ಶಿವಮೊಗ್ಗದಲ್ಲಿ ಸಂಚಲನ ಸೃಷ್ಟಿಸಿದ ಕೋಟಿ ಮಟ್ಟದ ಹಣಕಾಸು ಅವ್ಯವಹಾರ ಶಂಕೆ! ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲೊಂದರಲ್ಲಿ ನಡೆದ ಆಂತರಿಕ ಆಡಿಟ್ ವೇಳೆ ಸುಮಾರು ₹4 ಕೋಟಿ ರೂಪಾಯಿ ಮಟ್ಟದ ಹಣಕಾಸು ವ್ಯತ್ಯಾಸ ಪತ್ತೆಯಾದ ಹಿನ್ನೆಲೆಯಲ್ಲಿ ಗಂಭೀರ ಆರೋಪಗಳು ಕೇಳಿಬಂದಿವೆ. ಅಕೌಂಟ್ಸ್ ವಿಭಾಗದ ಒಬ್ಬ ಮಹಿಳೆ ಸೇರಿ ನಾಲ್ವರು ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತವಾಗಿದ್ದು, ಲೆಕ್ಕಪತ್ರ ತಿದ್ದುಪಡಿ ಹಾಗೂ ಡಿಜಿಟಲ್ ಡೇಟಾ ಅಳಿಸುವ ಮೂಲಕ ಅವ್ಯವಹಾರ ಮುಚ್ಚಿಹಾಕಲು ಯತ್ನಿಸಿದ್ದರೆಂಬ ಶಂಕೆ ಮೂಡಿದೆ. ಈ ಬೆಳವಣಿಗೆಯಿಂದ ಆಸ್ಪತ್ರೆ ಆಡಳಿತ ಮಂಡಳಿಯಲ್ಲಿ ತುರ್ತು ಚಟುವಟಿಕೆಗಳು ಆರಂಭವಾಗಿದ್ದು, ಸೈಬರ್ ತಜ್ಞರ ಸಹಾಯದಿಂದ ಡಿಲೀಟ್ ಮಾಡಲಾದ ದಾಖಲೆಗಳನ್ನು ಮರುಪಡೆಯುವ ಕಾರ್ಯವೂ ಪ್ರಗತಿಯಲ್ಲಿದೆ. ಪ್ರಕರಣ ಸಂಬಂಧ ಪೊಲೀಸ್ ದೂರು ದಾಖಲಾಗುವ ಸಾಧ್ಯತೆ ಇದ್ದು, ಅಧಿಕೃತ ತನಿಖೆಯ ನಂತರ ಇನ್ನಷ್ಟು ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ.ಈ ಘಟನೆ ಆರೋಗ್ಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, “ಪ್ರತಿಷ್ಠಿತ ಆಸ್ಪತ್ರೆಯೊಳಗೆ ಇಷ್ಟೊಂದು ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆಯೇ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

- ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡುವ ಸುಲಭ ವಿಧಾನ ಇಲ್ಲಿದೆ. ಈ ದಿಢೀರ್ ಉಪ್ಪಿನಕಾಯಿಯನ್ನು ಮಾಡಿದ ತಕ್ಷಣವೇ ಅಥವಾ ಒಂದೆರಡು ಗಂಟೆಗಳ ನಂತರ ಅನ್ನ, ದೋಸೆ ಮತ್ತು ಚಪಾತಿ ಜೊತೆ ಸವಿಯಬಹುದು. ಮನೆಯಲ್ಲಿ ಕೇವಲ 2 ಮಾವಿನಕಾಯಿಗಳಿದ್ದರೆ, ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು.1
- India Fuel Crisis: PM Modi ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ |1
- ಜೈನ ರ ಮುಕ್ತಿದಾಮದಲ್ಲಿ ಸಚಿವ ಡಿ.ಸುಧಾಕರ್ ಅಂತ್ಯಕ್ರಿಯೆಗೆ ವಿಧಿ ವಿಧಾನಗಳ ಪ್ರಕ್ರಿಯೆ.1
- ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ, ಮೊಬೈಲ್‌ನಲ್ಲಿದ್ದ ನಾದಿನಿ ಫೋಟೋ ಕುರಿತು ಪ್ರಶ್ನಿಸಿದ್ದಕ್ಕೆ ಪತಿಯೊಬ್ಬ ತನ್ನ ಪತ್ನಿ ಸೇರಿದಂತೆ ನಾಲ್ವರ ಮೇಲೆ ಆಸಿಡ್ ಎರಚಿದ್ದಾನೆ. ಈ ಭೀಕರ ದಾಳಿಯಲ್ಲಿ ಒಂದು ಹಸುಗೂಸು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದು, ಮಹಿಳಾ ಸಂಘಟನೆಗಳು ಕಠಿಣ ಕ್ರಮಕ್ಕೆ ಆಗ್ರಹಿಸಿವೆ.1
- ಚಿತ್ರದುರ್ಗದಲ್ಲಿ ಬೆಳೆ ವಿಮೆ ಹಣ ನೀಡದ ಸರ್ಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಆಗ್ರಹಿಸಿದರು. ಶೇಂಗಾ ಮತ್ತು ಈರುಳ್ಳಿ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಇದು ದೊಡ್ಡ ಹೊಡೆತವಾಗಿದೆ.1
- ಹಾನಗಲ್ಲ.. ಸಚಿವ ಸತೀಶ ಜಾರ್ಕಿಹುಳಿ ಹಾನಗಲ್ಲಿನ ಕರಗುದರಿ ಗ್ರಾಮದ ಮದುವೆ ಸಮಾರಂಭವೊಂದರಲ್ಲಿ ಭಾಗಿ ಲೋಕೋಪಯೋಗಿ ಸಚಿವ ಸತೀಶ ಜಾರ್ಕಿಹುಳಿ ಪತಾಲೂಕಿನ ಕರಗುದರಿ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಿ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂಧರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ಸೇರಿದಂತೆ ಮಾಜಿ ಶಾಸಕರು ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು1
- *ಶಿಗ್ಗಾವಿ ತಾಲೂಕಿನಲ್ಲಿ ವರುಣನ ಆಗಮನ, ಬಿಸಿಲಿನಿಂದ ಬೇಸತ್ತ ಜನತೆಗೆ ತಂಪೆರೆದ ಮಳೆರಾಯ* ಶಿಗ್ಗಾವಿ ತಾಲೂಕಿನಲ್ಲಿ ಕೆಲ ಕಡೆಗಳಲ್ಲಿ ಮಳೆಯಾಗಿ ಬೇಸಿಗೆಯಿಂದ ಬೇಸತ್ತ ಜನರಿಗೆ ವರುಣದೇವ ತಂಪೆರೆದಿದ್ದಾನೆ. ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ, ಮುಗಳಿ ಸೇರಿದಂತೆ ಕೆಲ ಗ್ರಾಮಗಳಿಗೆ ಮಳೆರಾಯನ ಆಗಮನವಾಗಿ ತಂಪು ಎರೆದಿದ್ದಾನೆ..3
- ಹೊಸನಗರ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ, ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ನಿಮ್ಮ ಮನೆ ಮತ್ತು ಕುಟುಂಬದ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.3