logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೊಳ್ಳೇಗಾಲ. ತಾಲ್ಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್.ಎಸ್‌.ಎಲ್.ಸಿ ವಿದ್ಯಾರ್ಥಿಗಳಿಗೆ ಪಠ್ಯ ಸಾಮಾಗ್ರಿಗಳನ್ನು ಎಂಎಲ್ಸಿ ಡಾ.ತಿಮ್ಮಯ್ಯರವರ ಅಭಿಮಾನಿ ಮುಳ್ಳೂರು ಮಂಜುನಾಥ್ ಅವರು ವಿತರಣೆ ಮಾಡಿದರು. ಶಾಲೆಯ 41 ಎಸ್.ಎಸ್.ಎಲ್.ಸಿ ಮಕ್ಕಳಿಗೆ ಸಾಮಾಗ್ರಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಅವರು ವಿತರಿಸಿ, ಪ್ರತಿವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆಯಲಿ ಎಂದು ಉತ್ತೇಜನ ನೀಡುತ್ತಾ ಬರುತ್ತಿರುವ ಮುಖಂಡ ಮಂಜುನಾಥ್ ರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಜುನಾಥ್ ಮಾತನಾಡಿ, ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲಿ ಎಂದು ನಮ್ಮ ನಾಯಕರು ತಿಮ್ಮಯ್ಯ ರವರ ಹೆಸರಿನಲ್ಲಿ ನನ್ನ ಕೈಲಾದ ಸಹಾಯ ಮಾಡುತ್ತಾ ಬಂದಿದ್ದೇನೆ. ಮಕ್ಕಳು ಉತ್ತಮವಾಗಿ ಪರೀಕ್ಷೆ ಬರೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಶಿಕ್ಷಣವಲಯದ ಇಸಿಒ ನಾಗರಾಜ್, ಶಿಕ್ಷಕರು ಮುರುಗನ್, ಶಿವರಾಜ್, ಸತೀಶ್, ಮಮತ, ರಾಜೇಶ್ವರಿ ಹಾಗೂ ಸಹ ಶಿಕ್ಷಕರು ಇದ್ದರು..

on 13 March
user_ಎನ್. ನಟರಾಜ್
ಎನ್. ನಟರಾಜ್
Kollegal, Chamarajanagara•
on 13 March
ca757d8a-1e84-4d6c-822b-8482ae4ad6cc

ಕೊಳ್ಳೇಗಾಲ. ತಾಲ್ಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್.ಎಸ್‌.ಎಲ್.ಸಿ ವಿದ್ಯಾರ್ಥಿಗಳಿಗೆ ಪಠ್ಯ ಸಾಮಾಗ್ರಿಗಳನ್ನು ಎಂಎಲ್ಸಿ ಡಾ.ತಿಮ್ಮಯ್ಯರವರ ಅಭಿಮಾನಿ ಮುಳ್ಳೂರು ಮಂಜುನಾಥ್ ಅವರು ವಿತರಣೆ ಮಾಡಿದರು. ಶಾಲೆಯ 41 ಎಸ್.ಎಸ್.ಎಲ್.ಸಿ ಮಕ್ಕಳಿಗೆ ಸಾಮಾಗ್ರಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಅವರು ವಿತರಿಸಿ, ಪ್ರತಿವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆಯಲಿ ಎಂದು ಉತ್ತೇಜನ ನೀಡುತ್ತಾ ಬರುತ್ತಿರುವ ಮುಖಂಡ ಮಂಜುನಾಥ್ ರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಜುನಾಥ್ ಮಾತನಾಡಿ, ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲಿ ಎಂದು ನಮ್ಮ ನಾಯಕರು ತಿಮ್ಮಯ್ಯ ರವರ ಹೆಸರಿನಲ್ಲಿ ನನ್ನ ಕೈಲಾದ ಸಹಾಯ ಮಾಡುತ್ತಾ ಬಂದಿದ್ದೇನೆ. ಮಕ್ಕಳು ಉತ್ತಮವಾಗಿ ಪರೀಕ್ಷೆ ಬರೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಶಿಕ್ಷಣವಲಯದ ಇಸಿಒ ನಾಗರಾಜ್, ಶಿಕ್ಷಕರು ಮುರುಗನ್, ಶಿವರಾಜ್, ಸತೀಶ್, ಮಮತ, ರಾಜೇಶ್ವರಿ ಹಾಗೂ ಸಹ ಶಿಕ್ಷಕರು ಇದ್ದರು..

More news from ಕರ್ನಾಟಕ and nearby areas
  • ​ಹನೂರು: ತಾಲ್ಲೂಕಿನ ರೈತರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹನೂರು ಶಾಖೆ) ವತಿಯಿಂದ ಇಂದು (ದಿನಾಂಕ: 15-04-2026) ಬೆಳಿಗ್ಗೆ 10 ಗಂಟೆಗೆ ಹನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ​ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಹಾಗೂ ಮೌನವಾಗಿರುವ ಅಧಿಕಾರಿಗಳನ್ನು ಎಚ್ಚರಿಸಲು ಈ 'ಬೃಹತ್ ಚಳುವಳಿ'ಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಮುಂದಿಡಲಾಗಿದೆ: ​ಜಲಮೂಲಗಳ ಸಂರಕ್ಷಣೆ: ಗುಂಡಾಲ್ ಜಲಾಶಯದಿಂದ ಹನೂರು ತಾಲ್ಲೂಕಿನ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ​ಅಧಿಕಾರಿಗಳ ನಿರ್ಲಕ್ಷ್ಯ: ತಹಶೀಲ್ದಾರ್ ಕಚೇರಿಯಲ್ಲಿನ ಅವ್ಯವಹಾರಗಳನ್ನು ತಡೆಗಟ್ಟಬೇಕು ಹಾಗೂ ಸಾಗುವಳಿ ಚೀಟಿ ವಿತರಣೆ, ಪೋಡಿ ವಿಳಂಬ ಮತ್ತು ರಸ್ತೆ ಸೌಕರ್ಯಗಳ ಬಗ್ಗೆ ಅಧಿಕಾರಿಗಳು ತೋರುತ್ತಿರುವ ಬೇಜವಾಬ್ದಾರಿಯನ್ನು ಖಂಡಿಸಲಾಗಿದೆ. ​ಮೂಲಸೌಕರ್ಯ: ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಗ್ರಾಮಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ​ಪಶುಸಂಗೋಪನೆ: ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿರುವ ಕುರಿ, ಮೇಕೆ ಹಾಗೂ ಜಾನುವಾರುಗಳಿಗೆ ಸೂಕ್ತ ಔಷಧ ಮತ್ತು ಚಿಕಿತ್ಸಾ ಸೌಲಭ್ಯ ಒದಗಿಸಬೇಕು. ​ವನ್ಯಜೀವಿ ಸಂಘರ್ಷ: ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ರೈತರ ಮೇಲೆ ನಡೆಯುತ್ತಿರುವ ಕಾಡುಪ್ರಾಣಿಗಳ ದಾಳಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ​ಯೋಜನೆಗಳ ಅನುಷ್ಠಾನ: ಉಡುತೊರೆಹಳ್ಳದ ನೀರಾವರಿ ಯೋಜನೆಯ ವಿಳಂಬ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ​"ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಈ ಹೋರಾಟ ಅನಿವಾರ್ಯವಾಗಿದೆ," ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ತಾಲ್ಲೂಕಿನ ಸಾವಿರಾರು ರೈತರು, ಯುವಜನರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದಾರೆ.
    4
    ​ಹನೂರು: ತಾಲ್ಲೂಕಿನ ರೈತರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹನೂರು ಶಾಖೆ) ವತಿಯಿಂದ ಇಂದು (ದಿನಾಂಕ: 15-04-2026) ಬೆಳಿಗ್ಗೆ 10 ಗಂಟೆಗೆ ಹನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.
​ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಹಾಗೂ ಮೌನವಾಗಿರುವ ಅಧಿಕಾರಿಗಳನ್ನು ಎಚ್ಚರಿಸಲು ಈ 'ಬೃಹತ್ ಚಳುವಳಿ'ಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಮುಂದಿಡಲಾಗಿದೆ:
​ಜಲಮೂಲಗಳ ಸಂರಕ್ಷಣೆ: ಗುಂಡಾಲ್ ಜಲಾಶಯದಿಂದ ಹನೂರು ತಾಲ್ಲೂಕಿನ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು.
​ಅಧಿಕಾರಿಗಳ ನಿರ್ಲಕ್ಷ್ಯ: ತಹಶೀಲ್ದಾರ್ ಕಚೇರಿಯಲ್ಲಿನ ಅವ್ಯವಹಾರಗಳನ್ನು ತಡೆಗಟ್ಟಬೇಕು ಹಾಗೂ ಸಾಗುವಳಿ ಚೀಟಿ ವಿತರಣೆ, ಪೋಡಿ ವಿಳಂಬ ಮತ್ತು ರಸ್ತೆ ಸೌಕರ್ಯಗಳ ಬಗ್ಗೆ ಅಧಿಕಾರಿಗಳು ತೋರುತ್ತಿರುವ ಬೇಜವಾಬ್ದಾರಿಯನ್ನು ಖಂಡಿಸಲಾಗಿದೆ.
​ಮೂಲಸೌಕರ್ಯ: ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಗ್ರಾಮಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.
​ಪಶುಸಂಗೋಪನೆ: ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿರುವ ಕುರಿ, ಮೇಕೆ ಹಾಗೂ ಜಾನುವಾರುಗಳಿಗೆ ಸೂಕ್ತ ಔಷಧ ಮತ್ತು ಚಿಕಿತ್ಸಾ ಸೌಲಭ್ಯ ಒದಗಿಸಬೇಕು.
​ವನ್ಯಜೀವಿ ಸಂಘರ್ಷ: ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ರೈತರ ಮೇಲೆ ನಡೆಯುತ್ತಿರುವ ಕಾಡುಪ್ರಾಣಿಗಳ ದಾಳಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು.
​ಯೋಜನೆಗಳ ಅನುಷ್ಠಾನ: ಉಡುತೊರೆಹಳ್ಳದ ನೀರಾವರಿ ಯೋಜನೆಯ ವಿಳಂಬ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.
​"ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಈ ಹೋರಾಟ ಅನಿವಾರ್ಯವಾಗಿದೆ," ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ತಾಲ್ಲೂಕಿನ ಸಾವಿರಾರು ರೈತರು, ಯುವಜನರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದಾರೆ.
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    13 hrs ago
  • ಹನೂರು :ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿ ಆವರಣದಲ್ಲಿ 135 ನೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನ ಆಚರಣೆ ಮಾಡಲಾಯಿತು. ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮಗೆ ಮಾಲಾರ್ಪಣೆ ಮಾಡಿ, ನಂತರ ಪ್ರಮುಖ ಬೀದಿಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನ ಮೆರವಣಿಗೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸೆಸ್ಕ್ ಕಚೇರಿಯ ಸಿಬ್ಬಂದಿಗಳು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಇದೇ ಸಂದರ್ಭದಲ್ಲಿ aee ರಂಗಸ್ವಾಮಿ, ae ಆನಂದ್ ಕುಮಾರ್, ಜೈ ಗಳು,ಲೈನ್ ಮ್ಯಾನಗಳು ಸೇರಿದಂತೆ ಕಚೇರಿಯ ಸಿಬ್ಬಂದಿಗಳು ಇದ್ದರು.
    3
    ಹನೂರು :ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿ ಆವರಣದಲ್ಲಿ 135 ನೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನ ಆಚರಣೆ ಮಾಡಲಾಯಿತು.
ಇದಕ್ಕೂ ಮುನ್ನ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮಗೆ ಮಾಲಾರ್ಪಣೆ ಮಾಡಿ, ನಂತರ ಪ್ರಮುಖ ಬೀದಿಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನ ಮೆರವಣಿಗೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸೆಸ್ಕ್ ಕಚೇರಿಯ ಸಿಬ್ಬಂದಿಗಳು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಇದೇ ಸಂದರ್ಭದಲ್ಲಿ aee ರಂಗಸ್ವಾಮಿ, ae ಆನಂದ್ ಕುಮಾರ್, ಜೈ ಗಳು,ಲೈನ್ ಮ್ಯಾನಗಳು ಸೇರಿದಂತೆ ಕಚೇರಿಯ ಸಿಬ್ಬಂದಿಗಳು ಇದ್ದರು.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    13 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    13 hrs ago
  • ಮೈಸೂರಿನಲ್ಲಿ ಅದ್ಧೂರಿಯಾಗಿ ಡಾ ಅಂಬೇಡ್ಕರ್ ಜಯಂತಿ ಆಚರಣೆ
    1
    ಮೈಸೂರಿನಲ್ಲಿ ಅದ್ಧೂರಿಯಾಗಿ ಡಾ ಅಂಬೇಡ್ಕರ್ ಜಯಂತಿ ಆಚರಣೆ
    user_ಸೈಯದ್ ಅತೀಕ್
    ಸೈಯದ್ ಅತೀಕ್
    Social Media Manager ಮೈಸೂರು, ಮೈಸೂರು, ಕರ್ನಾಟಕ•
    17 hrs ago
  • ಬೆಂಗಳೂರು ಏರ್ಪೋರ್ಟ್‌ನಿಂದ ಹುಬ್ಬಳ್ಳಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಎಲ್ಸಿ ನಾಜಿರ್ ಅಹಮದ್ ರಾಜ್ಯ ರಾಜಕಾರಣದ ಪ್ರಚಲಿತ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಶಾಸಕರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ದಾವಣಗೆರೆ ಉಪಚುನಾವಣೆ ಹಾಗೂ ಮುಸ್ಲಿಂ ಮುಖಂಡರ ನಡುವಿನ ಭಿನ್ನಾಭಿಪ್ರಾಯದ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದೆ ಎಂದು ಹೇಳಿದರು. ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
    1
    ಬೆಂಗಳೂರು ಏರ್ಪೋರ್ಟ್‌ನಿಂದ ಹುಬ್ಬಳ್ಳಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಎಲ್ಸಿ ನಾಜಿರ್ ಅಹಮದ್ ರಾಜ್ಯ ರಾಜಕಾರಣದ ಪ್ರಚಲಿತ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಶಾಸಕರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ದಾವಣಗೆರೆ ಉಪಚುನಾವಣೆ ಹಾಗೂ ಮುಸ್ಲಿಂ ಮುಖಂಡರ ನಡುವಿನ ಭಿನ್ನಾಭಿಪ್ರಾಯದ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದೆ ಎಂದು ಹೇಳಿದರು. ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    11 hrs ago
  • ನೆಲಮಂಗಲದಲ್ಲಿ ಬಾಲಕಿಯ ಬಾಲ್ಯವಿವಾಹಕ್ಕೆ ಯತ್ನ! 17 ವರ್ಷದ ಬಾಲಕಿಯ ಬಲವಂತ ವಿವಾಹಕ್ಕೆ ತಡೆ ನೆಲಮಂಗಲ ಕವಾಡಿಮಠದ ವೀರಭದ್ರೇಶ್ವರದಲ್ಲಿ ಕಲ್ಯಾಣ ಮಂಟಪದಲ್ಲಿ ಘಟನೆ ಮಧ್ಯರಾತ್ರಿ 1098 ಮಕ್ಕಳ ಸಹಾಯವಾಣಿಗೆ ಕರೆಮಾಡಿ ಮಾಹಿತಿ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳ ದಾಳಿ, ಪರಿಶೀಲನೆ ಬಾಲಕಿ ದಾಖಲೆ ಪರಿಶೀಲನೆ ವೇಳೆ ಅಪ್ರಾಪ್ತತೆ ಎಂದು ಬಹಿರಂಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡದಿಂದ ಕಾರ್ಯಾಚರಣೆ ನೆಲಮಂಗಲ ಟೌನ್ ಪೊಲೀಸರ ಸಹಾಯದಲ್ಲಿ ದಾಳಿ 18 ವರ್ಷದ ಒಳಗಿನ ಬಾಲಕಿ ಆದ್ದರಿಂದ ಬಾಲ್ಯ ವಿವಾಹವೆಂದು ಪರಿಗಣಿಸಿ ಪ್ರಕರಣ ಮಧ್ಯರಾತ್ರಿ 3 ಗಂಟೆಗೆ ದಾಳಿ ನಡೆಸಿ ಬಾಲಕಿ ರಕ್ಷಣೆ ತಾಯಿಯೊಂದಿಗೆ ಸುರಕ್ಷಿತ ಸ್ಥಳಕ್ಕೆ ಬಾಲಕಿ ಸ್ಥಳಾಂತರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲು ಕ್ರಮ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು.
    4
    ನೆಲಮಂಗಲದಲ್ಲಿ ಬಾಲಕಿಯ ಬಾಲ್ಯವಿವಾಹಕ್ಕೆ ಯತ್ನ!
17 ವರ್ಷದ ಬಾಲಕಿಯ ಬಲವಂತ ವಿವಾಹಕ್ಕೆ ತಡೆ
ನೆಲಮಂಗಲ ಕವಾಡಿಮಠದ ವೀರಭದ್ರೇಶ್ವರದಲ್ಲಿ ಕಲ್ಯಾಣ ಮಂಟಪದಲ್ಲಿ ಘಟನೆ
ಮಧ್ಯರಾತ್ರಿ 1098 ಮಕ್ಕಳ ಸಹಾಯವಾಣಿಗೆ ಕರೆಮಾಡಿ ಮಾಹಿತಿ
ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳ ದಾಳಿ, ಪರಿಶೀಲನೆ
ಬಾಲಕಿ ದಾಖಲೆ ಪರಿಶೀಲನೆ ವೇಳೆ ಅಪ್ರಾಪ್ತತೆ ಎಂದು ಬಹಿರಂಗ
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡದಿಂದ ಕಾರ್ಯಾಚರಣೆ
ನೆಲಮಂಗಲ ಟೌನ್ ಪೊಲೀಸರ ಸಹಾಯದಲ್ಲಿ ದಾಳಿ 
18 ವರ್ಷದ ಒಳಗಿನ ಬಾಲಕಿ ಆದ್ದರಿಂದ ಬಾಲ್ಯ ವಿವಾಹವೆಂದು ಪರಿಗಣಿಸಿ ಪ್ರಕರಣ
ಮಧ್ಯರಾತ್ರಿ 3 ಗಂಟೆಗೆ  ದಾಳಿ ನಡೆಸಿ ಬಾಲಕಿ ರಕ್ಷಣೆ
ತಾಯಿಯೊಂದಿಗೆ ಸುರಕ್ಷಿತ ಸ್ಥಳಕ್ಕೆ ಬಾಲಕಿ ಸ್ಥಳಾಂತರ
ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲು ಕ್ರಮ
ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    6 hrs ago
  • ಹನೂರು ಪಟ್ಟಣದ ಪಶು ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹನೂರು ತಾಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಹನಿಹನಿ ನೀರಿಗೂ ಹಾಹಾಕಾರ ಉಂಟಾಗಿದೆ. 153 ದಿನಗಳ ಅಹೋರಾತ್ರಿ ಧರಣಿಯಲ್ಲಿ ಸಮರ್ಪಕ ಕುಡಿಯುವ ನೀರು, ನೀವು ಪೂರೈಕೆ ಮಾಡುವಂತೆ ಪ್ರತಿಭಟನೆ ಮಾಡಲಾಗಿತ್ತು. ಪ್ರತಿ ಮನುಷ್ಯನಿಗೆ ಸರ್ಕಾರ 70 ಲೀಟರ್ ನೀರು, ಪೂರೈಕೆ ಮಾಡಬೇಕು ಎಂಬ ನಿಯಮವಿದೆ ಆದರೆ ಗ್ರಾಮ ಪಂಚಾಯಿತಿ 7 ಲೀಟರ್ ಸಹ ನೀರು ನೀಡುತ್ತಿಲ್ಲ ಎಂದರು. ಇದಲ್ಲದೆ ಕಳೆದ ಹಲವಾರು ವರ್ಷಗಳಿಂದ ಸಮರ್ಪಕ ಮಳೆಯಾಗದೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ ಆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಹನೂರು ತಾಲೂಕು ವ್ಯಾಪ್ತಿಯಲ್ಲಿ ರೈತರು ವ್ಯವಸಾಯದ ಜೊತೆಗೆ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಒಂದು ಲೋಡ್ ಮೇವು ಖರೀದಿಸಲು ಹದಿನೈದು ಸಾವಿರ ಖರ್ಚಾಗುತ್ತಿದೆ. ಈಗಾಗಲೇ ಸಾಲದ ಸುಳಿಗೆ ಸಿಲುಕಿರುವ ರೈತ ಇಷ್ಟು ಹಣ ನೀಡಿ ಯಾವ ರೀತಿ ಮೇವು ಖರೀದಿಸಲು ಸಾಧ್ಯ ಈ ಕೂಡಲೇ ಜಿಲ್ಲಾಡಳಿತ ಗೋಶಾಲೆಗಳನ್ನು ತೆರೆದು ಹಸುಗಳಿಗೆ ಮೇವು ಪೂರೈಕೆ ಮಾಡಬೇಕು ಇದಲ್ಲದೆ ಇಲಾಖೆ ಹಸುಗಳಿಗೆ ರೈತರಿಗೆ ನೇರವಾಗಿ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ : ಕಳೆದ ಹಲವಾರು ವರ್ಷಗಳಿಂದ ಹನೂರು ತಾಲೂಕು ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗಿದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿಸುವ ನಿಟ್ಟಿನಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ. ಸಮರ್ಪಕ ಮಳೆಯಾಗದಿರುವ ಬಗ್ಗೆ ಹಾಗೂ ಮೇವಿನ ಕೊರತೆ ಇರುವ ಬಗ್ಗೆ ಅಧಿಕಾರಿಗಳು ಸರ್ಕಾರದ ಗಮನಕ್ಕೆ ಸಾರದೆ ಇರುವುದರಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಇದಲ್ಲದೆ ಈ ಸಂಬಂಧ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪವಾಗಿಲ್ಲ, ಈ ಕೂಡಲೇ ಸರ್ಕಾರ ಹನೂರು ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಹೆಚ್ಚಿನ ಅನುದಾನ ನೀಡಿ ಸಮರ್ಪಕ ಮೇವು ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದರು. ಮಾಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಈ ಸ್ವತ್ತು ನೀಡುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಸಮಸ್ಯೆಯನ್ನು ಬಗೆಹರಿಸಬೇಕು. ಹನೂರು ತಾಲೂಕು ವ್ಯಾಪ್ತಿಯಲ್ಲಿ ಪಹಣಿಗಳಿಗೆ ಪ್ರತ್ಯೇಕ ಪೋಡು ಮಾಡದೇ ಇರುವುದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಈ ನಿಟ್ಟಿನಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ವರದಿ ನೀಡಬೇಕು : ಸರ್ಕಾರದ 42 ಇಲಾಖೆಗಳಿಂದ ಸಾರ್ವಜನಿಕರಿಗೆ ಸರ್ಕಾರದಿಂದ ಯಾವೆಲ್ಲ ಸೌಲಭ್ಯಗಳು ಸಿಗುತ್ತಿದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಈಗಾಗಲೇ ಎಲ್ಲ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಪ್ರತಿಭಟನೆಯ ದಿನ ಎಲ್ಲಾ ಇಲಾಖೆಯ ಅಧಿಕಾರಿಗಳು ತಾವೇ ಖುದ್ದು ಹಾಜರಾಗಿ ಮಾಹಿತಿ ನೀಡಬೇಕು ಎಂದರು. ಸಭೆಯಲ್ಲಿ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ಎಂ ಈ ಬಸವರಾಜು ವಸಂತ್ ಕುಮಾರ್,ಪುಟ್ಟಸ್ವಾಮಿ,ಡೇವಿಡ್ ಸಾಗಾಯರಾಜ್ , ಲಾರೆನ್ಸ್ ರಾಜಸ್ವಾಮಿ ವಲ್ಲಬದಾಸ್ ಸಂದನಮೇರಿ, ಜೆಸಿಂತಾ ಹಾಜರಿದ್ದರು.
    4
    ಹನೂರು ಪಟ್ಟಣದ ಪಶು ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹನೂರು ತಾಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಹನಿಹನಿ ನೀರಿಗೂ ಹಾಹಾಕಾರ ಉಂಟಾಗಿದೆ. 153 ದಿನಗಳ ಅಹೋರಾತ್ರಿ ಧರಣಿಯಲ್ಲಿ ಸಮರ್ಪಕ ಕುಡಿಯುವ ನೀರು, ನೀವು ಪೂರೈಕೆ ಮಾಡುವಂತೆ ಪ್ರತಿಭಟನೆ ಮಾಡಲಾಗಿತ್ತು. ಪ್ರತಿ ಮನುಷ್ಯನಿಗೆ ಸರ್ಕಾರ 70 ಲೀಟರ್ ನೀರು, ಪೂರೈಕೆ ಮಾಡಬೇಕು ಎಂಬ ನಿಯಮವಿದೆ ಆದರೆ ಗ್ರಾಮ ಪಂಚಾಯಿತಿ 7 ಲೀಟರ್ ಸಹ ನೀರು ನೀಡುತ್ತಿಲ್ಲ ಎಂದರು. ಇದಲ್ಲದೆ ಕಳೆದ ಹಲವಾರು ವರ್ಷಗಳಿಂದ ಸಮರ್ಪಕ ಮಳೆಯಾಗದೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ ಆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಹನೂರು ತಾಲೂಕು ವ್ಯಾಪ್ತಿಯಲ್ಲಿ ರೈತರು ವ್ಯವಸಾಯದ ಜೊತೆಗೆ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಒಂದು ಲೋಡ್ ಮೇವು ಖರೀದಿಸಲು ಹದಿನೈದು ಸಾವಿರ ಖರ್ಚಾಗುತ್ತಿದೆ. ಈಗಾಗಲೇ ಸಾಲದ ಸುಳಿಗೆ ಸಿಲುಕಿರುವ ರೈತ ಇಷ್ಟು ಹಣ ನೀಡಿ ಯಾವ ರೀತಿ ಮೇವು ಖರೀದಿಸಲು ಸಾಧ್ಯ ಈ ಕೂಡಲೇ ಜಿಲ್ಲಾಡಳಿತ ಗೋಶಾಲೆಗಳನ್ನು ತೆರೆದು ಹಸುಗಳಿಗೆ ಮೇವು ಪೂರೈಕೆ ಮಾಡಬೇಕು ಇದಲ್ಲದೆ ಇಲಾಖೆ ಹಸುಗಳಿಗೆ ರೈತರಿಗೆ ನೇರವಾಗಿ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ : ಕಳೆದ ಹಲವಾರು ವರ್ಷಗಳಿಂದ ಹನೂರು ತಾಲೂಕು ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗಿದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿಸುವ ನಿಟ್ಟಿನಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ. ಸಮರ್ಪಕ ಮಳೆಯಾಗದಿರುವ ಬಗ್ಗೆ ಹಾಗೂ ಮೇವಿನ ಕೊರತೆ ಇರುವ ಬಗ್ಗೆ ಅಧಿಕಾರಿಗಳು ಸರ್ಕಾರದ ಗಮನಕ್ಕೆ ಸಾರದೆ ಇರುವುದರಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಇದಲ್ಲದೆ ಈ ಸಂಬಂಧ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪವಾಗಿಲ್ಲ, ಈ ಕೂಡಲೇ ಸರ್ಕಾರ ಹನೂರು ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಹೆಚ್ಚಿನ ಅನುದಾನ ನೀಡಿ ಸಮರ್ಪಕ ಮೇವು ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದರು.
ಮಾಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಈ ಸ್ವತ್ತು ನೀಡುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಸಮಸ್ಯೆಯನ್ನು ಬಗೆಹರಿಸಬೇಕು. ಹನೂರು ತಾಲೂಕು ವ್ಯಾಪ್ತಿಯಲ್ಲಿ ಪಹಣಿಗಳಿಗೆ ಪ್ರತ್ಯೇಕ ಪೋಡು ಮಾಡದೇ ಇರುವುದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಈ ನಿಟ್ಟಿನಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ವರದಿ ನೀಡಬೇಕು : ಸರ್ಕಾರದ 42 ಇಲಾಖೆಗಳಿಂದ ಸಾರ್ವಜನಿಕರಿಗೆ ಸರ್ಕಾರದಿಂದ ಯಾವೆಲ್ಲ ಸೌಲಭ್ಯಗಳು ಸಿಗುತ್ತಿದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಈಗಾಗಲೇ ಎಲ್ಲ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಪ್ರತಿಭಟನೆಯ ದಿನ ಎಲ್ಲಾ ಇಲಾಖೆಯ ಅಧಿಕಾರಿಗಳು ತಾವೇ ಖುದ್ದು ಹಾಜರಾಗಿ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ಎಂ ಈ ಬಸವರಾಜು ವಸಂತ್ ಕುಮಾರ್,ಪುಟ್ಟಸ್ವಾಮಿ,ಡೇವಿಡ್ ಸಾಗಾಯರಾಜ್ , ಲಾರೆನ್ಸ್ ರಾಜಸ್ವಾಮಿ ವಲ್ಲಬದಾಸ್ ಸಂದನಮೇರಿ, ಜೆಸಿಂತಾ ಹಾಜರಿದ್ದರು.
    user_Vijay kumar
    Vijay kumar
    ಚಾಮರಾಜನಗರ, ಚಾಮರಾಜನಗರ, ಕರ್ನಾಟಕ•
    13 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    15 hrs ago
  • ಮೈಸೂರು ನಾ ನರಸಿಂಹರಾಜ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಡಾ ಅಂಬೇಡ್ಕರ್ ಜಯಂತಿ ಆಚರಣೆ
    1
    ಮೈಸೂರು ನಾ  ನರಸಿಂಹರಾಜ  ಕ್ಷೇತ್ರದಲ್ಲಿ ಅದ್ಧೂರಿಯಾಗಿ ಡಾ ಅಂಬೇಡ್ಕರ್ ಜಯಂತಿ ಆಚರಣೆ
    user_ಸೈಯದ್ ಅತೀಕ್
    ಸೈಯದ್ ಅತೀಕ್
    Social Media Manager ಮೈಸೂರು, ಮೈಸೂರು, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.