ಮಾ.14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸರ್ಕಾರಿ ಮೆಡಿಕಲ್ ಕಾಲೇಜ ನಿರ್ಮಾಣಕ್ಕೆ ಶಂಕುಸ್ಥಾಪನೆ ಗುಳೇದಗುಡ್ಡ: ಬಾಗಲಕೋಟೆ ನಗರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಬೇಕು ಎಂಬು ದಿ.ಶಾಸಕ ಎಚ್.ವೈ. ಮೇಟಿ ಅವರ ಬಹುವರ್ಷಗಳಿಂದ ಕನಸಿನ ಯೋಜನೆಯಾಗಿದ್ದು, ಅವರ ಕನಸು ನನಸಾಗಲು ಸರ್ಕಾರಿ ಮೆಡಿಕಲ್ ಕಾಲೇಜ ನಿರ್ಮಣಕ್ಕೆ ಮಾ.14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದ ಸಂಚಾಲಕ,ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್ ತಿಳಿದ್ದಾರೆ. ಶಂಕುಸ್ಥಾಪನೆ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವುಕುಮಾರ ಅವರು ಉಪಸ್ಥಿತಿ ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ವಹಿಸಲಿದ್ದು, ಸಚಿವರಾದ ಎಚ್.ಕೆ.ಪಾಟೀಲ, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ, ದಿನೇಶ ಗುಂಡೂರಾವ್,ಡಾ.ಎಚ್.ಸಿ.ಮಹದೇವಪ್ಪ, ಸತೀಶ ಜಾರಕಿಹೊಳೆ, 'ಪ್ರಿಯಾಂಕ ಖರ್ಗೆ, ಶಿವಾನಂದ ಪಾಟೀಲ, ಜಮೀರ ಅಹ್ಮದಖಾನ್, ಡಾ.ಶರಣಪ್ರಕಾಶ ಪಾಟೀಲ ಹಾಗೂ ಸುರೇಶ ಗೌರವ ಉಪಸ್ಥಿತಿಯಲ್ಲಿ ಇರುವರು. ಅಲ್ಲದೇ ಜಿಲ್ಲೆಯ ಶಾಸಕರು, ವಿಪ ಸದಸ್ಯರು, ರಾಜ್ಯ ಸಭಾಸದಸ್ಯರು ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

- ಬಾದಾಮಿ : ತಾಲೂಕಿನ ಶಿವಯೋಗಮಂದಿರ ಹತ್ತಿರದ ಮಲಪ್ರಭಾ ನದಿಯಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆದಿರುವ ಪೊಲೀಸರು ಚಾಲಕನನ್ನು ಬಾದಾಮಿ ಪೊಲೀಸರು ಬುಧವಾರ ಮಧ್ಯರಾತ್ರಿ 1:30ರ ಸುಮಾರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತ ಟ್ರ್ಯಾಕ್ಟರ್ ಚಾಲಕ ಬಸಯ್ಯ ವಸ್ತ್ರದ ಎಂದು ಗುರುತಿಸಲಾಗಿದ್ದು, ಮರಳು ತುಂಬಿದ ಟ್ರ್ಯಾಕ್ಟರ್ ನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.1
- Post by @april14news1
- ಬೆಳಗ್ಗೆ 7.30 ಗಂಟೆಗೆ ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಗೇವಾಡಿಯಿಂದ ತಾಳಿಕೋಟಿಗೆ ಹೋಗುವ ಹೆದ್ದಾರಿಯಲ್ಲಿ ಬಸವನಟ್ಟಿ ಕ್ರಾಸ್ ಹತ್ತಿರ ಸ್ವಿಫ್ಟ್ ಡಿಸೈರ್ ಕಾರು ಪಲ್ಟಿ ಆಗಿ ನಾಲ್ಕು ಜನರಲ್ಲಿ ಇಬ್ಬರು ಮೃತಪಟ್ಟಿದ್ದು ಇರುತ್ತದೆ. ಕಾಗವಾಡದಿಂದ ಶ್ರೀಶೈಲಕ್ಕೆ ಹೋಗುವವರಿದ್ದು ಮೃತಪಟ್ಟವರು ಕಾಗವಾಡದವರಾಗಿರುತ್ತಾರೆ. ಮೃತಪಟ್ಟವರ ವಿವರ. 1) ಚಂದ್ರವ್ವ ಟಕ್ಕೆನ್ನವರ ವಯಸ್ಸು 70 2) ಕಾಮಪ್ಪ ಅವರಾದಿ ವಯಸ್ಸು 65 ಇರುತ್ತದೆ ಇನ್ನು ಇಬ್ಬರು ಗಂಭೀರ ಗಾಯ ಹೊಂದಿರುತ್ತಾರೆ.1
- ವಿಜಯಪುರ: ರಸ್ತೆಯಲ್ಲಿ ರೊಟ್ಟಿ ಮಾಡಿ ಪ್ರತಿಭಟಿಸಿದ ಕಾಂಗ್ರೆಸ್ ವಿಜಯಪುರ ನಗರದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತೆಯರು ರಸ್ತೆಯಲ್ಲಿ ಸವದೆ ಒಲೆಯ ಮೇಲೆ ರೊಟ್ಟಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಆರೋಪಿಸಿ, ಕೂಡಲೇ ಬೆಲೆ ಕಡಿಮೆ ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.1
- ನಾಡಪ್ರಭು ಕೆಂಪೇಗೌಡರ ಸಂಪೂರ್ಣ ಜೀವನ ಚರಿತ್ರೆ #news #onlinetv24x7 #ನಾಡಪ್ರಭುಕೆಂಪೇಗೌಡರು #ಬೆಂಗಳೂರು1
- ಜಾವಗಲ್ ಹೋಬಳಿಯ ವೃಂದಾವನ ಹಳ್ಳಿಯ ಗ್ರಾಮದೇವತೆ ಊರು ಹಬ್ಬದಲ್ಲಿ ಹಲವು ಗ್ರಾಮದ ದೇವತೆಗಳು ಕರೆಯಿಸಿ ಗ್ರಾಮದಲ್ಲಿ ಅದ್ದೂರಿಯಾಗಿ ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆ, ಪರವು, ಕೆಂಡೋತ್ಸವ ಮುಂತಾದ ಗ್ರಾಮದ ಆಚರಣೆಗಳು ಅಲ್ಲಿ ಬಂದಿರುವ ಭಕ್ತರನ್ನು ಗಮನಸೆಳೆದವು..2
- ಗುಳೇದಗುಡ್ಡ: ನಮ್ಮ ಮುಂದಿನ ಪೀಳಿಗೆಗೆ ಮತಾಂತರ, ಭಯೋತ್ಪಾದನೆ, ಆಂತರಿಕ ಕಚ್ಛಾಟಗಳಿಂದ ಮುಕ್ತಗೊಳಿಸಿ ಸಶಕ್ತ ಸದೃಢ ಭಾರತವನ್ನು ಕಟ್ಟಲು ಹಿಂದೂ ಸಮ್ಮೇಳನದ ಉದ್ದೇಶವಾಗಿದ್ದು, ಈ ಹಿನ್ನಲೆಯಲ್ಲಿ ಪಟ್ಟಣದ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ವತಿಯಿಂದ ಮಾ.15ರಂದು ಬೃಹತ್ ಶೋಭಾಯಾತ್ರೆ ಹಾಗೂ ಹಿಂದೂ ಸಮ್ಮೇಳನ ಪಟ್ಟಣದ ಭಂಡಾರಿ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಮ್ಮೇಳನದ ಸಂಚಲನಾ ಸಮಿತಿ ಅಧ್ಯಕ್ಷ ಅಶೋಕ ಹೆಗಡಿ ಹೇಳಿದರು. ಅವರು ಗುರುವಾರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ದೇಶಾದ್ಯಂತ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದ್ದು, ಪಟ್ಟಣದ ಎಲ್ಲ ಸಮಾಜಭಾಂದವರು ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಿ, ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಹಿಂದೂ ಮುಖಂಡ ವಿಠ್ಠಲ ಪತ್ತಾರ ಮಾತನಾಡಿ, ಹಿಂದೂ ಸಮ್ಮೇಳನದ ಅಂಗವಾಗಿ ಮಾ. 15ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಬಾದಾಮಿ ನಾಕಾ ಹತ್ತಿರದ ಶ್ರೀ ಅಕ್ಕಲಕೋಟಿ ಚಿಕ್ಕರೇವಣಸಿದ್ಧೇಶ್ವರ ಮಠದಿಂದ ಬೃಹತ್ ಶೋಭಾಯಾತ್ರೆ ಪ್ರಾರಂಭಗೊಳ್ಳಲಿದೆ. ಬೃಹತ್ ಶೋಭಾಯಾತ್ರೆಯಲ್ಲಿ ಶೋಭಾಯಾತ್ರೆಯಲ್ಲಿ ಕುಂಭಹೊತ್ತ ಮಹಿಳೆಯರು, ಗೊಂಬೆಗಳು, ಕರಡಿಮಜಲು, ಡೊಳ್ಳು ಕುಣಿತ, ಹಲಗಿ ಮಜಲು ಸೇರಿದಂತೆ ವಿವಿಧ ವಾಧ್ಯಮೇಳಗಳು ಭಾಗವಹಿಸಲಿವೆ. ಸಂಜೆ 6 ಗಂಟೆಗೆ ಭಂಡಾರಿ ಕಾಲೇಜನ ಆವರಣದಲ್ಲಿ ನಡೆಯಲಿರುವ ಹಿಂದೂ ಸಮ್ಮೇಳನದಲ್ಲಿ ಪಟ್ಟಣದ ವಿವಿಧ ಮಠಾಧೀಶರು ಸಾನಿಧ್ಯ ವಹಿಸುವರು. ಆರ್‌ಎಸ್‌ಎಸ್‌ನ ಬಳ್ಳಾರಿ ಪ್ರಾಂತ ಕಾರ್ಯಕಾರಣಿ ಸದಸ್ಯ ಗೋಪಿ ಜಿ. ಅವರು ಮುಖ್ಯ ವಕ್ತಾರರಾಗಿ ಪಾಲ್ಗೊಳ್ಳಲಿದ್ದಾರೆ. ಪಟ್ಟಣದ ಎಲ್ಲಾ ಸಮಾಜ, ಸಂಘಸಂಸ್ಥೆಗಳಿಗೆ ಭೇಟಿ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಲಾಗಿದ್ದು, ಸಮಾರು ಹತ್ತುಸಾವಿರ ಜನರು ಹಿಂದೂ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಪತ್ತಕುಮಾರ್ ರಾಠಿ, ಅಮಾತೆಪ್ಪ ಕೊಪ್ಪಳ, ಪಿ.ಎನ್. ಪವಾರ, ಸಂಜು ಕಾರಕೂನ, ಪ್ರಭು ತಟ್ಟಿಮಠ, ಭುವನೇಶ ಪೂಜಾರ, ವಿಠ್ಠಲ ಶಿರೂರು, ಶಿವಾನಂದ ಬಾದವಾಡಗಿ, ಆದಪ್ಪ ಕಲಬುರ್ಗಿ, ಮಹೇಶ ಸೂಳೇಭಾವಿ, ಈರಣ್ಣ ಬಂಡಿ, ಶಿವಾನಂದ ಬಡಿಗೇರ ಮತ್ತಿತರರು.1
- ಬೆಂಗಳೂರು: ಸರ್ಕಾರಿ ಸವಲತ್ತುಗಳನ್ನು ಪಡೆಯಲು ಕಚೇರಿಗಳಿಗೆ ಬರುವ ನಾಗರಿಕರನ್ನು ಹಲವೆಡೆ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಪರಿಷತ್ ಸದಸ್ಯ ಪಿ.ಹೆಚ್. ಪೂಜಾರ್ ಅವರು ವಿಧಾನ ಪರಿಷತ್‌ನಲ್ಲಿ ಸರ್ಕಾರದ ಗಮನಕ್ಕೆ ತಂದರು. ಒಂದು ಇ-ಖಾತಾ ಪಡೆಯುವುದಕ್ಕೂ ಜನರು ಹಲವಾರು ಬಾರಿ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಜನರು ತಮ್ಮ ಚಪ್ಪಲಿ ಸವೆಸುವವರೆಗೆ ಅಧಿಕಾರಿಗಳ ಹಿಂದೆ ತಿರುಗಬೇಕಾಗುತ್ತಿದೆ ಎಂದು ಅವರು ಆರೋಪಿಸಿದರು. ಸರ್ಕಾರಿ ಸೇವೆಗಳು ಜನರಿಗೆ ಸುಲಭವಾಗಿ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ನಾಗರಿಕರಿಗೆ ಆಗುತ್ತಿರುವ ತೊಂದರೆಗಳನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.1
- Post by @april14news1