ಎಸ್ .ಆರ್. ಕೆ ಸೌಹಾರ್ದ ಸಂಘಗಳ ಶಾಖೆ ವಿಸ್ತರಿಸಲಾಗುವುದು: ಶಾಸಕ ಕಾಶಪ್ಪನವರ ಗುಳೇದಗುಡ್ಡ: ಮನುಷ್ಯನಿಗೆ ಮನುಷ್ಯನಾಗಿ ಅವರಿಗೆ ಸಕಾರಾತ್ಮಕ, ಸಹಕಾರ ನೀಡಿ ಅವರಿಗೆ ಉದ್ಯೋಗದಲ್ಲಿ ಪ್ರಗತಿಹೊಂದಲು ಸಾಲ ನೀಡವುದರ ಮೂಲಕ ಆರ್ಥಿಕವಾಗಿ ಬೆಳೆಯಬೇಕು ಎಂಬದೇ ಸಹಕಾರಿ ಕ್ಷೇತ್ರ ಎಂದು ಶಾಸಕ, ಎಸ್ ಆರ್ ಕೆ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ವಿಜಯನಂದ ಕಾಶಪ್ಪನವರು ಹೇಳಿದರು. ಅವರು ಪಟ್ಟಣ ಎಸ್ ಆರ್ ಕೆ ಸೌಹಾರ್ದ ಪತ್ತಿನ ಸಹಕಾರಿ ಸಂಘದ 13ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಹಕರ, ಶೇರುದಾರರು ಸಹಕಾರಿಂದ ಸಹಕಾರಿ ಸಂಘ ಸುಮಾರು 23 ಕೋಟಿ ರು. ದುಡಿಯುವ ಬಂಡವಾಳ ಹೊಂದಿದ್ದು, ಬಡ ಕೂಲಿ ಕಾರ್ಮಿಕರಿಗೆ, ರೈತರಿಗೆ, ನೇಕಾರರಿಗೆ, ಸಣ್ಣಪುಟ್ಟ ವ್ಯಾಪಾರಸ್ಥರು ಉದ್ಯೋಗ ಕೈಗೊಳ್ಳಲು ಸಾಲವನ್ನು ನೀಡಿ, ಅವರು ಆರ್ಥಿಕವಾಗಿ ಸದೃಢಮಾಡಲು ನಮ್ಮ ಸಹಕಾರಿ ಸಂಘ ಕಾರ್ಯಮಾಡುತ್ತಿದೆ. ಸರಕಾರಿ ಉದ್ಯೋಗ ಸಿಗದೇ ಇರುವವರಿಗೆ ನಮ್ಮ ಸಹಕಾರಿ ಸಂಘ ಉದ್ಯೋಗ ಕಲ್ಪಸಲಾಗಿದೆ ಎಂದರು. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಘದ ಶಾಖೆಯನ್ನು ವಿವಿಧ ಜಿಲ್ಲೆಗಳಲ್ಲಿ ವಿಸ್ತರಿಸಲಾಗುವುದು ಎಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಈ ಸಂರ್ಭದಲ್ಲಿ ಸಂಘದ ಉಪಾಧ್ಯಕ್ಷ ಯಮನಪ್ಪ ಚಲವಾದಿ, ಅಮರೇಶ ನಾಗೂರ, ಸಲಹಾ ಸಮಿತಿಯ ಮುತ್ತಣ್ಣ ಕಳ್ಳಿಗುಡ್ಡ, ಸಲೀಮ ಇಲಕಲ್ಲ, ಪ್ರಕಾಶ ಮುರಗೋಡ, ಮಹೇಶ ಆಡಿನ, ಶಿವಾನಂದ ಮಳಿಮಠ, ಹನಮಂತ ಪತ್ತಾರ, ರಮೇಶ ಬೂದಿಹಾಳ, ಬಸವರಾಜ ಕಳ್ಳಿಗುಡ್ಡ, ಮಂಜುನಾಥ ಧಾರವಾಡ, ಚಿದಾನಂದಸಾ ಕಾಟವಾ, ಮಹಾಲಿಂಗ ನಾಡಗೌಡ, ಚಂದ್ರಪ್ಪ ಹೊಸಮನಿ, ವ್ಯವಸ್ಥಾಪಕ ಸಿದ್ದು ಭದ್ರಶೆಟ್ಟಿ ಶಾಖಾ ವ್ಯವಸ್ಥಾಪಕ ವಿಜಯಲಕ್ಷ್ಮೀ ಪಾಟೀಲ ಮತ್ತಿತರರು ಇದ್ದರು.
ಎಸ್ .ಆರ್. ಕೆ ಸೌಹಾರ್ದ ಸಂಘಗಳ ಶಾಖೆ ವಿಸ್ತರಿಸಲಾಗುವುದು: ಶಾಸಕ ಕಾಶಪ್ಪನವರ ಗುಳೇದಗುಡ್ಡ: ಮನುಷ್ಯನಿಗೆ ಮನುಷ್ಯನಾಗಿ ಅವರಿಗೆ ಸಕಾರಾತ್ಮಕ, ಸಹಕಾರ ನೀಡಿ ಅವರಿಗೆ ಉದ್ಯೋಗದಲ್ಲಿ ಪ್ರಗತಿಹೊಂದಲು ಸಾಲ ನೀಡವುದರ ಮೂಲಕ ಆರ್ಥಿಕವಾಗಿ ಬೆಳೆಯಬೇಕು ಎಂಬದೇ ಸಹಕಾರಿ ಕ್ಷೇತ್ರ ಎಂದು ಶಾಸಕ, ಎಸ್ ಆರ್ ಕೆ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ವಿಜಯನಂದ ಕಾಶಪ್ಪನವರು ಹೇಳಿದರು. ಅವರು ಪಟ್ಟಣ ಎಸ್ ಆರ್ ಕೆ ಸೌಹಾರ್ದ ಪತ್ತಿನ ಸಹಕಾರಿ ಸಂಘದ 13ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಹಕರ, ಶೇರುದಾರರು ಸಹಕಾರಿಂದ ಸಹಕಾರಿ ಸಂಘ ಸುಮಾರು 23 ಕೋಟಿ ರು. ದುಡಿಯುವ ಬಂಡವಾಳ ಹೊಂದಿದ್ದು, ಬಡ ಕೂಲಿ ಕಾರ್ಮಿಕರಿಗೆ, ರೈತರಿಗೆ, ನೇಕಾರರಿಗೆ, ಸಣ್ಣಪುಟ್ಟ ವ್ಯಾಪಾರಸ್ಥರು ಉದ್ಯೋಗ ಕೈಗೊಳ್ಳಲು ಸಾಲವನ್ನು ನೀಡಿ, ಅವರು
ಆರ್ಥಿಕವಾಗಿ ಸದೃಢಮಾಡಲು ನಮ್ಮ ಸಹಕಾರಿ ಸಂಘ ಕಾರ್ಯಮಾಡುತ್ತಿದೆ. ಸರಕಾರಿ ಉದ್ಯೋಗ ಸಿಗದೇ ಇರುವವರಿಗೆ ನಮ್ಮ ಸಹಕಾರಿ ಸಂಘ ಉದ್ಯೋಗ ಕಲ್ಪಸಲಾಗಿದೆ ಎಂದರು. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಘದ ಶಾಖೆಯನ್ನು ವಿವಿಧ ಜಿಲ್ಲೆಗಳಲ್ಲಿ ವಿಸ್ತರಿಸಲಾಗುವುದು ಎಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಈ ಸಂರ್ಭದಲ್ಲಿ ಸಂಘದ ಉಪಾಧ್ಯಕ್ಷ ಯಮನಪ್ಪ ಚಲವಾದಿ, ಅಮರೇಶ ನಾಗೂರ, ಸಲಹಾ ಸಮಿತಿಯ ಮುತ್ತಣ್ಣ ಕಳ್ಳಿಗುಡ್ಡ, ಸಲೀಮ ಇಲಕಲ್ಲ, ಪ್ರಕಾಶ ಮುರಗೋಡ, ಮಹೇಶ ಆಡಿನ, ಶಿವಾನಂದ ಮಳಿಮಠ, ಹನಮಂತ ಪತ್ತಾರ, ರಮೇಶ ಬೂದಿಹಾಳ, ಬಸವರಾಜ ಕಳ್ಳಿಗುಡ್ಡ, ಮಂಜುನಾಥ ಧಾರವಾಡ, ಚಿದಾನಂದಸಾ ಕಾಟವಾ, ಮಹಾಲಿಂಗ ನಾಡಗೌಡ, ಚಂದ್ರಪ್ಪ ಹೊಸಮನಿ, ವ್ಯವಸ್ಥಾಪಕ ಸಿದ್ದು ಭದ್ರಶೆಟ್ಟಿ ಶಾಖಾ ವ್ಯವಸ್ಥಾಪಕ ವಿಜಯಲಕ್ಷ್ಮೀ ಪಾಟೀಲ ಮತ್ತಿತರರು ಇದ್ದರು.
- ಗುಳೇದಗುಡ್ಡ : ಕೋಟೆಕಲ್ಲನ ಶ್ರೀ ಹೊಳೆಹುಚ್ಚೇಶ್ವರ ಸಂಸ್ಥಾನಮಠ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದವರಿಂದ ಫೆ. 18ರಿಂದ 20ರವರೆಗೆ ನಿತ್ಯ ಸಂಜೆ 7 ಗಂಟೆಗೆ ಮೂರುದಿನ ಶಿವಸಂಚಾರ ನಾಟಕ ಪ್ರದರ್ಶನ ಸಮೀಪದ ಕೋಟೆಕಲ್ಲ ಗ್ರಾಮದ ಶ್ರೀ ಹೊಳೆಹುಚ್ಚೇಶ್ವರಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷ ಸಾಣೆಹಳ್ಳಿಯ ಕಲಾತಂಡದಿಂದ ಶಿವಸಂಚಾರ ನಾಟಕ ಪ್ರದರ್ಶನ ಕೋಟೆಕಲ್ಲ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಫೆ. 18ರಂದು ಜಂಗಮದೆಡೆಗೆ, ಫೆ.19ರಂದು ಕಳ್ಳರ ಸಂತೆ, ಫೆ.20ರಂದು ಶಿವಯೋಗಿ ಸಿದ್ಧರಾಮೇಶ್ವರ ನಾಟಕವನ್ನು ಶ್ರೀ ಶಿವಕುಮಾರ ಕಲಾಸಂಘದವರು ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಂಗಪ್ಪ ಹಡಪದ, ಲಕ್ಷ್ಮಣ ಹಾಲನ್ನವರ, ಸಂತೋಷ ತಿಪ್ಪಾ ಇದ್ದರು.1
- ಬಾಗಲಕೋಟೆ: ಜಿಲ್ಲೆಯ ತೇರದಾಳ ಪಟ್ಟಣದ ಲಿವಿಂಗ್ ಜೋಡಿಯೊಂದು ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆತಂಕ ಮೂಡಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಜೋಡಿಯನ್ನು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಜೋಡಿ ಸಾವು-ಬದುಕಿನ ನಡುವೆ ನರಳಾಡುತ್ತಿದೆ. 25 ವರ್ಷದ ಅಕ್ಷತಾ ಶ್ರೀಶೈಲ ಸತ್ತಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 45 ವರ್ಷದ ಗುರುಪಾದಯ್ಯ ಮಠಪತಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ಗಾಯಾಳುಗಳನ್ನು ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಕ್ಷತಾ ಅವರ ದೇಹದ ಸುಮಾರು 90 ಶೇಕಡಾ ಭಾಗ ಸುಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆ ಯತ್ನಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.1
- ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವ ಪೊಲೀಸರ ಬಗ್ಗೆ ಸಮಾಜ ಕಾರ್ಯಕರ್ತೆ ಸಹನಾ ಅಂಗಡಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೊಲೀಸರ ಸಂಬಳ ಕಡಿಮೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ, ಯಾವುದೇ ಘಟನೆ ನಡೆದರೂ ಜನಪ್ರತಿನಿಧಿಗಳು ಪೊಲೀಸರನ್ನೇ ಗುರಿಯಾಗಿಸುತ್ತಾರೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.ಸಹನಾ ಅಂಗಡಿ ಅವರ ಮಾತಿನಂತೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ದಿನರಾತ್ರಿ ಶ್ರಮಿಸುತ್ತಿದ್ದಾರೆ. ಹಬ್ಬ-ಹರಿದಿನ, ಕುಟುಂಬ ಸಮಾರಂಭಗಳನ್ನೂ ಬದಿಗಿರಿಸಿ ಸಮಾಜದ ಭದ್ರತೆಗೆ ಶ್ರಮಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕ ಗೌರವ ಮತ್ತು ಸಂಬಳ ದೊರೆಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಬೇರೆ ರಾಜ್ಯಗಳಲ್ಲಿ ಪೊಲೀಸರಿಗೆ ಹೆಚ್ಚಿನ ವೇತನ ಮತ್ತು ಸೌಲಭ್ಯಗಳಿವೆ ಎಂಬ ಹೋಲಿಕೆ ಮಾಡುತ್ತಾ, ರಾಜ್ಯ ಸರ್ಕಾರ ಗಮನಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.“ರಾಜ್ಯದಲ್ಲಿ ಏನೇ ಸಮಸ್ಯೆ ಆದರೂ ಮೊದಲಿಗೆ ಪೊಲೀಸರನ್ನೇ ದೂರುತ್ತಾರೆ. ಆದರೆ ಜನಪ್ರತಿನಿಧಿಗಳ ಹಿಂದೆ ಮುಂದೆ, ಅವರ ಕುಟುಂಬದ ಭದ್ರತೆಗೆ ಪೊಲೀಸರು ಬೇಕು. ಹಾಗಾದರೆ ಪೊಲೀಸರ ಕುಟುಂಬದ ಭದ್ರತೆ ಯಾರು ನೋಡಿಕೊಳ್ಳಬೇಕು? ಅವರ ಸಂಕಷ್ಟಗಳಿಗೆ ಸ್ಪಂದಿಸುವವರು ಯಾರು?”ಸಹನಾ ಅಂಗಡಿ ಅವರು ಪೊಲೀಸರ ಕೆಲಸದ ಒತ್ತಡ, ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಕುಟುಂಬ ಜೀವನದ ಮೇಲಿನ ಪರಿಣಾಮಗಳ ಕುರಿತು ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಹೇಳಿದ್ದಾರೆ.ಅವರ ಪ್ರಕಾರ, ಕೇವಲ ಕರ್ತವ್ಯ ನಿರ್ವಹಣೆ ಮಾತ್ರವಲ್ಲದೆ, ಪೊಲೀಸರ ಕಲ್ಯಾಣಕ್ಕಾಗಿ ಸಮಗ್ರ ಯೋಜನೆಗಳು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.ಪೊಲೀಸರ ಸೇವೆ ಮತ್ತು ಅವರ ಕಲ್ಯಾಣದ ಬಗ್ಗೆ ಉದ್ಭವಿಸಿರುವ ಈ ಪ್ರಶ್ನೆಗಳು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ1
- ಮಾನ್ಯ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 5 ಕೋಟಿ ರೂ ವೆಚ್ಚದಲ್ಲಿ ಇಳಕಲ್ ನಗರದ ವಿವಿಧ ವಾರ್ಡಗಳಲ್ಲಿನ ಮೂಲಭೂತ ಸೌಕರ್ಯಗಳಾದ ರಸ್ತೆ ಕಾಮಗಾರಿ, ಸರ್ಕಲ್ ಅಭಿವೃದ್ಧಿ ಪಡಿಸುವ ಕಾಮಗಾರಿಗಳಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಫೆ.18 ಬುಧವಾರ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಮಯದಲ್ಲಿ ನರಸಭೆ ಸದಸ್ಯರು ಹಾಗೂ ಪೌರಾಯುಕ್ತ ಶ್ರೀನಿವಾಸ ಜಾಧವ ಹಾಗೂ ಗುತ್ತಿಗೆದಾರರು, ಪಕ್ಷದ ಮುಖಂಡರು ಕಾರ್ಯಕರ್ತರು, ನಗರಸಭೆ ಸಿಬ್ಬಂದಿ ವರ್ಗದವರು ಇದ್ದರು.1
- ಮುಧೋಳ : ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಕೊಡುಗೈ ದಾನಿಗಳ ನೆರವಿನಿಂದ ಸಿದ್ದಗೊಂಡಿರುವ ವೇಮನ ಅಕ್ಯಾಡೆಮಿಯ ಶಾಲಾ ಕಟ್ಟಡ ಪೂರ್ಣಗೊಂಡಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ದಾಖಲಾತಿ ಆರಂಭಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಭಕ್ತಿ ಶಿರೋಮಣಿ ಹೇಮರಡ್ಡಿ ಮಲ್ಲಮ್ಮ ಶೈಕ್ಷಣಿಕ ಹಾಗೂ ಧಾರ್ಮಿಕ ಸಂಸ್ಥೆ ಅಧ್ಯಕ್ಷ ದಯಾನಂದ ಪಾಟೀಲ ಅವರು, ಒಟ್ಟು 31ಕೊಠಡಿ ಹೊಂದಿರುವ ಸುಸಜ್ಜಿತ ಕಟ್ಟಡದಲ್ಲಿ ಮುಂದಿನ ತಲೆಮಾರಿನ ವಿದ್ಯಾರ್ಥಿಗಳ ಏಳಿಗೆ ಗಮನದಲ್ಲಿಟ್ಟುಕೊಂಡು ಶಿಕ್ಷಣ ಸಂಸ್ಥೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು. ಈ ವೇಳೆ ಸಮಾಜದ ಮುಖಂಡರಾದ ಕೆ.ಆರ್.ಮಾಚಪ್ಪನವರ, ಶ್ರೀಕಾಂತ ಗುಜ್ಜನ್ನವರ, ಉದಯ ಸಾರವಾಡ, ವಿ.ಡಿ. ನಾಗನೂರ, ಎ.ಜಿ.ಪಾಟೀಲ, ಡಾ.ಸತೀಶ ಮಲಘಾಣ, ಪ್ರಾಚಾರ್ಯೆ ನೀಲಕಂಠೇಶ್ವರಿ ಸೇರಿದಂತೆ ಇತರರು ಇದ್ದರು.1
- ಹೊಸ ಬಬಲಾದಿ ಮಠದಲ್ಲಿ 2026ರ ಕಾಲ ಜ್ಞಾನ ಸಾರಿದ ಸದಾಶಿವ ಅಜ್ಜನ್ನವರು ಹಾಗೂ ಶಿವರುದ್ರಯ್ಯ ಮುತ್ಯಾ1
- ಸವದತ್ತಿ ಕ್ಷೇತ್ರದ ಜನತೆಗೆ ಗುಣಮಟ್ಟದ ಹಾಗೂ ಸುಸಜ್ಜಿತ ವೈದ್ಯಕೀಯ ಸೇವೆ ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.ಈ ನಿಟ್ಟಿನಲ್ಲಿ ಇಂದು ಸವದತ್ತಿ ಪಟ್ಟಣದಲ್ಲಿ ಒಂದು ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿದರು.ಸವದತ್ತಿಯ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳ ನೂತನ ಕಟ್ಟಡದ ವಿಸ್ತರಣೆ ಹಾಗೂ ನವೀಕರಣ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭವು ಇಂದು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡುರಾವ್ ಅವರ ಅಮೃತ ಹಸ್ತದಿಂದ ಈ ಅಭಿವೃದ್ಧಿ ಕಾಮಗಾರಿಗೆ ಅಧಿಕೃತವಾಗಿ ಅವರೊಂದಿಗೆ ಶಾಸಕ ಶ್ರೀ ವಿಶ್ವಾಸ ವೈದ್ಯ ಅವರು ಸೇರಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿ ಸವದತ್ತಿ ತಾಲೂಕಿನ ಜನರಿಗೆ ತುರ್ತು ಸಂದರ್ಭಗಳಲ್ಲಿ ಉತ್ತಮ ಚಿಕಿತ್ಸೆ ಸ್ಥಳೀಯವಾಗಿಯೇ ಸಿಗಬೇಕು ಎನ್ನುವುದು ನಮ್ಮ ಗುರಿ. ಈ 100 ಹಾಸಿಗೆಗಳ ಆಸ್ಪತ್ರೆಯ ವಿಸ್ತರಣೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.ಆಸ್ಪತ್ರೆಯ ನವೀಕರಣದೊಂದಿಗೆ ಆಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇದನ್ನು ಮಾದರಿ ತಾಲೂಕು ಆಸ್ಪತ್ರೆಯನ್ನಾಗಿ ರೂಪಿಸಲಾಗುವುದು.ಕ್ಷೇತ್ರದ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಆರೋಗ್ಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ನಮ್ಮ ಅಭಿವೃದ್ಧಿ ಪಯಣ ನಿರಂತರವಾಗಿ ಮುಂದುವರಿಯಲಿದೆ.ಅಂದಾಜು ವೆಚ್ಚ ರೂ. 31 ಕೋಟಿ.ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.1
- ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ಹಾರೂಗೇರಿ ರಸ್ತೆಯಲ್ಲಿರುವ ರಾಯಲ್ ರೆಸಿಡೆನ್ಸಿ ಲಾಡ್ಜ್‌ನಲ್ಲಿ ಮಂಗಳವಾರ ಬೆಳಗಿನ ಜಾವ ಬೆಂಕಿ ಅವಘಡ ಸಂಭವಿಸಿ ಮಹಿಳೆ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ಅಕ್ಷತಾ ಸತ್ತಿ (25) ಗಾಯಗೊಂಡ ಮಹಿಳೆ. ಲಾಡ್ಜ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಪ್ರಯತ್ನಿಸಿದ ರೆಸಿಡೆನ್ಸಿ ಮ್ಯಾನೇಜರ್ ಹಾಗೂ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಜಮಖಂಡಿ ಮೂಲದ ಗುರುಪಾದಯ್ಯ ಮಠಪತಿ (35) ಎಂಬ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಫೆಬ್ರವರಿ 15ರಂದು ಅಕ್ಷತಾ ಲಾಡ್ಜ್‌ಗೆ ಬಂದಿದ್ದು, ಬೆಂಗಳೂರಿಗೆ ತೆರಳಲು ಬಸ್ ಸಿಗದ ಕಾರಣ ಅಂದು ರಾತ್ರಿ ಸುಮಾರು 10 ಗಂಟೆಗೆ ರೂಮ್ ಬುಕ್ ಮಾಡಿಕೊಂಡಿದ್ದಳು ಎಂದು ತಿಳಿದುಬಂದಿದೆ. ಫೆಬ್ರವರಿ 16ರಂದು ಸಹ ಅದೇ ರೂಮ್‌ನಲ್ಲಿ ತಂಗಿದ್ದಳು ಎನ್ನಲಾಗಿದೆ. ಬೆಂಕಿ ಹೇಗೆ ತಗುಲಿತು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸೈಂಟಿಫಿಕ್ ಸ್ಕ್ವಾಡ್ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಟ್ಯೂರಿಸಂ ಡಿಪಾರ್ಟ್‌ಮೆಂಟ್ ಮಾರ್ಗಸೂಚಿಗಳು ಪಾಲನೆಯಾಗಿದ್ದವೆಯೇ, ಸ್ಥಳೀಯ ನಗರಸಭೆ ಅನುಮತಿ ಇದ್ದಿತ್ತೇ ಎಂಬುದರ ಪರಿಶೀಲನೆ ನಡೆಯುತ್ತಿದೆ. ವಿಶೇಷ ದಿನಗಳಲ್ಲಿ ಲಾಡ್ಜ್‌ಗಳಲ್ಲಿ ಬರುವವರ ಫೇಕ್ ಐಡಿ ಪ್ರಕರಣಗಳ ಬಗ್ಗೆ ಸಹ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಕುರಿತು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.1