ಐಸಿಯುನಲ್ಲಿ ವೃದ್ಧನ ಮೇಲೆ ಕ್ರೂರ ಹಲ್ಲೆ ವೈರಲ್ ವಿಡಿಯೋಗೆ ದೇಶವ್ಯಾಪಿ ಆಕ್ರೋಶ ಹರಿಯಾಣದ ಹಿಸಾರ್‌ನ ಸಪ್ರಾ ಆಸ್ಪತ್ರೆಯ ಹಳೆಯ ಸಿಸಿಟಿವಿ ದೃಶ್ಯ ಮತ್ತೆ ಹೊರಬಿದ್ದಿದ್ದು, ನೋಡಿದವರ ಮನಸ್ಸೇ ಕಲುಕುವಂತಹ ದೃಶ್ಯ ಇದು. ಚಿಕಿತ್ಸೆ ಪಡೆಯುತ್ತಿದ್ದ ನಿರಪರಾಧ ವೃದ್ಧ ರೋಗಿ… ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಕ್ಷಣದಲ್ಲಿ, ಕಾಳಜಿಯಿಂದ ನೋಡಿಕೊಳ್ಳಬೇಕಾದ ಅಟೆಂಡೆಂಟ್‌ವೇ ಅವರ ಎದೆಗೆ ಕ್ರೂರವಾಗಿ ಗುದ್ದಿರುವುದು ಕಂಡುಬಂದಿದೆ. ಜೂನ್ 19, 2024ರಂದು ನಡೆದ ಈ ಘಟನೆ ಇದೀಗ ಮತ್ತೆ ವೈರಲ್ ಆಗಿ ಜನರಲ್ಲಿ ಕೋಪದ ಜ್ವಾಲೆ ಎಬ್ಬಿಸಿದೆ. ಜೀವ ಉಳಿಸುವ ಸ್ಥಳವಾಗಬೇಕಾದ ಆಸ್ಪತ್ರೆಗಳಲ್ಲಿ ಇಂತಹ ಅಮಾನವೀಯ ವರ್ತನೆ ನಡೆಯುತ್ತಿದೆ ಎಂಬುದೇ ಭಯ ಹುಟ್ಟಿಸುವ ಸಂಗತಿ. ಕುಟುಂಬದವರು ನ್ಯಾಯಕ್ಕಾಗಿ ಹೋರಾಡುತ್ತಿರುವಾಗ, ಈ ಘಟನೆ ಆರೋಗ್ಯ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದೆ. “ನಮ್ಮವರನ್ನು ಸುರಕ್ಷಿತವಾಗಿ ಚಿಕಿತ್ಸೆ ಕೊಡಿಸಲು ಕಳುಹಿಸಿದ್ದೇವೆ… ಆದರೆ ಇಂತಹ ಕ್ರೌರ್ಯ ಎದುರಿಸಬೇಕಾ?” ಎಂಬ ನೋವು ಪ್ರತಿಯೊಬ್ಬರ ಮನಸನ್ನು ಕಚ್ಚುವಂತಾಗಿದೆ.

- ಮಾನವ ಹಕ್ಕುಗಳ ಜಾಗೃತಿ ಸಮಿತಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹಾಗೂ ದಿವ್ಯಜ್ಯೋತಿ ಸೇವಾ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮೀಣ ಮಹಿಳೆಯರಿಗೆ ಉಚಿತವಾಗಿ ಬ್ಯೂಟಿ ಪಾರ್ಲರ್ ಹಾಗೂ ಲೇಡಿಸ್ ಟೈಲರಿಂಗ್ ತರಬೇತಿ ನೀಡಲು ಉದ್ದೇಶಿಸಲಾಗಿದೆ.1
- ತೀವ್ರ ಬರ ಪರಿಸ್ಥಿತಿಯಿಂದ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರು–ಮೇವು ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿರುವುದನ್ನು ಖಂಡಿಸಿ ಮಾರ್ಟಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು ಹಾಗೂ ಮಹಿಳೆಯರು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಖಾಲಿ ಬಿಂದಿಗೆಗಳನ್ನು ಹಿಡಿದು ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನೀರಿನ ತೀವ್ರ ಕೊರತೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಗ್ರಾಮಸ್ಥರು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಬರ ಪರಿಸ್ಥಿತಿ ಮುಂದುವರಿದರೂ ಸಮರ್ಪಕ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಜಾನುವಾರುಗಳಿಗೆ ನೀರು ಹಾಗೂ ಬೇಸಿಗೆಯಲ್ಲಿ ಅಗತ್ಯವಾದ ಮೇವು ಒದಗಿಸುವಲ್ಲಿಯೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಜೊತೆಗೆ ಸ್ವತ್ತು ಮತ್ತು ಪೋಡಿ ಸಂಬಂಧಿತ ಸಮಸ್ಯೆಗಳಿಗೂ ಪರಿಹಾರ ನೀಡದಿರುವುದನ್ನು ಖಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ ಉಮೇಶ್, ಬೋರ್‌ವೆಲ್‌ಗಳಲ್ಲಿ ನೀರು ಬತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿ, ನೀರಿನ ಅಭಾವ ಇರುವ ಪ್ರದೇಶಗಳಿಗೆ ಮೂರು ದಿನಗಳೊಳಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘಟನೆಯ ಹಿರಿಯ ಮುಖಂಡ ಶೈಲಿಂದ್ರ ಕುಮಾರ್ ರೈತರ ಮುಖಂಡ ಅರ್ಪತ್ ರಾಜ್ ಡೇವಿಡ್ ಪೀಟರ್ ಹಾಜರಿದ್ದರು2
- ಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕ ನೀರುಪಾಲು.*1
- *ಭಾರತ ನಲ್ಲಿ ವೈರಲ್*1
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಕೆಪಿಸಿಸಿಯನ್ನು ಬೆಂಬಲಿಸಿ, ಪ್ರಿಯಾಂಕಾ ಗಾಂಧಿ ಮತ್ತು ಅಜೀಜ್ ಸೇಠ್ ಅವರೊಂದಿಗೆ ಭಾರತೀಯ ಧ್ವನಿಗಳನ್ನು ಸಬಲೀಕರಣಗೊಳಿಸುವುದು, ವೈರಲ್ ರೀಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಸವಾಲುಗಳ ಮೂಲಕ ಸಕಾರಾತ್ಮಕ ಬದಲಾವಣೆಗೆ ಪ್ರೇರಣೆ ನೀಡುವುದು. #congress #tanveersait #mysore #kannadanews #congresshighcammand #rihanbaig1
- KARNATAKA RASHTRA SAMITI PAKSHA (KRS) REQUEST KEB AUTHORITIES TO CHANGE THE FALLING ELECTRIC POLE AS SOON AS POSSIBLE (LASHKAR MOHALLA EREKATTE STREET)1
- ವಾಸ್ತು ನೆಪದಲ್ಲಿ ದೌರ್ಜನ್ಯ ಆರೋಪ, ಪ್ರತಿದೂರು ಗುರುಜಿ ವಿರುದ್ಧ ಪ್ರಕರಣ, ಬೆದರಿಕೆ ಆರೋಪವೂ ಕೇಳಿಬಂದವು1
- ಮಲೆ ಮಹದೇಶ್ವರ ಬೆಟ್ಟ ‘ಹಸಿರು ನಾಳೆ-ಎಂ.ಎಂ. ಹಿಲ್ಸ್' (Green Tomorrow – MM Hills) ಅಭಿಯಾನದ ಅಂಗವಾಗಿ ಜಿಲ್ಲಾಧಿಕಾರಿ ಶ್ರೀರೂಪ ಅವರು ಬುಧವಾರ (ಏ.15) ಮಲೆ ಮಹದೇಶ್ವರ ಬೆಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣೆಯ ನೂತನ ಯಂತ್ರೋಪಕರಣಗಳನ್ನು ಅಧಿಕೃತವಾಗಿ ಉದ್ಘಾಟಿಸಿದರು. ಪವಿತ್ರ ಯಾತ್ರಾ ಸ್ಥಳದಲ್ಲಿ ಹೆಚ್ಚುತ್ತಿರುವ ಪರಿಸರ ಸವಾಲುಗಳನ್ನು ಎದುರಿಸಲು ಮತ್ತು ವೈಜ್ಞಾನಿಕ ಮಾದರಿಯಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ನೂತನವಾಗಿ ಅಳವಡಿಸಲಾದ ಯಂತ್ರಗಳು ಕಸವನ್ನು ಸಮರ್ಪಕವಾಗಿ ವಿಂಗಡಿಸಲು ಮತ್ತು ವಿಲೇವಾರಿ ಮಾಡಲು ಸಹಕಾರಿಯಾಗಲಿದ್ದು, ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರ ಸ್ನೇಹಿ ತಾಣವನ್ನಾಗಿ ಮಾಡುವ ಗುರಿಯನ್ನು ಹೊಂದಿವೆ. ಯೋಜನೆಯ ಯಶಸ್ಸಿನ ಹಿಂದಿರುವ ಪೌರಕಾರ್ಮಿಕರು ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಈ ಸಾಮೂಹಿಕ ಪ್ರಯತ್ನವು ಬೆಟ್ಟದ ನೈಸರ್ಗಿಕ ಸೌಂದರ್ಯವನ್ನು ಕಾಪಾಡುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಎ.ಇ. ರಘು, ಉಪಕಾರ್ಯದರ್ಶಿ ಚಂದ್ರಶೇಖರ್, ಮೈಕಾಪ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅಶ್ರಫುಲ್ ಹಸನ್, ಗ್ರಾಮ ಪಂಚಾಯಿತಿ ಪಿಡಿಒ ಕಿರಣ್, ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರು, ಮಂಗಳೂರಿನ ಮಿನಿ ಟೆಕ್ ಸಂಸ್ಥೆಯ ಪ್ರತಿನಿಧಿಗಳು, ಇತರರು ಉಪಸ್ಥಿತರಿದ್ದರು.4
- ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಕಂಚಿನಬಾಗಿಲ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಥೆನಾಲ್ ತುಂಬಿದ್ದ ಟ್ಯಾಂಕರ್ ಸ್ಫೋಟಗೊಂಡ . ಸ್ಪೋಟದ ತೀವ್ರತೆಗೆ ಜನ ಬೆಚ್ಚಿ ಬಿದ್ದಿದ್ದಾರೆ.. ಬೆಂಕಿ ಹೋತ್ತಿಉರಿಯುತ್ತಿರುವ ದೃಶ್ಯ ಜನರ ಎದೆ ಝಲ್ಲೆನ್ನುವಂತೆ ಮಾಡಿದೆ.. ಸುಮಾರು ಗಂಟೆಗಳ ಕಾಲ ಈ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.1