ಬೆಂದ ಬೆಳೆ, ನೊಂದ ರೈತರು! ಬರದ ಭೀಕರತೆಗೆ ಕುರುಡಾಯ್ತೇ ಸರ್ಕಾರ? ಶಿಗ್ಗಾಂವಿ: ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ವಾರದಿಂದ ಮಳೆ ಇಲ್ಲದ ಕಾರಣ ಶೇಂಗಾ, ಗೋವಿನಜೋಳ ಮೊದಲಾದ ಮಳೆಯಾಶ್ರಿತ ಬೆಳೆಗಳು ಸಂಪೂರ್ಣ ಒಣಗುವ ಹಂತದಲ್ಲಿದ್ದು ರೈತರು ತೀವ್ರ ಸಂಕಷ್ಪದ ಸುಳಿಗೆ ಸಿಲುಕಿದ್ದಾರೆ. ಬೇಳವಲಕೊಪ್ಪ, ಸುರಫಗಟ್ಟಿ, ಕ್ಯಾಲಕೊಂಡ್ ಭಾಗದಲ್ಲಿ ಮಳೆಯ ಅಭಾವದಿಂದ ಗೆಜ್ಜೆ ಶೇಂಗಾ ಹೊಲಗಳು ಬಹುಪಾಲು ಒಣಗಿ ಹೋಗಿವೆ. ಹಾಗೇ ಹಿಂಕಟ್ಪು ಬಿತ್ತಿಗೆ ಆಗಿದ್ದ, ಸೂಲಂಗಿ ಕೀಳಲು ಬಂದಿದ್ದ ಗೋವಿನ ಜೋಳ ಬೆಳೆಯ ಹೊಲಗಳು ಕೂಡ ಒಣಗಿದ್ದು, ಬೇಗ ಬಿತ್ತಿಗೆ ಆಗಿದ್ದ ಬೆಳೆಗಳಲ್ಲೂ ಕೂಡ ಇಳುವರಿ ತೀವ್ರ ಕುಸಿತ ಕಂಡಿದೆ. ಹುಲಗೂರ್ , ಅತ್ತಿಗೆರಿ, ಶಿಶುವಿನಹಾಳ, ಬಸನಾಳ, ಕೆಂಗಾಪೂರ ಮತ್ತು ಹಿರೆಬೇಂಡಿಗೆರಿ ಭಾಗಗಳಲ್ಲೂ ಇದೇ ಪರಸ್ಥಿತಿ ಇದ್ದು ಕುನ್ನೂರ್ ಭಾಗದ ಬೆಳೆಗಳಿಗೂ ಬರ ಬರೆ ಎಳೆದಿದೆ. ಆಧುನಿಕ ಕೃಷಿಯ ಖರ್ಚುವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಹಸಿರು ಕ್ರಾಂತಿಯ ಫಲವಾಗಿ ಆಧುನಿಕ ಕೃಷಿಗೆ ತೆರೆದುಕೊಂಡ ನಂತರ, ರೈತರು ಪ್ರತಿವರ್ಷ ಬಿತ್ತನೆ ಬೀಜಕ್ಕೆ ಕಂಪನಿಗಳ ಮೊರೆ ಹೋಗುವ ಅನಿವಾರ್ಯತೆ ಸೃಷ್ಠಿಯಾಗಿದೆ. ಬೀಜದ ಕಂಪನಿಗಳು ಮಾತ್ರ ಪ್ರತಿವರ್ಷವೂ ಬೀಜದ ಬೆಲೆ ಏರಿಸುತ್ತಲೇ ಸಾಗಿವೆ. ಎರಡು ವರ್ಷದಿಂದ ಈಚೆಗೆ ಗೋವಿನ ಜೋಳದ ಬೀಜದ ಬೆಲೆ ಕೆಜಿಗೆ 700 ರೂ. ಗಳಿಂದ 1200ರೂ. ವರೆಗೂ ಏರಿದೆ. ಅದೇ ರೈತರ ಗೋವಿನಜೋಳದ ಬೆಲೆ ಮಾರುಕಟ್ಪೆಯಲ್ಲಿ ಕೆಜಿಗೆ 17 ರೂ. ಇಂದ 23ರೂ. ಮಾತ್ರ ಮಾರಾಟವಾಗುತ್ತಿದೆ. ಇನ್ನು ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ ಪರಿಣಾಮ ರಸಗೊಬ್ಬರದ ಬೆಲೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ಎಲ್ಲದರ ಮಧ್ಯೆ ರೈತರು ಆತಂಕ, ಜಿಗುಪ್ಸೆಯಿಂದಲೇ ಜೀವನ ಸಾಗಿಸಬೇಕಾದ ಪರಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳ ಕೃಷಿ ಕ್ಷೇತ್ರದೆಡೆಗಿನ ಅವಗಣನೆ ಹಾಗೇ ಮುಂದುವರೆದಿದೆ. ಕೃಷಿ ಕ್ಷೇತ್ರದ ಬಿಕ್ಕಟ್ಪು ಹಾಗೂ ರೈತರ ಆತ್ಮಹತ್ಯಾ ಸರಣಿಯ ಹಿನ್ನೆಲೆಯಲ್ಲಿ ಒಕ್ಕೂಟ ಸರ್ಕಾರದಿಂದ ರಚಿತವಾಗಿದ್ದ ಡಾ. ಎಂ. ಎಸ್. ಸ್ವಾಮಿನಾಥನ್ ಅವರ ವರದಿ ಕಳೆದ 26 ವರ್ಷಗಳಿಂದಲೂ ಧೂಳು ತಿನ್ನುತ್ತ ಹಾಗೇ ಬಿದ್ದಿದೆ. ರೈತರ ಸಶಕ್ತಿಕರಣ ಹಾಗೂ ಸುಸ್ಥಿರ ಕೃಷಿಗಾಗಿ ಸ್ವಾಮಿನಾಥನ್ ವರದಿ ಶಿಫಾರಸ್ಸು ಮಾಡಿದ್ದ c2+50 ಸೂತ್ರದ ಜಾರಿ ಕೂಡ ಕನಸಿನ ಮಾತಾಗಿದೆ. ರೈತರ ಕೃಷಿ ಉತ್ಪನ್ನಗಳಿಗೆ c2+50ಸೂತ್ರದ ಅನ್ವಯ ಬೆಲೆ ನಿಗದಿ ಮಾಡಬೇಕು. ಮತ್ತು ಅದನ್ನು ಶಾಸನಬದ್ದಗೊಳಿಸಬೇಕೆಂದು ರೈತ ಸಂಘಟನೆಗಳು ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಅದಿನ್ನೂ ಬೇಡಿಕೆಯಾಗಿಯೆ ಉಳಿದಿದೆ. ಅದರಲ್ಲೂ ಈ ವರ್ಷ ರಾಜ್ಯದಾದ್ಯಂತ ಬರದ ಛಾಯೆ ಮುಸುಕಿದ್ದು, ರಾಜ್ಯ ಸರ್ಕಾರ ಇತ್ತೀಚೆಗೆ 101 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿತ್ತು. ಮತ್ತೆ ಈ ಪಟ್ಪಿಗೆ ಕೆಲವು ತಾಲೂಕುಗಳನ್ನು ಸೇರ್ಪಡೆ ಮಾಡಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕನ್ನು ಹೊರತುಪಡಿಸಿ, ಬೇರೆ ಯಾವೊಂದು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದಿರುವುದು ಜಿಲ್ಲೆಯ ರೈತ ಸಮೂದಾಯವನ್ನು ದಿಗ್ಮೂಢಗೊಳಿಸಿದೆ. ಜಿಲ್ಲೆಯಲ್ಲಿ ಬಿತ್ತನೆಯ ನಂತರ ಮಳೆ ಕೊರತೆ ಉದ್ಭವಿಸಿದ್ದು ಜನಪ್ರತಿನಿಧಿಗಳು ಬರಪೀಡಿತ ಪ್ರದೇಶಗಳ ಘೋಷಣೆಗೆ ಇರುವ ಮಾನದಂಡಗಳ ಕಡೆ ಬೆರಳು ತೋರಿಸುತ್ತಿದ್ದರೆ, ಈ ಮಾನದಂಡಗಳಾದರೂ ರೈತರ ಹಿತಾಸಕ್ತಿಗಾಗಿ ರೂಪಿತಗೊಂಡಿವೆಯೋ ಅಥವಾ ಸರ್ಕಾರಗಳು ಪರಿಹಾರ ನೀಡುವ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲೆಂದೇ ಮಾಡಿಕೊಂಡಿರುವ ನೆಪಗಳೊ ಎಂದು ಜನರು ಪ್ರಶ್ನೆ ಮಾಡುವಂತಾಗಿದೆ.. ಸಂಕಷ್ಟದ ಸ್ಥಿತಿಯಲ್ಲಿರುವ ರೈತರ ನೆರವಿಗೆ ಧಾವಿಸುವುದು ಯಾವುದೇ ಸರ್ಕಾರದ ಮಾನವೀಯ ಧರ್ಮವಾಗಿದ್ದು, ಸರ್ಕಾರಗಳು ಈ ಬಗ್ಗೆ ಇನ್ನೂ ಮೀನ ಮೇಷ ಎಣಿಸುತ್ತ ಕೂತಿರುವುದನ್ನು ನೋಡಿದರೆ " ಇದು ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸುವ ಹವಣಿಕೆಯೇ? " ಎಂಬ ಅನುಮಾನ ಮೂಡದೇ ಇರದು. ಹಾವೇರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 40ಕ್ಕಿಂತ ಹೆಚ್ತು ಮಳೆ ಅಭಾವ ಉಂಟಾಗಿದೆ ಎಂದು ದಾಖಲೆಗಳೇ ಹೇಳುತ್ತಿದ್ದು, ಶೇ. 60 ರಷ್ಪು ಬೆಳೆ ಇಳುವರಿ ಕುಂಠಿತಗೊಂಡಿರುವುದಾಗಿ ವರದಿಯಾಗಿದೆ. ಜಿಲ್ಲೆಯ ರಾಣೇಬೆನ್ನೂರು, ಹಾವೇರಿ ಹಾಗೂ ಸವಣೂರು ಸಂಪೂರ್ಣ ಬಯಲು ಸೀಮೆಯ ಪ್ರದೇಶಗಳಾಗಿದ್ದು ಇಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ. ಈ ಎಲ್ಲ ಅಂಶಗಳ ಕುರಿತು ಕುಲಂಕುಶ ಪರಿಶೀಲನೆ ನಡೆಸಿ, ಸರ್ಕಾರ ಹಾವೇರಿ ಜಿಲ್ಲೆಯ ಎಲ್ಲ ಬರ ಪೀಡಿತ ತಾಲೂಕುಗಳ ರೈತರ ನೆರವಿಗೆ ಬರುವುದೇ? ರೈತರ ಆಶೋತ್ತರಗಳಿಗೆ ಸ್ಪಂದಿಸುವುದೆ? ಎಂಬುದನ್ನು ಕಾದು ನೋಡಬೇಕಾದೆ.
ಬೆಂದ ಬೆಳೆ, ನೊಂದ ರೈತರು! ಬರದ ಭೀಕರತೆಗೆ ಕುರುಡಾಯ್ತೇ ಸರ್ಕಾರ? ಶಿಗ್ಗಾಂವಿ: ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ವಾರದಿಂದ ಮಳೆ ಇಲ್ಲದ ಕಾರಣ ಶೇಂಗಾ, ಗೋವಿನಜೋಳ ಮೊದಲಾದ ಮಳೆಯಾಶ್ರಿತ ಬೆಳೆಗಳು ಸಂಪೂರ್ಣ ಒಣಗುವ ಹಂತದಲ್ಲಿದ್ದು ರೈತರು ತೀವ್ರ ಸಂಕಷ್ಪದ ಸುಳಿಗೆ ಸಿಲುಕಿದ್ದಾರೆ. ಬೇಳವಲಕೊಪ್ಪ, ಸುರಫಗಟ್ಟಿ, ಕ್ಯಾಲಕೊಂಡ್ ಭಾಗದಲ್ಲಿ ಮಳೆಯ ಅಭಾವದಿಂದ ಗೆಜ್ಜೆ ಶೇಂಗಾ ಹೊಲಗಳು ಬಹುಪಾಲು ಒಣಗಿ ಹೋಗಿವೆ. ಹಾಗೇ ಹಿಂಕಟ್ಪು ಬಿತ್ತಿಗೆ ಆಗಿದ್ದ, ಸೂಲಂಗಿ ಕೀಳಲು ಬಂದಿದ್ದ ಗೋವಿನ ಜೋಳ ಬೆಳೆಯ ಹೊಲಗಳು ಕೂಡ ಒಣಗಿದ್ದು, ಬೇಗ ಬಿತ್ತಿಗೆ ಆಗಿದ್ದ ಬೆಳೆಗಳಲ್ಲೂ ಕೂಡ ಇಳುವರಿ ತೀವ್ರ ಕುಸಿತ ಕಂಡಿದೆ. ಹುಲಗೂರ್ , ಅತ್ತಿಗೆರಿ, ಶಿಶುವಿನಹಾಳ, ಬಸನಾಳ, ಕೆಂಗಾಪೂರ ಮತ್ತು ಹಿರೆಬೇಂಡಿಗೆರಿ ಭಾಗಗಳಲ್ಲೂ ಇದೇ ಪರಸ್ಥಿತಿ ಇದ್ದು ಕುನ್ನೂರ್ ಭಾಗದ ಬೆಳೆಗಳಿಗೂ ಬರ ಬರೆ ಎಳೆದಿದೆ. ಆಧುನಿಕ ಕೃಷಿಯ ಖರ್ಚುವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಹಸಿರು ಕ್ರಾಂತಿಯ ಫಲವಾಗಿ ಆಧುನಿಕ ಕೃಷಿಗೆ ತೆರೆದುಕೊಂಡ ನಂತರ, ರೈತರು ಪ್ರತಿವರ್ಷ ಬಿತ್ತನೆ ಬೀಜಕ್ಕೆ
ಕಂಪನಿಗಳ ಮೊರೆ ಹೋಗುವ ಅನಿವಾರ್ಯತೆ ಸೃಷ್ಠಿಯಾಗಿದೆ. ಬೀಜದ ಕಂಪನಿಗಳು ಮಾತ್ರ ಪ್ರತಿವರ್ಷವೂ ಬೀಜದ ಬೆಲೆ ಏರಿಸುತ್ತಲೇ ಸಾಗಿವೆ. ಎರಡು ವರ್ಷದಿಂದ ಈಚೆಗೆ ಗೋವಿನ ಜೋಳದ ಬೀಜದ ಬೆಲೆ ಕೆಜಿಗೆ 700 ರೂ. ಗಳಿಂದ 1200ರೂ. ವರೆಗೂ ಏರಿದೆ. ಅದೇ ರೈತರ ಗೋವಿನಜೋಳದ ಬೆಲೆ ಮಾರುಕಟ್ಪೆಯಲ್ಲಿ ಕೆಜಿಗೆ 17 ರೂ. ಇಂದ 23ರೂ. ಮಾತ್ರ ಮಾರಾಟವಾಗುತ್ತಿದೆ. ಇನ್ನು ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ ಪರಿಣಾಮ ರಸಗೊಬ್ಬರದ ಬೆಲೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ಎಲ್ಲದರ ಮಧ್ಯೆ ರೈತರು ಆತಂಕ, ಜಿಗುಪ್ಸೆಯಿಂದಲೇ ಜೀವನ ಸಾಗಿಸಬೇಕಾದ ಪರಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳ ಕೃಷಿ ಕ್ಷೇತ್ರದೆಡೆಗಿನ ಅವಗಣನೆ ಹಾಗೇ ಮುಂದುವರೆದಿದೆ. ಕೃಷಿ ಕ್ಷೇತ್ರದ ಬಿಕ್ಕಟ್ಪು ಹಾಗೂ ರೈತರ ಆತ್ಮಹತ್ಯಾ ಸರಣಿಯ ಹಿನ್ನೆಲೆಯಲ್ಲಿ ಒಕ್ಕೂಟ ಸರ್ಕಾರದಿಂದ ರಚಿತವಾಗಿದ್ದ ಡಾ. ಎಂ. ಎಸ್. ಸ್ವಾಮಿನಾಥನ್ ಅವರ ವರದಿ ಕಳೆದ 26 ವರ್ಷಗಳಿಂದಲೂ ಧೂಳು ತಿನ್ನುತ್ತ ಹಾಗೇ ಬಿದ್ದಿದೆ. ರೈತರ
ಸಶಕ್ತಿಕರಣ ಹಾಗೂ ಸುಸ್ಥಿರ ಕೃಷಿಗಾಗಿ ಸ್ವಾಮಿನಾಥನ್ ವರದಿ ಶಿಫಾರಸ್ಸು ಮಾಡಿದ್ದ c2+50 ಸೂತ್ರದ ಜಾರಿ ಕೂಡ ಕನಸಿನ ಮಾತಾಗಿದೆ. ರೈತರ ಕೃಷಿ ಉತ್ಪನ್ನಗಳಿಗೆ c2+50ಸೂತ್ರದ ಅನ್ವಯ ಬೆಲೆ ನಿಗದಿ ಮಾಡಬೇಕು. ಮತ್ತು ಅದನ್ನು ಶಾಸನಬದ್ದಗೊಳಿಸಬೇಕೆಂದು ರೈತ ಸಂಘಟನೆಗಳು ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಅದಿನ್ನೂ ಬೇಡಿಕೆಯಾಗಿಯೆ ಉಳಿದಿದೆ. ಅದರಲ್ಲೂ ಈ ವರ್ಷ ರಾಜ್ಯದಾದ್ಯಂತ ಬರದ ಛಾಯೆ ಮುಸುಕಿದ್ದು, ರಾಜ್ಯ ಸರ್ಕಾರ ಇತ್ತೀಚೆಗೆ 101 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿತ್ತು. ಮತ್ತೆ ಈ ಪಟ್ಪಿಗೆ ಕೆಲವು ತಾಲೂಕುಗಳನ್ನು ಸೇರ್ಪಡೆ ಮಾಡಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕನ್ನು ಹೊರತುಪಡಿಸಿ, ಬೇರೆ ಯಾವೊಂದು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದಿರುವುದು ಜಿಲ್ಲೆಯ ರೈತ ಸಮೂದಾಯವನ್ನು ದಿಗ್ಮೂಢಗೊಳಿಸಿದೆ. ಜಿಲ್ಲೆಯಲ್ಲಿ ಬಿತ್ತನೆಯ ನಂತರ ಮಳೆ ಕೊರತೆ ಉದ್ಭವಿಸಿದ್ದು ಜನಪ್ರತಿನಿಧಿಗಳು ಬರಪೀಡಿತ ಪ್ರದೇಶಗಳ ಘೋಷಣೆಗೆ ಇರುವ ಮಾನದಂಡಗಳ ಕಡೆ ಬೆರಳು ತೋರಿಸುತ್ತಿದ್ದರೆ, ಈ ಮಾನದಂಡಗಳಾದರೂ ರೈತರ ಹಿತಾಸಕ್ತಿಗಾಗಿ ರೂಪಿತಗೊಂಡಿವೆಯೋ ಅಥವಾ ಸರ್ಕಾರಗಳು ಪರಿಹಾರ ನೀಡುವ ತಮ್ಮ ಜವಾಬ್ದಾರಿಯಿಂದ
ನುಣುಚಿಕೊಳ್ಳಲೆಂದೇ ಮಾಡಿಕೊಂಡಿರುವ ನೆಪಗಳೊ ಎಂದು ಜನರು ಪ್ರಶ್ನೆ ಮಾಡುವಂತಾಗಿದೆ.. ಸಂಕಷ್ಟದ ಸ್ಥಿತಿಯಲ್ಲಿರುವ ರೈತರ ನೆರವಿಗೆ ಧಾವಿಸುವುದು ಯಾವುದೇ ಸರ್ಕಾರದ ಮಾನವೀಯ ಧರ್ಮವಾಗಿದ್ದು, ಸರ್ಕಾರಗಳು ಈ ಬಗ್ಗೆ ಇನ್ನೂ ಮೀನ ಮೇಷ ಎಣಿಸುತ್ತ ಕೂತಿರುವುದನ್ನು ನೋಡಿದರೆ " ಇದು ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸುವ ಹವಣಿಕೆಯೇ? " ಎಂಬ ಅನುಮಾನ ಮೂಡದೇ ಇರದು. ಹಾವೇರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 40ಕ್ಕಿಂತ ಹೆಚ್ತು ಮಳೆ ಅಭಾವ ಉಂಟಾಗಿದೆ ಎಂದು ದಾಖಲೆಗಳೇ ಹೇಳುತ್ತಿದ್ದು, ಶೇ. 60 ರಷ್ಪು ಬೆಳೆ ಇಳುವರಿ ಕುಂಠಿತಗೊಂಡಿರುವುದಾಗಿ ವರದಿಯಾಗಿದೆ. ಜಿಲ್ಲೆಯ ರಾಣೇಬೆನ್ನೂರು, ಹಾವೇರಿ ಹಾಗೂ ಸವಣೂರು ಸಂಪೂರ್ಣ ಬಯಲು ಸೀಮೆಯ ಪ್ರದೇಶಗಳಾಗಿದ್ದು ಇಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ. ಈ ಎಲ್ಲ ಅಂಶಗಳ ಕುರಿತು ಕುಲಂಕುಶ ಪರಿಶೀಲನೆ ನಡೆಸಿ, ಸರ್ಕಾರ ಹಾವೇರಿ ಜಿಲ್ಲೆಯ ಎಲ್ಲ ಬರ ಪೀಡಿತ ತಾಲೂಕುಗಳ ರೈತರ ನೆರವಿಗೆ ಬರುವುದೇ? ರೈತರ ಆಶೋತ್ತರಗಳಿಗೆ ಸ್ಪಂದಿಸುವುದೆ? ಎಂಬುದನ್ನು ಕಾದು ನೋಡಬೇಕಾದೆ.
- ಸೆಕ್ಯೂರಿಟಿ, ಕಾರು, ದುಬಾರಿ ವಸ್ತುಗಳನ್ನೆಲ್ಲ ಬದಿಗಿಟ್ಟು ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ ಅವರ ಆಜ್ಞೆಯಂತೆ ಎಲ್ಲವನ್ನು ಮಾಡಿದ್ದೇನೆ: ಸೆಕ್ಯೂರಿಟಿ, ಕಾರು, ದುಬಾರಿ ವಸ್ತುಗಳನ್ನೆಲ್ಲ ಬದಿಗಿಟ್ಟು ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ1
- ಹಾವೇರಿ: ವಂದೇ ಮಾತರಂನ ಕೇವಲ 2 ಚರಣಗಳನ್ನು ಮಾತ್ರ ಹಾಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಬಿಜೆಪಿ ಹಾವೇರಿ ನಗರ ಮಂಡಲ ತೀವ್ರವಾಗಿ ಖಂಡಿಸಿದೆ. 1937ರಲ್ಲಿ ಕಾಂಗ್ರೆಸ್ ಮುಸ್ಲಿಂ ಲೀಗ್ ಒತ್ತಡಕ್ಕೆ ಮಣಿದು ವಂದೇ ಮಾತರಂಗೆ 2 ಚರಣಗಳಿಗೆ ಕತ್ತರಿ ಹಾಕಿತ್ತು. ಇದು ಸಂವಿಧಾನದ ತೀರ್ಮಾನವಲ್ಲ, ಕಾಂಗ್ರೆಸ್‌ನ ರಾಜಕೀಯ ನಿರ್ಧಾರ. 24 ಜನವರಿ 1950ರಲ್ಲಿ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಜನಗಣಮನ ಮತ್ತು ವಂದೇ ಮಾತರಂ ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ಅಧಿಕೃತವಾಗಿ ಹೇಳಿದ್ದರು. ತುಷ್ಟೀಕರಣ ರಾಜಕಾರಣಕ್ಕಾಗಿ ಕಾಂಗ್ರೆಸ್ ಇಂದು ಮತ್ತೆ ವಂದೇ ಮಾತರಂಗೆ ಕತ್ತರಿ ಹಾಕಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇಂದು ವಂದೇ ಮಾತರಂಗೆ ಕತ್ತರಿ ಹಾಕುವವರು ನಾಳೆ ಕುವೆಂಪು ರಚಿತ ನಾಡಗೀತೆಗೆ ಕತ್ತರಿ ಹಾಕುತ್ತಾರಾ? ಎಂದು ಪ್ರಶ್ನಿಸಿದೆ. ನೇಣುಗಂಬ ಏರಿದರೂ ವಂದೇ ಮಾತರಂ ಹಾಡುತ್ತೇವೆ ಎಂದಿದ್ದ ಕಾಂಗ್ರೆಸ್, ಈಗ ನೇಣುಗಂಬಕ್ಕೆ ಏರಿಸಿದರೂ ಹಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿರುವುದು ಖಂಡನೀಯ ಎಂದು ಹಾವೇರಿ ವಿಧಾನಸಭಾ ಕೊಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷರದ ಸಿದ್ದರಾಜು ಕಲಕೋಟಿ, ನಗರ ಮಂಡಲ ಅಧ್ಯಕ್ಷ *ಕಿರಣ್ ಚನಬಸಪ್ಪ ಕೊಳ್ಳಿ ಈರಣ್ಣ ಹೇರೂರು, ಅಲ್ಲಾಬಾಕ್ಸ್ ತಿಮ್ಮಾಪುರ, ನಿರಂಜನ್ ಹೇರೂರು ನಗರ ಮಂಡಲದ ಎಸ್‌ಸಿ ಮೋರ್ಚಾ ಅಧ್ಯಕ್ಷರಾದ ಸುನಿಲ್ ಲಕ್ಷ್ಮಣ ಬೆಟಗೇರಿ, ಮಾರುತಿ ಸವಣುರ ಗಿರೀಶ್ ಶೆಟ್ಟಿ, ಹೊನ್ನಪ್ಪ ಮಾಳಗಿ ಹಾಗೂ ಬಿಜೆಪಿ ಕಾರ್ಯಕರ್ತರು ಮುಖಂಡರು ಸೇರಿ ಭಾಗವಹಿಸಿದ್ದರು *1
- "ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ" ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಸರಕಾರದ ನೂತನ ಪ್ರಜಾ ಸೇವಾ ಆಂದೋಲನ ದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ ಎನ್ ಎಚ್ ಕೋನರಡ್ಡಿಯವರು .... "ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ" ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಸರಕಾರದ ನೂತನ ಪ್ರಜಾ ಸೇವಾ ಆಂದೋಲನ ದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ ಎನ್ ಎಚ್ ಕೋನರಡ್ಡಿಯವರು ....1
- ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ. ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ. ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ. ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ. ಗದಗ : ಪವಿತ್ರ ಶ್ರಾವಣ ಮಾಸದ ನಿಮಿತ್ಯ ತಿಂಗಳ ಪರ್ಯಂತ ಆರಂಭವಾದ ಪುರಾಣ ಪ್ರವಚನ,ಭಜನೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಸರ್ವೇ ಸಾಮಾನ್ಯವಾಗಿ ನಡೆಯುತ್ತಿರುವುದು ಕಂಡು ಬರುತ್ತವೆ ಅದರಂತೆ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಮಹಾ ಮಂಗಲ ನಿಮಿತ್ಯವಾಗಿ ಭರ್ಜರಿ ತಯಾರಿ ನಡೆಸಿರುವ ದೃಶ್ಯಗಳು ನೋಡುಗರ ಕಣ್ಮಣ ಸೆಳೆಯಿತು. ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಅಂಗವಾಗಿ ಮಹಾ ಮಂಗಲವು ಬುಧವಾರ ಜರುಗಿವುದರ ಪೂರ್ವದಲ್ಲಿ ಮಂಗಳವಾರ ರಾತ್ರಿ ಸಂಪೂರ್ಣ ಸಪ್ತಾಹ ಕಾರ್ಯಕ್ರಮ ನೆರವೇರಸಲಾಗುವುದು,ಅದರ ಪ್ರಯುಕ್ತ ಗ್ರಾಮದ ಶ್ರೀ ಮಾರುತಿ ಮಂದಿರವನ್ನೊಳಗೊಂಡು ಗ್ರಾಮ ಪಂಚಾಯತ ಮುಂದಿನ ಆವರಣದಲ್ಲಿ ಮಹಿಳೆಯರು ಸೇರಿ ರಂಗೋಲಿ ಬಿಡಿಸುತ್ತಿರುವುದು ಹಾಗೂ ದಾರಿ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಅಳವಡಿಸಿರಿ ಶೃಂಗರಿಸಿರುವುದು ಬಹು ಸುಂದರವಾಗಿ ಕಂಗೊಳಿಸುತ್ತಿರುವುದು. ನೋಡುಗರ ಕಣ್ಮಣಿ ಸೆಳೆಯಿತು. ಸಂಘದ ಸಮಿತ್ರರು ಮಾಸ ಪರ್ಯಂತ ಗ್ರಾಮದಲ್ಲಿ ಭಜನೆ ಮಾಡುತ್ತಾ ಭಕ್ತಿಯ ಪದಗಳನ್ನು ಪಠಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಗ್ರಾಮದ ಅದಿದೇವ ದೇವತೆಗಳಿಗೆ ಕಾಯಿ ಕರ್ಪುರ ದೀಪಗಳ ಬೆಳಗುತ್ತಾ ಭಕ್ತಿಯ ಗಾನ ಸುಧೆಗಳನ್ನು ಪ್ರತಿ ದಿನ ಬೆಳಗಿನ ಜಾವ ಮೊಳಗಿಸುತ್ತಿರುವುದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದ್ದವು.. ಶ್ರಾವಣ ಮಾಸದ ಕೊನೆಯ ದಿವಸ ಭಜನಾ ಮುಕ್ತಾಯದ ಹಿಂದಿನ ದಿನ ಭರ್ಜರಿ ತಯಾರಿ ನಡೆಸಿರುವುದು ಗ್ರಾಮದ ತುಂಬೆಲ್ಲಾ ಹಬ್ಬದ ಸಂಭ್ರಮದ ವಾತಾವರಣ ಆವರಿಸಿತ್ತು...2
- ಶಿವಮೊಗ್ಗ,: ತನು ಜ್ಯೂಸ್ ಸೆಂಟರ್ ಬೇಟಿ ನೀಡಿದ ಅಧಿಕಾರಿಗಳ ತಂಡ ಜ್ಯೂಸ್ ಮಾಲಿಕನ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ತನು ಜ್ಯೂಸ್ ಸೆಂಟರ್ ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದಾಗ ಕೊಳೆತ ಹಣ್ಣುಗಳನ್ನು ಶೇಖರಿಸಿಟ್ಟಿದ್ದ ಬ್ರಿಡ್ಜ್ ತಪಾಸಣೆ ಮಾಡಿದಾಗ ಸೇಬು, ಮೂಸಂಬಿ, ಕಲ್ಲಂಗಡಿ, ಅವಕೊಡ,ದ್ರಾಕ್ಷಿ, ಬಾಳೆಹಣ್ಣು, ಮಾವಿನಹಣ್ಣು , ಬೆಣ್ಣೆ ಹಣ್ಣು,ಹೀಗೆ ಹಲವಾರು ಹಣ್ಣುಗಳಿಂದ ಜ್ಯೂಸ್ ತಯಾರಿಸಿ ಸಾರ್ವಜನಿಕರಿಗೆ ಕೊಡುತ್ತಿರುವುದು ಕಂಡುಬಂದಿದ್ದು ಹಾಗೂ ಕೆಲವರು ಆಸ್ಪತ್ರೆಯ ರೋಗಿಗಳಿಗೂ ಸಹ ಇದೇ ಕೊಳೆತ ಹಣ್ಣಿನಿಂದ ಜ್ಯೂಸ್ ತೆಗೆದುಕೊಂಡು ಹೋಗಿರುವುದು ಕೂಡ ಗಮನಕ್ಕೆ ಬಂದಿರುವುದು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ ಕೂಡಲೇ ಇದನ್ನು ಸೀಜ್ ಮಾಡಲಾಗಿದೆ. ಜ್ಯೂಸ್ ಮಾಲಿಕನ ಮೇಲೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.1
- 🌾ಗಜೇಂದ್ರಗಡ ನಗರ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ನಿರಂತರ ಶ್ರಮ… ನನ್ನನ್ನು ಕೆಲವರು ವಿರೋಧಿಸಿದ್ದು ನನ್ನ ವ್ಯಕ್ತಿತ್ವವನ್ನಲ್ಲ… ನನ್ನ ಸಾಮರ್ಥ್ಯವನ್ನು. ಅವರಲ್ಲಿ ಕೆಲವರು ನನ್ನಿಂದ ಅಧಿಕಾರದ ಲಾಭ ಪಡೆದವರೇ ಆಗಿದ್ದರು. “ಸ್ವತಂತ್ರವಾಗಿ ಇದ್ದು ಕೆಲಸ ಮಾಡಿ ತೋರಿಸು” ಎಂದು ನನಗೆ ಸವಾಲು. ಹಾಕಿದವರೂ ಇದ್ದಾರೆ. ನನ್ನಿಂದ ಉಚಿತವಾಗಿ ಸೇವೆ ಪಡೆದವರೂ ಇದ್ದಾರೆ. ನಾನು ಸಲ್ಲಿಸಿದ ಮನವಿಗಳನ್ನು “ಕಸದ ಬುಟ್ಟಿಗೆ ಹಾಕುತ್ತಾರೆ” ಎಂದು ವ್ಯಂಗ್ಯವಾಡಿದವರೂ ಇದ್ದಾರೆ. ಆದರೆ ಇಂದು ಅದೇ ಮನವಿಗಳು ಅಭಿವೃದ್ಧಿಯ ದಿಕ್ಕಿನಲ್ಲಿ ಹಾರುವ ಗಾಳಿಪಟಗಳಾಗಿವೆ. 🪁 ನನಗೆ ಸಾಕಷ್ಟು ತೊಂದರೆ, ಅವಮಾನ, ಅಪಮಾನಗಳನ್ನು ಎದುರಿಸಬೇಕಾಯಿತು. ಆದರೂ ಯಾವುದಕ್ಕೂ ಕುಗ್ಗದೆ, ಯಾರ ಮೇಲೂ ಅವಲಂಬಿತನಾಗದೆ, ನಿಷ್ಠೆಯಿಂದ… ಪ್ರಾಮಾಣಿಕವಾಗಿ…24 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದೆ. ಇಂದು ನನ್ನ ಮಾತಿಗಿಂತ ನನ್ನ ಕೆಲಸಗಳೇ ಉತ್ತರ ನೀಡುತ್ತಿವೆ. ಜನರ ಸಮಸ್ಯೆಗಳನ್ನು ಹೇಳುವುದು ಮಾತ್ರ ನನ್ನ ಕೆಲಸವಲ್ಲ; ಪರಿಹಾರ ಸಿಗುವವರೆಗೂ ಹೋರಾಡುವುದು ನನ್ನ ಜವಾಬ್ದಾರಿ. 🔥ನನ್ನನ್ನು ಎಷ್ಟೇ ತುಳಿದರೂ, ನನ್ನ ಶ್ರಮವನ್ನು ತಡೆಯಲು ಸಾಧ್ಯವಾಗಲಿಲ್ಲ. ಮಾತಿಗಿಂತ ಕೆಲಸವೇ ಮುಖ್ಯ — ಅದನ್ನು ನನ್ನ ಕಾರ್ಯಗಳ ಮೂಲಕ ತೋರಿಸುತ್ತಿದ್ದೇನೆ. — @Anil Karne Gajendragad1
- "ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾದ ಈ ಮಸೀದಿಯ ವಿಶೇಷತೆ ಏನು? "1
- ಕಿತ್ತೂರಿನ ಅವರಾಧಿ ಗ್ರಾಮದಲ್ಲಿ double murder, ತಂದೆ ಮಗಳ ಹತ್ಯೆ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಆಸ್ತಿ ವಿವಾದ ತಂದೆ ಮಗಳನ್ನು ಹಾಡು ಹಗಲೇ ಬೀಕರ್ ಹತ್ಯೆ ಮಾಡಿದ ದುರ್ಘಟನೆ ಸಂಭವಿಸಿದೆ ಸ್ಥಳಕ್ಕೆ sp ಕೆ ರಾಮರಾಜನ ಬೇಟಿ ನೀಡಿದ್ದಾರೆ1