logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ದೇವರ ಹೆಸರಿನಲ್ಲಿ ಪ್ರಮಾಣದ ಪತ್ರ ಸ್ವೀಕರಿಸಿದ ನೂತನ ಸಚಿವ ಟಿ ರಘುಮೂರ್ತಿ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಟಿ .ರಘುಮೂರ್ತಿ ಅವರಿಗೆ ಮಂತ್ರಿ ಸ್ಥಾನ ಒಲಿದು ಬಂದಿದೆ.. ನೂತನ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ..

3 hrs ago
user_Suresh Belagere
Suresh Belagere
Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
3 hrs ago

ದೇವರ ಹೆಸರಿನಲ್ಲಿ ಪ್ರಮಾಣದ ಪತ್ರ ಸ್ವೀಕರಿಸಿದ ನೂತನ ಸಚಿವ ಟಿ ರಘುಮೂರ್ತಿ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಟಿ .ರಘುಮೂರ್ತಿ ಅವರಿಗೆ ಮಂತ್ರಿ ಸ್ಥಾನ ಒಲಿದು ಬಂದಿದೆ.. ನೂತನ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ..

More news from ಕರ್ನಾಟಕ and nearby areas
  • ಹಲವು ಪೋಷಕಾಂಶಗಳುಳ್ಳ ಒಣ ಮೀನು ಆರೋಗ್ಯಕ್ಕೆ ಉತ್ತಮ. ಚಳ್ಳಕೆರೆಯಲ್ಲೂ ಸಿಗುತ್ತೆ ಒಣ ಮೀನು‌.
    1
    ಹಲವು ಪೋಷಕಾಂಶಗಳುಳ್ಳ ಒಣ ಮೀನು ಆರೋಗ್ಯಕ್ಕೆ ಉತ್ತಮ. ಚಳ್ಳಕೆರೆಯಲ್ಲೂ  ಸಿಗುತ್ತೆ ಒಣ ಮೀನು‌.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    16 hrs ago
  • ಕೂಡ್ಲಿಗಿ : ಸಭೆಗಳು ಉತ್ಸವಗಳು ಕಾಟಾಚಾರಕ್ಕಾಗಬಾರದು , ಗೈರಾದವರ ವಿರುದ್ಧ ಶಿಸ್ಥು ಕ್ರಮ ಜರುಗಿಸಿ ವೇದಿಕೆಯ ಘನತೆ ಕಾಪಾಡಿ- ಸಂಘಟನೆಗಳ ಆಗ್ರಹ *ಕೂಡ್ಲಿಗಿ : ಸಭೆಗಳು ಉತ್ಸವಗಳು ಕಾಟಾಚಾರಕ್ಕಾಗಬಾರದು , ಗೈರಾದವರ ವಿರುದ್ಧ ಶಿಸ್ಥು ಕ್ರಮ ಜರುಗಿಸಿ ವೇದಿಕೆಯ ಘನತೆ ಕಾಪಾಡಿ- ಸಂಘಟನೆಗಳ ಆಗ್ರಹ*_ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಾಡಳಿತದಿಂದ ಜರುಗುವ ಸಭೆಗಳು , ಉತ್ಸವಗಳು ಕಾಟಾಚಾರಕ್ಕೆ ಜರುಗಿಸಬಾರದು. ತುಂಬಾ ಅರ್ಥಪೂರ್ಣವಾಗಿ , ಹಾಗೂ ಶಿಷ್ಟಾಚಾರದಿಂದ ಜರುಗಿಸಬೇಕೆಂದು. ಮತ್ತು ಸಭೆಗಳಿಗೆ ಉತ್ಸವಗಳಿಗೆ ಗೈರಾದ , ಇಲಾಖೆಗಳ ಅಧಿಕಾರಿಗಳ ವಿರುದ್ಧ. ಶಿಸ್ತು ಕ್ರಮ ಜರುಗಿಸಬೇಕೆಂದು ಸಂಘಟನೆಗಳು , ತಾಲೂಕಾಡಳಿತಕ್ಕೆ ಆಗ್ರಹಿಸಿವೆ. ಆ 1ರಂದು ಪ್ರವಾಸಿಮಂದಿರದಲ್ಲಿ ಜರುಗಿದ , ಸ್ವಾತಂತ್ರ್ಯೋತ್ಸವ ಪೂರ್ವ ಭಾವಿ ಸಭೆಯಲ್ಲಿ ಸಂಘಟನೆಗಳ ಮುಖಂಡರು ಮಾತನಾಡಿದರು. ಯಾವುದೇ ಉತ್ಸವಗಳ ಪೂರ್ವ ಸಭೆಗಳಿಗೆ ಹಾಗೂ ಉತ್ಸವಗಳಿಗೆ , ಅಧಿಕಾರಿಗಳು ವಿನಾಃಕಾರಣ ಗೈರು ಹಾಜರಾಗೋದು ರೂಡಿಗತವಾಗಿದೆ. ತಾಲೂಕಾಡಳಿತ ನೇರ ಹೊಣೆ ಹೊರಬೇಕಿದೆ , ಗೈರಾಗುವ ಅಧಿಕಾರಿಗಳ ಸಿಬ್ಬಂದಿಯವರ ವಿರುದ್ಧ. ಕಾನೂನು ರೀತ್ಯ ಕಠಿಣ ಶಿಸ್ಥು ಕ್ರಮ ಜರುಗಿಸಬೇಕೆಂದು , ಸಂಘಟನೆಗಳ ಪದಾಧಿಕಾರಿಗಳು ತಹಶಿಲ್ದಾರರಿಗೆ ಆಗ್ರಹಿಸಿದರು. ಸಭೆಗಳು ಆಚರಣೆಗಳು ಉತ್ಸವಗಳ ಸಂದರ್ಭದಲ್ಲಿ , ಶಿಷ್ಟಾಚಾರ ಗಾಳಿಗೆ ತೂರಲಾಗುತ್ತಿದೆ. ಸಭೆಯ ವೇದಿಕೆಯಲ್ಲಿ ಜನಪ್ರತಿನಿಧಿಗಳು ಉನ್ನತಾಧಿಕಾರಿಗಳು ಗಣ್ಯರು ಹೊರತು ಪಡಿಸಿ , ಅಯೋಗ್ಯರಿಗೆ ಪ್ರಾಶಸ್ತ್ಯ ನೀಡಿ ವೇದಿಕೆಯ ಗಾಂಭೀರತೆ ಘನತೆಗೆ ಧಕ್ಕೆ ತರುವಂತಾಗಬಾರದು. ಉತ್ಸವಗಳು ಮಕ್ಕಳಿಗೆ ಹಬ್ಬದ ಅನುಭವ ನೀಡುವಂತಾಗಬೇಕಿದೆ , ಉತ್ಸವ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕಿದೆ. ಅಗತ್ಯ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ , ಸಂಬಂಧಿಸಿದ ಇಲಾಖೆಗಳು ಒದಗಿಸಬೇಕಿದೆ. ಧ್ವಜಾರೋಹಣ ಸಂದರ್ಭದಲ್ಲಿ ಹಾಗೂ ವೇದಿಕೆಯಲ್ಲಿ , ಶಿಷ್ಟಾಚಾರಗಳನ್ನು ನಿಯಮಗಳನ್ನು ಪಾಲಿಸುವುದು ಖಡ್ಡಾಯವಾಗಬೇಕಿದೆ ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ಸಭೆಗಳು ಉತ್ಸವ ಆಚರಣೆಗಳ ಸಂದರ್ಭದಲ್ಲಿ , ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಯವರ ಹಾಜರಾತಿ ಖಡ್ಡಾಯಗೊಳಿಸಿ. ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು , ಹೋರಾಟಗಾರರು ತಹಶಿಲ್ದಾರರಿಗೆ ಆಗ್ರಹಿಸಿದರು. ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್ , ತಾಪಂ ಅಧಿಕಾರಿ ಟಿ.ನರಸಪ್ಪ , ಬಿಇಒ ಮೈಲೇಶ ಬೇವೂರ್ , ಪಿಎಸ್ಐ ಸಿ.ಪ್ರಕಾಶ್ ಇದ್ದರು. ಕನ್ನಡ ಪರ ಸಂಘಟನೆಗಳು , ರೈತರಪರ , ಮಹಿಳಾ ಪರ , ದಲಿತಪರ , ಕಾರ್ಮಿಕರ ಪರ ಸಂಘಟನೆಗಳು ಸೇರಿದಂತೆ ವಿವಿದ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ವಿವಿದ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಯವರು ಹಾಜರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : ಸಭೆಗಳು ಉತ್ಸವಗಳು ಕಾಟಾಚಾರಕ್ಕಾಗಬಾರದು , ಗೈರಾದವರ ವಿರುದ್ಧ ಶಿಸ್ಥು ಕ್ರಮ ಜರುಗಿಸಿ ವೇದಿಕೆಯ ಘನತೆ ಕಾಪಾಡಿ- ಸಂಘಟನೆಗಳ ಆಗ್ರಹ
*ಕೂಡ್ಲಿಗಿ : ಸಭೆಗಳು ಉತ್ಸವಗಳು ಕಾಟಾಚಾರಕ್ಕಾಗಬಾರದು , ಗೈರಾದವರ ವಿರುದ್ಧ ಶಿಸ್ಥು ಕ್ರಮ ಜರುಗಿಸಿ ವೇದಿಕೆಯ ಘನತೆ ಕಾಪಾಡಿ- ಸಂಘಟನೆಗಳ ಆಗ್ರಹ*_ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಾಡಳಿತದಿಂದ ಜರುಗುವ ಸಭೆಗಳು , ಉತ್ಸವಗಳು ಕಾಟಾಚಾರಕ್ಕೆ ಜರುಗಿಸಬಾರದು. ತುಂಬಾ ಅರ್ಥಪೂರ್ಣವಾಗಿ , ಹಾಗೂ ಶಿಷ್ಟಾಚಾರದಿಂದ ಜರುಗಿಸಬೇಕೆಂದು. ಮತ್ತು ಸಭೆಗಳಿಗೆ ಉತ್ಸವಗಳಿಗೆ ಗೈರಾದ , ಇಲಾಖೆಗಳ ಅಧಿಕಾರಿಗಳ ವಿರುದ್ಧ. ಶಿಸ್ತು ಕ್ರಮ ಜರುಗಿಸಬೇಕೆಂದು ಸಂಘಟನೆಗಳು , ತಾಲೂಕಾಡಳಿತಕ್ಕೆ ಆಗ್ರಹಿಸಿವೆ. ಆ 1ರಂದು ಪ್ರವಾಸಿಮಂದಿರದಲ್ಲಿ ಜರುಗಿದ , ಸ್ವಾತಂತ್ರ್ಯೋತ್ಸವ ಪೂರ್ವ ಭಾವಿ ಸಭೆಯಲ್ಲಿ ಸಂಘಟನೆಗಳ ಮುಖಂಡರು ಮಾತನಾಡಿದರು. ಯಾವುದೇ ಉತ್ಸವಗಳ ಪೂರ್ವ ಸಭೆಗಳಿಗೆ  ಹಾಗೂ ಉತ್ಸವಗಳಿಗೆ , ಅಧಿಕಾರಿಗಳು ವಿನಾಃಕಾರಣ ಗೈರು ಹಾಜರಾಗೋದು ರೂಡಿಗತವಾಗಿದೆ. ತಾಲೂಕಾಡಳಿತ ನೇರ ಹೊಣೆ ಹೊರಬೇಕಿದೆ , ಗೈರಾಗುವ ಅಧಿಕಾರಿಗಳ ಸಿಬ್ಬಂದಿಯವರ ವಿರುದ್ಧ. ಕಾನೂನು ರೀತ್ಯ ಕಠಿಣ ಶಿಸ್ಥು ಕ್ರಮ ಜರುಗಿಸಬೇಕೆಂದು , ಸಂಘಟನೆಗಳ ಪದಾಧಿಕಾರಿಗಳು ತಹಶಿಲ್ದಾರರಿಗೆ ಆಗ್ರಹಿಸಿದರು. ಸಭೆಗಳು ಆಚರಣೆಗಳು  ಉತ್ಸವಗಳ ಸಂದರ್ಭದಲ್ಲಿ , ಶಿಷ್ಟಾಚಾರ ಗಾಳಿಗೆ ತೂರಲಾಗುತ್ತಿದೆ.  ಸಭೆಯ ವೇದಿಕೆಯಲ್ಲಿ ಜನಪ್ರತಿನಿಧಿಗಳು ಉನ್ನತಾಧಿಕಾರಿಗಳು ಗಣ್ಯರು ಹೊರತು ಪಡಿಸಿ , ಅಯೋಗ್ಯರಿಗೆ ಪ್ರಾಶಸ್ತ್ಯ ನೀಡಿ ವೇದಿಕೆಯ ಗಾಂಭೀರತೆ ಘನತೆಗೆ ಧಕ್ಕೆ ತರುವಂತಾಗಬಾರದು. ಉತ್ಸವಗಳು ಮಕ್ಕಳಿಗೆ ಹಬ್ಬದ ಅನುಭವ ನೀಡುವಂತಾಗಬೇಕಿದೆ , ಉತ್ಸವ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕಿದೆ. ಅಗತ್ಯ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ , ಸಂಬಂಧಿಸಿದ ಇಲಾಖೆಗಳು ಒದಗಿಸಬೇಕಿದೆ. ಧ್ವಜಾರೋಹಣ ಸಂದರ್ಭದಲ್ಲಿ ಹಾಗೂ ವೇದಿಕೆಯಲ್ಲಿ , ಶಿಷ್ಟಾಚಾರಗಳನ್ನು ನಿಯಮಗಳನ್ನು ಪಾಲಿಸುವುದು ಖಡ್ಡಾಯವಾಗಬೇಕಿದೆ ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ಸಭೆಗಳು ಉತ್ಸವ ಆಚರಣೆಗಳ ಸಂದರ್ಭದಲ್ಲಿ , ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಯವರ ಹಾಜರಾತಿ ಖಡ್ಡಾಯಗೊಳಿಸಿ. ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು , ಹೋರಾಟಗಾರರು ತಹಶಿಲ್ದಾರರಿಗೆ ಆಗ್ರಹಿಸಿದರು. ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್ , ತಾಪಂ ಅಧಿಕಾರಿ ಟಿ.ನರಸಪ್ಪ , ಬಿಇಒ ಮೈಲೇಶ ಬೇವೂರ್ , ಪಿಎಸ್ಐ ಸಿ.ಪ್ರಕಾಶ್ ಇದ್ದರು. ಕನ್ನಡ ಪರ ಸಂಘಟನೆಗಳು , ರೈತರಪರ , ಮಹಿಳಾ ಪರ , ದಲಿತಪರ , ಕಾರ್ಮಿಕರ ಪರ ಸಂಘಟನೆಗಳು ಸೇರಿದಂತೆ ವಿವಿದ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ವಿವಿದ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಯವರು ಹಾಜರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    15 hrs ago
  • ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವ ಸಂತೋಷ್ ಎಸ್. ಲಾಡ್ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವ ಸಂತೋಷ್ ಎಸ್. ಲಾಡ್
    1
    ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡಿ
ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವ ಸಂತೋಷ್ ಎಸ್. ಲಾಡ್
ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡಿ
ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವ ಸಂತೋಷ್ ಎಸ್. ಲಾಡ್
    user_SANDEEP U. L
    SANDEEP U. L
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    5 hrs ago
  • ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ತಾಳ್ಮೆಯಿಂದ ಇರಿ: ಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಹಾಗೂ ಸ್ಥಾನಮಾನ ಸಿಗದೇ ಅಸಮಾಧಾನಗೊಂಡು ರಾಜೀನಾಮೆ ನೀಡಲು ಮುಂದಾಗಿರುವ ಆಡಳಿತ ಪಕ್ಷದ ಶಾಸಕರ ನಡೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. "ಹಿಂದೆ ಸಿದ್ದರಾಮಯ್ಯ ಅವರ ಸಚಿವ ಸಂಪುಟ ರಚನೆಯಾದಾಗ ನನಗೂ ಮಂತ್ರಿಸ್ಥಾನ ಕೈತಪ್ಪಿತ್ತು. ಅದಾದ ಮೇಲೆ ನಾನು ಸಚಿವನಾಗಲಿಲ್ಲವೇ?" ಎಂದು ಪ್ರಶ್ನಿಸುವ ಮೂಲಕ, ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡಿರುವ ಶಾಸಕರಿಗೆ ತಾಳ್ಮೆಯಿಂದ ಇರಬೇಕು ಎಂದು ಹೇಳಿದ್ದಾರೆ. "ನಾವು ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ಶಾಸಕರು ತಾಳ್ಮೆಯಿಂದ ಇರಬೇಕು". "ನಾನು ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿ ರವಾನಿಸಿದ್ದೇನೆ. ನಮ್ಮಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳು ಇದ್ದಾರೆ. ಬಹಳ ಶಾಸಕರು ಅರ್ಹರಿದ್ದಾರೆ. ಕೆಲವು ಸಂದರ್ಭದಲ್ಲಿ ಪಕ್ಷ ತೀರ್ಮಾನ ಮಾಡುತ್ತದೆ. 2004ರಲ್ಲಿ ನನ್ನನ್ನೂ ಸಂಪುಟಕ್ಕೆ ತೆಗೆದುಕೊಂಡಿರಲಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ ಆರಂಭದಲ್ಲಿ ನನ್ನನ್ನು ಮಂತ್ರಿ ಮಾಡಿರಲಿಲ್ಲ. ಆಗ ನಾವು ತಾಳ್ಮೆಯಿಂದ ಇದ್ದೆವು, ತಾಳ್ಮೆಯಿಂದ ಇದ್ದ ಕಾರಣಕ್ಕೆ ಇಂದು ನಾನು ಈ ಸ್ಥಾನದಲ್ಲಿ ಇದ್ದೇನೆ" ಎಂದು ತಿಳಿಸಿದರು.
    1
    ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ತಾಳ್ಮೆಯಿಂದ ಇರಿ: ಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು:  ಸಚಿವ ಸಂಪುಟ ವಿಸ್ತರಣೆ ಹಾಗೂ ಸ್ಥಾನಮಾನ ಸಿಗದೇ ಅಸಮಾಧಾನಗೊಂಡು ರಾಜೀನಾಮೆ ನೀಡಲು ಮುಂದಾಗಿರುವ ಆಡಳಿತ ಪಕ್ಷದ ಶಾಸಕರ ನಡೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
"ಹಿಂದೆ ಸಿದ್ದರಾಮಯ್ಯ ಅವರ ಸಚಿವ ಸಂಪುಟ ರಚನೆಯಾದಾಗ ನನಗೂ ಮಂತ್ರಿಸ್ಥಾನ ಕೈತಪ್ಪಿತ್ತು. ಅದಾದ ಮೇಲೆ
ನಾನು ಸಚಿವನಾಗಲಿಲ್ಲವೇ?" ಎಂದು ಪ್ರಶ್ನಿಸುವ ಮೂಲಕ, ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡಿರುವ ಶಾಸಕರಿಗೆ ತಾಳ್ಮೆಯಿಂದ ಇರಬೇಕು ಎಂದು ಹೇಳಿದ್ದಾರೆ.
"ನಾವು ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಕಲ್ಪಿಸುತ್ತೇವೆ, ಶಾಸಕರು ತಾಳ್ಮೆಯಿಂದ ಇರಬೇಕು".
"ನಾನು ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿ ರವಾನಿಸಿದ್ದೇನೆ. ನಮ್ಮಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳು ಇದ್ದಾರೆ. ಬಹಳ ಶಾಸಕರು ಅರ್ಹರಿದ್ದಾರೆ. ಕೆಲವು ಸಂದರ್ಭದಲ್ಲಿ ಪಕ್ಷ ತೀರ್ಮಾನ ಮಾಡುತ್ತದೆ. 2004ರಲ್ಲಿ ನನ್ನನ್ನೂ ಸಂಪುಟಕ್ಕೆ ತೆಗೆದುಕೊಂಡಿರಲಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ ಆರಂಭದಲ್ಲಿ ನನ್ನನ್ನು ಮಂತ್ರಿ ಮಾಡಿರಲಿಲ್ಲ. ಆಗ ನಾವು ತಾಳ್ಮೆಯಿಂದ ಇದ್ದೆವು, ತಾಳ್ಮೆಯಿಂದ ಇದ್ದ ಕಾರಣಕ್ಕೆ ಇಂದು ನಾನು ಈ ಸ್ಥಾನದಲ್ಲಿ ಇದ್ದೇನೆ" ಎಂದು ತಿಳಿಸಿದರು.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    5 hrs ago
  • ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಮತ್ತೆ ಬೀಗ !!? ಈಗ ಹುಳಿಯಾರ್ ಬಸ್ ನಿಲ್ದಾಣದಲ್ಲಿ ಬಯಲು ಶೌಚಾಲಯ ಗತಿ ​ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಮತ್ತೆ ಬೀಗ !!? ​------------------- ​ಹುಳಿಯಾರು: ಪಟ್ಟಣದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಕಳೆದ 1 ತಿಂಗಳಿನಿಂದ ಬೀಗ ಜಡಿಯಲಾಗಿದ್ದು, ಪ್ರಯಾಣಿಕರು ಮತ್ತು ವ್ಯಾಪಾರಿಗಳು ಶೌಚಕ್ಕೆ ಪರದಾಡುವಂತಾಗಿದೆ. ​ ​ಶೌಚಾಲಯದ ಬೀಗ ಹಾಕಿರುವ ಪರಿಣಾಮವಾಗಿ ಬಸ್ ನಿಲ್ದಾಣದ ಆವರಣದಲ್ಲೇ ಮತ್ತೆ ಬಯಲು ಶೌಚ ಆರಂಭಗೊಂಡಿದೆ. ಇದರಿಂದ ದುರ್ನಾತ ಹೆಚ್ಚಾಗಿದ್ದು, ದುರ್ನಾತದ ನಡುವೆಯೇ ಪ್ರಯಾಣಿಕರು ಸುತ್ತ ಮುತ್ತ ಓಡಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ​ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯ ಬೀಗ ಹಾಕಿರುವುದಕ್ಕೆ ಸ್ಥಳೀಯ ವ್ಯಾಪಾರಿಗಳು, ಮಹಿಳಾ ಪ್ರಯಾಣಿಕರಿಗೆ ಸವಾಲಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ಶೌಚಾಲಯ ಬಳಕೆ ಮಾಡಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿvತೀವ್ರ ಆಕ್ರೋಶ ವ್ಯಕ್ತವಾಗಿದೆ. ದಿನಂಪ್ರತಿ ಸಾವಿರಾರು ಮಂದಿ ಬಂದು ಹೋಗುವ ಈ ಬಸ್ ನಿಲ್ದಾಣದಲ್ಲಿ ಗಂಭೀರ ಸಮಸ್ಯೆಯಾಗಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕೈಗೊಂಡು ಮತ್ತೆ ಇದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
    1
    ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಮತ್ತೆ ಬೀಗ !!? ಈಗ ಹುಳಿಯಾರ್ ಬಸ್ ನಿಲ್ದಾಣದಲ್ಲಿ ಬಯಲು ಶೌಚಾಲಯ ಗತಿ
​ಹುಳಿಯಾರು ಬಸ್ ನಿಲ್ದಾಣದ ಶೌಚಾಲಯಕ್ಕೆ ಮತ್ತೆ ಬೀಗ !!?
​-------------------
​ಹುಳಿಯಾರು: ಪಟ್ಟಣದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಕಳೆದ 1 ತಿಂಗಳಿನಿಂದ ಬೀಗ ಜಡಿಯಲಾಗಿದ್ದು, ಪ್ರಯಾಣಿಕರು ಮತ್ತು ವ್ಯಾಪಾರಿಗಳು ಶೌಚಕ್ಕೆ ಪರದಾಡುವಂತಾಗಿದೆ.
​         ​ಶೌಚಾಲಯದ ಬೀಗ ಹಾಕಿರುವ ಪರಿಣಾಮವಾಗಿ ಬಸ್ ನಿಲ್ದಾಣದ ಆವರಣದಲ್ಲೇ ಮತ್ತೆ ಬಯಲು ಶೌಚ ಆರಂಭಗೊಂಡಿದೆ. ಇದರಿಂದ ದುರ್ನಾತ ಹೆಚ್ಚಾಗಿದ್ದು, ದುರ್ನಾತದ ನಡುವೆಯೇ ಪ್ರಯಾಣಿಕರು ಸುತ್ತ ಮುತ್ತ ಓಡಾಡಬೇಕಾದ ಪರಿಸ್ಥಿತಿ ಬಂದೊದಗಿದೆ. 
​ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯ ಬೀಗ ಹಾಕಿರುವುದಕ್ಕೆ ಸ್ಥಳೀಯ ವ್ಯಾಪಾರಿಗಳು, ಮಹಿಳಾ ಪ್ರಯಾಣಿಕರಿಗೆ ಸವಾಲಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ಶೌಚಾಲಯ ಬಳಕೆ ಮಾಡಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿvತೀವ್ರ ಆಕ್ರೋಶ ವ್ಯಕ್ತವಾಗಿದೆ.
ದಿನಂಪ್ರತಿ ಸಾವಿರಾರು ಮಂದಿ ಬಂದು ಹೋಗುವ ಈ ಬಸ್ ನಿಲ್ದಾಣದಲ್ಲಿ ಗಂಭೀರ ಸಮಸ್ಯೆಯಾಗಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕೈಗೊಂಡು ಮತ್ತೆ ಇದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    5 hrs ago
  • ಚಿತ್ರದುರ್ಗದಲ್ಲಿಂದು ಆರ್ ಡಿ ಪಿ ಆರ್ ನೌಕರರ ಕ್ರೀಡಾಕೂಟಕ್ಕೆ ಚಾಲನೆ ಚಿತ್ರದುರ್ಗದಲ್ಲಿಂದು ಆರ್ ಡಿ ಪಿ ಆರ್ ನೌಕರರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾ ನೌಕರರ ಭವನದಲ್ಲಿ ಕಾರ್ಯಕ್ರಮದ ಉದ್ಘಾಟನೆ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಜಿಲ್ಲಾ ಪಂಚಾಯತ್ ನ ಸಿಇಓ ಡಾ ಆಕಾಶ್ ಅವರು ಆಗಮಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಇನ್ನೂ ಈ ಸಂದರ್ಭದಲ್ಲಿ ಕ್ರಿಕೆಟ್ ಚೆಸ್ , ಸೇರಿದಂತೆ ವಿವಿಧ ಬಗೆಯ ಕ್ರೀಡಾಕೂಟ ಹಮ್ಮಿಕೊಂಡಿದ್ದು ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತಿಗಳ ನೌಕರರು ಸಿಬ್ಬಂದಿಗಳಿಗೆ ವಿವಿಧ ಬಗೆಯ ಕ್ರೀಡೆಗಳನ್ನ ನಡೆಸಲಾಯಿತು. ಇದೇ ವೇಳೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ್ ನ ಸಿಇಓ ಡಾ ಆಕಾಶ್ ಅವರು ಮಾತನಾಡಿದ್ದು ಕ್ರೀಡೆ ಮಾನವನ ದೇಹಕ್ಕೆ ಒಂದು ಉತ್ಸಾಹವನ್ನ ನೀಡುತ್ತದೆ. ಕೇವಲ ಮನರಂಜನೆಗೆ ಕ್ರೀಡೆಯನ್ನ ಆಡದೆ ಆರೋಗ್ಯದ ದೃಷ್ಟಿಯಿಂದಲೂ ಸಹ ಕ್ರೀಡೆಯನ್ನ ಮೈಗೂಡಿಸಿಕೊಳ್ಳಬೇಕು.‌ ಬೆಳಗ್ಗೆ ವ್ಯಾಯಾಮ ಮಾಡುವುದರ ಜೊತೆ ತಿಂಗಳಿಗೆ ಎರಡು ಬಾರಿ ಉಪವಾಸ ಮಾಡಬೇಕು ಹಾಗೂ ಹದಿನೆಂಟು ವರ್ಷ ಮೇಲ್ಪಟ್ಟವರು ಆದಷ್ಟು ಸಿಹಿ ಪದಾರ್ಥಗಳ ಸೇವೆನೆ ಕಡಿಮೆ ಮಾಡುವ ಮೂಲಕ ದೇಹದ ಸಮತೋಲನ ಕಾಪಾಡಲು ಗಮನ ಹರಿಸಬೇಕು ಎಂದು ತಿಳಿಸಿದ್ದು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಶುಭಾಶಯಗಳನ್ನ ತಿಳಿಸಿದ್ದಾರೆ
    1
    ಚಿತ್ರದುರ್ಗದಲ್ಲಿಂದು ಆರ್ ಡಿ ಪಿ ಆರ್ ನೌಕರರ ಕ್ರೀಡಾಕೂಟಕ್ಕೆ ಚಾಲನೆ
ಚಿತ್ರದುರ್ಗದಲ್ಲಿಂದು ಆರ್ ಡಿ ಪಿ ಆರ್ ನೌಕರರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾ ನೌಕರರ ಭವನದಲ್ಲಿ ಕಾರ್ಯಕ್ರಮದ ಉದ್ಘಾಟನೆ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಜಿಲ್ಲಾ ಪಂಚಾಯತ್ ನ ಸಿಇಓ ಡಾ ಆಕಾಶ್ ಅವರು ಆಗಮಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಇನ್ನೂ ಈ ಸಂದರ್ಭದಲ್ಲಿ ಕ್ರಿಕೆಟ್ ಚೆಸ್ , ಸೇರಿದಂತೆ ವಿವಿಧ ಬಗೆಯ ಕ್ರೀಡಾಕೂಟ ಹಮ್ಮಿಕೊಂಡಿದ್ದು ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತಿಗಳ ನೌಕರರು ಸಿಬ್ಬಂದಿಗಳಿಗೆ ವಿವಿಧ ಬಗೆಯ ಕ್ರೀಡೆಗಳನ್ನ ನಡೆಸಲಾಯಿತು. ಇದೇ ವೇಳೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ್ ನ ಸಿಇಓ ಡಾ ಆಕಾಶ್ ಅವರು ಮಾತನಾಡಿದ್ದು ಕ್ರೀಡೆ ಮಾನವನ ದೇಹಕ್ಕೆ ಒಂದು ಉತ್ಸಾಹವನ್ನ ನೀಡುತ್ತದೆ. ಕೇವಲ ಮನರಂಜನೆಗೆ ಕ್ರೀಡೆಯನ್ನ ಆಡದೆ ಆರೋಗ್ಯದ ದೃಷ್ಟಿಯಿಂದಲೂ ಸಹ ಕ್ರೀಡೆಯನ್ನ ಮೈಗೂಡಿಸಿಕೊಳ್ಳಬೇಕು.‌ ಬೆಳಗ್ಗೆ ವ್ಯಾಯಾಮ ಮಾಡುವುದರ ಜೊತೆ ತಿಂಗಳಿಗೆ ಎರಡು ಬಾರಿ ಉಪವಾಸ ಮಾಡಬೇಕು ಹಾಗೂ ಹದಿನೆಂಟು ವರ್ಷ ಮೇಲ್ಪಟ್ಟವರು ಆದಷ್ಟು ಸಿಹಿ ಪದಾರ್ಥಗಳ ಸೇವೆನೆ ಕಡಿಮೆ ಮಾಡುವ ಮೂಲಕ ದೇಹದ ಸಮತೋಲನ ಕಾಪಾಡಲು ಗಮನ ಹರಿಸಬೇಕು ಎಂದು ತಿಳಿಸಿದ್ದು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಶುಭಾಶಯಗಳನ್ನ ತಿಳಿಸಿದ್ದಾರೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    16 hrs ago
  • ಸಂಪುಟ ವಿಸ್ತರಣೆ; ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಯಶವಂತರಾಯಗೌಡ ಪಾಟೀಲ್ ಬೆಂಗಳೂರು, ಆಗಸ್ಟ್ 03: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯ ಕಾವು ತೀವ್ರಗೊಂಡಿದ್ದು, ಸಚಿವ ಸ್ಥಾನ ವಂಚಿತ ಹಿರಿಯ ನಾಯಕರ ವಲಯದಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. ಶಾಸಕ ಹುದ್ದೆಗೆ ರಾಜೀನಾಮೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪೀಕರ್ಗೆ ರಾಜೀನಾಮೆ ನೀಡಿದ್ದಾರೆ. ಯಶವಂತರಾಯಗೌಡ ಪಾಟೀಲ್ ಅವರಿಗೆ ನೀಡಿದ್ದ ಭರವಸೆಯನ್ನು ವರಿಷ್ಠರು ಕೊನೆ ಕ್ಷಣದಲ್ಲಿ ಗಾಳಿಗೆ ತೂರಿದ್ದಾರೆ ಎಂದು ಯಶವಂತರಾಯಗೌಡ ಪಾಟೀಲ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. "ಇಂದಿನ ರಾಜಕೀಯದಲ್ಲಿ ನಿಷ್ಠಾವಂತರಿಗೆ ಮತ್ತು ಪ್ರಾಮಾಣಿಕರಿಗೆ ಬೆಲೆಯಿಲ್ಲದಂತಾಗಿದೆ. ಸಚಿವ ಸ್ಥಾನ ಕೊಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ. ಈಗಾಗಲೇ ವಿಧಾನಸಭೆಯ ಸ್ಪೀಕರ್ ರುದ್ರಪ್ಪ ಲಮಾಣಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
    1
    ಸಂಪುಟ ವಿಸ್ತರಣೆ; ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಯಶವಂತರಾಯಗೌಡ ಪಾಟೀಲ್
ಬೆಂಗಳೂರು, ಆಗಸ್ಟ್ 03: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯ ಕಾವು ತೀವ್ರಗೊಂಡಿದ್ದು, ಸಚಿವ ಸ್ಥಾನ ವಂಚಿತ ಹಿರಿಯ ನಾಯಕರ ವಲಯದಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. ಶಾಸಕ ಹುದ್ದೆಗೆ ರಾಜೀನಾಮೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪೀಕರ್ಗೆ ರಾಜೀನಾಮೆ  ನೀಡಿದ್ದಾರೆ. 
ಯಶವಂತರಾಯಗೌಡ ಪಾಟೀಲ್ ಅವರಿಗೆ ನೀಡಿದ್ದ ಭರವಸೆಯನ್ನು ವರಿಷ್ಠರು ಕೊನೆ ಕ್ಷಣದಲ್ಲಿ ಗಾಳಿಗೆ ತೂರಿದ್ದಾರೆ ಎಂದು ಯಶವಂತರಾಯಗೌಡ ಪಾಟೀಲ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
"ಇಂದಿನ ರಾಜಕೀಯದಲ್ಲಿ ನಿಷ್ಠಾವಂತರಿಗೆ ಮತ್ತು ಪ್ರಾಮಾಣಿಕರಿಗೆ ಬೆಲೆಯಿಲ್ಲದಂತಾಗಿದೆ. ಸಚಿವ ಸ್ಥಾನ ಕೊಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ. ಈಗಾಗಲೇ ವಿಧಾನಸಭೆಯ ಸ್ಪೀಕರ್ ರುದ್ರಪ್ಪ ಲಮಾಣಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    7 hrs ago
  • ಗಾಜನೂರು ಜಲಾಶಯ ಭರ್ತಿ: ತುಂಗಾ ಉಕ್ಕಿ ಹರಿದು ತೋಟಗಳು ಜಲಾವೃತ.... ನಿರಂತರ ಮಳೆಯ ಎಫೆಕ್ಟ್: ಮತ್ತೂರಿನಲ್ಲಿ ಪ್ರವಾಹದ ಆತಂಕ ಹೆಚ್ಚಳ
    1
    ಗಾಜನೂರು ಜಲಾಶಯ ಭರ್ತಿ: ತುಂಗಾ ಉಕ್ಕಿ ಹರಿದು ತೋಟಗಳು ಜಲಾವೃತ....
ನಿರಂತರ ಮಳೆಯ ಎಫೆಕ್ಟ್: ಮತ್ತೂರಿನಲ್ಲಿ ಪ್ರವಾಹದ ಆತಂಕ ಹೆಚ್ಚಳ
    user_ಸಿಹಿಮೋಗ್ಗೆ ಸುದ್ಧಿ ಕನ್ನಡ
    ಸಿಹಿಮೋಗ್ಗೆ ಸುದ್ಧಿ ಕನ್ನಡ
    Video Creator ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    8 hrs ago
  • ಶಿವಮೊಗ್ಗ-ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ ಪೊಲೀಸ್ ಉಮೇಶ್ ಮೇಲೆ ಹಲ್ಲೆ ಶಿವಮೊಗ್ಗ: ಭದ್ರಾವತಿ ನಗರದ ಜನ್ನಾಪುರದ ಮಲ್ಲೇಶ್ವರ ಸಭಾಭವನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಅವರ ಸಂಬಂಧಿಕರ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ತನಿಖೆಗೆ ಒಳಪಟ್ಟಿದೆ. ಖ್ಯಾತ ಗಾಯಕಿ ಎಸ್. ಜಾನಕಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಪೊಲೀಸ್ ಉಮೇಶ್ ಸಾರ್ವಜನಿಕರಿಗೆ ಅನ್ನದಾನ ಸೇವೆಯಲ್ಲಿ ನಿರತರಾಗಿದ್ದರು. ಇದೇ ವೇಳೆ ವೇದಿಕೆಯಲ್ಲಿ ಶಾಸಕರ ಪುತ್ರ ಬಿ.ಎಸ್.ಗಣೇಶ್ ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕರು ಹಾಗೂ ಬಿ ಎಸ್.ಗಣೇಶ್ ಅವರು ಪೊಲೀಸ್ ಉಮೇಶ್ ಅವರನ್ನು ವೇದಿಕೆಗೆ ಆಹ್ವಾನಿಸಿ ದ್ದರೆನ್ನಲಾಗಿದೆ. ಆದರೆ, ಪೊಲೀಸ್ ಉಮೇಶ್ ಆಹ್ವಾನವನ್ನು ತಿರಸ್ಕರಿಸಿ, "ಭ್ರಷ್ಟರ ಜೊತೆ ನಾನು ವೇದಿಕೆ ಹಂಚಿಕೊಳ್ಳುವುದಿಲ್ಲ" ಎಂದು ಹೇಳಿ ವೇದಿಕೆ ಏರಲು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಾದ ಬಳಿಕ ಪೊಲೀಸ್ ಉಮೇಶ್ ಮತ್ತು ಕೆಲವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಶಾಸಕರ ಬೆಂಬಲಿಗರು ಎನ್ನಲಾದ ಕೆಲವರು ಉಮೇಶ್ ಹಾಗೂ ಅವರ ಸಹೋದರನ ಪುತ್ರ ಸುಹಾಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆಯಲ್ಲಿ ಗಾಯಗೊಂಡ ಪೊಲೀಸ್ ಉಮೇಶ್ ಮತ್ತು ಉಮೇಶ್ ಸಹೋದರನ ಮಗ ಸುಹಾಸ್ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.
    1
    ಶಿವಮೊಗ್ಗ-ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ ಪೊಲೀಸ್ ಉಮೇಶ್ ಮೇಲೆ ಹಲ್ಲೆ
ಶಿವಮೊಗ್ಗ: ಭದ್ರಾವತಿ ನಗರದ ಜನ್ನಾಪುರದ ಮಲ್ಲೇಶ್ವರ ಸಭಾಭವನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಅವರ ಸಂಬಂಧಿಕರ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ  ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ತನಿಖೆಗೆ ಒಳಪಟ್ಟಿದೆ.
ಖ್ಯಾತ ಗಾಯಕಿ ಎಸ್. ಜಾನಕಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಪೊಲೀಸ್ ಉಮೇಶ್ ಸಾರ್ವಜನಿಕರಿಗೆ ಅನ್ನದಾನ ಸೇವೆಯಲ್ಲಿ ನಿರತರಾಗಿದ್ದರು. ಇದೇ ವೇಳೆ ವೇದಿಕೆಯಲ್ಲಿ ಶಾಸಕರ ಪುತ್ರ  ಬಿ.ಎಸ್.ಗಣೇಶ್ ಕೂಡ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರು ಹಾಗೂ ಬಿ ಎಸ್.ಗಣೇಶ್ ಅವರು ಪೊಲೀಸ್ ಉಮೇಶ್ ಅವರನ್ನು ವೇದಿಕೆಗೆ ಆಹ್ವಾನಿಸಿ ದ್ದರೆನ್ನಲಾಗಿದೆ. ಆದರೆ, ಪೊಲೀಸ್ ಉಮೇಶ್ ಆಹ್ವಾನವನ್ನು ತಿರಸ್ಕರಿಸಿ, "ಭ್ರಷ್ಟರ ಜೊತೆ ನಾನು ವೇದಿಕೆ ಹಂಚಿಕೊಳ್ಳುವುದಿಲ್ಲ" ಎಂದು ಹೇಳಿ ವೇದಿಕೆ ಏರಲು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದಾದ ಬಳಿಕ ಪೊಲೀಸ್ ಉಮೇಶ್ ಮತ್ತು ಕೆಲವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಶಾಸಕರ ಬೆಂಬಲಿಗರು ಎನ್ನಲಾದ ಕೆಲವರು ಉಮೇಶ್ ಹಾಗೂ ಅವರ ಸಹೋದರನ ಪುತ್ರ ಸುಹಾಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆಯಲ್ಲಿ ಗಾಯಗೊಂಡ ಪೊಲೀಸ್ ಉಮೇಶ್ ಮತ್ತು ಉಮೇಶ್ ಸಹೋದರನ ಮಗ ಸುಹಾಸ್ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.