ಹೊಸನಗರ-ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಹೊಸನಗರ: ತಾಲ್ಲೂಕಿನ ಹರತಾಳು ಸಮೀಪದ ದೇವಿಕೊಪ್ಪ ಗ್ರಾಮದಲ್ಲಿ ಮನೆ ಪಕ್ಕದ ಕೊಟ್ಟಿಗೆಯಲ್ಲಿ ನೇಣು ಬಿಗಿದು ಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಗುರುರಾಜ್ ಬಿನ್ ನಾರಾಯಣ್ ಆಚಾರ್ (45) ಎಂದು ಗುರುತಿಸಲಾಗಿದೆ. ಕುಟುಂಬಸ್ಥರ ಮಾಹಿತಿ ಪ್ರಕಾರ, ಗುರುರಾಜ್ ಅವರು ಕೆಲಕಾಲದಿಂದ ಸಾಲದ ಒತ್ತಡದಿಂದ ಬಳಲುತಿದ್ದು, ಈ ಹಿನ್ನಲೆಯಲ್ಲಿ ಮಂಗಳವಾರ ಮನೆ ಸಮೀಪದ ಕೊಟ್ಟಿಗೆ ಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ಕಾನೂನು ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಇರಿಸಲಾಗಿದೆ.
ಹೊಸನಗರ-ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಹೊಸನಗರ: ತಾಲ್ಲೂಕಿನ ಹರತಾಳು ಸಮೀಪದ ದೇವಿಕೊಪ್ಪ ಗ್ರಾಮದಲ್ಲಿ ಮನೆ ಪಕ್ಕದ ಕೊಟ್ಟಿಗೆಯಲ್ಲಿ ನೇಣು ಬಿಗಿದು ಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಗುರುರಾಜ್ ಬಿನ್ ನಾರಾಯಣ್ ಆಚಾರ್ (45) ಎಂದು ಗುರುತಿಸಲಾಗಿದೆ. ಕುಟುಂಬಸ್ಥರ ಮಾಹಿತಿ ಪ್ರಕಾರ, ಗುರುರಾಜ್ ಅವರು ಕೆಲಕಾಲದಿಂದ ಸಾಲದ ಒತ್ತಡದಿಂದ ಬಳಲುತಿದ್ದು, ಈ ಹಿನ್ನಲೆಯಲ್ಲಿ ಮಂಗಳವಾರ ಮನೆ ಸಮೀಪದ ಕೊಟ್ಟಿಗೆ ಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ಕಾನೂನು ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಇರಿಸಲಾಗಿದೆ.
- ಸೊರಬ: ತಾಲೂಕಿನ ಆನವಟ್ಟಿ ತಿಮ್ಮಾಪುರದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಯ್ಯಪ್ಪ ಸ್ವಾಮಿಯ ದೇವಸ್ಥಾನಕ್ಕೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಮತ್ತು ಎಂಎಲ್ಸಿ ಭಾರತೀಯ ಶೆಟ್ಟಿ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. ಅಯ್ಯಪ್ಪ ಭಕ್ತಾದಿಗಳು ಇಬ್ಬರನ್ನು ಸನ್ಮಾನಿಸಿದರು. ದೇವಸ್ಥಾನಕ್ಕೆ ತಮ್ಮ ಸಹಾಯವನ್ನು ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಉಮೇಶ್ ಉಡುಗಣಿ, ಪ್ರಕಾಶ್ ತಲಕಾಲಕೊಪ್ಪ, ಕೃಷ್ಣಮೂರ್ತಿ, ಶಿವಪ್ರಸಾದ್ ಮತ್ತಿತರರು ಇದ್ದರು.4
- ಚಿತ್ರದುರ್ಗ ಹೊರವಲಯದ ನಗರಸಭೆ ವ್ಯಾಪ್ತಿಯ ಕವಾಡಿಗರಹಟ್ಟಿ ಬಡಾವಣೆಯಲ್ಲಿ ರಸ್ತೆ ಅಗಲೀಕರಣಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾದೀಕಾರದ ಅಧಿಕಾರಿಗಳು ಬಂದು ಜೆಸಿಬಿ ಬಳಸಿ ಕಟ್ಟಡಗಳನ್ನ ತೆರವು ಮಾಡುತ್ತಿದ್ದು ಇದರಿಂದಾಗಿ ರೊಚ್ಚಿಗೆದ್ದ ಬಡಾವಣೆಯ ನಿವಾಸಿಗಳು ಆಕ್ರೋಷವನ್ನ ಹೊರ ಹಾಕಿದ್ದು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ.1
- ಗ್ರಾಮಕ್ಕೆ ಯಾರು ಬಾರದಂತೆ ಕಳ್ಳೆ ಮುಳ್ಳು ಬೇಲಿ ಹಾಕಿ ದಿಗ್ಭಂಧನ... ಕಾವಲುಗಾರರ ನೇಮಕ. ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ನಗಂಗೆರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ಈ ವಿಶಿಷ್ಟ ಆಚರಣೆ ಮಾಡಲಾಗಿತ್ತಿದೆ.. ಈ ಗ್ರಾಮದ ಜನರು ಐದು ವರ್ಷಕ್ಕೊಮ್ಮೆ ಗ್ರಾಮ ದೇವತೆ ಶೂನ್ಯದ ಮಾರಮ್ಮ ಜಾತ್ರೆ ಮಾಡುತ್ತಿದ್ದಾರೆ. ಜನವರಿ 12ರಿಂದ 17ರವರೆಗೆ ಬುಡಕಟ್ಟು ಸಂಸ್ಕೃತಿಯ ಉತ್ಸವ ನಡೆಯಲಿದೆ. ಅದಕ್ಕೂ ಮುನ್ನ ಮೂರು ದಿನಗಳ ಕಾಲ ಗ್ರಾಮದ ಪ್ರತಿ ದಿಕ್ಕಿನ ಮಾರ್ಗಗಳಿಗೂ ಕಳ್ಳೆ ಮುಳ್ಳು ಬೇಲಿ ಹಾಕಿ ಗ್ರಾಮಕ್ಕೆ ಬೇರೆ ಯಾರು ಬಾರದಂತೆ ದಿಗ್ಭಂಧನ ಹಾಕುತ್ತಾರೆ. ಜನವರಿ 12ರವರೆಗೆ ಮಾರ್ಗಗಳು ಬಂದ್ ಆಗಿರುತ್ತವೆ. ಗ್ರಾಮದಿಂದ ಯಾವುದೇ ವಸ್ತುಗಳನ್ನು ಹೊರಕ್ಕೆ ತೆಗೆದುಕೊಂಡು ಹೋಗುವಂತಿಲ್ಲ. ವಾಹನಗಳು ಸಂಚರಿಸುವಂತಿಲ್ಲ ಎಂಬ ನಿಯಮಗಳಿವೆ. ಉತ್ಸವದ ಸಂದರ್ಭದಲ್ಲಿ ಆರೋಗ್ಯ, ಶಾಂತಿ, ಸುವ್ಯವಸ್ಥೆ ಮತ್ತು ದೈವ ಭಾವನೆ, ನೆಮ್ಮದಿಗಾಗಿ ಈ ಆಚರಣೆ ಜಾರಿಯಲ್ಲಿದೆ ಯಾರೂ ಹೊರಗೆ, ಒಳಗೆ ಬರುವಂತ್ತಿಲ್ಲ ನಗರಂಗೆರೆ ಗ್ರಾಮದ ಶೂನ್ಯದ ಮಾರಮ್ಮ ಉತ್ಸವವನ್ನು ಐದು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಈ ವಿಶಿಷ್ಟ ಆಚರಣೆ ನೂರಾರು ವರ್ಷಗಳಿಂದ ಪೂರ್ವಿಕರು ಆಚರಿಸಿಕೊಂಡು ಬಂದಿದ್ದಾರೆ. ಪ್ರತಿ ರಸ್ತೆಗೆ ಸಾರು (ಮುಳ್ಳು ಬೇಲಿ) ಹಾಕಿ ಸರದಿ ಪ್ರಕಾರ ಕಾವಲುಗಾರರು ಇರುತ್ತಾರೆ. ಊರಿನಿಂದ ಯಾವುದೇ ವಸ್ತು ಹೊರಗೆ ಹೋಗುವಂತಿಲ್ಲ. ಹೊರಗಿನವರು ಊರೊಳಕ್ಕೆ ಬರುವಂತಿಲ್ಲ. ಪ್ರತಿಯೊಬ್ಬರನ್ನು ಸಹ ಚೆಕ್ ಮಾಡಿ ಬಿಡಲಾಗುತ್ತದೆ. ಜ.13ರಂದು ನಾಳೆ ಮಂಗಳವಾರ ಮಾರಮ್ಮ ದೇವಿಯ ಪ್ರತಿಷ್ಠಾಪನೆ ಬಳಿಕ ಭಕ್ತರು ಬಂದು ದರ್ಶನ ಪಡಯಬಹುದಾಗಿದೆ. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ನಗರಂಗೆರೆ ಗ್ರಾಮದಲ್ಲಿ ಕಾಲಾನುಕಾಲದಿಂದ ಐದು ವರ್ಷಕ್ಕೊಮ್ಮೆ ದೇವಿಯ ಉತ್ಸವ ನಡೆದುಕೊಂಡು ಬಂದಿದೆ. ಅಲ್ಲದೆ ಇಡೀ ಊರಿಗೆ ಮುಳ್ಳು ಬೇಲಿ ಹಾಕುವ ವಿಶಿಷ್ಟ ಆಚರಣೆಯನ್ನೂ ಆಚರಿಸಲಾಗುತ್ತಿದೆ. ಆ ಮೂಲಕ ಈ ವಿಶಿಷ್ಟ ಮಾರಿಕಾಂಬ ದೇವಿಯ ಉತ್ಸವ ನಾಡಿನ ಗಮನ ಸೆಳೆದಿದೆ... ಸುರೇಶಬೆಳಗೆರೆ1
- *ಮಂಗಳೂರು ದಕ್ಷಿಣ ಕನ್ನಡ* Mng Bjp Mlc Byte ವಿವಾದಿತ ಜಿ ರಾಮ್ ಜಿ ಕಾಯ್ದೆ: ಬಹಿರಂಗ ಚರ್ಚೆಗೆ ರೆಡಿ ಎಂದ ಬಿಜೆಪಿ ಎಂಎಲ್‌ಸಿ ಜಿ ರಾಮ್ ಜಿ ಕಾಯ್ದೆ ಕುರಿತು ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ದವಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ. ಅವರು ಮಂಗಳವಾರ ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮನ್‌ರೇಗಾದ ನ್ಯೂನತೆಗಳನ್ನು ಸರಿಪಡಿಸಿ ಹೊಸ ಕಾಯ್ದೆ ತರಲಾಗಿದೆ. ಜಿ ರಾಮ್ ಜಿ ಕಾಯ್ದೆಯಲ್ಲಿ ಗಾಂಧೀಜಿಯವರ ಪ್ರೀತಿಯ ರಾಮನ ಹೆಸರನ್ನು ತರಲಾಗಿದೆ ಎಂದರು. ಜಿ ರಾಮ್ ಜಿ ಕಾಯ್ದೆ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ನಡೆಸುವ ಮಾತನ್ನಾಡುತ್ತಿದ್ದಾರೆ. ಆದರೆ, ಕೇಂದ್ರದ ಕಾಯ್ದೆ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಚರ್ಚಿಸುವುದು ಅಸಂವಿಧಾನಿಕ. ಈ ನಿರ್ಧಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಿದೆ ಎಂದರು. ಸಿಎಂ ಸಿದ್ದರಾಮಮಯ್ಯ ಅವರು ಸುಳ್ಳು ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಕಳೆದ ಬಜೆಟ್‌ನ ಶೇ.50ರಷ್ಟು ಅನುದಾನವೂ ಖರ್ಚಾಗಿಲ್ಲ. ಇನ್ನು ಎರಡು ತಿಂಗಳಲ್ಲಿ ಮತ್ತೆ ಬಜೆಟ್ ಬರಲಿದೆ. ಗಾಳಿ ಹೊರತುಪಡಿಸಿ ಬೇರೆ ಎಲ್ಲದಕ್ಕೂ ರಾಜ್ಯ ಸರಕಾರ ತೆರಿಗೆ ಹಾಕುತ್ತಿದೆ ಅಥವಾ ತೆರಿಗೆ ಹೆಚ್ಚಳ ಮಾಡಿದೆ. ಆದರೆ, ಅಭಿವೃದ್ಧಿ ಕುಂಠಿತವಾಗಿದೆ. ರಸ್ತೆ ಹೊಂಡವನ್ನೂ ಮುಚ್ಚುತ್ತಿಲ್ಲ ಎಂದು ದೂರಿದರು. ಪ್ರೆಸ್ ಮೀಟ್ ನಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ. ಮಂಜುಳಾ ರಾವ್, ಜಿಲ್ಲಾ ವಕ್ತಾರರಾದ ಸತೀಶ್ ಪ್ರಭು, ಅರುಣ್ ಶೇಟ್, ರಾಜಗೋಪಾಲ ರೈ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಮೂಡುಶೆಡ್ಡೆ, ಮಾಧ್ಯಮ ಪ್ರಮುಖ್ ಮನೋಹರ ಶೆಟ್ಟಿ ಹಾಜರಿದ್ದರು. ವರದಿ: ಶಂಶೀರ್ ಬುಡೋಳಿ1
- ಖಳ ನಟ ವಜ್ರಮುನಿ ಜೀವನ ಚರಿತ್ರೆ ಬಣ್ಣ ಮಾಸದ ಮೇಲೆ ಎಪಿಸೋಡ್-1 #onlinetv24x7 #ವಜ್ರಮುನಿ #ಕನ್ನಡಚಿತ್ರರಂಗ #ಖಳನಟವಜ್ರಮುನಿ #ರಂಗಭೂಮಿಕಲಾವಿದರು1
- ಚಳಿಗಾಲದ ಹಿಮದಿಂದ ಆವೃತ್ಯವಾಗುತ್ತಿರುವ ಕೇದಾರನಾಥ ಧಾಮ.1
- ನೆನ್ನೆ ಮೈಸೂರಿನಲ್ಲಿ "ಬಾಯಲ್ಲಿ ಸೀಟಿ, ಕೈಯಲ್ಲಿ ಲಾಠಿ" ಹಿಡಿದು ಘರ್ಜಿಸಿದ "ಹುಲಿಯ ಹೃದಯದ ಕೆಆರ್‌ಎಸ್ ಸೈನಿಕರು..." #KRS #ಯುವಮಾವೇಶ 13-01-2026.1
- ಸೊರಬ ತಾಲ್ಲೂಕಿನ ಉಳವಿ ಹೋಬಳಿ ಹೊರಬೈಲು ಗ್ರಾಮದ ಪಶು ವೈದ್ಯಾಧಿಕಾರಿ ನೀರಲ್ಲಿ ಮುಳುಗಿ ಸಾವು ಸಾಗರದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಕ್ರೆ ಬಳಿಗೆ ಬ್ಯಾಕ್ ವಾಟರ್ ಗೆ ಕುಟುಂಬ ಸಮೇತರಾಗಿ ಮಾಸೂರಲ್ಲಿ ಪಶು ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಂತ ಸುನೀಲ್ ಎಂಬುವರು ತೆರಳಿದ್ದರು. ಈಜು ಬರುತ್ತದೆ ಎಂಬುದಾಗಿ ಬ್ಯಾಕ್ ವಾಟರ್ ಗೆ ಇಳಿದಂತ ಅವರು, ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಮೃತದೇಹ ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.1