logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬರಗಾಲದ ನಡುವೆ ಕುಡಿಯುವ ನೀರು ಪೋಲು: ಪುರಸಭೆ ನಿರ್ಲಕ್ಷ್ಯಕ್ಕೆ ನಾಗರಿಕರ ಆಕ್ರೋಶ* ಕುಷ್ಟಗಿ:* ರಾಜ್ಯದಲ್ಲಿ ಈ  ಬಾರಿ ಸಮರ್ಪಕ ಮಳೆಯಾಗದೆ ನದಿ, ಹಳ್ಳ-ಕೊಳ್ಳಗಳು ಬತ್ತಿ ಹೋಗುವ ಸಂಭವ ಇದೆ ಮತ್ತು  ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಬರಗಾಲದ ಸಂದರ್ಭದಲ್ಲಿಯೇ ಕುಷ್ಟಗಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವಿರಾರು ಲೀಟರ್ ಕುಡಿಯುವ ನೀರು ದಿನನಿತ್ಯ ಪೋಲಾಗುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದಲಗಟ್ಟಿ ಸಮೀಪದ ನಿಡಶೇಸಿ ಕೆರೆಯಿಂದ ಕುಷ್ಟಗಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್, ನಿಡಶೇಸಿ ಕೆರೆಯ ಉದ್ಯಾನವನದ ಪೂರ್ವ ಭಾಗದಲ್ಲಿರುವ ವ್ಯೂ ಪಾಯಿಂಟ್‌ಗೆ ಹೋಗುವ ಮಾರ್ಗದಲ್ಲಿ ಪೈಪ್ ಒಡೆದು  ಹೋಗಿದೆ. ಕಳೆದ ಹಲವು ದಿನಗಳಿಂದ ಪೈಪ್‌ನಿಂದ ನೀರು ನಿಲ್ಲದೇ ಹರಿದು ರಸ್ತೆಯ ಮೇಲೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಈ ಕುರಿತು ವಾಟರ್‌ಮ್ಯಾನ್‌ಗೆ ಹಲವು ಬಾರಿ ತಿಳಿಸಿದರೂ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಆದ್ದರಿಂದ ಪುರಸಭೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು  ಸ್ಥಳೀಯರು ದೂರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ಮಂಜುನಾಥ ಕಟ್ಟಿಮನಿ ಅವರು, "ಈಗಾಗಲೇ ಮಳೆ ಕೊರತೆಯಿಂದ ನದಿ-ಹಳ್ಳಗಳು ಬತ್ತಿವೆ. ಮುಂದೆ ಕುಡಿಯುವ ನೀರಿಗೆ ತೀವ್ರ ಅಭಾವ ಎದುರಾಗುವ ಆತಂಕವಿದೆ. ಇಂತಹ ಸಮಯದಲ್ಲಿ ಪುರಸಭೆಯವರು ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೆ. ಕೂಡಲೇ ಒಡೆದ ಪೈಪ್‌ಲೈನ್ ದುರಸ್ತಿ ಮಾಡಿ ನೀರು ವ್ಯರ್ಥವಾಗುವುದನ್ನು ತಪ್ಪಿಸಬೇಕು" ಎಂದು ಆಗ್ರಹಿಸಿದ್ದಾರೆ. ಕೂಡಲೇ ಪುರಸಭೆಯ ಮುಖ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

1 hr ago
user_Pavadeppa c choudiki
Pavadeppa c choudiki
ಕುಷ್ಟಗಿ, ಕೊಪ್ಪಳ, ಕರ್ನಾಟಕ•
1 hr ago
f943cacf-9683-4c69-b369-3217eac90878

ಬರಗಾಲದ ನಡುವೆ ಕುಡಿಯುವ ನೀರು ಪೋಲು: ಪುರಸಭೆ ನಿರ್ಲಕ್ಷ್ಯಕ್ಕೆ ನಾಗರಿಕರ ಆಕ್ರೋಶ* ಕುಷ್ಟಗಿ:* ರಾಜ್ಯದಲ್ಲಿ ಈ  ಬಾರಿ ಸಮರ್ಪಕ ಮಳೆಯಾಗದೆ ನದಿ, ಹಳ್ಳ-ಕೊಳ್ಳಗಳು ಬತ್ತಿ ಹೋಗುವ ಸಂಭವ ಇದೆ ಮತ್ತು  ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಬರಗಾಲದ ಸಂದರ್ಭದಲ್ಲಿಯೇ ಕುಷ್ಟಗಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವಿರಾರು ಲೀಟರ್ ಕುಡಿಯುವ ನೀರು ದಿನನಿತ್ಯ ಪೋಲಾಗುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದಲಗಟ್ಟಿ ಸಮೀಪದ ನಿಡಶೇಸಿ ಕೆರೆಯಿಂದ ಕುಷ್ಟಗಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್, ನಿಡಶೇಸಿ ಕೆರೆಯ ಉದ್ಯಾನವನದ ಪೂರ್ವ ಭಾಗದಲ್ಲಿರುವ ವ್ಯೂ ಪಾಯಿಂಟ್‌ಗೆ ಹೋಗುವ ಮಾರ್ಗದಲ್ಲಿ ಪೈಪ್ ಒಡೆದು  ಹೋಗಿದೆ. ಕಳೆದ ಹಲವು ದಿನಗಳಿಂದ ಪೈಪ್‌ನಿಂದ ನೀರು ನಿಲ್ಲದೇ ಹರಿದು ರಸ್ತೆಯ ಮೇಲೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಈ ಕುರಿತು ವಾಟರ್‌ಮ್ಯಾನ್‌ಗೆ ಹಲವು ಬಾರಿ ತಿಳಿಸಿದರೂ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಆದ್ದರಿಂದ ಪುರಸಭೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು  ಸ್ಥಳೀಯರು ದೂರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿ ಮಂಜುನಾಥ ಕಟ್ಟಿಮನಿ ಅವರು, "ಈಗಾಗಲೇ ಮಳೆ ಕೊರತೆಯಿಂದ ನದಿ-ಹಳ್ಳಗಳು ಬತ್ತಿವೆ. ಮುಂದೆ ಕುಡಿಯುವ ನೀರಿಗೆ ತೀವ್ರ ಅಭಾವ ಎದುರಾಗುವ ಆತಂಕವಿದೆ. ಇಂತಹ ಸಮಯದಲ್ಲಿ ಪುರಸಭೆಯವರು ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೆ. ಕೂಡಲೇ ಒಡೆದ ಪೈಪ್‌ಲೈನ್ ದುರಸ್ತಿ ಮಾಡಿ ನೀರು ವ್ಯರ್ಥವಾಗುವುದನ್ನು ತಪ್ಪಿಸಬೇಕು" ಎಂದು ಆಗ್ರಹಿಸಿದ್ದಾರೆ. ಕೂಡಲೇ ಪುರಸಭೆಯ ಮುಖ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

More news from ಕರ್ನಾಟಕ and nearby areas
  • ED. IT. ಯಾವಾಗ ಬೇಕಾದರೂ ನನ್ನ ಮನೆಗೆ ಬರಬಹುದು ಸಚಿವ ವಿಜಯಾನಂದ ಕಾಶಪ್ಪನವರ ಬಾಗಲಕೋಟೆ: ಕೈ ಶಾಸಕರನ್ನು ಬಿಜೆಪಿಗೆ ಸೆಳೆಯುವ ಹುನ್ನಾರ ವಿಚಾರಕ್ಕೆ ಸಚಿವ ಕಾಶಪ್ಪನವರ ಪ್ರತಿಕ್ರಿಯಿಸಿದರು ಈ ಹಿಂದೆ ಬಿಜೆಪಿ ಕಾಂಗ್ರೆಸ್ನ 55 ಜನರ ಪಟ್ಟಿ ರೆಡಿ ಮಾಡಿತ್ತು ಕಾಂಗ್ರೆಸ್ ಶಾಸಕರ ಆಪರೇಷನ್ ಪಟ್ಟಿಯಲ್ಲಿ ನನ್ನ ಹೆಸರು ಇತ್ತು ಬಿಜೆಪಿ ಪಕ್ಷಕ್ಕೆ ಸೆಳೆಯುವುದು, ಬರೋಲ್ಲ ಅಂದರೆ ಹಿಡಿ ದಾಳಿ ಅಂಜಿಕೆ ಹಾಕುವುದು ಮಾಡಿದ್ದರು. ನಾ ಬಿಜೆಪಿಗರಿಗೆ ಹೇಳಿದ್ದೇನೆ ನನ್ನ ಮೇಲೆ ಇಡಿ ಐಟಿ ದಾಳಿ ಮಾಡಿದರು ಅಂಜಿಕೆ ಇಲ್ಲ ಎಂದು ಸಚಿವ ಕಾಶಪ್ಪನವರ ಬಾಗಲಕೋಟೆಯಲ್ಲಿ ಹೇಳಿದರು.
    1
    ED. IT. ಯಾವಾಗ ಬೇಕಾದರೂ ನನ್ನ ಮನೆಗೆ ಬರಬಹುದು ಸಚಿವ ವಿಜಯಾನಂದ ಕಾಶಪ್ಪನವರ
ಬಾಗಲಕೋಟೆ: ಕೈ ಶಾಸಕರನ್ನು ಬಿಜೆಪಿಗೆ ಸೆಳೆಯುವ ಹುನ್ನಾರ ವಿಚಾರಕ್ಕೆ ಸಚಿವ ಕಾಶಪ್ಪನವರ ಪ್ರತಿಕ್ರಿಯಿಸಿದರು ಈ ಹಿಂದೆ ಬಿಜೆಪಿ ಕಾಂಗ್ರೆಸ್ನ 55 ಜನರ ಪಟ್ಟಿ ರೆಡಿ ಮಾಡಿತ್ತು ಕಾಂಗ್ರೆಸ್ ಶಾಸಕರ ಆಪರೇಷನ್ ಪಟ್ಟಿಯಲ್ಲಿ ನನ್ನ ಹೆಸರು ಇತ್ತು ಬಿಜೆಪಿ ಪಕ್ಷಕ್ಕೆ ಸೆಳೆಯುವುದು, ಬರೋಲ್ಲ ಅಂದರೆ ಹಿಡಿ ದಾಳಿ ಅಂಜಿಕೆ ಹಾಕುವುದು ಮಾಡಿದ್ದರು. ನಾ ಬಿಜೆಪಿಗರಿಗೆ ಹೇಳಿದ್ದೇನೆ ನನ್ನ ಮೇಲೆ ಇಡಿ ಐಟಿ ದಾಳಿ ಮಾಡಿದರು ಅಂಜಿಕೆ ಇಲ್ಲ ಎಂದು ಸಚಿವ ಕಾಶಪ್ಪನವರ ಬಾಗಲಕೋಟೆಯಲ್ಲಿ ಹೇಳಿದರು.
    user_Shabbir Bijapur
    Shabbir Bijapur
    Photographer ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    4 hrs ago
  • *ಕೂಡ್ಲಿಗಿ : ನಾಗರೀಕ ಹಿತರಕ್ಷಣಾ ವೇದಿಕೆಯಿಂದ , ಅದ್ಧೂರಿ ಊರಗಣಪ ಪ್ರತಿಷ್ಠಾನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಸೆಪ್ಟೆಂಬರ್ 14ರಂದು ಪಟ್ಟಣದ ಮೇನ್ ಬಾಯ್ಸ್ ಶಾಲೆಯ ಆವರಣದಲ್ಲಿ , ಶ್ರೀಗಣೇಶ ಚತುರ್ಥಿ ಪ್ರಯುಕ್ತ ನಾಗರೀಕ ಹಿತರಕ್ಷಣೆ ವೇದಿಕೆ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಮನೆ ಅದ್ಧೂರಿಯಾಗಿ ಜರುಗಿತು. ನಾಗರೀಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ನೇತೃತ್ವದಲ್ಲಿ , ಪ್ರತಿ ವರ್ಷಗಳಂತೆಯೇ ಗಣೇಶ ಮೂರ್ತಿ ದ‍ಾನಿಗಳು. ಹಾಗೂ ಗೌಡ ಮನೆತನದ ಮುಖಂಡರಾದ , ಪಟ್ಟಣದ ಹೆಚ್.ವೀರನಗೌಡ ರವರ ಮನೆಯಿಂದ , ಗಣೇಶನ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು. ಶಾಸ್ತ್ರೋಕ್ತವಾಗಿ ಪೂಜಿಸಿ ವಾಹನದಲ್ಲಿರಿಸಿಕೊಂಡು , ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಹು ಅದ್ಧೂರಿಯಾಗಿ ಮೆರವಣಿಗೆ ಸಾಗಿ ವೇದಿಕೆಗೆ ಕರೆತರಲಾಯಿತು. ಪಟ್ಟಣದ ಶ್ರೀಚಂದ್ರಶೇಖರ ಆಜಾದ್ ರಂಗಮಂದಿರದ ವೇದಿಕೆ ಯಲ್ಲಿ , ಪುರೋಹಿತರಾದ ಎಮ್ ಎಮ್ ಉಮೇಶರವರ ನೇತೃತ್ವದಲ್ಲಿ. ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಿಸಿ ಪ್ರತಿಷ್ಠಾಪಿಸಲಾಯಿತು, ತದನಂತರ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ನಂತರ ವೇದಭ್ರಾಹ್ಮಣ ಆರಾಧಕರಾದ ಬ್ರಹ್ಮಲಿಂಗಾಚಾರಿಗಳ ಪುರೋಹಿತ್ವದಲ್ಲಿ , ಪೂಜಾ ಕೈಂ ಕರ್ಯಗಳಾದಿಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಗರೀಕರ ಹಿತರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು , ಹಿರಿಯನಾಗರೀಕರು , ಹಿರಿಯರು , ಗಣ್ಯರು ಮುಖಂಡರು , ನೂರಾರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    *ಕೂಡ್ಲಿಗಿ : ನಾಗರೀಕ ಹಿತರಕ್ಷಣಾ ವೇದಿಕೆಯಿಂದ , ಅದ್ಧೂರಿ ಊರಗಣಪ ಪ್ರತಿಷ್ಠಾನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಸೆಪ್ಟೆಂಬರ್ 14ರಂದು  ಪಟ್ಟಣದ ಮೇನ್ ಬಾಯ್ಸ್ ಶಾಲೆಯ ಆವರಣದಲ್ಲಿ , ಶ್ರೀಗಣೇಶ ಚತುರ್ಥಿ ಪ್ರಯುಕ್ತ ನಾಗರೀಕ ಹಿತರಕ್ಷಣೆ ವೇದಿಕೆ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಮನೆ ಅದ್ಧೂರಿಯಾಗಿ ಜರುಗಿತು. ನಾಗರೀಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ನೇತೃತ್ವದಲ್ಲಿ , ಪ್ರತಿ ವರ್ಷಗಳಂತೆಯೇ ಗಣೇಶ ಮೂರ್ತಿ ದ‍ಾನಿಗಳು. ಹಾಗೂ ಗೌಡ ಮನೆತನದ ಮುಖಂಡರಾದ , ಪಟ್ಟಣದ ಹೆಚ್.ವೀರನಗೌಡ ರವರ ಮನೆಯಿಂದ , ಗಣೇಶನ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು. ಶಾಸ್ತ್ರೋಕ್ತವಾಗಿ ಪೂಜಿಸಿ ವಾಹನದಲ್ಲಿರಿಸಿಕೊಂಡು , ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಹು ಅದ್ಧೂರಿಯಾಗಿ ಮೆರವಣಿಗೆ ಸಾಗಿ ವೇದಿಕೆಗೆ ಕರೆತರಲಾಯಿತು. ಪಟ್ಟಣದ ಶ್ರೀಚಂದ್ರಶೇಖರ ಆಜಾದ್ ರಂಗಮಂದಿರದ ವೇದಿಕೆ ಯಲ್ಲಿ , ಪುರೋಹಿತರಾದ ಎಮ್ ಎಮ್ ಉಮೇಶರವರ ನೇತೃತ್ವದಲ್ಲಿ. ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಿಸಿ ಪ್ರತಿಷ್ಠಾಪಿಸಲಾಯಿತು, ತದನಂತರ ಗಣೇಶ  ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ನಂತರ ವೇದಭ್ರಾಹ್ಮಣ ಆರಾಧಕರಾದ ಬ್ರಹ್ಮಲಿಂಗಾಚಾರಿಗಳ ಪುರೋಹಿತ್ವದಲ್ಲಿ , ಪೂಜಾ ಕೈಂ ಕರ್ಯಗಳಾದಿಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಗರೀಕರ ಹಿತರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು , ಹಿರಿಯನಾಗರೀಕರು , ಹಿರಿಯರು , ಗಣ್ಯರು ಮುಖಂಡರು  , ನೂರಾರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    2 hrs ago
  • ಇಂದು ನಡಿದ ನಮ್ಮ್ ಊರಿನ ಅಲ್ಲಿ ಸಣ್ಣ ಮಕ್ಕಳನು ಹೊಡೆದು ವಿರುದ ಪಡಿಸಲ ಆಯ್ತು ಗಣಪತಿ ಕೂರಿಸಿವ ಜಾಗವನ್ನು ಮುಸ್ಲಿಂ ಸಮುದಾಯದದಿಂದ ವಿರುದ ಆದ ಕಾರಣ ಪೊಲೀಸರ ಸಮ್ಮುಖದಲ್ಲಿ ಗಣಪತಿ ಕುರಿಸುವದನು ಸ್ಥಗಿತಗೊಳಿಸಲತು ಇನ್ನು ಮುಂದೆ ನಮ್ಮ ಹಿಂದೂ ಜನಾಂಗ ಎಚ್ಚತುಕೊಳ್ಳಿ ನಮ್ಮಗೆ ಅವರು ಹೇಗೆ ವಿರುದ ಮಾಡತಿರೂ ಅರ್ಥ ಮಾಡಿ ಕೊಳ್ಳಿ ಹಿಂದೂ ಜನಗಳೇ ಜೈ ಶ್ರೀ ರಾಮ🚩 🚩🕉 ಇಂದು ನಡಿದ ನಮ್ಮ್ ಊರಿನ ಅಲ್ಲಿ ಸಣ್ಣ ಮಕ್ಕಳನು ಹೊಡೆದು ವಿರುದ ಪಡಿಸಲ ಆಯ್ತು ಗಣಪತಿ ಕೂರಿಸಿವ ಜಾಗವನ್ನು ಮುಸ್ಲಿಂ ಸಮುದಾಯದದಿಂದ ವಿರುದ ಆದ ಕಾರಣ ಪೊಲೀಸರ ಸಮ್ಮುಖದಲ್ಲಿ ಗಣಪತಿ ಕುರಿಸುವದನು ಸ್ಥಗಿತಗೊಳಿಸಲತು ಇನ್ನು ಮುಂದೆ ನಮ್ಮ ಹಿಂದೂ ಜನಾಂಗ ಎಚ್ಚತುಕೊಳ್ಳಿ ನಮ್ಮಗೆ ಅವರು ಹೇಗೆ ವಿರುದ ಮಾಡತಿರೂ ಅರ್ಥ ಮಾಡಿ ಕೊಳ್ಳಿ ಹಿಂದೂ ಜನಗಳೇ ಜೈ ಶ್ರೀ ರಾಮ🚩 🚩🕉
    1
    ಇಂದು ನಡಿದ ನಮ್ಮ್ ಊರಿನ ಅಲ್ಲಿ ಸಣ್ಣ ಮಕ್ಕಳನು ಹೊಡೆದು ವಿರುದ ಪಡಿಸಲ ಆಯ್ತು ಗಣಪತಿ ಕೂರಿಸಿವ ಜಾಗವನ್ನು ಮುಸ್ಲಿಂ ಸಮುದಾಯದದಿಂದ ವಿರುದ ಆದ ಕಾರಣ ಪೊಲೀಸರ ಸಮ್ಮುಖದಲ್ಲಿ ಗಣಪತಿ ಕುರಿಸುವದನು ಸ್ಥಗಿತಗೊಳಿಸಲತು 
 ಇನ್ನು ಮುಂದೆ ನಮ್ಮ ಹಿಂದೂ ಜನಾಂಗ ಎಚ್ಚತುಕೊಳ್ಳಿ 
ನಮ್ಮಗೆ ಅವರು ಹೇಗೆ ವಿರುದ ಮಾಡತಿರೂ ಅರ್ಥ ಮಾಡಿ ಕೊಳ್ಳಿ ಹಿಂದೂ ಜನಗಳೇ ಜೈ ಶ್ರೀ ರಾಮ🚩   🚩🕉
ಇಂದು ನಡಿದ ನಮ್ಮ್ ಊರಿನ ಅಲ್ಲಿ ಸಣ್ಣ ಮಕ್ಕಳನು ಹೊಡೆದು ವಿರುದ ಪಡಿಸಲ ಆಯ್ತು ಗಣಪತಿ ಕೂರಿಸಿವ ಜಾಗವನ್ನು ಮುಸ್ಲಿಂ ಸಮುದಾಯದದಿಂದ ವಿರುದ ಆದ ಕಾರಣ ಪೊಲೀಸರ ಸಮ್ಮುಖದಲ್ಲಿ ಗಣಪತಿ ಕುರಿಸುವದನು ಸ್ಥಗಿತಗೊಳಿಸಲತು 
ಇನ್ನು ಮುಂದೆ ನಮ್ಮ ಹಿಂದೂ ಜನಾಂಗ ಎಚ್ಚತುಕೊಳ್ಳಿ 
ನಮ್ಮಗೆ ಅವರು ಹೇಗೆ ವಿರುದ ಮಾಡತಿರೂ ಅರ್ಥ ಮಾಡಿ ಕೊಳ್ಳಿ ಹಿಂದೂ ಜನಗಳೇ ಜೈ ಶ್ರೀ ರಾಮ🚩   🚩🕉
    user_Laxman shankrappa jadhav
    Laxman shankrappa jadhav
    Electrician ರಾಮದುರ್ಗ, ಬೆಳಗಾವಿ, ಕರ್ನಾಟಕ•
    20 hrs ago
  • ಯುವಕರೇ, ನಿಮ್ಮ ಕನಸೇ ನನ್ನ ಭರವಸೆ: ಯುವಶಕ್ತಿಗೆ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಕರೆ ಕೂಡ್ಲಿಗಿ: ಯುವಕರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ಶಿಕ್ಷಣ, ಶ್ರಮ, ಶಿಸ್ತು ಹಾಗೂ ಉತ್ತಮ ಚಿಂತನೆಗಳನ್ನು ಬದುಕಿನ ಬಂಡವಾಳವನ್ನಾಗಿಸಿಕೊಂಡು ಮುನ್ನಡೆಯಬೇಕು ಎಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಯುವಜನತೆಗೆ ಕರೆ ನೀಡಿದರು. ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಿಮ್ಮ ಕಣ್ಣಲ್ಲಿ ನಾನು ಕೇವಲ ಯುವಕರನ್ನು ನೋಡುವುದಿಲ್ಲ; ಒಂದು ಹೊಸ ಕನಸನ್ನು ನೋಡುತ್ತೇನೆ. ನಿಮ್ಮ ಆಲೋಚನೆಗಳು ಒಂದು ಊರನ್ನೇ ಬೆಳಗಿಸುವ ಶಕ್ತಿ ಹೊಂದಿವೆ. ಆ ಶಕ್ತಿಯನ್ನು ರಾಜಕೀಯದ ಬಲೆಗೆ ಸಿಲುಕಿಸಿ, ನಿಮ್ಮನ್ನು ದಾರಿ ತಪ್ಪಿಸುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ. ಇದು ನನ್ನ ಮಾತಲ್ಲ, ನನ್ನ ಹೃದಯದ ಪ್ರತಿಜ್ಞೆ” ಎಂದು ಹೇಳಿದರು. ಯುವಕರು ತಮ್ಮ ಬದುಕಿನ ಶಿಲ್ಪಿಗಳಾಗಬೇಕು. ಯಾರೋ ಬಂದು ತಮ್ಮ ಬದುಕನ್ನು ಬದಲಿಸುತ್ತಾರೆ ಎಂದು ಕಾಯದೆ, ಸ್ವಂತ ಶ್ರಮ ಮತ್ತು ಪ್ರತಿಭೆಯ ಮೂಲಕ ಭವಿಷ್ಯ ಕಟ್ಟಿಕೊಳ್ಳಬೇಕು. ಕಾಲೇಜು ಶಿಕ್ಷಣ, ಪುಸ್ತಕ ಓದು, ಕಠಿಣ ಪರಿಶ್ರಮ ಹಾಗೂ ಉತ್ತಮ ನಡೆ-ನುಡಿಗಳೇ ಯುವಕರ ನಿಜವಾದ ಬಂಡವಾಳ ಎಂದು ಅವರು ತಿಳಿಸಿದರು. ದುಶ್ಚಟಗಳಿಂದ ದೂರವಿರಿ ದುಶ್ಚಟಗಳು ಯುವಕರ ಅಮೂಲ್ಯವಾದ ಯೌವನವನ್ನು ಹಾಳು ಮಾಡುವುದಲ್ಲದೆ, ಕುಟುಂಬದ ನೆಮ್ಮದಿಯನ್ನೂ ಕಸಿದುಕೊಳ್ಳುತ್ತವೆ. ಅವು ಕನಸುಗಳನ್ನು ಕಳ್ಳತನ ಮಾಡುತ್ತವೆ. ಆದ್ದರಿಂದ ಯುವಕರು ಯಾವುದೇ ದುಶ್ಚಟಗಳಿಗೆ ಒಳಗಾಗದೆ, ಆರೋಗ್ಯಕರ ಮತ್ತು ಸಕಾರಾತ್ಮಕ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಸಲಹೆ ನೀಡಿದರು.
    1
    ಯುವಕರೇ, ನಿಮ್ಮ ಕನಸೇ ನನ್ನ ಭರವಸೆ: ಯುವಶಕ್ತಿಗೆ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಕರೆ
ಕೂಡ್ಲಿಗಿ: ಯುವಕರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ಶಿಕ್ಷಣ, ಶ್ರಮ, ಶಿಸ್ತು ಹಾಗೂ ಉತ್ತಮ ಚಿಂತನೆಗಳನ್ನು ಬದುಕಿನ ಬಂಡವಾಳವನ್ನಾಗಿಸಿಕೊಂಡು ಮುನ್ನಡೆಯಬೇಕು ಎಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಯುವಜನತೆಗೆ ಕರೆ ನೀಡಿದರು.
ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಿಮ್ಮ ಕಣ್ಣಲ್ಲಿ ನಾನು ಕೇವಲ ಯುವಕರನ್ನು ನೋಡುವುದಿಲ್ಲ; ಒಂದು ಹೊಸ ಕನಸನ್ನು ನೋಡುತ್ತೇನೆ. ನಿಮ್ಮ ಆಲೋಚನೆಗಳು ಒಂದು ಊರನ್ನೇ ಬೆಳಗಿಸುವ ಶಕ್ತಿ ಹೊಂದಿವೆ. ಆ ಶಕ್ತಿಯನ್ನು ರಾಜಕೀಯದ ಬಲೆಗೆ ಸಿಲುಕಿಸಿ, ನಿಮ್ಮನ್ನು ದಾರಿ ತಪ್ಪಿಸುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ. ಇದು ನನ್ನ ಮಾತಲ್ಲ, ನನ್ನ ಹೃದಯದ ಪ್ರತಿಜ್ಞೆ” ಎಂದು ಹೇಳಿದರು.
ಯುವಕರು ತಮ್ಮ ಬದುಕಿನ ಶಿಲ್ಪಿಗಳಾಗಬೇಕು. ಯಾರೋ ಬಂದು ತಮ್ಮ ಬದುಕನ್ನು ಬದಲಿಸುತ್ತಾರೆ ಎಂದು ಕಾಯದೆ, ಸ್ವಂತ ಶ್ರಮ ಮತ್ತು ಪ್ರತಿಭೆಯ ಮೂಲಕ ಭವಿಷ್ಯ ಕಟ್ಟಿಕೊಳ್ಳಬೇಕು. ಕಾಲೇಜು ಶಿಕ್ಷಣ, ಪುಸ್ತಕ ಓದು, ಕಠಿಣ ಪರಿಶ್ರಮ ಹಾಗೂ ಉತ್ತಮ ನಡೆ-ನುಡಿಗಳೇ ಯುವಕರ ನಿಜವಾದ ಬಂಡವಾಳ ಎಂದು ಅವರು ತಿಳಿಸಿದರು.
ದುಶ್ಚಟಗಳಿಂದ ದೂರವಿರಿ
ದುಶ್ಚಟಗಳು ಯುವಕರ ಅಮೂಲ್ಯವಾದ ಯೌವನವನ್ನು ಹಾಳು ಮಾಡುವುದಲ್ಲದೆ, ಕುಟುಂಬದ ನೆಮ್ಮದಿಯನ್ನೂ ಕಸಿದುಕೊಳ್ಳುತ್ತವೆ. ಅವು ಕನಸುಗಳನ್ನು ಕಳ್ಳತನ ಮಾಡುತ್ತವೆ. ಆದ್ದರಿಂದ ಯುವಕರು ಯಾವುದೇ ದುಶ್ಚಟಗಳಿಗೆ ಒಳಗಾಗದೆ, ಆರೋಗ್ಯಕರ ಮತ್ತು ಸಕಾರಾತ್ಮಕ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಸಲಹೆ ನೀಡಿದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    21 hrs ago
  • ದಕ್ಷಿಣ ಭಾರತದಲ್ಲೇ ಅತ್ಯಂತ ಅಭೂತಪೂರ್ವವಾದ ಮಹಾಶಿಲಾ ತಾಣವೆಂದರೆ ರಾಜನಕೊಲ್ಲೂರು. ಇಲ್ಲಿ ಅನೇಕ ಬಗೆಯ ಮರಳುಗಲ್ಲಿನ ಮಹಾಶಿಲೆಗಳು ಇವೆ. ಕರ್ನಾಟಕದ ಅತ್ಯಂತ ಸುಪ್ರಸಿದ್ದ ತಾಣಗಳು ದಕ್ಷಿಣ ಭಾರತದಲ್ಲೇ ಅತ್ಯಂತ ಅಭೂತಪೂರ್ವವಾದ ಮಹಾಶಿಲಾ ತಾಣವೆಂದರೆ ರಾಜನಕೊಲ್ಲೂರು. ಇಲ್ಲಿ ಅನೇಕ ಬಗೆಯ ಮರಳುಗಲ್ಲಿನ ಮಹಾಶಿಲೆಗಳು ಇವೆ. ಡೋಲ್ಡನ್‌ಗಳೆಂಬ ಜಾವಡಿಗೆ ಆಧಾರವಾಗಿ ನಿಂತ ಬದಿಯ ಚಪ್ಪಡಿಗಳುಳ್ಳ ಆಯತಾಕಾರದ ರಚನೆಗಳನ್ನು ಡೋಲೈನ್‌ ಗಳೆಂದು ಕರೆಯುತ್ತಾರೆ. ಇಲ್ಲಿ ಕಾಣುವ ವಿವಿಧ ಬಗೆಗಳನ್ನು ಗಮನಿಸಿ, ಕೆಲವಕ್ಕೆ ಮೂರು ಅಥವಾ ನಾಲ್ಕು ಬದಿಗಳಿವೆ. ಹಾಗೂ ಸಣ್ಣ ಕಿಟಕಿ-ರಂಧ್ರವು ಅದರಲ್ಲಿ ಇರಬಹುದು ಅಥವಾ ಇಲ್ಲದಿರಬಹುದು. ಡೋಲೈನ್‌ಗಳ ಮಧ್ಯೆ ಇರುವ ಭಾಗಶಃ ಹೂತಿರುವ, ಡಬ್ಬಿ ಆಕಾರದ ರಚನೆಗಳನ್ನು ಸಿಸ್ಟ್‌ಗಳೆಂದು ಕರೆಯುತ್ತಾರೆ. ಸಿಸ್ಟ್ ತನ್ನೊಳಗೇ ಕುಸಿದು ಬೀಳದಂತೆ ತಡೆಗಟ್ಟುವ ರೀತಿಯಲ್ಲಿ, ರಾಜನಕೊಲ್ಲೂರಿನ ಎಲ್ಲ ಸಿಸ್ಟ್‌ಗಳಲ್ಲೂ ಅದರ ಬದಿಯ ಉದ್ದನೆಯ ಚಪ್ಪಡಿಗಳು, ಸ್ವಲ್ಪ ಚಿಕ್ಕ ಚಪ್ಪಡಿಗಳಿಗಿಂತ ಮುಂದಕ್ಕೆ ಚಾಚಿವೆ.
    1
    ದಕ್ಷಿಣ ಭಾರತದಲ್ಲೇ ಅತ್ಯಂತ ಅಭೂತಪೂರ್ವವಾದ ಮಹಾಶಿಲಾ ತಾಣವೆಂದರೆ ರಾಜನಕೊಲ್ಲೂರು. ಇಲ್ಲಿ ಅನೇಕ ಬಗೆಯ ಮರಳುಗಲ್ಲಿನ ಮಹಾಶಿಲೆಗಳು ಇವೆ.
ಕರ್ನಾಟಕದ ಅತ್ಯಂತ ಸುಪ್ರಸಿದ್ದ ತಾಣಗಳು
ದಕ್ಷಿಣ ಭಾರತದಲ್ಲೇ ಅತ್ಯಂತ ಅಭೂತಪೂರ್ವವಾದ ಮಹಾಶಿಲಾ ತಾಣವೆಂದರೆ ರಾಜನಕೊಲ್ಲೂರು. ಇಲ್ಲಿ ಅನೇಕ ಬಗೆಯ ಮರಳುಗಲ್ಲಿನ ಮಹಾಶಿಲೆಗಳು ಇವೆ. ಡೋಲ್ಡನ್‌ಗಳೆಂಬ ಜಾವಡಿಗೆ ಆಧಾರವಾಗಿ ನಿಂತ ಬದಿಯ ಚಪ್ಪಡಿಗಳುಳ್ಳ ಆಯತಾಕಾರದ ರಚನೆಗಳನ್ನು ಡೋಲೈನ್‌ ಗಳೆಂದು ಕರೆಯುತ್ತಾರೆ. ಇಲ್ಲಿ ಕಾಣುವ ವಿವಿಧ ಬಗೆಗಳನ್ನು ಗಮನಿಸಿ, ಕೆಲವಕ್ಕೆ ಮೂರು ಅಥವಾ ನಾಲ್ಕು ಬದಿಗಳಿವೆ. ಹಾಗೂ ಸಣ್ಣ ಕಿಟಕಿ-ರಂಧ್ರವು ಅದರಲ್ಲಿ ಇರಬಹುದು ಅಥವಾ ಇಲ್ಲದಿರಬಹುದು. ಡೋಲೈನ್‌ಗಳ ಮಧ್ಯೆ ಇರುವ ಭಾಗಶಃ ಹೂತಿರುವ, ಡಬ್ಬಿ ಆಕಾರದ ರಚನೆಗಳನ್ನು ಸಿಸ್ಟ್‌ಗಳೆಂದು ಕರೆಯುತ್ತಾರೆ. ಸಿಸ್ಟ್ ತನ್ನೊಳಗೇ ಕುಸಿದು ಬೀಳದಂತೆ ತಡೆಗಟ್ಟುವ ರೀತಿಯಲ್ಲಿ, ರಾಜನಕೊಲ್ಲೂರಿನ ಎಲ್ಲ ಸಿಸ್ಟ್‌ಗಳಲ್ಲೂ ಅದರ ಬದಿಯ ಉದ್ದನೆಯ ಚಪ್ಪಡಿಗಳು, ಸ್ವಲ್ಪ ಚಿಕ್ಕ ಚಪ್ಪಡಿಗಳಿಗಿಂತ ಮುಂದಕ್ಕೆ ಚಾಚಿವೆ.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    7 hrs ago
  • ಪಕ್ಕ ಲವರ್’ ಸಿನಿಮಾ ಶುರು! 🎬 ಸ್ಥಳೀಯ ಪ್ರತಿಭೆಗಳಿಗೆ ದೊಡ್ಡ ಅವಕಾಶ! ಸಿನಿಮಾ ನಿರ್ಮಾಣಕ್ಕಿಂತ ಪ್ರಮೋಷನ್ ಮುಖ್ಯ! ಬಳ್ಳಾರಿಯ ಸ್ಥಳೀಯ ಪ್ರತಿಭೆಗಳನ್ನೇ ಒಳಗೊಂಡು ನಿರ್ಮಾಣವಾಗುತ್ತಿರುವ ‘ಪಕ್ಕ ಲವರ್’ ಕನ್ನಡ ಚಲನಚಿತ್ರದ ಟೈಟಲ್ ಹಾಗೂ ಹಾಡು ಬಿಡುಗಡೆಗೊಂಡಿದೆ. 🎬 ಸ್ಥಳೀಯ ಕಲಾವಿದರು ಹಾಗೂ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಚಿತ್ರದ ನಿರ್ದೇಶಕ ಕೋಳೂರು ಶೇಖರ್ ಹೇಳಿದ್ದಾರೆ. ಚಿತ್ರದ ಶೇ.30ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಚಿತ್ರೀಕರಣವನ್ನು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ನಡೆಸಲಾಗಲಿದೆ. ಚಿತ್ರದ ನಾಯಕ ನಟ ಅವಿನಾಶ್, ‘ಪಕ್ಕ ಲವರ್’ ಸಿನಿಮಾ ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಉದ್ಯಮಿ ಹಾಗೂ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್, ಸಿನಿಮಾ ನಿರ್ಮಾಣದಷ್ಟೇ ಪ್ರಮೋಷನ್‌ಗೂ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 👉 ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಎನ್ನುವ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ. ASN NEWS24 ಕನ್ನಡ – ಸುತ್ತಮುತ್ತ ನಡೆಯುವ ಸುದ್ದಿ ನಿಮ್ಮ ಮುಂದೆ. #PakkaLover #PakkaLoverMovie #KannadaMovie #KannadaCinema #KannadaFilm #Ballari #BallariNews #Bellary #KannadaNews #KannadaFilmIndustry #LocalTalent #LocalArtists #Avinash #KannadaActor #FilmPromotion #Sandalwood #SandalwoodNews #KarnatakaNews #ASNNews24 #ASNNews24Kannada
    1
    ಪಕ್ಕ ಲವರ್’ ಸಿನಿಮಾ ಶುರು! 🎬
ಸ್ಥಳೀಯ ಪ್ರತಿಭೆಗಳಿಗೆ ದೊಡ್ಡ ಅವಕಾಶ!
ಸಿನಿಮಾ ನಿರ್ಮಾಣಕ್ಕಿಂತ ಪ್ರಮೋಷನ್ ಮುಖ್ಯ!
ಬಳ್ಳಾರಿಯ ಸ್ಥಳೀಯ ಪ್ರತಿಭೆಗಳನ್ನೇ ಒಳಗೊಂಡು ನಿರ್ಮಾಣವಾಗುತ್ತಿರುವ ‘ಪಕ್ಕ ಲವರ್’ ಕನ್ನಡ ಚಲನಚಿತ್ರದ ಟೈಟಲ್ ಹಾಗೂ ಹಾಡು ಬಿಡುಗಡೆಗೊಂಡಿದೆ. 🎬
ಸ್ಥಳೀಯ ಕಲಾವಿದರು ಹಾಗೂ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಚಿತ್ರದ ನಿರ್ದೇಶಕ ಕೋಳೂರು ಶೇಖರ್ ಹೇಳಿದ್ದಾರೆ.
ಚಿತ್ರದ ಶೇ.30ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಚಿತ್ರೀಕರಣವನ್ನು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ನಡೆಸಲಾಗಲಿದೆ.
ಚಿತ್ರದ ನಾಯಕ ನಟ ಅವಿನಾಶ್, ‘ಪಕ್ಕ ಲವರ್’ ಸಿನಿಮಾ ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಉದ್ಯಮಿ ಹಾಗೂ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್, ಸಿನಿಮಾ ನಿರ್ಮಾಣದಷ್ಟೇ ಪ್ರಮೋಷನ್‌ಗೂ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
👉 ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಎನ್ನುವ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ.
ASN NEWS24 ಕನ್ನಡ – ಸುತ್ತಮುತ್ತ ನಡೆಯುವ ಸುದ್ದಿ ನಿಮ್ಮ ಮುಂದೆ.
#PakkaLover #PakkaLoverMovie #KannadaMovie #KannadaCinema #KannadaFilm #Ballari #BallariNews #Bellary #KannadaNews #KannadaFilmIndustry #LocalTalent #LocalArtists #Avinash #KannadaActor #FilmPromotion #Sandalwood #SandalwoodNews #KarnatakaNews #ASNNews24 #ASNNews24Kannada
    user_AsnNews24Kannada
    AsnNews24Kannada
    Local News Reporter Ballari, Karnataka•
    10 hrs ago
  • ಬಾಗಲಕೋಟೆ: ಸರ್ವರ್ ಸಮಸ್ಯೆ: ಇ-ಕೆವೈಸಿ ವಿಳಂಬ ಖಂಡಿಸಿ ಪಡಿತರ ವಿತರಕರ ಪ್ರತಿಭಟನೆ ಬಾಗಲಕೋಟೆ: ಸರ್ವರ್ ಸಮಸ್ಯೆ: ಇ-ಕೆವೈಸಿ ವಿಳಂಬ ಖಂಡಿಸಿ ಪಡಿತರ ವಿತರಕರ ಪ್ರತಿಭಟನೆ ಜಿಲ್ಲಾಡಳಿತ ಭವನದ ಎದುರು ಸರಕಾರಿ ಪಡಿತರ ವಿತರಕರ ಸಂಘದಿಂದ ಪ್ರತಿಭಟನೆ ಸರ್ವರ್ ಸಮಸ್ಯೆಯಿಂದ ದಿನಕ್ಕೆ ಕೇವಲ 5–10 ಪಡಿತರ ಚೀಟಿಗಳ ಇ-ಕೆವೈಸಿ ಇ-ಕೆವೈಸಿಗಾಗಿ ಗಂಟೆಗಟ್ಟಲೆ ಕಾಯುತ್ತಿರುವ ಪಡಿತರ ಚೀಟಿದಾರರು ಸರ್ವರ್ ಸಮಸ್ಯೆಯಿಂದ ಪಡಿತರ ವಿತರಕರು–ಚೀಟಿದಾರರ ನಡುವೆ ವಾಗ್ವಾದ ವಿತರಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳ ಒತ್ತಡ: ಆರೋಪ ಇ-ಕೆವೈಸಿ ಪ್ರಕ್ರಿಯೆಯಿಂದ ವಿತರಕರಿಗೆ ಮಾನಸಿಕ ಒತ್ತಡ ಹೆಚ್ಚಳ ವಿತರಕರ ಆರೋಗ್ಯದ ಮೇಲೂ ದುಷ್ಪರಿಣಾಮ: ಸಂಘದ ಆರೋಪ ಐಹೊಳೆ ಗ್ರಾಮದ ವಿತರಕಿ ಗುರುದೇವಿ ಪ್ಯಾಟಿಶೆಟ್ಟರ ಅವರಿಗೆ ಅನಾರೋಗ್ಯ: ಸಂಘದ ಉಲ್ಲೇಖ ಇ-ಕೆವೈಸಿ ಸರ್ವರ್ ಸಮಸ್ಯೆ ಕೂಡಲೇ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ
    1
    ಬಾಗಲಕೋಟೆ: ಸರ್ವರ್ ಸಮಸ್ಯೆ: ಇ-ಕೆವೈಸಿ ವಿಳಂಬ ಖಂಡಿಸಿ ಪಡಿತರ ವಿತರಕರ ಪ್ರತಿಭಟನೆ
ಬಾಗಲಕೋಟೆ: ಸರ್ವರ್ ಸಮಸ್ಯೆ: ಇ-ಕೆವೈಸಿ ವಿಳಂಬ ಖಂಡಿಸಿ ಪಡಿತರ ವಿತರಕರ ಪ್ರತಿಭಟನೆ
ಜಿಲ್ಲಾಡಳಿತ ಭವನದ ಎದುರು ಸರಕಾರಿ ಪಡಿತರ ವಿತರಕರ ಸಂಘದಿಂದ ಪ್ರತಿಭಟನೆ
ಸರ್ವರ್ ಸಮಸ್ಯೆಯಿಂದ ದಿನಕ್ಕೆ ಕೇವಲ 5–10 ಪಡಿತರ ಚೀಟಿಗಳ ಇ-ಕೆವೈಸಿ
ಇ-ಕೆವೈಸಿಗಾಗಿ ಗಂಟೆಗಟ್ಟಲೆ ಕಾಯುತ್ತಿರುವ ಪಡಿತರ ಚೀಟಿದಾರರು
ಸರ್ವರ್ ಸಮಸ್ಯೆಯಿಂದ ಪಡಿತರ ವಿತರಕರು–ಚೀಟಿದಾರರ ನಡುವೆ ವಾಗ್ವಾದ
ವಿತರಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳ ಒತ್ತಡ: ಆರೋಪ
ಇ-ಕೆವೈಸಿ ಪ್ರಕ್ರಿಯೆಯಿಂದ ವಿತರಕರಿಗೆ ಮಾನಸಿಕ ಒತ್ತಡ ಹೆಚ್ಚಳ
ವಿತರಕರ ಆರೋಗ್ಯದ ಮೇಲೂ ದುಷ್ಪರಿಣಾಮ: ಸಂಘದ ಆರೋಪ
ಐಹೊಳೆ ಗ್ರಾಮದ ವಿತರಕಿ ಗುರುದೇವಿ ಪ್ಯಾಟಿಶೆಟ್ಟರ ಅವರಿಗೆ ಅನಾರೋಗ್ಯ: ಸಂಘದ ಉಲ್ಲೇಖ
ಇ-ಕೆವೈಸಿ ಸರ್ವರ್ ಸಮಸ್ಯೆ ಕೂಡಲೇ ಪರಿಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ
    user_Shabbir Bijapur
    Shabbir Bijapur
    Photographer ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    5 hrs ago
  • ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ *ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಐತಿಹಾಸಿಕ ಸರ್ಕಾರಿ ಮೇನ್ ಬಾಯ್ಸ್ ಸ್ಕೂಲ್ ಕ್ಷೇಮಾಭಿವೃದ್ಧಿಗಾಗಿ ತಾವು ಯಾವುದೇ ಹಂತದ ಕಾನೂನಾತ್ಮಕ ಹೋರಾಟಕ್ಕೆ , ಹಾಗೂ ಎಲ್ಲಾ ರೀತಿಯ ತ್ಯಾಗ ಬಲಿದಾನಕ್ಕೆ ಸಿದ್ಧರಿರುವುದಾಗಿ ಹೋರಾಟಗಾರರು ಘೋಷಿಸಿದ್ದಾರೆ. ಅದೇ ರೀತಿಯಾಗಿ ಸರ್ಕಾರಿ ಶಾಲಾಭಿವೃದ್ಧಿಗಾಗಿ , ತಾವು ಸದಾ ಭದ್ಧರಾಗಿರುವುದಾಗಿ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ನುಡಿದಿದ್ದಾರೆ. ಪತ್ರಕರ್ತರೊಂದಿಗೆ ಹೋರಾಟಗಾರರಾದ ರಾಘವೇಂದ್ರರವರು ಮಾತನಾಡಿದ್ದು , ಮೇನ್ ಬಾಯ್ಸ್ ಸ್ಕೂಲ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣಮಾಗಿದ್ದು. ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಕುತಂತ್ರದಿಂದಾಗಿ , ನಿರಂತರವಾಗಿ ಶೋಷಣೆಗೆ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದೆ. ಆ ಅವ್ಯವಸ್ಥೆಯ ವಿರುದ್ಧ ತಾವು ಮೌನ ಪ್ರತಿಭಟನೆ ಹಮ್ಮಿಕೊಂಡಿರುವುದ‍ಾಗಿ , ಶಾಲಾಕ್ಷೇಮಾಭಿವೃದ್ಧಿ ಹೋರಾಟಗಾರರು. ಎಸ್ಡಿ ಎಮ್ಸಿ ಮೇಲುಸ್ತುವಾರಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ , ಗುನ್ನಳ್ಳಿ ರಾಘವೇಂದ್ರ ನುಡಿದಿದ್ದಾರೆ. ಅವರು ಶಾಲಾ ಆವರಣದಲ್ಲಿ , ಯಾವುದೇ ಖಾಸಗೀ ಕಾರ್ಯಕ್ರಮ ಜರುಗುವುದನ್ನು ವಿರೋಧಿಸುತ್ತಿದ್ದು. ಮತ್ತು ಶಾಲಾವರಣ ಕೆಲ ಪಟ್ಟಭದ್ರರ ಕಪಿಮುಷ್ಠಿಯಲ್ಲಿ ನಲುಗುತ್ತಿದೆ , ಇದರಿಂದಾಗಿ ಶಾಲಾವಾತಾರಣದಲ್ಲಿ ಶಾಂತಿಗೆ ಭಂಗವಾಗಲಿದೆ. ಇದರ ವಿರುದ್ಧ ತಾವು ಮೌನ ಪ್ರತಿಭಟನೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಶಾಸಕರ ಮನವಿಯ ಮೇರೆಗೆ ಹೋರಾಟವನ್ನು ತಾವು , ತಾತ‍್ಕಾಲಿಕ ಸಮಯ ಮಾತ್ರ ಹಿಂಪಡೆಯುತ್ತಿದ್ದು. ಗಣೇಶೋತ್ಸವ ನಂತರದಲ್ಲಿ ಹೋರಾಟ ಮುಂದುವರೆಯಲಿದ್ದು , ಬೀದಿಗಿಳಿದು ಹೋರಾಟಗಳನ್ನು ನಡೆಸಲಾಗುವುದು. ಶಾಲೆ ಸ್ಥಳಾಂತರಕ್ಕೆ ಯಾವುದೇ ಕಾರಣಕ್ಕೆ ಅವಕಾಶ ಕೊಡೋದಿಲ್ಲ , ಶಾಲಾ ಆವರಣ ಉಳಿವಿಗಾಗಿ ಕ್ಷೇಮಾಭಿವೃದ್ಧಿಗೆ ತ‍ಾವು ಎಂತಹ ತ್ಯಾಗ ಬಲಿದಾನಕ್ಕೂ ಸಿದ್ಧರಿರುವುದ‍ಾಗಿ ಅವರು ಘೋಷಿಸಿದರು. ಶಾಲೆಯ ಉಳಿವಿಗಾಗಿ ಶಾಲಾ ಆವರಣ ಉಳಿವಿಗಾಗಿ , ಶ‍ಾಲೆಯ ಹಳೇ ವಿದ್ಯಾರ್ಥಿಗಳ ಸಂಘಟನೆ ಮಾಡಿ ಜಾಗೃತಿ ಆಂದೊಲನ ಹೋರಾಟಗಳನ್ನಿ ಹಮ್ಮಿಕೊಳ್ಳಲ‍ಾಗುವುದು. ಮತ್ತು ಶಾಲಾ ಕ್ಷೇಮಾಭಿವೃದ್ಧಿಗಾಗಿ , ನ್ಯ‍ಾಯ‍ಲಯದ ಮೊರೆ ಹೋಗಲಾಗುವುದು. ತಾವು ಕ‍ಾನೂನಾತ್ಮಕವಾಗಿ ಹೋರಾಡಲು ಸರ್ವಸಿದ್ಧವಿದ್ದು , ಎಲ್ಲಾ ಹಂತದ ಹೋರಾಟಕ್ಕೆ ಪೂರ್ವ ತಯಾರಿ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಅಭಿವೃದ್ಧಿ ನೆಪದಲ್ಲಿ ಶಾಲಾ ಮೂಲ ಆಕರಕ್ಕೆ ಯಾವುದೇ ದಕ್ಕೆಯಾಗಬಾರದು , ಅದು ಕಾನೂನು ಬಾಹೀರವಾಗಲಿದ್ದು. ಆಭಿವೃದ್ಧಿಯ ಹರಿಕಾರರಾದ ಶ‍ಾಸಕರ ಮನವಿಗೆ ಮಾನ್ಯತೆ ನೀಡಿ , ಅವರ ಅಭಿವೃದ್ಧಿ ಪರನಿಲುವಿನ ಮೇಲೆ ವಿಶ್ವಾಸವಿಟ್ಟು ತಾವು ಮೌನ ಪ್ರತಿಭಟನೆಯನ್ನು ತಾತ್ಕ‍ಾಲಿಕವಾಗಿ ನಿಲ್ಲಿಸಲಾಗುವುದೆಂದು ಅವರು ತಿಳಿಸಿದರು. ಹಿಂದೆ ಶಾಸಕರು ಸಮ್ಮುಖದಲ್ಲಿ ಪ್ರತಿಭಟನೆ ಮಾಡುತ್ತಿರುವವರನ್ನುದ್ಧೇಶಿಸಿ ಮಾತನ‍ಾಡಿದ ಶಾಸಕರು , ಹೋರಾಟಗಾರರಲ್ಲಿರುವ ಶಾಲಾಕಾಳಜಿಯನ್ನು ಪ್ರಶಂಸಿದರು. ಮತ್ತು ಶೀಘ್ರವೇ ಶಾಲೆಯ ಕ್ಷೇಮಾಭಿವೃದ್ಧಿಗೆ ಚಾಲನೆ ನೀಡಲಾಗುವುದು. ಸರ್ಕಾರಿ ಶಾಲ‍ೆಗಳ ಕ್ಷೇಮ‍ಾಭಿವೃದ್ಧಿಗೆ ತಾವು ಸದಾ ಬದ್ಧರಿರುವುದಾಗಿ , ಶಾಸಕರು ಹೋರಾಟಗಾರರಿಗೆ ಮನವರಿಕೆ ಮ‍ಾಡಿಕೊಟ್ಟರು. ಶಾಲೆಯನ್ನು ಐತಿಹಾಸಿಕ ಶಾಲೆಯನ್ನಾಗಿ ಮಾಡುತ್ತೇನೆಂದು ಭರವಸೆ ನೀಡಿದರು , ಸುಸಜ್ಜಿತವಾದಂತಹ ಗುಣ ಮಟ್ಟದ ಶಿಕ್ಷಣ ಒದಗಿಸುವುದಕ್ಕೆ. ಅಗತ್ಯ ಸೌಕರ್ಯಗಳನ್ನು ಒಸಗಿಸುವುದಾಗಿ ನುಡಿದರು. ಶಾಲೆಯ ಮೂಲ ಆಕಾರಕ್ಕೆ ಧಕ್ಕೆ ತರದೇ ಉನ್ನತೀಕರಿಸಲ‍ಾಗುವುದೆಂದು , ಶಾಲಾ ಆವರಣವನ್ನು ಮತ್ತಷ್ಟು ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದೆಂದು ಶಾಸಕರು ಭರವಸೆ ನೀಡಿದ್ದಾರೆನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಹತ್ತಾರು ಪ್ರಮುಖ ಸಂಘಟನೆಗಳ , ಮುಖಂಡರು ಗಣ್ಯರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್
*ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ  ಐತಿಹಾಸಿಕ ಸರ್ಕಾರಿ ಮೇನ್ ಬಾಯ್ಸ್ ಸ್ಕೂಲ್ ಕ್ಷೇಮಾಭಿವೃದ್ಧಿಗಾಗಿ ತಾವು ಯಾವುದೇ ಹಂತದ ಕಾನೂನಾತ್ಮಕ ಹೋರಾಟಕ್ಕೆ , ಹಾಗೂ ಎಲ್ಲಾ ರೀತಿಯ ತ್ಯಾಗ ಬಲಿದಾನಕ್ಕೆ ಸಿದ್ಧರಿರುವುದಾಗಿ ಹೋರಾಟಗಾರರು ಘೋಷಿಸಿದ್ದಾರೆ. ಅದೇ ರೀತಿಯಾಗಿ ಸರ್ಕಾರಿ ಶಾಲಾಭಿವೃದ್ಧಿಗಾಗಿ , ತಾವು ಸದಾ ಭದ್ಧರಾಗಿರುವುದಾಗಿ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ನುಡಿದಿದ್ದಾರೆ. ಪತ್ರಕರ್ತರೊಂದಿಗೆ ಹೋರಾಟಗಾರರಾದ ರಾಘವೇಂದ್ರರವರು ಮಾತನಾಡಿದ್ದು , ಮೇನ್ ಬಾಯ್ಸ್ ಸ್ಕೂಲ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣಮಾಗಿದ್ದು.  ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಕುತಂತ್ರದಿಂದಾಗಿ , ನಿರಂತರವಾಗಿ ಶೋಷಣೆಗೆ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದೆ. ಆ ಅವ್ಯವಸ್ಥೆಯ ವಿರುದ್ಧ ತಾವು ಮೌನ ಪ್ರತಿಭಟನೆ ಹಮ್ಮಿಕೊಂಡಿರುವುದ‍ಾಗಿ , ಶಾಲಾಕ್ಷೇಮಾಭಿವೃದ್ಧಿ ಹೋರಾಟಗಾರರು. ಎಸ್ಡಿ ಎಮ್ಸಿ ಮೇಲುಸ್ತುವಾರಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ ,  ಗುನ್ನಳ್ಳಿ ರಾಘವೇಂದ್ರ ನುಡಿದಿದ್ದಾರೆ. ಅವರು ಶಾಲಾ ಆವರಣದಲ್ಲಿ , ಯಾವುದೇ ಖಾಸಗೀ ಕಾರ್ಯಕ್ರಮ ಜರುಗುವುದನ್ನು ವಿರೋಧಿಸುತ್ತಿದ್ದು. ಮತ್ತು ಶಾಲಾವರಣ ಕೆಲ ಪಟ್ಟಭದ್ರರ ಕಪಿಮುಷ್ಠಿಯಲ್ಲಿ ನಲುಗುತ್ತಿದೆ , ಇದರಿಂದಾಗಿ ಶಾಲಾವಾತಾರಣದಲ್ಲಿ ಶಾಂತಿಗೆ ಭಂಗವಾಗಲಿದೆ. ಇದರ ವಿರುದ್ಧ ತಾವು ಮೌನ ಪ್ರತಿಭಟನೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಶಾಸಕರ ಮನವಿಯ ಮೇರೆಗೆ ಹೋರಾಟವನ್ನು ತಾವು , ತಾತ‍್ಕಾಲಿಕ ಸಮಯ ಮಾತ್ರ ಹಿಂಪಡೆಯುತ್ತಿದ್ದು. ಗಣೇಶೋತ್ಸವ ನಂತರದಲ್ಲಿ ಹೋರಾಟ ಮುಂದುವರೆಯಲಿದ್ದು , ಬೀದಿಗಿಳಿದು ಹೋರಾಟಗಳನ್ನು ನಡೆಸಲಾಗುವುದು. ಶಾಲೆ ಸ್ಥಳಾಂತರಕ್ಕೆ ಯಾವುದೇ ಕಾರಣಕ್ಕೆ ಅವಕಾಶ ಕೊಡೋದಿಲ್ಲ  ,  ಶಾಲಾ ಆವರಣ ಉಳಿವಿಗಾಗಿ ಕ್ಷೇಮಾಭಿವೃದ್ಧಿಗೆ ತ‍ಾವು ಎಂತಹ ತ್ಯಾಗ ಬಲಿದಾನಕ್ಕೂ ಸಿದ್ಧರಿರುವುದ‍ಾಗಿ ಅವರು ಘೋಷಿಸಿದರು. ಶಾಲೆಯ ಉಳಿವಿಗಾಗಿ ಶಾಲಾ ಆವರಣ ಉಳಿವಿಗಾಗಿ , ಶ‍ಾಲೆಯ ಹಳೇ ವಿದ್ಯಾರ್ಥಿಗಳ ಸಂಘಟನೆ ಮಾಡಿ ಜಾಗೃತಿ ಆಂದೊಲನ ಹೋರಾಟಗಳನ್ನಿ ಹಮ್ಮಿಕೊಳ್ಳಲ‍ಾಗುವುದು. ಮತ್ತು ಶಾಲಾ ಕ್ಷೇಮಾಭಿವೃದ್ಧಿಗಾಗಿ , ನ್ಯ‍ಾಯ‍ಲಯದ ಮೊರೆ ಹೋಗಲಾಗುವುದು. ತಾವು ಕ‍ಾನೂನಾತ್ಮಕವಾಗಿ ಹೋರಾಡಲು ಸರ್ವಸಿದ್ಧವಿದ್ದು ,  ಎಲ್ಲಾ ಹಂತದ ಹೋರಾಟಕ್ಕೆ ಪೂರ್ವ ತಯಾರಿ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಅಭಿವೃದ್ಧಿ ನೆಪದಲ್ಲಿ ಶಾಲಾ ಮೂಲ ಆಕರಕ್ಕೆ ಯಾವುದೇ ದಕ್ಕೆಯಾಗಬಾರದು ,  ಅದು ಕಾನೂನು ಬಾಹೀರವಾಗಲಿದ್ದು. ಆಭಿವೃದ್ಧಿಯ ಹರಿಕಾರರಾದ ಶ‍ಾಸಕರ ಮನವಿಗೆ ಮಾನ್ಯತೆ ನೀಡಿ , ಅವರ ಅಭಿವೃದ್ಧಿ ಪರನಿಲುವಿನ ಮೇಲೆ ವಿಶ್ವಾಸವಿಟ್ಟು ತಾವು ಮೌನ ಪ್ರತಿಭಟನೆಯನ್ನು  ತಾತ್ಕ‍ಾಲಿಕವಾಗಿ ನಿಲ್ಲಿಸಲಾಗುವುದೆಂದು ಅವರು ತಿಳಿಸಿದರು. ಹಿಂದೆ ಶಾಸಕರು ಸಮ್ಮುಖದಲ್ಲಿ ಪ್ರತಿಭಟನೆ ಮಾಡುತ್ತಿರುವವರನ್ನುದ್ಧೇಶಿಸಿ ಮಾತನ‍ಾಡಿದ ಶಾಸಕರು , ಹೋರಾಟಗಾರರಲ್ಲಿರುವ ಶಾಲಾಕಾಳಜಿಯನ್ನು ಪ್ರಶಂಸಿದರು. ಮತ್ತು ಶೀಘ್ರವೇ ಶಾಲೆಯ ಕ್ಷೇಮಾಭಿವೃದ್ಧಿಗೆ ಚಾಲನೆ ನೀಡಲಾಗುವುದು. ಸರ್ಕಾರಿ ಶಾಲ‍ೆಗಳ ಕ್ಷೇಮ‍ಾಭಿವೃದ್ಧಿಗೆ ತಾವು ಸದಾ ಬದ್ಧರಿರುವುದಾಗಿ , ಶಾಸಕರು ಹೋರಾಟಗಾರರಿಗೆ ಮನವರಿಕೆ ಮ‍ಾಡಿಕೊಟ್ಟರು.  ಶಾಲೆಯನ್ನು ಐತಿಹಾಸಿಕ ಶಾಲೆಯನ್ನಾಗಿ ಮಾಡುತ್ತೇನೆಂದು  ಭರವಸೆ ನೀಡಿದರು ,  ಸುಸಜ್ಜಿತವಾದಂತಹ ಗುಣ ಮಟ್ಟದ ಶಿಕ್ಷಣ ಒದಗಿಸುವುದಕ್ಕೆ.  ಅಗತ್ಯ ಸೌಕರ್ಯಗಳನ್ನು ಒಸಗಿಸುವುದಾಗಿ ನುಡಿದರು. ಶಾಲೆಯ ಮೂಲ ಆಕಾರಕ್ಕೆ ಧಕ್ಕೆ ತರದೇ ಉನ್ನತೀಕರಿಸಲ‍ಾಗುವುದೆಂದು , ಶಾಲಾ ಆವರಣವನ್ನು ಮತ್ತಷ್ಟು ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದೆಂದು ಶಾಸಕರು ಭರವಸೆ ನೀಡಿದ್ದಾರೆನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಹತ್ತಾರು ಪ್ರಮುಖ ಸಂಘಟನೆಗಳ , ಮುಖಂಡರು ಗಣ್ಯರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    4 hrs ago
  • ಅಸಹಾಯಕ ದಿವ್ಯಾಂಗ ಯುವಕನ ನೋವಿಗೆ ತಕ್ಷಣ ಸ್ಪಂದನೆ; ಶೌಚಾಲಯ ಹಾಗೂ ವಾಹನದ ನೆರವಿಗೆ ಶಾಸಕ ಭರವಸೆ ಕೂಡ್ಲಿಗಿ: ಅಧಿಕಾರವೆಂಬುದು ಕೇವಲ ಆಡಳಿತ ನಡೆಸುವ ಹೊಣೆಗಾರಿಕೆಯಲ್ಲ; ಸಂಕಷ್ಟದಲ್ಲಿರುವವರ ಕಣ್ಣೀರೊರೆಸುವ ಮಾನವೀಯ ಹೊಣೆಗಾರಿಕೆಯೂ ಹೌದು ಎಂಬುದನ್ನು ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಮತ್ತೊಮ್ಮೆ ತೋರಿಸಿದ್ದಾರೆ. ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದ ದಿವ್ಯಾಂಗ ಯುವಕನೊಬ್ಬ ಹಲವು ದಿನಗಳಿಂದ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಅಸಹಾಯಕ ಬದುಕು ಸಾಗಿಸುತ್ತಿದ್ದ. ಮನೆಯಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲದೆ ಮುಜುಗರ ಹಾಗೂ ಸಂಕಷ್ಟ ಅನುಭವಿಸುತ್ತಿದ್ದ ಈತನಿಗೆ, ಓಡಾಡಲು ಸೂಕ್ತ ವಾಹನವೂ ಇರಲಿಲ್ಲ. ಇದರಿಂದ ದಿನನಿತ್ಯದ ಬದುಕೇ ಸವಾಲಾಗಿ ಪರಿಣಮಿಸಿತ್ತು. ಇದಕ್ಕಿಂತಲೂ ನೋವಿನ ಸಂಗತಿಯೆಂದರೆ, ದ್ವಿಚಕ್ರ ವಾಹನ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ ಪರಿಣಾಮ ಯುವಕನ ಕುಟುಂಬದ ಸಂಕಷ್ಟ ಮತ್ತಷ್ಟು ಹೆಚ್ಚಾಗಿತ್ತು. ಒಂದು ಕಡೆ ದೈಹಿಕ ಅಸಹಾಯಕತೆ, ಮತ್ತೊಂದೆಡೆ ಆರ್ಥಿಕ ಸಂಕಷ್ಟ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ—ಇವೆಲ್ಲವೂ ಆತನ ಬದುಕನ್ನು ಕತ್ತಲೆಯತ್ತ ತಳ್ಳಿದ್ದವು. ಸ್ನೇಹಿತರ ಮನವಿಗೆ ಸ್ಪಂದಿಸಿದ ಶಾಸಕ ಯುವಕನ ಪರಿಸ್ಥಿತಿಯನ್ನು ಆತನ ಸ್ನೇಹಿತರು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರ ಗಮನಕ್ಕೆ ತಂದರು. ವಿಷಯ ತಿಳಿದ ತಕ್ಷಣವೇ ಶಾಸಕ ಸ್ಪಂದಿಸಿದ್ದು, ಯಾವುದೇ ವಿಳಂಬ ಮಾಡದೆ ಯುವಕನ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
    1
    ಅಸಹಾಯಕ ದಿವ್ಯಾಂಗ ಯುವಕನ ನೋವಿಗೆ ತಕ್ಷಣ ಸ್ಪಂದನೆ; ಶೌಚಾಲಯ ಹಾಗೂ ವಾಹನದ ನೆರವಿಗೆ ಶಾಸಕ ಭರವಸೆ
ಕೂಡ್ಲಿಗಿ:
ಅಧಿಕಾರವೆಂಬುದು ಕೇವಲ ಆಡಳಿತ ನಡೆಸುವ ಹೊಣೆಗಾರಿಕೆಯಲ್ಲ; ಸಂಕಷ್ಟದಲ್ಲಿರುವವರ ಕಣ್ಣೀರೊರೆಸುವ ಮಾನವೀಯ ಹೊಣೆಗಾರಿಕೆಯೂ ಹೌದು ಎಂಬುದನ್ನು ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಮತ್ತೊಮ್ಮೆ ತೋರಿಸಿದ್ದಾರೆ.
ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದ ದಿವ್ಯಾಂಗ ಯುವಕನೊಬ್ಬ ಹಲವು ದಿನಗಳಿಂದ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಅಸಹಾಯಕ ಬದುಕು ಸಾಗಿಸುತ್ತಿದ್ದ. ಮನೆಯಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲದೆ ಮುಜುಗರ ಹಾಗೂ ಸಂಕಷ್ಟ ಅನುಭವಿಸುತ್ತಿದ್ದ ಈತನಿಗೆ, ಓಡಾಡಲು ಸೂಕ್ತ ವಾಹನವೂ ಇರಲಿಲ್ಲ. ಇದರಿಂದ ದಿನನಿತ್ಯದ ಬದುಕೇ ಸವಾಲಾಗಿ ಪರಿಣಮಿಸಿತ್ತು.
ಇದಕ್ಕಿಂತಲೂ ನೋವಿನ ಸಂಗತಿಯೆಂದರೆ, ದ್ವಿಚಕ್ರ ವಾಹನ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ ಪರಿಣಾಮ ಯುವಕನ ಕುಟುಂಬದ ಸಂಕಷ್ಟ ಮತ್ತಷ್ಟು ಹೆಚ್ಚಾಗಿತ್ತು. ಒಂದು ಕಡೆ ದೈಹಿಕ ಅಸಹಾಯಕತೆ, ಮತ್ತೊಂದೆಡೆ ಆರ್ಥಿಕ ಸಂಕಷ್ಟ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ—ಇವೆಲ್ಲವೂ ಆತನ ಬದುಕನ್ನು ಕತ್ತಲೆಯತ್ತ ತಳ್ಳಿದ್ದವು.
ಸ್ನೇಹಿತರ ಮನವಿಗೆ ಸ್ಪಂದಿಸಿದ ಶಾಸಕ
ಯುವಕನ ಪರಿಸ್ಥಿತಿಯನ್ನು ಆತನ ಸ್ನೇಹಿತರು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರ ಗಮನಕ್ಕೆ ತಂದರು. ವಿಷಯ ತಿಳಿದ ತಕ್ಷಣವೇ ಶಾಸಕ ಸ್ಪಂದಿಸಿದ್ದು, ಯಾವುದೇ ವಿಳಂಬ ಮಾಡದೆ ಯುವಕನ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.