logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನೂತನ ಚೇಳೂರು ತಾಲ್ಲೂಕು ನ್ಯಾಯಾಲಯ ಶೀಘ್ರ ಪ್ರಾರಂಭಕ್ಕೆ ಕಟ್ಟಡ ಪರಿಶೀಲನೆ ಬಾಗೇಪಲ್ಲಿ:-ತಾಲ್ಲೂಕು ನಿಂದ ಬೇರ್ಪಟ್ಟು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಚೇಳೂರು ತಾಲ್ಲೂಕಿನಲ್ಲಿ ಶೀಘ್ರದಲ್ಲೇ ನ್ಯಾಯಾಲಯದ ಕಲಾಪಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಶುಕ್ರವಾರ ನ್ಯಾಯಾಧೀಶರು ಪಟ್ಟಣದ ವಿವಿಧ ಬಾಡಿಗೆ ಕಟ್ಟಡಗಳನ್ನು ಪರಿಶೀಲಿಸಿದರು. ಬಾಗೇಪಲ್ಲಿ ತಾಲ್ಲೂಕು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥಾಚಾರಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಭಾರತಿ ಅವರು ಜಂಟಿಯಾಗಿ ಚೇಳೂರು ಪಟ್ಟಣದ ವಿವಿಧೆಡೆ ಭೇಟಿ ನೀಡಿ, ನ್ಯಾಯಾಲಯದ ಕಾರ್ಯನಿರ್ವಹಣೆಗೆ ಪೂರಕವಾದ ಸ್ಥಳಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ನ್ಯಾಯಾಧೀಶರು, ತಾಲ್ಲೂಕಿನ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಸಾರಿಗೆ ಸಂಪರ್ಕ ಲಭ್ಯವಿರುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯ ಆರಂಭಿಸಲು ಪರಿಶೀಲನೆ ನಡೆಸಲಾಗುತ್ತಿದೆ. ಬಾಗೇಪಲ್ಲಿ ರಸ್ತೆಯಲ್ಲಿರುವ ಒಂದು ಸುಸಜ್ಜಿತ ಕಟ್ಟಡ ಸೇರಿದಂತೆ ಇತರ ಸ್ಥಳಗಳನ್ನು ವೀಕ್ಷಿಸಲಾಗಿದೆ. ರಾಜ್ಯ ಹೈಕೋರ್ಟ್‌ನ ನಿರ್ದೇಶನದಂತೆ ಈ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಹಲವು ಪ್ರಕರಣಗಳ ವಿಲೇವಾರಿಗೆ ಸಹಕಾರಿ: ಚೇಳೂರು ತಾಲ್ಲೂಕು ವ್ಯಾಪ್ತಿಯ 12 ಗ್ರಾ.ಪಂಗಳು ಈ ಹಿಂದೆ ಚಿಂತಾಮಣಿ ಹಾಗೂ ಬಾಗೇಪಲ್ಲಿ ವ್ಯಾಪ್ತಿಗೆ ಬರುತ್ತಿದ್ದವು. ಯಾವ ಕಡೆ ಪ್ರಯಾಣ ಬೆಳೆಸಿದರು 50 ರಿಂದ 60 ಕಿ.ಲೋ.ಮೀಟರ್ ಹೋಗಿ ಬರುವುದಕ್ಕೆ ಅನಾನುಕೂಲ ಹಾಗೂ ಸಮಯ ವ್ಯರ್ಥ ಚೇಳೂರು ತಾಲ್ಲೂಕಿನಲ್ಲಿ ಇಲ್ಲಿನ ಜಮೀನು ವಿವಾದ, ಚೆಕ್ ಬೌನ್ಸ್, ಕೌಟುಂಬಿಕ ಕಲಹ ಸೇರಿದಂತೆ ನೂರಾರು ಪ್ರಕರಣಗಳು ಬಾಕಿ ಉಳಿದಿವೆ. ಇಲ್ಲಿಯೇ ನ್ಯಾಯಾಲಯ ಸ್ಥಾಪನೆಯಾಗುವುದರಿಂದ ಸ್ಥಳೀಯರಿಗೆ ಹಣ ಮತ್ತು ಸಮಯದ ಉಳಿತಾಯವಾಗಲಿದೆ. ಕಟ್ಟಡದ ಲಭ್ಯತೆ, ವಸತಿ ಸೌಕರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲೇ ಜಿಲ್ಲಾ ನ್ಯಾಯಾಧೀಶರಿಗೆ ಮಾಹಿತಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಚೇಳೂರು ವಕೀಲರ ಸಂಘದ ಜಿ.ಎನ್.ಮಂಜುನಾಥ್, ಮಾಜಿ ಅಧ್ಯಕ್ಷ ಎ.ಜೆ.ಸುಧಾಕರ್, ನಂಜುಂಡಪ್ಪ, ಆರ್.ಐ.ಈಶ್ವರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

9 hrs ago
user_Gopala Reddy R N
Gopala Reddy R N
Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
9 hrs ago
73018b6a-531b-4a62-90f0-33f9b6e27cb4

More news from ಕರ್ನಾಟಕ and nearby areas
  • ದೊಡ್ಡಬಳ್ಳಾಪುರ ಜಮೀನು ವ್ಯಾಜ್ಯ ಹಿನ್ನೆಲೆ ವಕೀಲನ ಮೇಲೆ ಗುಂಪು ಹಲ್ಲೆ..! ವಕೀಲ ಪ್ರತಾಪ್ ಮೇಲೆ ಅದೇ ಗ್ರಾಮದ ವಕೀಲನ ಕುಟುಂಬಸ್ಥರಿಂದ ಹಲ್ಲೆ.ಲ ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ. ಮುಖಕ್ಕೆ ಖಾರದ ಪುಡಿ ಹಾಕಿ ದೊಣ್ಣೆ ಮತ್ತು ರಾಡ್ ನಿಂದ ರಕ್ತ ಬರುವಂತೆ ಹಲ್ಲೆ. ಜಮೀನಿಗೆ ಕಾಂಪೌಂಡ್ ಹಾಕಲು ಹೋಗಿದ್ದ ವೇಳೆ‌‌ ಘಟನೆ ಸ್ಥಳದಲ್ಲಿ ಪೋಲೀಸರು ಇದ್ದರೂ ಕ್ಯಾರೆ ಎನ್ನದೆ ಹಲ್ಲೆ ಮಾಡಿರುವ ಗುಂಪು. ಜಗಳ ಬಿಡಿಸಲು ಬಂದ ವ್ಯಕ್ತಿಗಳ ಮೇಲೂ ಹಲ್ಲೆ ನಡೆಸಿರುವ ಗುಂಪು. ಹಲ್ಲೆ ಸಂಬಂಧ ಒಟ್ಟು 19 ಜನರ ವಿರುದ್ಧ FIR ದಾಖಲು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಖಾಸಗಿ ಅಸ್ಪತ್ರೆಗೆ ರವಾನೆ ಹೊಸಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ. .........................
    2
    ದೊಡ್ಡಬಳ್ಳಾಪುರ ಜಮೀನು ವ್ಯಾಜ್ಯ ಹಿನ್ನೆಲೆ ವಕೀಲನ ಮೇಲೆ ಗುಂಪು ಹಲ್ಲೆ..!
ವಕೀಲ ಪ್ರತಾಪ್ ಮೇಲೆ ಅದೇ ಗ್ರಾಮದ ವಕೀಲನ ಕುಟುಂಬಸ್ಥರಿಂದ ಹಲ್ಲೆ.ಲ
ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ.
ಮುಖಕ್ಕೆ ಖಾರದ ಪುಡಿ ಹಾಕಿ ದೊಣ್ಣೆ ಮತ್ತು ರಾಡ್ ನಿಂದ ರಕ್ತ ಬರುವಂತೆ ಹಲ್ಲೆ.
ಜಮೀನಿಗೆ ಕಾಂಪೌಂಡ್ ಹಾಕಲು ಹೋಗಿದ್ದ ವೇಳೆ‌‌ ಘಟನೆ
ಸ್ಥಳದಲ್ಲಿ ಪೋಲೀಸರು ಇದ್ದರೂ ಕ್ಯಾರೆ ಎನ್ನದೆ ಹಲ್ಲೆ ಮಾಡಿರುವ ಗುಂಪು.
ಜಗಳ ಬಿಡಿಸಲು ಬಂದ ವ್ಯಕ್ತಿಗಳ ಮೇಲೂ ಹಲ್ಲೆ ನಡೆಸಿರುವ ಗುಂಪು.
ಹಲ್ಲೆ ಸಂಬಂಧ ಒಟ್ಟು 19 ಜನರ ವಿರುದ್ಧ FIR ದಾಖಲು.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು  ಖಾಸಗಿ ಅಸ್ಪತ್ರೆಗೆ ರವಾನೆ
ಹೊಸಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲು.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ.
.........................
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    8 hrs ago
  • Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    4
    Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User
    user_ಈಶ್ವರ್ ಬೆಳಕು ನ್ಯೂಸ್ ಕನ್ನಡ User
    ಈಶ್ವರ್ ಬೆಳಕು ನ್ಯೂಸ್ ಕನ್ನಡ User
    Dodda Ballapur, Bengaluru Rural•
    12 hrs ago
  • Post by SUDHUR CHAULANI NEWS
    1
    Post by SUDHUR CHAULANI NEWS
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    7 hrs ago
  • ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಮಾಜಿ ರೌಡಿ ಶೀಟರ್ ಅನಿಲ್ ಅಲಿಯಾಸ್ ‘ಬೋರ್ ವೆಲ್’ ಅನಿಲ್‌ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಲಾಗಿದ್ದು, ಈ ವೇಳೆ ಹಲವು ರೌಡಿ ಶೀಟರ್‌ಗಳು ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದಾಗ ಕೆಲವರು ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನೂ ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ತಪಾಸಣೆಯನ್ನು ಪ್ರಶ್ನಿಸಿದ ಘಟನೆ ನಡೆದಿದೆ. ಈ ಅನಿರೀಕ್ಷಿತ ಪೊಲೀಸ್ ಪರಿಶೀಲನೆಯಿಂದ ಅನಿಲ್ ಹಾಗೂ ಆತನ ಸಂಗಡಿಗರಲ್ಲಿ ಆತಂಕ ಉಂಟಾಗಿದೆ. ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
    1
    ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಮಾಜಿ ರೌಡಿ ಶೀಟರ್ ಅನಿಲ್ ಅಲಿಯಾಸ್ ‘ಬೋರ್ ವೆಲ್’ ಅನಿಲ್‌ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಲಾಗಿದ್ದು, ಈ ವೇಳೆ ಹಲವು ರೌಡಿ ಶೀಟರ್‌ಗಳು ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದಾಗ ಕೆಲವರು ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನೂ ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ತಪಾಸಣೆಯನ್ನು ಪ್ರಶ್ನಿಸಿದ ಘಟನೆ ನಡೆದಿದೆ. ಈ ಅನಿರೀಕ್ಷಿತ ಪೊಲೀಸ್ ಪರಿಶೀಲನೆಯಿಂದ ಅನಿಲ್ ಹಾಗೂ ಆತನ ಸಂಗಡಿಗರಲ್ಲಿ ಆತಂಕ ಉಂಟಾಗಿದೆ. ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    5 hrs ago
  • ತುಮಕೂರು ಜಿಲ್ಲೆಯ ಕೋರ ಹೋಬಳಿಯ ಮಾವುಕೆರೆಯಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್ 30, 2026 ರಂದು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು. ಇದು ಈ ಭಾಗದ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು  ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು .
    2
    ತುಮಕೂರು ಜಿಲ್ಲೆಯ ಕೋರ ಹೋಬಳಿಯ ಮಾವುಕೆರೆಯಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಮಾರ್ಚ್ 30, 2026 ರಂದು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು. ಇದು ಈ ಭಾಗದ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು  ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು .
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    5 hrs ago
  • Madrase Hajira niswan bismilla negar near nisar negar kolar
    1
    Madrase Hajira niswan bismilla negar near nisar negar kolar
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    7 hrs ago
  • Post by Rownak Ali khan
    1
    Post by Rownak Ali khan
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    8 hrs ago
  • Post by SUDHUR CHAULANI NEWS
    1
    Post by SUDHUR CHAULANI NEWS
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.