*ಮನುಷ್ಯನ ಹುಟ್ಟಿನಿಂದ ಸಾಯುವವರೆಗೆ ಕಾನೂನು ರಕ್ಷಣೆ ಒದಗಿಸುತ್ತದೆ: ನ್ಯಾಯಾಧೀಶ ಪ್ರಭು ನೀಲಾಚಾರಿ ಬಡಿಗೇರ್* ಕೋಲಾರ: ಹುಟ್ಟಲಿರುವ ಮಗುವಿನ ಹಕ್ಕುಗಳಿಂದ ಹಿಡಿದು ವೃದ್ಧಾಪ್ಯ ಮತ್ತು ಮರಣದ ನಂತರದ ಆಸ್ತಿ ಹಕ್ಕುಗಳವರೆಗೆ ಅಂದರೆ ತಾಯಿಯ ಗರ್ಭದಿಂದ ಪ್ರಾರಂಭವಾಗಿ ಮನುಷ್ಯನ ಜೀವನದ ಅಂತ್ಯದ ವರೆಗೂ ಕಾನೂನು ವಿವಿಧ ಹಂತಗಳಲ್ಲಿ ರಕ್ಷಣೆ ಒದಗಿಸುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಭು ಎನ್. ಬಡಿಗೇರ್ ಅವರು ಹೇಳಿದರು. ತಾಲ್ಲುಕಿನ ಹೂವಳ್ಳಿ ಗ್ರಾಮದ ಶ್ರೀ ಪಾಂಡುರಂಗ ಸ್ವಾಮಿ ದೇವಸ್ಥಾನ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ಕಾನೂನು ಅರಿವು-ನೆರವು ಕಾರ್ಯಕ್ರಮ"ವನ್ನು ಉದ್ದೇಶಿಸಿ ಮಾತನಾಡಿದ ಅವರು ಹುಟ್ಟಲಿರುವ ಮಗುವಿನ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ, ಹೆಣ್ಣು ಭ್ರೂಣ ಹತ್ಯೆ, ಮಗುವಿನ ಹಕ್ಕುಗಳು, ಶಿಕ್ಷಣ, ಆರೋಗ್ಯ, ಮತ್ತು ಉದ್ಯೋಗ, ವಿವಾಹ, ಆಸ್ತಿ ಹಕ್ಕು, ಹಿರಿಯ ನಾಗರಿಕರ ಹಕ್ಕುಗಳು ಸೇರಿದಂತೆ ಜನನ ಪ್ರಮಾಣ ಪತ್ರದಿಂದ ಹಿಡಿದು ಮರಣ ಪ್ರಮಾಣ ಪತ್ರ ಪಡೆಯುವವರೆಗೂ ಜೀವನದುದ್ದಕ್ಕೂ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕುಗಳ ರಕ್ಷಣೆಯನ್ನು ಕಾನೂನು ಮಾಡುವುದು. ನ್ಯಾಯಾಲಯ ಆವರಣದಲ್ಲಿ ಮೂರು ತಿಂಗಳಿಗೊಮ್ಮೆ ಅದಾಲತ್ ನಡೆಸಲಾಗುವುದು ಜನತೆ ಅದಾಲತ್ ಸದುಪಯೋಗ ಪಡೆದು ತಮ್ಮ ಯಾವುದೇ ವ್ಯಾಜ್ಯಗಳಿದ್ದರೆ ಬಗೆಹರೆಸಿಕೊಳ್ಳಿ ಎಂದು ಸಲಹೆ ನೀಡಿದರು. 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಿರಿಯ ನ್ಯಾಯಾಧೀಶರಾದ ಜಯಶ್ರೀ.ಬಿ.ಎಸ್ ರವರು ಮಾತನಾಡಿ ಅಣ್ಣ-ತಮ್ಮ, ಅಕ್ಕ-ತಂಗಿಯರ ಬಾಂಧವ್ಯ ಜೀವನ ಪರ್ಯಂತ ಅಮೂಲ್ಯವಾದುದು. ಕಾನೂನಿನ ಹಕ್ಕನ್ನು ಪ್ರೀತಿಯಿಂದಲೇ ಹಂಚಿಕೊಳ್ಳುವುದು ಜಾಣತನ. ಹಿಂದು ವಾರಸತ್ವ ಕಾಯ್ದೆ ತಿದ್ದುಪಡಿ ನಂತರ ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಕಾನೂನುಬದ್ಧವಾಗಿ ಸಮಾನ ಪಾಲಿದೆ, ಆದರೆ ಇದರಿಂದ ಅಣ್ಣ-ತಮ್ಮಂದಿರ ಬಾಂಧವ್ಯ ದೂರವಾಗಬಾರದು. ಆಸ್ತಿ ಹಂಚಿಕೆಯು ಕೇವಲ ಕಾನೂನಿನ ವಿಷಯವಲ್ಲ, ಅದು ಕುಟುಂಬದ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ. ಹೆಣ್ಣುಮಕ್ಕಳು ಮದುವೆಯಾಗಿ ಬೇರೆ ಮನೆಗೆ ಹೋದ ನಂತರ ಆಸ್ತಿ ಹಂಚಿಕೆಯ ವಿಷಯವನ್ನು ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತು ಶಾಂತಿಯುತವಾಗಿ ಚರ್ಚಿಸಬೇಕು, ಮುಕ್ತವಾಗಿ ಮಾತನಾಡದೆ ಕೋರ್ಟ್ ಮೆಟ್ಟಿಲೇರುವುದು ಅಥವಾ ಮೂರನೇ ವ್ಯಕ್ತಿಗಳ ಮಾತು ಕೇಳುವುದು ಸಂಬಂಧಗಳನ್ನು ಹಾಳು ಮಾಡುತ್ತದೆ. ಸಾಧ್ಯವಾದರೆ ಬಾಂಧವ್ಯಕ್ಕಾಗಿ ಸಂತೋಷದಿಂದ ಸ್ವಲ್ಪ ಬಿಟ್ಟುಕೊಡುವ ಮನೋಭಾವ ಉಭಯ ಕಡೆಯವರಲ್ಲೂ ಇರಬೇಕು. ಆಸ್ತಿ ಇಂದು ಬರುತ್ತದೆ, ನಾಳೆ ಹೋಗುತ್ತದೆ. ಆದರೆ ಅಣ್ಣ-ತಮ್ಮ, ಅಕ್ಕ-ತಂಗಿಯರ ಸಂಬಂಧ ಶಾಶ್ವತ ಎಂದು ಹೇಳಿದರು. ಮನುಷ್ಯನ ಜೀವನದಲ್ಲಿ ಸಮಸ್ಯೆಗಳು ಬರುವುದು ಸಾಮಾನ್ಯ, ಸಮಸ್ಯೆಗಳ ಒತ್ತಡದಿಂದ ಕೋಪ ದಿಂದ ಕೂಗಾಡುವುದು, ಕಿರುಚಾಡುವುದರಿಂದ ಆರೋಗ್ಯ, ಸಂತೋಷ, ಪ್ರೀತಿ ವಿಶ್ವಾಸವನ್ನು ಕಳೆದುಕೊಳ್ಳುತ್ತೇವೆ ಸಮಸ್ಯೆಗಳನ್ನು ಸಮಾದಾನ ಶಾಂತಿಯಿಂದ ಎದುರಿಸಬೇಕು ಎಂದರು. ಮಾತಿನಿಂದ ನಗೆ ಮಾತಿನಿಂದ ಹಗೆ ಆದ್ದರಿಂದ ನಾವುಗಳು ನಗು ಮುಖದೊಂದಿಗೆ ಮಾತನಾಡಿದಾಗ ನಮ್ಮನ್ನು ಮಾತನಾಡಿಸುವವರು ನಗು ಮುಖದೊಂದಿಗೆ ಮಾತನಾಡಿಸುತ್ತಾರೆ, ತಮ್ಮ ಗ್ರಾಮದಲ್ಲಿ ಯಾವುದೇ ವ್ಯಾಜ್ಯಗಳಿದ್ದರು ಕುಳಿತು ಸಂತೋಷ, ಶಾಂತಿ, ಸಮಾದಾನದಿಂದ ಮಾತನಾಡಿ ರಾಜಿ-ಸಂಧಾನ ಮೂಲಕ ಬಗೆಹರೆಸಿಕೊಂಡು ಗ್ರಾಮಗಳು ವ್ಯಾಜ್ಯ ಮುಕ್ತವಾಗಬೇಕು ಎಂದು ಹೇಳಿದರು. 1 ನೇ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ಹರ್ಷ.ಜಿ ರವರು ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ, 18 ವರ್ಷ ತುಂಬದ ಹೆಣ್ಣುಮಗುವಿಗೆ ಅಥವಾ 21 ವರ್ಷ ತುಂಬದ ಗಂಡುಮಗುವಿಗೆ ಮದುವೆ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಮದುವೆಯನ್ನು ನಡೆಸಿ ಕೊಡುವ, ನೇತೃತ್ವ ವಹಿಸುವ ಅಥವಾ ಪ್ರೋತ್ಸಾಹಿಸುವ ಪೂಜಾರಿಗಳು, ಕಲ್ಯಾಣ ಮಂಟಪದವರು ಮತ್ತು ಆಯೋಜಕರಿಗೂ ಕೂಡ ಶಿಕ್ಷೆ ಅನ್ವಯಿಸುತ್ತದೆ, ಬಾಲ್ಯ ವಿವಾಹದಿಂದ ಮಕ್ಕಳ ಆರೋಗ್ಯ, ಶಿಕ್ಷಣ ಹಾಗೂ ಭವಿಷ್ಯ ನಾಶವಾಗುತ್ತದೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬ ವ್ಯಕ್ತಿಯನ್ನು ಮಗು ಎಂದು ಪರಿಗಣಿಸಲಾಗುತ್ತದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ ಹಾಗೂ ಶೋಷಣೆಯಿಂದ ರಕ್ಷಿಸಲು ಜಾರಿಗೆ ಬಂದ ಕಠಿಣ ಕಾನೂನು ಪೋಕ್ಸೊ ಕಾಯ್ದೆ, ಇದು ಹುಡುಗರು ಮತ್ತು ಹುಡುಗಿಯರಿಬ್ಬರಿಗೂ ಸಮಾನವಾಗಿ ಅನ್ವಯಿಸುತ್ತದೆ, ಪೋಕ್ಸೊ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ ಕನಿಷ್ಠ 10 ವರ್ಷಗಳಿಂದ 20ವರ್ಷ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ ಆದ್ದರಿಂದ ಪೋಷಕರು ಬಾಲ್ಯ ವಿವಾಹ, ಪೋಕ್ಸೊ ಕಾಯ್ದೆ, ಆನ್‌ಲೈನ್ ಬೆಟ್ಟಿಂಗ್, ಮೊಬೈಲ್ ಬಳಕೆ ಬಗ್ಗೆ ತಮ್ಮ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್ ಮಾತನಾಡಿ, ವ್ಯಾಜ್ಯ ಮುಕ್ತ ಗ್ರಾಮ ಮಾಡುವುದೇ ಈ ಕಾನೂನು ಅರಿವು-ನೆರವು ಕಾರ್ಯಕ್ರಮದ ಉದ್ದೇಶವಾಗಿದೆ. ಅಪ್ರಾಪ್ತರ ಅಪಹರಣ, ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಪೋಕ್ಸೊ ಕಾಯ್ದೆ ಜಾರಿಯಲ್ಲಿದೆ. ಕೋಲಾರ ಜಿಲ್ಲಾ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯದಲ್ಲಿ ತಮ್ಮ ಹೂವಳ್ಳಿ ಗ್ರಾಮದ ವಿಶೇಷ ಸರ್ಕಾರಿ ಅಭಿಯೋಜಕಿ ಶ್ರೀಮತಿ ಡಿ. ಲಲಿತಕುಮಾರಿ ರವರು ವಾದವನ್ನು ಮಂಡಿಸಿ, ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆ, ಬಾಲ್ಯ ವಿವಾಹ ನಿಷೇದ ಕಾಯ್ದೆ ಅಡಿ 89 ಪ್ರಕರಣಗಳಲ್ಲಿ 120ಕ್ಕೂ ಹೆಚ್ಚು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿದೆ ಎಂದು ಹೇಳಿದರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಹೆಚ್.ವಿ.ಸುಬ್ರಮಣಿ ಮಾತನಾಡಿ, ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಆಸ್ತಿ, ಕೌಟುಂಬಿಕ ಸಮಸ್ಯೆಗಳು ಅಥವಾ ಬೇರೆ ಯಾವುದೇ ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಉಚಿತ ಕಾನೂನು ನೆರವು ಲಭ್ಯವಿದೆ. ಪ್ರಾಧಿಕಾರದಿಂದಲೇ ಉಚಿತವಾಗಿ ವಕೀಲರನ್ನು ನೇಮಿಸಲಾಗುವುದು, ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದರು. ಪ್ಯಾನಲ್ ವಕೀಲ ವಿ.ಎನ್.ಶ್ರೀಕಾಂತ್ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವಿಕೆ, ಮಧ್ಯಸ್ಥಿಕೆ, ಖಾಯಂ ಜನತಾ ನ್ಯಾಯಾಲಯ, ಪೋಕೊ ಆಕ್ಟ್, ಜೆಜೆ ಆಕ್ಟ್ ಮತ್ತು ಬಾಲ್ಯವಿವಾಹ ಕುರಿತು ಮಾಹಿತಿ ನೀಡಿದರು. ಹಿರಿಯ ವಕೀಲರಾದ ಹೂವಳ್ಳಿ ಎಂ.ಶ್ರೀನಿವಾಸ್ ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜನೆಯ ನೇತೃತ್ವವನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕಿ ಡಿ. ಲಲಿತಕುಮಾರಿ, ವಕೀಲರಾದ ಪ್ರಮೋದ್ ಕುಮಾರ್.ಬಿ, ಗೋವಿಂದರಾಜು.ಎನ್.ಕೆ, ಹರೀಶ್, ಹೂವಳ್ಳಿ ಗ್ರಾಮಸ್ಥರು, ಮಹಿಳಾ ಸಂಘಗಳ ಪ್ರತಿನಿಧಿ, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

- ನಿಮ್ಮೂರಲ್ಲಿ ವೇಗ| ರೇಷನ್ ದುಡ್ಡು ಬಂತು ಆದ್ರೆ ಗೃಹಲಕ್ಷ್ಮಿ ಹಣ ಬಂದಿಲ್ಲ| Veega News Kannada ನಿಮ್ಮೂರಲ್ಲಿ ವೇಗ| ರೇಷನ್ ದುಡ್ಡು ಬಂತು ಆದ್ರೆ ಗೃಹಲಕ್ಷ್ಮಿ ಹಣ ಬಂದಿಲ್ಲ| Veega News Kannada1
- *ಗಣಕೀಕರಿಸುವಲ್ಲಿ ಶೇ 100% ಪ್ರಗತಿ ಸಾಧನೆ-ರಾಜ್ಯದಲ್ಲೇ ಚಿಕ್ಕಬಳ್ಳಾಪುರಕ್ಕೆ ಮೊದಲ ಸ್ಥಾನ-ಮತದಾರರ ನೋಂದಣಾಧಿಕಾರಿ ಅತೀಕ್ ಭಾಷ* ಭಾಗ್ಯನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 204413 ಶೇ 100% ನಮೂನೆಗಳನ್ನು ವಿತರಣೆ ಮಾಡಲಾಗಿದೆ. ಹಾಗೂ ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 185861 ಶೇ. 90.92 ಗಣತಿ ನಮೂನೆಗಳನ್ನು ಗಣಕೀಕರಿಸಲಾಗಿರುತ್ತದೆ ಮತ್ತು 18552 ಮತದಾರರನ್ನು ASDDO ಮತದಾರರನ್ನಾಗಿ ಗುರುತಿಸಲಾಗಿರುತ್ತದೆ. 198165 ಶೇ 96.94 ಗಣತಿ ನಮೂನೆಗಳನ್ನು ಗಣಕೀಕರಿಸುವ ಮೂಲಕ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನವನ್ನು ಬಾಗೇಪಲ್ಲಿ ಕ್ಷೇತ್ರ ಪಡೆದುಕೊಂಡು ಪ್ರಗತಿ ಸಾಧಿಸಿದೆ ಎಂದು ಮತದಾರರ ನೋಂದಣಾಧಿಕಾರಿ ಅತೀಕ್ ಭಾಷ ತಿಳಿಸಿದ್ದಾರೆ. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೂನ್ 16 ರವರೆಗೆ 2,04,413 ಮತದಾರಿದ್ದು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ SIR ಸಂಬಂಧ ಭಾರತ ಚುನಾವಣಾ ಆಯೋಗದ ದಿನಾಂಕ: 14/05/2026 ರ ವೇಳಾಪಟ್ಟಿಯಂತೆ ದಿನಾಂಕ: 30/06/2026 ರಿಂದ 29/07/2026ರವರೆಗೆ ಬಿ.ಎಲ್.ಓ ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ, ಸ್ವೀಕರಿಸುವ ಕಾರ್ಯ ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಸಕ್ರಿಯವಾಗಿ ನಡೆಯುತ್ತಿದೆ. ತಾಲ್ಲೂಕಿನಲ್ಲಿ ದಿನಾಂಕ 16/06/2026 ರವರೆಗೆ ಒಟ್ಟು 204413 ಮತದಾರರಿದ್ದು, ಈ ಪೈಕಿ 198165 (ಶೇ.96.94%) ಮತದಾರರನ್ನು ಮ್ಯಾಪಿಂಗ್ ಮಾಡಲಾಗಿರುತ್ತದೆ.ತಾಲ್ಲೂಕಿನಲ್ಲಿ ದಿನಾಂಕ: 30/07/2026 ರ ಸಂಜೆ 6.00 ಗಂಟೆಗೆ ಎಲ್ಲಾ ಮತಗಟ್ಟೆಗಳಿಂದ ಒಟ್ಟು 204413 (ಶೇ.100%) ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯ ಮುಗಿದಿದ್ದು,ತಾಲ್ಲೂಕಿನ 267 ಮತಗಟ್ಟೆಗಳಿಂದ ಒಟ್ಟು 185861 ಶೇ. 90.92 ಗಣತಿ ನಮೂನೆಗಳನ್ನು ಗಣಕೀಕರಿಸಲಾಗಿರುತ್ತದೆ ಮತ್ತು 18552 ಮತದಾರರನ್ನು ASDDO ಮತದಾರರನ್ನಾಗಿ ಗುರುತಿಸಲಾಗಿರುತ್ತದೆ. 198165 ಶೇ 96.94 ಗಣತಿ ನಮೂನೆಗಳನ್ನು ಗಣಕೀಕರಿಸುವ ಮೂಲಕ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನವನ್ನು ಬಾಗೇಪಲ್ಲಿ ಕ್ಷೇತ್ರ ಪಡೆದುಕೊಂಡು ಪ್ರಗತಿ ಸಾಧಿಸಿದೆ ಎಂದರು. ಈ ಸಂಧರ್ಭದಲ್ಲಿ ತಹಶೀಲ್ದಾರ್ ಮನಿಷಾ ಎನ್ ಪತ್ರಿ, ಚೇಳೂರು ತಹಶೀಲ್ದಾರ್ ಬಿ.ಕೆ.ಶ್ವೇತಾ, ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಚಂದ್ರ,ಚುನಾವಣಾ ಶಾಖೆಯ ಅಧಿಕಾರಿಗಳಾದ ಮೂರ್ತಿ,ರಾಘವೇಂದ್ರ,ಕಾಂಗ್ರೆಸ್ ಪಕ್ಷದ ಬಿ ಎಲ್ ಎ2 ಮದ್ದಿಲೇಟಿರೆಡ್ಡಿ,ಕ್ರಿಕೆಟ್ ಮೂರ್ತಿ,ಅಶೋಕ್,ಮಿಲ್ಕ್ ವೀರ,ಪಾತಪಾಳ್ಯ ಚಂದ್ರಣ್ಣ,ನಿಜಾಮ್ ಉದ್ದಿನ್ ಬಾಬು,ಮನ್ಸೂರ್,ದಿವಾಕರ್,ಸಿಪಿ.ಐ.ಎಂ ಪಕ್ಷದ ಬಿ ಎಲ್ ಎ2 ಎಂ. ಎನ್.ರಘುರಾಮರೆಡ್ಡಿ,ಅಶ್ವಥಪ್ಪ, ಜಿ ಕೃಷ್ಣಪ್ಪ, ಇಮ್ರಾನ್, ಬಿಜೆಪಿ ಪಕ್ಷದ ಬಿ ಎಲ್ ಎ2 ಬಿ. ಎಸ್.ಲೋಕೇಶ್,ರವಿಕುಮಾರ್,ಲೋಕೇಶ್,ವನಜಾ, ಗಂಗುಳಮ್ಮ, ಮಂಜುಳಾ,ರೂಪ,ಸೇರಿದಂತೆ ಮತ್ತಿತರರು ಇದ್ದರು.3
- ಕೆಆರ್ ಪುರದಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನಕ್ಕೆ ಬೆಂ,ಪೂರ್ವ ನಗರ ಪಾಲಿಕೆ ಆಯುಕ್ತ ಡಾ . ಡಿ ,ಎಸ್ ರಮೇಶ್ ಚಾಲನೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಾ . ಡಿ ,ಎಸ್ ರಮೇಶ್ ರಿಂದ ಚಾಲನೆ .ಆಯುಕ್ತ ರಮೇಶ್ ಅವರಿಗೆ ಕೆಆರ್ ಪುರ ಜಂಟಿ ಆಯುಕ್ತೆ ಡಾ . ಸುಧಾ ಸ್ವಪ್ನ ಸಾಥ್ .ಕೆಆರ್ ಪುರದ ಐಟಿಐ ಗೇಟ್ ನಿಂದ ಆರಂಭವಾಗಿರುವ ಅಭಿಯಾನ .ಕೆಆರ್ ಪುರ ಹಾಗೂ ಮಹದೇವಪುರ ವಲಯಗಳಲ್ಲಿ ಏಕಕಾಲ ಚಾಲನೆ ನೀಡಿರುವ ಆಯುಕ್ತ ರಮೇಶ್ .ಒಂದು ತಿಂಗಳ ಕಾಲ ನಡೆಯಲಿರುವ ಅಭಿಯಾನ .ಖಾಸಗೀ ಸ್ವತ್ತುಗಳಲ್ಲಿ ತ್ಯಾಜ್ಯ ತೆರವಿಗೆ ಮಾಲೀಕರಿಗೆ ೧೫ದಿನಗಳ ಗಡುವು.೧೫ ದಿನಗಳ ಬಳಿಕವೂ ತೆರವುವಾಗಿಲ್ಲ ಅಂದ್ರೆ ಮಾಲೀಕರೇ ತೆರಿಗೆ ಜೊತೆಗೆ ತ್ಯಾಜ್ಯ ನಿರ್ವಹಣಾ ವೆಚ್ಚ ಭರಿಸಬೇಕು1
- ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದ ಶಾಸಕ ಯಶ್ ಪಾಲ್ ಆನಂದ ಸುವರ್ಣ ವಿರುದ್ಧ ಪ್ರತಿಭಟನೆ ಬೆಂಗಳೂರು:ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದ ಶಾಸಕ ಯಶ್ ಪಾಲ್ ಆನಂದ ಸುವರ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ.ಶಾಸಕರನ್ನು ಬಂಧಿಸುವಂತೆ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆ ಮುಂದೆ ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ ಮತ್ತು ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಎಂದು ಒತ್ತಾಯಿಸಿದ್ದು,ಕಾನೂನು ಕ್ರಮ ತಗೆದುಕೊಳ್ಳದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.ಅಲ್ಲದೇ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎನ್ನುವುದಕ್ಕೆ ಸಾಕ್ಷಿ ಕೊಡಲಿ.ಇಲ್ಲದೇ ಹೋದರಲ್ಲಿ ಮಾನ ನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.1
- 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ! | ರಾಜ್ಯದಲ್ಲಿ ಹೆಚ್ಚುತ್ತಿರುವ ಸರ್ವಿಕಲ್ ಕ್ಯಾನ್ಸರ್ ಪ್ರಕರಣಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆಯು ಮಹತ್ವದ ಅಭಿಯಾನ ಆರಂಭಿಸಿದೆ. 14 ವರ್ಷದೊಳಗಿನ ಹೆಣ್ಣುಮಕ್ಕಳು ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ HPV ಲಸಿಕೆ ನೀಡಲಾಗುತ್ತಿದೆ. ಈ ಲಸಿಕೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಅಭಿಯಾನದ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದು, ಪೋಷಕರು ಹಾಗೂ ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಸುದ್ದಿಗಳಿಗಾಗಿ ASN News24 Kannada ಅನ್ನು ಫಾಲೋ ಮಾಡಿ. #Hashtags #HPVVaccine #CervicalCancer #HealthDepartment #UTKhader #KarnatakaNews #HealthNews #WomenHealth #FreeVaccine #KannadaNews #BreakingNews #ASNNews24Kannada #ViralNews #karnataka1
- burger king bangalore jayanagar must visit the store every time burger1
- ಸುವರ್ಣಹಳ್ಳಿಯಲ್ಲಿ ಯಶಸ್ವಿ ಕೊಳವೆ ಬಾವಿ ಕೊರೆತ – ಶಾಸಕಿ ರೂಪಕಲಾ ಶಶಿಧರ್‌ಗೆ ಕೃತಜ್ಞತೆ ಸಲ್ಲಿಸಿದ ರೈತ ಮಹಿಳೆ ಕೆ.ಜಿ.ಎಫ್: ತಾಲೂಕಿನ ಕಾಸಂಬಳ್ಳಿ ಹೋಬಳಿಯ ಸುವರ್ಣಹಳ್ಳಿ ಗ್ರಾಮದ ರೈತ ಮಹಿಳೆ ಶ್ರೀಮತಿ ಭಾಗ್ಯಮ್ಮ ಕೋಂ ಮುನಿಸ್ವಾಮಿ ಅವರ ಜಮೀನಿನಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯೋಜನೆಯಡಿ ಇಂದು ಯಶಸ್ವಿಯಾಗಿ ಕೊಳವೆ ಬಾವಿ ಕೊರೆಯಲಾಯಿತು. ಕೆ.ಜಿ.ಎಫ್ ಶಾಸಕರಾದ ಶ್ರೀಮತಿ ರೂಪಕಲಾ ಶಶಿಧರ್ ಅವರ ವಿಶೇಷ ಪ್ರಯತ್ನ ಹಾಗೂ ಮಂಜೂರಾತಿಯಿಂದ ಈ ಕೊಳವೆ ಬಾವಿ ನಿರ್ಮಾಣಗೊಂಡಿದ್ದು, ಬೋರ್‌ವೆಲ್‌ನಲ್ಲಿ ಉತ್ತಮ ನೀರು ಬಿದ್ದ ಹಿನ್ನೆಲೆಯಲ್ಲಿ ರೈತ ಕುಟುಂಬ ಹಾಗೂ ಗ್ರಾಮಸ್ಥರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಕೊಳವೆ ಬಾವಿ ಮಂಜೂರು ಮಾಡಿಸಿ ತಮ್ಮ ಕೃಷಿ ಜೀವನಕ್ಕೆ ಆಸರೆಯಾದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ರೈತರು ಹಾಗೂ ಸ್ಥಳೀಯರು, ಅವರ ಜನಪರ ಕಾಳಜಿಯನ್ನು ಶ್ಲಾಘಿಸಿ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಕೆ.ಎಂ. ಕೃಷ್ಣಮೂರ್ತಿ ಸೇರಿದಂತೆ ಸ್ಥಳೀಯ ನಾಯಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.1
- ಕೆಸರಲ್ಲೇ ಶಾಲೆಗೆ ನಡೆಯುವ ವಿದ್ಯಾರ್ಥಿಗಳು! ರಸ್ತೆ ಇಲ್ಲದೆ ವಸ್ತಾರಿ ಗ್ರಾಮಕ್ಕೆ ಸಂಕಷ್ಟ! ಕಲಬುರಗಿ ಜಿಲ್ಲೆಯ ವಸ್ತಾರಿ ಗ್ರಾಮದಲ್ಲಿ ಶಾಲಾ ಕಟ್ಟಡವಿದ್ದರೂ ಸಂಪರ್ಕ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಪ್ರತಿದಿನ ಕೆಸರಿನಲ್ಲಿ ನಡೆದು ಶಾಲೆಗೆ ತೆರಳುವ ಪರಿಸ್ಥಿತಿ ಎದುರಾಗಿದೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ರಸ್ತೆ ನಿರ್ಮಿಸಿ ಮೂಲಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಹಾಗೂ ಪೋಷಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.1
- ನಾನೇನು ಲಾಭಿ ಮಾಡೋಕೆ ಹೋಗಿಲ್ಲ:ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಲಪಾಡ್ ಪ್ರತಿಕ್ರಿಯೆ ಬೆಂಗಳೂರು:ಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋದಾಗಲೆಲ್ಲಾ ನಲಪಾಡ್ ಫಾಲೋ ಮಾಡ್ತಿದ್ದು,ಈ ಬಾರಿಯಾದ್ರೂ ಮಂತ್ರಿಗಿರಿ ಪಡೆಯುವಲ್ಲಿ ತಂದೆ ಮತ್ತು ಮಗ ಸಕ್ಸಸ್ ಆಗ್ತಾರಾ?ಫೈನಲ್ ಲೀಸ್ಟ್ ನಲ್ಲಿ ಹೆಸರು ಇರುವಂತೆ ತಂದೆ ಮತ್ತು ಮಗ ಎಫರ್ಟ್ ಆಗ್ತಿದ್ದಾರೆ.ದೆಹಲಿಯಲ್ಲಿ ಸಿಎಂ ಭೇಟಿಯಾಗಿ ತಂದೆಗೆ ಸಚಿವಸ್ಥಾನ ಕೊಡಿಸಲು ಹ್ಯಾರೀಸ್ ಪುತ್ರ ನಲಪಾಡ್ ಪ್ಲಾನ್ ನಡೆಸಿದ್ದಾರೆ.ಇನ್ನೂ ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ನಲಪಾಡ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿಗಳು ದೆಹಲಿಗೆ ಹೋದಾಗ ಫ್ರೀಯಾಗಿ ಸಿಗ್ತಾರೆ ಅಂತ ಮಾತಾಡೋಕೆ ಹೋಗಿದ್ದೆ,ನಾನೇನು ಲಾಭಿ ಮಾಡೋಕೆ ಹೋಗಿಲ್ಲ, ನಮ್ಮ ಅಪ್ಪ ನಾಲ್ಕು ಬಾರಿ ಗೆದ್ದಿದ್ದಾರೆ, ಅವರು ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ,ಕಡಲಸಗಳನ್ನ ನಡೆಸಿಕೊಂಡು ಬಂದಿದ್ದಾರೆ, ಅವರನ್ನ ಮಂತ್ರಿ ಮಂಡಲದಲ್ಲಿ ಸೇರ್ಸ್ತಾರೆ ಅನ್ನೋ ನಂಬಿಕೆ ನಮ್ಮ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳ ಮೇಲೆ ಇದೆ,ನಾವು ಯಾವುದೇ ಪ್ರಸ್ತಾಪ ಮಾಡಿಲ್ಲ, ಡೈಲಿ ಮುಖ ತೋರಿಸಿರ್ದೆ ನೆನಪು ಬರುತ್ತೆ ಎಂದು ನಲಪಾಡ್ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.1