಂದುಕೊರತೆ ಆಲಿಸಿ ಪರಿಹಾರ ಕಲ್ಪಿಸಲಿದೆ ಎಂದರು. ಮುಧೋಳ ತಾಲೂಕಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಪ್ರಜಾ ಸೇವಾ ಆಂದೋಲನದ ಸ್ಥಳಗಳನ್ನು ನಿಗಿದಿ ಮಾಡಲಾಗಿದೆ ಎಂದು ತಿಳಿಸಿದ ಅವರು, ಮೊದಲ ಶನಿವಾರ ಲೋಕಾಪುರ, ಎರಡನೇ ಶನುವಾರ ಮುಧೋಳ, ಮೂರನೇ ಶನಿವಾರ ಬೆಳಗಲಿ ಹಾಗೂ ಕೊನೆಯ ಶನಿವಾರ ಮಂಟೂರ ಗ್ರಾಮದಲ್ಲಿ ಆಂದೋಲನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.1
- ಮುಧೋಳದಲ್ಲಿ ಈದ್ ಮಿಲಾದ್: ಶಾಂತಿ ಸುವ್ಯವಸ್ಥೆಗಾಗಿ ಪೊಲೀಸರ ಆಕರ್ಷಕ ಪಥಸಂಚಲನ ಮುಧೋಳ: ನಾಳೆಯ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಂಗಳವಾರ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು. ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ ಈ ಪಥಸಂಚಲನವು ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ, ತಂಬಾಕ್ ಚೌಕ, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿತು. ಈ ವೇಳೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಮಾತನಾಡಿದ ಸಿಪಿಐ ಎಂ. ನಾಗರಡ್ಡಿ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಹಬ್ಬದ ವಾತಾವರಣವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಪಥಸಂಚಲನದಲ್ಲಿ ಸಿಪಿಐ ಎಂ. ನಾಗರಡ್ಡಿ, ಮುಧೋಳ ಪಿಎಸ್‌ಐ ಅಜೀತಕುಮಾರ ಹೊಸಮನಿ, ಲೋಕಾಪುರ ಪಿಎಸ್‌ಐ ಕಾಡಪ್ಪ ಜಕ್ಕಣ್ಣವರ, ಕ್ರೈಂ ಪಿಎಸ್‌ಐ ಪ್ರಕಾಶ ಮುರನಾಳ ಹಾಗೂ ಇಲಾಖೆಯ ಸಿಬ್ಬಂದಿಯಾದ ವಸಂತ್ ಬೀಳಗಿ, ಮಲ್ಲು ವಗ್ಗೇನವರ, ಹಣಮಂತ ಮಾದರ, ಮನೋಹರ ಕುರಿ ಸೇರಿದಂತೆ ಗೃಹ ರಕ್ಷಕ ದಳದ ಸಿಬ್ಬಂದಿ ಒಟ್ಟು 180ಕ್ಕೂ ಹೆಚ್ಚು ಅಧಿಕ ಸಿಬ್ಬಂದಿ ಭಾಗವಹಿಸಿದ್ದರು.1
- ಸನ್ 2026-27ನೇ ಸಾಲಿನ ಸವಸುದ್ದಿ ವಲಯ ಮಟ್ಟದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮ ಸನ್ 2026-27ನೇ ಸಾಲಿನ ಸವಸುದ್ದಿ ವಲಯ ಮಟ್ಟದ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮ ಶ್ರೀ ಸ. ಸ. ಮಾ. ಪ್ರ. ಪ್ರೌಢಶಾಲೆ ಬೆಂಡವಾಡ ಶಾಲಾ ಆವರಣದಲ್ಲಿ ಜರುಗಿದವು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಎಮ್. ಕೊಟಬಾಗಿ ವಹಿಸಿದ್ದರು, ಹಾಗೂ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ವಿನೋಭಾ ಬೆನ್ನಾಳೆ, ಶ್ರೀ ಎಸ್.ಎಸ್.ಜಗದಾಳೆ ಹಾಗೂ ಬೆಂಡವಾಡ ಗ್ರಾಮದ ರಾಜಕೀಯ ದುರಿಣರಾದ ಶ್ರೀ ಸುರೇಶ ಚೌಗಲೆ, ಶ್ರೀ ರೇವಣು ದುಪದಾಳೆ, ಶ್ರೀ ಸಿದ್ದಾರೂಢ ಪಾತ್ರೋಟ, ಶ್ರೀ ಲಕ್ಷ್ಮಣ ಸಾರಾಪೂರೆ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಕ ಶ್ರೀ ಆರ್ ಎಸ್ ಬೆನ್ನಾಳೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ಶಾಲೆಗಳ ದೈಹಿಕ ಶಿಕ್ಷಕರು ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಂಡವಾಡ ಗ್ರಾಮದ ರಾಜಕೀಯ ಯುವ ದುರಿಣರು ಆದ ಶ್ರೀ ಸಿದ್ದಾರೂಢ ಪಾತ್ರೋಟ ಹಾಗೂ ಶ್ರೀ ಲಕ್ಷ್ಮಣ ಸಾರಾಪೂರೆ ಇವರುಗಳು ಶಾಲೆಯ ಆಟದ ಮೈದಾನ ಅಭಿವೃದ್ದಿಗಾಗಿ ರೂ. 50,000/- ಗಳನ್ನು ದೇಣಿಗೆ ನೀಡುವುದಾಗಿ ಆಶ್ವಾಸನೆ ನೀಡಿದರು. ಗಣ್ಯರಿಗೆ ಶಾಲೆಯ ವತಿಯಿಂದ ಅಭಿನಂದನೆಗಳು. ಸಹಶಿಕ್ಷಕರಾದ ಶ್ರೀ ಪಿ.ವಾಯ್.ಪಾತ್ರೋಟ ಸ್ವಾಗತಿಸಿದರು ಹಾಗೂ ಶ್ರೀಮತಿ ಆರ್.ಎ.ಚೌಗುಲೆ ನಿರೂಪಿಸಿದರು4
- "ಡೆವಿಲ್ ರಿಪೋರ್ಟರ "ಕಿರು ಚಿತ್ರ ಚಿತ್ರೀಕರಣದಲ್ಲಿ ನಿಜವಾದ ಪಿಶಾಚಿಯ ಧ್ವನಿ ರಿಕಾರ್ಡಿಂಗ ಆಗಿದೆ... ಗಾಭರಿಯಾದ ಸಂಕಲನಕಾರ ಮುಕೇಶಕುಮಾರ ಲಂಬುಗೋಳ..! ಕಳೆದ ತಿಂಗಳಿನಿಂದ ಚಿತ್ರೀಕರಣ ಆಗುತ್ತಿದ್ದ ಕೆ.ಸಿ.ಯೂಟೂಬ ಅರ್ಪಿಸುತ್ತಿರುವ "ಡೆವಿಲ್ ರಿಪೋರ್ಟರ" ಕಿರುಚಿತ್ರದ ಚಿತ್ರೀಕರಣದಲ್ಲಿ ಹಾರರ್ ಘಟನೆ ನಿಜವಾಗಿ ಜರುಗಿ ಚಿತ್ರ ತಂಡಕ್ಕೆ ಶಾಕ್ ಆಗಿದೆ. ಹುಕ್ಕೇರಿಯ ಪತ್ರಕರ್ತ ದಿ.ಪ್ರಕಾಶ ದೇಶಪಾಂಡೆಯವರ ಲೇಖನ ಆಧಾರಿತ ಈ ಕಿರುಚಿತ್ರವನ್ನು ಬಸವರಾಜ ಪಟ್ಟಣಶೆಟ್ಟಿಯವರು ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಅವರು 1987 ರಲ್ಲೇ ಚಿತ್ರ ರಂಗದಲ್ಲಿದ್ದ ಹಿರಿಯ ಅನುಭವಿಕ ನಿರ್ದೇಶಕರು. ಆಶ್ಚರ್ಯ ಎಂದರೆ ಪತ್ರಕರ್ತರಾದ ಮುಕೇಶಕುಮಾರ ಲಂಬುಗೋಳ ಮತ್ತು ಮಹಾಲಿಂಗ ಗಗ್ಗರಿಯವರು ನಡು ರಾತ್ರಿಯ ಪಿಶಾಚಿಯ ಕಾಟಕ್ಕೆ ಹೆದರಿ ಹಾಳು ಬಿದ್ದಿರುವ ಹಿಡಕಲ್ ಡ್ಯಾಮದಿಂದ ಹತ್ತರಗಿ ಹೆದ್ದಾರಿಗೆ ಹೋಗುವ ನಿರ್ಜನ... ಕಾಡಿನ ಪಕ್ಕದ ಬಸ್ ನಿಲ್ದಾಣದಲ್ಲಿ ಹೋಗಿ ಕೂಡುತ್ತಾರೆ. ಅಲ್ಲಿ ಹೆದರುತ್ತ ಕೂತಿರುವ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು. ಆಗ ಸ್ಥಳದಲ್ಲಿದ್ದವರು ಆರೇಳು ಜನ ಪುರುಷರು ಮಾತ್ರ. ಇದನ್ನು ಎಡಿಟಿಂಗ ಮಾಡುವಾಗ ಅಪರಿಚಿತ ಹೆಣ್ಣು ನಗುವ ಧ್ವನಿ ರಿಕಾರ್ಡ ಆಗಿದೆ. ಆ ಧ್ವನಿ ಎಲ್ಲಿಂದ ಬಂತು...! ಆ ನಿರ್ಜನ ರಾತ್ರಿಯಲ್ಲಿ ಚಿತ್ರ ತಂಡ ಬಿಟ್ಟರೆ ಯಾರೂ ಇರಲಿಲ್ಲ. ಇದು ನಿಜಕ್ಕೂ ಡೆವಿಲ್ ಧ್ವನಿಯೇ....! ತಾವೇ ನೋಡಿ. ಮನುಷ್ಯರ ಕಣ್ಣಿಗೆ ಕಾಣದ ಕೆಲ ಅತೀಂದ್ರಿಯ ಶಕ್ತಿಗಳು ಕ್ಯಾಮರಾ ಕಣ್ಣಿಗೆ ಕಾಣುತ್ತವೆ...ಕೇಳುತ್ತವೆ ಎನ್ನವದಕ್ಕೆ ಇದೇ ಸಾಕ್ಷಿ..! 🙏4
- ಜಿಲ್ಲೆಯಲ್ಲಿ ಬಾಕಿರುವ ಬಿಲ್ಲನ್ನು ಶೀಘ್ರದಲ್ಲೇ ಪಾವತಿಸಲು ಸೂಚನೆ ನೀಡಲಾಗಿದೆ: ಡಿಸಿ ಸಂಗಪ್ಪ1
- ಜಮಖಂಡಿಯಲ್ಲಿ ಗ್ಯಾಸ್ ಲೀಕ್; ಬೆಂಕಿ ಅವಘಡ! 🔴 ೬೭ ವರ್ಷದ ವೃದ್ಧೆಗೆ ಸಣ್ಣಪುಟ್ಟ ಸುಟ್ಟ ಗಾಯ 🔴 ಅಗ್ನಿಶಾಮಕ ದಳದಿಂದ ಸಮಯಕ್ಕೆ ಸರಿಯಾಗಿ ರಕ್ಷಣೆ 🔴 ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ1