logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಗುಡಿಹಳ್ಳಿಯಲ್ಲಿ ಪಾರ್ವತಾಂಬ ಸಮೇತ ಸೋಮೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ! ಶಿಡ್ಲಘಟ್ಟ: ತಾಲ್ಲೂಕಿನ ಗುಡಿಹಳ್ಳಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಪಾರ್ವತಾಂಬ ಸಮೇತ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ 18ನೇ ವರ್ಷದ ಬ್ರಹ್ಮರಥೋತ್ಸವವು ಭಕ್ತಿಭಾವ ಹಾಗೂ ವೈಭವದಿಂದ ಭಾನುವಾರ ನೆರವೇರಿತು. ಗಂಗರ ಆಳ್ವಿಕೆ ಕಾಲದ ಎಂಟನೇ ಶತಮಾನಕ್ಕೆ ಸೇರಿದೆ ಎನ್ನಲಾಗುವ ಈ ಪುರಾತನ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶಿವರಾತ್ರಿ ಹಬ್ಬದ ಮರುದಿನ ರಥೋತ್ಸವ ಅದ್ದೂರಿಯಾಗಿ ನಡೆಯಿತು. ರಥೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ಪುಣ್ಯಕಾರ್ಯಕ್ಕೆ ಸಾಕ್ಷಿಯಾದರು. ಬ್ರಹ್ಮರಥೋತ್ಸವಕ್ಕೆ ಶಾಸಕ ಬಿ.ಎನ್. ರವಿಕುಮಾರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ವಿಶೇಷ ಪೂಜೆ, ಹೋಮ ಹವನ, ಕಳಶ ಹಾಗೂ ಗಣಪತಿ ಪೂಜೆಗಳ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಗುಡಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ತಂಬಿಟ್ಟು ದೀಪಗಳನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡು ದೇವರಿಗೆ ಆರತಿ ಎತ್ತಿದರು. ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳ ಸಾಂಸ್ಕೃತಿಕ ಪ್ರದರ್ಶನಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ಭಕ್ತಿಭಾವ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವ ಒಂದೇ ವೇದಿಕೆಯಲ್ಲಿ ಮೂಡಿಬಂದಿತು. ಶಾಸಕ ಬಿ.ಎನ್. ರವಿಕುಮಾರ್, ಪ್ರತಿವರ್ಷ ಸಂಪ್ರದಾಯಬದ್ಧವಾಗಿ ನಡೆಯುತ್ತಿರುವ ಈ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ಸಂತೋಷದ ಸಂಗತಿ ಎಂದರು. ಉತ್ತಮ ಮಳೆಬೆಳೆ ಆಗಲಿ, ರೈತರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಸೋಮೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ದೇವಾಲಯದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಶಿವರಾತ್ರಿ ಬಳಿಕ ನಡೆಯುವ ಈ ರಥೋತ್ಸವಕ್ಕೆ ಪ್ರತಿವರ್ಷ ಜನಸಾಗರವೇ ಸೇರುವ ವಾಡಿಕೆ ಇದ್ದು, ಭಕ್ತರು ತಮ್ಮ ಇಷ್ಟಾರ್ಥಗಳಿಗಾಗಿ ದೇವರ ದರ್ಶನ ಪಡೆಯುವುದು ಇಲ್ಲಿ ವಿಶೇಷವಾಗಿದೆ. ಈ ವರ್ಷದ ಬ್ರಹ್ಮರಥೋತ್ಸವವು ಭಕ್ತಿಭಾವ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಯಶಸ್ವಿಯಾಗಿ ನೆರವೇರಿತು. ರಥೋತ್ಸವದಲ್ಲಿ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ, ಎಬಿಡಿ ಗ್ರೂಪ್ ಅಧ್ಯಕ್ಷ ರಾಜೀವ್ ಗೌಡ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ತಾಲ್ಲೂಕಿನ ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಮುನಿಕೆಂಪಣ್ಣ, ರವಿಪ್ರಕಾಶ್, ಭಕ್ತರಹಳ್ಳಿ ಪ್ರತೀಶ್, ಕೆಂಪಣ್ಣ, ದೇವಾಲಯ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

1 day ago
user_NAYAN NEWS
NAYAN NEWS
Sidlaghatta, Chikkaballapura•
1 day ago
1daa7a13-64fa-4c53-a45a-c0fafe272d8f

ಗುಡಿಹಳ್ಳಿಯಲ್ಲಿ ಪಾರ್ವತಾಂಬ ಸಮೇತ ಸೋಮೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ! ಶಿಡ್ಲಘಟ್ಟ: ತಾಲ್ಲೂಕಿನ ಗುಡಿಹಳ್ಳಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಪಾರ್ವತಾಂಬ ಸಮೇತ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ 18ನೇ ವರ್ಷದ ಬ್ರಹ್ಮರಥೋತ್ಸವವು ಭಕ್ತಿಭಾವ ಹಾಗೂ ವೈಭವದಿಂದ ಭಾನುವಾರ ನೆರವೇರಿತು. ಗಂಗರ ಆಳ್ವಿಕೆ ಕಾಲದ ಎಂಟನೇ ಶತಮಾನಕ್ಕೆ ಸೇರಿದೆ ಎನ್ನಲಾಗುವ ಈ ಪುರಾತನ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶಿವರಾತ್ರಿ ಹಬ್ಬದ ಮರುದಿನ ರಥೋತ್ಸವ ಅದ್ದೂರಿಯಾಗಿ ನಡೆಯಿತು. ರಥೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ಪುಣ್ಯಕಾರ್ಯಕ್ಕೆ ಸಾಕ್ಷಿಯಾದರು. ಬ್ರಹ್ಮರಥೋತ್ಸವಕ್ಕೆ ಶಾಸಕ ಬಿ.ಎನ್. ರವಿಕುಮಾರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ವಿಶೇಷ ಪೂಜೆ, ಹೋಮ ಹವನ, ಕಳಶ ಹಾಗೂ ಗಣಪತಿ ಪೂಜೆಗಳ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಗುಡಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ತಂಬಿಟ್ಟು ದೀಪಗಳನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡು ದೇವರಿಗೆ ಆರತಿ ಎತ್ತಿದರು. ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳ ಸಾಂಸ್ಕೃತಿಕ ಪ್ರದರ್ಶನಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ಭಕ್ತಿಭಾವ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವ ಒಂದೇ ವೇದಿಕೆಯಲ್ಲಿ ಮೂಡಿಬಂದಿತು. ಶಾಸಕ ಬಿ.ಎನ್. ರವಿಕುಮಾರ್, ಪ್ರತಿವರ್ಷ ಸಂಪ್ರದಾಯಬದ್ಧವಾಗಿ ನಡೆಯುತ್ತಿರುವ ಈ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ಸಂತೋಷದ ಸಂಗತಿ ಎಂದರು. ಉತ್ತಮ ಮಳೆಬೆಳೆ ಆಗಲಿ, ರೈತರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಸೋಮೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ದೇವಾಲಯದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಶಿವರಾತ್ರಿ ಬಳಿಕ ನಡೆಯುವ ಈ ರಥೋತ್ಸವಕ್ಕೆ ಪ್ರತಿವರ್ಷ ಜನಸಾಗರವೇ ಸೇರುವ ವಾಡಿಕೆ ಇದ್ದು, ಭಕ್ತರು ತಮ್ಮ ಇಷ್ಟಾರ್ಥಗಳಿಗಾಗಿ ದೇವರ ದರ್ಶನ ಪಡೆಯುವುದು ಇಲ್ಲಿ ವಿಶೇಷವಾಗಿದೆ. ಈ ವರ್ಷದ ಬ್ರಹ್ಮರಥೋತ್ಸವವು ಭಕ್ತಿಭಾವ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಯಶಸ್ವಿಯಾಗಿ ನೆರವೇರಿತು. ರಥೋತ್ಸವದಲ್ಲಿ ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ, ಎಬಿಡಿ ಗ್ರೂಪ್ ಅಧ್ಯಕ್ಷ ರಾಜೀವ್ ಗೌಡ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ತಾಲ್ಲೂಕಿನ ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ಮುನಿಕೆಂಪಣ್ಣ, ರವಿಪ್ರಕಾಶ್, ಭಕ್ತರಹಳ್ಳಿ ಪ್ರತೀಶ್, ಕೆಂಪಣ್ಣ, ದೇವಾಲಯ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

More news from Bengaluru Rural and nearby areas
  • बेंगलुरु में महिला करा रही थी मैटरनिटी फोटोशूट, पानी के पूल में गिरा बच्चा; डूबने से मौत। बेंगलुरु में एक मां के मैटरनिटी फोटोशूट के दौरान उसके छोटे बच्चे लक्ष्मीर की पानी के पूल में डूबने से मौत हो गई। 8 महीने की गर्भवती स्वाती फोटोशूट करा रही थी, तभी बच्चा पूल में फिसल गया। समय पर मदद न मिलने से उसकी जान चली गई। पुलिस ने मामला दर्ज कर जांच शुरू कर दी है कि कहीं कोई लापरवाही तो नहीं हुई।
    1
    बेंगलुरु में महिला करा रही थी मैटरनिटी फोटोशूट, पानी के पूल में गिरा बच्चा; डूबने से मौत।
बेंगलुरु में एक मां के मैटरनिटी फोटोशूट के दौरान उसके छोटे बच्चे लक्ष्मीर की पानी के पूल में डूबने से मौत हो गई। 8 महीने की गर्भवती स्वाती फोटोशूट करा रही थी, तभी बच्चा पूल में फिसल गया। समय पर मदद न मिलने से उसकी जान चली गई। पुलिस ने मामला दर्ज कर जांच शुरू कर दी है कि कहीं कोई लापरवाही तो नहीं हुई।
    user_Avinash agnihotri
    Avinash agnihotri
    Devanahalli, Bengaluru Rural•
    3 hrs ago
  • ದೊಡ್ಡಬಳ್ಳಾಪುರ ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು. ಸರ್ಜಾಪುರ ಮೂಲದ ನಯನ (19 ) ಮೃತ ವಿದ್ಯಾರ್ಥಿನಿ. ದೊಡ್ಡಬಳ್ಳಾಪುರದ ನಾಗದೇನಹಳ್ಳಿಯಲ್ಲಿರುವ ಗೀತಂಯೂನಿವರ್ಸಿಟಿಯಲ್ಲಿ ಘಟನೆ. ನೂತನ ಕಟ್ಟಡದಲ್ಲಿ ಲಿಫ್ಟ್ ಮಾಡಲು ಬಿಟ್ಟಿದ್ದ ಜಾಗದಲ್ಲಿ ಬಿದ್ದು ಸಾವು. ಬಿ.ಇ.ಸಿವಿಲ್ ಕಂಪ್ಯೂಟರ್ ಸೈನ್ಸ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ಭೇಟಿ ನೀಡಿ ಪರಿಶೀಲನೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ವಿದ್ಯಾರ್ಥಿನಿಯ ಮೃತದೇಹವನ್ನು ದೊಡ್ಡಬಳ್ಳಾಪುರದ ಶವಾಗಾರಕ್ಕೆ ರವಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ‌ದೊಡ್ಡಬಳ್ಳಾಪುರದ ಗೀತಂ ಯುನಿವರ್ಸಿಟಿ
    1
    ದೊಡ್ಡಬಳ್ಳಾಪುರ 
ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು.
ಸರ್ಜಾಪುರ ಮೂಲದ ನಯನ (19 )  ಮೃತ ವಿದ್ಯಾರ್ಥಿನಿ.
ದೊಡ್ಡಬಳ್ಳಾಪುರದ ನಾಗದೇನಹಳ್ಳಿಯಲ್ಲಿರುವ ಗೀತಂಯೂನಿವರ್ಸಿಟಿಯಲ್ಲಿ ಘಟನೆ.
ನೂತನ ಕಟ್ಟಡದಲ್ಲಿ ಲಿಫ್ಟ್ ಮಾಡಲು ಬಿಟ್ಟಿದ್ದ ಜಾಗದಲ್ಲಿ ಬಿದ್ದು ಸಾವು.
ಬಿ.ಇ.ಸಿವಿಲ್ ಕಂಪ್ಯೂಟರ್ ಸೈನ್ಸ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ಭೇಟಿ ನೀಡಿ ಪರಿಶೀಲನೆ
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇನ್ನು ವಿದ್ಯಾರ್ಥಿನಿಯ ಮೃತದೇಹವನ್ನು ದೊಡ್ಡಬಳ್ಳಾಪುರದ ಶವಾಗಾರಕ್ಕೆ ರವಾನೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ‌ದೊಡ್ಡಬಳ್ಳಾಪುರದ ಗೀತಂ ಯುನಿವರ್ಸಿಟಿ
    user_Gangaraju N Vistara News Reporter
    Gangaraju N Vistara News Reporter
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    6 hrs ago
  • कर्नाटक के बेंगलुरु में एक मां मैटरनिटी फोटोशूट करा रही थी, इसी दौरान उसके छोटे बच्चे की पानी के पूल में गिरने से मौत हो गई। बच्चे की पहचान लक्ष्मीर के रूप में हुई है।
    1
    कर्नाटक के बेंगलुरु में एक मां मैटरनिटी फोटोशूट करा रही थी, इसी दौरान उसके छोटे बच्चे की पानी के पूल में गिरने से मौत हो गई। बच्चे की पहचान लक्ष्मीर के रूप में हुई है।
    user_Roshan kabra
    Roshan kabra
    Hosakote, Bengaluru Rural•
    11 hrs ago
  • pani ke fayde
    1
    pani ke fayde
    user_SUDHUR CHAULANI NEWS
    SUDHUR CHAULANI NEWS
    Local News Reporter ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    14 hrs ago
  • ಕರುನಾಡ ಅಧಿಪತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ ಮಡಿಲು ಆಶ್ರಮ ನಮ್ಮ ಕೈಲಿ ಆದಷ್ಟು ಅವರಿಗೆ ಒಳ್ಳೆಯದು ಮಾಡಲಿ ಎಂದು ಅವರ ದಾರಿಯಲ್ಲಿ ನಮ್ಮದೊಂದು ಚಿಕ್ಕ ಸೇವೆ ಸಲ್ಲಿಸುತ್ತಿದ್ದೇನೆ ಹುಟ್ಟು ಹಬ್ಬದ ಶುಭಾಶಯಗಳು ಬಡವರ ಕಣ್ಮಣಿ ನಮ್ಮ ನೆಚ್ಚಿನ ದರ್ಶನ್ ಸರ್ ಅವರಿಗೆ 💐🎂
    1
    ಕರುನಾಡ ಅಧಿಪತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ ಮಡಿಲು ಆಶ್ರಮ ನಮ್ಮ ಕೈಲಿ ಆದಷ್ಟು ಅವರಿಗೆ ಒಳ್ಳೆಯದು ಮಾಡಲಿ ಎಂದು ಅವರ ದಾರಿಯಲ್ಲಿ ನಮ್ಮದೊಂದು ಚಿಕ್ಕ ಸೇವೆ ಸಲ್ಲಿಸುತ್ತಿದ್ದೇನೆ ಹುಟ್ಟು ಹಬ್ಬದ ಶುಭಾಶಯಗಳು ಬಡವರ ಕಣ್ಮಣಿ ನಮ್ಮ ನೆಚ್ಚಿನ ದರ್ಶನ್ ಸರ್ ಅವರಿಗೆ 💐🎂
    user_Shivanand
    Shivanand
    Voice of people ಹೊಸಕೋಟೆ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    22 hrs ago
  • ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇಧಿಕೆ ಕಾರ್ಯಕರ್ತರು ಪುರಸಭೆ ಮುಂದೆ ಪ್ರತಿಭಟನೆ ಬಾಗೇಪಲ್ಲಿ: ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇಧಿಕೆ ಕಾರ್ಯಕರ್ತರು ಪುರಸಭೆ ಕಚೇರಿಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಬಾಬಾಜಾನ್ ಪುರಸಭೆಯಲ್ಲಿ ಇತ್ತೀಚೆಗೆ ಆಯ್ಕೆ ಮಾಡಿರುವ ಕಮ್ಯುನಿಟಿ ಮೊಬಿಲೈಸರ್ 5 ಹುದ್ದೆಗಳನ್ನು ತಕ್ಷಣ ರದ್ದು ಮಾಡಿ ಕಾನೂನಿನ ಅಡಿಯಲ್ಲಿ ಆಯ್ಕೆ ಮಾಡಿ ಅರ್ಹರಿಗೆ ಅವಕಾಶ ಕಲ್ಪಿಸಬೇಕು. 18 ಸಾವಿರ ರೂ.ಗಳ ಸಂಬಳವಿರುವ ಈ ಕಮ್ಯುನೀಟಿ ಮೊಬಿಲೈಸರ್ ಸಮುದಾಯ ಸ್ವಚ್ಚಗೊಳಿಸುವರ ಒಟ್ಟು 5 ಹುದ್ದೆಗಳಿಗೆ ಕೇವಲ 6 ಅರ್ಜಿಗಳು ಬಂದಿರುವುದು ಹಾಸ್ಯಾಸ್ಪದವಾಗಿದೆ ಅದ್ದರಿಂದ ಕಾನೂನಿನ ಅಡಿಯಲ್ಲಿ ಈ 5 ಹುದ್ದೆಗಳಿಗೆ ಸೂಕ್ತ ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡಬೇಕು ಎಂದರು. ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಉಚಿತ ನಿವೇಶಗಳನ್ನು ನೀಡಲು ಸಿದ್ಧಪಡಿಸಿರುವ ಫಲಾನುಭವಿಗಳ ಪಟ್ಟಿಯನ್ನು ಪುನರ್ ಪರಿಶೀಲಿಸಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಉಚಿತ ನಿವೇಶನಗಳನ್ನು ಈ ಕೊಡಲೇ ವಿತರಿಸಬೇಕು. ಪಟ್ಟಣದ ಹಳೆ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮತ್ತು ಗೂಳೂರು ರಸ್ತೆ ಪಕ್ಕದಲ್ಲಿ ಪುರಸಭೆವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು 15 ವರ್ಷಗಳಿಂದ ಬಾಡಿಗೆಗೆ ನೀಡದೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಿರುವುದರಿಂದ ಪುರಸಭೆಗೆ ಆದಾಯ ಇಲ್ಲದೆ ಲಕ್ಷಾಂತರ ರೂ.ಗಳ ನಷ್ಠ ಉಂಟಾಗುತ್ತಿದೆ ಎಂದು ಆರೋಪಿಸಿದರು. ಖಾಲಿ ಇರುವ ವಾಣಿಜ್ಯ ಮಳಿಗೆಗಳನ್ನು ತಕ್ಷಣ ಬಾಡಿಗೆಗೆ ನೀಡಿ ಪುರಸಭೆ ಆದಾಯ ತರುವಂತೆ ಹಾಗೂ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನ ಮತ್ತು ಆವರಣವನ್ನು ಸ್ವಚ್ಚಗೊಳಿಸಿ ಭವನಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗದ ಅಗತ್ಯವಿದೆ ಎಂದ ಅವರು ಪುರಸಭೆ ವ್ಯಾಪ್ತಿಯಲ್ಲಿನ 23 ವಾರ್ಡ್ಗಳ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪ ಇತ್ಯಾಧಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ನಂತರ ಪ್ರತಿಭಟನಕಾರರು ಪುರಸಭೆಯ ಕಂದಾಯ ಅಧಿಕಾರಿ ಅತಾವುಲ್ಲಾ ರವರಿಗೆ ಮನವಿ ಪತ್ರವನ್ನುವರು ಸಲ್ಲಿಸಿದರು. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಆರ್.ರವೀಂದ್ರ,ಸೂರ್ಯನಾರಾಯಣ ರೆಡ್ಡಿ, ತಟ್ಟಹಳ್ಳಿ ಗಂಗರೆಡ್ಡಿ, ಶಿವಕುಮಾರ್, ಹರೀಶ್, ಸಮೀವುಲ್ಲಾ ಜಿ.ವಿ.ವೆಂಕಟಶಿವಪ್ಪ, ನಾಗಿರೆಡ್ಡಿ, ರಫೀಕ್, ಸಲೀಂ, ಗಂಗಾಧರ, ಇಂದ್ರ, ಸುಹೇಲ್, ಮಂಜುನಾಥ್ , ಗಣೇಶ್ ಮತ್ತಿತರರು ಇದ್ದರು.
    1
    ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ 
ರಕ್ಷಣಾ ವೇಧಿಕೆ ಕಾರ್ಯಕರ್ತರು ಪುರಸಭೆ 
ಮುಂದೆ ಪ್ರತಿಭಟನೆ
ಬಾಗೇಪಲ್ಲಿ: ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತ ಅರ್ಹ 
ಫಲಾನುಭವಿಗಳಿಗೆ ನಿವೇಶನ ವಿತರಿಸುವುದು ಸೇರಿದಂತೆ 
ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ 
ರಕ್ಷಣಾ ವೇಧಿಕೆ ಕಾರ್ಯಕರ್ತರು ಪುರಸಭೆ 
ಕಚೇರಿಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ 
ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಬಾಬಾಜಾನ್ 
ಪುರಸಭೆಯಲ್ಲಿ ಇತ್ತೀಚೆಗೆ ಆಯ್ಕೆ ಮಾಡಿರುವ 
ಕಮ್ಯುನಿಟಿ ಮೊಬಿಲೈಸರ್ 5 ಹುದ್ದೆಗಳನ್ನು ತಕ್ಷಣ 
ರದ್ದು ಮಾಡಿ ಕಾನೂನಿನ ಅಡಿಯಲ್ಲಿ ಆಯ್ಕೆ ಮಾಡಿ ಅರ್ಹರಿಗೆ 
ಅವಕಾಶ ಕಲ್ಪಿಸಬೇಕು. 
18 ಸಾವಿರ ರೂ.ಗಳ ಸಂಬಳವಿರುವ ಈ ಕಮ್ಯುನೀಟಿ 
ಮೊಬಿಲೈಸರ್ ಸಮುದಾಯ ಸ್ವಚ್ಚಗೊಳಿಸುವರ ಒಟ್ಟು 5 
ಹುದ್ದೆಗಳಿಗೆ ಕೇವಲ 6 ಅರ್ಜಿಗಳು ಬಂದಿರುವುದು 
ಹಾಸ್ಯಾಸ್ಪದವಾಗಿದೆ ಅದ್ದರಿಂದ ಕಾನೂನಿನ ಅಡಿಯಲ್ಲಿ ಈ 5 
ಹುದ್ದೆಗಳಿಗೆ ಸೂಕ್ತ ಅರ್ಹ ಅಭ್ಯರ್ಥಿಗಳ ಆಯ್ಕೆ 
ಮಾಡಬೇಕು ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಉಚಿತ 
ನಿವೇಶಗಳನ್ನು ನೀಡಲು ಸಿದ್ಧಪಡಿಸಿರುವ 
ಫಲಾನುಭವಿಗಳ ಪಟ್ಟಿಯನ್ನು ಪುನರ್ ಪರಿಶೀಲಿಸಿ 
ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ಉಚಿತ 
ನಿವೇಶನಗಳನ್ನು ಈ ಕೊಡಲೇ ವಿತರಿಸಬೇಕು. ಪಟ್ಟಣದ 
ಹಳೆ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಮತ್ತು 
ಗೂಳೂರು ರಸ್ತೆ ಪಕ್ಕದಲ್ಲಿ ಪುರಸಭೆವತಿಯಿಂದ 
ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು 15 
ವರ್ಷಗಳಿಂದ ಬಾಡಿಗೆಗೆ ನೀಡದೆ ಪುರಸಭೆಯ 
ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಿರುವುದರಿಂದ 
ಪುರಸಭೆಗೆ ಆದಾಯ ಇಲ್ಲದೆ ಲಕ್ಷಾಂತರ ರೂ.ಗಳ 
ನಷ್ಠ ಉಂಟಾಗುತ್ತಿದೆ ಎಂದು ಆರೋಪಿಸಿದರು.
ಖಾಲಿ ಇರುವ ವಾಣಿಜ್ಯ ಮಳಿಗೆಗಳನ್ನು ತಕ್ಷಣ ಬಾಡಿಗೆಗೆ 
ನೀಡಿ ಪುರಸಭೆ ಆದಾಯ ತರುವಂತೆ ಹಾಗೂ ಪಟ್ಟಣದ 
ಡಾ.ಬಿ.ಆರ್ ಅಂಬೇಡ್ಕರ್ ಭವನ ಮತ್ತು ಆವರಣವನ್ನು 
ಸ್ವಚ್ಚಗೊಳಿಸಿ ಭವನಕ್ಕೆ ಅಗತ್ಯ ಮೂಲಭೂತ 
ಸೌಲಭ್ಯಗಳನ್ನು ಒದಗಿಸಬೇಕಾಗದ ಅಗತ್ಯವಿದೆ ಎಂದ 
ಅವರು ಪುರಸಭೆ ವ್ಯಾಪ್ತಿಯಲ್ಲಿನ 23 ವಾರ್ಡ್ಗಳ 
ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು, ರಸ್ತೆ, ಚರಂಡಿ, 
ಬೀದಿದೀಪ ಇತ್ಯಾಧಿ ಮೂಲಭೂತ ಸೌಲಭ್ಯಗಳನ್ನು 
ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು 
ಈಡೇರಿಸುವಂತೆ ಒತ್ತಾಯಿಸಿದರು.
ನಂತರ ಪ್ರತಿಭಟನಕಾರರು ಪುರಸಭೆಯ ಕಂದಾಯ 
ಅಧಿಕಾರಿ ಅತಾವುಲ್ಲಾ ರವರಿಗೆ ಮನವಿ ಪತ್ರವನ್ನುವರು 
ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ 
ಆರ್.ರವೀಂದ್ರ,ಸೂರ್ಯನಾರಾಯಣ ರೆಡ್ಡಿ, ತಟ್ಟಹಳ್ಳಿ 
ಗಂಗರೆಡ್ಡಿ, ಶಿವಕುಮಾರ್, ಹರೀಶ್, ಸಮೀವುಲ್ಲಾ 
ಜಿ.ವಿ.ವೆಂಕಟಶಿವಪ್ಪ, ನಾಗಿರೆಡ್ಡಿ, ರಫೀಕ್, ಸಲೀಂ, ಗಂಗಾಧರ, 
ಇಂದ್ರ, ಸುಹೇಲ್, ಮಂಜುನಾಥ್ , ಗಣೇಶ್ ಮತ್ತಿತರರು 
ಇದ್ದರು.
    user_Gopala Reddy R N
    Gopala Reddy R N
    Press advisory Bagepalli, Chikkaballapura•
    1 hr ago
  • ಬಾಗೇಪಲ್ಲಿ ಶಾಸಕರಾದ ಸುಬ್ಬಾರೆಡ್ಡಿ ಅವರ ಶಾಸಕರ ಸ್ಥಾನ ಹೈಕೋರ್ಟಿನಲ್ಲಿ ಅಸಿಂಧು ಆಗಿರೋದರ ಬಗ್ಗೆ ಬಿಜೆಪಿ ಕಾರ್ಯಕರ್ತರು ಸಾಮ್ರಾಚರಣೆ ಮಾಡಿದರು
    1
    ಬಾಗೇಪಲ್ಲಿ ಶಾಸಕರಾದ ಸುಬ್ಬಾರೆಡ್ಡಿ ಅವರ ಶಾಸಕರ ಸ್ಥಾನ ಹೈಕೋರ್ಟಿನಲ್ಲಿ ಅಸಿಂಧು ಆಗಿರೋದರ ಬಗ್ಗೆ ಬಿಜೆಪಿ ಕಾರ್ಯಕರ್ತರು ಸಾಮ್ರಾಚರಣೆ ಮಾಡಿದರು
    user_Shashi Kumar
    Shashi Kumar
    ಪತ್ರಕರ್ತ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    2 hrs ago
  • ಬೆಂಗಳೂರು ಗ್ರಾಮಾಂತರ ಕಾಂಬೋಡಿಯಾ ದಲ್ಲಿ ನಡೆದ ಅಂತರಾಷ್ಟ್ರೀಯ ಥ್ರೋಬಾಲ್ ಪಂದ್ಯದಲ್ಲಿ ಭಾಗವಹಿಸಿ ಭರ್ಜರಿ ಜಯಗಳಿಸಿದ ಭಾರತದ ಕ್ರೀಡಾಪಟುಗಳಿಗೆ ದೇವನಹಳ್ಳಿ ಏರ್ ಪೋರ್ಟಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭಾರತ ತಂಡ ಭರ್ಜರಿ ಪೈಪೋಟಿ ನೀಡಿ ಗೆದ್ದು ಬೀಗಿದೆ. ಕಪ್ ಗೆದ್ದು ತವರಿಗೆ ಬಂದಂತಹ ಎಂಡೇವರ್ಸ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಾದ ಅಕ್ಷಯ್ ಮತ್ತು ಚಂದನ್ ರೆಡ್ಡಿ ಸೇರಿ ಇಡೀ ತಂಡವನ್ನ ಪೋಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಇತರೆ ಗಣ್ಯರು ಅತ್ಮೀಯವಾಗಿ ಬರಮಾಡಿಕೊಂಡರು. ಜಯಶಾಲಿಗಳಾಗಿ ಬಂದಂತಹ ಕ್ರೀಡಾಪಟುಗಳಿಗೆ ಶಾಲಾ ಚೇರ್ಮನ್ ಎಂ.ಎಲ್.ಶಿವಶಂಕರ್, ಪೋಷಕರು, ಅಭಿಮಾನಿಗಳು ಅಭಿನಂದಿಸಿ ಗೌರವಿಸಿದ್ದಾರೆ. ನಂತರ ಮಾತನಾಡಿದ ಶಿವಶಂಕರ್ ದೇಶಕ್ಕೆ ಗೌರವ ತಂದುಕೊಟ್ಟ ಕ್ರೀಡಾಪಟುಗಳಿಗೆ ಮೊದಲು ನಾನು ಅಭಿನಂದಿಸುತ್ತೇನೆ, ಅದರಲ್ಲೂ ನಮ್ಮ ಶಾಲಾ ಮಕ್ಕಳು ಹಾಗೂ ಮಜಿಳಾ ತಂಡದ ಕೋಚ್ ಭಾಗವಹಿಸಿ ಟ್ರೋಫಿ ಗೆದ್ದಿರುವುದು ಬಹಳ ಖುಷಿ ತಂದುಕೊಟ್ಟಿದೆ, ಇದು ನಮ್ಮ ದೇಶಕ್ಕೆ, ನಮ್ಮ‌ ರಾಜ್ಯಕ್ಕೆ ಗೌರವ ಸಿಕ್ಕಂತಾಗಿದೆ, ನಮ್ಮ ಶಾಲೆಯ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಪ್ರೋತ್ಸಾಹಿಸುತ್ತೇವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ‌.
    1
    ಬೆಂಗಳೂರು ಗ್ರಾಮಾಂತರ
ಕಾಂಬೋಡಿಯಾ ದಲ್ಲಿ ನಡೆದ ಅಂತರಾಷ್ಟ್ರೀಯ ಥ್ರೋಬಾಲ್ ಪಂದ್ಯದಲ್ಲಿ ಭಾಗವಹಿಸಿ ಭರ್ಜರಿ ಜಯಗಳಿಸಿದ ಭಾರತದ ಕ್ರೀಡಾಪಟುಗಳಿಗೆ ದೇವನಹಳ್ಳಿ ಏರ್ ಪೋರ್ಟಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭಾರತ ತಂಡ ಭರ್ಜರಿ ಪೈಪೋಟಿ ನೀಡಿ ಗೆದ್ದು ಬೀಗಿದೆ. ಕಪ್ ಗೆದ್ದು ತವರಿಗೆ ಬಂದಂತಹ ಎಂಡೇವರ್ಸ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಾದ ಅಕ್ಷಯ್ ಮತ್ತು ಚಂದನ್ ರೆಡ್ಡಿ ಸೇರಿ ಇಡೀ ತಂಡವನ್ನ ಪೋಷಕರು, ಶಾಲಾ ಆಡಳಿತ ಮಂಡಳಿ ಹಾಗೂ ಇತರೆ ಗಣ್ಯರು ಅತ್ಮೀಯವಾಗಿ ಬರಮಾಡಿಕೊಂಡರು.  ಜಯಶಾಲಿಗಳಾಗಿ ಬಂದಂತಹ ಕ್ರೀಡಾಪಟುಗಳಿಗೆ ಶಾಲಾ ಚೇರ್ಮನ್ ಎಂ.ಎಲ್.ಶಿವಶಂಕರ್, ಪೋಷಕರು, ಅಭಿಮಾನಿಗಳು ಅಭಿನಂದಿಸಿ ಗೌರವಿಸಿದ್ದಾರೆ. ನಂತರ ಮಾತನಾಡಿದ ಶಿವಶಂಕರ್ ದೇಶಕ್ಕೆ ಗೌರವ ತಂದುಕೊಟ್ಟ ಕ್ರೀಡಾಪಟುಗಳಿಗೆ ಮೊದಲು ನಾನು ಅಭಿನಂದಿಸುತ್ತೇನೆ, ಅದರಲ್ಲೂ ನಮ್ಮ ಶಾಲಾ ಮಕ್ಕಳು ಹಾಗೂ ಮಜಿಳಾ ತಂಡದ ಕೋಚ್ ಭಾಗವಹಿಸಿ ಟ್ರೋಫಿ ಗೆದ್ದಿರುವುದು ಬಹಳ ಖುಷಿ ತಂದುಕೊಟ್ಟಿದೆ, ಇದು ನಮ್ಮ ದೇಶಕ್ಕೆ, ನಮ್ಮ‌ ರಾಜ್ಯಕ್ಕೆ ಗೌರವ ಸಿಕ್ಕಂತಾಗಿದೆ, ನಮ್ಮ ಶಾಲೆಯ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಪ್ರೋತ್ಸಾಹಿಸುತ್ತೇವೆ ಎಂದು  ಸಂತೋಷ ವ್ಯಕ್ತಪಡಿಸಿದ್ದಾರೆ‌.
    user_Gangaraju N Vistara News Reporter
    Gangaraju N Vistara News Reporter
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.