ಜೆಇಇ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ: 4000 ವಿದ್ಯಾರ್ಥಿಗಳಿಗೆ ಅನ್ನಸಂತರ್ಪಣೆ ಮೈಸೂರು: ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ ಶಿಕ್ಷಕಿಯವರಾದ ಶ್ರೀಮತಿ ಎ.ಸಿ. ನೇತ್ರಾವತಿ ಹಾಗೂ ಶ್ರೀ ಎಂ.ಡಿ. ಗುರುಸ್ವಾಮಿ ದಂಪತಿಗಳ ಪುತ್ರರಾದ ಶ್ರೀ ಎಂ.ಜಿ. ನಾಗದೇವ ಅವರು 2026ನೇ ಸಾಲಿನ ಜೆಇಇ ಪರೀಕ್ಷೆಯಲ್ಲಿ ಶೇ. 99.97 ಅಂಕಗಳನ್ನು ಪಡೆದು ದೇಶದಲ್ಲೇ ಪ್ರಥಮ ಸ್ಥಾನ ಗಳಿಸಿರುವುದು ಅಪಾರ ಸಂತಸಕ್ಕೆ ಕಾರಣವಾಗಿದೆ. ಈ ಸಾಧನೆಯ ಹಿನ್ನೆಲೆ ಅವರ ಕುಟುಂಬ ವರ್ಗದವರು ವಿದ್ಯಾರ್ಥಿಗಳೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಉದ್ದೇಶದಿಂದ ವಿಶೇಷ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದರು. ಸುತ್ತೂರು ಜೆಎಸ್ಎಸ್ ವಸತಿ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 4000 ವಿದ್ಯಾರ್ಥಿಗಳಿಗೆ ವಿಶೇಷ ಪ್ರಸಾದ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಗದೇವ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಗ್ರಾಮೀಣ ಹಿನ್ನೆಲೆಯಲ್ಲೂ ಉತ್ತಮ ಮಾರ್ಗದರ್ಶನ ಮತ್ತು ಪರಿಶ್ರಮ ಇದ್ದರೆ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ನಾಗದೇವ ಅವರು ಉತ್ತಮ ಉದಾಹರಣೆಯಾಗಿದ್ದಾರೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟರು. ಬಾಲ್ಯದಿಂದಲೇ ಅಧ್ಯಯನದಲ್ಲಿ ಆಸಕ್ತಿ ತೋರಿದ ಅವರು ನಿಯಮಿತ ಅಧ್ಯಯನ, ಪೋಷಕರ ಮಾರ್ಗದರ್ಶನ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಉತ್ಸಾಹ ಮತ್ತು ಪ್ರೇರಣೆ ಮೂಡಿಸುವ ಉದ್ದೇಶದಿಂದ ಕುಟುಂಬ ವರ್ಗದವರು ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿ ನಾಗದೇವ ಅವರ ಸಾಧನೆ ನಮಗೆಲ್ಲರಿಗೂ ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಊಟವನ್ನು ವಿತರಿಸಿದರು. ನಾಗದೇವ ಅವರ ಸಾಧನೆಗೆ ಶಾಲೆಯ ಎಲ್ಲರೂ ಅಭಿನಂದನೆ ಸಲ್ಲಿಸಿ ಅವರ ಮುಂದಿನ ವಿದ್ಯಾಭ್ಯಾಸ ಹಾಗೂ ಭವಿಷ್ಯ ಜೀವನ ಇನ್ನಷ್ಟು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

- ಕೌದಳ್ಳಿ ಗ್ರಾಮದ ಮನೆಗಳಲ್ಲಿ ಕಳ್ಳರು ಬೀಗದ ಹಣ ಚಿನ್ನಭರಣವನ್ನು ಕಳವು ಮಾಡಿರುವ ಘಟನೆ ಜರುಗಿದೆ ಗ್ರಾಮದ ಮೊದಲಿಯರು ಬೀದಿಗಯಲ್ಲಿ ಮೂರು ಮನೆಗಳನ್ನು ಯಾರೋ ಕಳ್ಳರು ಬೀಗ ಹೊಡೆದಿದ್ದು ಅದರಲ್ಲಿ ಪಳನಿ ಅಮ್ಮ ಬಿನ್ ಕೃಷ್ಣ ಮೊದಲಿಯ ರ್ ಎಂಬುವರ ಮನೆಯಲ್ಲಿ ka 10 v3245 Honda Activa ಕಳ್ಳತನ ಆಗಿರುತ್ತದೆ ಹಾಗೂ ಮನೆಯ ಒಳಗಡೆ ಎರಡು ಬೀರುಗಳ ನು ಹೊಡೆದಿರುತ್ತಾರೆ ಹಾಗೂ ಮಾದೇಶ ಬಿನ್ ನಾಗ ಮೊದಲಿಯರು ರವರ ಮನೆಯ ಬೀಗವನ್ನು ಸಹ ಒಡೆದಿರುತ್ತಾರೆ ಅಲ್ಲಿ ಯಾವುದೇ ವಸ್ತುಗಳು ಹೋಗಿರುವುದಿಲ್ಲ ಎಂಬುದಾಗಿ ಅವರೇ ತಿಳಿಸಿರುತ್ತಾರೆ ನಂತರ ಮಾದಪ್ಪ ಮೊದಲಿಯರ್ ಎಂಬುವರ ಮನೆಯ ಬೀಗವನ್ನು ಸಹ ಒಡೆದಿರುತ್ತಾರೆ, ಅವರುಗಳು ಮನೆಯಲ್ಲಿ ಇರುವುದಿಲ್ಲ ಈ ಸಂಬಂಧ ಸ್ಥಳಕ್ಕೆಬಪೊಲೀಸರು ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮಕ್ಯೆಗೊಂಡಿದ್ದಾರೆ1
- Post by Shilpa3
- ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಮೀಪದ ಶಿರಸಿ–ಕುಮಟಾ ಹೆದ್ದಾರಿಯ ಕೊಳಗಿಬೀಸ್ ಬಳಿ ನೆನ್ನೆ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಾರುತಿ ಸ್ವಿಫ್ಟ್ ಹಾಗೂ ಮಾರುತಿ ಇಕೋ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಕೆಲಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಸಂಚಾರಕ್ಕೆ ವ್ಯತ್ಯಯ ಉಂಟಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.1
- ನೆಲಮಂಗಲದಲ್ಲಿ ಬಾಲಕಿಯ ಬಾಲ್ಯವಿವಾಹಕ್ಕೆ ಯತ್ನ! 17 ವರ್ಷದ ಬಾಲಕಿಯ ಬಲವಂತ ವಿವಾಹಕ್ಕೆ ತಡೆ ನೆಲಮಂಗಲ ಕವಾಡಿಮಠದ ವೀರಭದ್ರೇಶ್ವರದಲ್ಲಿ ಕಲ್ಯಾಣ ಮಂಟಪದಲ್ಲಿ ಘಟನೆ ಮಧ್ಯರಾತ್ರಿ 1098 ಮಕ್ಕಳ ಸಹಾಯವಾಣಿಗೆ ಕರೆಮಾಡಿ ಮಾಹಿತಿ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳ ದಾಳಿ, ಪರಿಶೀಲನೆ ಬಾಲಕಿ ದಾಖಲೆ ಪರಿಶೀಲನೆ ವೇಳೆ ಅಪ್ರಾಪ್ತತೆ ಎಂದು ಬಹಿರಂಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡದಿಂದ ಕಾರ್ಯಾಚರಣೆ ನೆಲಮಂಗಲ ಟೌನ್ ಪೊಲೀಸರ ಸಹಾಯದಲ್ಲಿ ದಾಳಿ 18 ವರ್ಷದ ಒಳಗಿನ ಬಾಲಕಿ ಆದ್ದರಿಂದ ಬಾಲ್ಯ ವಿವಾಹವೆಂದು ಪರಿಗಣಿಸಿ ಪ್ರಕರಣ ಮಧ್ಯರಾತ್ರಿ 3 ಗಂಟೆಗೆ ದಾಳಿ ನಡೆಸಿ ಬಾಲಕಿ ರಕ್ಷಣೆ ತಾಯಿಯೊಂದಿಗೆ ಸುರಕ್ಷಿತ ಸ್ಥಳಕ್ಕೆ ಬಾಲಕಿ ಸ್ಥಳಾಂತರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲು ಕ್ರಮ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು.4
- Post by Chand Pasha1
- KOLAR KI.AWAAZ KOUSAR1
- ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಮೀಪದ ಶಿರಸಿ–ಕುಮಟಾ ಹೆದ್ದಾರಿಯ ಕೊಳಗಿಬೀಸ್ ಬಳಿ ನೆನ್ನೆ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಾರುತಿ ಸ್ವಿಫ್ಟ್ ಹಾಗೂ ಮಾರುತಿ ಇಕೋ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಕೆಲಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಸಂಚಾರಕ್ಕೆ ವ್ಯತ್ಯಯ ಉಂಟಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.1
- Post by Suresh Belagere1
- ಹೊಳಲ್ಕೆರೆ ಅಂಗಡಿ ಹೋಟೆಲ್ ಗಳ ಮೇಲೆ ತಹಶಿಲ್ದಾರ್ ವಿಜಯ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮ ಸಿಲಿಂಡರ್ ಗಳನ್ನ ವಷಕ್ಕೆ ಪಡೆಯಲಾಗಿದೆ. ಇನ್ನೂ ಸಿಲಿಂಡರ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅಕ್ರಮವಾಗಿ ಸಿಲಿಂಡರ್ ಗಳನ್ನ ಏಜೆನ್ಸಿ ಮಾಲೀಕರು ಮಾರಾಟ ಮಾಡುತ್ತಿದ್ದ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು ಈ ಹಿನ್ನೆಲೆ ದಾಳಿ ನಡೆಸಿ ಸಿಲಿಂಡರ್ ಗಳನ್ನ ವಷಕ್ಕೆ ಪಡೆದಿದ್ದಾರೆ.1