ಮುಸ್ತಾಪೂರ ಸರಕಾರಿ ಶಾಲೆಯಲ್ಲಿ ವಿನೂತನ ಮಹಿಳಾ ದಿನಾಚರಣೆ ಸಾಧಕ ಮಹಿಳೆಯರ ವೇಷಧಾರಿಗಳಾಗಿ ಮೆರೆದ ವಿದ್ಯಾರ್ಥಿನಿಯರು ! ಔರಾದ್ : ತಾಲೂಕಿನ ಮುಸ್ತಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ವಿನೂತನವಾಗಿ ಆಚರಿಸಲಾಯಿತು. ಸಮಾಜದಲ್ಲಿ ಮಹತ್ವದ ಸಾಧನೆ ಮಾಡಿದ ಹಾಗೂ ಇತಿಹಾಸದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ ಮಹಾನ್ ಮಹಿಳೆಯರ ವೇಷಧಾರಿಗಳಾಗಿ ವಿದ್ಯಾರ್ಥಿನಿಯರು ಮಿಂಚಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ವಿದ್ಯಾರ್ಥಿನಿಯರು ಧರಿಸಿದ ವೇಷಭೂಷಣ ಮತ್ತು ಅವರಿಂದ ನೀಡಲಾದ ಪರಿಚಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದ ಅಂಗವಾಗಿ ಶಾಲೆಯ 11 ವಿದ್ಯಾರ್ಥಿನಿಯರು ವಿವಿಧ ಮಹಾನ್ ಮಹಿಳೆಯರ ವೇಷಧಾರಿಗಳಾಗಿ ಅವರ ಜೀವನ ಸಾಧನೆಗಳ ಕುರಿತು ಸಂಕ್ಷಿಪ್ತವಾಗಿ ಪರಿಚಯ ನೀಡಿದರು. ಅಕ್ಕಮಹಾದೇವಿ ವೇಷದಲ್ಲಿ ಕಿರಣ, ಹೇಮರೆಡ್ಡಿ ಮಲ್ಲಮ್ಮ ವೇಷದಲ್ಲಿ ವೈಷ್ಣವಿ, ಕಿತ್ತೂರು ರಾಣಿ ಚೆನ್ನಮ್ಮ ವೇಷದಲ್ಲಿ ಅಮೂಲ್ಯ, ಸಾವಿತ್ರಿಬಾಯಿ ಫುಲೆ ವೇಷದಲ್ಲಿ ಶಿವಾನಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ವೇಷದಲ್ಲಿ ಅಮೂಲ್ಯ ಆರ್., ಇಂದಿರಾ ಗಾಂಧಿ ವೇಷದಲ್ಲಿ ಆರುತಿ, ಒನಕೆ ಓಬವ್ವ ವೇಷದಲ್ಲಿ ದಿವ್ಯ, ಮದರ್ ತೆರೆಸಾ ವೇಷದಲ್ಲಿ ರಾಧಿಕಾ, ರಾಣಿ ಅಬ್ಬಕ್ಕ ವೇಷದಲ್ಲಿ ರಾಣಿ, ರಜಿಯಾ ಸುಲ್ತಾನ್ ವೇಷದಲ್ಲಿ ಪ್ರೀತಿ ಹಾಗೂ ಉಳ್ಳಾಲದ ರಾಣಿ ಅಬ್ಬಕ್ಕ ವೇಷದಲ್ಲಿ ವರ್ಷಾ ಅವರು ತಮ್ಮ ಪಾತ್ರಗಳನ್ನು ಮನಮೋಹಕವಾಗಿ ಪ್ರದರ್ಶಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿನಿಯೂ ತಾವು ಧರಿಸಿದ ವೇಷಕ್ಕೆ ತಕ್ಕಂತೆ ಆ ಮಹಾನ ಮಹಿಳೆಯರ ಸಾಧನೆ, ತ್ಯಾಗ ಮತ್ತು ಸಮಾಜ ಸೇವೆಯ ಕುರಿತು ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವಿದ್ಯಾರ್ಥಿನಿಯರ ಈ ವೇಷಧಾರಿಗಳ ಪ್ರದರ್ಶನವು ಕಾರ್ಯಕ್ರಮಕ್ಕೆ ಹೊಸ ಉತ್ಸಾಹ ತುಂಬಿದ್ದು, ಶಾಲೆಗೆ ಆಗಮಿಸಿದ್ದ ಪಾಲಕರು ಹಾಗೂ ಗ್ರಾಮಸ್ಥರು ಮಕ್ಕಳ ಪ್ರತಿಭೆಯನ್ನು ಮೆಚ್ಚಿಕೊಂಡರು. ವಿದ್ಯಾರ್ಥಿನಿಯರು ಆತ್ಮವಿಶ್ವಾಸದಿಂದ ವೇದಿಕೆಯ ಮೇಲೆ ನಿಂತು ತಮ್ಮ ಪಾತ್ರಗಳನ್ನು ನಿರ್ವಹಿಸಿದ ರೀತಿ ಎಲ್ಲರ ಗಮನ ಸೆಳೆಯಿತು. ಈ ವೇಳೆ ಮಾತನಾಡಿದ ಶಿಕ್ಷಕಿ ನಂದಿನಿ ಮೊಕ್ತೆದಾರ್ ಅವರು, ತಾಳ್ಮೆ ಮತ್ತು ಸಹನೆಗೆ ಮತ್ತೊಂದು ಹೆಸರೇ ಹೆಣ್ಣು. ತ್ಯಾಗ, ಪ್ರೀತಿ ಮತ್ತು ಸಹನಶೀಲತೆಯ ಮೂಲಕ ಮಹಿಳೆ ಸಮಾಜದಲ್ಲಿ ಅಪಾರ ಗೌರವವನ್ನು ಗಳಿಸಿದ್ದಾಳೆ. ಭೂಮಿ ತಾಯಿಯಂತೆ ವಿಶಾಲ ಮನಸ್ಸು ಹೊಂದಿರುವ ಮಹಿಳೆ ಕುಟುಂಬದ ಏಳುಬೀಳುಗಳಲ್ಲಿ ಹೆಗಲಾಗಿ ನಿಂತು, ಮಮತೆಯ ತಾಯಿಯಾಗಿ, ಅಕ್ಕರೆಯ ಅಕ್ಕ-ತಂಗಿಯಾಗಿ ಜೀವನದ ಪ್ರತಿಯೊಂದು ಹಂತದಲ್ಲೂ ಶಕ್ತಿ ಮತ್ತು ಆದರ್ಶದ ಸಂಕೇತವಾಗಿರುತ್ತಾಳೆ. ಮಹಿಳೆಯ ಸಹನೆ ಮತ್ತು ಶಕ್ತಿ ಸಮಾಜದ ಪ್ರಗತಿಗೆ ಮೂಲವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಮಹಾನ್ ಮಹಿಳೆಯರ ಜೀವನವನ್ನು ಪರಿಚಯಿಸುವುದರ ಜೊತೆಗೆ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರೇರಣೆಯಾಗಿ ಪರಿಣಮಿಸಿತು. ಮಹಿಳೆಯರ ಸಾಧನೆ ಮತ್ತು ಅವರ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಆಯೋಜಿಸಿದ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು. ಶಾಲೆಯ ಮುಖ್ಯಗುರು ಕಿರಣಕುಮಾರ, ಶಿಕ್ಷಕಿ ಸುನಿತಾ ಬಿರಾದಾರ್, ಅಡುಗೆ ಸಿಬ್ಬಂದಿಗಳಾದ ಸುನಿತಾ ಹಾಗೂ ಮೀನಾಕ್ಷಿ, ಪಾಲಕರ ಪ್ರತಿನಿಧಿಗಳಾದ ಉಮಾಕಾಂತ, ಮಲ್ಲಿಕಾರ್ಜುನ, ಸುನಿತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಕಲ್ಲಪ್ಪ ಬೋರಾಳೆ ನಿರೂಪಿಸಿ ವಂದಿಸಿದರು.

- Post by Kalyan karanataka news channel1
- ಅಫಜಲಪುರ: ಸಾಮೂಹಿಕ ವಿವಾಹಗಳು ಬಡವರಿಗೆ ವರದಾನ: ಡಾ.ಮುರುಘರಾಜೇಂದ್ರ ಶ್ರೀಗಳು. ಕುಬೇರ ಕರಜಗಿಯ ಶ್ರೀ ಯಲ್ಲಾಲಿಂಗ ಮಹಾರಾಜರ ಜಾತ್ರೆ.1
- Post by Nava karnataka News channel1
- ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಡ್ಯಾಮ್ ಮೇಲೆ ಮೊಸಳೆ ವಾಕ್ ಮಾಡುತ್ತಿರುವುದು ಕಂಡು ಸಿಬ್ಬಂದಿಗಳು ಮೊಸಳೆಯ ವಿಡಿಯೋ ಮಾಡಿದ್ದಾರೆ1
- ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ‘ಒಳಮೀಸಲಾತಿ ಐಕ್ಯ ಹೋರಾಟ ಸಮಿತಿ’ ವತಿಯಿಂದ ಮಾರ್ಚ್ 11ರಂದು ರಾಯಚೂರು ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಮಿತಿಯ ಮುಖಂಡ ಎಂ. ವಿರುಪಾಕ್ಷಿ ತಿಳಿಸಿದರು. ನಗರದಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದರು. ಸರ್ಕಾರ ಹಳೆಯ ಮೀಸಲಾತಿಯಲ್ಲೇ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿರುವುದನ್ನು ಮಾದಿಗ ಸಮುದಾಯ ಖಂಡಿಸಿದೆ ಎಂದು ಹೇಳಿದರು. ಈ ಬಂದ್‌ನಲ್ಲಿ ಪ್ರಗತಿಪರ ಸಂಘಟನೆಗಳು, ವಿದ್ಯಾರ್ಥಿಗಳು, ಯುವಜನರು ಹಾಗೂ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ. ಸರ್ಕಾರ ತಕ್ಷಣ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.1
- ವಿಜಯಪುರ: ಮಾರ್ಚ್ 15 ರಂದು ನಗರದಲ್ಲಿ ಪ್ರತಿಭಟನೆ ವಿಜಯಪುರದಲ್ಲಿ ಮಂಗಳವಾರ ಎಐಟಿಯು ಸಂಘಟನೆಯ ರಾಜ್ಯ ಖಜಾಂಚಿ ವೀರೇಶ ಅವರು ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟರೆ ರಾಜ್ಯ ವ್ಯಾಪ್ತಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದಿದ್ದಾರೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಗೆ ತಂದು ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ, ಮಾರ್ಚ್ 15 ರಂದು ವಿಜಯಪುರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.1
- ಬೇಸಿಗೆ ಬಿಸಿ: ಮಾಗಡಿಯ 56 ಗ್ರಾಮಗಳಿಗೆ ತಪ್ಪಲಿದೆ ನೀರಡಿಕೆ; ಕುಡಿಯುವ ನೀರಿಗಾಗಿ ಸರ್ಕಾರದ ಮಾಸ್ಟರ್ ಪ್ಲಾನ್! #JB_News_Kannada1
- ವಿಜಯಪುರ: ಎಲ್‌ಪಿಜಿ ಗ್ಯಾಸ್ ಕೊರತೆ ಆಟೋ ಚಾಲಕರ ಪರದಾಟ ಕೊಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಗ್ಯಾಸ್ ಪೂರೈಕೆಯಲ್ಲಿ ಅಡಚಣೆಯುಂಟಾಗಿ, ವಿಜಯಪುರ ನಗರದಲ್ಲಿ ಎಲ್‌ಪಿಜಿ ಗ್ಯಾಸ್ ಕೊರತೆ ಎದುರಾಗಿದೆ. ಇದರಿಂದಾಗಿ ಆಟೋ ಚಾಲಕರು ಗ್ಯಾಸ್ ಬಂಕ್‌ಗಳ ಬಳಿ ಕಿಲೋಮೀಟರ್‌ಗಟ್ಟಲೆ ಸರತಿ ನಿಲ್ಲುವಂತಾಗಿದೆ. 90 ರೂ.ಗೆ ಮಾರಾಟವಾಗುತ್ತಿರುವ ಗ್ಯಾಸ್‌ನಿಂದಾಗಿ ಆಟೋ ಚಾಲಕರ ದಿನನಿತ್ಯದ ಬದುಕು ಸಂಕಷ್ಟಕ್ಕೆ ಸಿಲುಕಿದೆ.1