ಪಾವಗಡ: ರಾಜ ಗಣೇಶ ಉತ್ಸವದ ಲೋಗೋ ಸಂಭ್ರಮದ ಅನಾವರಣಪಟ್ಟಣದ ಪ್ರಸಿದ್ಧ ಮೂರು ಮುಖ ನೆಲದ ಶ್ರೀ ಗಂಗಮ್ಮ ದೇವಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾಗಿರುವ 2ನೇ ವರ್ಷದ '3 ಫೇಸ್ ಲ್ಯಾಂಡ್ ಕಾ. ರಾಜ ಗಣೇಶನ ಉತ್ಸವ'ದ ಅಧಿಕೃತ ಲೋಗೋ ಅನಾವರಣ ಕಾರ್ಯಕ್ರಮವು ಬುಧವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಪಾವಗಡ: ರಾಜ ಗಣೇಶ ಉತ್ಸವದ ಲೋಗೋ ಸಂಭ್ರಮದ ಅನಾವರಣ ಪಾವಗಡ: ಪಟ್ಟಣದ ಪ್ರಸಿದ್ಧ ಮೂರು ಮುಖ ನೆಲದ ಶ್ರೀ ಗಂಗಮ್ಮ ದೇವಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾಗಿರುವ 2ನೇ ವರ್ಷದ '3 ಫೇಸ್ ಲ್ಯಾಂಡ್ ಕಾ. ರಾಜ ಗಣೇಶನ ಉತ್ಸವ'ದ ಅಧಿಕೃತ ಲೋಗೋ ಅನಾವರಣ ಕಾರ್ಯಕ್ರಮವು ಬುಧವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲ್ಪವೃಕ್ಷ ರವಿ ಅವರು ಗಣೇಶೋತ್ಸವದ ವಿಶೇಷ ಲೋಗೋವನ್ನು ಅನಾವರಣಗೊಳಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಚೈತ್ರ ಕೆಇಬಿ ಬಾಬು, ಪ್ರಧಾನ ಅರ್ಚಕರಾದ ಚಿಂಟು ಸ್ವಾಮಿ, ದೇವಸ್ಥಾನ ಸಮಿತಿಯ ಸಮಸ್ತ ಪದಾಧಿಕಾರಿಗಳು ಹಾಗೂ ಪಟ್ಟಣದ ನೂರಾರು ಯುವಕರು, ಭಕ್ತಾದಿಗಳು ಉಪಸ್ಥಿತರಿದ್ದರು. ಪಾವಗಡ ವರದಿ
ಪಾವಗಡ: ರಾಜ ಗಣೇಶ ಉತ್ಸವದ ಲೋಗೋ ಸಂಭ್ರಮದ ಅನಾವರಣಪಟ್ಟಣದ ಪ್ರಸಿದ್ಧ ಮೂರು ಮುಖ ನೆಲದ ಶ್ರೀ ಗಂಗಮ್ಮ ದೇವಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾಗಿರುವ 2ನೇ ವರ್ಷದ '3 ಫೇಸ್ ಲ್ಯಾಂಡ್ ಕಾ. ರಾಜ ಗಣೇಶನ ಉತ್ಸವ'ದ ಅಧಿಕೃತ ಲೋಗೋ ಅನಾವರಣ ಕಾರ್ಯಕ್ರಮವು ಬುಧವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಪಾವಗಡ: ರಾಜ ಗಣೇಶ ಉತ್ಸವದ ಲೋಗೋ ಸಂಭ್ರಮದ ಅನಾವರಣ ಪಾವಗಡ: ಪಟ್ಟಣದ ಪ್ರಸಿದ್ಧ ಮೂರು ಮುಖ ನೆಲದ ಶ್ರೀ ಗಂಗಮ್ಮ ದೇವಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾಗಿರುವ 2ನೇ ವರ್ಷದ '3 ಫೇಸ್ ಲ್ಯಾಂಡ್ ಕಾ. ರಾಜ ಗಣೇಶನ ಉತ್ಸವ'ದ ಅಧಿಕೃತ ಲೋಗೋ ಅನಾವರಣ ಕಾರ್ಯಕ್ರಮವು ಬುಧವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲ್ಪವೃಕ್ಷ ರವಿ ಅವರು ಗಣೇಶೋತ್ಸವದ ವಿಶೇಷ ಲೋಗೋವನ್ನು ಅನಾವರಣಗೊಳಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಚೈತ್ರ ಕೆಇಬಿ ಬಾಬು, ಪ್ರಧಾನ ಅರ್ಚಕರಾದ ಚಿಂಟು ಸ್ವಾಮಿ, ದೇವಸ್ಥಾನ ಸಮಿತಿಯ ಸಮಸ್ತ ಪದಾಧಿಕಾರಿಗಳು ಹಾಗೂ ಪಟ್ಟಣದ ನೂರಾರು ಯುವಕರು, ಭಕ್ತಾದಿಗಳು ಉಪಸ್ಥಿತರಿದ್ದರು. ಪಾವಗಡ ವರದಿ
- ಮೊಳಕಾಲ್ಮುರು: ಭಗವಾನ್ ಶ್ರೀ ಜಿಹ್ವೇಶ್ವರ ಜಯಂತಿ ವಿಜೃಂಭಣೆಯಿಂದ ನೆರವೇರಿತು ಇಂದು ನಮ್ಮ ಸಮಾಜದ ಒಳತಿಗಾಗಿ ಆರ್ಥಿಕತೆ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿ ಹೊಂದಲು , ನಮ್ಮ ಒಗ್ಗಟ್ಟಿನ ಅನಿವಾರ್ಯತೆ ಇದೆ . ಶ್ರೀ ಜೀಹ್ವೇಶ್ವರ ಜಯಂತಿ ನಮ್ಮ ಧಾರ್ಮಿಕ ನೆಲೆ ಹಾಗೂ ಸಮಾಜದಲ್ಲಿ ಅಭಿವೃದ್ಧಿ ಗತಿ ಬಲಪಡಿಸುವ ಹಬ್ಬ.ವಾಗಿದೆ ಎಂದು ಪಟ್ಟಣದ ಸ್ವಕುಳಸಾಳಿ ಸಮಾಜ, ದುರ್ಗಾದೇವಿ ಮಹಿಳಾ ಮಂಡಳಿ, ಜಿಹ್ವೇಶ್ವರ ಯುವಕ ಸಂಘ ಸ್ವಕುಳಸಾಳಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೆಳಗಿನ ಈಶ್ವರ ದೇವಸ್ಥಾನ ಮಂಡಳಿ ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ್ ಜೀಹ್ವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸ್ವಕಳಸಾಳಿ ಸಮಾಜದ ಅಧ್ಯಕ್ಷರಾದ ನರೇಂದ್ರ ಗಾಯಕ್ವಾಡ್ ತಿಳಿಸಿದರು ಮಾತೇಯರಿಂದ ಗಂಗಾಪೂಜೆ, ಭಗವಾನ್ ಜೀಹ್ವೇಶ್ವರ ತೊಟ್ಟಿಲು ಪೂಜೆ, ಹಾಗೂ ಆಶೀರ್ವಾದ ಸ್ವೀಕಾರದ ಮೂಲಕ ದೈವಾನುಗ್ರಹ ಜರುಗಿತು ಭಕ್ತರು ಆಗಮಿಸಿ ಸಾಲು ಸರದಿಯಲ್ಲಿ ನಿಂತು ಭಗವಾನ್ ಜೀಹ್ವೇಶ್ವರ ಮತ್ತು ಪಾಂಡುರಂಗ ಸ್ವಾಮಿಯ ದರ್ಶನ ಪಡೆದರು ತದನಂತರ ಪಟ್ಟಣದ ಪಾಂಡುರಂಗ ದೇವಸ್ಥಾನದಿಂದ ಸ್ವಕುಳ ಸಾಳಿ ಸಮಾಜದ ಆರಾಧ್ಯ ದೈವ ಶ್ರೀ ಜಿಹ್ವೇಶ್ವರ ಜಯಂತಿ ಅಂಗವಾಗಿ ಭಕ್ತಿಪೂರ್ಣ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ಚಾಲನೆ ದೊರಕಿತು. ದೇವರ ಪಲ್ಲಕ್ಕಿ, ನಾದಸ್ವರ, ಡೊಳ್ಳುಕುಣಿತ, ಶ್ರದ್ಧಾವಂತ ಭಕ್ತರು ಮತ್ತು ಮಕ್ಕಳು ಭಾಗವಹಿಸಿದ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಎಲ್ಲೆಡೆ ಭಕ್ತಿಭಾವದ ಮೆರವಣಿಗೆಯಲ್ಲಿ ಯುವಕರ ಉತ್ಸಾಹ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಮಾತೇಯರು ಆರತಿ ಮತ್ತು ಕಳಸದೊಂದಿಗೆ ಆಗಮಿಸಿದ್ದು ವಿಶೇಷ ಗಮನಸೆಳೆದವು. ಮೆರವಣಿಗೆಯ ನಂತರ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನೂರಾರು ಭಕ್ತರಿಗೆ ಭಕ್ತಿಪೂರ್ವಕವಾಗಿ ಭೋಜನ ವಿತರಿಸಲಾಯಿತು. ಅನ್ನದಾಸೋಹದಲ್ಲಿ ಪಾಯಸ ಪಲಾವ್, ಮತ್ತು ಅನ್ನ ಮಜ್ಜಿಗೆ ಸಂಪೂರ್ಣ ಸತ್ಕಾರ ಸಮರ್ಪಕವಾಗಿ ನಡೆಯಿತು ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಕ್ಕಳು ಮಾತೆಯರು ಪುರುಷರು ಸಮಾಜದ ಬಂದು ಬಾಂಧವರು ಭಾಗವಹಿಸಿದ್ದರು1
- ಭದ್ರಾ ನೀರು ಹರಿಸದ ರಾಜ್ಯ ಸರ್ಕಾರದ ವಿರುದ್ಧ ಹೊಸದುರ್ಗದಲ್ಲಿ ಬೃಹತ್ ಪ್ರತಿಭಟನೆ ಶೀಘ್ರ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸಲು ಆಗ್ರಹಿಸಿ ಹೊಸದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇನ್ನೂ ಬಿಜೆಪಿ ಪಕ್ಷ ಹಾಗೂ ಜೆ ಡಿ ಎಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದ್ದು ಹೊಸದುರ್ಗ ಬಿಜೆಪಿ ಮುಖಂಡರು ಹಾಗೂ ಖನಿಜ ನಿಗಮದ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಎಂ ಎಲ್ ಸಿ ಕೆ ಎಸ್ ನವೀನ್ ಅವರು ಸಹ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇನ್ನೂ ಎಸ್ ಲಿಂಗಮೂರ್ತಿ ಅವರು ಅಹ ಆಗಮಿಸಿ ಬಿಸಿಲನ್ನೂ ಸಹ ಲೆಕ್ಕಿಸದೆ ಪ್ರತಿಭಟನೆ ನೇತೃತ್ವ ವಹಿಸಿದ್ದು ಹುಳಿಯಾರು ರಸ್ತೆಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ತಾಲ್ಲೂಕು ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಷ ಹೊರ ಹಾಕಿದ್ದು ಶೀಘ್ರ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಆಗ್ರಹ ಮಾಡಿದರು. ತಕ್ಷಣವೇ ಹೊಸದುರ್ಗ ತಾಲ್ಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡಿ ಕುಡಿಯುವ ನೀರಿನ ಯೋಜನೆಯನ್ನ ಶೀಘ್ರ ಜಾರಿಗೊಳಿಸಲು ಪ್ರತಿಭಟನೆ ಮೂಲಕ ಒತ್ತಾಯ ಮಾಡಿದರು. ಇದೇ ವೇಳೆ ಎಸ್ ಲಿಂಮೂರ್ತಿ ಅವರು ಮಾತನಾಡಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಸರ್ಕಾರ ಈ ಬರದ ನಾಡು ಹೊಸದುರ್ಗಕ್ಕೆ ನೀರು ಕೊಡುವ ಬರವಸೆ ಇಟ್ಟಿದ್ದು ಬರವಸೆ ಹುಸಿಯಾಗಿದೆ. ಮೂರು ವರ್ಷಗಳು ಕಳೆದರು ಸಹ ಸರ್ಕಾರ ನೀರು ಹರಿಸುವ ಬಗ್ಗೆ ಸುಳ್ಳು ಬರವಸೆಯನ್ನ ಕೊಡುತ್ತಾ ಬಂದಿದೆ. ಈ ತಾಲ್ಲೂಕಿನ ಶಾಸಕರು ಕೂಡ ಬೆಂಬಲ ಕೋರಿದ್ದು ಕೈ ಜೋಡಿಸಿದ್ದೆವು. ಆದರೆ ಆಡಳಿತ ಪಕ್ಷದ ಶಾಸಕರಿಗೆ ಮಾನವೀಯತೆಯಿಂದ ಬೆಂಬಲ ಕೊಟ್ಟಿದ್ದೇವೆ. ಕಳೆದ ಆರೆಂಟು ತಿಂಗಳಾದರು ಸಹ ಸ್ಥಳೀಯ ಶಾಸಕರು ನೀರು ಕೊಡುವಲ್ಲಿ ವಿಫಲವಾಗಿದ್ದಾರೆ. ಆದ್ದರಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನೀರಿಗಾಗಿ ಹೋರಾಟ ಮಾಡುವ ಸಮಯ ಬಂದಿದ್ದು ಈ ಮೂಲಕ ಸರ್ಕಾರದ ಕಣ್ಣನ್ನ ತೆರಯಬೇಕಿದೆ. ನಮ್ಮ ಸರ್ಕಾರದ ಅವದಿಯಲ್ಲಿ ಅರವತ್ತರಷ್ಟು ಹಣ ಮೀಸಲಿಟ್ಟು ಕೆಲಸ ಆಗಿದ್ದು ಈ ಸರ್ಕಾರ ಬಂದ ನಂತರ ಇಪ್ಪತ್ತರಷ್ಟು ಸಹ ಹಣ ಬಿಡುಗಡೆ ಮಾಡಿಲ್ಲ ಎಂದು ಲಿಂಗಮೂರ್ತಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬರಗಾಲ ಬಂದಿದ್ದರು ಸಹ ಸರ್ಕಾರ ಜವಾಬ್ದಾರಿ ತೋರದೆ ಅನ್ಯಾಯ ಮಾಡಿದೆ. ಕೇವಲ ಮಂತ್ರಿ ಸ್ಥಾನಕ್ಕಾಗಿ ಹೊಡೆದಾಟ ನಡೆಸುತ್ತಿದ್ದು ಬರಗಾಲದಿಂದ ಕಂಗೆಟ್ಟ ಜನರಿಗೆ ನೀರು ಕೊಡುವ ಕೆಲಸ ಮಾಡದೆ ತಾಲ್ಲೂಕನ್ನ ಬರಪೀಡಿತ ಎಂದು ಘೋಷಣೆ ಮಾಡದೆ ಇದ್ದು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಎಸ್ ಲಿಂಗಮೂರ್ತಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.1
- ಕೋಟೆ ನಾಡು ಚಿತ್ರದುರ್ಗದಲ್ಲಿ ರಾಕಿಂಗ್ ಸ್ಟಾರ್ ಯಶು ಅಭಿಮಾನಿಗಳ ಸಂಭ್ರಮ1
- ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ಪವಾಡ ಮತ್ತು ವೈವಿಧ್ಯತೆ ಇತಿಹಾಸದ ದಾಖಲೆ ಪುಟದಲ್ಲಿ ಸೇರಿದೆ. ಶಿರಾ : ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ಪವಾಡ ಮತ್ತು ವೈವಿಧ್ಯತೆ ಇತಿಹಾಸದ ದಾಖಲೆ ಪುಟದಲ್ಲಿ ಸೇರಿದೆ. ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ದೇವತಾ ಕಾರ್ಯಗಳಿಗೆ ಅತ್ಯಂತ ಉನ್ನತವಾದ ಸ್ಥಾನವಿದೆ. ಅನಾದಿ ಕಾಲದಿಂದಲೂ ಮಾನವನು ತನ್ನ ದೈನಂದಿನ ಜೀವನದ ಭಾಗವಾಗಿ ದೇವರನ್ನು ಆರಾಧಿಸುತ್ತಾ ಬಂದಿದ್ದಾನೆ. ದೇವತಾ ಕಾರ್ಯಗಳು ಎಂದರೆ ಕೇವಲ ಆಚರಣೆಗಳಲ್ಲ, ಅವು ಮಾನವನ ಮನಸ್ಸನ್ನು ಶುದ್ಧೀಕರಿಸುವ ಮತ್ತು ಸಮಾಜವನ್ನು ಒಟ್ಟಾಗಿ ಜೋಡಿಸುವ ಪವಿತ್ರ ವಿಧಿ ವಿಧಾನಗಳಾಗಿವೆ,ಧಾರ್ಮಿಕ ದೇವತಾ ಕಾರ್ಯಗಳು ಮನುಷ್ಯನಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತವೆ. ಇವುಗಳನ್ನು ಕೇವಲ ಮೂಢನಂಬಿಕೆಯಾಗಿ ನೋಡದೆ, ಅವುಗಳ ಹಿಂದಿರುವ ವೈಜ್ಞಾನಿಕ ಮತ್ತು ಸಾಮಾಜಿಕ ಮಹತ್ವವನ್ನು ಅರಿತು ಆಚರಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸುಖ-ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು. ಶಿರಾ ತಾಲೂಕಿನ ಗೌಡಗೆರೆ ಹೋಬಳಿ ಕಳವರಹಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀಜುಂಜಪ್ಪ ಸ್ವಾಮಿ ನೂತನ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಐತಿಹಾಸಿಕ ಪ್ರಸಿದ್ಧ ಶ್ರೀ ಜುಂಜಪ್ಪ ಸ್ವಾಮಿಗೆ ಎಲ್ಲರೂ ಒಗ್ಗೂಡಿ ಭವ್ಯ ದೇಗುಲ ನಿರ್ಮಾಣ ಮಾಡುತ್ತಿರುವುದು, ಕಳವರಹಳ್ಳಿಗೆ ದೊಡ್ಡ ಕಳಸವಿದ್ದಂತೆ. ನಾವು ಎಲ್ಲರೂ ಒಗ್ಗಟ್ಟಾಗಿ ದೇಗುಲ ನಿರ್ಮಾಣ ಮಾಡುವಂತ ಸಂಕಲ್ಪ ಮಾಡಬೇಕು. ರಾಜ್ಯದಲ್ಲಿ ಹಾಗೂ ಸಿರಾ ತಾಲೂಕಿನಲ್ಲಿ ಇನ್ನು ಮುಂದೆ ಯಾದರು ಉತ್ತಮ ಮಳೆಯಾಗಿ ಎಲ್ಲ ರೈತರ ಬದುಕು ಸುಂದರವಾಗಿರಲಿ ಎಂದು ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು. ಶ್ರೀ ಮದ್ದಮ್ಮ ದೇವಿ ದೇವಸ್ಥಾನದ ಪಟ್ಟದ ಪೂಜಾರ್ ದೊಡ್ಡರಾಜಪ್ಪ, ಹುಣಸೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹುಣಸೆಹಳ್ಳಿ ಶಶಿಧರ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಸಂಕಾಪುರ ಚಿದಾನಂದ, ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮುದ್ದು ಕೃಷ್ಣೆಗೌಡ, ಕಾರ್ಯದರ್ಶಿ ನರಸಿಂಹಮೂರ್ತಿ, ಭೂಕಾಂತೇ ಗೌಡ, ಕೃಷ್ಣಪ್ಪ, ಹೊಸೂರು ಮಂಜೇಗೌಡ, ಸಿದ್ದಣ್ಣ, ದೊಡ್ಡಯ್ಯ, ಸಿದ್ದಾಪುರ ಮಂಜುನಾಥ್, ನಾಗೇಂದ್ರ ಗೌಡ, ಭೂತಣ್ಣ ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು, 12 ಜನ ಕೈವಾಡಸ್ತರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.1
- ಶಿಡ್ಲಘಟ್ಟ ನಗರದಲ್ಲಿ ಅದ್ದೂರಿಯಾಗಿ ನಡೆದ ಈದ್ ಮಿಲಾದ್ ಸಂಭ್ರಮ...!1
- ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲ ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ನೆಲಮಂಗಲ ಬಳಿಯ ಸೊಂಡೆಕೊಪ್ಪ ಬಳಿ ಘಟನೆ ಸ್ಥಳೀಯರ ನೆರವಿನಿಂದ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲದಲ್ಲಿ ಮೊಟ್ಟೆ ಡಿಲೆವರಿ ಮಾಡಿ ಬರ್ತಿದ್ದ ವೇಳೆ ಅವಘಡ ರಾಜಕಾಲುವೆ3 ಬಿದ್ದ ರಭಸಕ್ಕೆ ಟೆಂಪೋ ಸಂಪೂರ್ಣ ಜಖಂ ಕ್ರೇನ್ ಬಳಸಿ ಟೆಂಪೋ ಮೇಲಕ್ಕೆತ್ತಿದ ಪೊಲೀಸರು2
- ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗನಿಗೆ ಧೈರ್ಯ ತುಂಬಿದ ಸಿಎಂ ಬೆಂಗಳೂರು: ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗ ಮಲ್ಲಿನಾಥ್ ಅವರೊಂದಿಗೆ ಸಿಎಂ ಡಿಕೆ ಶಿವಕುಮಾರ್ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ. ಸಂಕಷ್ಟದ ಸಮಯದಲ್ಲಿ ಕನ್ನಡಿಗರ ರಕ್ಷಣೆಗೆನಮ್ಮ ಸರ್ಕಾರವು ಅತ್ಯಂತ ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು, ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಕನ್ನಡಿಗನನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.1
- ನೇಪಾಳದಲ್ಲಿ ಭೀಕರ ಪ್ರವಾಹ: ಕ್ಷಣಾರ್ಧದಲ್ಲೇ ಕೊಚ್ಚಿಹೋದ ಮನೆ, ವಾಹನಗಳು1