Shuru
Apke Nagar Ki App…
ಕಲಘಟಗಿ ತಾಲ್ಲೂಕಿನ ತುಮ್ಮರಿಕೊಪ್ಪ ಗ್ರಾಮದ ಅರಣ್ಯ ಪ್ರದೇಶದಂಚಿನಲ್ಲಿರುವ ಹಾಲುಡ ಕೆರೆ ಸಮೀಪ ಶುಕ್ರವಾರ ಚಿರತೆ ದಾಳಿ ನಡೆದಿದೆ. ಹುಲ್ಲು ಮೇಯಿಸಲು ತೆರಳಿದ್ದ ರೈತರ ಆಡು ಹಾಗೂ ಆಕಳುಗಳ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಈ ಘಟನೆಯಲ್ಲಿ, ಗ್ರಾಮದ ಯಲ್ಲಪ್ಪ ಸಂತಪ್ಪನವರ ಅವರಿಗೆ ಸೇರಿದ ಆಕಳು ಕರು ಮತ್ತು ಪಕ್ಕೀರೇಶ ದೇಸಾಯಿ ಅವರಿಗೆ ಸೇರಿದ ಆಡುಗಳ ಮೇಲೆ ಚಿರತೆ ದಾಳಿ ನಡೆದಿತ್ತು ಎಂದು ರೈತರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಶ್ರೀನಾಂತ ಸಂತಪ್ಪನವರ ಹಾಗೂ ಮಾರ್ಟೀನ್ ಹಗ್ಗಿಮನಿ ಅವರಿಗೆ ಸೇರಿದ ಸಾಕು ನಾಯಿಗಳನ್ನು ಸಹ ಚಿರತೆ ತಿಂದು ಹಾಕಿದೆ ಎಂದು ರೈತರು ತಿಳಿಸಿದ್ದಾರೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ವಲಯ ಅರಣ್ಯಧಿಕಾರಿ ಅರುಣ್ ಕುಮಾರ ಅಷ್ಟಗಿ ಅವರು, ಅರಣ್ಯದಂಚಿನಲ್ಲಿ ಚಿರತೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದು, ಧನ ಕರುಗಳನ್ನು ಮೇಯಿಸುವಾಗ ರೈತರು ಎಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ.
Kallappa m mirji
ಕಲಘಟಗಿ ತಾಲ್ಲೂಕಿನ ತುಮ್ಮರಿಕೊಪ್ಪ ಗ್ರಾಮದ ಅರಣ್ಯ ಪ್ರದೇಶದಂಚಿನಲ್ಲಿರುವ ಹಾಲುಡ ಕೆರೆ ಸಮೀಪ ಶುಕ್ರವಾರ ಚಿರತೆ ದಾಳಿ ನಡೆದಿದೆ. ಹುಲ್ಲು ಮೇಯಿಸಲು ತೆರಳಿದ್ದ ರೈತರ ಆಡು ಹಾಗೂ ಆಕಳುಗಳ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಈ ಘಟನೆಯಲ್ಲಿ, ಗ್ರಾಮದ ಯಲ್ಲಪ್ಪ ಸಂತಪ್ಪನವರ ಅವರಿಗೆ ಸೇರಿದ ಆಕಳು ಕರು ಮತ್ತು ಪಕ್ಕೀರೇಶ ದೇಸಾಯಿ ಅವರಿಗೆ ಸೇರಿದ ಆಡುಗಳ ಮೇಲೆ ಚಿರತೆ ದಾಳಿ ನಡೆದಿತ್ತು ಎಂದು ರೈತರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಶ್ರೀನಾಂತ ಸಂತಪ್ಪನವರ ಹಾಗೂ ಮಾರ್ಟೀನ್ ಹಗ್ಗಿಮನಿ ಅವರಿಗೆ ಸೇರಿದ ಸಾಕು ನಾಯಿಗಳನ್ನು ಸಹ ಚಿರತೆ ತಿಂದು ಹಾಕಿದೆ ಎಂದು ರೈತರು ತಿಳಿಸಿದ್ದಾರೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ವಲಯ ಅರಣ್ಯಧಿಕಾರಿ ಅರುಣ್ ಕುಮಾರ ಅಷ್ಟಗಿ ಅವರು, ಅರಣ್ಯದಂಚಿನಲ್ಲಿ ಚಿರತೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದು, ಧನ ಕರುಗಳನ್ನು ಮೇಯಿಸುವಾಗ ರೈತರು ಎಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ.
More news from ಕರ್ನಾಟಕ and nearby areas
- ಶಿಗ್ಗಾವಿ ಪಟ್ಟಣದಲ್ಲಿ ಪುಟ್ಟರಾಜ ಗವಾಯಿ ಸೌಹಾರ್ದ ಸಹಕಾರಿ ಶಾಖೆಯ ನೂತನ ಬಾಡಿಗೆ ಕಟ್ಟಡ ಸ್ಥಳಾಂತರದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ, ಶಾಖೆಯ ಮೂರನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ ಶ್ರೀ ಸತ್ಯನಾರಾಯಣ ಪೂಜಾ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಶ್ರೀ ರುದ್ರಮುನಿ ಹೀರೆಮಠ ಸ್ವಾಮಿಜಿಗಳು ಹಾಗೂ ಸಹಕಾರಿಯ ಅಧ್ಯಕ್ಷರಾದ ಹನುಮಂತಪ್ಪ ಯು.ವಿ. ತಮ್ಮ ದಂಪತಿಗಳೊಂದಿಗೆ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಹಕಾರಿಯ ಉಪಾಧ್ಯಕ್ಷ ಸುಭಾಸ್‌ಗೌಡ ಪಾಟೀಲ, ಕುಮಾರಿ ಪ್ರತಿಕ್ಷಾ ಗೌಳಿ, ನಿರ್ದೇಶಕರಾದ ರಾಜಶೇಖರ ಶೆಟ್ಟರ್, ಬಸಯ್ಯ ಈಳಿಗೇರ, ನಿರ್ಮಲಾ ಈಳಿಗೇರ, ರೇಖಾ ವಡ್ಡರ್, ಸಿ.ಪಿ.ಐ. ಅನಿಲ್ ರಾಠೋಡ, ಶಿವಾನಂದ ಮ್ಯಾಗೇರಿ, ಉಮೇಶ್ ಗೌಳಿ, ಸಿ.ಡಿ. ಯತ್ನಳ್ಳಿ, ನಾಗಪ್ಪ ಬೆಂತೂರ, ವಿನೋದಾ ಪಾಟೀಲ, ಭರಮಜ್ಜ ನವಲಗುಂದ, ರಮೇಶ್ ಹರಿಜನ, ಶಾಖೆಯ ವ್ಯವಸ್ಥಾಪಕರಾದ ಅಶೋಕ್ ಹೋಳಲ ಹಾಗೂ ಎಲ್ಲ ಸಿಬ್ಬಂದಿ ವರ್ಗ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.2
- ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುನ್ನೂರು ಗ್ರಾಮದಲ್ಲಿ ಸ್ವಚ್ಛತಾ ಕಾರ್ಮಿಕನಿಗೆ ನೀಡಲಾಗುತ್ತಿರುವ ಕಡಿಮೆ ಕೂಲಿ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಪ್ರತಿ ಶುಕ್ರವಾರ ನಡೆಯುವ ಸಂತೆಯ ನಂತರ ಶನಿವಾರ ಬೆಳಿಗ್ಗೆ ರಸ್ತೆ ಹಾಗೂ ಸಂತೆ ಪ್ರದೇಶದ ಕಸವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿರುವ ಸ್ವಚ್ಛತಾ ಕಾರ್ಮಿಕ ಪಕ್ಕೀರಪ್ಪ ಮಮದಾಪುರ ಅವರಿಗೆ ಕೇವಲ ₹400 ಕೂಲಿ ನೀಡಲಾಗುತ್ತಿದೆ. ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ನಿಯಮಗಳ ಪ್ರಕಾರ ಸ್ಥಳೀಯ ಸಂಸ್ಥೆಗಳ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನಿಗದಿತ ಕನಿಷ್ಠ ವೇತನ ಹಾಗೂ ಸುರಕ್ಷತಾ ಸೌಲಭ್ಯಗಳನ್ನು ಒದಗಿಸಬೇಕು ಎಂಬ ನಿಯಮ ಇದ್ದರೂ, ಕುನ್ನೂರು ಗ್ರಾಮ ಪಂಚಾಯಿತಿ ಯಾವ ಆಧಾರದ ಮೇಲೆ ವಾರಕ್ಕೆ ₹400 ಕೂಲಿ ನಿಗದಿಪಡಿಸಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕಸ ನಿರ್ವಹಣೆ ಮಾಡುವ ಸಂದರ್ಭದಲ್ಲಿ ಕಾರ್ಮಿಕನ ಆರೋಗ್ಯ ಸುರಕ್ಷತೆಗೆ ಅಗತ್ಯವಾದ ಕೈಗವಸು, ಮಾಸ್ಕ್, ಕಾಲು ರಕ್ಷಣೆಗಾಗಿ ಬೂಟು ಸೇರಿದಂತೆ ಯಾವುದೇ ವೈಯಕ್ತಿಕ ಸುರಕ್ಷತಾ ಪರಿಕರಗಳನ್ನು ಪಂಚಾಯಿತಿ ನೀಡಿಲ್ಲ. ಕಸದಲ್ಲಿರುವ ಗಾಜಿನ ತುಂಡುಗಳು, ಕೊಳೆತ ತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಇತರೆ ಅಪಾಯಕಾರಿ ವಸ್ತುಗಳಿಂದ ಕಾರ್ಮಿಕರ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದ್ದರೂ, ಯಾವುದೇ ರಕ್ಷಣಾ ಕ್ರಮಗಳಿಲ್ಲದೆ ಪಕ್ಕೀರಪ್ಪ ಮಮದಾಪುರ ಅವರು ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಿರುವ ಕಸಬರಗಿಯನ್ನು ಸಹ ಪಂಚಾಯಿತಿಯಿಂದ ನೀಡಲಾಗಿಲ್ಲ. ಕಾರ್ಮಿಕರು ತಮ್ಮ ಮನೆಯಿಂದಲೇ ಹಳೆಯ ಕಸಬರಗಿಯನ್ನು ತಂದು ಸರಿಪಡಿಸಿಕೊಂಡು ಬಳಸುತ್ತಿದ್ದಾರೆ ಎಂದು ಹೇಳಲಾಗಿದೆ. ಗ್ರಾಮದ ಸ್ವಚ್ಛತೆಗಾಗಿ ದುಡಿಯುವ ಸಿಬ್ಬಂದಿಗೆ ಮೂಲಭೂತ ಕೆಲಸದ ಸಲಕರಣೆಗಳನ್ನೂ ಒದಗಿಸದಿರುವುದು ಆಡಳಿತದ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿರುವ ಸ್ವಚ್ಛತಾ ಕಾರ್ಮಿಕ ಪಕ್ಕೀರಪ್ಪ ಮಮದಾಪುರ ಅವರು, ಕಸ ತೆಗೆಯುವುದು ಕೇವಲ ಕೆಲಸವಲ್ಲ, ಅದು ಸಾರ್ವಜನಿಕ ಆರೋಗ್ಯ ಕಾಪಾಡುವ ಸೇವೆ ಎಂದು ಒತ್ತಿಹೇಳಿದ್ದಾರೆ. ಸರ್ಕಾರಿ ನಿಯಮದಂತೆ ಕನಿಷ್ಠ ವೇತನ ನೀಡಬೇಕು ಮತ್ತು ವಾರಕ್ಕೆ ಒಂದು ದಿನದ ₹400 ಕೂಲಿಯ ಬದಲಾಗಿ ಮಾಸಿಕ ವೇತನದ ಆಧಾರದಲ್ಲಿ ಡಿ ದರ್ಜೆ ನೌಕರನನ್ನಾಗಿ ನೇಮಿಸಿಕೊಳ್ಳಬೇಕು ಎಂಬುದು ಅವರ ಹಕ್ಕುಬದ್ಧ ಬೇಡಿಕೆಯಾಗಿದೆ.2
- ಯೋಗ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯೋಗ ಗುರುವಿನ ಸ್ಥಾನಕ್ಕೆ ಏರಿದ್ದಾರೆ. ಈ ಸಂದರ್ಭದಲ್ಲಿ, 'ಯೋಗವಿದ್ದಲ್ಲಿ ರೋಗವಿಲ್ಲ' ಎಂಬ ಪ್ರಮುಖ ಸಂದೇಶವನ್ನು ನೀಡಲಾಯಿತು.1
- ಗದಗ ಜಿಲ್ಲೆಯ ಕದಡಿ ಗ್ರಾಮದ ಮಲ್ಲಯ್ಯಜ್ಜನ ಕಟ್ಟೆ ಹತ್ತಿರ ಶನಿವಾರ ಬೆಳಿಗ್ಗೆ ಜನದಟ್ಟಣೆಯಿರುವ ವಸತಿ ಪ್ರದೇಶದಲ್ಲಿ ಬೃಹತ್ ನಾಗರ ಹಾವೊಂದು ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಮೂಡಿಸಿದೆ. ಹಾವು ಸಳ ಸಳನೆ ಬರುತ್ತಿರುವುದನ್ನು ಕಂಡ ಸಾರ್ವಜನಿಕರು ಭಯಭೀತರಾಗಿ ಕೆಲ ಹೊತ್ತು ನಿಂತು ನೋಡುತ್ತಿದ್ದರು. ಈ ವೇಳೆ, ಕೆಲವರು ಇದು ದೇವರ ಹಾವಿರಬಹುದೇ ಎಂದು ಪರಸ್ಪರ ಚರ್ಚಿಸತೊಡಗಿದರು. ತಕ್ಷಣವೇ ಅಲ್ಲಿಯೇ ಇದ್ದವರು ಒಬ್ಬ ಹಾವು ಹಿಡಿಯುವ ವ್ಯಕ್ತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಧಾವಿಸಿದ ಉರಗ ರಕ್ಷಕರು, ಮಣ್ಣಿನ ಗೋಡೆಯಲ್ಲಿ ಅಡಗಿಕೊಂಡಿದ್ದ ಹಾವನ್ನು ಹೊರಗೆಳೆದು ಜೀವಂತವಾಗಿ ಸೆರೆ ಹಿಡಿದು ನಂತರ ಅದನ್ನು ಹೊರ ವಲಯದಲ್ಲಿ ಬಿಟ್ಟು ಹೋಗಿದ್ದಾರೆ. ಈ ಪ್ರಸಂಗ ಗ್ರಾಮಸ್ಥರ ನಡುವೆ ಚರ್ಚೆಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಉರಗ ರಕ್ಷಕರು, ಎಲ್ಲಿಯೇ ಹಾವು ಕಂಡರೂ ಯಾರೂ ಅವುಗಳನ್ನು ಬಡಿಯಬಾರದು, ಬದಲಿಗೆ ಉರಗ ರಕ್ಷಕರಿಗೆ ಅಥವಾ ಅರಣ್ಯ ಇಲಾಖೆಯವರಿಗೆ ತಿಳಿಸಿ ಅವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ. ಈ ಘಟನೆ ನಡೆದಾಗ ಗ್ರಾಮಸ್ಥರಾದ ಅಜ್ಜು ರಾಜೇಖಾನ್, ಪ್ರಕಾಶ ಕಮ್ಮಾರ, ಪ್ರವೀಣ ಚೋಳಪ್ಪನವರ, ನಬಿಸಾಬ ರಾಜೇಖಾನ ಸೇರಿದಂತೆ ಇತರರು ಉಪಸ್ಥಿತರಿದ್ದರು.2
- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ, ಭೀಮ ಧ್ವನಿ ಸಂಘಟನೆ ವತಿಯಿಂದ ಭ್ರಷ್ಟಾಚಾರದ ವಿರುದ್ಧ ಒಂದು ಪೂರ್ವಭಾವಿ ಸಭೆಯನ್ನು ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ದಿನಾಂಕ 21/06/2026 ರಂದು ನಡೆಸಲಾಯಿತು. ದಲಿತ ಸಂಘರ್ಷ ಸಮಿತಿ ಭೀಮ ಧ್ವನಿ ಸಂಘಟನೆಯು ಈ ಸಭೆಯನ್ನು ಆಯೋಜಿಸಿತ್ತು. ಸಭೆಯಲ್ಲಿ ಪ್ರಮುಖವಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಅವುಗಳಲ್ಲಿ ಪ್ರತಿ ಗ್ರಾಮದಲ್ಲಿ ಗ್ರಾಮ ಘಟಕಗಳನ್ನು ಸ್ಥಾಪಿಸುವುದು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಮಾರ್ಗದರ್ಶನ ನೀಡುವುದು ಸೇರಿವೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಸ್ಸಿ/ಎಸ್ಟಿ ಜನಾಂಗದ ಅನುದಾನದ ದುರ್ಬಳಕೆಯ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತುವುದು, ಹಾಗೂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳಿಗೆ ನ್ಯಾಯ ಸಿಗುವವರೆಗೆ ಅವರ ಜೊತೆ ನಿಲ್ಲುವುದು ನಿರ್ಣಯಿಸಲಾಯಿತು. ಜೊತೆಗೆ, ಲೋಕೋಪಯೋಗಿ ಇಲಾಖೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ಅನೇಕ ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದು, ಮತ್ತು ಎಸ್ಸಿ/ಎಸ್ಟಿ ನೌಕರರ ಮೇಲೆ ನಡೆಯುವ ಅನ್ಯಾಯ ಹಾಗೂ ದಬ್ಬಾಳಿಕೆಯನ್ನು ಖಂಡಿಸುವುದು ಮುಂತಾದ ಹಲವು ಮುಖ್ಯ ವಿಷಯಗಳನ್ನು ವಿವರವಾಗಿ ಚರ್ಚಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಬಸವರಾಜ್ ಕಟ್ಟಿಮನಿ ಅವರು ಸಂಘಟನೆಯ ಕುರಿತು ವಿವರಿಸಿದರು. ಸಂಘಟನೆಯ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಶ್ರೀ ಮಿಲಿಂದ್ ಐಹೋಳೆ ಅವರು, ಸಭೆ ಮತ್ತು ಸಂಘಟನೆ ಕಟ್ಟುವ ಕುರಿತು, ಪ್ರತಿಯೊಬ್ಬ ಪದಾಧಿಕಾರಿಗಳು ತಾಲೂಕು ಮಟ್ಟದ ಸಂಘಟನೆಯ ಎಲ್ಲ ಪದಾಧಿಕಾರಿಗಳ ನೇಮಕಾತಿಯನ್ನು ಪೂರ್ಣಗೊಳಿಸಿ, ಅಖಂಡ ಬೆಳಗಾವಿ ಮತ್ತು ಚಿಕ್ಕೋಡಿ ಈ ಎರಡು ಕ್ಷೇತ್ರಗಳಲ್ಲಿ ಗಟ್ಟಿಯಾದ ಸಂಘಟನೆಯನ್ನು ನಿರ್ಮಿಸಬೇಕು ಎಂದು ಮಾರ್ಗದರ್ಶನ ನೀಡಿದರು. ಇದೇ ಸಂದರ್ಭದಲ್ಲಿ, ರಾಜ್ಯ ಸಮಿತಿ ಗೌರವಾಧ್ಯಕ್ಷರಾದ ಮಹಾಲಿಂಗ ಎಚ್. ಗಗ್ಗರಿ ಅವರು ಸಂಘಟನೆಯ ಕುರಿತು ಮತ್ತು ಎಲ್ಲ ಪದಾಧಿಕಾರಿಗಳಿಗೆ ತಾಲೂಕು ಹಾಗೂ ಜಿಲ್ಲಾ ಸಮಿತಿಗಳನ್ನು ಪೂರ್ಣಗೊಳಿಸಿ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕರೆ ನೀಡಿದರು. ಈ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಮಿಲಿಂದ್ ಐಹೋಳೆ, ರಾಜ್ಯ ಗೌರವಾಧ್ಯಕ್ಷರಾದ ಮಹಾಲಿಂಗ ಎಚ್. ಗಗ್ಗರಿ, ರಾಜ್ಯ ಉಪಾಧ್ಯಕ್ಷರಾದ ಬಸವರಾಜ್ ಕಟ್ಟಿಮನಿ, ಸುನಿತಾ ಮೊದಗಿ, ವೀಣಾ ಹುಚ್ಚನಟ್ಟಿ, ಬೆಳಗಾವಿ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಹೊಸಮನಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಧ್ಯಕ್ಷರಾದ ಮುಕೇಶ್ ಲಂಬುಗೋಳ, ಎಲ್ಲ ಮಹಿಳಾ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಮತ್ತು ಪುರುಷ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಸೇರಿದಂತೆ ಕಮಿಟಿಯ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.4
- ಕಂಕನವಾಡಿ ಪಟ್ಟಣದಿಂದ ನಾಗನೂರು ಸಂಪರ್ಕಿಸುವ ರಸ್ತೆಯಲ್ಲಿರುವ ಮಹಾಪ್ರಸಾದಿ ಡೋರ ಕಕ್ಕಯ್ಯ ವಸತಿ ಕಾಲೋನಿಯಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದಿರುವುದರಿಂದ ಹಾವುಗಳು, ಬೀದಿ ನಾಯಿಗಳು ಮತ್ತು ಮಂಗಗಳ ಕಾಟ ಹೆಚ್ಚಾಗಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ಕರೆ ಮಾಡಿದಾಗ, ಅವರು ಸದ್ಯ ಇರುವಂತಹ ಸದಸ್ಯರುಗಳಿಗೆ ಕರೆ ಮಾಡಿ ವಿಚಾರಿಸಿ ಎಂದು ಉಡಾಫೆ ಉತ್ತರ ನೀಡುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಕಂಕನವಾಡಿ ಪಟ್ಟಣ ಪಂಚಾಯಿತಿಯ ಬಹಿರಂಗ ವರದಿಯಾಗಿದ್ದು, ಮುಖ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೇವಲ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.1
- ಹಳ್ಳಿಯಲ್ಲಿ ಅರಳಿದ ಪ್ರತಿಭೆಯಾದ ಕುಮಾರಿ ಸುಪ್ರಭಾ ಬಡೋರೆ ಹಾಡಿರುವ 'ಗಂಧದ ಗುಡಿ' ಗೀತೆಯ ವಿಡಿಯೋ ಒಂದು ವೈರಲ್ ಆಗಿದೆ. ಅವರ ಗಾಯನ ಕೌಶಲ್ಯವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.1
- ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಮುಗಳ್ಕೊಡ್ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಮುಧೋಳ ನಗರದ ಪವನಚುಕ್ಕಿ ಪ್ರದೇಶದ 22 ವರ್ಷದ ನವೀನ್ ಗೋರ್ಕ ಎಂದು ಗುರುತಿಸಲಾಗಿದೆ.1