Shuru
Apke Nagar Ki App…
ಶಿವಮೊಗ್ಗ -ಶ್ರೀ ಗುಳ್ಳಮ್ಮ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ ಶಿವಮೊಗ್ಗ-ಜಿಲ್ಲೆಯ ಸಮೀಪದ ಕರಕುಚ್ಚಿಯಲ್ಲಿ ಶ್ರೀ ಗುಳ್ಳಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಪುನೀತರಾದರು.
ಆರ್.ವಿ.ಕೃಷ್ಣ
ಶಿವಮೊಗ್ಗ -ಶ್ರೀ ಗುಳ್ಳಮ್ಮ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ ಶಿವಮೊಗ್ಗ-ಜಿಲ್ಲೆಯ ಸಮೀಪದ ಕರಕುಚ್ಚಿಯಲ್ಲಿ ಶ್ರೀ ಗುಳ್ಳಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಪುನೀತರಾದರು.
- ಪ್ರವೀಣ್ ಅಧ್ಯಕ್ಷ NAYAKABhadravati, Shivamogga🤝5 hrs ago
More news from ಕರ್ನಾಟಕ and nearby areas
- ಹುಣಸೆಕಟ್ಟೆ ಗ್ರಾಮದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ನಾಗರಹಾವು ಕಚ್ಚಿದ್ದು ಮುಖ್ಯಶಿಕ್ಷಕ ಪ್ರಾಣವನ್ನೆ ಪಣಕ್ಕಿಟ್ಟು ವಿಧ್ಯಾರ್ಥಿನಿಯನ್ನ ಕಾಪಾಡಿದ್ದಾನೆ. ಚಿತ್ರದುರ್ಗ ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದ್ದು ಸರ್ಕಾರಿ ಶಾಲಾ ಮುಖ್ಯ ಶಿಕ್ಷಕ ರವಿಶಂಕರ್ ತಡಮಾಡದೆ ವಿಧ್ಯಾರ್ಥಿನಿಯ ಕಾಲಿಗೆ ತಮ್ಮ ಬಾಯಿಯಿಂದ ವಿಷವನ್ನ ತೆಗೆದು ವಿಧ್ಯಾರ್ಥಿನಿಯನ್ನ ಆಸ್ಪತ್ರೆಗೆ ಧಾಖಲಿಸಿದ್ದು ಶಾಲಾ ಮುಖ್ಯಶಿಕ್ಷಕ ರವಿಶಂಕರ್ ರ ಕಾರ್ಯಕ್ಕೆ ಎಲ್ಲೆಡ ಮೆಚ್ವುಗೆ ವ್ಯಕ್ತವಾಗಿದೆ.1
- ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಸಮೀಪದ ಪ್ರಕಾಶ್ ಸ್ಪಾಂಜ್ ಐರನ್ ಕಂಪನಿ ಹತ್ತಿರ ಇಂದು ಬೆಳಗ್ಗೆ ಸುಮಾರು 7 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಂಗಳೂರುದಿಂದ ಬಳ್ಳಾರಿಗೆ ತೆರಳುತ್ತಿದ್ದ ಕಾರು ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಇನ್ನಿಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ದುರ್ಘಟನೆ ವಿಷಯ ತಿಳಿದ ತಕ್ಷಣ ಗೃಹ ಸಚಿವ ಜಿ. ಪರಮೇಶ್ವರ್, ಜಿಲ್ಲಾ ಉಸ್ತುವರಿ ಸಚಿವ ಡಿ. ಸುಧಾಕರ್, ಹಾಗೂ ಶಾಸಕ ಟಿ. ರಘುಮೂರ್ತಿ ಸೇರಿದಂತೆ ಹಲವು ಪೊಲೀಸ್ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮೃತರ ಕುಟುಂಬಸ್ಥರಿಗೆ ಆತ್ಮಸಾಂತ್ವನ ಹೇಳಿದರು. ಮೃತರ ಗುರುತು ಹಾಗೂ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಗೃಹ ಸಚಿವ ಜಿ.ಪರವೇಶ್ವರ್ ಹೇನೇಳಿದ್ದಾರೆ ನೀವೆ ಕೇಳಿ1
- ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ತಡಸ ಗ್ರಾಮದ ಭೂ ಒಡೆತನ ಯೋಜನೆಯಡಿಯಲ್ಲಿ 240 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮದಲ್ಲಿ ಶಿಗ್ಗಾಂವ- ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ 240 ಫಲಾನುಭವಿಗಳು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು,1
- *ಸಾಮಾಜಿಕ ಹೋರಾಟದ ದಾರಿಯಲ್ಲಿ ನಿಂತ ನಾಯಕ – ಎಸ್. ದುರುಗೆಶ್ ಅವರಿಗೆ ಜನ್ಮದಿನದ ಶುಭಾಶಯಗಳು 🎂* ವಿಜಯನಗರ ಜಿಲ್ಲೆಯ ಕೂಡ್ಲಿಗಿ ನಗರದ ಹೆಮ್ಮೆಯ ವ್ಯಕ್ತಿತ್ವವಾಗಿರುವ *ಎಸ್. ದುರುಗೆಶ್* ಅವರು ಸಮಾಜದ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಹೋರಾಟಗಾರರಾಗಿದ್ದಾರೆ. ದಲಿತ ಸಮುದಾಯದ ಹಕ್ಕುಗಳಿಗಾಗಿ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಅವರು ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಅವರು (DSS) ದಲಿತ ಸಂಘರ್ಷ ಸಮಿತಿಯ ವಿಜಯನಗರ ಜಿಲ್ಲೆಯ ಜಿಲ್ಲಾ ಸಂಚಾಲಕರಾಗಿ ನಾಲ್ಕನೇ ವರ್ಷವೂ ಯಶಸ್ವಿಯಾಗಿ ಸೇವೆ ಮುಂದುವರಿಸುತ್ತಿದ್ದಾರೆ. ತಮ್ಮ ಹೋರಾಟಮಯ ಜೀವನದಲ್ಲಿ ಅನೇಕ ಸವಾಲುಗಳು, ಏರು-ಇಳಿತಗಳು ಎದುರಾದರೂ, ಅವುಗಳನ್ನು ಧೈರ್ಯದಿಂದ ಎದುರಿಸಿ ಸಮಾಜದ ನಂಬಿಕೆಯನ್ನು ಗಳಿಸಿದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಸಂಘಟನೆಯ ಬಲವರ್ಧನೆ, ದಲಿತ ಸಮುದಾಯದ ಹಕ್ಕುಗಳ ರಕ್ಷಣೆ, ಅನ್ಯಾಯ-ಅತ್ಯಾಚಾರಗಳ ವಿರುದ್ಧ ಧ್ವನಿ ಎತ್ತುವಲ್ಲಿ *ಎಸ್. ದುರುಗೆಶ್* ಅವರ ಪಾತ್ರ ಮಹತ್ತರವಾಗಿದೆ. ಗ್ರಾಮದಿಂದ ನಗರವರೆಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ನ್ಯಾಯಕ್ಕಾಗಿ ಹೋರಾಡುವ ನಾಯಕತ್ವವು ಅವರನ್ನು ಸಮಾಜದಲ್ಲಿ ವಿಶೇಷ ವ್ಯಕ್ತಿಯನ್ನಾಗಿ ಮಾಡಿದೆ. ಅವರ ಸರಳತೆ, ಸೇವಾಭಾವ ಮತ್ತು ಸಂಘಟನೆಗೆ ನೀಡುತ್ತಿರುವ ಶ್ರಮ ಅನೇಕ ಯುವಕರಿಗೆ ಪ್ರೇರಣೆಯಾಗಿದೆ. ಇಂದು (14-03-1976) ಅವರ ಜನ್ಮದಿನದ ಸಂಭ್ರಮದ ದಿನವಾಗಿದೆ. ಈ ವಿಶೇಷ ಸಂದರ್ಭದಲ್ಲಿ ಅವರ ಸಮಾಜಮುಖಿ ಸೇವೆ ಇನ್ನಷ್ಟು ವಿಸ್ತಾರವಾಗಲಿ, ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಇನ್ನಷ್ಟು ಶಕ್ತಿ ದೊರಕಲಿ ಎಂದು ಹಾರೈಸುತ್ತೇವೆ. ಶುಭಾಶಯ ಕೋರುವವರು: ದಲಿತ ಸಂಘರ್ಷ ಸಮಿತಿ (DSS) ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಗರಿಬೊಮ್ಮನಹಳ್ಳಿ ತಾಲ್ಲೂಕು ಘಟಕ 🌹 *ಎಸ್. ದುರುಗೆಶ್ ಅವರಿಗೆ ಹಾರ್ದಿಕ ಜನ್ಮದಿನದ ಶುಭಾಶಯಗಳು* . ಸಮಾಜ ಸೇವೆಯ ನಿಮ್ಮ ಪಯಣ ಇನ್ನಷ್ಟು ಉಜ್ವಲವಾಗಲಿ. ✨ *ನಾಗರಾಜ್ ಕಲ್ಲಹಳ್ಳಿ ✒️3
- ಮಾ.15: ಅರಸೀಕೆರೆ ತಾಲೂಕು, ಜಾವಗಲ್ ಹೋಬಳಿ ಗೇರುಮರ ಗ್ರಾಮದ ಶ್ರೀ ಚನ್ನಬಸವೇಶ್ವರ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್ ಇಲ್ಲಿ ದಿನಾಂಕ 11.03.2026ರಂದು ಅದ್ದೂರಿಯಾಗಿ ತಂದೆ ತಾಯಿಯ ಪಾದಪೂಜೆಯೊಂದಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 250 ತಂದೆ ತಾಯಂದಿರಿಗೆ ಅವರ ಮಕ್ಕಳಿಂದ ಪಾದಪೂಜೆ ಮಾಡಿ, ಗುರುಗಳಿಗೆ ಹೂ ಪುಷ್ಪಗಳೊಂದಿಗೆ ವಂದನೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಕಾರ್ಯದರ್ಶಿಗಳಾದ ವಿನಯ್ ಪಾಟೀಲ್ ರವರು ವಹಿಸಿದ್ದರು. ಇಂದಿನ ದಿನಮಾನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಎಲ್ಲವನ್ನು ಮರೆತು ಹೋಗುತ್ತಿದ್ದಾರೆಂದು ಹೇಳಿ ತಂದೆ ತಾಯಿಗಳಾದ ತಾವುಗಳು ಮಕ್ಕಳಿಗೆ ಮೊಬೈಲನ್ನು ಕೊಡದೆ ಕಥೆ ಕದಂಬರಿ, ಚಿತ್ರಕಲೆ ಇತರೆ ಚಟುವಟಿಕೆಗಳಲ್ಲಿ ತಮ್ಮ ಜೊತೆ ತೊಡಗಿಸಿಕೊಳ್ಳಬೇಕೆಂದು ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಅದರ ಜೊತೆ ಪಾಲಕ ಪೋಷಕರ ಜವಾಬ್ದಾರಿಗಳು ಅವರ ಪಾತ್ರಗಳು ಶಾಲೆ ಮತ್ತು ಮಗು, ಪಾಲಕ ಪೋಷಕರು ಇವರ ನಡುವಿನ ಅವಿನಾಭಾವ ಸಂಬಂಧಗಳ ಬಗ್ಗೆ ತಿಳಿಸಿಕೊಟ್ಟರು. ಪಾಲಕ ಪೋಷಕ ಸಲಹಾ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿಗಳು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿಸ್ಥಿತರಿದ್ದರು. ಈ ಶಾಲೆಯ ಮುಖ್ಯೋಪಾಧ್ಯಾಯನಿ ಸರೋಜಮ್ಮ, ಶಿಕ್ಷಕಿಯರಾದ ಶುಭ, ಶೋಭಾ, ಗಗನ,ಸುಧಾ, ಸುಪ್ರಿಯಾ ಪಾಟೀಲ್ ಶಿಕ್ಷಕಿಯ ತರ ಸಿಬ್ಬಂದಿಯವರು ರಾಜಣ್ಣ, ರಂಗಸ್ವಾಮಿ ಮತ್ತು ರತ್ನಮ್ಮ ಈ ಕಾರ್ಯಕ್ರಮ ಯಶಸ್ವಿಯಾಗಲಿಕ್ಕೆ ಸಹಕಾರ ನೀಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಶಿಕ್ಷಕಿಯರಾದ ಸುಪ್ರಿಯಾ ರವರು ಮಾಡಿದರು. ಶಾಲೆಯ ಮಕ್ಕಳು ವಚನಗಳನ್ನು ಹೇಳುವುದರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.1
- ತುಮಕೂರು ಡ್ರಸ್ ಎಂಬ ಮಾದಕ ಮಾಫಿಯಾದಲ್ಲಿ ಮುಸ್ಲಿಂ ಯುವಕರೇ ಅತಿ ಹೆಚ್ಚು ಯಾಕೆ?!1
- Post by Suresh Belagere1
- ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಸಮೀಪ ಪ್ರಕಾಶ್ ಸ್ಪಾಂಜ್ ಐರನ್ ಕಂಪನಿ ಹತ್ತಿರ ಇಂದು ಬೆಳಗ್ಗೆ ಸುಮಾರು 7:00 ಗಂಟೆ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರುದಿಂದ ಬಳ್ಳಾರಿಯಲ್ಲಿ ನಡೆಯುವ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐದು ಮಂದಿ ಪೊಲೀಸ್ ಸಿಬ್ಬದಿ ಕಾರು ಲಾರಿಯ ಹಿಂದಿನ ಭಾಗಕ್ಕೆ ಡಿಕ್ಕಿ ಹೊಡೆದಿದೆ. ಚಾಲಕ ನಿದ್ದೆಯ ಮಂಪರಿನಲ್ಲಿ ಇದ್ದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಹೋಗಿದ್ದು, ಸ್ಥಳದಲ್ಲೇ ಮೂವರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆ ನಂತರ ತಿಳಿಯಲಿದೆ.1
- ಹೊಸಪೇಟೆ ಸುರಂಗ ಮಾರ್ಗ1