logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅರಣ್ಯ ಇಲಾಖೆಯವರು ಹುಲಿ ಸೆರೆಹಿಡಿದಿದ್ದರೆ ಬಡಗಲಪುರ ರೈತನ ಸಾವು ಆಗುತ್ತಿರಲಿಲ್ಲ: ಸಿ.ಎಸ್.ನಿರಂಜನ್‌ಕುಮಾರ್ ಸಿಮ್ಸ್ ಶವಾಗಾರಕ್ಕೆ ಜಿಲ್ಲಾ ಬಿಜೆಪಿ ಮುಖಂಡರು ಭೇಟಿ, ರೈತನ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ, ಧನಸಹಾಯ ಮಾಡಿದರು. ಈ ಘಟನೆಗೆ ರಾಜ್ಯ ಸರ್ಕಾರವೇ ನೇರಹೊಣೆ'- ಸಚಿವರು ನುಡಿದಂತೆ ಮೃತನ ಪುತ್ರನಿಗೆ ಸರ್ಕಾರಿ ನೌಕರಿ ನೀಡಲು ಬಿಜೆಪಿ ಆಗ್ರಹ ಚಾಮರಾಜನಗರ : ಅರಣ್ಯ ಇಲಾಖೆಯವರು ಹುಲಿ ಸೆರೆಹಿಡಿದಿದ್ದರೆ ರೈತ ಬಸವಣ್ಣ ಸಾವು ಆಗುತ್ತಿರಲಿಲ್ಲ. ಈ ಘಟನೆಗೆ ರಾಜ್ಯ ಸರ್ಕಾರ ನೇರಹೊಣಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್ ಆರೋಪಿಸಿದರು. ನಗರದ ಸಿಮ್ಸ್ ನ ಶವಾಗಾರಕ್ಕೆ ಭೇಟಿ ನೀಡಿ, ರೈತನ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಧನಸಹಾಯ ಮಾಡಿ, ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಬಡಗಲಪುರ ರೈತನನ್ನು ಅವರ ಜಮೀನನಲ್ಲಿ ಹುಲಿ ದಾಳಿ ನಡೆಸಿ, ತಿಂದು ಹಾಕಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಸುಮಾರು 2 ವರ್ಷಗಳ ಹಿಂದೆ ಆ ಭಾಗದಲ್ಲಿ ಹುಲಿ ಕಾಣಿಸಿಕೊಂಡು ಅನೇಕ ಬಾರಿ ಕಾಣಿಸಿಕೊಂಡಿದ್ದು, ಮೃತ ರೈತನ ಹಸುವಿನ ಮೇಲೂ ದಾಳಿ ನಡೆಸಿದೆ ಅದನ್ನು ಅರಣ್ಯ ಅಧಿಕಾರಿಗಳಿಗೆ ತಿಳಿಸಿ ಹುಲಿ ಸೆರೆ ಹಿಡಿಯುವಂತೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಅವರ ನಿರ್ಲಕ್ಷ್ಯದಿಂದಾಗಿ ರೈತನ ಸಾವು ಆಗಿದೆ ಎಂದರು. ಜಿಲ್ಲೆಯಲ್ಲಿ ಪ್ರಾಣಿ, ಮಾನವ ಸಂಘರ್ಷ ಆಗಾಗ ನಡೆಯುತ್ತಿದೆ. ನೆನ್ನೆ ಬೆಳಿಗ್ಗೆ ಗುಂಡ್ಲುಪೇಟೆ ತಾಲೂಕಿನ ಕೊಟಗೆರೆಯಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದು ಸಂಜೆ ವೇಳೆಗೆ ಬಡಗಲಪುರದಲ್ಲಿ ಹುಲಿ ದಾಳಿಗೆ ರೈತನ ಸಾವು ಆಗಿದೆ. ಅನೇಕ ಸಂದರ್ಭದಲ್ಲಿ ಹುಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಬೋನ್ ಇಟ್ಟು ಹುಲಿ ಸೆರೆ ಹಿಡಿಯಲು ಕ್ರಮವಹಿಸಿದ್ದರೆ. ಇಂತಹ ಸನ್ನಿವೇಶ.. ಆಗುತಿರಲಿಲ್ಲ. ಒಬ್ಬರ ಪ್ರಾಣ ಹೋಗುತ್ತಿರಲಿಲ್ಲ. ಸರ್ಕಾರ ನಾವು ಏನೆಲ್ಲ ಕ್ರಮಕೈಗೊಂಡಿದ್ದೇವೆ' ಎಂದು ಹೇಳುತ್ತಾರೆ. ಸುರಕ್ಷತಾಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಆರಣ್ಯ. ಇಲಾಖೆಯವರಿಗೆ ಅನೇಕ ಬಾರಿ ದೂರು ಸಲ್ಲಿಸಿದ್ದರೂ. ನಿರ್ಲಕ್ಷ್ಯ ವಹಿಸಿರುವುದು ನೋಡಿದರೆ ಇದಕ್ಕೆ ನೇರ ಸರ್ಕಾರವೇ ಹೊಣೆಯಾಗಿದೆ ಎಂದು ದೂರಿದರು. ಅರಣ್ಯಧಿಕಾರಿಗಳು ಯಾವುದೇ ಜವಾಬ್ದಾರಿ ಇಲ್ಲದಂಗೆ ವರ್ತನೆ ಮಾಡುತಿದ್ದಾರೆ ಅರಣ್ಯ ಅಧಿಕಾರಿಗಳಿಗೆ ಹುಲಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದರೂ ಕೂಡ ನಿರ್ಲಕ್ಷ್ಯತನದಿಂದ ನಡೆದುಕೊಳ್ಳುತ್ತಾರೆ. ಅರಣ್ಯ ಇಲಾಖೆಯವರು ಕಾಡು ಪ್ರಾಣಿ ದಾಳಿಯಿಂದ ಸಾವು ಆದರೆ 20 ಲಕ್ಷ ಪರಿಹಾರ ನೀಡುತ್ತೇವೆ' ಅನ್ನುವ ತರದಲ್ಲಿ ಹೇಳುತ್ತಾರೆ. ಆದರೆ ರೈತನ ಜಮೀನಿಗೆ ಹುಲಿ ಬಂದು ರೈತನ ಮೇಲೆ ದಾಳಿನಡೆಸಿ ಕೊಂದು ಹಾಕಿದೆ ಮೃತರ ಕುಟುಂಬದ ಕಥೆ ಏನಾಗಬೇಕು. ? ಮನೆಯಲ್ಲಿ ದುಡಿಮೆ ಮಾಡುವವರು ಯಾರು ? ಅವರ ಇಡೀ ಕುಟುಂಬ ಬೀದಿಗೆ ಬಂದಾಗಿದೆ. ಆಗಾಗಿ ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ ಸಾಲದು, ಗ್ರಾಮಸ್ಥರ ಬೇಡಿಕೆ ಇದೆ ಸುಮಾರು ಮೃತ ರೈತನ ಕುಟುಂಬಕ್ಕೆ 1 ಕೋಟಿ ರೂ. ನೀಡಬೇಕು. ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಮೃತನ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಿಸುವದಾಗಿ ಭರವಸೆ ನೀಡಿದರಂತೆ ಅವರು ಕೊಟ್ಟ ಮಾತಿನಂತೆ ಮೃತರ ಪುತ್ರನಿಗೆ ನೌಕರಿಗೆ ಕೊಡಿ. . ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆ‌ರ್.ಮಲ್ಲಿಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡುಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳಿ ಕುಮಾರ್‌, ಮೂಡಹಳ್ಳಿ ಮೂರ್ತಿ, ವಕೀಲ ಬೂದಿತಿಟ್ಟು, ರಾಜೇಂದ್ರ, ರಾಮನಮುದ್ರ ಶಿವಣ್ಣ, ವೇಣುಗೋಪಾಲ್ ಇತರರು ಹಾಜರಿದ್ದರು.

4 hrs ago
user_Nanjunda Nayak
Nanjunda Nayak
Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
4 hrs ago
3e49f9e6-6b82-4df9-98fc-dc4e1910c6af

ಅರಣ್ಯ ಇಲಾಖೆಯವರು ಹುಲಿ ಸೆರೆಹಿಡಿದಿದ್ದರೆ ಬಡಗಲಪುರ ರೈತನ ಸಾವು ಆಗುತ್ತಿರಲಿಲ್ಲ: ಸಿ.ಎಸ್.ನಿರಂಜನ್‌ಕುಮಾರ್ ಸಿಮ್ಸ್ ಶವಾಗಾರಕ್ಕೆ ಜಿಲ್ಲಾ ಬಿಜೆಪಿ ಮುಖಂಡರು ಭೇಟಿ, ರೈತನ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ, ಧನಸಹಾಯ ಮಾಡಿದರು. ಈ ಘಟನೆಗೆ ರಾಜ್ಯ ಸರ್ಕಾರವೇ ನೇರಹೊಣೆ'- ಸಚಿವರು ನುಡಿದಂತೆ ಮೃತನ ಪುತ್ರನಿಗೆ ಸರ್ಕಾರಿ ನೌಕರಿ ನೀಡಲು ಬಿಜೆಪಿ ಆಗ್ರಹ ಚಾಮರಾಜನಗರ : ಅರಣ್ಯ ಇಲಾಖೆಯವರು ಹುಲಿ ಸೆರೆಹಿಡಿದಿದ್ದರೆ ರೈತ ಬಸವಣ್ಣ ಸಾವು ಆಗುತ್ತಿರಲಿಲ್ಲ. ಈ ಘಟನೆಗೆ ರಾಜ್ಯ ಸರ್ಕಾರ ನೇರಹೊಣಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್ ಆರೋಪಿಸಿದರು. ನಗರದ ಸಿಮ್ಸ್ ನ ಶವಾಗಾರಕ್ಕೆ ಭೇಟಿ ನೀಡಿ, ರೈತನ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಧನಸಹಾಯ ಮಾಡಿ, ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಬಡಗಲಪುರ ರೈತನನ್ನು ಅವರ ಜಮೀನನಲ್ಲಿ ಹುಲಿ

ದಾಳಿ ನಡೆಸಿ, ತಿಂದು ಹಾಕಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಸುಮಾರು 2 ವರ್ಷಗಳ ಹಿಂದೆ ಆ ಭಾಗದಲ್ಲಿ ಹುಲಿ ಕಾಣಿಸಿಕೊಂಡು ಅನೇಕ ಬಾರಿ ಕಾಣಿಸಿಕೊಂಡಿದ್ದು, ಮೃತ ರೈತನ ಹಸುವಿನ ಮೇಲೂ ದಾಳಿ ನಡೆಸಿದೆ ಅದನ್ನು ಅರಣ್ಯ ಅಧಿಕಾರಿಗಳಿಗೆ ತಿಳಿಸಿ ಹುಲಿ ಸೆರೆ ಹಿಡಿಯುವಂತೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಅವರ ನಿರ್ಲಕ್ಷ್ಯದಿಂದಾಗಿ ರೈತನ ಸಾವು ಆಗಿದೆ ಎಂದರು. ಜಿಲ್ಲೆಯಲ್ಲಿ ಪ್ರಾಣಿ, ಮಾನವ ಸಂಘರ್ಷ ಆಗಾಗ ನಡೆಯುತ್ತಿದೆ. ನೆನ್ನೆ ಬೆಳಿಗ್ಗೆ ಗುಂಡ್ಲುಪೇಟೆ ತಾಲೂಕಿನ ಕೊಟಗೆರೆಯಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದು ಸಂಜೆ ವೇಳೆಗೆ ಬಡಗಲಪುರದಲ್ಲಿ ಹುಲಿ ದಾಳಿಗೆ ರೈತನ ಸಾವು ಆಗಿದೆ. ಅನೇಕ ಸಂದರ್ಭದಲ್ಲಿ ಹುಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಬೋನ್ ಇಟ್ಟು ಹುಲಿ ಸೆರೆ ಹಿಡಿಯಲು ಕ್ರಮವಹಿಸಿದ್ದರೆ. ಇಂತಹ ಸನ್ನಿವೇಶ.. ಆಗುತಿರಲಿಲ್ಲ. ಒಬ್ಬರ

ಪ್ರಾಣ ಹೋಗುತ್ತಿರಲಿಲ್ಲ. ಸರ್ಕಾರ ನಾವು ಏನೆಲ್ಲ ಕ್ರಮಕೈಗೊಂಡಿದ್ದೇವೆ' ಎಂದು ಹೇಳುತ್ತಾರೆ. ಸುರಕ್ಷತಾಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಆರಣ್ಯ. ಇಲಾಖೆಯವರಿಗೆ ಅನೇಕ ಬಾರಿ ದೂರು ಸಲ್ಲಿಸಿದ್ದರೂ. ನಿರ್ಲಕ್ಷ್ಯ ವಹಿಸಿರುವುದು ನೋಡಿದರೆ ಇದಕ್ಕೆ ನೇರ ಸರ್ಕಾರವೇ ಹೊಣೆಯಾಗಿದೆ ಎಂದು ದೂರಿದರು. ಅರಣ್ಯಧಿಕಾರಿಗಳು ಯಾವುದೇ ಜವಾಬ್ದಾರಿ ಇಲ್ಲದಂಗೆ ವರ್ತನೆ ಮಾಡುತಿದ್ದಾರೆ ಅರಣ್ಯ ಅಧಿಕಾರಿಗಳಿಗೆ ಹುಲಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದರೂ ಕೂಡ ನಿರ್ಲಕ್ಷ್ಯತನದಿಂದ ನಡೆದುಕೊಳ್ಳುತ್ತಾರೆ. ಅರಣ್ಯ ಇಲಾಖೆಯವರು ಕಾಡು ಪ್ರಾಣಿ ದಾಳಿಯಿಂದ ಸಾವು ಆದರೆ 20 ಲಕ್ಷ ಪರಿಹಾರ ನೀಡುತ್ತೇವೆ' ಅನ್ನುವ ತರದಲ್ಲಿ ಹೇಳುತ್ತಾರೆ. ಆದರೆ ರೈತನ ಜಮೀನಿಗೆ ಹುಲಿ ಬಂದು ರೈತನ ಮೇಲೆ ದಾಳಿನಡೆಸಿ ಕೊಂದು ಹಾಕಿದೆ ಮೃತರ ಕುಟುಂಬದ ಕಥೆ ಏನಾಗಬೇಕು. ? ಮನೆಯಲ್ಲಿ ದುಡಿಮೆ ಮಾಡುವವರು ಯಾರು ? ಅವರ ಇಡೀ ಕುಟುಂಬ ಬೀದಿಗೆ

ಬಂದಾಗಿದೆ. ಆಗಾಗಿ ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ ಸಾಲದು, ಗ್ರಾಮಸ್ಥರ ಬೇಡಿಕೆ ಇದೆ ಸುಮಾರು ಮೃತ ರೈತನ ಕುಟುಂಬಕ್ಕೆ 1 ಕೋಟಿ ರೂ. ನೀಡಬೇಕು. ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಮೃತನ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಿಸುವದಾಗಿ ಭರವಸೆ ನೀಡಿದರಂತೆ ಅವರು ಕೊಟ್ಟ ಮಾತಿನಂತೆ ಮೃತರ ಪುತ್ರನಿಗೆ ನೌಕರಿಗೆ ಕೊಡಿ. . ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆ‌ರ್.ಮಲ್ಲಿಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡುಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಹಳ್ಳಿ ಕುಮಾರ್‌, ಮೂಡಹಳ್ಳಿ ಮೂರ್ತಿ, ವಕೀಲ ಬೂದಿತಿಟ್ಟು, ರಾಜೇಂದ್ರ, ರಾಮನಮುದ್ರ ಶಿವಣ್ಣ, ವೇಣುಗೋಪಾಲ್ ಇತರರು ಹಾಜರಿದ್ದರು.

More news from ಕರ್ನಾಟಕ and nearby areas
  • ಕಿಲಗೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ‌ಪೂಜೆ ನೆರವೇರಿಸಿದ‌‌ ಸಚಿವ ಪುಟ್ಟರಂಗಶೆಟ್ಟಿ ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಎಸ್ಇಪಿ ಯೋಜನೆಯಡಿ ಒಂದು ಕೋಟಿ ರೂ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ ಅವರು ರಸ್ತೆಗಳು ಗ್ರಾಮೀಣ ಜನರ ಜೀವನಾಡಿಯಾಗಿದೆ ಈ ನಿಟ್ಟಿನಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ರಸ್ತೆ, ಚರಂಡಿ ಸೇತುವೆ ಅಭಿವೃದ್ಧಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜನರ ಅಭಿವೃದ್ಧಿ ಕೆಲಸಗಳೆ ನನ್ನ ಗುರಿಯಾಗಿದ್ದು ವಿವಿಧ ಅಭಿವೃದ್ಧಿ ಯೋಜನೆಯಡಿ ಅನುದಾನ ತಂದು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು
    2
    ಕಿಲಗೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ‌ಪೂಜೆ ನೆರವೇರಿಸಿದ‌‌ ಸಚಿವ ಪುಟ್ಟರಂಗಶೆಟ್ಟಿ 

ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಎಸ್ಇಪಿ ಯೋಜನೆಯಡಿ ಒಂದು ಕೋಟಿ ರೂ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ ಅವರು ರಸ್ತೆಗಳು ಗ್ರಾಮೀಣ ಜನರ ಜೀವನಾಡಿಯಾಗಿದೆ ಈ ನಿಟ್ಟಿನಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ರಸ್ತೆ, ಚರಂಡಿ ಸೇತುವೆ ಅಭಿವೃದ್ಧಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಜನರ ಅಭಿವೃದ್ಧಿ ಕೆಲಸಗಳೆ ನನ್ನ ಗುರಿಯಾಗಿದ್ದು ವಿವಿಧ ಅಭಿವೃದ್ಧಿ ಯೋಜನೆಯಡಿ ಅನುದಾನ ತಂದು ಸಾಕಷ್ಟು ಕೆಲಸಗಳನ್ನು  ಮಾಡುತ್ತಿದ್ದೇವೆ ಎಂದು ತಿಳಿಸಿದರು
    user_ಚಾಮರಾಜನಗರ ಸುದ್ದಿ ಮನೆ
    ಚಾಮರಾಜನಗರ ಸುದ್ದಿ ಮನೆ
    ಪತ್ರಕರ್ತ ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    2 hrs ago
  • ಜೆಎಸ್‌ಎಸ್ ನರ್ಸಿಂಗ್ ಕಾಲೇಜು ವತಿಯಿಂದ ವಿಶ್ವ ಆತ್ಮಹತ್ಯೆ ತಡೆದಿನಾಚರಣೆ ಕಾರ್ಯಕ್ರಮ ವರದಿ: ಹೊಮ್ಮನಂಜುಂಡನಾಯಕ ಜಿಲ್ಲೆಯನ್ನು ಆತ್ಮಹತ್ಯೆ ಮುಕ್ತ ಮಾಡಲು ಪಣ ತೊಡಿ: ಡಾ.ಪಿ.ಚಂದ್ರಶೇಖ‌ರ್ ಜೆಎಸ್‌ಎಸ್ ನರ್ಸಿಂಗ್ ಕಾಲೇಜು ವತಿಯಿಂದ ವಿಶ್ವ ಆತ್ಮಹತ್ಯೆ ತಡೆದಿನಾಚರಣೆ ಕಾರ್ಯಕ್ರಮ ಚಾಮರಾಜನಗರ: ಆತ್ಮಹತ್ಯೆ ತಡೆಗಟ್ಟಲು ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಪಿ.ಚಂದ್ರಶೇಖ‌ರ್ ಅಭಿಪ್ರಾಯಪಟ್ಟರು. ನಗರದ ಜೆಎಸ್‌ಎಸ್‌ ಮಹಿಳಾಕಾಲೇಜು ಸಭಾಂಗಣದಲ್ಲಿ ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜು ವತಿಯಿಂದ ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸೋಣ' ಧ್ಯೇಯ ವಾಕ್ಯದಡಿ, ನಡೆದ 'ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಗಿಡಕ್ಕೆ ನೀರಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.  ಶುಶ್ರೂಷಕರು ಆತ್ಮಹತ್ಯೆಗೆ ಪ್ರಯತ್ನ ಮಾಡುವವರ ಜತೆ ಸಮಾಲೋಚನೆ ನಡೆಸಿ, ಅವರಿಗೆ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿಸಬೇಕು, ಆ ಮೂಲಕ‌ ಜಿಲ್ಲೆಯನ್ನು ಆತ್ಮಹತ್ಯೆ ಮುಕ್ತ ಮಾಡಲು ಪಣ ತೊಡಬೇಕು ಎಂದರು. ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಸಕಾರಾತ್ಮಕ ಚಿಂತನೆಗಳು ಎಲ್ಲದಕ್ಕೂ ಸೂಕ್ತ ಪರಿಹಾರ ನೀಡುತ್ತವೆ.ಮಾನಸಿಕ ಖಿನ್ನತೆ ಒಂಟಿತನ, ಕೌಟುಂಬಿಕ ಕಲಹ ಇದರಲ್ಲಿ ಸಿಲುಕುವವರು  ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಇದೆ. ಇಲಾಖೆ ಸಂಗ್ರಹಿಸಿರುವ ಅಂಕಿ ಅಂಕಿಆಂಶಗಳ ಪ್ರಕಾರ ಜುಲೈನಲ್ಲಿ  ಗಂಡುಮಕ್ಕಳು-61 ಹೆಣ್ಣುಮಕ್ಕಳು-66, ಆಗಸ್ಟ್ ನಲ್ಲಿ  ಗಂಡುಮಕ್ಕಳು -66,  ಹೆಣ್ಣು ಮಕ್ಕಳು -70 ಆತ್ಮಹತ್ಯೆಗೆ ಶರಣಾಗಿದ್ದಾರೆ.  ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರ,  ಶುಕ್ರವಾರ, ಬುಧವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮನೋಚೈತನ್ಯ‌ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಆತ್ಮ ಹತ್ಯೆಗೆ  ಪ್ರಯತ್ನಪಟ್ಟವರ ಜತೆ ಆಪ್ತಸಮಾಲೋಚನೆ ನಡೆಸುವ ಮೂಲಕ  ಅವರ ಸಮಸ್ಯೆಗೆ ಪರಿಹಾರ ಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಮೈಸೂರು ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ.ಶಿವಾನಂದ ಜೆ.ಮನೋಹರ್, ರಕ್ಷಿತಾಪೂಜಾರಿ ಮಾತನಾಡಿದರು. ಅಧ್ಯಕ್ಷ ತೆ ವಹಿಸಿದ್ದ ಪ್ರಾಂಶುಪಾಲ‌ ಜಿ.ವಿನಯಕುಮಾರ್ ಮಾತನಾಡಿದರು. ಉಪನ್ಯಾಸಕಿ ಹೇಮಾವತಿ, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳಾದ ನಿಧಿಶ್ರೀ ಪ್ರಾರ್ಥಿಸಿದರು.ದಿವ್ಯ ಸ್ವಾಗತಿಸಿದರು. ಮಾದಲಾಂಬಿಕೆ ವಂದಿಸಿದರು.
    4
    ಜೆಎಸ್‌ಎಸ್ ನರ್ಸಿಂಗ್ ಕಾಲೇಜು ವತಿಯಿಂದ ವಿಶ್ವ ಆತ್ಮಹತ್ಯೆ ತಡೆದಿನಾಚರಣೆ ಕಾರ್ಯಕ್ರಮ
ವರದಿ: ಹೊಮ್ಮನಂಜುಂಡನಾಯಕ
ಜಿಲ್ಲೆಯನ್ನು ಆತ್ಮಹತ್ಯೆ ಮುಕ್ತ ಮಾಡಲು ಪಣ ತೊಡಿ:
ಡಾ.ಪಿ.ಚಂದ್ರಶೇಖ‌ರ್
ಜೆಎಸ್‌ಎಸ್ ನರ್ಸಿಂಗ್ ಕಾಲೇಜು ವತಿಯಿಂದ ವಿಶ್ವ ಆತ್ಮಹತ್ಯೆ ತಡೆದಿನಾಚರಣೆ ಕಾರ್ಯಕ್ರಮ
ಚಾಮರಾಜನಗರ: ಆತ್ಮಹತ್ಯೆ ತಡೆಗಟ್ಟಲು ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಪಿ.ಚಂದ್ರಶೇಖ‌ರ್ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್‌ ಮಹಿಳಾಕಾಲೇಜು ಸಭಾಂಗಣದಲ್ಲಿ ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜು ವತಿಯಿಂದ ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸೋಣ' ಧ್ಯೇಯ ವಾಕ್ಯದಡಿ, ನಡೆದ 'ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಗಿಡಕ್ಕೆ ನೀರಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 
ಶುಶ್ರೂಷಕರು ಆತ್ಮಹತ್ಯೆಗೆ ಪ್ರಯತ್ನ ಮಾಡುವವರ ಜತೆ ಸಮಾಲೋಚನೆ ನಡೆಸಿ, ಅವರಿಗೆ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿಸಬೇಕು, ಆ ಮೂಲಕ‌ ಜಿಲ್ಲೆಯನ್ನು ಆತ್ಮಹತ್ಯೆ ಮುಕ್ತ ಮಾಡಲು ಪಣ ತೊಡಬೇಕು ಎಂದರು.
ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಸಕಾರಾತ್ಮಕ ಚಿಂತನೆಗಳು ಎಲ್ಲದಕ್ಕೂ ಸೂಕ್ತ ಪರಿಹಾರ ನೀಡುತ್ತವೆ.ಮಾನಸಿಕ ಖಿನ್ನತೆ ಒಂಟಿತನ, ಕೌಟುಂಬಿಕ ಕಲಹ ಇದರಲ್ಲಿ ಸಿಲುಕುವವರು  ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಇದೆ. ಇಲಾಖೆ ಸಂಗ್ರಹಿಸಿರುವ ಅಂಕಿ ಅಂಕಿಆಂಶಗಳ ಪ್ರಕಾರ ಜುಲೈನಲ್ಲಿ  ಗಂಡುಮಕ್ಕಳು-61 ಹೆಣ್ಣುಮಕ್ಕಳು-66, ಆಗಸ್ಟ್ 
ನಲ್ಲಿ  ಗಂಡುಮಕ್ಕಳು -66,  ಹೆಣ್ಣು ಮಕ್ಕಳು -70 ಆತ್ಮಹತ್ಯೆಗೆ ಶರಣಾಗಿದ್ದಾರೆ.  ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರ,  ಶುಕ್ರವಾರ, ಬುಧವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮನೋಚೈತನ್ಯ‌ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಆತ್ಮ ಹತ್ಯೆಗೆ  ಪ್ರಯತ್ನಪಟ್ಟವರ ಜತೆ ಆಪ್ತಸಮಾಲೋಚನೆ ನಡೆಸುವ ಮೂಲಕ  ಅವರ ಸಮಸ್ಯೆಗೆ ಪರಿಹಾರ ಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮೈಸೂರು ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ.ಶಿವಾನಂದ ಜೆ.ಮನೋಹರ್, ರಕ್ಷಿತಾಪೂಜಾರಿ ಮಾತನಾಡಿದರು. ಅಧ್ಯಕ್ಷ ತೆ ವಹಿಸಿದ್ದ ಪ್ರಾಂಶುಪಾಲ‌ ಜಿ.ವಿನಯಕುಮಾರ್ ಮಾತನಾಡಿದರು.
ಉಪನ್ಯಾಸಕಿ ಹೇಮಾವತಿ, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳಾದ ನಿಧಿಶ್ರೀ ಪ್ರಾರ್ಥಿಸಿದರು.ದಿವ್ಯ ಸ್ವಾಗತಿಸಿದರು. ಮಾದಲಾಂಬಿಕೆ ವಂದಿಸಿದರು.
    user_Nanjunda Nayak
    Nanjunda Nayak
    Photographer ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    2 hrs ago
  • ಕಾವೇರಿ ತಟದಲ್ಲಿ ಪೂಜೆ: ಕರಿಮಣಿ, ಬಿಚ್ಚೋಲೆ–ಅರಸಿನ ಕೊನೆಯೊಂದಿಗೆ ಮೂಡಿದ ಗೌರಿ ದೇವಿ ಬನ್ನೂರು: ಗೌರಿ ಹಬ್ಬದ ಸಂಭ್ರಮ ಬನ್ನೂರಿನಲ್ಲಿ ಭಕ್ತಿ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಕಳೆಗಟ್ಟಿತು. ಪಟ್ಟಣದ ಕಾವೇರಿ ತಟದಲ್ಲಿ ಗೌರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಿಳೆಯರು ಮಂಗಳದ್ರವ್ಯಗಳೊಂದಿಗೆ ಭಕ್ತಿಭಾವ ಮೆರೆದರು. ಕರಿಮಣಿ, ಬಿಚ್ಚೋಲೆ, ಅರಸಿನ ಕೊನೆ ಸೇರಿದಂತೆ ಸಾಂಪ್ರದಾಯಿಕ ವಸ್ತುಗಳಿಂದ ಅಲಂಕರಿಸಲ್ಪಟ್ಟ ಗೌರಿ ದೇವಿ ವಿಶೇಷವಾಗಿ ಕಂಗೊಳಿಸಿದರು. ಕಾವೇರಿ ನದಿಯ ತಟದಲ್ಲಿ ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ, ಸಂಪ್ರದಾಯಬದ್ಧವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮಹಿಳೆಯರು ಕುಟುಂಬದ ಸುಖ-ಸಮೃದ್ಧಿ, ಆರೋಗ್ಯ ಹಾಗೂ ನೆಮ್ಮದಿಗಾಗಿ ಗೌರಿ ದೇವಿಗೆ ಪ್ರಾರ್ಥಿಸಿ, ಅರಸಿನ, ಕುಂಕುಮ, ಹೂವು ಹಾಗೂ ವಿವಿಧ ಮಂಗಳದ್ರವ್ಯಗಳನ್ನು ಸಮರ್ಪಿಸಿದರು. ಇದೇ ವೇಳೆ ಬನ್ನೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೊಟ್ಟಿಲು ಗೌರಿ ಕೂರಿಸಿ ಮೆರವಣಿಗೆ ನಡೆಸಲಾಯಿತು. ಅಲಂಕೃತ ತೊಟ್ಟಿಲಿನಲ್ಲಿ ಗೌರಿ ದೇವಿಯನ್ನು ಕೂರಿಸಿ, ಮಹಿಳೆಯರು ಹಾಗೂ ಭಕ್ತರು ಭಜನೆ, ಮಂಗಳಗೀತೆಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಗೌರಿ ದೇವಿಗೆ ನಮಸ್ಕರಿಸಿ ಪೂಜೆ ಸಲ್ಲಿಸಿದರು. ಮಹಿಳೆಯರು ಸಾಂಪ್ರದಾಯಿಕ ಉಡುಪು ಧರಿಸಿ, ಅರಸಿನ-ಕುಂಕುಮ ಹಾಗೂ ಹೂವುಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಾವೇರಿ ತಟದಲ್ಲಿ ನಡೆದ ಗೌರಿ ಪೂಜೆ ಹಾಗೂ ಬನ್ನೂರು ಸುತ್ತಮುತ್ತ ನಡೆದ ತೊಟ್ಟಿಲು ಗೌರಿ ಮೆರವಣಿಗೆ ಹಬ್ಬದ ಧಾರ್ಮಿಕ ಮಹತ್ವದ ಜೊತೆಗೆ ಸ್ಥಳೀಯ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯ ವೈಭವವನ್ನು ಸಾರಿತು. ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಗಳು ಇಂದಿಗೂ ಜನರ ಬದುಕಿನಲ್ಲಿ ಜೀವಂತವಾಗಿದ್ದು, ಹೊಸ ತಲೆಮಾರಿಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸುವ ಸೇತುವೆಯಾಗಿ ಪರಿಣಮಿಸಿವೆ. ಕಾವೇರಿ ತಟದ ಪ್ರಶಾಂತ ವಾತಾವರಣದಲ್ಲಿ ನಡೆದ ಗೌರಿ ಪೂಜೆ, ಅಲಂಕೃತ ಗೌರಿ ದೇವಿ ಹಾಗೂ ತೊಟ್ಟಿಲು ಗೌರಿಯ ಮೆರವಣಿಗೆ ಬನ್ನೂರಿನ ಗೌರಿ ಹಬ್ಬಕ್ಕೆ ವಿಶೇಷ ಮೆರುಗು ನೀಡಿತು.
    1
    ಕಾವೇರಿ ತಟದಲ್ಲಿ ಪೂಜೆ: ಕರಿಮಣಿ, ಬಿಚ್ಚೋಲೆ–ಅರಸಿನ ಕೊನೆಯೊಂದಿಗೆ ಮೂಡಿದ ಗೌರಿ ದೇವಿ
ಬನ್ನೂರು: ಗೌರಿ ಹಬ್ಬದ ಸಂಭ್ರಮ ಬನ್ನೂರಿನಲ್ಲಿ ಭಕ್ತಿ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಕಳೆಗಟ್ಟಿತು. ಪಟ್ಟಣದ ಕಾವೇರಿ ತಟದಲ್ಲಿ ಗೌರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಿಳೆಯರು ಮಂಗಳದ್ರವ್ಯಗಳೊಂದಿಗೆ ಭಕ್ತಿಭಾವ ಮೆರೆದರು. ಕರಿಮಣಿ, ಬಿಚ್ಚೋಲೆ, ಅರಸಿನ ಕೊನೆ ಸೇರಿದಂತೆ ಸಾಂಪ್ರದಾಯಿಕ ವಸ್ತುಗಳಿಂದ ಅಲಂಕರಿಸಲ್ಪಟ್ಟ ಗೌರಿ ದೇವಿ ವಿಶೇಷವಾಗಿ ಕಂಗೊಳಿಸಿದರು.
ಕಾವೇರಿ ನದಿಯ ತಟದಲ್ಲಿ ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ, ಸಂಪ್ರದಾಯಬದ್ಧವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮಹಿಳೆಯರು ಕುಟುಂಬದ ಸುಖ-ಸಮೃದ್ಧಿ, ಆರೋಗ್ಯ ಹಾಗೂ ನೆಮ್ಮದಿಗಾಗಿ ಗೌರಿ ದೇವಿಗೆ ಪ್ರಾರ್ಥಿಸಿ, ಅರಸಿನ, ಕುಂಕುಮ, ಹೂವು ಹಾಗೂ ವಿವಿಧ ಮಂಗಳದ್ರವ್ಯಗಳನ್ನು ಸಮರ್ಪಿಸಿದರು.
ಇದೇ ವೇಳೆ ಬನ್ನೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೊಟ್ಟಿಲು ಗೌರಿ ಕೂರಿಸಿ ಮೆರವಣಿಗೆ ನಡೆಸಲಾಯಿತು. ಅಲಂಕೃತ ತೊಟ್ಟಿಲಿನಲ್ಲಿ ಗೌರಿ ದೇವಿಯನ್ನು ಕೂರಿಸಿ, ಮಹಿಳೆಯರು ಹಾಗೂ ಭಕ್ತರು ಭಜನೆ, ಮಂಗಳಗೀತೆಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಗೌರಿ ದೇವಿಗೆ ನಮಸ್ಕರಿಸಿ ಪೂಜೆ ಸಲ್ಲಿಸಿದರು. ಮಹಿಳೆಯರು ಸಾಂಪ್ರದಾಯಿಕ ಉಡುಪು ಧರಿಸಿ, ಅರಸಿನ-ಕುಂಕುಮ ಹಾಗೂ ಹೂವುಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕಾವೇರಿ ತಟದಲ್ಲಿ ನಡೆದ ಗೌರಿ ಪೂಜೆ ಹಾಗೂ ಬನ್ನೂರು ಸುತ್ತಮುತ್ತ ನಡೆದ ತೊಟ್ಟಿಲು ಗೌರಿ ಮೆರವಣಿಗೆ ಹಬ್ಬದ ಧಾರ್ಮಿಕ ಮಹತ್ವದ ಜೊತೆಗೆ ಸ್ಥಳೀಯ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯ ವೈಭವವನ್ನು ಸಾರಿತು. ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಗಳು ಇಂದಿಗೂ ಜನರ ಬದುಕಿನಲ್ಲಿ ಜೀವಂತವಾಗಿದ್ದು, ಹೊಸ ತಲೆಮಾರಿಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸುವ ಸೇತುವೆಯಾಗಿ ಪರಿಣಮಿಸಿವೆ.
ಕಾವೇರಿ ತಟದ ಪ್ರಶಾಂತ ವಾತಾವರಣದಲ್ಲಿ ನಡೆದ ಗೌರಿ ಪೂಜೆ, ಅಲಂಕೃತ ಗೌರಿ ದೇವಿ ಹಾಗೂ ತೊಟ್ಟಿಲು ಗೌರಿಯ ಮೆರವಣಿಗೆ ಬನ್ನೂರಿನ ಗೌರಿ ಹಬ್ಬಕ್ಕೆ ವಿಶೇಷ ಮೆರುಗು ನೀಡಿತು.
    user_ಹೊಂಗಿರಣ ನ್ಯೂಸ್
    ಹೊಂಗಿರಣ ನ್ಯೂಸ್
    Farmer Chamarajanagar, Chamarajanagara•
    22 hrs ago
  • ಹನೂರು: ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾಪುರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಿಳೆಯರು ನೀರಿಗಾಗಿ ಕೆಲಸಕಾರ್ಯಗಳನ್ನು ಬಿಟ್ಟು ಸಂಜೆವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಮನಗುಡ್ಡೆಯಿಂದ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಸ್ವಚ್ಛವಾಗಿಲ್ಲ ಹಾಗೂ ಕುಡಿಯಲು ಯೋಗ್ಯವಲ್ಲ ಎಂದು ಆರೋಪಿಸಿದರು. ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ನೀರಿನ ಗುಣಮಟ್ಟ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರಾಜೇಂದ್ರ, ಗಿರೀಶ್, ಬಾಬು, ಅಜಯ್, ಪ್ರಯಾಗ್ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು. ಹನೂರು: ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾಪುರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಿಳೆಯರು ನೀರಿಗಾಗಿ ಕೆಲಸಕಾರ್ಯಗಳನ್ನು ಬಿಟ್ಟು ಸಂಜೆವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಮನಗುಡ್ಡೆಯಿಂದ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಸ್ವಚ್ಛವಾಗಿಲ್ಲ ಹಾಗೂ ಕುಡಿಯಲು ಯೋಗ್ಯವಲ್ಲ ಎಂದು ಆರೋಪಿಸಿದರು. ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ನೀರಿನ ಗುಣಮಟ್ಟ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರಾಜೇಂದ್ರ, ಗಿರೀಶ್, ಬಾಬು, ಅಜಯ್, ಪ್ರಯಾಗ್ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.
    1
    ಹನೂರು: ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾಪುರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಿಳೆಯರು ನೀರಿಗಾಗಿ ಕೆಲಸಕಾರ್ಯಗಳನ್ನು ಬಿಟ್ಟು ಸಂಜೆವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಮನಗುಡ್ಡೆಯಿಂದ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಸ್ವಚ್ಛವಾಗಿಲ್ಲ ಹಾಗೂ ಕುಡಿಯಲು ಯೋಗ್ಯವಲ್ಲ ಎಂದು ಆರೋಪಿಸಿದರು.

ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ನೀರಿನ ಗುಣಮಟ್ಟ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರಾಜೇಂದ್ರ, ಗಿರೀಶ್, ಬಾಬು, ಅಜಯ್, ಪ್ರಯಾಗ್ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.
ಹನೂರು: ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಾಪುರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಹಿಳೆಯರು ನೀರಿಗಾಗಿ ಕೆಲಸಕಾರ್ಯಗಳನ್ನು ಬಿಟ್ಟು ಸಂಜೆವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಮನಗುಡ್ಡೆಯಿಂದ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಸ್ವಚ್ಛವಾಗಿಲ್ಲ ಹಾಗೂ ಕುಡಿಯಲು ಯೋಗ್ಯವಲ್ಲ ಎಂದು ಆರೋಪಿಸಿದರು.
ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ನೀರಿನ ಗುಣಮಟ್ಟ ಪರಿಶೀಲಿಸಿ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ರಾಜೇಂದ್ರ, ಗಿರೀಶ್, ಬಾಬು, ಅಜಯ್, ಪ್ರಯಾಗ್ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    3 hrs ago
  • ಪಟ್ಟಣದಲ್ಲಿ 45 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನಗಳ ಹಂಚಿಕೆ ಕಾರ್ಯಕ್ಕೆ ಸಚಿವ ನರೇಂದ್ರಸ್ವಾಮಿ ಚಾಲನೆ ಮಳವಳ್ಳಿ ; ಕಳೆದ 45 ವರ್ಷಗ ಳಿಂದ ನೆನೆಗುದಿಗೆ ಬಿದ್ದಿದ್ದ ಪಟ್ಟ ಣದ ಶಾಂತಿ ಕಾಲೇಜು ಮುಂಭಾ ಗದ 33 ಎಕರೆ ನಿವೇಶನ ಹಂಚಿಕೆ ಕಾರ್ಯಕ್ಕೆ ಮುಕ್ತಿ ದೊರಕಿದ್ದು ನಿವೇಶನ ಹಂಚಿಕೆ ಕಾರ್ಯಕ್ಕೆ ಕೃಷಿ ಸಚಿವರೂ ಅದ ಶಾಸಕ ಪಿ ಎಂ ನರೇಂದ್ರಸ್ವಾಮಿ ವಿದ್ಯುಕ್ತ ಚಾಲನೆ ನೀಡಿದರು. ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ನಿವೇಶನ ಆವರಣದಲ್ಲಿ ಮಂಗಳವಾರ ಸಾಯಂಕಾಲ 5.30 ರ ಸಮಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಲಾಟರಿ ಮೂಲಕ ಫಲಾನುಭವಿಗಳ ಸೈಟ್ ಸಂಖ್ಯೆಯನ್ನು ಅವರೇ ಆಯ್ಕೆ ಮಾಡಿಕೊಳ್ಳುವ ಸಚಿವ ನರೇಂದ್ರಸ್ವಾಮಿ ನಿವೇಶನ ಹಂಚಿಕೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಕಳೆದ 45 ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಗುಂಡುರಾವ್ ಅವರ ಕಾಲದಲ್ಲಿ ಭೂಸ್ವಾಧೀನ ವಾಗಿದ್ದ ಈ ನಿವೇಶನ ಜಮೀನಿನ ಮಾಲೀಕರು ಹಾಗೂ ಪುರಸಭೆ ನಡುವಿನ ವ್ಯಾಜ್ಯ ಹೈಕೋಟ್೯ ಮೆಟ್ಟಲೇ ರಿದ ಪರಿಣಾಮ‌ ಅಂದಿನಿಂ ದಲೂ ನೆನೆಗುದಿಗೆ ಬಿದ್ದಿತ್ತಾ ದರೂ ತಾವು 2 ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ವೇಳೆ ಈ ಹಂಚಿಕೆ ಕಾರ್ಯಕ್ಕೆ ಚಾಲನೆ ನೀಡಿದ್ದಾಗಿ ತಿಳಿಸಿದರು. ಅಂದು ಜಮೀನಿನ ಮಾಲೀಕರ ಜೊತೆ ಚೆರ್ಚೆ ನಡೆಸಿ ವಿವಾದ ಬಗೆಹರಿಸಿದ್ದರ ಜೊತೆಗೆ ನ್ಯಾಯಾಲಯದ ತಡೆಯಾಜ್ಞೆ ತೆರೆವು ಗೊಳಿಸಿ ಜನರಿಗೆ ನೀಡಿದ ಭರವಸೆಯಂತೆ ಇದೀಗ ನಿವೇಶ ನಗಳ ಹಂಚಿಕೆಗೆ ಇಂದು ಚಾಲನೆ ನೀಡುತ್ತಿರುವುದಾಗಿ ಹೇಳಿದರು. ಇಂದು ಸೈಟ್ ನಂಬರ್ ಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದ್ದು ಸಧ್ಯದಲ್ಲಿ ಮುಖ್ಯಮಂತ್ರಿಗಳಿಂದ ಹಕ್ಕು ಪತ್ರ ವಿತರಿಸುವುದಾಗಿ ತಿಳಿಸಿದ ಅವರು ನಿವೇಶ ಹಂಚಿಕೆ ವಿಚಾರದಲ್ಲಿ ಹಿಂದಿನವರಂತೆ ರಾಜಕಾರಣ ಮಾಡದೆ ಬಡ ಪಲಾನುಭವಿಗಳಿಗೆ ಪ್ರಾಮಾಣಿ ಕವಾಗಿ ನಿವೇಶನ ದೊರಕಿಸಿ ಕೊಡುತ್ತಿರುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ 45 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ನಿವೇಶನ ಹಂಚಿಕೆ ಯನ್ನು ಪಾರದರ್ಶಕವಾಗಿ ನಡೆಸುತ್ತಿರುವ ಸಚಿವ ಪಿ ಎಂ ನರೇಂದ್ರಸ್ವಾಮಿ ಅವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಜಿ ಪಂ ಸಿಇಒ ನಂದಿನಿ, ಉಪ‌ ವಿಭಾಗಾಧಿಕಾರಿ ಶಿವಮೂರ್ತಿ , ನಗರಾಭಿವೃದ್ದಿ ಇಲಾಖೆ ಯೋಜನಾಧಿಕಾರಿ ಚಂದ್ರ ಶೇಖರ್. ಮುಖ್ಯಾಧಿ ಕಾರಿ ನಾಗರತ್ನ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿ ದ್ದರು.
    1
    ಪಟ್ಟಣದಲ್ಲಿ 45 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನಗಳ ಹಂಚಿಕೆ ಕಾರ್ಯಕ್ಕೆ ಸಚಿವ ನರೇಂದ್ರಸ್ವಾಮಿ ಚಾಲನೆ
ಮಳವಳ್ಳಿ ; ಕಳೆದ 45 ವರ್ಷಗ ಳಿಂದ ನೆನೆಗುದಿಗೆ ಬಿದ್ದಿದ್ದ ಪಟ್ಟ ಣದ ಶಾಂತಿ ಕಾಲೇಜು ಮುಂಭಾ ಗದ 33 ಎಕರೆ ನಿವೇಶನ ಹಂಚಿಕೆ ಕಾರ್ಯಕ್ಕೆ  ಮುಕ್ತಿ ದೊರಕಿದ್ದು ನಿವೇಶನ ಹಂಚಿಕೆ ಕಾರ್ಯಕ್ಕೆ ಕೃಷಿ ಸಚಿವರೂ ಅದ ಶಾಸಕ ಪಿ ಎಂ ನರೇಂದ್ರಸ್ವಾಮಿ ವಿದ್ಯುಕ್ತ ಚಾಲನೆ ನೀಡಿದರು. ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ನಿವೇಶನ ಆವರಣದಲ್ಲಿ ಮಂಗಳವಾರ ಸಾಯಂಕಾಲ 5.30 ರ ಸಮಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಲಾಟರಿ ಮೂಲಕ ಫಲಾನುಭವಿಗಳ ಸೈಟ್ ಸಂಖ್ಯೆಯನ್ನು ಅವರೇ ಆಯ್ಕೆ ಮಾಡಿಕೊಳ್ಳುವ ಸಚಿವ ನರೇಂದ್ರಸ್ವಾಮಿ ನಿವೇಶನ ಹಂಚಿಕೆಗೆ  ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಕಳೆದ 45 ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಗುಂಡುರಾವ್ ಅವರ ಕಾಲದಲ್ಲಿ ಭೂಸ್ವಾಧೀನ ವಾಗಿದ್ದ ಈ ನಿವೇಶನ ಜಮೀನಿನ ಮಾಲೀಕರು ಹಾಗೂ ಪುರಸಭೆ ನಡುವಿನ ವ್ಯಾಜ್ಯ ಹೈಕೋಟ್೯ ಮೆಟ್ಟಲೇ ರಿದ ಪರಿಣಾಮ‌ ಅಂದಿನಿಂ ದಲೂ ನೆನೆಗುದಿಗೆ ಬಿದ್ದಿತ್ತಾ ದರೂ ತಾವು 2 ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ವೇಳೆ ಈ ಹಂಚಿಕೆ ಕಾರ್ಯಕ್ಕೆ ಚಾಲನೆ ನೀಡಿದ್ದಾಗಿ ತಿಳಿಸಿದರು.    ಅಂದು ಜಮೀನಿನ ಮಾಲೀಕರ ಜೊತೆ ಚೆರ್ಚೆ ನಡೆಸಿ ವಿವಾದ ಬಗೆಹರಿಸಿದ್ದರ ಜೊತೆಗೆ ನ್ಯಾಯಾಲಯದ ತಡೆಯಾಜ್ಞೆ  ತೆರೆವು ಗೊಳಿಸಿ ಜನರಿಗೆ ನೀಡಿದ ಭರವಸೆಯಂತೆ ಇದೀಗ ನಿವೇಶ ನಗಳ ಹಂಚಿಕೆಗೆ ಇಂದು ಚಾಲನೆ ನೀಡುತ್ತಿರುವುದಾಗಿ ಹೇಳಿದರು.    ಇಂದು ಸೈಟ್ ನಂಬರ್ ಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದ್ದು ಸಧ್ಯದಲ್ಲಿ ಮುಖ್ಯಮಂತ್ರಿಗಳಿಂದ ಹಕ್ಕು ಪತ್ರ ವಿತರಿಸುವುದಾಗಿ ತಿಳಿಸಿದ ಅವರು ನಿವೇಶ ಹಂಚಿಕೆ ವಿಚಾರದಲ್ಲಿ ಹಿಂದಿನವರಂತೆ ರಾಜಕಾರಣ ಮಾಡದೆ ಬಡ ಪಲಾನುಭವಿಗಳಿಗೆ ಪ್ರಾಮಾಣಿ ಕವಾಗಿ ನಿವೇಶನ ದೊರಕಿಸಿ ಕೊಡುತ್ತಿರುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ 45 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ನಿವೇಶನ ಹಂಚಿಕೆ ಯನ್ನು  ಪಾರದರ್ಶಕವಾಗಿ ನಡೆಸುತ್ತಿರುವ ಸಚಿವ ಪಿ ಎಂ ನರೇಂದ್ರಸ್ವಾಮಿ ಅವರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಜಿ ಪಂ ಸಿಇಒ ನಂದಿನಿ, ಉಪ‌ ವಿಭಾಗಾಧಿಕಾರಿ ಶಿವಮೂರ್ತಿ , ನಗರಾಭಿವೃದ್ದಿ ಇಲಾಖೆ  ಯೋಜನಾಧಿಕಾರಿ ಚಂದ್ರ ಶೇಖರ್.  ಮುಖ್ಯಾಧಿ ಕಾರಿ ನಾಗರತ್ನ ಮತ್ತಿತರರು ಕಾರ್ಯಕ್ರಮದಲ್ಲಿ  ಹಾಜರಿ ದ್ದರು.
    user_B mallikarjunaswamy
    B mallikarjunaswamy
    ಮಳವಳ್ಳಿ, ಮಂಡ್ಯ, ಕರ್ನಾಟಕ•
    2 hrs ago
  • ಗೌರಿ ಗಣೇಶ ಹಬ್ಬಕೊಡುಗೆಯಾಗಿ ನಿವೇಶನ ನೀಡುತ್ತಿದ್ದೇವೆ: ಕೃಷಿ ಸಚಿವ ನರೇಂದ್ರಸ್ವಾಮಿ ಗೌರಿ ಗಣೇಶ ಹಬ್ಬ ಅಂಗವಾಗಿ ನಿಮ್ಮೆಲ್ಲರಿಗೂ ಕೊಡುಗೆಯಾಗಿ ನಿವೇಶನ ನೀಡುತ್ತಿದ್ದೇವೆ ಎಂದು ಕೃಷಿ ಸಚಿವ ನರೇಂದ್ರಸ್ವಾಮಿ ತಿಳಿಸಿದರು. ಮಳವಳ್ಳಿ ಪಟ್ಟಣದ 33 ಎಕರೆ ನಿವೇಶನದ ಆವರಣದಲ್ಲಿ ನಗರಾಭಿವೃದ್ದಿ ಇಲಾಖೆ , ರಾಜೀವ್ ಗಾಂಧಿ ವಸತಿ ನಿಗಮ , ಜಿಲ್ಲಾಢಳಿತ, ಪುರಸಭೆ ವತಿಯಿಂದ ಆರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜಕೀಯ ವಿರೋಧವಿದ್ದರೂ ನಾನು ಅಂಜದೆ ಛಲ ಬಿಡದೆ ನಿವೇಶನ ಹಂಚಿಕೆ ಮಾಡುತ್ತಿದ್ದೇನೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರರನ್ನು ಇದೇ ನಿವೇಶನಕ್ಕೆ ಕರೆಸಿ ವಿವಿಧ ಕಾಮಗಾರಿಗಳ ಜೊತೆಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದರು. ಈ ವೇಳೆ ಜಿಲ್ಲಾಧಿಕಾರಿ ಡಾಕ್ಟರ್ ಕುಮಾರ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಸೇರಿದಂತೆ ಹಲವರು ಇದ್ದರು.
    1
    ಗೌರಿ ಗಣೇಶ ಹಬ್ಬಕೊಡುಗೆಯಾಗಿ ನಿವೇಶನ ನೀಡುತ್ತಿದ್ದೇವೆ: ಕೃಷಿ ಸಚಿವ ನರೇಂದ್ರಸ್ವಾಮಿ 
ಗೌರಿ ಗಣೇಶ ಹಬ್ಬ ಅಂಗವಾಗಿ ನಿಮ್ಮೆಲ್ಲರಿಗೂ  ಕೊಡುಗೆಯಾಗಿ ನಿವೇಶನ ನೀಡುತ್ತಿದ್ದೇವೆ ಎಂದು  ಕೃಷಿ ಸಚಿವ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ 33 ಎಕರೆ  ನಿವೇಶನದ ಆವರಣದಲ್ಲಿ  ನಗರಾಭಿವೃದ್ದಿ ಇಲಾಖೆ , ರಾಜೀವ್ ಗಾಂಧಿ ವಸತಿ ನಿಗಮ , ಜಿಲ್ಲಾಢಳಿತ, ಪುರಸಭೆ ವತಿಯಿಂದ ಆರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜಕೀಯ ವಿರೋಧವಿದ್ದರೂ ನಾನು ಅಂಜದೆ  ಛಲ ಬಿಡದೆ  ನಿವೇಶನ ಹಂಚಿಕೆ ಮಾಡುತ್ತಿದ್ದೇನೆ ಮುಂದಿನ ದಿನಗಳಲ್ಲಿ  ಮುಖ್ಯಮಂತ್ರಿ ಡಿ ಕೆ ಶಿವಕುಮಾರರನ್ನು  ಇದೇ ನಿವೇಶನಕ್ಕೆ ಕರೆಸಿ ವಿವಿಧ ಕಾಮಗಾರಿಗಳ ಜೊತೆಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದರು.
ಈ  ವೇಳೆ  ಜಿಲ್ಲಾಧಿಕಾರಿ ಡಾಕ್ಟರ್ ಕುಮಾರ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಸೇರಿದಂತೆ ಹಲವರು ಇದ್ದರು.
    user_ಸುಮಿತ್ರ‌ ಹೆಚ್‌ ಪಿ
    ಸುಮಿತ್ರ‌ ಹೆಚ್‌ ಪಿ
    ವರದಿಗಾರರು ಮಳವಳ್ಳಿ, ಮಂಡ್ಯ, ಕರ್ನಾಟಕ•
    3 hrs ago
  • All About,When any #Waqfland is made to desserted thereafter who will encroach *ಭಾರತ ನಲ್ಲಿ ವೈರಲ್*
    1
    All About,When any #Waqfland is made to desserted thereafter who will encroach 
*ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    3 hrs ago
  • ದಸರಾ ಮಾಡದಿದ್ದರೆ ಉಪವಾಸ ಸತ್ಯಾಗ್ರಹ : ಕಲಾವಿದ ಶಿವಶಂಕರ ಚೆಟ್ಟು ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಕಲಾವಿದ ಶಿವಶಂಕರ ಚೆಟ್ಟು ಮಾತನಾಡಿ ಈ ಬಾರಿ ಚಾಮರಾಜನಗರ ದಸರಾ ಮಹೋತ್ಸವ ನಡೆಸದಿದ್ದರೆ ಜಿಲ್ಲೆಯ ಕಲಾವಿದರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು.
    1
    ದಸರಾ ಮಾಡದಿದ್ದರೆ ಉಪವಾಸ ಸತ್ಯಾಗ್ರಹ : ಕಲಾವಿದ ಶಿವಶಂಕರ ಚೆಟ್ಟು

ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಕಲಾವಿದ ಶಿವಶಂಕರ ಚೆಟ್ಟು ಮಾತನಾಡಿ ಈ ಬಾರಿ ಚಾಮರಾಜನಗರ ದಸರಾ ಮಹೋತ್ಸವ ನಡೆಸದಿದ್ದರೆ ಜಿಲ್ಲೆಯ ಕಲಾವಿದರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು.
    user_ಚಾಮರಾಜನಗರ ಸುದ್ದಿ ಮನೆ
    ಚಾಮರಾಜನಗರ ಸುದ್ದಿ ಮನೆ
    ಪತ್ರಕರ್ತ ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.