ರೋಮನ್ ರೈಟ್ಸ್ ಜಸ್ಟೀಸ್ ಕೌನ್ಸಿಲ್ ಕರ್ನಾಟಕ ಘಟಕದ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಯವರ ಮುಖಾಂತರ ಶ್ರೀಯುತ ಪ್ರಧಾನಮಂತ್ರಿಯವರಿಗೆ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಈ ದಿನ ಮನವಿ ಪತ್ರವನ್ನು ನೀಡಲಾಯಿತು ನಮಸ್ಕಾರ ಸ್ನೇಹಿತರೇ, ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಈ ನಿಟ್ಟಿನಲ್ಲಿ, ಇಂದು ಹ್ಯೂಮನ್ ರೈಟ್ಸ್ ಜಸ್ಟಿಸ್ ಕೌನ್ಸಿಲ್ ರಾಜ್ಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಪದಾಧಿಕಾರಿಗಳದ ಲೋಕೇಶ್ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ತುರ್ತು ಮನವಿಯನ್ನು ಸಲ್ಲಿಸಲಾಯಿತು. ನಮ್ಮ ಪ್ರಮುಖ ಬೇಡಿಕೆಗಳು: * ಬೆಲೆ ಏರಿಕೆ ನಿಯಂತ್ರಿಸಲು ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ 'ವಿಶೇಷ ಬೆಲೆ ನಿಯಂತ್ರಣಾ ಪಡೆ' (Price Control Task Force) ರಚಿಸಬೇಕು. * ಅಕ್ರಮ ದಾಸ್ತಾನು ಮತ್ತು ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. * ಸಾರ್ವಜನಿಕ ಪಡಿತರ ವ್ಯವಸ್ಥೆ (PDS) ಮೂಲಕ ನೀಡುವ ಆಹಾರ ಸಾಮಗ್ರಿಗಳ ಪ್ರಮಾಣವನ್ನು ಹೆಚ್ಚಿಸಬೇಕು. ಸಾಮಾನ್ಯ ಜನರ ಧ್ವನಿಯಾಗಿ ನಾವು ಸಲ್ಲಿಸಿರುವ ಈ ಮನವಿಗೆ ಸರ್ಕಾರಗಳು ಕೂಡಲೇ ಸ್ಪಂದಿಸಲಿ ಎಂದು ಆಶಿಸೋಣ. ಈ ಮಾಹಿತಿಯನ್ನು ಎಲ್ಲರಿಗೂ ತಲುಪಿಸಿ. ಧನ್ಯವಾದಗಳೊಂದಿಗೆ, ಎನ್.ಎಂ. ಸಿಬ್ಗತುಲ್ಲಾ ಕರ್ನಾಟಕ ರಾಜ್ಯ ಉಪಾಧ್ಯಕ್ಷರು, ಹ್ಯೂಮನ್ ರೈಟ್ಸ್ ಜಸ್ಟಿಸ್ ಕೌನ್ಸಿಲ್.
ರೋಮನ್ ರೈಟ್ಸ್ ಜಸ್ಟೀಸ್ ಕೌನ್ಸಿಲ್ ಕರ್ನಾಟಕ ಘಟಕದ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಯವರ ಮುಖಾಂತರ ಶ್ರೀಯುತ ಪ್ರಧಾನಮಂತ್ರಿಯವರಿಗೆ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಈ ದಿನ ಮನವಿ ಪತ್ರವನ್ನು ನೀಡಲಾಯಿತು ನಮಸ್ಕಾರ ಸ್ನೇಹಿತರೇ, ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಈ ನಿಟ್ಟಿನಲ್ಲಿ, ಇಂದು ಹ್ಯೂಮನ್ ರೈಟ್ಸ್ ಜಸ್ಟಿಸ್ ಕೌನ್ಸಿಲ್ ರಾಜ್ಯ ಉಪಾಧ್ಯಕ್ಷರು ಹಾಗೂ
ಕರ್ನಾಟಕ ರಾಜ್ಯದ ಪದಾಧಿಕಾರಿಗಳದ ಲೋಕೇಶ್ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ತುರ್ತು ಮನವಿಯನ್ನು ಸಲ್ಲಿಸಲಾಯಿತು. ನಮ್ಮ ಪ್ರಮುಖ ಬೇಡಿಕೆಗಳು: * ಬೆಲೆ ಏರಿಕೆ ನಿಯಂತ್ರಿಸಲು ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ 'ವಿಶೇಷ ಬೆಲೆ ನಿಯಂತ್ರಣಾ ಪಡೆ' (Price Control Task Force) ರಚಿಸಬೇಕು. * ಅಕ್ರಮ ದಾಸ್ತಾನು ಮತ್ತು ಕೃತಕ
ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. * ಸಾರ್ವಜನಿಕ ಪಡಿತರ ವ್ಯವಸ್ಥೆ (PDS) ಮೂಲಕ ನೀಡುವ ಆಹಾರ ಸಾಮಗ್ರಿಗಳ ಪ್ರಮಾಣವನ್ನು ಹೆಚ್ಚಿಸಬೇಕು. ಸಾಮಾನ್ಯ ಜನರ ಧ್ವನಿಯಾಗಿ ನಾವು ಸಲ್ಲಿಸಿರುವ ಈ ಮನವಿಗೆ ಸರ್ಕಾರಗಳು ಕೂಡಲೇ ಸ್ಪಂದಿಸಲಿ ಎಂದು ಆಶಿಸೋಣ. ಈ ಮಾಹಿತಿಯನ್ನು ಎಲ್ಲರಿಗೂ ತಲುಪಿಸಿ. ಧನ್ಯವಾದಗಳೊಂದಿಗೆ, ಎನ್.ಎಂ. ಸಿಬ್ಗತುಲ್ಲಾ ಕರ್ನಾಟಕ ರಾಜ್ಯ ಉಪಾಧ್ಯಕ್ಷರು, ಹ್ಯೂಮನ್ ರೈಟ್ಸ್ ಜಸ್ಟಿಸ್ ಕೌನ್ಸಿಲ್.
- ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಂಪಿ ರಮಣ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಮಾತನಾಡಿದ ಹಂಪಿ ರಮಣ ಅವರು, ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಲ್ಲಿ ಸದೃಡಗೊಳಿಸುವುದಾಗಿ ತಿಳಿಸಿದ್ದಾರೆ. ಮುಂಬರುವ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.1
- ಹೊಳಲ್ಕೆರೆ ಅಂಗಡಿ ಹೋಟೆಲ್ ಗಳ ಮೇಲೆ ತಹಶಿಲ್ದಾರ್ ವಿಜಯ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮ ಸಿಲಿಂಡರ್ ಗಳನ್ನ ವಷಕ್ಕೆ ಪಡೆಯಲಾಗಿದೆ. ಇನ್ನೂ ಸಿಲಿಂಡರ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅಕ್ರಮವಾಗಿ ಸಿಲಿಂಡರ್ ಗಳನ್ನ ಏಜೆನ್ಸಿ ಮಾಲೀಕರು ಮಾರಾಟ ಮಾಡುತ್ತಿದ್ದ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು ಈ ಹಿನ್ನೆಲೆ ದಾಳಿ ನಡೆಸಿ ಸಿಲಿಂಡರ್ ಗಳನ್ನ ವಷಕ್ಕೆ ಪಡೆದಿದ್ದಾರೆ.1
- ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಮರಳುತ್ತಿದ್ದ ಭಕ್ತರ ಬಾಳಿನಲ್ಲಿ ವಿಧಿ ಅಟ್ಟಹಾಸ ಮೆರೆದಿದೆ. ಮಂತ್ರಾಲಯದ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿಕ್ಕಬಳ್ಳಾಪುರ ಮೂಲದ ಎಂಟು ಮಂದಿ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ...ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಕಲ್ಲುದೇವರಕುಂಟ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಮಂತ್ರಾಲಯಕ್ಕೆ ತೆರಳಿದ್ದ ಭಕ್ತರು ಸಂಚರಿಸುತ್ತಿದ್ದ ಬೊಲೆರೊ ವಾಹನಕ್ಕೆ, ವೇಗವಾಗಿ ಬಂದ ಸಿಮೆಂಟ್ ಮತ್ತು ಜಲ್ಲಿಕಲ್ಲು ಸಾಗಿಸುತ್ತಿದ್ದ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೊಲೆರೊ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮೃತಪಟ್ಟವರೆಲ್ಲರೂ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ನಿವಾಸಿಗಳು ಎಂದು ಗುರುತಿಸಲಾಗಿದೆ.ಟ್ಯಾಂಕರ್ ಡಿಕ್ಕಿಯಾದ ರಭಸಕ್ಕೆ ಬೊಲೆರೊ ವಾಹನ ಅಪ್ಪಚ್ಚಿಯಾಗಿದ್ದು, ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಗಿದೆ.1
- ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧನ; ₹1,90,000 ಜಪ್ತಿ ಕೂಡ್ಲಿಗಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಾನಹೊಸಹಳ್ಳಿಯ ಪೊಲೀಸರು ಯಶಸ್ವಿಯಾಗಿದರೆ. ನಜೀರ್ ಶಫಿ ಬಂಧಿತ ಆರೋಪಿ, ಕಾನಹೊಸಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಮಂಗಾಪುರ ಗ್ರಾಮದಲ್ಲಿ ಜನವರಿ ಹಾಗು ಡಿಸೆಂಬರ್ ತಿಂಗಳಲ್ಲಿ ಎರಡು ಪ್ರತ್ಯಕ ಮನೆಗಳ್ಳತಾನವಾದ ಕುರಿತು ಪ್ರಕರಣ ದಾಕಲಾಗಿದ್ದವು, ಪ್ರಕರಣದ ಜಾಡು ಹಿಡಿದ ಕಾನಾಹೊಸಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ₹1,90000 ಹಣವನ್ನು ವಶಕ್ಕೆ ಪಡೆದಿದ್ದಾರೆ. ಮಂಗಪುರದ ಬಸವರಾಜ ಎಂಬುವವರ ಮನೆಯಲ್ಲಿ ಬೀರುವಿನಲ್ಲಿದ್ದ 145000 ಹಾಗೂ ಗುರುಬಸವರಾಜ್ ಎಂಬುವವರ ಮನೆಯಲ್ಲಿ ₹55000 ಹಣವನ್ನು ಯಾರು ಇಲ್ಲದ ವೇಳೆ ಕಳ್ಳತನ ಮಾಡಿರುವ ಬಗ್ಗೆ ಪ್ರಕರಣ ದಾಕಲಾಗಿತ್ತು. ಎಸ್ಪಿ ಜಾಹ್ನವಿ ಎಸ್, ಎಎಸ್ಪಿ ಮಂಜುನಾಥ, ಡಿವೈಸ್ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ಡಿ ದುರುಗಪ್ಪ ಮಾರ್ಗದರ್ಶನದಲ್ಲಿ ಪಿಎಸ್ಐ ಸಿದ್ರಾಮ್ ಬಿದರಾಣಿ ನೇತೃತ್ವದಲ್ಲಿ ಸಿಬಂದ್ದಿ ಕೃಷ್ಣಪ್ಪ, ಸುರೇಶ್, ಕೊಟ್ರೇಶ ಅಂಗಡಿ, ಸಿದ್ದಲಿಂಗಪ್ಪ, ವಿನಾಯಕ್, ಸಂದೀಪ್, ರವಿಚಂದ್ರ ಗೌಡ, ಕೃಷ್ಣ ನಾಯಕ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಹಾಗೂ ಸಿಬಂದ್ದಿ ವರ್ಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಜಾಹ್ನವಿ ಅಭಿನಂದಿಸಿದ್ದಾರೆ.1
- ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. "ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.1
- Post by Onlinetv24x71
- ನಡೆಸಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಪ್ರಜಾಪ್ರಭುತ್ವದ ದಲ್ಲಿಪ್ರಶ್ನೆ ಕೇಳಿಕೊಂಡು ಪತ್ರ ಕೊಡಲು ಬಂದಿರುವ ಕೆಆರ್‌ಎಸ್ ಪಕ್ಷದ ಸೈನಿಕರು1
- ಚಿತ್ರದುರ್ಗದ ಕಲ್ಕುಂಟೆ ಬಳಿ ಎರಡು ಲಾರಿಗಳ ನಡುವೆ ಭೀಕರ ಅಪಘಾತ ನಡೆದು ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48 ರ ಕಲ್ಕುಂಟೆ ಗ್ರಾಮದ ಬಳಿ ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಘಟನೆ ನಡೆದಿದ್ದು ಎರಡು ಲಾರಿಗಳ ನಡುವೆ ಅಪಘಾತ ನಡೆದು ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.1