ಸಾಂಸ್ಕೃತಿಕ ನೃತ್ಯ ವೈಭವದೊಂದಿಗೆ ನಡೆದ ಕೊಪ್ಪಳ ಜಿಲ್ಲಾ ಉತ್ಸವದ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನ JUDI NEWS | ಜಿಲ್ಲೆಯ ಸುದ್ದಿ ಕೊಪ್ಪಳ,: 19ನೇ ಬಾರಿಗೆ ನಗರದ ಸಾಹಿತ್ಯ ಭವನದಲ್ಲಿ ನಡೆದ ಕೊಪ್ಪಳ ಜಿಲ್ಲಾ ಉತ್ಸವದ ತಿಳುಗನ್ನಡ ಸಾಂಸ್ಕೃತಿಕ ಸಮ್ಮೇಳನದವನ್ನ ಶ್ರೀ ಬಿ ಎಸ್ ಪಾಟೀಲ್ ವಿಭಾಗೀಯ ನ್ಯಾಯಾಂಗ ಅಭಿಯೋಜಕರು ಬಳ್ಳಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪರಂಪರೆ ನಿರಂತರವಾಗಿ ರಾಜ್ಯದ ಭೂಪಟದಲ್ಲಿ ರಾರಾಜಿಸುತ್ತಿರಲಿ ನಾಗರಿಕರ ವೇದಿಕೆ ಸರ್ಕಾರದ ಅನುದಾನವನ್ನ ನಿರೀಕ್ಷಿಸದೆ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿರುವುದು ಅಭಿನಂದನೀಯ ಮಹೇಶ್ ಬಾಬು ಸುರ್ವೆ ಅವರ ತಂಡಕ್ಕೆ ಹೃತ್ಪೂರ್ವಕ ವಂದನೆಗಳು ಜಿಲ್ಲಾ ಉತ್ಸವವನ್ನು ನಿರಂತರ ಮಾಡುವುದಕ್ಕಾಗಿ ತಿಳಿಸಿ ಸ್ವಾಭಿಮಾನದ ಈ ಉತ್ಸವ ಜಿಲ್ಲೆಯ ಸಾಹಿತಿಗಳು ಕಲಾವಿದರು ಭಾಗವಹಿಸಿ ಯಶಸ್ವಿಯಾಗಿ ನಡೆಸಲಿ ಎಂದು ಶುಭ ಹಾರೈಸಿದರು 19ನೇ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನಕೆ ಚಾಲನೆ ನೀಡಿ ಮಾತನಾಡಿ, ಕೊಪ್ಪಳ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯು ಕೊಪ್ಪಳ ಉತ್ಸವ, ಇಟಗಿ ಉತ್ಸವ, ಅಂಜನಾದ್ರಿ ಉತ್ಸವ ಮಾಡುವ ಮೂಲಕ ಜಿಲ್ಲೆಯ ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದು, ಜನಪ್ರತಿನಿಧಿಗಳು ಈ ಕಾರ್ಯಕ್ಕೆ ಸ್ಪಂದಿಸಿ ಸಹಕಾರ ನೀಡಬೇಕು ಎಂದ ಅವರು, ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಮೂಲಕ ಉತ್ಸವದಲ್ಲಿ ಅವಕಾಶ ನೀಡಿದ್ದಾರೆ. ಅನೇಕ ಜಿಲ್ಲೆಯ ಕಲಾವಿದರಿಗೆ ಮಾಸಶನ ದೊರೆಯಲು ಈ ವೇದಿಕೆಗಳು ಸಹಕಾರಿಯಾಗಿವೆ ಎಂದರು. ಕನಕಗಿರಿ ಮತ್ತು ಆನೆಗುಂದಿಗೆ ಸರ್ಕಾರದ ಅನುದಾನವಿದ್ದರೂ ನಿರಂತರವಾಗಿ ಉತ್ಸವ ನಡೆದ ಉದಾಹರಣೆಗಳಿಲ್ಲ ಈ ನಿಟ್ಟಿನಲ್ಲಿ ಸರ್ಕಾರದ ಅನುದಾನ ಬರೆದಿದ್ದರು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಸ್ಥಳೀಯ ಸಂಪನ್ಮೂಲಗಳನ್ನು ಶೇಖರಿಸಿಕೊಂಡು ನಿರಂತರವಾಗಿ 22 ವರ್ಷ ಇಟಗಿ ಉತ್ಸವ 19 ವರ್ಷ ಕೊಪ್ಪಳ ಜಿಲ್ಲಾ ಉತ್ಸವವನ್ನು ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಕಾರ್ಯಕರ್ತರನ್ನ ಅಭಿನಂದಿಸಿದರು. ಖಾಸಗಿಯಾಗಿ ಉತ್ಸವಗಳನ್ನು ಆಚರಿಸುವ ಸಂಘ ಸಂಸ್ಥೆಗಳಿಗೆ ಸಚಿವರು ಮತ್ತು ಶಾಸಕರು ಪ್ರೋತ್ಸಾಹಿಸಬೇಕಿದೆ ಮತ್ತು ಸರ್ಕಾರದ ಅನುದಾನವನ್ನ ಬಿಡುಗಡೆಗೊಳಿಸಿ ಆರ್ಥಿಕವಾಗಿ ಬೆಂಬಲಿಸಬೇಕು ಎಂದು ಹೇಳಿದರು ಹಿರಿಯ ಚಲನಚಿತ್ರ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಡಾ. ಸಿದ್ದಯ್ಯ ಪುರಾಣಿಕರ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡಿದರು, ಜಿಲ್ಲೆಯ ನಿರ್ಮಾತ ಜೆ.ಹೆಚ್. ಪಾಟೇಲರ ಭಾವಚಿತ್ರಕ್ಕೆ ವಕೀಲರಾದ ಮಲ್ಲನಗೌಡ ಪಾಟೀಲ ಪುಷ್ಪ ಅರ್ಪಣೆ ಮಾಡಿದರು. ಜಿಲ್ಲಾ ಉತ್ಸವದ ಕವಿಗೋಷ್ಠಿ ನಡೆಸಲಾಯಿತು ಸುಮಾರು 25ಕ್ಕೂ ಹೆಚ್ಚು ಕವಿಗಳು ತಮ್ಮ ಕವನ ವಾಚನ ಮಾಡಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾ ತಂಡಗಳನ್ನು ಪ್ರಾಯೋಜಿಸಿತು. ಹೊಸಪೇಟೆಯ ಅಂಜಲಿ ಗಗನ ಮತ್ತು ತಂಡ, ಕಂಪ್ಲಿಯ ಸುನೀಲಕುಮಾರ ತಂಡ, ಕೊಪ್ಪಳದ ವಿದ್ಯಾ ಮಂಗಳೂರು ತಂಡದಿಂದ ಕರ್ನಾಟಕ ಸಾಂಸ್ಕೃತಿಕ ಪರಂಪರೆಯ ನೃತ್ಯ ವೈಭವದ ಸಮೂಹ ನೃತ್ಯ. ಅಂಜಲೀ ಭರತನಾಟ್ಯ ಕಲಾ ಕೇಂದ್ರದ ಸಂಡೂರು ಹುಲಿಗಿ ಹೊಸಪೇಟೆ ಕುರುಗೋಡು ತೋರಣಗಲ್ ಕೇಂದ್ರದ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ವೈಭವ ಪ್ರಸ್ತುತಪಡಿಸಲಾಯಿತು ಭಾಗ್ಯನಗರದ ದೀಕ್ಷಾ ಕಲಾಕೇಂದ್ರದ ಕಲಾವಿದರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶಿಸಲಾಯಿತು ರುಕ್ಮಿಣಿ ಸುರ್ವೆ ತಂಡದಿಂದ ಸಮೂಹ ನೃತ್ಯ, ಕೊಪ್ಪಳದ ಅಲ್ತಾಫ್ ಮತ್ತು ತಂಡದಿಂದ ಸಮೂಹ ನೃತ್ಯ, ರವಿ ಮತ್ತು ತಂಡದಿಂದ ನೃತ್ಯ ರೂಪಕ ನಟರಾಜ ಸಂಜು ತಂಡದಿಂದ ಸಮೂಹ ನೃತ್ಯ, ಅನುಷಾ ಆರ್ ಬೆಂಗಳೂರು ತಂಡದಿಂದ ಸಮೂಹ ನೃತ್ಯ ವಿಜಯ ಗವಿಮಠ ಇಲ್ಕಲ್ ತಂಡದಿಂದ ನೃತ್ಯರೂಪಕ ಎಸ್ ಎಸ್ ಮಠದ್ ಹುಬ್ಬಳ್ಳಿ ತಂಡದಿಂದ ಕರ್ನಾಟಕ ವೈಭವದ ನೃತ್ಯರೂಪಕ ಅಶ್ವಿನಿ ಕಂಪ್ಲಿ ತಂಡದಿಂದ ಸಮೂಹ ನೃತ್ಯ ಜ್ಯೋತಿ ಗಲಗಲಿ ಹುಬ್ಬಳ್ಳಿ, ತಂಡದಿಂದ ಜಾನಪದ ನೃತ್ಯ ಅಲ್ಲದೇ ಸ್ಥಳೀಯ ಹತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ನೆರದಿದ್ದ ಕಲಾಭಿಮಾನಿ ಮತ್ತು ಪ್ರೇಕ್ಷಕರ ಜನ ಮನರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವೇದಿಕೆ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ವಹಿಸಿದ್ದರು ಗೌರವಾಧ್ಯಕ್ಷ ಎಂ ಬಿ ಅಳವoಡಿ ಕಲ್ಯಾಣ ಕರ್ನಾಟಕ ಪತ್ರಕರ್ತರ ವೇದಿಕೆಯ ಸಂಚಾಲಕ ಶಿವು ನಿಡುಗುಂದಿ ಸೇಡಂ ರಂಗಕರ್ಮಿ ಸಿದ್ದಲಿಂಗಯ್ಯಸ್ವಾಮಿ ಸೇಡಂ ಸಂಸ್ಕೃತಿಕ ಕಾರ್ಯದರ್ಶಿ ಜಿಎಂ ಶಿವಪುರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಹಿರೇಮಠ, ನಾಗರಿಕದ ವೇದಿಕೆಯ ಹಿರಿಯ ಉಪಾಧ್ಯಕ್ಷ ಎಂಎಂ ಜನಾದ್ರಿ. ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಕೊಪ್ಪಳ ಜಿಲ್ಲಾ ನಾಗರಿಕದ ವೇದಿಕೆಯ ಅಧ್ಯಕ್ಷ ಮಹೇಶ್ ಬಾಬು ಸುರುವೇ ಸ್ವಾಗತಿಸಿ ಕಳೆದ 18 ವರ್ಷಗಳಿಂದ ನಡೆಸುತ್ತಿರುವ ಜಿಲ್ಲಾ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಆಗ್ರಹಿಸಿದರು. ಯಲಬುರ್ಗಾದ ಸರ್ಕಾರಿ ಅಭಿ ಯೋಜಕ ಶ್ರೀ ಮಲ್ಲು ಮಲ್ಲನಗೌಡ ಪಾಟೀಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ಜಿಎಂ ಶಿವಪುರ ವoದಿಸಿದರು...
ಸಾಂಸ್ಕೃತಿಕ ನೃತ್ಯ ವೈಭವದೊಂದಿಗೆ ನಡೆದ ಕೊಪ್ಪಳ ಜಿಲ್ಲಾ ಉತ್ಸವದ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನ JUDI NEWS | ಜಿಲ್ಲೆಯ ಸುದ್ದಿ ಕೊಪ್ಪಳ,: 19ನೇ ಬಾರಿಗೆ ನಗರದ ಸಾಹಿತ್ಯ ಭವನದಲ್ಲಿ ನಡೆದ ಕೊಪ್ಪಳ ಜಿಲ್ಲಾ ಉತ್ಸವದ ತಿಳುಗನ್ನಡ ಸಾಂಸ್ಕೃತಿಕ ಸಮ್ಮೇಳನದವನ್ನ ಶ್ರೀ ಬಿ ಎಸ್ ಪಾಟೀಲ್ ವಿಭಾಗೀಯ ನ್ಯಾಯಾಂಗ ಅಭಿಯೋಜಕರು ಬಳ್ಳಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪರಂಪರೆ ನಿರಂತರವಾಗಿ ರಾಜ್ಯದ ಭೂಪಟದಲ್ಲಿ ರಾರಾಜಿಸುತ್ತಿರಲಿ ನಾಗರಿಕರ ವೇದಿಕೆ ಸರ್ಕಾರದ ಅನುದಾನವನ್ನ ನಿರೀಕ್ಷಿಸದೆ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿರುವುದು ಅಭಿನಂದನೀಯ ಮಹೇಶ್ ಬಾಬು ಸುರ್ವೆ ಅವರ ತಂಡಕ್ಕೆ ಹೃತ್ಪೂರ್ವಕ ವಂದನೆಗಳು ಜಿಲ್ಲಾ ಉತ್ಸವವನ್ನು ನಿರಂತರ ಮಾಡುವುದಕ್ಕಾಗಿ ತಿಳಿಸಿ ಸ್ವಾಭಿಮಾನದ ಈ ಉತ್ಸವ ಜಿಲ್ಲೆಯ ಸಾಹಿತಿಗಳು ಕಲಾವಿದರು ಭಾಗವಹಿಸಿ ಯಶಸ್ವಿಯಾಗಿ ನಡೆಸಲಿ ಎಂದು ಶುಭ ಹಾರೈಸಿದರು 19ನೇ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನಕೆ ಚಾಲನೆ ನೀಡಿ ಮಾತನಾಡಿ, ಕೊಪ್ಪಳ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯು ಕೊಪ್ಪಳ ಉತ್ಸವ, ಇಟಗಿ ಉತ್ಸವ, ಅಂಜನಾದ್ರಿ ಉತ್ಸವ ಮಾಡುವ ಮೂಲಕ ಜಿಲ್ಲೆಯ ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದು, ಜನಪ್ರತಿನಿಧಿಗಳು ಈ ಕಾರ್ಯಕ್ಕೆ ಸ್ಪಂದಿಸಿ ಸಹಕಾರ ನೀಡಬೇಕು ಎಂದ ಅವರು, ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಮೂಲಕ ಉತ್ಸವದಲ್ಲಿ ಅವಕಾಶ ನೀಡಿದ್ದಾರೆ. ಅನೇಕ ಜಿಲ್ಲೆಯ ಕಲಾವಿದರಿಗೆ ಮಾಸಶನ ದೊರೆಯಲು ಈ ವೇದಿಕೆಗಳು ಸಹಕಾರಿಯಾಗಿವೆ ಎಂದರು. ಕನಕಗಿರಿ ಮತ್ತು ಆನೆಗುಂದಿಗೆ ಸರ್ಕಾರದ ಅನುದಾನವಿದ್ದರೂ ನಿರಂತರವಾಗಿ ಉತ್ಸವ ನಡೆದ ಉದಾಹರಣೆಗಳಿಲ್ಲ ಈ ನಿಟ್ಟಿನಲ್ಲಿ ಸರ್ಕಾರದ ಅನುದಾನ ಬರೆದಿದ್ದರು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಸ್ಥಳೀಯ ಸಂಪನ್ಮೂಲಗಳನ್ನು ಶೇಖರಿಸಿಕೊಂಡು ನಿರಂತರವಾಗಿ 22 ವರ್ಷ ಇಟಗಿ ಉತ್ಸವ 19 ವರ್ಷ ಕೊಪ್ಪಳ ಜಿಲ್ಲಾ ಉತ್ಸವವನ್ನು ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಕಾರ್ಯಕರ್ತರನ್ನ ಅಭಿನಂದಿಸಿದರು. ಖಾಸಗಿಯಾಗಿ ಉತ್ಸವಗಳನ್ನು ಆಚರಿಸುವ ಸಂಘ ಸಂಸ್ಥೆಗಳಿಗೆ ಸಚಿವರು ಮತ್ತು ಶಾಸಕರು ಪ್ರೋತ್ಸಾಹಿಸಬೇಕಿದೆ ಮತ್ತು ಸರ್ಕಾರದ ಅನುದಾನವನ್ನ ಬಿಡುಗಡೆಗೊಳಿಸಿ ಆರ್ಥಿಕವಾಗಿ ಬೆಂಬಲಿಸಬೇಕು ಎಂದು ಹೇಳಿದರು ಹಿರಿಯ ಚಲನಚಿತ್ರ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಡಾ. ಸಿದ್ದಯ್ಯ ಪುರಾಣಿಕರ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡಿದರು, ಜಿಲ್ಲೆಯ ನಿರ್ಮಾತ
ಜೆ.ಹೆಚ್. ಪಾಟೇಲರ ಭಾವಚಿತ್ರಕ್ಕೆ ವಕೀಲರಾದ ಮಲ್ಲನಗೌಡ ಪಾಟೀಲ ಪುಷ್ಪ ಅರ್ಪಣೆ ಮಾಡಿದರು. ಜಿಲ್ಲಾ ಉತ್ಸವದ ಕವಿಗೋಷ್ಠಿ ನಡೆಸಲಾಯಿತು ಸುಮಾರು 25ಕ್ಕೂ ಹೆಚ್ಚು ಕವಿಗಳು ತಮ್ಮ ಕವನ ವಾಚನ ಮಾಡಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾ ತಂಡಗಳನ್ನು ಪ್ರಾಯೋಜಿಸಿತು. ಹೊಸಪೇಟೆಯ ಅಂಜಲಿ ಗಗನ ಮತ್ತು ತಂಡ, ಕಂಪ್ಲಿಯ ಸುನೀಲಕುಮಾರ ತಂಡ, ಕೊಪ್ಪಳದ ವಿದ್ಯಾ ಮಂಗಳೂರು ತಂಡದಿಂದ ಕರ್ನಾಟಕ ಸಾಂಸ್ಕೃತಿಕ ಪರಂಪರೆಯ ನೃತ್ಯ ವೈಭವದ ಸಮೂಹ ನೃತ್ಯ. ಅಂಜಲೀ ಭರತನಾಟ್ಯ ಕಲಾ ಕೇಂದ್ರದ ಸಂಡೂರು ಹುಲಿಗಿ ಹೊಸಪೇಟೆ ಕುರುಗೋಡು ತೋರಣಗಲ್ ಕೇಂದ್ರದ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ವೈಭವ ಪ್ರಸ್ತುತಪಡಿಸಲಾಯಿತು ಭಾಗ್ಯನಗರದ ದೀಕ್ಷಾ ಕಲಾಕೇಂದ್ರದ ಕಲಾವಿದರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶಿಸಲಾಯಿತು ರುಕ್ಮಿಣಿ ಸುರ್ವೆ ತಂಡದಿಂದ ಸಮೂಹ ನೃತ್ಯ, ಕೊಪ್ಪಳದ ಅಲ್ತಾಫ್ ಮತ್ತು ತಂಡದಿಂದ ಸಮೂಹ ನೃತ್ಯ, ರವಿ ಮತ್ತು ತಂಡದಿಂದ ನೃತ್ಯ ರೂಪಕ ನಟರಾಜ ಸಂಜು ತಂಡದಿಂದ ಸಮೂಹ ನೃತ್ಯ, ಅನುಷಾ ಆರ್ ಬೆಂಗಳೂರು ತಂಡದಿಂದ ಸಮೂಹ ನೃತ್ಯ ವಿಜಯ ಗವಿಮಠ ಇಲ್ಕಲ್ ತಂಡದಿಂದ ನೃತ್ಯರೂಪಕ ಎಸ್ ಎಸ್ ಮಠದ್ ಹುಬ್ಬಳ್ಳಿ ತಂಡದಿಂದ ಕರ್ನಾಟಕ ವೈಭವದ ನೃತ್ಯರೂಪಕ ಅಶ್ವಿನಿ ಕಂಪ್ಲಿ ತಂಡದಿಂದ ಸಮೂಹ ನೃತ್ಯ ಜ್ಯೋತಿ ಗಲಗಲಿ ಹುಬ್ಬಳ್ಳಿ, ತಂಡದಿಂದ ಜಾನಪದ ನೃತ್ಯ ಅಲ್ಲದೇ ಸ್ಥಳೀಯ ಹತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ನೆರದಿದ್ದ ಕಲಾಭಿಮಾನಿ ಮತ್ತು ಪ್ರೇಕ್ಷಕರ ಜನ ಮನರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವೇದಿಕೆ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ವಹಿಸಿದ್ದರು ಗೌರವಾಧ್ಯಕ್ಷ ಎಂ ಬಿ ಅಳವoಡಿ ಕಲ್ಯಾಣ ಕರ್ನಾಟಕ ಪತ್ರಕರ್ತರ ವೇದಿಕೆಯ ಸಂಚಾಲಕ ಶಿವು ನಿಡುಗುಂದಿ ಸೇಡಂ ರಂಗಕರ್ಮಿ ಸಿದ್ದಲಿಂಗಯ್ಯಸ್ವಾಮಿ ಸೇಡಂ ಸಂಸ್ಕೃತಿಕ ಕಾರ್ಯದರ್ಶಿ ಜಿಎಂ ಶಿವಪುರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಹಿರೇಮಠ, ನಾಗರಿಕದ ವೇದಿಕೆಯ ಹಿರಿಯ ಉಪಾಧ್ಯಕ್ಷ ಎಂಎಂ ಜನಾದ್ರಿ. ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಕೊಪ್ಪಳ ಜಿಲ್ಲಾ ನಾಗರಿಕದ ವೇದಿಕೆಯ ಅಧ್ಯಕ್ಷ ಮಹೇಶ್ ಬಾಬು ಸುರುವೇ ಸ್ವಾಗತಿಸಿ ಕಳೆದ 18 ವರ್ಷಗಳಿಂದ ನಡೆಸುತ್ತಿರುವ ಜಿಲ್ಲಾ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಆಗ್ರಹಿಸಿದರು. ಯಲಬುರ್ಗಾದ ಸರ್ಕಾರಿ ಅಭಿ ಯೋಜಕ ಶ್ರೀ ಮಲ್ಲು ಮಲ್ಲನಗೌಡ ಪಾಟೀಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ಜಿಎಂ ಶಿವಪುರ ವoದಿಸಿದರು...
- ಮುಂಡರಗಿ ತಾಲೂಕಿನ ಸರ್ಕಾರಿ ತಾಲೂಕು ಆಸ್ಪತ್ರೆ ಕುರಿತು ಡಿ ಎಚ್ಚ ಒ ಅವರನ್ನು ಪ್ರಶ್ನೆ ಗದಗ್ ಜಿಲ್ಲಾ ಮುಂಡರಗಿ ತಾಲೂಕಿನ ತರಕಾರಿ ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಪ್ಯಾನ ವ್ಯವಸ್ಥೆ ಇಲ್ಲದೆ ಜಳದಿಂದ ರೋಗಿಗಳ ಪರದಾಟ ಬಟ್ಟೆಯಿಂದ ಗಾಳಿ ಪಡೆದುಕೊಳ್ಳುವ ರೋಗಿಗಳ ಕುರಿತು ಸಿಗರೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ1
- ಬಳ್ಳಾರಿ ನಗರದಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಬಳ್ಳಾರಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಈ ಕುರಿತು ಬಳ್ಳಾರಿ ಎಸ್ಪಿ ಸುಮನ್ ಡಿ.ಪನ್ನೇಕರ್ ಅವರಿಂದ ಸುದ್ದಿಗೋಷ್ಠಿ ಕೌಲ್ಬಜಾರ್ ಕರಿಮಾರೆಮ್ಮ ದೇವಸ್ಥಾನದ ನಿವಾಸಿ ಹನುಮಂತಪ್ಪ ಎಂಬ (28) ಮನೆಗಳ್ಳನ ಬಂಧನ ಇವನು ಬಳ್ಳಾರಿ, ವಿಜಯನಗರ, ದಾವಣಗೇರಿ,ಕೊಪ್ಪಳ, ದೊಡ್ಡ ಬಳ್ಳಾಪುರ,ಬೆಂಗಳೂರು ಹಾಗೂ ಗದಗನಲ್ಲಿ ಕಳ್ಳತನ ರಾಡ್ ಬಳಸಿ ಮನೆಗಳ್ಳತ ಮಾಡುತ್ತಿದ್ದ ಆರೋಪಿ ಹನುಮಂತ.... ಕಳ್ಳತನ ಮಾಡಿದ ಮಾಲನ್ನು ವಿವಿಧ ಶಾಪ್ಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಆರೋಪಿಯನ್ನು ವಶಕ್ಕೆ ಪಡೆದು ಬಂಗಾರದ ಒಡವೆ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ ಒಟ್ಟು ನಾಲ್ಕು ಕೇಸ್ಗಳಲ್ಲಿ ಆರೋಪಿಯಿಂದ 13,20,000 ಮೌಲ್ಯದ 110 ಗ್ರಾಂ ಬಂಗಾರ ಹಾಗೂ 10 ಲಕ್ಷ ನಗದು ವಶ ಆರೋಪಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಹೊರಗಿದ್ರು, ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಇವನ ವಿರುದ್ದ ರಾಜ್ಯದಾದ್ಯಂತ ಒಟ್ಟು 9 ಜಿಲ್ಲೆಗಳಲ್ಲಿ 40 ಪ್ರಕರಣಗಳು ಬೆಳಕಿಗೆ ಬಂದಿದೆ. -----------------1
- ಸರ್ವಸ್ವವನ್ನು ಮೆಟ್ಟಿ ನಿಲ್ಲುವಂತ ಶಕ್ತಿ ಮಹಿಳೆಗೆ ಇದೆ:- ಡಾ ಹೀರಾ ಕುಷ್ಟಗಿ:- ಹೆಣ್ಣನ್ನು ಹೆಣ್ಣಾಗಿ ನೋಡುವದಕ್ಕಿಂತ ಹೆಣ್ಣನ್ನು ಒಬ್ಬ ಸರಿ ಸಮಾನವಾದ ಮನುಷ್ಯರಂತೆ ನೋಡಬೇಕು ಹೆಣ್ಣಿಗೆ ಈ ಜಗತ್ತನ್ನು ಗೆಲ್ಲುವ ಶಕ್ತಿ ಒಬ್ಬ ಮಹಿಳೆಗೆ ಇದ್ದು ಹೆಣ್ಣು ಏನಾನ್ನಾದರು ಸಾಧಿಸಬಲ್ಲಳು ಅದಕ್ಕಾಗಿ ಬಿ.ಎ ಪದವಿಯಲ್ಲಿ ಓದುತ್ತಿರುವ ಮಹಿಳೆಯರು ಹೆಚ್ಚು ಅಂಕ ತೆಗೆಯುವ ಮೂಲಕ ಒಳ್ಳೆಯ ಅಭ್ಯಾಸವನ್ನು ಮಾಡಿ ತಂದೆ ತಾಯಿಗಳ ಕೀರ್ತಿ ಮತ್ತು ಕಾಲೇಜಿನ ಕೀರ್ತಿ ಗಳಿಸಬೇಕು ಎಂದು ಡಾ.ನಾಗರಾಜ ಹೀರಾ ಜಿಲ್ಲಾ ನೋಡಲ್ ಅಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಇವರು ಹೇಳಿದರು. ಇಲ್ಲಿನ ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಆನರ್ಸ್ ಎಂಬುವದು ಬಡವರು ಕಲಿಯುವ ವಿದ್ಯಯಲ್ಲ ಆನಸ್೯ ಎಂದರೆ ಬದುಕುವ ಕಲೆ ಈ ಒಂದು ಶಿಕ್ಷಣ ಇಡೀ ಜಗತ್ತಿನ ಪ್ರಕ್ರಿಯೆಯಲ್ಲಿ ಬಿ.ಎ ಪದವಿ ಆನರ್ಸ್ ಶಿಕ್ಷಣವಾಗಿದೆ. ಆದರೆ ಇವತ್ತಿನ ಶಿಕ್ಷಣ ತಂತ್ರಜ್ಞಾನದ ಮೂಲಕ ನಾವುಗಳು ಶಿಕ್ಷಣ ಪಡೆಯಬೇಕಾಗಿದೆ. ಅದಕ್ಕಾಗಿ ನಿತ್ಯ ನಿರಂತರ ಶಿಕ್ಷಣ ಪಡೆದಾಗ ಮಾತ್ರ ನಾವುಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಹೆಣ್ಣು ಮಕ್ಕಳು ಎಂದರೆ ಒಂದು ಮಾಹಿತಿ ಕೇಂದ್ರವಿದ್ದಂತೆ ಆದರೆ ಇತಿಹಾಸದ ಪುಟಗಳಲ್ಲಿ ನಾವುಗಳು ನೋಡಿದಾಗ ಎಲ್ಲಾ ಪುಟಗಳಲ್ಲಿ ಹೆಣ್ಣು ಮೊದಲನೆಯ ಸ್ಥಾನದಲ್ಲಿ ಇದ್ದಾಳೆ.ಈ ಜಗತ್ತು ಸೃಷ್ಟಿಯಾಗಿದ್ದು ಹೆಣ್ಣಿನಿಂದ ಹೆಣ್ಣಿನಿಂದ ಮಾಹಾ ಭಾರತ, ಹೆಣ್ಣಿನಿಂದ ರಾಮಾಯಣ ಅದಕ್ಕಾಗಿ ಪ್ರತಿಯೊಬ್ಬರು ಯಾರು ಕೂಡ ಹೆದರದೆ ಉತ್ತಮ ಶಿಕ್ಷಣವಂತರಾಗಿ ಬಡವರಾದರೆ ಸರಿ ಶ್ರೀಮಂತರಾದರೆ ಸರಿ ಯಾರು ಯಾವ ಪದವಿ ಆಯ್ಕೆ ಮಾಡಿಕೊಳ್ಳುತ್ತಾರೆ ಅವರ ಮೇಲೆ ಆಲಂಬನೆ ಆಗಿರುತ್ತದೆ. ಇವತ್ತಿನ ದಿನಮಾನದಲ್ಲಿ ಚಲವದಿದ್ದರೆ ಈ ಜಗತ್ತಿನಲ್ಲಿ ಏನಾದರೂ ಸಾಧಿಸಬಹುದು ಸಾಧನೆ ಸಾಲಿನಲ್ಲಿ ನಿಂತು ಈ ಕಾಲೇಜಿನ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣದ ಮೂಲಕ ಅಂಕವನ್ನು ಪಡೆದು ಕಾಲೇಜಿನ ಕೀರ್ತಿ ತರುವ ಮೂಲಕ ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ ಬಾಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ.ಪ.ಪೂ.ಕಾಲೇಜು ದೋಟಿಹಾಳ ಉಪನ್ಯಾಸಕಿ ಶ್ರೀಮತಿ ಪ್ರಿಯದರ್ಶಿನಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಪ್ರಥಮ ದರ್ಜೆಯ ಗುತ್ತಿಗೆದಾರ ರಮೇಶ ಕಾಪ್ಸೆ ಕಾರ್ಯಕ್ರಮ ಉದ್ಘಾಟಿಸಿದರು. ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ ಕಾಲೇಜು ಅಧ್ಯಕ್ಷರಾದ ಹನಮಂತಪ್ಪ ಚೌಡ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಸಿದ್ರಾಮಪ್ಪ ವಂದಾಲಿ, ಮಾಜಿ ಪಿ ಕಾಡ್೯ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ಸೂರ್ಯಕಾಂತ ದೇಸಾಯಿ, ಮಾ.ಹೊ.ಮ.ಪ.ಕಲಾ ಕಾಲೇಜು ಪ್ರಾಂಶುಪಾಲರಾದ ತಿಪ್ಪಣ್ಣ ಬಿಜಕಲ್, ದ್ಯಾಮಣ್ಣ ಕಟ್ಟಿಹೊಲ, ಸತ್ಯಪ್ಪ ರಾಜೂರು, ಎ.ವಾಯ್.ಲೋಕರೆ, ಕ.ಕಾ.ನಿ.ಪತ್ರಕರ್ತರ ಸಂಘದ ಅಧ್ಯಕ್ಷರಾದ ಪವಾಡೆಪ್ಪ ಚೌಡ್ಕಿ, ಮಂಜುನಾಥ ಮಾಹಾಲಿಂಗಪೂರ, ಮುಖೇಶ ನಿಲೋಗಲ್, ಶಶಿಧರ ಕುಂಬಾರ, ಸಂಗಮೇಶ ಬಿಳಿಯಪ್ಪನವರ್, ಸುಂದರಕುಮಾರ ಚೌಡ್ಕಿ ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಹಲವರು ಉಪಸ್ಥಿತರಿದ್ದರು.2
- ಕಾಕಿ ತೊಟ್ಟ ತಕ್ಷಣ ಎಲ್ಲವನ್ನು ಅಳಬಹುದು ಎಂಬ ಮುಟ್ಟಾಳತನಕ್ಕೆ ಏನನ್ನಬೇಕು? ಹಿರಿಯ ನಾಗರಿಕ ಅನ್ನುವ ವಿವೇಚನೆ ಇಲ್ಲದೆ ಕೈ ಮಾಡಿದ ಇಲ್ಲೊಬ್ಬ ಭ್ರಷ್ಟ ನೋಡಿ!?1
- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮನವಿ ಕೂಡ್ಲಿಗಿ: ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಂಗಳವಾರ ತಹಶೀಲ್ದಾರ್ ವಿ.ಕೆ. ನೇತ್ರಾವತಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಸಮಿತಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಹಲವು ವರ್ಷಗಳಿಂದ ಮಕ್ಕಳ ಪೌಷ್ಟಿಕತೆ, ಆರೋಗ್ಯ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕಂತೆ ಗೌರವಧನ ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ಸರ್ಕಾರ ಕೂಡಲೇ ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ತಂದು, ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ಗೌರವಧನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಜೀವನೋಪಾಯಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಬಿ.ಎಲ್.ಓ. ಜವಾಬ್ದಾರಿ ಹೊರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಅಂಗನವಾಡಿ ಉದ್ಯೋಗಿಗಳಿಗೆ ನಿವೃತ್ತಿ ನಂತರದ ಜೀವನಕ್ಕೆ ಅನುಕೂಲವಾಗುವಂತೆ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿ, ಶೀಘ್ರವೇ ನ್ಯಾಯಯುತವಾಗಿ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷೆ ಕೆ ಪದ್ಮಾವತಿ, ತಾಲೂಕ್ ಅಧ್ಯಕ್ಷರು ಎನ್ ಸುಮಾ, ಉಪಾಧ್ಯಕ್ಷರಾದ ಕೆಎನ್ ಕವಿತಾ, ಪಾರ್ವತಮ್ಮ, ಪ್ರಧನ ಕಾರ್ಯದರ್ಶಿ ಎಚ್ ಅನ್ನಪೂರ್ಣ, ಸಹ ಕಾರ್ಯದರ್ಶಿ ಬಿ ಪದ್ಮಾವತಿ, ಓ ಕರಿಬಸಮ್ಮ, ಖಜಾಂಚಿ ಜಯಮಾಲ ಜೆ, ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ, ಸದಸ್ಯರಾದ ಬಿ ಶಿವಲೀಲಾ, ಜಿ ಗಾಯತ್ರಿ, ರೇಣುಕಮ್ಮ, ಎಚ್ಎಸ್ ಚಂದ್ರಮ್ಮ, ಎಬಿ ಬಸಮ್ಮ, ಓ ಸುಜಾತ, ಸುಮಲತಾ, ಬಿ ರೇಖಾ, ದ್ಯಾಮಕ್ಕ, ಸಿ.ಬಿ ಅನುಸೂಯ ಸೇರಿದಂತೆ ತಾಲೂಕಿನ ಅಂಗನವಾಡಿ ಕಾರ್ಯಕರ್ತರು, ಸಹಾಯಕರು ಉಪಸಿದ್ಧರಿದ್ದರು.1
- ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ *ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಆ 25ರಂದು ಪಟ್ಟಣದಲ್ಲಿ , (AITUC) ಕರ್ನಾಟಕ ರಾಜ್ಯವ ಅಂಗನವಾಡಿ ಕಾರ್ತಕರ್ತೆಯರು , ಮತ್ತು ಸಹಾಯಕಿಯರ ಪೆಡರೇಷನ್ ಕಾರ್ಯಕರ್ತೆಯರು. ತಮ್ಮ ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ , ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ , AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು. ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ , ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಮುಖಂಡ ಹೆಚ್. ವೀರಣ್ಣ ನೇತೃತ್ವದಲ್ಲಿ , ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ನೀಡಿದರು. ಹೆಚ್.ವೀರಣ್ಣ ಹಾಗೂ ತಾಲೂಕಾಧ್ಯಕ್ಷರಾದ , ಎನ್ ಸುಮಾ ಮಾತನಾಡಿದರು. ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ , ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರಿಗೆ ಹಾಗೂ ಸಿಡಿಪಿಒ ಮಾಲುಂಬೀರವರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. ತಾಲೂಕು ಪದಾಧಿಕಾರಿಗಳಾದ ಕೆ. ಪದ್ಮಾವತಿ , ಕೆ.ಹೆಚ್.ಕವಿತಾ , ಬಿ.ಪಾರ್ವತಮ್ಮ , ಹೆಚ್.ಅನ್ನಪೂರ್ಣ , ಜಿ.ಪದ್ಮಾವತಿ , ಓ. ಕರಿವಸಮ್ಮ , ಜೆ.ಜಯಮಾಲ , ಮೀನಾಕ್ಷಿ , ಶಿವಲೀಲಾ , ಗಾಯತ್ರಿ , ರೇಣುಕಮ್ಮ , ಚಂದ್ರಮ್ಮ , ಬಸಮ್ಮ , ಸುಜಾತ , ಸುಮಲತಾ , ರೇಣುಕಾ , ದ್ಯಾಮಕ್ಕ , ಅನಸೂಯ ಸೇರಿದಂತೆ. ಪಟ್ಟಣ ಸೇರಿದಂತೆ , ತಾಲೂಕಿನ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ದಲಿತ ವಿರೋಧಿ ಜನಾರ್ಧನರೆಡ್ಡಿಗೆ ಧಿಕ್ಕಾರ ಧಿಕ್ಕಾರ ಎಂದು ಕೂಗಿದ ಬಳ್ಳಾರಿ ಜನತೆ, ವಾಲ್ಮೀಕಿ ಸಮುದಾಯವನ್ನು ವಿರೋಧಿಸಿದ ಶ್ರೀರಾಮುಲು ವಿರುದ್ಧ ಬಳ್ಳಾರಿಯಲ್ಲಿ ಕಾಗ್ರೇಸ್ ಅಭಿಮಾನಿಗಳು ಭಾರಿ ಶಕ್ತಿ ಪ್ರದರ್ಶನ ದಲಿತ ವಿರೋಧಿ ಜನಾರ್ಧನರೆಡ್ಡಿಗೆ ಧಿಕ್ಕಾರ ಧಿಕ್ಕಾರ ಎಂದು ಕೂಗಿದ ಬಳ್ಳಾರಿ ಜನತೆ, ವಾಲ್ಮೀಕಿ ಸಮುದಾಯವನ್ನು ವಿರೋಧಿಸಿದ ಶ್ರೀರಾಮುಲು ವಿರುದ್ಧ ಬಳ್ಳಾರಿಯಲ್ಲಿ ಕಾಗ್ರೇಸ್ ಅಭಿಮಾನಿಗಳು ಭಾರಿ ಶಕ್ತಿ ಪ್ರದರ್ಶನ1
- ಮೋಡ ಬಿತ್ತನೆ ಬಿಡಿ, ರೈತರ ಖಾತೆಗೆ ನೇರ ₹50 ಸಾವಿರ ಹಾಕಿ!' – ಸರ್ಕಾರಕ್ಕೆ ಮುಂಡರಗಿಯಲ್ಲಿ ಆಗ್ರಹ ಮೋಡ ಬಿತ್ತನೆ ಬಿಡಿ, ರೈತರ ಖಾತೆಗೆ ನೇರ ₹50 ಸಾವಿರ ಹಾಕಿ!' – ಸರ್ಕಾರಕ್ಕೆ ಮುಂಡರಗಿಯಲ್ಲಿ ಆಗ್ರಹ ಮುಂಡರಗಿ: "ಕೃತಕ ಮಳೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ಪೋಲು ಮಾಡುವುದನ್ನು ತಕ್ಷಣವೇ ನಿಲ್ಲಿಸಿ, ಬರಗಾಲದಿಂದ ಕಂಗೆಟ್ಟಿರುವ ಪ್ರತಿ ರೈತನ ಬ್ಯಾಂಕ್ ಖಾತೆಗೆ ನೇರವಾಗಿ 50 ಸಾವಿರ ರೂಪಾಯಿ ಪರಿಹಾರ ಧನ ಜಮೆ ಮಾಡಿ!" ಹೀಗಂತ ಸರ್ಕಾರಕ್ಕೆ ಖಡಕ್ ಆಗ್ರಹ ಮುಹೂರ್ತ ಇಟ್ಟಿದ್ದು ಮುಂಡರಗಿಯ ಬಿಜೆಪಿ ಯುವ ಮುಖಂಡ ದೇವಪ್ಪ ಇಟಗಿ. ಇಲ್ಲಿಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಯ ಪ್ರಮುಖ ಅಂಶಗಳು: 'ಮೂಗಿಗೆ ತುಪ್ಪ ಸವರುವ ಕೆಲಸ': ಮೋಡ ಬಿತ್ತನೆ ಯೋಜನೆ ಸಂಪೂರ್ಣ ನಿಷ್ಪ್ರಯೋಜಕ. ಕೋಟಿ ಕೋಟಿ ಹಣ ಸುರಿಯುವ ಈ ಪ್ರಕ್ರಿಯೆ ಕೇವಲ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ 'ಮೂಗಿಗೆ ತುಪ್ಪ ಸವರುವ ಕೆಲಸ'. ಇದರಿಂದ ಸಂಕಷ್ಟದಲ್ಲಿರುವ ರೈತರ ಹೊಟ್ಟೆ ತುಂಬುವುದಿಲ್ಲ. ಸಾಲದ ಸುಳಿಯಲ್ಲಿ ರೈತ: ಸರಿಯಾಗಿ ಮಳೆಯಾಗದೆ ಬೆಳೆ ಸಂಪೂರ್ಣ ನಾಶವಾಗಿದೆ. ರೈತರು ಸಾಲ-ಸೋಲ ಮಾಡಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಒಂದೆಡೆ ಭೀಕರ ಅಭಾವ, ಇನ್ನೊಂದೆಡೆ ಸಾಲಗಾರರ ಕಾಟದಿಂದ ರೈತರು ಬದುಕು ಕಳೆದುಕೊಳ್ಳುವಂತಾಗಿದೆ. ನೇರ ಹಣ ರವಾನೆಗೆ ಒತ್ತಾಯ: ತಾಂತ್ರಿಕವಾಗಿ ಯಶಸ್ಸಿನ ಖಾತರಿ ಇಲ್ಲದ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವ್ಯರ್ಥ ಮಾಡುವ ಬದಲು, ಆ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಿ ಅವರ ರಕ್ಷಣೆಗೆ ಸರ್ಕಾರ ಧಾವಿಸಬೇಕು.1