ಮುಂಬೈ ಮಹಾನಗರದಲ್ಲಿ ತಡರಾತ್ರಿ ಕ್ಯಾಬ್ ಹತ್ತಿದ ಪ್ರೇಮಿಗಳಿಬ್ಬರ ನಡುವೆ ನಡೆದ ಗಲಾಟೆ ಹಾಗೂ ಆ ಸಂದರ್ಭದಲ್ಲಿ ಚಾಲಕ ತೋರಿದ ಜಾಣ್ಮೆ ಮತ್ತು ಆತ ನೀಡಿದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಘಟನೆಯ ವಿವರ: ರಾತ್ರಿ ಬುಕಿಂಗ್: ನಿನ್ನೆ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಕ್ಯಾಬ್ ಚಾಲಕನಿಗೆ ಯುವತಿಯೊಬ್ಬಳಿಂದ ರೈಡ್ ಬುಕಿಂಗ್ ಬಂದಿತ್ತು. ಚಾಲಕ ಪಿಕಪ್ ಲೊಕೇಶನ್‌ಗೆ ತಲುಪಿದಾಗ ಯುವತಿಯ ಜೊತೆಗೆ ಒಬ್ಬ ಯುವಕನೂ ಇದ್ದನು. ಸಮಯ ತಡವಾಗಿದ್ದ ಕಾರಣ ಆತ ಆಕೆಯ ಸಹೋದರನಿರಬಹುದು ಎಂದು ಭಾವಿಸಿದ ಚಾಲಕ, ಒಟಿಪಿ (OTP) ಪಡೆದು ಪ್ರಯಾಣ ಆರಂಭಿಸಿದ್ದಾನೆ. ಹಿಂಬದಿ ಸೀಟಿನಲ್ಲಿ ಕಿತ್ತಾಟ: ಸುಮಾರು 5 ರಿಂದ 7 ಕಿಲೋಮೀಟರ್ ಕ್ರಮಿಸಿದ ನಂತರ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಇಬ್ಬರ ನಡುವೆ ಏಕಾಏಕಿ ಜೋರು ಧ್ವನಿಯಲ್ಲಿ ವಾಗ್ವಾದ ಆರಂಭವಾಗಿದೆ. ಆತ ಯುವತಿಯ ಸಹೋದರನಲ್ಲ, ಪ್ರಿಯಕರ ಎಂಬುದು ಚಾಲಕನಿಗೆ ಆಗಲೇ ಸ್ಪಷ್ಟವಾಗಿದೆ. ಚಾಲಕನ ಮುನ್ನೆಚ್ಚರಿಕೆ: ಜಗಳ ತಾರಕಕ್ಕೇರಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ, ಯಾವುದೇ ಅನಗತ್ಯ ಆರೋಪ ಅಥವಾ ಕಾನೂನು ತೊಡಕುಗಳಿಂದ ತಪ್ಪಿಸಿಕೊಳ್ಳಲು ಚಾಲಕ ತನ್ನ ಸುರಕ್ಷತೆಗಾಗಿ ಸದ್ದಿಲ್ಲದೆ ಕಾರಿನ ವಿಡಿಯೋ ರೆಕಾರ್ಡಿಂಗ್ ಆನ್ ಮಾಡಿಕೊಂಡಿದ್ದಾನೆ. ಯಾವುದೇ ಮಧ್ಯಪ್ರವೇಶ ಮಾಡದೆ ಶಾಂತವಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದಾನೆ. ಪೋಷಕರ ನಂಬಿಕೆ ಉಳಿಸಿಕೊಳ್ಳಿ ಎಂದ ಚಾಲಕ: ಯಾವುದೇ ಗಲಾಟೆಗೆ ಆಸ್ಪದ ನೀಡದೆ ಇಬ್ಬರನ್ನೂ ಸುರಕ್ಷಿತವಾಗಿ ಅವರ ಗಮ್ಯಸ್ಥಾನಕ್ಕೆ ತಲುಪಿಸಿದ ಚಾಲಕ, ಹೊರಡುವ ಮುನ್ನ ಒಂದು ಮಾರ್ಮಿಕ ಕಿವಿಮಾತು ಹೇಳಿದ್ದಾನೆ: "ಸ್ಪೆಷಲ್ ಕ್ಲಾಸ್ ಅಥವಾ ಎಕ್ಸ್‌ಟ್ರಾ ಕ್ಲಾಸ್ ಹೆಸರಿನಲ್ಲಿ ಹೊರಬರುವಾಗ, ನಿಮ್ಮ ಮೇಲೆ ಅಪಾರ ನಂಬಿಕೆ ಇಟ್ಟಿರುವ ಹೆತ್ತ ಪೋಷಕರ ನಿರೀಕ್ಷೆಗಳನ್ನು ಎಂದಿಗೂ ಹುಸಿಗೊಳಿಸಬೇಡಿ." ಯುವಜನತೆ ಪೋಷಕರ ಕಣ್ತಪ್ಪಿಸಿ ಮಾಡುವ ಇಂತಹ ನಡವಳಿಕೆಗಳ ಬಗ್ಗೆ ಚಾಲಕ ವ್ಯಕ್ತಪಡಿಸಿದ ಈ ಕಾಳಜಿ ಎಲ್ಲರ ಗಮನ ಸೆಳೆದಿದೆ.
ಮುಂಬೈ ಮಹಾನಗರದಲ್ಲಿ ತಡರಾತ್ರಿ ಕ್ಯಾಬ್ ಹತ್ತಿದ ಪ್ರೇಮಿಗಳಿಬ್ಬರ ನಡುವೆ ನಡೆದ ಗಲಾಟೆ ಹಾಗೂ ಆ ಸಂದರ್ಭದಲ್ಲಿ ಚಾಲಕ ತೋರಿದ ಜಾಣ್ಮೆ ಮತ್ತು ಆತ ನೀಡಿದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಘಟನೆಯ ವಿವರ: ರಾತ್ರಿ ಬುಕಿಂಗ್: ನಿನ್ನೆ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಕ್ಯಾಬ್ ಚಾಲಕನಿಗೆ ಯುವತಿಯೊಬ್ಬಳಿಂದ ರೈಡ್ ಬುಕಿಂಗ್ ಬಂದಿತ್ತು. ಚಾಲಕ ಪಿಕಪ್ ಲೊಕೇಶನ್‌ಗೆ ತಲುಪಿದಾಗ ಯುವತಿಯ ಜೊತೆಗೆ ಒಬ್ಬ ಯುವಕನೂ ಇದ್ದನು. ಸಮಯ ತಡವಾಗಿದ್ದ ಕಾರಣ ಆತ ಆಕೆಯ ಸಹೋದರನಿರಬಹುದು ಎಂದು ಭಾವಿಸಿದ ಚಾಲಕ, ಒಟಿಪಿ (OTP) ಪಡೆದು ಪ್ರಯಾಣ ಆರಂಭಿಸಿದ್ದಾನೆ. ಹಿಂಬದಿ ಸೀಟಿನಲ್ಲಿ ಕಿತ್ತಾಟ: ಸುಮಾರು 5 ರಿಂದ 7 ಕಿಲೋಮೀಟರ್ ಕ್ರಮಿಸಿದ ನಂತರ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಇಬ್ಬರ ನಡುವೆ ಏಕಾಏಕಿ ಜೋರು ಧ್ವನಿಯಲ್ಲಿ ವಾಗ್ವಾದ ಆರಂಭವಾಗಿದೆ. ಆತ ಯುವತಿಯ ಸಹೋದರನಲ್ಲ, ಪ್ರಿಯಕರ ಎಂಬುದು ಚಾಲಕನಿಗೆ ಆಗಲೇ ಸ್ಪಷ್ಟವಾಗಿದೆ. ಚಾಲಕನ ಮುನ್ನೆಚ್ಚರಿಕೆ: ಜಗಳ ತಾರಕಕ್ಕೇರಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ, ಯಾವುದೇ ಅನಗತ್ಯ ಆರೋಪ ಅಥವಾ ಕಾನೂನು ತೊಡಕುಗಳಿಂದ ತಪ್ಪಿಸಿಕೊಳ್ಳಲು ಚಾಲಕ ತನ್ನ ಸುರಕ್ಷತೆಗಾಗಿ ಸದ್ದಿಲ್ಲದೆ ಕಾರಿನ ವಿಡಿಯೋ ರೆಕಾರ್ಡಿಂಗ್ ಆನ್ ಮಾಡಿಕೊಂಡಿದ್ದಾನೆ. ಯಾವುದೇ ಮಧ್ಯಪ್ರವೇಶ ಮಾಡದೆ ಶಾಂತವಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದಾನೆ. ಪೋಷಕರ ನಂಬಿಕೆ ಉಳಿಸಿಕೊಳ್ಳಿ ಎಂದ ಚಾಲಕ: ಯಾವುದೇ ಗಲಾಟೆಗೆ ಆಸ್ಪದ ನೀಡದೆ ಇಬ್ಬರನ್ನೂ ಸುರಕ್ಷಿತವಾಗಿ ಅವರ ಗಮ್ಯಸ್ಥಾನಕ್ಕೆ ತಲುಪಿಸಿದ ಚಾಲಕ, ಹೊರಡುವ ಮುನ್ನ ಒಂದು ಮಾರ್ಮಿಕ ಕಿವಿಮಾತು ಹೇಳಿದ್ದಾನೆ: "ಸ್ಪೆಷಲ್ ಕ್ಲಾಸ್ ಅಥವಾ ಎಕ್ಸ್‌ಟ್ರಾ ಕ್ಲಾಸ್ ಹೆಸರಿನಲ್ಲಿ ಹೊರಬರುವಾಗ, ನಿಮ್ಮ ಮೇಲೆ ಅಪಾರ ನಂಬಿಕೆ ಇಟ್ಟಿರುವ ಹೆತ್ತ ಪೋಷಕರ ನಿರೀಕ್ಷೆಗಳನ್ನು ಎಂದಿಗೂ ಹುಸಿಗೊಳಿಸಬೇಡಿ." ಯುವಜನತೆ ಪೋಷಕರ ಕಣ್ತಪ್ಪಿಸಿ ಮಾಡುವ ಇಂತಹ ನಡವಳಿಕೆಗಳ ಬಗ್ಗೆ ಚಾಲಕ ವ್ಯಕ್ತಪಡಿಸಿದ ಈ ಕಾಳಜಿ ಎಲ್ಲರ ಗಮನ ಸೆಳೆದಿದೆ.
- ಲಿಂಗನಬಂಡಿ ಮೌನೇಶ್ವರ ಪೂಜೆಗೆ ಬಾಕುತಿರುವ ವಿಶ್ವಕರ್ಮ ಸಮಾಜದ ಎಲ್ಲರೂ ಒಂದಾಗೋಣ ಬನ್ನಿ ಸನ್ಮಾನ್ಯ ಶ್ರೀ ಕೆಪಿ ನಂಜುಂಡಿ ಇವರ ಕೈ ಕೊಡ್ಸೋಣ ಎಲ್ಲಾ ಮಠ ಅಧ್ಯಕ್ಷರು ಹಾಗೂ ವಿಶ್ವಕರ್ಮ ಸಮಾಜದ ಬಂಧುಗಳು ವಿನಂತಿ1
- ಕಾಮಗಾರಿ ಮಾಡದೆ ಹಣ ಲಪ್ಟಾಯಿಸಿದವರ ಮೇಲೆ ಕಠಿಣ ಕಾನೂನಿನ ಕ್ರಮ ಜರಗಿಸಿ: ಉಮೇಶ್ ಮುದ್ನಾಳ ಕಾಮಗಾರಿ ಮಾಡದೆ ಹಣ ಲಪ್ಟಾಯಿಸಿದವರ ಮೇಲೆ ಕಠಿಣ ಕಾನೂನಿನ ಕ್ರಮ ಜರಗಿಸಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಹೋರಾಟದ ಎಚ್ಚರಿಕೆಗೆ 7 ತಿಂಗಳ ನಂತರ ಜಿ.ಪಂ. ಪಿ.ಡಿ. ಸಿ.ಬಿ. ದೇವರಮನಿ ತಳಕ ಗ್ರಾಮಕ್ಕೆ ಬೇಟಿ ನೀಡಿದರು. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ದೂರಿಗೆ 7 ತಿಂಗಳ ನಂತರ ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿದಸಿದ ಜಿ.ಪಂ. ಯೋಜನಾ ನಿರ್ದೇಶಕರಾದ ಸಿ.ಬಿ.ದೇವರಮನಿ ಸಂಪೂರ್ಣ ವರದಿ ಜಿಲ್ಲಾಧಿಕಾರಿಗಳಿಗೆ ಶೀಘ್ರದಲ್ಲೇ ಸಲ್ಲಿಸುವ ಭರವಸೆ. ಯಾದಗಿರಿ : ತಾಲೂಕಿನ ತಳಕ ಗ್ರಾಮದಲ್ಲಿ 2021-22ನೇ ಸಾಲಿನಲ್ಲಿ ಬಸವನ ಗುಡಿಯಿಂದ ಹಳ್ಳದ ವರೆಗೆ ಸಿ.ಸಿ. ಚರಂಡಿ ನಿಮಾರ್ಣ ಬಿಲ್ ನಂ. 309 ಹಣ 42560/- ಮತ್ತು ಬಿಲ್ 35155 ನಂ. 41440/- 2021-22ನೇ ಸಾಲಿನಲ್ಲಿ ಬಸವನ ಕಟ್ಟಿ ಹತ್ತಿರ ದನಕರಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಬಿಲ್ ನಂ. 310 ಹಣ 24610/- ಮತ್ತು ಬಿಲ್, 3516 ಹಣ 7817/- ಈ ಎರಡು ಕಾಮಗಾರಿಗಳನ್ನು ಮಾಡದೇ ಸಂಪೂರ್ಣ ಹಣ ಲೂಟಿ ಮಾಡಿದ ಹಿಂದಿನ ಪಿ.ಡಿ.ಸಿ ಬೂಪ ನೀಲಕಂಠ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಸರ್ಕಾರಕ್ಕೆ ಭೊಕ್ಕಸಕ್ಕೆ ಹಣ ತುಂಬಿಸಬೇಕೆAದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರ ಹೋರಾಟದ ಎಚ್ಚರಿಕೆ ನೀಡಿದರು. ಅದರ ಬೆನ್ನಲ್ಲೇ ಜಿಲ್ಲಾ ಪಂಚಾಯತ ಪಿಡಿ ಸಿ.ಬಿ. ದೇವರಮನಿ ಅವರು ಮಂಗಳವಾರ 7 ತಿಂಗಳ ನಂತರ ಗ್ರಾಮಕ್ಕೆ ಬೇಟಿ ನೀಡಿ ಪರಿಶಿಲಿಸಿ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು. ನಂತರ ಸ್ಥಳದಲ್ಲಿದ ಕೆÀಳಮಟ್ಟದ ಅಧಿಕಾರಿಗಳಿಗೆ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮಾಡಿ ಬ್ಲಿಚಿಂಗ್ ಪೌಡರ್ ಫಾಗಿಂಗ್ ಮಾಡಿ ಸಾರ್ವಜನಿರಕಿಗೆ ರೋಗ ರೂಜನೆ ಬರದಂತೆ ನೋಡಿಕೊಳ್ಳಿಎಂದು ಸೂಚಿದರು. ಸಿಸಿ ಚರಂಡಿ ಇಲ್ಲದ ಸ್ಥಳದಲ್ಲಿ ಸಿಸಿ ಚರಂಡಿ ಇಲ್ಲದ ಸ್ಥಳಗಳನ್ನು ಗುರುತಿಸಿ ಅಂದಾಜು ಪಟ್ಟಿ ಜಿಲ್ಲಾಪಂಚಾಯತಿಗೆ ಸಲ್ಲಿಸುವಂತೆ ತಿಳಿಸಿದರು. ನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಅವರು ಅಕ್ರಮ ವೆಸಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳದೇ 7 ತಿಂಗಳ ನಂತರ ನಾಮಕೆ ವಾಸ್ತೆ ಗ್ರಾಮಕ್ಕೆ ಬೇಟಿ ನೀಡುತ್ತಿರುವುದು ದೂರದುಷ್ಟಕರ ಸಂಗತಿ ಎಂದರು. ಇದಲ್ಲದೇ ಮುದ್ನಾಳ ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಅನುವು ಮಾಡಿ ಕೊಡದಲ್ಲದೇ ಗ್ರಂಥಾಲಯದ ಶೆಡ್ಡ ನಿರ್ಮಾಣ ಅವ್ಯವಾಹರ ನಡೆದಿದ್ದರು ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥೆ ಮಾಡದೆ ಹಣ ಲಪ್ಟಾಯಿಸಿದ್ದು ರೈತರ ಗೋದಾಮು ನಿರ್ಮಾಣ ಮಾಡದೇ ಒಂದೇ ದಿನ ಹಣ ಡ್ರಾ ಮಾಡಿದರು. ಇಂತ ವ್ಯಕ್ತಿಗೆ ಅಮಾನತ್ತು ಗೊಳಿಸಿ ಮನೆಗೆ ಕಳಿಸಬೇಕಾಗಿತ್ತು ಆದರೆ ನಿಮ್ಮ ಜಿಲ್ಲಾ ಪಂಚಾಯತಿಯಲ್ಲಿ ಇಂತವರಿಗೆ ರಾಜಾ ಮರಾದಿ ನೀಡುತ್ತಿರುವುದು ನಾಚಿಗೇಡಿನ ಸಂಗತಿ ಈ ಅಕ್ರಮ ಎಸಗಿದವರ ಜೊತೆ ಅವರ ಕೊಡತಕ್ಕಂತ ಲಂಚಕ್ಕೆ ಕೈವಡ್ಡಿ ತಾ.ಪಂ. ಜಿ.ಪಂ.ಯಲ್ಲಿ ಕೆಲವು ಅಧಿಕಾರಿಗಳು ಇವರ ಜೊತೆ ಕೈಜೋಡಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಇದರ ಸಂಪೂರ್ಣ ಪಿಕ್ಚರ್ ರೆಡಿಯಾಗಿದೆ ಮುಂದಿನ ದಿನಗಳಲ್ಲಿ ಇಡಿ ರಾಜ್ಯದ ಜನ ನೋಡಿ ಕ್ಯಾಕರ್ಸಿ ಉಗುಳುವ ಕಾಲ ಅತ್ರ ಬಂದಿದೆ ಆಮೇಲೆ ಸತ್ಯಾ ಅಸತ್ಯತೆ ಯಾರು ಸಾಚಾ ಯಾರು ಸರ್ಕಾರಿ ಹಣ ದುರಬಳಕೆ ಮಾಡಿದ್ದಾರೆಂಬುವುದು ಸದ್ಯದಲ್ಲೇ ತಿಳಿಯಲಿದೆ ಎಂದು ಹೇಳಿದರು. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ದಾಳ ಅವರು ಆರೋಪಿಸಿದ್ದಾರೆ ಗ್ರಾಮಕ್ಕೆ ಭೇಟಿ ಸುತ್ತಾಡಿದ ನಂತರ ಮಾತನಾಡಿದ ಅವರು ಗ್ರಾಮದ ಎರಡು ಕಡೆ ಕಾಮಗಾರಿ ಆಗದೆ 1) ಗ್ರಾಮದಲ್ಲಿ ಪರಿಸ್ಥಿತಿ ಹದಗೆಡಲು ಪಿಡಿಒ ಬೇಜವಾಬ್ದಾರಿಯೇ ಕಾರಣ ಕ್ರಮಕೈಗೊಳ್ಳದಿದ್ದರೆ ಉಮೇಶ ಕೆ. ಮುದ್ದಾಳ ಅವರು ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದರು ಚರಂಡಿ ನೀರು ದುರ್ವಾಸನೆ ಬೀರುತ್ತಿರುವ ಪರಿಣಾಮ: ಸೊಳ್ಳೆಗಳ ಕಾಟ ಅಧಿಕವಾಗಿದೆ. ಮಲೇರಿಯಾ ಸೇರಿದಂತೆ ಆನೇಕ ಸಾಂಕ್ರಾಮಿಕ ರೋಗಗಳು ಹರಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡ ಹಳ್ಳಿಗೆ ಭೇಟಿ ನೀಡಿ, ಅಗತ್ಯ ಕ್ರಮಕೈಗೊಳ್ಳಬೇಕಿದೆ ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸುವುದಾಗಿ ಗ್ರಾಮಸ್ಥರೊಂದಿಗೆ ಉಮೇಶ ಕೆ ಮುನ್ನಾಳ ಎಚ್ಚರಿಕೆ ನೀಡಿದ್ದಾರೆ. ಇದೇ ಸಂಧರ್ಬದಲ್ಲಿ ಠಾಣಗುಂದಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಜೆಇ ಗಂಗಣ್ಣ, ಚಂದಪ್ಪ, ದೇವಪ್ಪ, ಆನಂದ, ಮರೆಪ್ಪ ಪವನ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು. ತಳಕ ಪ್ರಮುಖ ಬಿದಿಗಳಲ್ಲಿ ಒಳ ಚರಂಡಿ ನೀರು ರಸ್ತೆ ಮೇಲೆ ನೀರು ಹರಿದು ಸಮರ್ಪಕವಾಗಿ ರಸ್ತೆ ಮತ್ತು ಒಳಚರಂಡಿ ಇಲ್ಲದ ಕಾರಣ ತಗ್ಗು ಗುಂಡಿಗಳಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರ ಗೋಳು ಕೇಳೋರು ಯಾರು ಎಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ ನಾಳೆಯಿಂದ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಪ್ರಾರಂಭವಾಗಲಿದೆ. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಹರ್ಷ ವ್ಯಕ್ತಪಡಿಸಿದ್ದಾರೆ.2
- ಕರೆಮ್ಮ ಜಿ ನಾಯಕ್ ಶಾಸಕರ ಹುಟ್ಟು ಹಬ್ಬದ ವಿಶೇಷ ಸಂಚಿಕೆ ನಿಮ್ಮ ಮುಗಿಲಿಗೆ1
- ಈದ್ ಮಿಲಾದ್ ಹಬ್ಬವು ಇಸ್ಲಾಂ ಧರ್ಮದ ಕೊನೆಯ ದೂತರಾದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನವನ್ನು ಸ್ಮರಿಸಲು ಆಚರಿಸುವ ಪವಿತ್ರ ದಿನವಾಗಿದೆ ಗೋಗಿ ಎಲ್ಲಿ ಪಥಸಂಚಲನ ನಡೆಯಿತು ಸ್ಥಳೀಯ ಪೊಲೀಸರು, ಮಹಿಳಾ ಸಿಬ್ಬಂದಿ, ಕೆಎಸ್‌ಆರ್‌ಪಿ (KSRP) ತುಕಡಿಗಳು ಮತ್ತು ಗೃಹ ರಕ್ಷಕ ದಳದವರು.ಮಾರ್ಗ: ಊರಿನ ಪ್ರಮುಖ ವೃತ್ತಗಳು, ಮಾರುಕಟ್ಟೆಗಳು ಮತ್ತು ಸಂವೇದನಾಶೀಲ ಪ್ರದೇಶಗಳ ಮೂಲಕ ಸಾಗುತ್ತದೆ1
- ಈದ್ ಮಿಲಾದ್ ಸಂಭ್ರಮದ ಆಚರಣೆ ದೇವದುರ್ಗದ ಮುಖ್ಯ ರಸ್ತೆ ಮೂಲಕ ಮೆಕ್ಕಾ ಮದೀನಾ ಸ್ಥಬ್ದ ಚಿತ್ರಗಳ ಮೆರವಣಿಗೆ1
- ಸದನದ ಒಳಗೆ ಹೋರಾಟ ಆಗಿದೆ ಸದನದ ಹೊರಗೆ ಹೋರಾಟ ಸೆ.1 ರಿಂದ ಆರಂಭ ಚಲವಾದಿ ನಾರಾಯಣಸ್ವಾಮಿ ರಾಯಚೂರು: ಸಚಿವ ನಾಗೇಂದ್ರ ಅವರ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಹೇಳಿದರು. ರಾಯಚೂರಿನಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ತಾನು ಗಂಭೀರವಾಗಿದ್ದು, ಹೆಚ್ಚು ಮಾತನಾಡಿದರೆ ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು. ಪರಿಶಿಷ್ಟ ವರ್ಗಗಳ ಜನರಲ್ಲಿ ಸಾಕಷ್ಟು ಬಡತನವಿದ್ದು, ಅವರಿಗೆ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಯೋಜನೆಗಳನ್ನು ತಲುಪಿಸಬೇಕಿತ್ತು. ಆದರೆ 187 ಕೋಟಿ ರೂ. ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿರುವುದು ನೋವಿನ ಸಂಗತಿ. ಅದೇ ಸಮುದಾಯದ ಸಚಿವರ ಕೈಕೆಳಗೆ ಈ ಅಕ್ರಮ ನಡೆದಿದೆ ಎನ್ನುವುದು ಬೇಸರದ ಸಂಗತಿ. ಸಚಿವ ಸ್ಥಾನ ನೀಡಿರುವುದನ್ನು ವಿರೋಧಿಸಿ ಸೆಪ್ಟೆಂಬರ್ 1ರಿಂದ ಪಾದಯಾತ್ರೆ ಸೇರಿದಂತೆ ಹೋರಾಟ ಆರಂಭಿಸಲಾಗುವುದು ಎಂದರು.1
- ಕಾಳಗಿಯಲ್ಲಿ ಕ್ರಾಪ್ ಕಟಿಂಗ್‌ನಲ್ಲಿ ಲೋಪ ದೋಷ: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಹುಲಸಗುಡ್ ಗ್ರಾಮದಲ್ಲಿ ರೈತರ ಹಾಗೂ ರೈತನ ಮುಖಂಡರು ಗೆರಾವ್–ಪ್ರತಿಭಟನೆ. ಕ್ರಾಪ್ ಕಟಿಂಗ್‌ನಲ್ಲಿ ಲೋಪ: ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಹಾರ್ಟಿಕಲ್ಚರ್ ಅಧಿಕಾರಿಗಳು, ಬೆಳೆ ವಿಮಾ ಕಂಪನಿಯ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳ ವಿರುದ್ಧ ಹುಲಸಗುಡ್ ಗ್ರಾಮದ ರೈತರು ಹಾಗೂ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸುಮಾರು ನಾಲ್ಕೈದು ಗಂಟೆಗಳ ಕಾಲ ಗೆರಾವ್ ಹಾಕಿ ಪ್ರತಿಭಟನೆ ನಡೆಸಿದರು. ರೈತರ ಬೆಳೆಗಳಿಗೆ ಸಂಬಂಧಿಸಿದಂತೆ ಸರಿಯಾದ ಕ್ರಾಪ್ ಕಟಿಂಗ್ ಮಾಡದೆ ಇರುವುದರಿಂದ ಬೆಳೆ ವಿಮೆ ಹಾಗೂ ಪರಿಹಾರ ಪಡೆಯುವಲ್ಲಿ ರೈತರಿಗೆ ಅನ್ಯಾಯವಾಗುವ ಆತಂಕ ಎದುರಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಹೋದ ವರ್ಷ ಅತಿವೃಷ್ಟಿಯಾಗಿ ಹಾಳಾಗಿರ್ತಕ್ಕಂತ ಬೆಳೆ ಇನ್ಸೂರೆನ್ಸ್ ಸರಿಯಾಗಿ ಬರದೇ ರೈತ ಸಂಕಷ್ಟದಲ್ಲಿದ್ದಾನೆ. ಈ ವರ್ಷ ಮಳೆ ಇಲ್ಲದೆ ಬೆಳೆದೆ ಬೆಳೆ ಇಲ್ಲದೆ ರೈತ ಕಷ್ಟದಲ್ಲಿದ್ದಾನೆ ಬರದ ಛಾಯ ಮೂಡಿದೆ. ಹೀಗಿರುವಾಗ ಮತ್ತೆ ಇನ್ಸೂರೆನ್ಸ್ ಕಂಪನಿ ದವರು ಅದೇ ರಾಗ ಅದೇ ಹಾಡು ಹಾಡುತ್ತಿದ್ದಾರೆ. ಸ್ಥಳದಲ್ಲಿದ್ದ ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ತಾಲೂಕು ತಹಸೀಲ್ದಾರ್ ಆಗಮಿಸಿ ರೈತರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ, ಸಮಸ್ಯೆಯ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿದರು. ಸರಿಯಾದ ರೀತಿಯಲ್ಲಿ ಕ್ರಾಪ್ ಕಟಿಂಗ್ ಮಾಡದಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತಹಸೀಲ್ದಾರ್ ಅವರ ಭರವಸೆ ಹಾಗೂ ಅಧಿಕಾರಿಗಳಿಂದ ಸಮಸ್ಯೆ ಪರಿಶೀಲಿಸುವ ಭರವಸೆ ದೊರೆತ ಹಿನ್ನೆಲೆಯಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ತಿಳಿಗೊಳಿಸಿದರು. ರೈತರ ಬೆಳೆ ವಿಮೆ ಮತ್ತು ಬೆಳೆ ಪರಿಹಾರದಲ್ಲಿ ಯಾವುದೇ ರೀತಿಯ ತಾರತಮ್ಯವಾಗಬಾರದು. ಸರಿಯಾದ ಕ್ರಾಪ್ ಕಟಿಂಗ್ ನಡೆಸಿ ಅರ್ಹ ಪ್ರತಿಯೊಬ್ಬ ರೈತನಿಗೂ ನ್ಯಾಯ ಒದಗಿಸಬೇಕು ಎಂದು ಹುಲಸಗುಡ್ ಗ್ರಾಮದ ರೈತರು ಹಾಗೂ ಸುಂಟಾಣ್ಣ ಗ್ರಾಮದ ರೈತರು, ರೈತ ಸೇನೆ ಮುಖಂಡರು ಆಗ್ರಹಿಸಿದ್ದಾರೆ. “ರೈತರ ಬೆವರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ರೈತ ನಾಯಕ ವೀರಣ್ಣ ಗಂಗಾಣಿ ಎಚ್ಚರಿಕೆ ನೀಡಿದ್ದಾರೆ. ತಾಲೂಕ ದಂಡಾಧಿಕಾರಿಗಳಾದ ಪೃಥ್ವಿರಾಜ್ ಪಾಟೀಲ್ ರವರು ಎರಡು ಮೂರು ದಿವಸಗಳಲ್ಲಿ ಮುಖಂಡರನ್ನು ಕರೆದು ಸಭೆ ಮಾಡಿ ನಂತರ ಖುದ್ದಾಗಿ ನಾವೇ ಬಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹೊಲಗಳಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಇಒ ಬಸಲಿಂಗಪ್ಪ ಡಿಗ್ಗಿ, ಆರ್ಟಿಕಲ್ಚರ್ ಅಧಿಕಾರಿ ನಸ್ಸೀರ್ ಹೊಸಳ್ಳಿ, ಇನ್ಸೂರೆನ್ಸ್ ಕಂಪನಿ ಅಧಿಕಾರಿ ಯುವರಾಜ್, ರೈತರದ ಸಂತೋಷ್ ನಾಯ್ಕೋಡಿ,ಶಿವಶರಣಪ್ಪ ನಿಗದಳಿ, ವಿಠಲ ಸನದಿ, ಪಾಂಡುರಂಗ ರುಮ್ಮನಗೂಡ. ಸೈದಪ್ಪ ಕೊಡಡೂರ, ಸಜೀದಾಪಟೇಲ್ ಬಿರಾದಾರ್, ಸಿದಪ್ಪ ಕಂದಗುಳ, ಶಿವಪ್ಪ ಸನದಿ, ನಾಮದೇವ ರಾಠೋಡ್, ಉದಯ ಸನದಿ, ನಾಗೇಶ್ ಸನದಿ, ವಿಠ್ಠಲ್ ರೂಮನಗುಡ, ಸಂತೋಷ ಮಠಪತಿ, ಪೀರಪ್ಪ ಯಾದವ, ನಾಗಪ್ಪ ಜಡಗಿ, ಅನೇಕ ರೈತರು ಉಪಸ್ಥಿತರಿದ್ದರು1
- ದೇವದುರ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬ ಸಂಭ್ರಮ ಆಚರಣೆ ಮಾಡಲಾಯಿತು1