logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕಲಬುರಗಿ ಜಿಲ್ಲೆಯ ಜೀವನಾಡಿಯಾಗಿರುವ ಭೀಮಾ ನದಿ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಲಕ್ಷಾಂತರ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಜೆಡಿಎಸ್ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಶಿವಕುಮಾರ ನಾಟಿಕಾರ ಅವರು ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಫಜಲಪುರ ತಾಲೂಕಿನಲ್ಲಿ ಬರಿದಾಗಿರುವ ಭೀಮಾ ನದಿಗೆ ತಮ್ಮ ತಂಡದೊಂದಿಗೆ ಭೇಟಿ ನೀಡಿದ ಶಿವಕುಮಾರ ನಾಟಿಕಾರ, ಭೀಮಾ ನದಿಯ ನೀರನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳದಿರುವುದು ಮತ್ತು ಬಚಾವತ್ ತೀರ್ಪಿನ ಅನ್ವಯ ಉಜ್ಜಯಿನಿ ಜಲಾಶಯದಿಂದ ಭೀಮೆಗೆ ಬರಬೇಕಿದ್ದ ಪಾಲನ್ನು ಪಡೆದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹರಿಹಾಯ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ನಾಟಿಕಾರ, ಕಾವೇರಿ ನೀರಿಗಾಗಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತವೆಯಾದರೂ, ಭೀಮಾ ನದಿಯ ನೀರಿನ ವಿಚಾರದಲ್ಲಿ ಎಲ್ಲಿಯೂ ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇಲ್ಲಿನ ಶಾಸಕರು ರೈತರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲದೆ, ತಮ್ಮ ಸ್ವಪ್ರತಿಷ್ಠೆಗಾಗಿ ಮತ್ತು ಜೇಬು ತುಂಬಿಸಿಕೊಳ್ಳುವ ಹಪಹಪಿಯಿಂದ ಭೀಮಾ ನದಿಯ ವಿಷಯಕ್ಕೆ ಹೋಗುತ್ತಿಲ್ಲ ಎಂದು ಆರೋಪಿಸಿದರು. ಅಫಜಲಪುರ ತಾಲೂಕಿನಲ್ಲಿ ಸುಮಾರು 60 ಕಿಲೋಮೀಟರ್ ದೂರ ಹಾದು ಹೋಗುವ ಭೀಮಾ ನದಿಯಿಂದ ಇಲ್ಲಿಯವರೆಗೆ 60 ಸಾವಿರ ಹೆಕ್ಟೇರ್ ರೈತರ ಭೂಮಿಗೆ ನೀರು ಒದಗಿಸಲು ಸಾಧ್ಯವಾಗಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಜನರ ಮೇಲಿರುವ ತಾತ್ಕಾಲಿಕ ಪ್ರೀತಿಯೇ ಇದಕ್ಕೆ ಕಾರಣ ಎಂದು ಅವರು ದೂರಿದರು. ಬಚಾವತ್ ತೀರ್ಪಿನ ನಂತರ ಸುಮಾರು 42 ಟಿಎಂಸಿ ನೀರು ಕರ್ನಾಟಕದ ಪಾಲಾಗಿದ್ದರೂ, ಅದನ್ನು ಬಳಸಿಕೊಳ್ಳಲಾಗದ ರಾಜ್ಯ ಸರ್ಕಾರಗಳು ಕಲ್ಯಾಣ ಕರ್ನಾಟಕ ಭಾಗದ ರೈತರ ಕಲ್ಯಾಣವಾಗದಂತೆ ವ್ಯವಸ್ಥಿತ ತಂತ್ರ ರೂಪಿಸುತ್ತಲೇ ಇವೆ. ಮಳೆಗಾಲ ಪ್ರಾರಂಭವಾಗಿ 15 ದಿನ ಕಳೆದರೂ ಭೀಮಾ ನದಿಯಲ್ಲಿ ಹನಿ ನೀರಿಲ್ಲದೆ, ದನಕರುಗಳು, ಪ್ರಾಣಿಪಕ್ಷಿಗಳು ಕುಡಿಯುವ ನೀರಿಲ್ಲದೆ ಪರದಾಡುತ್ತಿವೆ. ಹೆಚ್ಚು ಕಡಿಮೆ ಒಂದು ವಾರದೊಳಗೆ ನದಿ ಪಾತ್ರದ ಕಬ್ಬು ಸಂಪೂರ್ಣವಾಗಿ ಒಣಗಿ ಹೋಗಲಿದೆ, ಇದರಿಂದ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಈ ಭಾಗದ ಶಾಸಕರು ಕೂಡಲೇ ಎಚ್ಚೆತ್ತುಕೊಂಡು ಭೀಮಾ ನದಿಯ ನೀರಿನ ವಿಚಾರವಾಗಿ ನಿಯೋಗದೊಂದಿಗೆ ಸರ್ಕಾರಕ್ಕೆ ತೆರಳಬೇಕು ಎಂದು ನಾಟಿಕಾರ ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಎಚ್ಚರಿಸಿದರು. ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಡ ಹೇರಿ ಮುಖ್ಯಮಂತ್ರಿಗಳ ಮುಖೇನ ಭೀಮಾ ನದಿಗೆ ನೀರು ಬರುವಂತೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದರೆ ಉಗ್ರ ಹೋರಾಟಕ್ಕೆ ತಾವೇ ಅಣಿಮಾಡಿಕೊಡುತ್ತೀರಿ ಎಂದು ಅವರು ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಖಡಕ್ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಶರಣಗೌಡ ಪಾಟೀಲ, ರಾಜಕುಮಾರ ಉಕಲಿ, ಮರೇಪ್ಪ ಜಮಾದಾರ, ಮಂಜು ನಾಯ್ಕೊಡಿ, ಜಗದೀಶ ಉಡಚಾಣ, ಅಮೂಲ ಮೋರೆ, ಶ್ರೀಶೈಲಗೌಡ ಮಾಲಿಪಾಟೀಲ, ಸಿದ್ದು ನ್ಯಾವನುರ, ಶಿವಾನಂದ ಹಿಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

7 hrs ago
user_Y..k.pujari
Y..k.pujari
Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
7 hrs ago
261c8665-9ac9-494e-b852-248429e330b5

ಕಲಬುರಗಿ ಜಿಲ್ಲೆಯ ಜೀವನಾಡಿಯಾಗಿರುವ ಭೀಮಾ ನದಿ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಲಕ್ಷಾಂತರ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಜೆಡಿಎಸ್ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಶಿವಕುಮಾರ ನಾಟಿಕಾರ ಅವರು ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಫಜಲಪುರ ತಾಲೂಕಿನಲ್ಲಿ ಬರಿದಾಗಿರುವ ಭೀಮಾ ನದಿಗೆ ತಮ್ಮ ತಂಡದೊಂದಿಗೆ ಭೇಟಿ ನೀಡಿದ ಶಿವಕುಮಾರ ನಾಟಿಕಾರ, ಭೀಮಾ ನದಿಯ ನೀರನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳದಿರುವುದು ಮತ್ತು ಬಚಾವತ್ ತೀರ್ಪಿನ ಅನ್ವಯ ಉಜ್ಜಯಿನಿ ಜಲಾಶಯದಿಂದ ಭೀಮೆಗೆ ಬರಬೇಕಿದ್ದ ಪಾಲನ್ನು ಪಡೆದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹರಿಹಾಯ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ನಾಟಿಕಾರ, ಕಾವೇರಿ ನೀರಿಗಾಗಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತವೆಯಾದರೂ, ಭೀಮಾ ನದಿಯ ನೀರಿನ ವಿಚಾರದಲ್ಲಿ ಎಲ್ಲಿಯೂ ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇಲ್ಲಿನ ಶಾಸಕರು ರೈತರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲದೆ, ತಮ್ಮ ಸ್ವಪ್ರತಿಷ್ಠೆಗಾಗಿ

3e134a33-2535-4669-9599-fc161f3b0935

ಮತ್ತು ಜೇಬು ತುಂಬಿಸಿಕೊಳ್ಳುವ ಹಪಹಪಿಯಿಂದ ಭೀಮಾ ನದಿಯ ವಿಷಯಕ್ಕೆ ಹೋಗುತ್ತಿಲ್ಲ ಎಂದು ಆರೋಪಿಸಿದರು. ಅಫಜಲಪುರ ತಾಲೂಕಿನಲ್ಲಿ ಸುಮಾರು 60 ಕಿಲೋಮೀಟರ್ ದೂರ ಹಾದು ಹೋಗುವ ಭೀಮಾ ನದಿಯಿಂದ ಇಲ್ಲಿಯವರೆಗೆ 60 ಸಾವಿರ ಹೆಕ್ಟೇರ್ ರೈತರ ಭೂಮಿಗೆ ನೀರು ಒದಗಿಸಲು ಸಾಧ್ಯವಾಗಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಜನರ ಮೇಲಿರುವ ತಾತ್ಕಾಲಿಕ ಪ್ರೀತಿಯೇ ಇದಕ್ಕೆ ಕಾರಣ ಎಂದು ಅವರು ದೂರಿದರು. ಬಚಾವತ್ ತೀರ್ಪಿನ ನಂತರ ಸುಮಾರು 42 ಟಿಎಂಸಿ ನೀರು ಕರ್ನಾಟಕದ ಪಾಲಾಗಿದ್ದರೂ, ಅದನ್ನು ಬಳಸಿಕೊಳ್ಳಲಾಗದ ರಾಜ್ಯ ಸರ್ಕಾರಗಳು ಕಲ್ಯಾಣ ಕರ್ನಾಟಕ ಭಾಗದ ರೈತರ ಕಲ್ಯಾಣವಾಗದಂತೆ ವ್ಯವಸ್ಥಿತ ತಂತ್ರ ರೂಪಿಸುತ್ತಲೇ ಇವೆ. ಮಳೆಗಾಲ ಪ್ರಾರಂಭವಾಗಿ 15 ದಿನ ಕಳೆದರೂ ಭೀಮಾ ನದಿಯಲ್ಲಿ ಹನಿ ನೀರಿಲ್ಲದೆ, ದನಕರುಗಳು, ಪ್ರಾಣಿಪಕ್ಷಿಗಳು ಕುಡಿಯುವ ನೀರಿಲ್ಲದೆ ಪರದಾಡುತ್ತಿವೆ. ಹೆಚ್ಚು ಕಡಿಮೆ ಒಂದು ವಾರದೊಳಗೆ ನದಿ ಪಾತ್ರದ ಕಬ್ಬು ಸಂಪೂರ್ಣವಾಗಿ ಒಣಗಿ ಹೋಗಲಿದೆ, ಇದರಿಂದ

6055b182-2b48-42c9-8fa0-b29a5ae41f08

ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಈ ಭಾಗದ ಶಾಸಕರು ಕೂಡಲೇ ಎಚ್ಚೆತ್ತುಕೊಂಡು ಭೀಮಾ ನದಿಯ ನೀರಿನ ವಿಚಾರವಾಗಿ ನಿಯೋಗದೊಂದಿಗೆ ಸರ್ಕಾರಕ್ಕೆ ತೆರಳಬೇಕು ಎಂದು ನಾಟಿಕಾರ ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಎಚ್ಚರಿಸಿದರು. ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಡ ಹೇರಿ ಮುಖ್ಯಮಂತ್ರಿಗಳ ಮುಖೇನ ಭೀಮಾ ನದಿಗೆ ನೀರು ಬರುವಂತೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದರೆ ಉಗ್ರ ಹೋರಾಟಕ್ಕೆ ತಾವೇ ಅಣಿಮಾಡಿಕೊಡುತ್ತೀರಿ ಎಂದು ಅವರು ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಖಡಕ್ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಶರಣಗೌಡ ಪಾಟೀಲ, ರಾಜಕುಮಾರ ಉಕಲಿ, ಮರೇಪ್ಪ ಜಮಾದಾರ, ಮಂಜು ನಾಯ್ಕೊಡಿ, ಜಗದೀಶ ಉಡಚಾಣ, ಅಮೂಲ ಮೋರೆ, ಶ್ರೀಶೈಲಗೌಡ ಮಾಲಿಪಾಟೀಲ, ಸಿದ್ದು ನ್ಯಾವನುರ, ಶಿವಾನಂದ ಹಿಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

More news from Karnataka and nearby areas
  • ಬಸವಕಲ್ಯಾಣದಲ್ಲಿ ರಸ್ತೆ ಕಾಮಗಾರಿಗಳು ಕಳಪೆ ಮಟ್ಟದ್ದಾಗಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ವಿಚಾರವನ್ನು ಶಾಸಕ ಶರಣು ಸಂಘ ಅವರ ಗಮನಕ್ಕೆ ತರಲಾಗಿದೆ. ಕಾಮಗಾರಿಯ ಗುಣಮಟ್ಟದ ಕುರಿತು ಆತಂಕ ವ್ಯಕ್ತಪಡಿಸಲಾಗಿದೆ.
    1
    ಬಸವಕಲ್ಯಾಣದಲ್ಲಿ ರಸ್ತೆ ಕಾಮಗಾರಿಗಳು ಕಳಪೆ ಮಟ್ಟದ್ದಾಗಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ವಿಚಾರವನ್ನು ಶಾಸಕ ಶರಣು ಸಂಘ ಅವರ ಗಮನಕ್ಕೆ ತರಲಾಗಿದೆ. ಕಾಮಗಾರಿಯ ಗುಣಮಟ್ಟದ ಕುರಿತು ಆತಂಕ ವ್ಯಕ್ತಪಡಿಸಲಾಗಿದೆ.
    user_Kalyan karanataka news channel
    Kalyan karanataka news channel
    Journalist Kalaburagi, Karnataka•
    10 hrs ago
  • ಲೋಕಕ್ಕೆ ಸಂತೋಷವನ್ನು ನೀಡುವ, ಯುದ್ಧರಂಗದಲ್ಲಿ ಧೀರನಾದ, ಕಮಲದಂತಹ ಕಣ್ಣುಗಳನ್ನುಳ್ಳ, ರಘುವಂಶದ ನಾಥನಾದ, ಕರುಣೆಯ ಸ್ವರೂಪನಾದ, ದಯೆಯನ್ನು ನೀಡುವ ಶ್ರೀರಾಮಚಂದ್ರನಲ್ಲಿ ಶರಣಾಗುವುದಾಗಿ ಈ ಪೋಸ್ಟ್ ಹೇಳುತ್ತದೆ. ಇದು ಶ್ರೀರಾಮನ ಮೇಲಿನ ಅಚಲ ಭಕ್ತಿ, ಸನಾತನಿ ಸಂಸ್ಕೃತಿ, ಹಿಂದೂ ಧರ್ಮ, ಅಯೋಧ್ಯಾಧಾಮ ಮತ್ತು ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಪೋಸ್ಟ್ ಹನುಮಾನ್ ಮತ್ತು ಬಜರಂಗಬಲಿಯವರ ಮೇಲಿನ ಭಕ್ತಿಯನ್ನು ಸಹ ಪ್ರದರ್ಶಿಸುತ್ತದೆ, ಇದು ಧಾರ್ಮಿಕ ಭಾವನೆಗಳನ್ನು ವ್ಯಾಪಕವಾಗಿ ಹರಡಲು ಮತ್ತು ಅದನ್ನು ಟ್ರೆಂಡಿಂಗ್ ಹಾಗೂ ವೈರಲ್ ಮಾಡಲು ಉದ್ದೇಶಿಸಿದೆ.
    1
    ಲೋಕಕ್ಕೆ ಸಂತೋಷವನ್ನು ನೀಡುವ, ಯುದ್ಧರಂಗದಲ್ಲಿ ಧೀರನಾದ, ಕಮಲದಂತಹ ಕಣ್ಣುಗಳನ್ನುಳ್ಳ, ರಘುವಂಶದ ನಾಥನಾದ, ಕರುಣೆಯ ಸ್ವರೂಪನಾದ, ದಯೆಯನ್ನು ನೀಡುವ ಶ್ರೀರಾಮಚಂದ್ರನಲ್ಲಿ ಶರಣಾಗುವುದಾಗಿ ಈ ಪೋಸ್ಟ್ ಹೇಳುತ್ತದೆ. ಇದು ಶ್ರೀರಾಮನ ಮೇಲಿನ ಅಚಲ ಭಕ್ತಿ, ಸನಾತನಿ ಸಂಸ್ಕೃತಿ, ಹಿಂದೂ ಧರ್ಮ, ಅಯೋಧ್ಯಾಧಾಮ ಮತ್ತು ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಪೋಸ್ಟ್ ಹನುಮಾನ್ ಮತ್ತು ಬಜರಂಗಬಲಿಯವರ ಮೇಲಿನ ಭಕ್ತಿಯನ್ನು ಸಹ ಪ್ರದರ್ಶಿಸುತ್ತದೆ, ಇದು ಧಾರ್ಮಿಕ ಭಾವನೆಗಳನ್ನು ವ್ಯಾಪಕವಾಗಿ ಹರಡಲು ಮತ್ತು ಅದನ್ನು ಟ್ರೆಂಡಿಂಗ್ ಹಾಗೂ ವೈರಲ್ ಮಾಡಲು ಉದ್ದೇಶಿಸಿದೆ.
    user_Chethana Muniswamygowda
    Chethana Muniswamygowda
    Press advisory Chadachan, Vijayapura•
    3 hrs ago
  • ವಿಜಯಪುರದಲ್ಲಿ ಶನಿವಾರ ಬಿಜೆಪಿ ಮುಖಂಡ ವಿವೇಕ್ ಡಬ್ಬಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶವನ್ನು 60 ವರ್ಷ ಆಳಿದರೂ ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಭಿವೃದ್ಧಿಯ ಮೂಲ ಮಂತ್ರ ಮಾಡಿಕೊಂಡಿರುವ ನರೇಂದ್ರ ಮೋದಿ ಅವರ ಕುರಿತು ಮಾತನಾಡುವ ಅರ್ಹತೆ ಕಾಂಗ್ರೆಸ್‌ಗೆ ಇಲ್ಲ ಎಂದು ಡಬ್ಬಿ ಹೇಳಿದರು.
    1
    ವಿಜಯಪುರದಲ್ಲಿ ಶನಿವಾರ ಬಿಜೆಪಿ ಮುಖಂಡ ವಿವೇಕ್ ಡಬ್ಬಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶವನ್ನು 60 ವರ್ಷ ಆಳಿದರೂ ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಭಿವೃದ್ಧಿಯ ಮೂಲ ಮಂತ್ರ ಮಾಡಿಕೊಂಡಿರುವ ನರೇಂದ್ರ ಮೋದಿ ಅವರ ಕುರಿತು ಮಾತನಾಡುವ ಅರ್ಹತೆ ಕಾಂಗ್ರೆಸ್‌ಗೆ ಇಲ್ಲ ಎಂದು ಡಬ್ಬಿ ಹೇಳಿದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    20 hrs ago
  • ಮುದ್ದೇಬಿಹಾಳ ತಾಲೂಕಿನ ತಾರನಾಳ ಗ್ರಾಮದಲ್ಲಿ ಮೊರಂ ಹಬ್ಬದ ಪ್ರಯುಕ್ತ ವಿಜೃಂಭಣೆಯಿಂದ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆಯಲ್ಲಿ ಬಂದಿಗಿ ಸಾಬ್ ಹಳ್ಳೂರ್, ಸೋಮನಗೌಡ ಯಾಳವಾರ, ಕಾಸಿಂಸಾಬ್ ಮುಲ್ಲಾ, ಮದರ್ ಸಾಬ್ ದೊಡ್ಡಮನಿ, ಅಪ್ಪು ಗೌಡ ಪಾಟೀಲ್ ಮತ್ತು ಪ್ರಭುಗೌಡ ಜಾವಡಗಿ ಸೇರಿದಂತೆ ತಾರನಾಳ ಗ್ರಾಮದ ಹಿರಿಯರು ಹಾಗೂ ಬಂಧುಗಳು ಉಪಸ್ಥಿತರಿದ್ದರು. ಈ ಕುರಿತು ಈರಣ್ಣ ತಾರನಾಳ ವರದಿ ಮಾಡಿದ್ದಾರೆ.
    1
    ಮುದ್ದೇಬಿಹಾಳ ತಾಲೂಕಿನ ತಾರನಾಳ ಗ್ರಾಮದಲ್ಲಿ ಮೊರಂ ಹಬ್ಬದ ಪ್ರಯುಕ್ತ ವಿಜೃಂಭಣೆಯಿಂದ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆಯಲ್ಲಿ ಬಂದಿಗಿ ಸಾಬ್ ಹಳ್ಳೂರ್, ಸೋಮನಗೌಡ ಯಾಳವಾರ, ಕಾಸಿಂಸಾಬ್ ಮುಲ್ಲಾ, ಮದರ್ ಸಾಬ್ ದೊಡ್ಡಮನಿ, ಅಪ್ಪು ಗೌಡ ಪಾಟೀಲ್ ಮತ್ತು ಪ್ರಭುಗೌಡ ಜಾವಡಗಿ ಸೇರಿದಂತೆ ತಾರನಾಳ ಗ್ರಾಮದ ಹಿರಿಯರು ಹಾಗೂ ಬಂಧುಗಳು ಉಪಸ್ಥಿತರಿದ್ದರು. ಈ ಕುರಿತು ಈರಣ್ಣ ತಾರನಾಳ ವರದಿ ಮಾಡಿದ್ದಾರೆ.
    user_Iranna Tarnal
    Iranna Tarnal
    Artist ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    4 hrs ago
  • ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸೇಡಂ ತಾಲೂಕು ಘಟಕದ ವತಿಯಿಂದ ವಿದ್ಯುತ್ ಖಾಸಗೀಕರಣದ ವಿರುದ್ಧ ಹಾಗೂ ಬೆಳೆ ವಿಮೆ ಪರಿಹಾರ ಜಮೆ ಆಗದ ಕುರಿತು ತಹಶಿಲ್ದಾರರ ಮೂಲಕ ಮನವಿಯನ್ನು ಸಲ್ಲಿಸಲಾಗಿದೆ. ರೈತ ಬಾಂಧವರ ಪ್ರಮುಖ ಬೇಡಿಕೆಗಳಾದ ವಿದ್ಯುತ್‌ನ ಖಾಸಗೀಕರಣವನ್ನು ವಿರೋಧಿಸುವುದು ಮತ್ತು ರೈತರಿಗೆ ದೊರೆಯಬೇಕಾದ ಬೆಳೆ ವಿಮೆ ಪರಿಹಾರವನ್ನು ಕೂಡಲೇ ಜಮೆ ಮಾಡುವುದು ಈ ಮನವಿಯ ಹಿಂದಿನ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಆಮಶೆಟ್ಟಿ ಪಾಟೀಲ್ ಹೆಡ್ಡಳ್ಳಿ, ರವಿ ಪಾಟೀಲ್ ಸೂರವಾರ, ಶಾಂತಕುಮಾರ ಚನ್ನಕ್ಕಿ, ದೊಡ್ಡಪ್ಪಗೌಡ ಯಡಗಾ, ಭೀಮರಾವ್ ಮಾಲಿ ಪಾಟೀಲ್ ಮಳಖೇಡ, ಮಲ್ಲಿಕಾರ್ಜುನ ಪೂಜಾರಿ, ಮಹೇಶ್ ರೇಮಗೊಂಡ, ಮಹೇಶ್ ಗುತ್ತೇದಾರ್, ಶರಣು ಕಾಳಗಿ, ಶ್ರೀ ಚಂದ್ರಕಾಂತ ಕಲ್ಕಮ್, ಶರಣು ಕಾಳಗಿ ಸೇರಿದಂತೆ ಹಲವು ರೈತ ಬಾಂಧವರು ಪಾಲ್ಗೊಂಡಿದ್ದರು. ರೈತ ಸಂಘವು ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ ಮತ್ತು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದೆ.
    1
    ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸೇಡಂ ತಾಲೂಕು ಘಟಕದ ವತಿಯಿಂದ ವಿದ್ಯುತ್ ಖಾಸಗೀಕರಣದ ವಿರುದ್ಧ ಹಾಗೂ ಬೆಳೆ ವಿಮೆ ಪರಿಹಾರ ಜಮೆ ಆಗದ ಕುರಿತು ತಹಶಿಲ್ದಾರರ ಮೂಲಕ ಮನವಿಯನ್ನು ಸಲ್ಲಿಸಲಾಗಿದೆ. ರೈತ ಬಾಂಧವರ ಪ್ರಮುಖ ಬೇಡಿಕೆಗಳಾದ ವಿದ್ಯುತ್‌ನ ಖಾಸಗೀಕರಣವನ್ನು ವಿರೋಧಿಸುವುದು ಮತ್ತು ರೈತರಿಗೆ ದೊರೆಯಬೇಕಾದ ಬೆಳೆ ವಿಮೆ ಪರಿಹಾರವನ್ನು ಕೂಡಲೇ ಜಮೆ ಮಾಡುವುದು ಈ ಮನವಿಯ ಹಿಂದಿನ ಉದ್ದೇಶವಾಗಿದೆ.

ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಆಮಶೆಟ್ಟಿ ಪಾಟೀಲ್ ಹೆಡ್ಡಳ್ಳಿ, ರವಿ ಪಾಟೀಲ್ ಸೂರವಾರ, ಶಾಂತಕುಮಾರ ಚನ್ನಕ್ಕಿ, ದೊಡ್ಡಪ್ಪಗೌಡ ಯಡಗಾ, ಭೀಮರಾವ್ ಮಾಲಿ ಪಾಟೀಲ್ ಮಳಖೇಡ, ಮಲ್ಲಿಕಾರ್ಜುನ ಪೂಜಾರಿ, ಮಹೇಶ್ ರೇಮಗೊಂಡ, ಮಹೇಶ್ ಗುತ್ತೇದಾರ್, ಶರಣು ಕಾಳಗಿ, ಶ್ರೀ ಚಂದ್ರಕಾಂತ ಕಲ್ಕಮ್, ಶರಣು ಕಾಳಗಿ ಸೇರಿದಂತೆ ಹಲವು ರೈತ ಬಾಂಧವರು ಪಾಲ್ಗೊಂಡಿದ್ದರು. ರೈತ ಸಂಘವು ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ ಮತ್ತು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದೆ.
    user_Suddi - Junction
    Suddi - Junction
    Voice of people ಸೇಡಂ, ಕಲಬುರಗಿ, ಕರ್ನಾಟಕ•
    5 hrs ago
  • ಅಪನಿ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಪ್ರಸಾದ್ ಮೌರ್ಯ ಅವರು ಲಖನೌನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಜಾಫರ್ ಹುಸೇನ್ ಅವರನ್ನು ಕರ್ನಾಟಕ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ರಘು ಮತ್ತು ಕಣೇಶ್ವರ್ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಸಹ ನೇಮಿಸಲಾಗಿದೆ. ನಂತರ ಮಾತನಾಡಿದ ಸ್ವಾಮಿ ಪ್ರಸಾದ್ ಮೌರ್ಯ ಅವರು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಬೇಕು ಎಂದು ಕರೆ ನೀಡಿದರು. ಮುಂಬರುವ ಚುನಾವಣೆಗಳಲ್ಲಿ ಪಕ್ಷ ಸ್ಪರ್ಧಿಸಿ ಅಧಿಕಾರದತ್ತ ಸಾಗಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಹೇಳಿದರು. ಡಾ. ಬಾಬಾಸಾಹೇಬ್ ಅಂಬೇಡ್ಕ‌ರ್ ಹಾಗೂ ಮಾನ್ಯವರ ಕಾಂಶಿರಾಮ್ ಅವರ ತತ್ವ ಮತ್ತು ಮಾರ್ಗದರ್ಶನದಂತೆ ಪಕ್ಷ ಸಂಘಟನೆ ನಡೆಸುವಂತೆ ಅವರು ಸೂಚಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ದಿಲೀಪ್‌ ಚೌಧರಿ, ಮಾನಪ್ಪ ಕಲದೇವನಹಳ್ಳಿ, ನಿಯಾಜ್‌ ಪಟೇಲ್ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಕುರಿತು ನಿಜಾಮುದ್ದಿನ್ ಯಾದಗಿರಿ ವರದಿ ಮಾಡಿದ್ದಾರೆ.
    1
    ಅಪನಿ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಪ್ರಸಾದ್ ಮೌರ್ಯ ಅವರು ಲಖನೌನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಜಾಫರ್ ಹುಸೇನ್ ಅವರನ್ನು ಕರ್ನಾಟಕ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ರಘು ಮತ್ತು ಕಣೇಶ್ವರ್ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಸಹ ನೇಮಿಸಲಾಗಿದೆ.

ನಂತರ ಮಾತನಾಡಿದ ಸ್ವಾಮಿ ಪ್ರಸಾದ್ ಮೌರ್ಯ ಅವರು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಬೇಕು ಎಂದು ಕರೆ ನೀಡಿದರು. ಮುಂಬರುವ ಚುನಾವಣೆಗಳಲ್ಲಿ ಪಕ್ಷ ಸ್ಪರ್ಧಿಸಿ ಅಧಿಕಾರದತ್ತ ಸಾಗಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಹೇಳಿದರು. ಡಾ. ಬಾಬಾಸಾಹೇಬ್ ಅಂಬೇಡ್ಕ‌ರ್ ಹಾಗೂ ಮಾನ್ಯವರ ಕಾಂಶಿರಾಮ್ ಅವರ ತತ್ವ ಮತ್ತು ಮಾರ್ಗದರ್ಶನದಂತೆ ಪಕ್ಷ ಸಂಘಟನೆ ನಡೆಸುವಂತೆ ಅವರು ಸೂಚಿಸಿದರು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ದಿಲೀಪ್‌ ಚೌಧರಿ, ಮಾನಪ್ಪ ಕಲದೇವನಹಳ್ಳಿ, ನಿಯಾಜ್‌ ಪಟೇಲ್ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಕುರಿತು ನಿಜಾಮುದ್ದಿನ್ ಯಾದಗಿರಿ ವರದಿ ಮಾಡಿದ್ದಾರೆ.
    user_Nizamuddin
    Nizamuddin
    Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
    6 hrs ago
  • ಕಲಬುರಗಿಯಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಯಶಸ್ಸು ಗಳಿಸಿದ್ದಾರೆ. ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವನಾಥ್ ಮುದಾರೆಡ್ಡಿ ಮತ್ತು ಎಸ್‌ಬಿ ಕಾನ್‌ಸ್ಟೆಬಲ್ ಸಿದ್ದಣ್ಣ ಬಿರಾದಾರ್ ಅವರನ್ನು ಅಕ್ಕಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವುದಾಗಿ ಹೇಳಿ ₹50 ಸಾವಿರ ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಬಂಧಿಸಲಾಗಿದೆ. ಈ ಕಾರ್ಯಾಚರಣೆಯು ಗೃಹ ಸಚಿವರ ನಿವಾಸದಲ್ಲೇ ನಡೆದಿದೆ ಎಂಬುದು ಪ್ರಕರಣಕ್ಕೆ ಇನ್ನಷ್ಟು ಸಂಚಲನ ಮೂಡಿಸಿದೆ. ಲೋಕಾಯುಕ್ತ ಅಧಿಕಾರಿಗಳು ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
    1
    ಕಲಬುರಗಿಯಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಯಶಸ್ಸು ಗಳಿಸಿದ್ದಾರೆ. ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವನಾಥ್ ಮುದಾರೆಡ್ಡಿ ಮತ್ತು ಎಸ್‌ಬಿ ಕಾನ್‌ಸ್ಟೆಬಲ್ ಸಿದ್ದಣ್ಣ ಬಿರಾದಾರ್ ಅವರನ್ನು ಅಕ್ಕಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವುದಾಗಿ ಹೇಳಿ ₹50 ಸಾವಿರ ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಬಂಧಿಸಲಾಗಿದೆ.

ಈ ಕಾರ್ಯಾಚರಣೆಯು ಗೃಹ ಸಚಿವರ ನಿವಾಸದಲ್ಲೇ ನಡೆದಿದೆ ಎಂಬುದು ಪ್ರಕರಣಕ್ಕೆ ಇನ್ನಷ್ಟು ಸಂಚಲನ ಮೂಡಿಸಿದೆ. ಲೋಕಾಯುಕ್ತ ಅಧಿಕಾರಿಗಳು ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
    user_A News24Kannada
    A News24Kannada
    Newsagent Yadrami, Kalaburagi•
    20 hrs ago
  • ಸಮಸ್ತ ಲೋಕಕ್ಕೆ ಆನಂದವನ್ನು ನೀಡುವ, ರಣರಂಗದಲ್ಲಿ ಧೀರನಾದ, ಕಮಲದಂತಹ ನೇತ್ರಗಳನ್ನು ಹೊಂದಿದ, ರಘುವಂಶದ ನಾಥನಾದ, ಕರುಣಾಮಯಿ ಹಾಗೂ ಕರುಣೆಯನ್ನು ನೀಡುವ ಶ್ರೀರಾಮಚಂದ್ರನ ಚರಣಗಳಿಗೆ ಶರಣಾಗತಿಯನ್ನು ಪ್ರಾರ್ಥಿಸುವ ಭಕ್ತಿಪೂರ್ವಕ ಶ್ಲೋಕವನ್ನು ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಭಗವಾನ್ ಶ್ರೀರಾಮನ ಮೇಲಿನ ಅಚಲ ಭಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು 'ಜೈ ಶ್ರೀರಾಮ್' ಘೋಷಣೆಯ ಮೂಲಕ ಆತನ ಮಹಿಮೆಯನ್ನು ಸಾರುತ್ತದೆ. ಭಗವಾನ್ ರಾಮನ ಭಕ್ತರು ಆತನನ್ನು 'ಲಾರ್ಡ್ ರಾಮ' ಎಂದು ಸ್ಮರಿಸುತ್ತಾರೆ, ಸನಾತನಿ ಹಿಂದೂ ಧರ್ಮದ ಪ್ರಮುಖ ದೇವರಾಗಿ, ರಾಮಾಯಣದ ನಾಯಕನಾಗಿ, ಮತ್ತು ಪ್ರಸ್ತುತ ಅಯೋಧ್ಯೆ ಧಾಮದಲ್ಲಿರುವ ಭವ್ಯ ರಾಮಮಂದಿರದಲ್ಲಿ ನೆಲೆಸಿರುವ ದೇವರಾಗಿ ಪೂಜಿಸುತ್ತಾರೆ. ಇದೇ ಭಕ್ತಿಯು ಭಗವಾನ್ ಹನುಮಂತ, ಬಜರಂಗಬಲಿ, ಮತ್ತು ಹನುಮಾನ್ ಜಿಯವರನ್ನು ಸ್ತುತಿಸುವ ಮೂಲಕವೂ ವ್ಯಕ್ತವಾಗುತ್ತದೆ, 'ಜೈ ಹನುಮಾನ್' ಮತ್ತು 'ಹನುಮಾನ್ ಚಾಲೀಸಾ' ಮೂಲಕ ಹನುಮನ ಪರಾಕ್ರಮ ಮತ್ತು ಭಕ್ತಿಯನ್ನು ಸ್ಮರಿಸಲಾಗುತ್ತದೆ. ಈ ಸಂಪೂರ್ಣ ಭಕ್ತಿಭಾವನೆಯು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಹಾಗೂ ವೈರಲ್ ರೀಲ್ಸ್ ಮೂಲಕ ವ್ಯಾಪಕವಾಗಿ ಹರಡುತ್ತಿದೆ.
    1
    ಸಮಸ್ತ ಲೋಕಕ್ಕೆ ಆನಂದವನ್ನು ನೀಡುವ, ರಣರಂಗದಲ್ಲಿ ಧೀರನಾದ, ಕಮಲದಂತಹ ನೇತ್ರಗಳನ್ನು ಹೊಂದಿದ, ರಘುವಂಶದ ನಾಥನಾದ, ಕರುಣಾಮಯಿ ಹಾಗೂ ಕರುಣೆಯನ್ನು ನೀಡುವ ಶ್ರೀರಾಮಚಂದ್ರನ ಚರಣಗಳಿಗೆ ಶರಣಾಗತಿಯನ್ನು ಪ್ರಾರ್ಥಿಸುವ ಭಕ್ತಿಪೂರ್ವಕ ಶ್ಲೋಕವನ್ನು ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಭಗವಾನ್ ಶ್ರೀರಾಮನ ಮೇಲಿನ ಅಚಲ ಭಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು 'ಜೈ ಶ್ರೀರಾಮ್' ಘೋಷಣೆಯ ಮೂಲಕ ಆತನ ಮಹಿಮೆಯನ್ನು ಸಾರುತ್ತದೆ.

ಭಗವಾನ್ ರಾಮನ ಭಕ್ತರು ಆತನನ್ನು 'ಲಾರ್ಡ್ ರಾಮ' ಎಂದು ಸ್ಮರಿಸುತ್ತಾರೆ, ಸನಾತನಿ ಹಿಂದೂ ಧರ್ಮದ ಪ್ರಮುಖ ದೇವರಾಗಿ, ರಾಮಾಯಣದ ನಾಯಕನಾಗಿ, ಮತ್ತು ಪ್ರಸ್ತುತ ಅಯೋಧ್ಯೆ ಧಾಮದಲ್ಲಿರುವ ಭವ್ಯ ರಾಮಮಂದಿರದಲ್ಲಿ ನೆಲೆಸಿರುವ ದೇವರಾಗಿ ಪೂಜಿಸುತ್ತಾರೆ. ಇದೇ ಭಕ್ತಿಯು ಭಗವಾನ್ ಹನುಮಂತ, ಬಜರಂಗಬಲಿ, ಮತ್ತು ಹನುಮಾನ್ ಜಿಯವರನ್ನು ಸ್ತುತಿಸುವ ಮೂಲಕವೂ ವ್ಯಕ್ತವಾಗುತ್ತದೆ, 'ಜೈ ಹನುಮಾನ್' ಮತ್ತು 'ಹನುಮಾನ್ ಚಾಲೀಸಾ' ಮೂಲಕ ಹನುಮನ ಪರಾಕ್ರಮ ಮತ್ತು ಭಕ್ತಿಯನ್ನು ಸ್ಮರಿಸಲಾಗುತ್ತದೆ. ಈ ಸಂಪೂರ್ಣ ಭಕ್ತಿಭಾವನೆಯು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಹಾಗೂ ವೈರಲ್ ರೀಲ್ಸ್ ಮೂಲಕ ವ್ಯಾಪಕವಾಗಿ ಹರಡುತ್ತಿದೆ.
    user_Chethana Muniswamygowda
    Chethana Muniswamygowda
    Press advisory Chadachan, Vijayapura•
    3 hrs ago
  • ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾರನಾಳ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಆಚರಣೆಯು ಹಿಂದೂ ಮತ್ತು ಇಸ್ಲಾಂ ಧರ್ಮದ ಬಾಂಧವರು ಒಟ್ಟಾಗಿ ಭಾಗವಹಿಸಿ, ಸೌಹಾರ್ದತೆಯ ಸಂದೇಶ ಸಾರಿದ್ದಕ್ಕೆ ಸಾಕ್ಷಿಯಾಯಿತು. ಜುಲೈ 21 ರಂದು ಮಧ್ಯಾಹ್ನ 3 ಗಂಟೆಗೆ ಮುದ್ದೇಬಿಹಾಳ ಪಟ್ಟಣದಿಂದ ಕಾಶಿಂಪೀರ್ ಮತ್ತು ಹಸೇನ್ ಹುಸೇನಿ ಅವರ ಮೆರವಣಿಗೆಯು ಅದ್ದೂರಿಯಾಗಿ ಆರಂಭವಾಯಿತು. ಈ ಮೆರವಣಿಗೆಯು ಕೃಷ್ಣಾ ನದಿಯ ಗಂಗಸ್ಥಾನಕ್ಕೆ ಸಾಗಿ, ನಂತರ ತಾರನಾಳ ಗ್ರಾಮವನ್ನು ತಲುಪಿತು. ದೇವರನ್ನು ಕೂಡಿಸುವ ಈ ಕಾರ್ಯಕ್ರಮದಲ್ಲಿ ಎಲ್ಲಾ ಹಿಂದೂ ಮತ್ತು ಇಸ್ಲಾಂ ಧರ್ಮದ ಬಂಧುಗಳು ಉತ್ಸಾಹದಿಂದ ಭಾಗವಹಿಸಿ, ಧಾರ್ಮಿಕ ಏಕತೆಯನ್ನು ಪ್ರದರ್ಶಿಸಿದರು. ಈ ಕುರಿತು ಈರಣ್ಣ ತಾರನಾಳ ವರದಿ ಮಾಡಿದ್ದಾರೆ.
    1
    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾರನಾಳ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಆಚರಣೆಯು ಹಿಂದೂ ಮತ್ತು ಇಸ್ಲಾಂ ಧರ್ಮದ ಬಾಂಧವರು ಒಟ್ಟಾಗಿ ಭಾಗವಹಿಸಿ, ಸೌಹಾರ್ದತೆಯ ಸಂದೇಶ ಸಾರಿದ್ದಕ್ಕೆ ಸಾಕ್ಷಿಯಾಯಿತು.

ಜುಲೈ 21 ರಂದು ಮಧ್ಯಾಹ್ನ 3 ಗಂಟೆಗೆ ಮುದ್ದೇಬಿಹಾಳ ಪಟ್ಟಣದಿಂದ ಕಾಶಿಂಪೀರ್ ಮತ್ತು ಹಸೇನ್ ಹುಸೇನಿ ಅವರ ಮೆರವಣಿಗೆಯು ಅದ್ದೂರಿಯಾಗಿ ಆರಂಭವಾಯಿತು. ಈ ಮೆರವಣಿಗೆಯು ಕೃಷ್ಣಾ ನದಿಯ ಗಂಗಸ್ಥಾನಕ್ಕೆ ಸಾಗಿ, ನಂತರ ತಾರನಾಳ ಗ್ರಾಮವನ್ನು ತಲುಪಿತು.

ದೇವರನ್ನು ಕೂಡಿಸುವ ಈ ಕಾರ್ಯಕ್ರಮದಲ್ಲಿ ಎಲ್ಲಾ ಹಿಂದೂ ಮತ್ತು ಇಸ್ಲಾಂ ಧರ್ಮದ ಬಂಧುಗಳು ಉತ್ಸಾಹದಿಂದ ಭಾಗವಹಿಸಿ, ಧಾರ್ಮಿಕ ಏಕತೆಯನ್ನು ಪ್ರದರ್ಶಿಸಿದರು. ಈ ಕುರಿತು ಈರಣ್ಣ ತಾರನಾಳ ವರದಿ ಮಾಡಿದ್ದಾರೆ.
    user_Iranna Tarnal
    Iranna Tarnal
    Artist ಮುದ್ದೇಬಿಹಾಳ, ವಿಜಯಪುರ, ಕರ್ನಾಟಕ•
    4 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.