ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ರಚಿಸಲಾಗಿರುವ 'ವಿಜಯ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆ'ಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಗುರುವಾರ ಗುಲಾಬಿ ಬಣ್ಣದ ಬಲೂನುಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು ಹಾಗೂ ಇನ್ನು ಮಹಿಳೆಯರು ಭಯಪಡುವ ಅಗತ್ಯವೇ ಇಲ್ಲ ಎಂದು ಭರವಸೆ ನೀಡಿದರು.ಮಹಿಳೆಯರು, ಮಕ್ಕಳ ಸುರಕ್ಷತೆ ವಿಚಾರದಲ್ಲಿ ಜಿಲ್ಲಾ ಪೊಲೀಸ್ ಹೊಸ ಹೆಜ್ಜೆ ಇಟ್ಟಿದೆ. ಈ ಪಡೆಯ ವಾಟ್ಸ್ಆ್ಯಪ್ ನಂಬರ್ ಅಥವಾ ಪೊಲೀಸ್ ನಿಯಂತ್ರಣಕ ಕೊಠಡಿ ಇಲ್ಲವೇ ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಸ್ಥಳಕ್ಕೆ ಧಾವಿಸಿ ಬರುವ ಪಡೆ ನಮ್ಮ ಬಳಿ ಇದೆ' ಎಂದು ಡಿ.ಸಿ ಹೇಳಿದರು. ಬಳಿಕ ಅವರು ಗುಂಡಿ ಅದುಮುವ ಮೂಲಕ ವಿಜಯ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಪಡೆಯ ಕಾರ್ಯವೈಖರಿ ತಿಳಿಸುವ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು. 'ಈ ಪಡೆಯಲ್ಲಿರುವ ಮಹಿಳಾ ಪೊಲೀಸರಿಗೆ ಬೈಕ್, ಜೀಪ್, ಕಾರು ಚಾಲನೆಯ ತರಬೇತಿ ಮಾತ್ರವಲ್ಲ, ಸ್ವ ರಕ್ಷಣಾ ಕಲೆಯನ್ನೂ ಕಲಿಸಲಾಗಿದೆ. ಅಗತ್ಯ ಇರುವಲ್ಲಿಗೆ ಬಂದು ಸ್ವರಕ್ಷಣೆಯ ಬಗೆಗೆ ಮಾಹಿತಿ ನೀಡುತ್ತಾರೆ' ಎಂದು ಎಸ್‌ಪಿ ಎಸ್.ಜಾಹ್ನವಿ ಹೇಳಿದರು.ಇದೇ ವೇಳೆ ಡಿ.ಸಿ, ಎಸ್‌ಪಿ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ನಗರಸಭೆ ಆಯುಕ್ತ ಎ.ಶಿವಕುಮಾರ್ ಅವರು ಮಹಿಳಾ ಪಡೆಯ ಬೈಕ್ ಸವಾರಿಗೆ ಹಸಿರು ನಿಶಾನೆ ತೋರಿದರು. ಹೆಲ್ಕೆಟ್ ಧರಿಸಿದ ಮಹಿಳಾ ಪೊಲೀಸರು ಠೀವಿಯಿಂದ ಬೈಕನ್ನೇರಿ ಗುಡುಗುಡನೆ ಸದ್ದು ಮಾಡುತ್ತ ಸಾಗಿದಂತೆ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಸೇರಿದ್ದ ನೂರಾರು ಕಾಲೇಜ ವಿದ್ಯಾರ್ಥಿನಿಯರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಎರಡು ಇಸುಜು ವಾಹನ ಮತ್ತು ಒಂದು ಬೊಲೆರೊ ವಾಹನಗಳನ್ನು ಸಹ ವಿದ್ಯಾರ್ಥಿನಿಯರ ಮುಂದೆ ಚಲಾಯಿಸಿಕೊಂಡು ಹೋಗಿ, ಇದುವೇ ಪಡೆಯ ವಾಹನ ಎಂಬುದನ್ನು ತೋರಿಸಲಾಯಿತು. ಉದ್ದೇಶ: ಲೈಂಗಿಕ ದೌರ್ಜನ್ಯ, ಪೋಕ್ರೋ ಪ್ರಕರಣಗಳು, ಕೆಲಸದ ಸ್ಥಳದಲ್ಲಿ ಮಾನಸಿಕ, ದೈಹಿಕ ಕಿರುಕುಳ, ಕುಟುಂಬದಲ್ಲಿನ ಹಿಂಸೆ ಮೊದಲಾದ ವಿದ್ಯಮಾನಗಳನ್ನು ನಿಯಂತ್ರಿಸುವುದು, ಮಹಿಳೆಯರು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದೆ ಇರುವಾಗ ಅವರಿಗೆ ಧೈರ್ಯ ಹೇಳಿ, ಅವರ ಹೆಸರು, ವಿಳಾಸ ಗೋಪ್ಯವಾಗಿಟ್ಟು, ಅವರಿಗೆ ಕಿರುಕುಳ ನೀಡುವಂತಹವರನ್ನು ಕರೆದು ಬುದ್ಧಿಹೇಳುವ ಕೆಲಸವನ್ನು ಈ ಪಡೆ ಮಾಡಲಿದೆ. ಅಗತ್ಯ ಇದ್ದವರಿಗೆ ಆತ್ಮರಕ್ಷಣೆಯ ಕಲೆಯನ್ನೂ ಹೇಳಿಕೊಡಲಿದೆ. ಎಎಸ್‌ಐ ಅಥವಾ ಹೆಡ್‌ಕಾನ್‌ಸ್ಟೆಬಲ್ ಒಬ್ಬರು ಈ ಪಡೆಯ ಮುಖ್ಯಸ್ಥರಾಗಿರುತ್ತಾರೆ, ಐದು ಮಂದಿ ಮಹಿಳಾ ಕಾನ್‌ಸ್ಟೆಬಲ್‌ಗಳು ಇರುತ್ತಾರೆ. ಜಿಲ್ಲೆಯಲ್ಲಿ ಇಂತಹ ಮೂರು ತಂಡಗಳನ್ನು ರಚಿಸಲಾಗಿದ್ದು, ಎಲ್ಲರಿಗೂ ಕಾನೂನು ಅರಿವು, ವಾಹನ ಚಾಲನೆ ಸಹಿತ ಅಗತ್ಯದ ಎಲ್ಲ ತರಬೇತಿ ನೀಡಲಾಗಿದೆ. ಈ ತಂಡ ಸುರಕ್ಷಾ ಪಡೆಯ ವಾಟ್ಸ್ಆ್ಯಪ್ ನಂ. 8277977877 ಪೊಲೀಸ್ ತುರ್ತು ಸಹಾಯವಾಣಿ: 112

- ಬೂದುಗುಂಪ ಗಂಗಾವತಿ ರೂಟ್ ಸೆಂಟ್ರಲ್ಲಿ ಆಗಿರುವಂತ ಅಪಘಾತ ಮೂವರು ಸ್ಥಳದಲ್ಲಿ 3 ಸಾವು ಹೊಸಳ್ಳಿ ಗ್ರಾಮದ ಯುವಕರು ಅವರ ಹೆಸರು ಇಮ್ರಾನ್ ಮತ್ತು ಅಜೀಜ್ ಮತ್ತು ರಾಜಹಂಸೇನ್ 15 ರಿಂದ 16 ವಯಸ್ಸಿನ ಮಕ್ಕಳು1
- Post by Shiva Prasad1
- Post by SRI RABINDRANATH TAGORE HIGH SCHOOL BIJAPUR1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ )1
- Post by Mahadev c c1
- ಬಿ ಎಸ್ ಲಾವೇಂದ್ರರವರ ಹೋಮಿಯೋಪತಿ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ 27 ವರ್ಷ ಸೇವೆ1
- *ಭಾರತ ನಲ್ಲಿ ವೈರಲ್*1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಬೆಂಗಳುರು ಡೋರ್ ಸ್ಟೆಪ್ ಟ್ರೆಟ್ಮೆಂಟ್ಸ್ ಲಭ್ಯವಿದೆ1