logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವ ಧ್ವಜರೋಹಣ ಕಾರ್ಯಕ್ರಮ ಸೊರಬ: ಉಪವಾಸವೆಂದರೆ, ಭಗವಂತನ ಹತ್ತಿರ ಮನಸಿನಿಂದ ವಾಸಮಾಡುವುದು ಎಂದು ಬ್ರಹ್ಮಕುಮಾರಿ ಸುನಂದಕ್ಕೆ ಗೇರು ಸೊಪ್ಪ ತಿಳಿಸಿದರು. ಪಟ್ಟಣದ ಚಾಮರಾಜಪೇಟೆ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯದ ಆವರಣದಲ್ಲಿ ಶಿವರಾತ್ರಿಯ ಪ್ರಯುಕ್ತ ಏರ್ಪಡಿಸಿದ್ದ ಶಿವ ಧ್ವಜರೋಹಣ ಕಾರ್ಯಕ್ರಮದಲ್ಲಿ ಅವರು ಶಿವರಾತ್ರಿಯ ರಹಸ್ಯ ಮಹತ್ವವನ್ನು ವಿವರಿ ಸುತ್ತ, ಶಿವಚಿಂತನೆಯ ಜೊತೆಗೆ ಶುಭಚಿಂ ತನೆ ಮಾಡಬೇಕು ಎಂದು ಕರೆ ನೀಡಿದರು. ಸಂಚಾಲಕಿ ಬ್ರಹ್ಮಕುಮಾರಿ ಚೇತನಕ್ಕ ಮಾತನಾಡಿ, ನಿರಾಕಾರ ಶಿವನು ಮಹಿ ಮನು, ಅವ್ಯಕ್ತ ಅಭೋಕ್ತ ಆಗಿರುವವನು, ನಿತ್ಯವೂ ಅವನನ್ನು ನೆನಸಿದಾಗ ಪಾವನರಾ ಗುತ್ತೇವೆ. ಶಿವರಾತ್ರಿಯ ಪ್ರಯುಕ್ತ ಪಟ್ಟಣ ಅಧಿದೇವತೆ ಶ್ರೀರಂಗನಾಥಸ್ವಾಮಿ ದೇವ ಸ್ಥಾನದಲ್ಲಿ ಶ್ರೀ ಉಮಾಮಹೇಶ್ವರ ಭಾವೆ ಫೌಂಡೇಶನ್ ಸಹಯೋಗದಲ್ಲಿ ಸಹಸ್ರ ಲಿಂಗ ದರ್ಶನ, ದ್ವಾದಶ ಜ್ಯೋತಿ ರ್ಲಿಂಗಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದ ಅವರುರಾಜಯೋಗದ ಚಮತ್ಕಾರ ವನ್ನು ವಿಭಿನ್ನ ರೀತಿಯಲ್ಲಿ ಮಾಡುವುದರ ಮಹತ್ವದ ಜೊತೆ ಧ್ಯಾನದ ಮಹತ್ವ ತಿಳಿಸಿಕೊಟ್ಟರು. ನಾವೆಲ್ಲಾ ಪರಮಾತ್ಮನ ಮಕ್ಕಳು. ಇದು ಶಿವಚಿಂತನೆಯ ಮಹೋ ತ್ಸವ ಆಗಿದೆ. ಪ್ರತಿ ಶ್ವಾಸ ಸಂಕಲ್ಪದಲ್ಲಿ ಶಿವನ ಸ್ಮರಣೆಯಿರಬೇಕೆಂಬ ಸಂದೇಶ ಸಾರಿದರು. ಬ್ರಾಹ್ಮಕುಮಾರಿ ಮಹಾದೇವಕ್ಕ ಶಿವಧ್ವಜರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸುರೇಖಾ ಶಿರಸಿ, ವಕೀಲರಾದ ನಾಗಪ್ಪ ಎಮ್ ಎನ್, ಯೋಗೇಶ್, ರಾಜಶೇಖರಗೌಡ, ವಿಶ್ವ ನಾಥಗೌಡ, ನಾಗರಾಜಗುತ್ತಿ, ಹಿರಿಯ ಪತ್ರಕರ್ತ ಯು.ಎನ್. ಲಕ್ಷ್ಮೀಕಾಂತ ಉರಣಕರ್, ಶೈಲಜಾ ಶಿವಯೋಗಿ, ಶಾರ ದಕ್ಕ, ಸೇರಿದಂತೆ ಹಲವರಿದ್ದರು.

5 hrs ago
user_SANDEEP U. L
SANDEEP U. L
Courier service ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
5 hrs ago
be56f2c2-336a-4aeb-930e-49b3b5505587

ಶಿವ ಧ್ವಜರೋಹಣ ಕಾರ್ಯಕ್ರಮ ಸೊರಬ: ಉಪವಾಸವೆಂದರೆ, ಭಗವಂತನ ಹತ್ತಿರ ಮನಸಿನಿಂದ ವಾಸಮಾಡುವುದು ಎಂದು ಬ್ರಹ್ಮಕುಮಾರಿ ಸುನಂದಕ್ಕೆ ಗೇರು ಸೊಪ್ಪ ತಿಳಿಸಿದರು. ಪಟ್ಟಣದ ಚಾಮರಾಜಪೇಟೆ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯದ ಆವರಣದಲ್ಲಿ ಶಿವರಾತ್ರಿಯ ಪ್ರಯುಕ್ತ ಏರ್ಪಡಿಸಿದ್ದ ಶಿವ ಧ್ವಜರೋಹಣ ಕಾರ್ಯಕ್ರಮದಲ್ಲಿ ಅವರು ಶಿವರಾತ್ರಿಯ ರಹಸ್ಯ ಮಹತ್ವವನ್ನು ವಿವರಿ ಸುತ್ತ, ಶಿವಚಿಂತನೆಯ ಜೊತೆಗೆ ಶುಭಚಿಂ ತನೆ ಮಾಡಬೇಕು ಎಂದು ಕರೆ ನೀಡಿದರು. ಸಂಚಾಲಕಿ ಬ್ರಹ್ಮಕುಮಾರಿ ಚೇತನಕ್ಕ ಮಾತನಾಡಿ, ನಿರಾಕಾರ ಶಿವನು ಮಹಿ ಮನು, ಅವ್ಯಕ್ತ ಅಭೋಕ್ತ ಆಗಿರುವವನು, ನಿತ್ಯವೂ ಅವನನ್ನು ನೆನಸಿದಾಗ ಪಾವನರಾ ಗುತ್ತೇವೆ. ಶಿವರಾತ್ರಿಯ ಪ್ರಯುಕ್ತ ಪಟ್ಟಣ ಅಧಿದೇವತೆ ಶ್ರೀರಂಗನಾಥಸ್ವಾಮಿ ದೇವ ಸ್ಥಾನದಲ್ಲಿ ಶ್ರೀ ಉಮಾಮಹೇಶ್ವರ ಭಾವೆ ಫೌಂಡೇಶನ್ ಸಹಯೋಗದಲ್ಲಿ ಸಹಸ್ರ ಲಿಂಗ ದರ್ಶನ, ದ್ವಾದಶ ಜ್ಯೋತಿ ರ್ಲಿಂಗಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದ ಅವರುರಾಜಯೋಗದ ಚಮತ್ಕಾರ ವನ್ನು ವಿಭಿನ್ನ ರೀತಿಯಲ್ಲಿ ಮಾಡುವುದರ ಮಹತ್ವದ ಜೊತೆ ಧ್ಯಾನದ ಮಹತ್ವ ತಿಳಿಸಿಕೊಟ್ಟರು. ನಾವೆಲ್ಲಾ ಪರಮಾತ್ಮನ ಮಕ್ಕಳು. ಇದು ಶಿವಚಿಂತನೆಯ ಮಹೋ ತ್ಸವ ಆಗಿದೆ. ಪ್ರತಿ ಶ್ವಾಸ ಸಂಕಲ್ಪದಲ್ಲಿ ಶಿವನ ಸ್ಮರಣೆಯಿರಬೇಕೆಂಬ ಸಂದೇಶ ಸಾರಿದರು. ಬ್ರಾಹ್ಮಕುಮಾರಿ ಮಹಾದೇವಕ್ಕ ಶಿವಧ್ವಜರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸುರೇಖಾ ಶಿರಸಿ, ವಕೀಲರಾದ ನಾಗಪ್ಪ ಎಮ್ ಎನ್, ಯೋಗೇಶ್, ರಾಜಶೇಖರಗೌಡ, ವಿಶ್ವ ನಾಥಗೌಡ, ನಾಗರಾಜಗುತ್ತಿ, ಹಿರಿಯ ಪತ್ರಕರ್ತ ಯು.ಎನ್. ಲಕ್ಷ್ಮೀಕಾಂತ ಉರಣಕರ್, ಶೈಲಜಾ ಶಿವಯೋಗಿ, ಶಾರ ದಕ್ಕ, ಸೇರಿದಂತೆ ಹಲವರಿದ್ದರು.

More news from ಕರ್ನಾಟಕ and nearby areas
  • ತೀರ್ಥಹಳ್ಳಿ: ಪಟ್ಟಣಕ್ಕೆ ಹತ್ತಿರವಿರುವ ಕುರುವಳ್ಳಿಯ ಪುತ್ತಿಗೆ ಮಠದ ಪಕ್ಕದಲ್ಲಿರುವ ಗೌರಿಶಂಕರ ದೇವಸ್ಥಾನದಲ್ಲಿ ನಿನ್ನೆ ಶಿವರಾತ್ರಿಯ ಪ್ರಯುಕ್ತ ಶಿವನಿಗೆ ಮಹಾಪೂಜೆ ಸಲ್ಲಿಸಲಾಯಿತು.
    1
    ತೀರ್ಥಹಳ್ಳಿ: ಪಟ್ಟಣಕ್ಕೆ ಹತ್ತಿರವಿರುವ ಕುರುವಳ್ಳಿಯ ಪುತ್ತಿಗೆ ಮಠದ ಪಕ್ಕದಲ್ಲಿರುವ ಗೌರಿಶಂಕರ ದೇವಸ್ಥಾನದಲ್ಲಿ ನಿನ್ನೆ ಶಿವರಾತ್ರಿಯ ಪ್ರಯುಕ್ತ ಶಿವನಿಗೆ ಮಹಾಪೂಜೆ ಸಲ್ಲಿಸಲಾಯಿತು.
    user_ರಶ್ಮಿ ಶ್ರೀಕಾಂತ್ ನಾಯಕ್
    ರಶ್ಮಿ ಶ್ರೀಕಾಂತ್ ನಾಯಕ್
    Local News Reporter ತೀರ್ಥಹಳ್ಳಿ, ಶಿವಮೊಗ್ಗ, ಕರ್ನಾಟಕ•
    5 hrs ago
  • ಕಡೂರು : ಬಹುತೇಕ ಮಾರ್ಚ್ ತಿಂಗಳಲ್ಲಿ ಕಡೂರಿನಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ತಿಳಿಸಿದರು. ಪಟ್ಟಣದ ಕನ್ನಡ ಭವನದಲ್ಲಿ ಸಮ್ಮೇಳನದ ಪೂರ್ವಭಾವಿ ಸಿದ್ದತೆಯ ಮೊದಲ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ವಿಗೆ ಒತ್ತುಕೊಡಲಾಗಿದೆ. ಈಗಾಗಲೇ ಸಮ್ಮೇಳನಾಧ್ಯಕ್ಷರ ಆಯ್ಕೆಯ ಕುರಿತು ಜಿಲ್ಲೆಯ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತ ನಿರ್ಣಯದೊಂದಿಗೆ ಆಯ್ಕೆಗೊಳಿಸಲಾಗುತ್ತದೆ. ಸಮ್ಮೇಳನದ ಮಹಾಪೋಷಕರಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಚಿಕ್ಕಮಗಳೂರು, ಹಾಸನ ಕ್ಷೇತ್ರದ ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರುಗಳನ್ನು ಮತ್ತು ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರನ್ನು ಸಮಿತಿಯ ಪೋಷಕರನ್ನಾಗಿ ಆಯ್ಕೆಗೊಳಿಸಲಾಗಿದೆ. ಕ್ಷೇತ್ರದ ಮಾಜಿ ಶಾಸಕರು ಒಳಗೊಂಡAತೆ ವಿವಿಧ ಉಪಸಮಿತಿಗಳಲ್ಲಿ ಪದಾಧಿಕಾರಿಗಳನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರ ನೇತೃತ್ವ ಹಾಗೂ ಸ್ವಾಗತಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ಸಿದ್ದತೆ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದರು. ಈ ಬಾರಿಯ ಸಮ್ಮೇಳನದಲ್ಲಿ ಅಂತರಾಷ್ಟಿçÃಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನುಮುಷ್ತಾಕ್ ಅವರನ್ನು ಆಹ್ವಾನಿಸಲಾಗುತ್ತದೆ. ಶೋಷಿತ ಸಮುದಾಯದ ಜಿಲ್ಲೆಯ ಸೂಕ್ತ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಲು ಪೂರ್ವಭಾವಿ ಸಭೆಯಲ್ಲಿ ಆಶಯವ್ಯಕ್ತಗೊಂಡಿದ್ದು, ಫೆ.22ರಂದು ಎನ್.ಆರ್.ಪುರದಲ್ಲಿ ನಡೆಯುವ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅಂತಿಮವಾಗಿ ಆಯ್ಕೆಗೊಳಿಸಲಾಗುತ್ತದೆ ಎಂದರು. ಸ್ವಾಗತ ಸಮಿತಿಯ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಈ ಹಿಂದೆ ತಾಲ್ಲೂಕಿನ ಚಟ್ನಳ್ಳಿ ಹಾಗೂ ಬೀರೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಮ್ಮೇಳನವು ಈ ಬಾರಿ ವಿಶೇಷವಾಗಿ ಕಡೂರಿಗೆ 21ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡದ ಕೆಲಸಕ್ಕೆ ಎಲ್ಲರ ವಿಶ್ವಾಸವನ್ನು ಪಡೆದು ಸಮ್ಮೇಳನದ ಯಶಸ್ವಿಗೆ ಒತ್ತುಕೊಡಲಾಗುತ್ತದೆ. ಮುಖ್ಯವಾಗಿ ಸಮ್ಮೇಳನಾಧ್ಯಕ್ಷರನ್ನಾಗಿ ಶೋಷಿತ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಬೇಕೆಂಬುದು ಸಮಿತಿಯ ಒಕ್ಕೂರಲ ಅಭಿಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸುವ ಮೂಲಕ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಿ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷರಾದ ಚಿಕ್ಕನಲ್ಲೂರು ಪರಮೇಶ್, ರವಿದಳವಾಯಿ, ಯರದಕೆರೆ ರಾಜಪ್ಪ, ಸಿಂಗಟಗೆರೆ ಸಿದ್ದಪ್ಪ, ಸೀತಾಲಕ್ಷಿö್ಮÃ, ಟಿ.ಆರ್. ರೇಣುಕಯ್ಯ, ಗೋವಿಂದಸ್ವಾಮಿ, ಕೆ.ಜಿ. ವಸಂತಕುಮಾರ್, ಪುರಸಭೆ ಮಾಜಿ ಸದಸ್ಯ ಗೋವಿಂದರಾಜು, ಗೆದ್ಲೇಹಳ್ಳಿ ಜಗದೀಶ್, ಎನ್.ಎಚ್. ನಂಜುAಡಸ್ವಾಮಿ, ಷಣ್ಮುಖಪ್ಪ, ನಾಗರಾಜ್, ಆರ್.ಜಿ. ಕೃಷ್ಣಸ್ವಾಮಿ, ಹಿರೇನಲ್ಲೂರು ಶ್ರೀನಿವಾಸ್, ಶಿವಲಿಂಗಸ್ವಾಮಿ ಮತ್ತಿತರಿದ್ದರು.
    4
    ಕಡೂರು : ಬಹುತೇಕ ಮಾರ್ಚ್ ತಿಂಗಳಲ್ಲಿ ಕಡೂರಿನಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ  ಸಮ್ಮೇಳನದ ಪೂರ್ವಭಾವಿ ಸಿದ್ದತೆಯ ಮೊದಲ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ವಿಗೆ ಒತ್ತುಕೊಡಲಾಗಿದೆ. ಈಗಾಗಲೇ ಸಮ್ಮೇಳನಾಧ್ಯಕ್ಷರ ಆಯ್ಕೆಯ ಕುರಿತು ಜಿಲ್ಲೆಯ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತ ನಿರ್ಣಯದೊಂದಿಗೆ ಆಯ್ಕೆಗೊಳಿಸಲಾಗುತ್ತದೆ. ಸಮ್ಮೇಳನದ ಮಹಾಪೋಷಕರಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಚಿಕ್ಕಮಗಳೂರು, ಹಾಸನ ಕ್ಷೇತ್ರದ ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರುಗಳನ್ನು ಮತ್ತು ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರನ್ನು ಸಮಿತಿಯ ಪೋಷಕರನ್ನಾಗಿ ಆಯ್ಕೆಗೊಳಿಸಲಾಗಿದೆ. ಕ್ಷೇತ್ರದ ಮಾಜಿ ಶಾಸಕರು ಒಳಗೊಂಡAತೆ ವಿವಿಧ ಉಪಸಮಿತಿಗಳಲ್ಲಿ ಪದಾಧಿಕಾರಿಗಳನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರ ನೇತೃತ್ವ ಹಾಗೂ ಸ್ವಾಗತಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ಸಿದ್ದತೆ ಕಾರ್ಯಗಳನ್ನು ನಡೆಸಲಾಗುತ್ತದೆ ಎಂದರು. 
ಈ ಬಾರಿಯ ಸಮ್ಮೇಳನದಲ್ಲಿ ಅಂತರಾಷ್ಟಿçÃಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನುಮುಷ್ತಾಕ್ ಅವರನ್ನು ಆಹ್ವಾನಿಸಲಾಗುತ್ತದೆ. ಶೋಷಿತ ಸಮುದಾಯದ ಜಿಲ್ಲೆಯ ಸೂಕ್ತ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಲು ಪೂರ್ವಭಾವಿ ಸಭೆಯಲ್ಲಿ ಆಶಯವ್ಯಕ್ತಗೊಂಡಿದ್ದು, ಫೆ.22ರಂದು ಎನ್.ಆರ್.ಪುರದಲ್ಲಿ ನಡೆಯುವ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅಂತಿಮವಾಗಿ ಆಯ್ಕೆಗೊಳಿಸಲಾಗುತ್ತದೆ ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಈ ಹಿಂದೆ ತಾಲ್ಲೂಕಿನ ಚಟ್ನಳ್ಳಿ ಹಾಗೂ ಬೀರೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಮ್ಮೇಳನವು ಈ ಬಾರಿ ವಿಶೇಷವಾಗಿ ಕಡೂರಿಗೆ 21ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡದ ಕೆಲಸಕ್ಕೆ ಎಲ್ಲರ ವಿಶ್ವಾಸವನ್ನು ಪಡೆದು ಸಮ್ಮೇಳನದ ಯಶಸ್ವಿಗೆ ಒತ್ತುಕೊಡಲಾಗುತ್ತದೆ. ಮುಖ್ಯವಾಗಿ ಸಮ್ಮೇಳನಾಧ್ಯಕ್ಷರನ್ನಾಗಿ ಶೋಷಿತ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಬೇಕೆಂಬುದು ಸಮಿತಿಯ ಒಕ್ಕೂರಲ ಅಭಿಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸುವ ಮೂಲಕ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಿ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷರಾದ ಚಿಕ್ಕನಲ್ಲೂರು ಪರಮೇಶ್, ರವಿದಳವಾಯಿ, ಯರದಕೆರೆ ರಾಜಪ್ಪ, ಸಿಂಗಟಗೆರೆ ಸಿದ್ದಪ್ಪ, ಸೀತಾಲಕ್ಷಿö್ಮÃ, ಟಿ.ಆರ್. ರೇಣುಕಯ್ಯ, ಗೋವಿಂದಸ್ವಾಮಿ, ಕೆ.ಜಿ. ವಸಂತಕುಮಾರ್, ಪುರಸಭೆ ಮಾಜಿ ಸದಸ್ಯ ಗೋವಿಂದರಾಜು, ಗೆದ್ಲೇಹಳ್ಳಿ ಜಗದೀಶ್, ಎನ್.ಎಚ್. ನಂಜುAಡಸ್ವಾಮಿ, ಷಣ್ಮುಖಪ್ಪ, ನಾಗರಾಜ್, ಆರ್.ಜಿ. ಕೃಷ್ಣಸ್ವಾಮಿ, ಹಿರೇನಲ್ಲೂರು ಶ್ರೀನಿವಾಸ್, ಶಿವಲಿಂಗಸ್ವಾಮಿ ಮತ್ತಿತರಿದ್ದರು.
    user_Kadur News
    Kadur News
    ಪತ್ರಕರ್ತ Kadur, Chikkamagaluru•
    5 hrs ago
  • ಜಾನುಕೊಂಡ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಿಡಿಓ ಗೆ‌ ಸದಸ್ಯನೊಬ್ಬ ಅವಾಚ್ಯ ಶಬ್ದಗಳಿಂದ‌ ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ವೀಡಿಯೋ ವೈರಲ್ ಆಗಿದೆ.‌ ಇನ್ನೂ ಜಾನುಕೊಂಡ ಗ್ರಾಮ ಪಂಚಾಯತಿ ಸದಸ್ಯ ಚಂದ್ರು ಅವರು ಜಾನುಕೊಂಡ ಗ್ರಾಮ ಪಂಚಾಯಿತಿ ಪಿಡಿಒ  ಮುಕುಂದ ಅವರಿಗೆ ಅಸಂಭ್ಯವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವ ವಿಡಿಯೋ ಎಲ್ಲೆಡೆ ವೈರಲಾಗುತ್ತಿದೆ
    1
    ಜಾನುಕೊಂಡ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಿಡಿಓ ಗೆ‌ ಸದಸ್ಯನೊಬ್ಬ ಅವಾಚ್ಯ ಶಬ್ದಗಳಿಂದ‌ ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ವೀಡಿಯೋ ವೈರಲ್ ಆಗಿದೆ.‌ ಇನ್ನೂ
ಜಾನುಕೊಂಡ ಗ್ರಾಮ ಪಂಚಾಯತಿ ಸದಸ್ಯ ಚಂದ್ರು ಅವರು ಜಾನುಕೊಂಡ ಗ್ರಾಮ ಪಂಚಾಯಿತಿ ಪಿಡಿಒ  ಮುಕುಂದ ಅವರಿಗೆ ಅಸಂಭ್ಯವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವ ವಿಡಿಯೋ ಎಲ್ಲೆಡೆ ವೈರಲಾಗುತ್ತಿದೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಚತ್ರದುರ್ಗ :ಮುಖ್ಯಮಂತ್ರಿ ಸಿದ್ದರಾಮಯ್ಯ ಇವರನ್ನ ಭೇಟಿ ಮಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನಕ್ಕೆ ನಾವು ಮನವಿ ಮಾಡಿದ್ದೇವು. ನಮ್ಮ ಮನವಿಗೆ ಸಿಎಂ ಸಿದ್ಧರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಚಿತ್ರದುರ್ಗ ಉಸ್ತುವಾರಿ ಸಚಿವ ಡಿ ಸುಧಾಕರ್ ‌ಹೇಳಿದ್ದಾರೆ. ಇಂದು ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಶಾಸಕರ ಪ್ರವಾಸದ ಬಗ್ಗೆ ಮಾಧ್ಯಮದ ಪ್ರತಿನಿಧಿಗಳು ಕೇಳಿದಾಗ. ಕೈ ಶಾಸಕ ಖಾಸಗಿತಾಗಿ ವಿದೇಶ ಪ್ರವಾಸ ಹೋಗುತ್ತಿದ್ದಾರೆ ಶಾಸಕರ ಪ್ರವಾಸದ ಬಗ್ಗೆ ಅನುಮಾನ ಪಡುವ ಅಗತ್ಯ ಇಲ್ಲ ಎಂದಿದ್ದಾರೆ..
    1
    ಚತ್ರದುರ್ಗ :ಮುಖ್ಯಮಂತ್ರಿ  ಸಿದ್ದರಾಮಯ್ಯ ಇವರನ್ನ  ಭೇಟಿ ಮಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನಕ್ಕೆ ನಾವು ಮನವಿ ಮಾಡಿದ್ದೇವು. ನಮ್ಮ ಮನವಿಗೆ ಸಿಎಂ ಸಿದ್ಧರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಚಿತ್ರದುರ್ಗ ಉಸ್ತುವಾರಿ ಸಚಿವ ಡಿ ಸುಧಾಕರ್ ‌ಹೇಳಿದ್ದಾರೆ. ಇಂದು ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಶಾಸಕರ ಪ್ರವಾಸದ ಬಗ್ಗೆ ಮಾಧ್ಯಮದ ಪ್ರತಿನಿಧಿಗಳು ಕೇಳಿದಾಗ.
ಕೈ ಶಾಸಕ ಖಾಸಗಿತಾಗಿ ವಿದೇಶ ಪ್ರವಾಸ ಹೋಗುತ್ತಿದ್ದಾರೆ
ಶಾಸಕರ ಪ್ರವಾಸದ ಬಗ್ಗೆ ಅನುಮಾನ ಪಡುವ ಅಗತ್ಯ ಇಲ್ಲ ಎಂದಿದ್ದಾರೆ..
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    4 hrs ago
  • ಸಮರ್ಥ ಶಿವಯೋಗಿ ಕಾಗಿನಲ್ಲಿ ಎಂಬ ಆರು ವರ್ಷದ ಬಾಲಕ ಗುತ್ತಲ ಪಟ್ಟಣದಿಂದ ಕುರವತ್ತಿ ಬಸವೇಶ್ವರ ರಥೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆಯನ್ನು 2. ತಾಸು 30 ನಿಮಿಷ್ಯಕ್ಕೆ ಕುರವತ್ತಿ ತಲುಪಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
    4
    ಸಮರ್ಥ ಶಿವಯೋಗಿ ಕಾಗಿನಲ್ಲಿ  ಎಂಬ ಆರು ವರ್ಷದ ಬಾಲಕ ಗುತ್ತಲ ಪಟ್ಟಣದಿಂದ ಕುರವತ್ತಿ ಬಸವೇಶ್ವರ ರಥೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆಯನ್ನು 2. ತಾಸು 30 ನಿಮಿಷ್ಯಕ್ಕೆ ಕುರವತ್ತಿ ತಲುಪಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
    user_GURUSHANTH HIREMATH
    GURUSHANTH HIREMATH
    ಪತ್ರಕರ್ತ ಹಾವೇರಿ, ಹಾವೇರಿ, ಕರ್ನಾಟಕ•
    17 hrs ago
  • Post by ಚಂದು ಕನ್ನಡಿಗ ಚಳ್ಳಕೆರೆ
    1
    Post by ಚಂದು ಕನ್ನಡಿಗ ಚಳ್ಳಕೆರೆ
    user_ಚಂದು ಕನ್ನಡಿಗ ಚಳ್ಳಕೆರೆ
    ಚಂದು ಕನ್ನಡಿಗ ಚಳ್ಳಕೆರೆ
    ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    21 hrs ago
  • ಮೆಜೆಸ್ಟಿಕ್‌ನಿಂದ ದೂರದ ಊರುಗಳಿಗೆ ಪ್ರಯಾಣಿಸುವ ಸಾರ್ವಜನಿಕರೇ ಗಮನಿಸಿ. ನಿಮ್ಮ ಪ್ರಯಾಣದ ಹಾದಿಯಲ್ಲಿ ಬಾಯಾರಿಕೆ ಅಥವಾ ಹಸಿವು ನೀಗಿಸಿಕೊಳ್ಳಲು ನೀವು ಕೊಳ್ಳುವ ಹಣ್ಣುಗಳು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! ವ್ಯಾಪಾರಿಗಳು ಕೊಳೆತ ಸ್ಥಿತಿಯಲ್ಲಿರುವ ಸೌತೆಕಾಯಿ ಹಾಗೂ ಅನಾನಸ್ ಹಣ್ಣುಗಳನ್ನು ಆಯ್ದುಕೊಳ್ಳುತ್ತಾರೆ. ಇವುಗಳ ಕೆಟ್ಟ ಭಾಗಗಳನ್ನು ಕತ್ತರಿಸಿ ಹಾಕಿ, ಉಳಿದ ಭಾಗಗಳನ್ನು ಸಣ್ಣ ತುಂಡುಗಳಾಗಿ ಮಾಡಿ ಆಕರ್ಷಕವಾಗಿ ಕಾಣುವಂತೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ​ಈ ಹಣ್ಣುಗಳನ್ನು ಮಾರಾಟ ಮಾಡುವವರು ಕನಿಷ್ಠ ನೈರ್ಮಲ್ಯದ ಜ್ಞಾನವನ್ನೂ ಹೊಂದಿರುವುದಿಲ್ಲ. ಶೌಚಾಲಯದ ಬಳಕೆಯ ನಂತರ ಸರಿಯಾಗಿ ಕೈ ತೊಳೆಯದೆ, ಅದೇ ಅಶುದ್ಧ ಕೈಗಳಿಂದ ಹಣ್ಣುಗಳನ್ನು ಕತ್ತರಿಸಿ ಪ್ಯಾಕ್ ಮಾಡಲಾಗುತ್ತಿದೆ. ಇದು ನೇರವಾಗಿ ಮಾರಕ ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಹರಡಲು ಕಾರಣವಾಗುತ್ತಿದೆ.ಪ್ಲಾಸ್ಟಿಕ್ ಕವರ್‌ಗಳಲ್ಲಿ ದೀರ್ಘಕಾಲ ಇಟ್ಟಿರುವ ಇಂತಹ ಅಶುದ್ಧ ಹಣ್ಣುಗಳನ್ನು ಸೇವಿಸುವುದರಿಂದ ಕಾಲರಾ, ಟೈಫಾಯ್ಡ್, ವಾಂತಿ-ಭೇದಿ ಹಾಗೂ ಫುಡ್ ಪಾಯಿಸನಿಂಗ್ (Food Poisoning) ಆಗುವ ಸಾಧ್ಯತೆ ದಟ್ಟವಾಗಿದೆ.ದೂರದ ಪ್ರಯಾಣದ ಸಮಯದಲ್ಲಿ ಇದು ಪ್ರಯಾಣಿಕರನ್ನು ತೀವ್ರ ಸಂಕಷ್ಟಕ್ಕೆ ಈಡುಮಾಡಬಹುದು. ​ಕೇವಲ 2 ರೂಪಾಯಿ ಬೆಲೆಗೂ ಯೋಗ್ಯವಲ್ಲದ ಇಂತಹ ಕಳಪೆ ಗುಣಮಟ್ಟದ ಹಣ್ಣಿನ ಪ್ಯಾಕೆಟ್‌ಗಳನ್ನು ಕಿಟಕಿಯ ಬಳಿ 20 ರಿಂದ 30 ರೂಪಾಯಿಗಳಿಗೆ ಮಾರಾಟ ಮಾಡುವ ಮೂಲಕ ಸಾರ್ವಜನಿಕರನ್ನು ಆರ್ಥಿಕವಾಗಿ ಲೂಟಿ ಮಾಡಲಾಗುತ್ತಿದೆ. ರಸ್ತೆ ಬದಿಯಲ್ಲಿ ಅಥವಾ ಸಿಗ್ನಲ್‌ಗಳಲ್ಲಿ ಕತ್ತರಿಸಿ ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿದ ಹಣ್ಣುಗಳನ್ನು ಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿ.ಸಾಧ್ಯವಾದಷ್ಟು ಮನೆಯಿಂದಲೇ ಪೂರ್ತಿಯಾದ ಹಣ್ಣುಗಳನ್ನು ಅಥವಾ ಶುದ್ಧವಾದ ಕುಡಿಯುವ ನೀರನ್ನು ಕೊಂಡೊಯ್ಯುವುದು ಉತ್ತಮ. ನಿಮ್ಮ ಸಹ-ಪ್ರಯಾಣಿಕರು ಇಂತಹ ಹಣ್ಣುಗಳನ್ನು ಕೊಳ್ಳುತ್ತಿದ್ದರೆ, ಅವರಿಗೆ ಆಗಬಹುದಾದ ಆರೋಗ್ಯದ ಅಪಾಯದ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿ. ​ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುವುದು ತಪ್ಪಲ್ಲ, ಆದರೆ ಅಶುದ್ಧ ಆಹಾರವನ್ನು ಮಾರಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದು ಖಂಡನೀಯ. ಸಾರ್ವಜನಿಕರಾದ ನಾವು ಎಚ್ಚೆತ್ತುಕೊಂಡಾಗ ಮಾತ್ರ ಇಂತಹ ವಂಚನೆಗಳಿಗೆ ಅಂತಿಮ ತೆರೆ ಎಳೆಯಲು ಸಾಧ್ಯ. ನ್ಯೂಸ್ : ಅರ್ಜುನ್ ಬ್ಯಾಡರಹಳ್ಳಿ 🙏
    1
    ಮೆಜೆಸ್ಟಿಕ್‌ನಿಂದ ದೂರದ ಊರುಗಳಿಗೆ ಪ್ರಯಾಣಿಸುವ ಸಾರ್ವಜನಿಕರೇ ಗಮನಿಸಿ. ನಿಮ್ಮ ಪ್ರಯಾಣದ ಹಾದಿಯಲ್ಲಿ ಬಾಯಾರಿಕೆ ಅಥವಾ ಹಸಿವು ನೀಗಿಸಿಕೊಳ್ಳಲು ನೀವು ಕೊಳ್ಳುವ ಹಣ್ಣುಗಳು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ವ್ಯಾಪಾರಿಗಳು ಕೊಳೆತ ಸ್ಥಿತಿಯಲ್ಲಿರುವ ಸೌತೆಕಾಯಿ ಹಾಗೂ ಅನಾನಸ್ ಹಣ್ಣುಗಳನ್ನು ಆಯ್ದುಕೊಳ್ಳುತ್ತಾರೆ. ಇವುಗಳ ಕೆಟ್ಟ ಭಾಗಗಳನ್ನು ಕತ್ತರಿಸಿ ಹಾಕಿ, ಉಳಿದ ಭಾಗಗಳನ್ನು ಸಣ್ಣ ತುಂಡುಗಳಾಗಿ ಮಾಡಿ ಆಕರ್ಷಕವಾಗಿ ಕಾಣುವಂತೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ.
​ಈ ಹಣ್ಣುಗಳನ್ನು ಮಾರಾಟ ಮಾಡುವವರು ಕನಿಷ್ಠ ನೈರ್ಮಲ್ಯದ ಜ್ಞಾನವನ್ನೂ ಹೊಂದಿರುವುದಿಲ್ಲ. ಶೌಚಾಲಯದ ಬಳಕೆಯ ನಂತರ ಸರಿಯಾಗಿ ಕೈ ತೊಳೆಯದೆ, ಅದೇ ಅಶುದ್ಧ ಕೈಗಳಿಂದ ಹಣ್ಣುಗಳನ್ನು ಕತ್ತರಿಸಿ ಪ್ಯಾಕ್ ಮಾಡಲಾಗುತ್ತಿದೆ. 
ಇದು ನೇರವಾಗಿ ಮಾರಕ ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಹರಡಲು ಕಾರಣವಾಗುತ್ತಿದೆ.ಪ್ಲಾಸ್ಟಿಕ್ ಕವರ್‌ಗಳಲ್ಲಿ ದೀರ್ಘಕಾಲ ಇಟ್ಟಿರುವ ಇಂತಹ ಅಶುದ್ಧ ಹಣ್ಣುಗಳನ್ನು ಸೇವಿಸುವುದರಿಂದ ಕಾಲರಾ, ಟೈಫಾಯ್ಡ್, ವಾಂತಿ-ಭೇದಿ ಹಾಗೂ ಫುಡ್ ಪಾಯಿಸನಿಂಗ್ (Food Poisoning) ಆಗುವ ಸಾಧ್ಯತೆ ದಟ್ಟವಾಗಿದೆ.ದೂರದ ಪ್ರಯಾಣದ ಸಮಯದಲ್ಲಿ ಇದು ಪ್ರಯಾಣಿಕರನ್ನು ತೀವ್ರ ಸಂಕಷ್ಟಕ್ಕೆ ಈಡುಮಾಡಬಹುದು.
​ಕೇವಲ 2 ರೂಪಾಯಿ ಬೆಲೆಗೂ ಯೋಗ್ಯವಲ್ಲದ ಇಂತಹ ಕಳಪೆ ಗುಣಮಟ್ಟದ ಹಣ್ಣಿನ ಪ್ಯಾಕೆಟ್‌ಗಳನ್ನು ಕಿಟಕಿಯ ಬಳಿ 20 ರಿಂದ 30 ರೂಪಾಯಿಗಳಿಗೆ ಮಾರಾಟ ಮಾಡುವ ಮೂಲಕ ಸಾರ್ವಜನಿಕರನ್ನು ಆರ್ಥಿಕವಾಗಿ ಲೂಟಿ ಮಾಡಲಾಗುತ್ತಿದೆ.
ರಸ್ತೆ ಬದಿಯಲ್ಲಿ ಅಥವಾ ಸಿಗ್ನಲ್‌ಗಳಲ್ಲಿ ಕತ್ತರಿಸಿ ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿದ ಹಣ್ಣುಗಳನ್ನು ಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿ.ಸಾಧ್ಯವಾದಷ್ಟು ಮನೆಯಿಂದಲೇ ಪೂರ್ತಿಯಾದ ಹಣ್ಣುಗಳನ್ನು ಅಥವಾ ಶುದ್ಧವಾದ ಕುಡಿಯುವ ನೀರನ್ನು ಕೊಂಡೊಯ್ಯುವುದು ಉತ್ತಮ. ನಿಮ್ಮ ಸಹ-ಪ್ರಯಾಣಿಕರು ಇಂತಹ ಹಣ್ಣುಗಳನ್ನು ಕೊಳ್ಳುತ್ತಿದ್ದರೆ, ಅವರಿಗೆ ಆಗಬಹುದಾದ ಆರೋಗ್ಯದ ಅಪಾಯದ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿ.
​ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುವುದು ತಪ್ಪಲ್ಲ, ಆದರೆ ಅಶುದ್ಧ ಆಹಾರವನ್ನು ಮಾರಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುವುದು ಖಂಡನೀಯ. ಸಾರ್ವಜನಿಕರಾದ ನಾವು ಎಚ್ಚೆತ್ತುಕೊಂಡಾಗ ಮಾತ್ರ ಇಂತಹ ವಂಚನೆಗಳಿಗೆ ಅಂತಿಮ ತೆರೆ ಎಳೆಯಲು ಸಾಧ್ಯ.
ನ್ಯೂಸ್ : ಅರ್ಜುನ್ ಬ್ಯಾಡರಹಳ್ಳಿ 🙏
    user_Power focus
    Power focus
    ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    4 hrs ago
  • ತೀರ್ಥಹಳ್ಳಿ: ತಾಲೂಕಿನ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಬೆಳಿಗ್ಗೆ ಅಪಘಾತವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿರುವುದಿಲ್ಲ ಎಂಬುದು ತಿಳಿದು ಬಂದಿದೆ.
    1
    ತೀರ್ಥಹಳ್ಳಿ: ತಾಲೂಕಿನ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಬೆಳಿಗ್ಗೆ ಅಪಘಾತವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿರುವುದಿಲ್ಲ ಎಂಬುದು ತಿಳಿದು ಬಂದಿದೆ.
    user_ರಶ್ಮಿ ಶ್ರೀಕಾಂತ್ ನಾಯಕ್
    ರಶ್ಮಿ ಶ್ರೀಕಾಂತ್ ನಾಯಕ್
    Local News Reporter ತೀರ್ಥಹಳ್ಳಿ, ಶಿವಮೊಗ್ಗ, ಕರ್ನಾಟಕ•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.