ಸುಟ್ಟು ಹೋದ ಮನೆಗಳಿಗೆ ಸರ್ಕಾರ ಹೆಚ್ಚಿನ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡುವಂತೆ ಸದನದಲ್ಲಿ ಶಾಸಕ ಕೆ.ಎಸ್. ಆನಂದ್ ಒತ್ತಾಯ ಕಡೂರು: ವಿಧಾನ ಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಬೆಂಕಿ ಅವಘಡದಲ್ಲಿ ಸುಟ್ಟು ಹೋದ ಮನೆಗಳಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಆದರೆ ಅಗ್ನಿ ಅವಘಡ ಯಾಕೆ ಆಯಿತು ಎಂಬ ಕಾರಣ ತಿಳಿಯದೆ ಮನೆಗಳು ಸುಟ್ಟು ಹೋದಾಗ ಜನರಿಗೆ ಪರಿಹಾರ ದೊರೆಯದೇ ಅತ್ಯಂತ ಕಷ್ಟವಾಗುತ್ತಿದ್ದು ಮನೆ ಸುಟ್ಟು ಹೋಗಲು ಸ್ಪಷ್ಟ ಕಾರಣ ತಿಳಿಯದೇ ಹೋದಾಗ ಕೂಡಾ ಆ ಮನೆಗಳಿಗೆ ಎಸ್ಡಿಆರ್ ಎಫ್ ಹಾಗೂ ಎನ್ ಡಿ ಆರ್ ಎಫ್ ಮೂಲಕ ಪರಿಹಾರ ನೀಡಬೇಕಾಗಿ ಸದನದಲ್ಲಿ ಮನವಿ ಮಾಡಿದರು. ಕಳೆದ ಆರು ತಿಂಗಳಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತಗಳಿಗೆ ಸುಮಾರು 7 ಮನೆಗಳು ಸುಟ್ಟು ಹೋಗಿದ್ದು ಈ ರೀತಿ ಬೆಂಕಿ ಅವಘಡಗಳಿಗೆ ಸುಟ್ಟು ಹೋದ ಮನೆಗಳಿಗೆ ಸರ್ಕಾರ ಹೆಚ್ಚಿನ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಬೇಕಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಲ್ಲಿ ಒತ್ತಾಯಿಸಿದರು.
ಸುಟ್ಟು ಹೋದ ಮನೆಗಳಿಗೆ ಸರ್ಕಾರ ಹೆಚ್ಚಿನ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡುವಂತೆ ಸದನದಲ್ಲಿ ಶಾಸಕ ಕೆ.ಎಸ್. ಆನಂದ್ ಒತ್ತಾಯ ಕಡೂರು: ವಿಧಾನ ಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಬೆಂಕಿ ಅವಘಡದಲ್ಲಿ ಸುಟ್ಟು ಹೋದ ಮನೆಗಳಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಆದರೆ ಅಗ್ನಿ ಅವಘಡ ಯಾಕೆ ಆಯಿತು ಎಂಬ ಕಾರಣ ತಿಳಿಯದೆ ಮನೆಗಳು ಸುಟ್ಟು ಹೋದಾಗ ಜನರಿಗೆ ಪರಿಹಾರ ದೊರೆಯದೇ ಅತ್ಯಂತ ಕಷ್ಟವಾಗುತ್ತಿದ್ದು ಮನೆ ಸುಟ್ಟು ಹೋಗಲು ಸ್ಪಷ್ಟ ಕಾರಣ ತಿಳಿಯದೇ ಹೋದಾಗ ಕೂಡಾ ಆ ಮನೆಗಳಿಗೆ ಎಸ್ಡಿಆರ್ ಎಫ್ ಹಾಗೂ ಎನ್ ಡಿ ಆರ್ ಎಫ್ ಮೂಲಕ ಪರಿಹಾರ ನೀಡಬೇಕಾಗಿ ಸದನದಲ್ಲಿ ಮನವಿ ಮಾಡಿದರು. ಕಳೆದ ಆರು ತಿಂಗಳಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತಗಳಿಗೆ ಸುಮಾರು 7 ಮನೆಗಳು ಸುಟ್ಟು ಹೋಗಿದ್ದು ಈ ರೀತಿ ಬೆಂಕಿ ಅವಘಡಗಳಿಗೆ ಸುಟ್ಟು ಹೋದ ಮನೆಗಳಿಗೆ ಸರ್ಕಾರ ಹೆಚ್ಚಿನ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಬೇಕಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಲ್ಲಿ ಒತ್ತಾಯಿಸಿದರು.
- ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ನೇತೃತ್ವದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ರಂಝಾನ್ ಹಬ್ಬದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವು ಸಂತ ಅಲೋಶಿಯಸ್ ಕಾಲೇಜಿನ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕ್ಯಾಸ್ಟಲಿನೋ, ಬಿಎಂ ರೋಹಿಣಿ, ಮಾಜಿ ಮೇಯರ್ ಕೆ. ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ಸರ್ವಧರ್ಮೀಯರು ಸೇರಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.1
- ಚಳ್ಳಕೆರೆ, ಮಾ.10 : ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವಂತೆ ಆಗ್ರಹಿಸಿ ಡಿಸಿ ಕಚೇರಿ ಬಳಿ ಉಪವಾಸ ಕೈಗೊಂಡಿದ್ದ ರೈತನಾಯಕ ತಿಪ್ಪೇಸ್ವಾಮಿ ತೀವ್ರ ಅಸ್ವಸ್ಥರಾಗಲು ಜಿಲ್ಲಾಧಿಕಾರಿ ಅವರೇ ನೇರ ಹೊಣೆ ಎಂದು ಆರೋಪಿಸಿ ರೈತಸಂಘದ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು. ತಾಲ್ಲೂಕಿನ ಗರಣಿ ಕ್ರಾಸ್ ಬಳಿ ಮಂಗಳವಾರ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ ರೈತರು ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಕೂದಲೆಳೆ ಅಂತರದಲ್ಲಿಯೇ ರೈತಸಂಘದ ಕಾರ್ಯಕರ್ತರು ಮಾ.2ರಂದು ಉಪವಾಸ ಆರಂಭಿಸಿ ಐದು ದಿನಗಳ ಕಾಲ ಮುಂದುವರಿಸಿದ್ದರೂ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ಮನವೊಲಿಸುವ ಸಣ್ಣ ಪ್ರಯತ್ನವನ್ನೇ ಮಾಡಲಿಲ್ಲ ಎಂದು ದೂರಿದರು. ಪ್ರತಿದಿನ ವಿವಿಧ ಸಂಘಟನೆಗಳು ಆಗಮಿಸಿ ಬೆಂಬಲ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಆಗ್ರಹಿಸಿದರು ಸರ್ವಾಧಿಕಾರಿ ರೀತಿ ವರ್ತಿಸಿದ್ದಾರೆ. ಪರಿಣಾಮ ರೈತನಾಯಕ ಉಪವಾಸ ಸತ್ಯಾಗ್ರಹದಿಂದ ಕುಸಿದುಬಿದ್ದು ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಸ್ತçಚಿಕಿತ್ಸೆಗೆ 15 ಲಕ್ಷ ರೂ. ವೆಚ್ಚವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ತಿಪ್ಪೇಸ್ವಾಮಿ ಅವರ ಆರೋಗ್ಯ ವಿಚಾರಿಸುವ ಮಾನವೀಯತೆಯನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು ಮಾಡಿಲ್ಲದಿರುವುದು ಹೋರಾಟಗಾರರಿಗೆ ಅಪಮಾನ ಮಾಡುವ ನಡೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಸಾರ್ವಜನಿಕರ ಸಂಕಷ್ಟ, ಹೋರಾಟಗಾರರ ಕೂಗಿಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ, ಐದು ದಿನಗಳಿಂದ ಉಪವಾಸ ನಿರತರಾಗಿದ್ದ ತಿಪ್ಪೇಸ್ವಾಮಿ ಅವರನ್ನು ಅತ್ಯಂತ ಅಪಮಾನಕರವಾಗಿ ಜಿಲ್ಲಾಧಿಕಾರಿ ನಡೆಸಿಕೊಂಡಿದ್ದಾರೆ. ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸದ ಪರಿಣಾಮ ಉಪವಾಸ ಮುಂದುವರಿಸಿದ್ದೇ ಅನಾರೋಗ್ಯಕ್ಕೆ ಒಳಗಾಗಲು ಮುಖ್ಯ ಕಾರಣ ಎಂದರು. ರೈತನಾಯಕ ಅನಾರೋಗ್ಯಕ್ಕೆ ಒಳಗಾಗಲಿ ಎಂಬ ಉದ್ದೇಶದಿಂದಲೇ ಅವರು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿಲ್ಲವೆಂಬ ಸಂಶಯ ಮೂಡುತ್ತದೆ. ಇದೊಂದು ಸರ್ಕಾರಿ ವ್ಯವಸ್ಥೆ ಪರೋಕ್ಷವಾಗಿ ಕೊಲೆ ಯತ್ನ ನಡೆಸಿದೆ ಎಂದು ದೂರಿದರು. ಆಸ್ಪತ್ರೆಗೆ ಸೇರಿ ಐದು ದಿನಗಳಾಗಿದ್ದರೂ ಇಲ್ಲಿಯವರೆಗೂ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಆತ್ಮಸ್ಥೆöÊರ್ಯ ತುಂಬುವ ಕೆಲಸ ಅಧಿಕಾರಿಗಳು ಮಾಡಿಲ್ಲ. ಅಧಿಕಾರಿಗಳ ನಡೆ ಉದ್ಧಟನದಿಂದ ಕೂಡಿದೆ. ಇಂತಹ ಡಿಸಿಯನ್ನು ಯಾವುದೇ ಕಾರಣಕ್ಕೂ ಚಿತ್ರದುರ್ಗದಲ್ಲಿ ಇರಲು ಬಿಡಬಾರದು ಎಂದರು. ಟಿ.ವೆAಕಟೇಶ್ ಜಿಲ್ಲೆಗೆ ಆಗಮಿಸಿ ಎರಡೂವರೆ ವರ್ಷ ಆಗಿದ್ದರೂ ಇಲ್ಲಿಯವರೆಗೂ ಯಾವ ಕಾರಣಕ್ಕೆ ಅವರನ್ನೇ ಮುಂದುವರಿಸಲಾಗುತ್ತಿದೆ ಎಂದು ಪ್ರಶ್ನೀಸಿದ ಬಸವರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಟಿಎಂ ರೀತಿ ಬೆಂಬಲವಾಗಿ ನಿಂತಿದ್ದಾರೆ. ಈ ಕಾರಣಕ್ಕೆ ವೆಂಕಟೇಶ್ ಅವರನ್ನು ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು. ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಕೊನೇ ಪಕ್ಷ ಹೋರಾಟಗಾರರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಲಿ. ಜಿಲ್ಲೆಯ ಜನರ ಹಿತಕ್ಕಾಗಿ ಯಾವುದೇ ವ್ಯಕ್ತಿ ಚಳವಳಿ ಕೈಗೊಂಡರೇ ಅವರ ಮನವಿ ಆಲಿಸುವ ಬದ್ಧತೆ ಪ್ರದರ್ಶಿಸಲಿ ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಮರ್ಲಹಳ್ಳಿ ರವಿಕುಮಾರ್ ಮಾತನಾಡಿ, ದೇಶಕ್ಕೆ ಅನ್ನ ಕೊಡುವ ರೈತ ಉಪವಾಸ ಕುಳಿತ ತಕ್ಷಣವೇ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಬೇಕಾಗಿತ್ತು. ಆದರೆ, ಅವರು ನಿರ್ಲಕ್ಷö್ಯ ತೋರಿದ್ದರ ಪರಿಣಾಮ ರೈತನಾಯಕ ಕೆ.ಟಿ.ತಿಪ್ಪೇಸ್ವಾಮಿ ಕುಸಿದುಬಿದ್ದು ಆಸ್ಪತ್ರೆ ಸೇರುವಂತಾಗಿದೆ. ಈಗಲಾದರೂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುವ ಮಾನವೀಯತೆ ಪ್ರದರ್ಶಿಸಲಿ ಎಂದು ತಿಳಿಸಿದರು. ತಾಲ್ಲೂಕಾಧ್ಯಕ್ಷ ಮಲ್ಲಸಮುದ್ರ ಗಂಗಾಧರ್, ಮುಖಂಡರಾದ ಸೂರಮ್ಮನಹಳ್ಳಿ ರಾಜಣ್ಣ, ಪ್ರಶಾಂತ್‌ರೆಡ್ಡಿ, ಮಿಠ್ಯಾನಾಯ್ಕ, ಓಬನಾಯ್ಕ್, ಚಂದ್ರಶೇಖರ ನಾಯಕ, ಹೀರೇಹಳ್ಳಿ ತಿಪ್ಪೇಸ್ವಾಮಿ, ಎದ್ದಲು ತಿಪ್ಪೇಸ್ವಾಮಿ, ಪಾಪಯ್ಯ, ಬಸವರಾಜ್, ರಾಜಣ್ಣ ಇತರರಿದ್ದರು. .1
- ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆ ಬಳಿ ಮೃತ ಮಹಿಳೆಯ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಧಾಖಲಾಗಿದ್ದ ಮಹಿಳೆ ಹೆರಿಗೆ ನಂತರ ಮೃತಪಟ್ಟಿದ್ದು ಮಗು ಚಿಕಿತ್ಸೆ ಪಡೆಯುತ್ತಿದ್ದು ಶಿಲ್ಪ ಎಂಬ ಮಹಿಳೆ ಸಾವನ್ನಪ್ಪಿದ್ದು ಮಹಿಳೆ ಸಾವಿಗೆ ವೈದ್ಯರು ಹಾಗೂ ಜಿಲ್ಲಾ ಸರ್ಜನ್ ಅವರೆ ಕಾರಣ ಎಂದು ಆರೋಪಿಸಿದ್ದಾರೆ1
- *ಭಾರತ ನಲ್ಲಿ ವೈರಲ್*1
- ಕರ್ನಾಟಕ ರಾಜ್ಯದಾದ್ಯಂತ ಜಿಲ್ಲಾ ಹಾಗೂ ತಾಲೂಕು ವರದಿಗಾರರು ಬೇಕಾಗಿದ್ದಾರೆ ಆಸಕ್ತಿಯುಳ್ಳ ಅಭ್ಯರ್ಥಿ ಸಂಪರ್ಕಿಸಿ1
- ದಿನಾಂಕ 8/3/2026 ಭಾನುವಾರ ಸಂಜೆ ಸ್ಟಾರ್ ಕಂನ್ಷನ್ ಹಾಲ್ ನಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಹಾಗೂ ಎಸ್ ಎಸ್ ಎಫ್ ತುಮಕೂರು ಶಾಲೆ ವತಿಯಿಂದಗ್ರಾಂಡ್ ಇಫ್ತಾರ್ ಕೋಟ ಆಯೋಜಿಸಲಾಯಿತು ಇಫ್ತಾರ್ ಕೋಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ವೈಕ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲಾನ ಶಫಿ ಸಾದಿ ಅಲ್ ಮರ್ಕಸ್ ಮದೀನ ತುನ್ನೂರ್ ಲಿಲ ಬನಾಥ್ ಅರಬಿಕ್ ಸ್ಕೂಲ್ ಬಗ್ಗೆ ಮಾತನಾಡುತ್ತ ಇದರ ಏಳಿಗೆ ಬಗ್ಗೆ ಪ್ರಶಂಶಿಸಿ ಇದರ ಅಭಿವೃದ್ಧಿಗೆ ಸವನೂರ್ ಕ್ಕ ಗೊಂಡಬೇಕೆಂದರು ತುಮಕೂರಿನಲ್ಲಿ ಅಲ್ ಮರ್ಕಸ್ ಮದೀನಾ ತುನ್ ನೂರ್ ಮೂಲಕ ಶಿಕ್ಷಣ ಕಾಂತಿಯಾಗಿ ಬೇಕು ಎಂದರು1
- ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕೆ ಭಕ್ತರ ಹರಿವು – ಕಾಯಿನ್ ಅಂಟಿಸಿ ಬೇಡಿಕೆ ಈಡೇರಿಕೆಗಾಗಿ ಪ್ರಾರ್ಥನೆ ಹೌದು ಇದು ಚಳ್ಳಕೆರೆ ತಾಲೂಕಿನ ಮಧ್ಯಾಹ್ನದ ಮಾರಮ್ಮ ಎಂದೇ ಖ್ಯಾತಿ ಪಡೆದ ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕಾಗಿ ಮಂಗಳವಾರ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿದರು. ತಮ್ಮ ಇಷ್ಟಾರ್ಥಗಳು ಈಡೇರಲಿ ಎಂಬ ನಂಬಿಕೆಯಿಂದ ಭಕ್ತರು ದೇವಿಯ ಗರ್ಭಗುಡಿಯ ಹಿಂಭಾಗದಲ್ಲಿ ಕಾಯಿನ್ ಅಂಟಿಸುವ ಮೂಲಕ ಅರಕೆ ತೀರಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿತು. ದೇವಿಯ ಕೃಪೆಯಿಂದ ಮನಸಿನ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆಯಿಂದ ಹಲವರು ಈ ವಿಧಿ ಪಾಲಿಸುತ್ತಿದ್ದಾರೆ. ಇದೇ ವೇಳೆ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ತಮ್ಮ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ಮಕ್ಕಳ ಜವಳ, ನಾಮಕರಣ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ ಬಾಡೂಟ ಮಾಡಿಸುವ ಸಂಪ್ರದಾಯವೂ ನಡೆಯುತ್ತಿತ್ತು. ಬಂಧು-ಬಳಗ ಹಾಗೂ ಸ್ನೇಹಿತರನ್ನು ಆಹ್ವಾನಿಸಿ ಊಟ ಬಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.1
- ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಲಿವುಡ್ ನಟ ಅರ್ಜುನ್ ಕಪೂರ್ ಮೂರು ದಿನಗಳಿಂದ ಇರುವುದಾಗಿ ತಿಳಿದುಬಂದಿದೆ. ಮಾರ್ಚ್ 7 ರಂದು ಸುಬ್ರಹ್ಮಣ್ಯ ಕ್ಕೆ ಆಗಮಿಸಿದ್ದ ಅವರು ಮಾರ್ಚ್ 8 ರಂದು ಸರ್ಪ ಸಂಸ್ಕಾರ ಸೇವೆ ನಡೆಸಿದ್ದಾಗಿ ತಿಳಿದು ಬಂದಿದ್ದು, ಮಾರ್ಚ್ 9 ರಂದು ಆಶ್ಲೇಷ ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಸುಬ್ರಹ್ಮಣ್ಯದ ಔರಮ್ ವಸತಿ ಗೃಹದಲ್ಲಿ ತಂಗಿದ್ದ ಅವರನ್ನು ದೇವಾಲಯ ಆಡಳಿತ ಕಛೇರಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಗೌರವಿಸಿದರು. ಈ ಸಂದರ್ಭ ಪಿ.ಆರ್.ಒ ಜಯರಾಮ ರಾವ್, ಮನ್ಮಥ ಬಟ್ಟೋಡಿ, ಪೊಲೀಸ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.1