logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ವಿವಿಧೆಡೆ ಕಳುವಾಗಿದ್ದ 50 ಬೈಕ್‌ಗಳನ್ನು ಬಳಗಾನೂರು ಪಿಎಸ್‌ಐ ಎರಿಯಪ್ಪ ಅಂಗಡಿ ನೇತೃತ್ವದ ಪೊಲೀಸ್ ತಂಡ ಶುಕ್ರವಾರ ಮಿಂಚಿನ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬೈಕ್ ಕಳ್ಳರು ಮತ್ತು ಇಬ್ಬರು ಖರೀದಿದಾರರು ಸೇರಿ ಒಟ್ಟು ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಸ್ಕಿ, ಬಳಗಾನೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣಗಳನ್ನು ಜಾಲಾಡಿದ ಪಿಎಸ್‌ಐ ಎರಿಯಪ್ಪ ಅಂಗಡಿ, ಖಚಿತ ಮಾಹಿತಿ ಆಧರಿಸಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ವಶಪಡಿಸಿಕೊಂಡ 50 ಬೈಕ್‌ಗಳು ವಿವಿಧ ಕಂಪನಿಗಳಿಗೆ ಸೇರಿದವಾಗಿದ್ದು, ಇವುಗಳಲ್ಲಿ ಕಳವು ಮಾಡಿ ಮಾರಾಟ ಮಾಡಿದ್ದ ಮತ್ತು ಮಾರಾಟಕ್ಕೆ ಇಟ್ಟಿದ್ದ ಬೈಕ್‌ಗಳು ಸೇರಿವೆ. ಬಂಧಿತ ಆರೋಪಿಗಳು ಮಸ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಯುವಕರು ಎಂದು ಗುರುತಿಸಲಾಗಿದೆ. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಕಳ್ಳರನ್ನು ಬಂಧಿಸಿ, ಕಳುವಾಗಿದ್ದ 50 ಬೈಕ್‌ಗಳನ್ನು ವಶಕ್ಕೆ ಪಡೆದ ಪಿಎಸ್‌ಐ ಎರಿಯಪ್ಪ ಅಂಗಡಿ ನೇತೃತ್ವದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಸು ಮತ್ತು ಡಿಎಸ್‌ಪಿ ಚಂದ್ರಶೇಖರ್ ಶ್ಲಾಘಿಸಿದ್ದು, ಬಹುಮಾನವನ್ನೂ ಘೋಷಿಸಿದ್ದಾರೆ.

4 days ago
user_ಬಸವರಾಜ ಭೋಗಾವತಿ
ಬಸವರಾಜ ಭೋಗಾವತಿ
Local News Reporter ಮಾನ್ವಿ, ರಾಯಚೂರು, ಕರ್ನಾಟಕ•
4 days ago

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ವಿವಿಧೆಡೆ ಕಳುವಾಗಿದ್ದ 50 ಬೈಕ್‌ಗಳನ್ನು ಬಳಗಾನೂರು ಪಿಎಸ್‌ಐ ಎರಿಯಪ್ಪ ಅಂಗಡಿ ನೇತೃತ್ವದ ಪೊಲೀಸ್ ತಂಡ ಶುಕ್ರವಾರ ಮಿಂಚಿನ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬೈಕ್ ಕಳ್ಳರು ಮತ್ತು ಇಬ್ಬರು ಖರೀದಿದಾರರು ಸೇರಿ ಒಟ್ಟು ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಸ್ಕಿ, ಬಳಗಾನೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣಗಳನ್ನು ಜಾಲಾಡಿದ ಪಿಎಸ್‌ಐ ಎರಿಯಪ್ಪ ಅಂಗಡಿ, ಖಚಿತ ಮಾಹಿತಿ ಆಧರಿಸಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ವಶಪಡಿಸಿಕೊಂಡ 50 ಬೈಕ್‌ಗಳು ವಿವಿಧ ಕಂಪನಿಗಳಿಗೆ ಸೇರಿದವಾಗಿದ್ದು, ಇವುಗಳಲ್ಲಿ ಕಳವು ಮಾಡಿ ಮಾರಾಟ ಮಾಡಿದ್ದ ಮತ್ತು ಮಾರಾಟಕ್ಕೆ ಇಟ್ಟಿದ್ದ ಬೈಕ್‌ಗಳು ಸೇರಿವೆ. ಬಂಧಿತ ಆರೋಪಿಗಳು ಮಸ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಯುವಕರು ಎಂದು ಗುರುತಿಸಲಾಗಿದೆ. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಕಳ್ಳರನ್ನು ಬಂಧಿಸಿ, ಕಳುವಾಗಿದ್ದ 50 ಬೈಕ್‌ಗಳನ್ನು ವಶಕ್ಕೆ ಪಡೆದ ಪಿಎಸ್‌ಐ ಎರಿಯಪ್ಪ ಅಂಗಡಿ ನೇತೃತ್ವದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಸು ಮತ್ತು ಡಿಎಸ್‌ಪಿ ಚಂದ್ರಶೇಖರ್ ಶ್ಲಾಘಿಸಿದ್ದು, ಬಹುಮಾನವನ್ನೂ ಘೋಷಿಸಿದ್ದಾರೆ.

More news from ಕರ್ನಾಟಕ and nearby areas
  • ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾ ಘಟಕವು ರಾಯಚೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿತು. ಈ ಸಂದರ್ಭದಲ್ಲಿ, ಖರೀದಿ ಕೇಂದ್ರಗಳಲ್ಲಿ ಪಡೆದ ಜೋಳದ ಹಣವನ್ನು ಕೂಡಲೇ ಜಮಾ ಮಾಡಬೇಕು ಮತ್ತು ಯಾವುದೇ ಲಿಂಕ್ ಇಲ್ಲದೆ ರೈತರಿಗೆ ಅಗತ್ಯವಿರುವ ಗೊಬ್ಬರವನ್ನು ಒದಗಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಯಿತು. ಪ್ರತಿಭಟನೆಯ ನಂತರ, ಈ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಯಿತು.
    1
    ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾ ಘಟಕವು ರಾಯಚೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿತು. ಈ ಸಂದರ್ಭದಲ್ಲಿ, ಖರೀದಿ ಕೇಂದ್ರಗಳಲ್ಲಿ ಪಡೆದ ಜೋಳದ ಹಣವನ್ನು ಕೂಡಲೇ ಜಮಾ ಮಾಡಬೇಕು ಮತ್ತು ಯಾವುದೇ ಲಿಂಕ್ ಇಲ್ಲದೆ ರೈತರಿಗೆ ಅಗತ್ಯವಿರುವ ಗೊಬ್ಬರವನ್ನು ಒದಗಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಯಿತು. ಪ್ರತಿಭಟನೆಯ ನಂತರ, ಈ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಯಿತು.
    user_Lingareddy Patil
    Lingareddy Patil
    Farmer ಮಾನ್ವಿ, ರಾಯಚೂರು, ಕರ್ನಾಟಕ•
    4 hrs ago
  • ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರೈತರು ರಸಗೊಬ್ಬರ ಕೊರತೆ ಉಂಟಾಗುವ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುನಾಥ ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ರೈತರ ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ರಸಗೊಬ್ಬರ ದಾಸ್ತಾನು ಇದೆ ಎಂದು ಅವರು ಮಾಹಿತಿ ನೀಡಿದ್ದು, ಈ ಮೂಲಕ ರಸಗೊಬ್ಬರ ಕೊರತೆಯ ಆತಂಕವನ್ನು ನಿವಾರಿಸಿದ್ದಾರೆ.
    1
    ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರೈತರು ರಸಗೊಬ್ಬರ ಕೊರತೆ ಉಂಟಾಗುವ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುನಾಥ ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ರೈತರ ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ರಸಗೊಬ್ಬರ ದಾಸ್ತಾನು ಇದೆ ಎಂದು ಅವರು ಮಾಹಿತಿ ನೀಡಿದ್ದು, ಈ ಮೂಲಕ ರಸಗೊಬ್ಬರ ಕೊರತೆಯ ಆತಂಕವನ್ನು ನಿವಾರಿಸಿದ್ದಾರೆ.
    user_ಬಸವರಾಜ ಭೋಗಾವತಿ
    ಬಸವರಾಜ ಭೋಗಾವತಿ
    Local News Reporter ಮಾನ್ವಿ, ರಾಯಚೂರು, ಕರ್ನಾಟಕ•
    6 hrs ago
  • ದೇವದುರ್ಗ ತಾಲೂಕಿನ ಕೆಲವು ರಸಗೊಬ್ಬರ ಅಂಗಡಿಗಳಲ್ಲಿ ರೈತರಿಗೆ 'ಅಟ್ಯಾಚ್ಮೆಂಟ್' ಹೆಸರಿನಲ್ಲಿ ಮೋಸ ಮಾಡುತ್ತಿರುವ ಘಟನೆ ನಡೆದಿದೆ. ರೈತರು ಯೂರಿಯಾ ಗೊಬ್ಬರ ಕೇಳಿದಾಗ, ಅಂಗಡಿ ಮಾಲೀಕರು ತಮ್ಮ ಬಳಿ ಬೀಜಗಳನ್ನು ಅಥವಾ ಅವರು ನೀಡಿದ ಇನ್ನೊಂದು ಉತ್ಪನ್ನವನ್ನು ಕಡ್ಡಾಯವಾಗಿ ಖರೀದಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದನ್ನು ಒಪ್ಪದಿದ್ದರೆ ಗೊಬ್ಬರ ನೀಡಲು ನಿರಾಕರಿಸುತ್ತಿದ್ದು, ಇದರಿಂದ ರೈತರಿಗೆ ಅನಗತ್ಯ ತೊಂದರೆಯಾಗುತ್ತಿದೆ. ರೈತರಿಗೆ ಈ ರೀತಿ ಗೋಳಾಡಿಸಿದ ಹಿನ್ನೆಲೆಯಲ್ಲಿ, ರೈತ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಂಗಡಿ ಮಾಲೀಕನಿಗೆ ಇಂತಹ ಮೋಸದ ವರ್ತನೆಯನ್ನು ನಿಲ್ಲಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯಿಂದ ರೈತರು ಮತ್ತು ರೈತ ಸಂಘಟನೆ ಕಾರ್ಯಕರ್ತರು ಸೇರಿ ಗೊಬ್ಬರದ ಅಂಗಡಿಗೆ ಮುತ್ತಿಗೆ ಹಾಕಿದ್ದಾರೆ.
    1
    ದೇವದುರ್ಗ ತಾಲೂಕಿನ ಕೆಲವು ರಸಗೊಬ್ಬರ ಅಂಗಡಿಗಳಲ್ಲಿ ರೈತರಿಗೆ 'ಅಟ್ಯಾಚ್ಮೆಂಟ್' ಹೆಸರಿನಲ್ಲಿ ಮೋಸ ಮಾಡುತ್ತಿರುವ ಘಟನೆ ನಡೆದಿದೆ. ರೈತರು ಯೂರಿಯಾ ಗೊಬ್ಬರ ಕೇಳಿದಾಗ, ಅಂಗಡಿ ಮಾಲೀಕರು ತಮ್ಮ ಬಳಿ ಬೀಜಗಳನ್ನು ಅಥವಾ ಅವರು ನೀಡಿದ ಇನ್ನೊಂದು ಉತ್ಪನ್ನವನ್ನು ಕಡ್ಡಾಯವಾಗಿ ಖರೀದಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದನ್ನು ಒಪ್ಪದಿದ್ದರೆ ಗೊಬ್ಬರ ನೀಡಲು ನಿರಾಕರಿಸುತ್ತಿದ್ದು, ಇದರಿಂದ ರೈತರಿಗೆ ಅನಗತ್ಯ ತೊಂದರೆಯಾಗುತ್ತಿದೆ.

ರೈತರಿಗೆ ಈ ರೀತಿ ಗೋಳಾಡಿಸಿದ ಹಿನ್ನೆಲೆಯಲ್ಲಿ, ರೈತ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಂಗಡಿ ಮಾಲೀಕನಿಗೆ ಇಂತಹ ಮೋಸದ ವರ್ತನೆಯನ್ನು ನಿಲ್ಲಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯಿಂದ ರೈತರು ಮತ್ತು ರೈತ ಸಂಘಟನೆ ಕಾರ್ಯಕರ್ತರು ಸೇರಿ ಗೊಬ್ಬರದ ಅಂಗಡಿಗೆ ಮುತ್ತಿಗೆ ಹಾಕಿದ್ದಾರೆ.
    user_ನಾಗರಾಜ ವಾರದ
    ನಾಗರಾಜ ವಾರದ
    Newsagent ದೇವದುರ್ಗ, ರಾಯಚೂರು, ಕರ್ನಾಟಕ•
    20 hrs ago
  • ರಾಯಚೂರಿನಲ್ಲಿ ಜೂನ್ 16ರ ಮಂಗಳವಾರದಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಜಿಲ್ಲಾ ಸಮಿತಿಯು ರೈತರ ಹಕ್ಕುಗಳು ಮತ್ತು ವಿವಿಧ ಜನಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಿತು. ಜಿಲ್ಲಾಧಿಕಾರಿ ನಿವಾಸದ ಬಳಿಯಿಂದ ಆರಂಭಗೊಂಡ ಈ ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ರೈತರು, ಮಹಿಳಾ ರೈತರು ಹಾಗೂ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಟಿಪ್ಪು ಸುಲ್ತಾನ್ ಗಾರ್ಡನ್‌ವರೆಗೆ ಸಾಗಿ, ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸಂಘದ ಮುಖಂಡರು ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳ ಕೊರತೆಯಾಗಿದ್ದು, ಕೆಲವು ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರೈತರಿಗೆ ಎಂಆರ್‌ಪಿ ದರದಲ್ಲೇ ಬೀಜ ಮತ್ತು ರಸಗೊಬ್ಬರಗಳು ಲಭ್ಯವಾಗುವಂತೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಇದರ ಜೊತೆಗೆ, ಸರ್ಕಾರ ಎಂಎಸ್‌ಪಿ ದರದಲ್ಲಿ ಖರೀದಿಸಿರುವ ಮುಂಗಾರು ಜೋಳದ ಬಾಕಿ ಹಣವನ್ನು ರೈತರ ಖಾತೆಗೆ ತಕ್ಷಣ ಜಮಾ ಮಾಡಬೇಕು ಮತ್ತು ಜೆಸ್ಕಾಂ ಮೂಲಕವೇ ವಿದ್ಯುತ್ ವಿತರಣೆಯನ್ನು ಮುಂದುವರಿಸುವುದರೊಂದಿಗೆ ವಿದ್ಯುತ್ ಖಾಸಗೀಕರಣದ ಯಾವುದೇ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಯಿತು. ನಿವೇಶನ ರಹಿತ ಬಡ ಕುಟುಂಬಗಳ ಹಕ್ಕುಪತ್ರ ಹಾಗೂ ಮನೆ ನಿವೇಶನ ವಿತರಣೆಯೂ ಪ್ರತಿಭಟನೆಯ ಪ್ರಮುಖ ಬೇಡಿಕೆಯಾಗಿತ್ತು. ದೇವದುರ್ಗ, ಸಿಂಧನೂರು, ಮಸ್ಕಿ ಹಾಗೂ ಲಿಂಗಸೂಗೂರು ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಈ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಆಶ್ರಯ ಯೋಜನೆಯಡಿ ಮನೆ ಹಾಗೂ ನಿವೇಶನ ಮಂಜೂರು ಮಾಡುವುದರ ಜೊತೆಗೆ, ಕುಡಿಯುವ ನೀರು, ರಸ್ತೆ, ಚರಂಡಿ ಮತ್ತು ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸಹ ಒದಗಿಸುವಂತೆ ಅವರು ಒತ್ತಾಯಿಸಿದರು. ಇದಲ್ಲದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸಲಾಯಿತು. ಕಾರ್ಮಿಕರಿಗೆ ದೂರದ ಪ್ರದೇಶಗಳಲ್ಲಿ ಕೆಲಸ ನೀಡುವುದನ್ನು ನಿಲ್ಲಿಸಿ ಪೂರ್ಣ ಪ್ರಮಾಣದ ಕೂಲಿ ಪಾವತಿಸಬೇಕು ಎಂದು ಸಂಘವು ಆಗ್ರಹಿಸಿತು. ಬಿಸಿಲಿನ ತಾಪದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಯಿತು. ಈ ಬೃಹತ್ ಧರಣಿಯ ನೇತೃತ್ವವನ್ನು ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಬಸವಂತ್ರಾಯಗೌಡ ಹಾಗೂ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ವಹಿಸಿದ್ದರು. ಯಾದಗಿರಿ ಜಿಲ್ಲಾ ಅಧ್ಯಕ್ಷ ಚೆನ್ನಪ್ಪ ಆನೆಗುಂದಿ, ಚಂದ್ರಪ್ಪ ಹೊಸ್ಕೇರಾ, ಕರಿಯಪ್ಪ ಅಚ್ಚೊಳಿ, ಡಿ. ವೀರನಗೌಡ ಮಾನ್ವಿ, ಕೆ.ಜಿ. ವೀರೇಶ, ಶರಣಬಸವ, ಎಚ್. ಪದ್ಮ, ಶಕುಂತಲಾ ದೇಸಾಯಿ, ಮೌನೇಶ ಜಾಲಹಳ್ಳಿ, ಶಬ್ಬೀರ್ ಜಾಲಹಳ್ಳಿ, ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ ದೊಡ್ಡಮನಿ, ನಿಂಗಪ್ಪ ವಿರಾಪೂರ, ವಿರುಪಾಕ್ಷಪ್ಪಗೌಡ ಕಲ್ಲೂರು, ಹನುಮಂತ ಮಂಡಲಗುಡ್ಡ, ರಾಮನಗೌಡ ಗಣೇಕಲ್, ದುರುಗಪ್ಪ ಮಸ್ಕಿ, ಪೆಂಚಲಯ್ಯ ಹಟ್ಟಿ, ಹನುಮಂತ ಬಲದಂಡೆ ಮಸ್ಕಿ, ಮಾಹಾಂತೇಶ ಹಟ್ಟಿ, ಆಂಜಿನೈಯ್ಯ ನಾಗಲಾಪೂರ, ಸಂತೋಷ ತ್ಯಾಪ್ಲಿ, ಬಾಷಾ, ರಂಗನಾಥ ಬುಂಕಲದೊಡ್ಡಿ ಸೇರಿದಂತೆ ನೂರಾರು ರೈತರು ಹಾಗೂ ಮಹಿಳಾ ರೈತರು ಈ ಹೋರಾಟದಲ್ಲಿ ಭಾಗಿಯಾಗಿದ್ದರು. ತಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮುಖಂಡರು ಸ್ಪಷ್ಟ ಎಚ್ಚರಿಕೆ ನೀಡಿದರು.
    3
    ರಾಯಚೂರಿನಲ್ಲಿ ಜೂನ್ 16ರ ಮಂಗಳವಾರದಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಜಿಲ್ಲಾ ಸಮಿತಿಯು ರೈತರ ಹಕ್ಕುಗಳು ಮತ್ತು ವಿವಿಧ ಜನಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಿತು. ಜಿಲ್ಲಾಧಿಕಾರಿ ನಿವಾಸದ ಬಳಿಯಿಂದ ಆರಂಭಗೊಂಡ ಈ ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ರೈತರು, ಮಹಿಳಾ ರೈತರು ಹಾಗೂ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಟಿಪ್ಪು ಸುಲ್ತಾನ್ ಗಾರ್ಡನ್‌ವರೆಗೆ ಸಾಗಿ, ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಸಂಘದ ಮುಖಂಡರು ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳ ಕೊರತೆಯಾಗಿದ್ದು, ಕೆಲವು ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರೈತರಿಗೆ ಎಂಆರ್‌ಪಿ ದರದಲ್ಲೇ ಬೀಜ ಮತ್ತು ರಸಗೊಬ್ಬರಗಳು ಲಭ್ಯವಾಗುವಂತೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಇದರ ಜೊತೆಗೆ, ಸರ್ಕಾರ ಎಂಎಸ್‌ಪಿ ದರದಲ್ಲಿ ಖರೀದಿಸಿರುವ ಮುಂಗಾರು ಜೋಳದ ಬಾಕಿ ಹಣವನ್ನು ರೈತರ ಖಾತೆಗೆ ತಕ್ಷಣ ಜಮಾ ಮಾಡಬೇಕು ಮತ್ತು ಜೆಸ್ಕಾಂ ಮೂಲಕವೇ ವಿದ್ಯುತ್ ವಿತರಣೆಯನ್ನು ಮುಂದುವರಿಸುವುದರೊಂದಿಗೆ ವಿದ್ಯುತ್ ಖಾಸಗೀಕರಣದ ಯಾವುದೇ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.

ನಿವೇಶನ ರಹಿತ ಬಡ ಕುಟುಂಬಗಳ ಹಕ್ಕುಪತ್ರ ಹಾಗೂ ಮನೆ ನಿವೇಶನ ವಿತರಣೆಯೂ ಪ್ರತಿಭಟನೆಯ ಪ್ರಮುಖ ಬೇಡಿಕೆಯಾಗಿತ್ತು. ದೇವದುರ್ಗ, ಸಿಂಧನೂರು, ಮಸ್ಕಿ ಹಾಗೂ ಲಿಂಗಸೂಗೂರು ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಈ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಆಶ್ರಯ ಯೋಜನೆಯಡಿ ಮನೆ ಹಾಗೂ ನಿವೇಶನ ಮಂಜೂರು ಮಾಡುವುದರ ಜೊತೆಗೆ, ಕುಡಿಯುವ ನೀರು, ರಸ್ತೆ, ಚರಂಡಿ ಮತ್ತು ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸಹ ಒದಗಿಸುವಂತೆ ಅವರು ಒತ್ತಾಯಿಸಿದರು.

ಇದಲ್ಲದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸಲಾಯಿತು. ಕಾರ್ಮಿಕರಿಗೆ ದೂರದ ಪ್ರದೇಶಗಳಲ್ಲಿ ಕೆಲಸ ನೀಡುವುದನ್ನು ನಿಲ್ಲಿಸಿ ಪೂರ್ಣ ಪ್ರಮಾಣದ ಕೂಲಿ ಪಾವತಿಸಬೇಕು ಎಂದು ಸಂಘವು ಆಗ್ರಹಿಸಿತು. ಬಿಸಿಲಿನ ತಾಪದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಯಿತು.

ಈ ಬೃಹತ್ ಧರಣಿಯ ನೇತೃತ್ವವನ್ನು ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಬಸವಂತ್ರಾಯಗೌಡ ಹಾಗೂ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ವಹಿಸಿದ್ದರು. ಯಾದಗಿರಿ ಜಿಲ್ಲಾ ಅಧ್ಯಕ್ಷ ಚೆನ್ನಪ್ಪ ಆನೆಗುಂದಿ, ಚಂದ್ರಪ್ಪ ಹೊಸ್ಕೇರಾ, ಕರಿಯಪ್ಪ ಅಚ್ಚೊಳಿ, ಡಿ. ವೀರನಗೌಡ ಮಾನ್ವಿ, ಕೆ.ಜಿ. ವೀರೇಶ, ಶರಣಬಸವ, ಎಚ್. ಪದ್ಮ, ಶಕುಂತಲಾ ದೇಸಾಯಿ, ಮೌನೇಶ ಜಾಲಹಳ್ಳಿ, ಶಬ್ಬೀರ್ ಜಾಲಹಳ್ಳಿ, ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ ದೊಡ್ಡಮನಿ, ನಿಂಗಪ್ಪ ವಿರಾಪೂರ, ವಿರುಪಾಕ್ಷಪ್ಪಗೌಡ ಕಲ್ಲೂರು, ಹನುಮಂತ ಮಂಡಲಗುಡ್ಡ, ರಾಮನಗೌಡ ಗಣೇಕಲ್, ದುರುಗಪ್ಪ ಮಸ್ಕಿ, ಪೆಂಚಲಯ್ಯ ಹಟ್ಟಿ, ಹನುಮಂತ ಬಲದಂಡೆ ಮಸ್ಕಿ, ಮಾಹಾಂತೇಶ ಹಟ್ಟಿ, ಆಂಜಿನೈಯ್ಯ ನಾಗಲಾಪೂರ, ಸಂತೋಷ ತ್ಯಾಪ್ಲಿ, ಬಾಷಾ, ರಂಗನಾಥ ಬುಂಕಲದೊಡ್ಡಿ ಸೇರಿದಂತೆ ನೂರಾರು ರೈತರು ಹಾಗೂ ಮಹಿಳಾ ರೈತರು ಈ ಹೋರಾಟದಲ್ಲಿ ಭಾಗಿಯಾಗಿದ್ದರು. ತಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮುಖಂಡರು ಸ್ಪಷ್ಟ ಎಚ್ಚರಿಕೆ ನೀಡಿದರು.
    user_Khajahussain Baba Jalahalli
    Khajahussain Baba Jalahalli
    Pharmacist ದೇವದುರ್ಗ, ರಾಯಚೂರು, ಕರ್ನಾಟಕ•
    22 hrs ago
  • ವಿಜಯಪುರ ಜಿಲ್ಲೆಯ ಚಡಚಣ ಸಮೀಪದ ರಾಜ್ಯ ಹೆದ್ದಾರಿ-41ರ ಲೋಣಿ ಕ್ರಾಸ್ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಚಡಚಣದಿಂದ ಬದಾಮಿ ಕಡೆಗೆ ಸುಮಾರು 30 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಝಳಕಿ ಕಡೆಯಿಂದ ಚಡಚಣದತ್ತ ಸಿಮೆಂಟ್ ಸಾಗಿಸುತ್ತಿದ್ದ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ಯಾಂಟರ್‌ನ ಟಯರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ವಾಹನ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ ಕ್ಯಾಂಟರ್‌ನಲ್ಲಿದ್ದ ಹಾವಿನಾಳ ಗ್ರಾಮದ ಅಶೋಕ ಮಹಾದೇವ ಉಟಗಿ, ಅವರ ಪತ್ನಿ ರಾಧಾಬಾಯಿ ಅಶೋಕ ಉಟಗಿ ಹಾಗೂ ಬಸ್ ಚಾಲಕ ಹಣಮಂತ ಚಲವಾದಿ ಮೃತಪಟ್ಟಿದ್ದಾರೆ. ಬಸ್‌ನಲ್ಲಿದ್ದ ಆರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 17ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಚಡಚಣ ಪೊಲೀಸ್ ಠಾಣೆಯ ಪಿಎಸ್‌ಐ ಸೋಮೇಶ ಗೆಜ್ಜಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಈ ದುರ್ಘಟನೆಯಿಂದ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಸ್ಥಳೀಯರಲ್ಲಿ ಶೋಕದ ವಾತಾವರಣ ಮೂಡಿಸಿದೆ.
    1
    ವಿಜಯಪುರ ಜಿಲ್ಲೆಯ ಚಡಚಣ ಸಮೀಪದ ರಾಜ್ಯ ಹೆದ್ದಾರಿ-41ರ ಲೋಣಿ ಕ್ರಾಸ್ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಚಡಚಣದಿಂದ ಬದಾಮಿ ಕಡೆಗೆ ಸುಮಾರು 30 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಝಳಕಿ ಕಡೆಯಿಂದ ಚಡಚಣದತ್ತ ಸಿಮೆಂಟ್ ಸಾಗಿಸುತ್ತಿದ್ದ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ಯಾಂಟರ್‌ನ ಟಯರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ವಾಹನ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ ಕ್ಯಾಂಟರ್‌ನಲ್ಲಿದ್ದ ಹಾವಿನಾಳ ಗ್ರಾಮದ ಅಶೋಕ ಮಹಾದೇವ ಉಟಗಿ, ಅವರ ಪತ್ನಿ ರಾಧಾಬಾಯಿ ಅಶೋಕ ಉಟಗಿ ಹಾಗೂ ಬಸ್ ಚಾಲಕ ಹಣಮಂತ ಚಲವಾದಿ ಮೃತಪಟ್ಟಿದ್ದಾರೆ. ಬಸ್‌ನಲ್ಲಿದ್ದ ಆರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 17ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಚಡಚಣ ಪೊಲೀಸ್ ಠಾಣೆಯ ಪಿಎಸ್‌ಐ ಸೋಮೇಶ ಗೆಜ್ಜಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಈ ದುರ್ಘಟನೆಯಿಂದ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಸ್ಥಳೀಯರಲ್ಲಿ ಶೋಕದ ವಾತಾವರಣ ಮೂಡಿಸಿದೆ.
    user_YADGIR NEWS
    YADGIR NEWS
    Video Creator ಯಾದಗಿರಿ, ಯಾದಗಿರಿ, ಕರ್ನಾಟಕ•
    13 hrs ago
  • ಯಾದಗಿರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಪ್ರತಿ ಮಂಗಳವಾರ ನಡೆಯುವ ದನ, ಕುರಿ ಮತ್ತು ಮೇಕೆಗಳ ಸಂತೆಯಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಕುರಿತು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ ನಂತರ, ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಿಗೆ ಮಾರಾಟಕ್ಕೆ ಬಂದ ರೈತರೊಂದಿಗೆ ಚರ್ಚಿಸಿ ಸೌಕರ್ಯಗಳ ಕೊರತೆಯನ್ನು ಮನಗಂಡರು. ಈ ಅತಿ ದೊಡ್ಡ ಜಾನುವಾರು ಸಂತೆ ಸಮಿತಿಯು ಮಾರಾಟ ಶುಲ್ಕವನ್ನು ಪಡೆಯುತ್ತಿದ್ದರೂ, ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಇರುವುದು ಸರಿಯಲ್ಲ ಎಂದು ಮುದ್ನಾಳ ಅವರು ಪ್ರಶ್ನಿಸಿದ್ದರು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ದಿ:16-06-2026 ಮಂಗಳವಾರ ಬೆಳಿಗ್ಗೆ ರಸ್ತೆ ತಡೆದು, ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಎಚ್ಚರಿಕೆಯ ನಂತರ ಅಧಿಕಾರಿಗಳು ದನಗಳ ಸಂತೆ ಮಾರುಕಟ್ಟೆ ಸುಧಾರಣೆಗೆ ಮುಂದಾದರು. ಜೆಸಿಬಿಯಿಂದ ಜಾಲಿ ಕಂಟಿಗಳನ್ನು ತೆರವುಗೊಳಿಸಿ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹೊಸ ಕೊಳವೆಬಾವಿ ಕೊರೆಸಲಾಯಿತು. ಅಲ್ಲದೆ, ವಿದ್ಯುತ್ ಕಂಬಗಳು ಮತ್ತು ವೈರ್‌ಗಳನ್ನು ಅಳವಡಿಸಿ, ರಾತ್ರಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಯಿತು. ಸ್ಥಳದಲ್ಲಿ ಕೆಲವರು ನಡೆಸುತ್ತಿದ್ದ ಅಕ್ರಮ ಮದ್ಯ ಚಟುವಟಿಕೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಇಲಾಖೆಯಿಂದ 300 ಸಸಿಗಳನ್ನು ನೆಡಿಸಿ, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಅರಣ್ಯ ಇಲಾಖೆಯೇ ವಹಿಸಿಕೊಂಡಿದೆ. ಕಾಂಪೌಂಡ್ ಒಡೆದು ನಿರ್ಮಿಸಿದ್ದ ಅಕ್ರಮ ರಸ್ತೆಯನ್ನು ಕೂಡ ಬಂದ್ ಮಾಡಲಾಯಿತು. ಸಂತೆಯ ದಿನ ಕೋಟಿಗಟ್ಟಲೆ ವಹಿವಾಟು ನಡೆಯುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ಪ್ರತಿ ಮಂಗಳವಾರ ಪೊಲೀಸರನ್ನು ನಿಯೋಜಿಸಲಾಯಿತು. ದನಕರುಗಳಿಗೆ ಯಾವುದೇ ಸಮಸ್ಯೆ ಎದುರಾದರೆ ತಕ್ಷಣ ಸ್ಪಂದಿಸಲು ಪಶು ವೈದ್ಯರನ್ನು ಕೂಡ ನಿಯೋಜಿಸಲಾಗಿದೆ. ತಮ್ಮ ಹೋರಾಟಕ್ಕೆ ಸ್ಪಂದಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಧನ್ಯವಾದ ಸಲ್ಲಿಸಿದರು. ಆದಾಗ್ಯೂ, ಹೋರಾಟದ ಮುಂದಿನ ಭಾಗವಾಗಿ ಸಿಸಿ ಕ್ಯಾಮೆರಾ ಅಳವಡಿಕೆ, ರೈತರಿಗೆ ಶೌಚಾಲಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಈ ವಾರದಲ್ಲಿಯೇ ಒದಗಿಸುವಂತೆ ಮುದ್ನಾಳ ಅವರು ಆಗ್ರಹಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ಹೋರಾಟದ ದಿನಾಂಕ ಘೋಷಣೆ ಮಾಡುವುದಾಗಿ ಎಚ್ಚರಿಸಿದರು. ಅಧಿಕಾರಿಗಳು ಹೋರಾಟಕ್ಕೆ ಮಣಿದು ಸ್ಪಂದಿಸಿರುವುದು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಗಿದೆ.
    1
    ಯಾದಗಿರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಪ್ರತಿ ಮಂಗಳವಾರ ನಡೆಯುವ ದನ, ಕುರಿ ಮತ್ತು ಮೇಕೆಗಳ ಸಂತೆಯಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಕುರಿತು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ ನಂತರ, ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಿಗೆ ಮಾರಾಟಕ್ಕೆ ಬಂದ ರೈತರೊಂದಿಗೆ ಚರ್ಚಿಸಿ ಸೌಕರ್ಯಗಳ ಕೊರತೆಯನ್ನು ಮನಗಂಡರು. ಈ ಅತಿ ದೊಡ್ಡ ಜಾನುವಾರು ಸಂತೆ ಸಮಿತಿಯು ಮಾರಾಟ ಶುಲ್ಕವನ್ನು ಪಡೆಯುತ್ತಿದ್ದರೂ, ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಇರುವುದು ಸರಿಯಲ್ಲ ಎಂದು ಮುದ್ನಾಳ ಅವರು ಪ್ರಶ್ನಿಸಿದ್ದರು.

ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ದಿ:16-06-2026 ಮಂಗಳವಾರ ಬೆಳಿಗ್ಗೆ ರಸ್ತೆ ತಡೆದು, ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಎಚ್ಚರಿಕೆಯ ನಂತರ ಅಧಿಕಾರಿಗಳು ದನಗಳ ಸಂತೆ ಮಾರುಕಟ್ಟೆ ಸುಧಾರಣೆಗೆ ಮುಂದಾದರು. ಜೆಸಿಬಿಯಿಂದ ಜಾಲಿ ಕಂಟಿಗಳನ್ನು ತೆರವುಗೊಳಿಸಿ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹೊಸ ಕೊಳವೆಬಾವಿ ಕೊರೆಸಲಾಯಿತು. ಅಲ್ಲದೆ, ವಿದ್ಯುತ್ ಕಂಬಗಳು ಮತ್ತು ವೈರ್‌ಗಳನ್ನು ಅಳವಡಿಸಿ, ರಾತ್ರಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಯಿತು. ಸ್ಥಳದಲ್ಲಿ ಕೆಲವರು ನಡೆಸುತ್ತಿದ್ದ ಅಕ್ರಮ ಮದ್ಯ ಚಟುವಟಿಕೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಇಲಾಖೆಯಿಂದ 300 ಸಸಿಗಳನ್ನು ನೆಡಿಸಿ, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಅರಣ್ಯ ಇಲಾಖೆಯೇ ವಹಿಸಿಕೊಂಡಿದೆ. ಕಾಂಪೌಂಡ್ ಒಡೆದು ನಿರ್ಮಿಸಿದ್ದ ಅಕ್ರಮ ರಸ್ತೆಯನ್ನು ಕೂಡ ಬಂದ್ ಮಾಡಲಾಯಿತು. ಸಂತೆಯ ದಿನ ಕೋಟಿಗಟ್ಟಲೆ ವಹಿವಾಟು ನಡೆಯುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ಪ್ರತಿ ಮಂಗಳವಾರ ಪೊಲೀಸರನ್ನು ನಿಯೋಜಿಸಲಾಯಿತು. ದನಕರುಗಳಿಗೆ ಯಾವುದೇ ಸಮಸ್ಯೆ ಎದುರಾದರೆ ತಕ್ಷಣ ಸ್ಪಂದಿಸಲು ಪಶು ವೈದ್ಯರನ್ನು ಕೂಡ ನಿಯೋಜಿಸಲಾಗಿದೆ. ತಮ್ಮ ಹೋರಾಟಕ್ಕೆ ಸ್ಪಂದಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಧನ್ಯವಾದ ಸಲ್ಲಿಸಿದರು.

ಆದಾಗ್ಯೂ, ಹೋರಾಟದ ಮುಂದಿನ ಭಾಗವಾಗಿ ಸಿಸಿ ಕ್ಯಾಮೆರಾ ಅಳವಡಿಕೆ, ರೈತರಿಗೆ ಶೌಚಾಲಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಈ ವಾರದಲ್ಲಿಯೇ ಒದಗಿಸುವಂತೆ ಮುದ್ನಾಳ ಅವರು ಆಗ್ರಹಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ಹೋರಾಟದ ದಿನಾಂಕ ಘೋಷಣೆ ಮಾಡುವುದಾಗಿ ಎಚ್ಚರಿಸಿದರು. ಅಧಿಕಾರಿಗಳು ಹೋರಾಟಕ್ಕೆ ಮಣಿದು ಸ್ಪಂದಿಸಿರುವುದು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಗಿದೆ.
    user_Nizamuddin
    Nizamuddin
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    19 hrs ago
  • ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ತಕ್ಷಣವೇ ಕಾಯಂ ಶಿಕ್ಷಕರನ್ನು ನಿಯೋಜಿಸುವಂತೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಹಾಗೂ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ ಖುರ್ಷಿದ್ ಪಟೇಲ್ ಮಾತನಾಡಿ, ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೂ ಅಗತ್ಯ ಪ್ರಮಾಣದ ಕಾಯಂ ಶಿಕ್ಷಕರ ಕೊರತೆಯಿಂದ ಗುಣಮಟ್ಟದ ಶಿಕ್ಷಣ ನೀಡುವುದು ಕಷ್ಟಕರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದ್ದು, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಶಾಲೆಯ ಸುಗಮ ನಿರ್ವಹಣೆಗೆ ಕೂಡಲೇ ಕಾಯಂ ಶಿಕ್ಷಕರನ್ನು ನೇಮಿಸಬೇಕು ಎಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ. ಇದೇ ಸಂದರ್ಭದಲ್ಲಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಭೀಮಣ್ಣ ವಿರಗೋಟ್ ಅವರು ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ತುರ್ತು ಕ್ರಮ ಕೈಗೊಂಡು ಶೀಘ್ರದಲ್ಲೇ ಕಾಯಂ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು. ಜಾಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಈಶಣ್ಣ ಕಾಟಮಳ್ಳಿ ಮಾತನಾಡಿ, ಜನತಾ ಕಾಲೋನಿ ಶಾಲೆಯಲ್ಲಿ ಸರಿಯಾದ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಗಮನ ಸೆಳೆದು, ಕೂಡಲೇ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು. ಅಲ್ಲದೆ, ಮುದುರಂಗಪ್ಪ ವಠಾರ ಅವರು ಶಾಲೆಯ ಮುಂಭಾಗದಲ್ಲೇ ಜಿಲ್ಲಾ ಮುಖ್ಯ ರಸ್ತೆ ಇರುವುದರಿಂದ ಮಕ್ಕಳ ಸುರಕ್ಷತೆಗಾಗಿ ಅಪಘಾತಗಳ ಸಾಧ್ಯತೆ ಹೆಚ್ಚಿದ್ದು, ಶಾಲೆಯ ಎದುರು ರಸ್ತೆ ಮೇಲೆ ವೇಗ ನಿಯಂತ್ರಕ (ರೋಡ್ ಬ್ರೇಕರ್) ಅಳವಡಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಖುರ್ಷಿದ್ ಪಟೇಲ್, ಸದಸ್ಯ ಹುಸೇನಪ್ಪ ತವಗ, ಪಾಲಕರ ಪ್ರತಿನಿಧಿ ಶಿವಪ್ಪ ಅಂಜಲ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಭೀಮಣ್ಣ ವಿರಗೋಟ್, ಮುದುರಂಗಪ್ಪ ವಠಾರ, ಈಶಣ್ಣ ಕಾಟಮಳ್ಳಿ, ಶಿವಲಿಂಗಪ್ಪ ಗೆಜ್ಜೆಭಾವಿ, ಎಂ.ಡಿ. ಆಸೀಫ್ ಜಿಲಾನಿ ಖಾಜಿ, ಪತ್ರಕರ್ತ ವಲಿ ಕುರೇಶಿ, ಕಾಸಿಂಸಾಬ್ ನಗರಗುಂದ, ಬಾಬುಸಾಬ್ ಗೌರಂಪೇಟ ಸೇರಿದಂತೆ ಶಾಲೆಯ ಮಕ್ಕಳ ಪಾಲಕರು ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.
    1
    ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ತಕ್ಷಣವೇ ಕಾಯಂ ಶಿಕ್ಷಕರನ್ನು ನಿಯೋಜಿಸುವಂತೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಹಾಗೂ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ ಖುರ್ಷಿದ್ ಪಟೇಲ್ ಮಾತನಾಡಿ, ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೂ ಅಗತ್ಯ ಪ್ರಮಾಣದ ಕಾಯಂ ಶಿಕ್ಷಕರ ಕೊರತೆಯಿಂದ ಗುಣಮಟ್ಟದ ಶಿಕ್ಷಣ ನೀಡುವುದು ಕಷ್ಟಕರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದ್ದು, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಶಾಲೆಯ ಸುಗಮ ನಿರ್ವಹಣೆಗೆ ಕೂಡಲೇ ಕಾಯಂ ಶಿಕ್ಷಕರನ್ನು ನೇಮಿಸಬೇಕು ಎಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಭೀಮಣ್ಣ ವಿರಗೋಟ್ ಅವರು ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ತುರ್ತು ಕ್ರಮ ಕೈಗೊಂಡು ಶೀಘ್ರದಲ್ಲೇ ಕಾಯಂ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು. ಜಾಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಈಶಣ್ಣ ಕಾಟಮಳ್ಳಿ ಮಾತನಾಡಿ, ಜನತಾ ಕಾಲೋನಿ ಶಾಲೆಯಲ್ಲಿ ಸರಿಯಾದ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಗಮನ ಸೆಳೆದು, ಕೂಡಲೇ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು. ಅಲ್ಲದೆ, ಮುದುರಂಗಪ್ಪ ವಠಾರ ಅವರು ಶಾಲೆಯ ಮುಂಭಾಗದಲ್ಲೇ ಜಿಲ್ಲಾ ಮುಖ್ಯ ರಸ್ತೆ ಇರುವುದರಿಂದ ಮಕ್ಕಳ ಸುರಕ್ಷತೆಗಾಗಿ ಅಪಘಾತಗಳ ಸಾಧ್ಯತೆ ಹೆಚ್ಚಿದ್ದು, ಶಾಲೆಯ ಎದುರು ರಸ್ತೆ ಮೇಲೆ ವೇಗ ನಿಯಂತ್ರಕ (ರೋಡ್ ಬ್ರೇಕರ್) ಅಳವಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಖುರ್ಷಿದ್ ಪಟೇಲ್, ಸದಸ್ಯ ಹುಸೇನಪ್ಪ ತವಗ, ಪಾಲಕರ ಪ್ರತಿನಿಧಿ ಶಿವಪ್ಪ ಅಂಜಲ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಭೀಮಣ್ಣ ವಿರಗೋಟ್, ಮುದುರಂಗಪ್ಪ ವಠಾರ, ಈಶಣ್ಣ ಕಾಟಮಳ್ಳಿ, ಶಿವಲಿಂಗಪ್ಪ ಗೆಜ್ಜೆಭಾವಿ, ಎಂ.ಡಿ. ಆಸೀಫ್ ಜಿಲಾನಿ ಖಾಜಿ, ಪತ್ರಕರ್ತ ವಲಿ ಕುರೇಶಿ, ಕಾಸಿಂಸಾಬ್ ನಗರಗುಂದ, ಬಾಬುಸಾಬ್ ಗೌರಂಪೇಟ ಸೇರಿದಂತೆ ಶಾಲೆಯ ಮಕ್ಕಳ ಪಾಲಕರು ಹಾಗೂ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.
    user_Khajahussain Baba Jalahalli
    Khajahussain Baba Jalahalli
    Pharmacist ದೇವದುರ್ಗ, ರಾಯಚೂರು, ಕರ್ನಾಟಕ•
    23 hrs ago
  • ಕೆಂಭಾವಿ ಪಟ್ಟಣದ ಆಲ್ದಾಳ ಗ್ರಾಮದ ಸಮೀಪ ಬಸ್ ಪಲ್ಟಿಯಾದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಬಸ್‌ನಲ್ಲಿದ್ದ ಸಾರ್ವಜನಿಕರಿಗೆ ಗಾಯಗಳಾಗಿವೆ. ಅದೃಷ್ಟವಶಾತ್, ಎಲ್ಲಾ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಕೆಂಭಾವಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
    1
    ಕೆಂಭಾವಿ ಪಟ್ಟಣದ ಆಲ್ದಾಳ ಗ್ರಾಮದ ಸಮೀಪ ಬಸ್ ಪಲ್ಟಿಯಾದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಬಸ್‌ನಲ್ಲಿದ್ದ ಸಾರ್ವಜನಿಕರಿಗೆ ಗಾಯಗಳಾಗಿವೆ. ಅದೃಷ್ಟವಶಾತ್, ಎಲ್ಲಾ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಕೆಂಭಾವಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
    user_ಇಲ್ಯಾಸ್ ಪಟೇಲ್ ಬಳಗಾನೂರ
    ಇಲ್ಯಾಸ್ ಪಟೇಲ್ ಬಳಗಾನೂರ
    Farmer ಯಾದಗಿರಿ, ಯಾದಗಿರಿ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.