logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅದ್ದೂರುಯಾಗಿ ನಡೆದ ರೇಣುಕಾ ಎಲ್ಲಮ್ಮ ದೇವಿ ಹೂವಿನ ಕರಗ ಮಹೋತ್ಸವ ಶಿಡ್ಲಘಟ್ಟ : ತಾಲ್ಲೂಕಿನ ಸಾದಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂದರ್ಲಹಳ್ಳಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮದೇವಿಯ ಐತಿಹಾಸಿಕ ಹೂವಿನ ಕರಗ ಮಹೋತ್ಸವವು ಬುಧವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಬಂದರ್ಲಹಳ್ಳಿ, ಕಾಮನಹಳ್ಳಿ,ಕೋಟಗಲ್, ಚಿನ್ನಂಪಳ್ಳಿ ಗ್ರಾಮಗಳಲ್ಲಿ ಕರಗ ಹೊತ್ತಿ ನಡೆದರು ಇನ್ನೂ ದೇವಾಲಯದ ಬಳಿ ಕರಗದ ಪ್ರಯುಕ್ತ ವಾದ್ಯಗೋಷ್ಠಿ ಆಯೋಜಿಸಲಾಗಿತ್ತು. ಚಿಕ್ಕಬಳ್ಳಾಪುರ ದಿನ್ನೇ ಹೊಸಹಳ್ಳಿ ಮಧು ರಾತ್ರಿಯಿಡೀ ಕರಗವನ್ನು ಹೊತ್ತು ತಮಟೆಯ ವಾದನ ತಂಡದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಿ, ಆರತಿ ಬೆಳಗುತ್ತಿದ್ದರು. ಕೆಲವೆಡೆ ಕರಗದ ಆಗಮನಕ್ಕಾಗಿ ರಸ್ತೆಯ ಮೇಲೆಲ್ಲಾ ರಂಗೋಲಿಯನ್ನು ಬಿಡಿಸಲಾಗಿತ್ತು. ರಸ್ತೆಯನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವೀರಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು. ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗುರುವಾರ ಒನಕೆ ಕರಗ ಮತ್ತು ಅಗ್ನಿಕುಂಡವನ್ನು ದೇವಸ್ಥಾನದ ಬಳಿ ನಡೆಸಲಾಯಿತು ಶ್ರೀ ರೇಣುಕಾ ಎಲ್ಲಮ್ಮ ಹೂವಿನ ಕರಗಕ್ಕೆ ಬೈರಸಂದ್ರ ಬಿ.ಸಿ ಸೀನಪ್ಪ,ಕಾಂಗ್ರೆಸ್ ಮುಖಂಡ ಪುಟ್ಟು ಅಂಜಿನಪ್ಪ ಮತ್ತು ನಿವೃತ್ತ ಸೈನಿಕ ರಾಘವೇಂದ್ರ ಶರ್ಮ ಚಾಲನೆ ನೀಡಿದರು ಊರಿನ ಗ್ರಾಮಸ್ಥರು ಮತ್ತು ಮುಖಂಡರು ಹಾಜರಿದ್ದರು.

1 day ago
user_Shiva Sadali
Shiva Sadali
Local News Reporter ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
1 day ago
a0e2a141-231e-49e2-b70b-05ae61e38f3e

ಅದ್ದೂರುಯಾಗಿ ನಡೆದ ರೇಣುಕಾ ಎಲ್ಲಮ್ಮ ದೇವಿ ಹೂವಿನ ಕರಗ ಮಹೋತ್ಸವ ಶಿಡ್ಲಘಟ್ಟ : ತಾಲ್ಲೂಕಿನ ಸಾದಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂದರ್ಲಹಳ್ಳಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮದೇವಿಯ ಐತಿಹಾಸಿಕ ಹೂವಿನ ಕರಗ ಮಹೋತ್ಸವವು ಬುಧವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಬಂದರ್ಲಹಳ್ಳಿ, ಕಾಮನಹಳ್ಳಿ,ಕೋಟಗಲ್, ಚಿನ್ನಂಪಳ್ಳಿ ಗ್ರಾಮಗಳಲ್ಲಿ ಕರಗ ಹೊತ್ತಿ ನಡೆದರು ಇನ್ನೂ ದೇವಾಲಯದ ಬಳಿ ಕರಗದ ಪ್ರಯುಕ್ತ ವಾದ್ಯಗೋಷ್ಠಿ ಆಯೋಜಿಸಲಾಗಿತ್ತು. ಚಿಕ್ಕಬಳ್ಳಾಪುರ ದಿನ್ನೇ ಹೊಸಹಳ್ಳಿ ಮಧು ರಾತ್ರಿಯಿಡೀ ಕರಗವನ್ನು ಹೊತ್ತು ತಮಟೆಯ ವಾದನ ತಂಡದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಿ, ಆರತಿ ಬೆಳಗುತ್ತಿದ್ದರು. ಕೆಲವೆಡೆ ಕರಗದ ಆಗಮನಕ್ಕಾಗಿ ರಸ್ತೆಯ ಮೇಲೆಲ್ಲಾ ರಂಗೋಲಿಯನ್ನು ಬಿಡಿಸಲಾಗಿತ್ತು. ರಸ್ತೆಯನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವೀರಕುಮಾರರು ಅಲಗು

ab6343ed-6df9-48ef-825d-9e3384230b4e

ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು. ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗುರುವಾರ ಒನಕೆ ಕರಗ ಮತ್ತು ಅಗ್ನಿಕುಂಡವನ್ನು ದೇವಸ್ಥಾನದ ಬಳಿ ನಡೆಸಲಾಯಿತು ಶ್ರೀ ರೇಣುಕಾ ಎಲ್ಲಮ್ಮ ಹೂವಿನ ಕರಗಕ್ಕೆ ಬೈರಸಂದ್ರ ಬಿ.ಸಿ ಸೀನಪ್ಪ,ಕಾಂಗ್ರೆಸ್ ಮುಖಂಡ ಪುಟ್ಟು ಅಂಜಿನಪ್ಪ ಮತ್ತು ನಿವೃತ್ತ ಸೈನಿಕ ರಾಘವೇಂದ್ರ ಶರ್ಮ ಚಾಲನೆ ನೀಡಿದರು ಊರಿನ ಗ್ರಾಮಸ್ಥರು ಮತ್ತು ಮುಖಂಡರು ಹಾಜರಿದ್ದರು.

More news from ಕರ್ನಾಟಕ and nearby areas
  • ನೆಲಮಂಗಲ ಬೆಂಕಿ ಪೊಟ್ಟಣಕ್ಕಾಗಿ ಬಾರ್ ಸಪ್ಲೈಯರ್ ಗೆ ಚಾಕು ಇರಿದಿದ್ದ ಪ್ರಕರಣ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯ ಬಂಧನ ಕಳೆದ ಏ.11 ರಂದು ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆಯಲ್ಲಿ ನಡೆದಿದ್ದ ಘಟನೆ ಸಪ್ತಗಿರಿ ಬಾರ್ ನಲ್ಲಿ ಮ್ಯಾಚ್ ಬಾಕ್ಸ್ ತಡವಾಗಿ ನೀಡಿದಕ್ಕೆ ಗಲಾಟೆ ಆರೋಪಿ ಪಾವಗಡದ ಮೊಹಮ್ಮದ್ ಸುಫಿಯಾನ್ (20) ಧಾರವಾಡದ ಮೂಲದ ಬಾರ್ ಸಫ್ಲೈಯರ್ ಸಂಜುಗೆ ಚಾಕು ಇರಿತ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸದ್ಯ ಆರೋಪಿಯನ್ನ ಬಂಧಿಸಿರುವ ದಾಬಾಸ್ ಪೇಟೆ ಪೊಲೀಸರು ಆರೋಪಿ ಮೊಹಮ್ಮದ್ ಪರಪ್ಪನ ಅಗ್ರಹಾರಕ್ಕೆ ಅಟ್ಟಿರೋ ಪೊಲೀಸರು.
    2
    ನೆಲಮಂಗಲ
ಬೆಂಕಿ ಪೊಟ್ಟಣಕ್ಕಾಗಿ ಬಾರ್ ಸಪ್ಲೈಯರ್ ಗೆ ಚಾಕು ಇರಿದಿದ್ದ ಪ್ರಕರಣ
ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯ ಬಂಧನ
ಕಳೆದ ಏ.11 ರಂದು ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆಯಲ್ಲಿ ನಡೆದಿದ್ದ ಘಟನೆ
ಸಪ್ತಗಿರಿ ಬಾರ್ ನಲ್ಲಿ ಮ್ಯಾಚ್ ಬಾಕ್ಸ್ ತಡವಾಗಿ ನೀಡಿದಕ್ಕೆ ಗಲಾಟೆ 
ಆರೋಪಿ ಪಾವಗಡದ ಮೊಹಮ್ಮದ್ ಸುಫಿಯಾನ್ (20) 
ಧಾರವಾಡದ ಮೂಲದ ಬಾರ್ ಸಫ್ಲೈಯರ್ ಸಂಜುಗೆ ಚಾಕು ಇರಿತ
ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ 
ಸದ್ಯ ಆರೋಪಿಯನ್ನ ಬಂಧಿಸಿರುವ ದಾಬಾಸ್ ಪೇಟೆ ಪೊಲೀಸರು
ಆರೋಪಿ ಮೊಹಮ್ಮದ್ ಪರಪ್ಪನ ಅಗ್ರಹಾರಕ್ಕೆ ಅಟ್ಟಿರೋ ಪೊಲೀಸರು.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    19 hrs ago
  • Post by Vv Vv
    1
    Post by Vv Vv
    user_Vv Vv
    Vv Vv
    Devanahalli, Bengaluru Rural•
    19 hrs ago
  • ಪವನ್ ಕಲ್ಯಾಣ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರಿಂದ ವಿಶೇಷ ಪೂಜೆ:- ಬಾಗೇಪಲ್ಲಿ:-ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಬಾಗೇಪಲ್ಲಿ ಅವರ ಅಭಿಮಾನಿಗಳು ಮತ್ತು ಜನಸೇನಾ ಕಾರ್ಯಕರ್ತರು ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪಟ್ಟಣದ ಪ್ರಸಿದ್ಧ ಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜನಸೇನಾ ಪಕ್ಷದ ಮುಖಂಡ ಹಾಗೂ ವಕೀಲರಾದ ನರಸಿಂಹ ಮೂರ್ತಿ ಮಾತನಾಡಿ ಪಟ್ಟಣದ ಜಡಲ ಭೈರವೇಶ್ವರ ದೇವಾಲಯದಲ್ಲಿ ಪವನ್ ಕಲ್ಯಾಣ್ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ತದನಂತರ ದೇವಾಲಯದ ಮುಂದೆ ತೆಂಗಿನಕಾಯಿ ಒಡೆದು ಪವನ್ ಕಲ್ಯಾಣ್ ಅವರು ಬೇಗನೇ ಚೇತರಿಸಿಕೊಂಡು ಸಕ್ರಿಯ ರಾಜಕೀಯಕ್ಕೆ ಮರಳಲಿ ಎಂದು ಅಭಿಮಾನಿಗಳು ಪಟ್ಟಣದ ಭೈರವೇಶ್ವರ ಹಾಗೂ ಆಂಜನೇಯ ಸ್ವಾಮಿ ದೇವಾಲಯಗಳು ಮತ್ತು ಇತರ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ದೀಪಾರಾಧನೆ ಮತ್ತು ಪ್ರಾರ್ಥನೆಗಳನ್ನು ಮಾಡಿದರು. ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು. ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಶನಿವಾರ ಸಂಜೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಅವರಿಗೆ 10 ದಿನಗಳ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ. ಎಂದು ಹೇಳಿದರು. ಸಭೆಯಲ್ಲಿದ್ದಾಗಲೇ ತೀವ್ರ ಅಸ್ವಸ್ಥ ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳೊಂದಿಗೆ ಆಡಳಿತ ಸಂಬಂಧಿತ ಸಭೆ ನಡೆಸುತ್ತಿದ್ದಾಗ ಪವನ್ ಕಲ್ಯಾಣ್ ಅವರು ಹಠಾತ್ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ನಂತರ ವೈದ್ಯರ ತಂಡವು ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಶಿಫಾರಸು ಮಾಡಿತು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ ಎಂದು ಹೇಳಿದರು. ಆದ್ದರಿಂದ ಇಂದು ಬಾಗೇಪಲ್ಲಿ ಪಟ್ಟಣದಲ್ಲಿ ಪವನ್ ಕಲ್ಯಾಣ್ ಬೇಗ ಗುಣಮುಖರಾಗಲೆಂದು ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮತ್ತು ಹೋಮಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಮೃತ ಕುಮಾರ್, ರಾಮು.ವಿ.ಅಜಯ್‌, ಮಂಜುನಾಥ್,ಅರುಣ್ ಕೆ.ಎನ್ ಹಾಗೂ ಸಾರ್ವಜನಿಕರು ಹಾಜರಿದ್ದರು.
    1
    ಪವನ್ ಕಲ್ಯಾಣ್ 
ಶೀಘ್ರವಾಗಿ ಗುಣಮುಖರಾಗಲಿ ಎಂದು  ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರಿಂದ ವಿಶೇಷ ಪೂಜೆ:-
ಬಾಗೇಪಲ್ಲಿ:-ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಬಾಗೇಪಲ್ಲಿ
ಅವರ ಅಭಿಮಾನಿಗಳು ಮತ್ತು ಜನಸೇನಾ ಕಾರ್ಯಕರ್ತರು ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು
ಪಟ್ಟಣದ ಪ್ರಸಿದ್ಧ ಭೈರವೇಶ್ವರ ದೇವಾಲಯದಲ್ಲಿ
ವಿಶೇಷ ಪೂಜೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ  ಜನಸೇನಾ ಪಕ್ಷದ ಮುಖಂಡ ಹಾಗೂ ವಕೀಲರಾದ ನರಸಿಂಹ ಮೂರ್ತಿ ಮಾತನಾಡಿ
ಪಟ್ಟಣದ ಜಡಲ ಭೈರವೇಶ್ವರ ದೇವಾಲಯದಲ್ಲಿ ಪವನ್ ಕಲ್ಯಾಣ್ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.
ತದನಂತರ ದೇವಾಲಯದ ಮುಂದೆ
ತೆಂಗಿನಕಾಯಿ ಒಡೆದು
ಪವನ್ ಕಲ್ಯಾಣ್ ಅವರು ಬೇಗನೇ ಚೇತರಿಸಿಕೊಂಡು ಸಕ್ರಿಯ ರಾಜಕೀಯಕ್ಕೆ ಮರಳಲಿ ಎಂದು ಅಭಿಮಾನಿಗಳು
ಪಟ್ಟಣದ ಭೈರವೇಶ್ವರ ಹಾಗೂ ಆಂಜನೇಯ ಸ್ವಾಮಿ ದೇವಾಲಯಗಳು ಮತ್ತು ಇತರ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ದೀಪಾರಾಧನೆ ಮತ್ತು ಪ್ರಾರ್ಥನೆಗಳನ್ನು ಮಾಡಿದರು.
ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ
ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ 
ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.
ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಶನಿವಾರ ಸಂಜೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಅವರಿಗೆ 10 ದಿನಗಳ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ.
ಎಂದು ಹೇಳಿದರು.
ಸಭೆಯಲ್ಲಿದ್ದಾಗಲೇ ತೀವ್ರ ಅಸ್ವಸ್ಥ
ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳೊಂದಿಗೆ ಆಡಳಿತ ಸಂಬಂಧಿತ ಸಭೆ ನಡೆಸುತ್ತಿದ್ದಾಗ ಪವನ್ ಕಲ್ಯಾಣ್ ಅವರು ಹಠಾತ್ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ನಂತರ ವೈದ್ಯರ ತಂಡವು ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಶಿಫಾರಸು ಮಾಡಿತು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ ಎಂದು ಹೇಳಿದರು. ಆದ್ದರಿಂದ ಇಂದು ಬಾಗೇಪಲ್ಲಿ ಪಟ್ಟಣದಲ್ಲಿ
ಪವನ್ ಕಲ್ಯಾಣ್ ಬೇಗ ಗುಣಮುಖರಾಗಲೆಂದು ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮತ್ತು ಹೋಮಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಮೃತ ಕುಮಾರ್, ರಾಮು.ವಿ.ಅಜಯ್‌,
ಮಂಜುನಾಥ್,ಅರುಣ್ ಕೆ.ಎನ್ ಹಾಗೂ ಸಾರ್ವಜನಿಕರು ಹಾಜರಿದ್ದರು.
    user_Gopala Reddy R N
    Gopala Reddy R N
    Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    34 min ago
  • ನಾರಿಶಕ್ತಿ ವಂದನಾ ಮಸೂದೆ ಮಂಡನೆ ವಿರುದ್ಧ ಮತ ಚಲಾಯಿಸಿದ ಕಾಂಗ್ರೇಸ್ ಮಿತ್ರ ಪಕ್ಷಗಳ ನಡೆ ಖಂಡಿಸಿ ಬೃಹತ್ ಪ್ರತಿಭಟನೆ
    1
    ನಾರಿಶಕ್ತಿ ವಂದನಾ ಮಸೂದೆ ಮಂಡನೆ ವಿರುದ್ಧ ಮತ ಚಲಾಯಿಸಿದ ಕಾಂಗ್ರೇಸ್ ಮಿತ್ರ ಪಕ್ಷಗಳ ನಡೆ ಖಂಡಿಸಿ
ಬೃಹತ್ ಪ್ರತಿಭಟನೆ
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    1 hr ago
  • Post by Chand Pasha
    1
    Post by Chand Pasha
    user_Chand Pasha
    Chand Pasha
    ಕೋಲಾರ, ಕೋಲಾರ, ಕರ್ನಾಟಕ•
    3 hrs ago
  • KOLAR KI.AWAAZ KOUSAR
    1
    KOLAR KI.AWAAZ KOUSAR
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop Kolar, Karnataka•
    6 hrs ago
  • ಬಿರಿಯಾನಿ–ಸೀರೆಗೆ ಜನರ ನೂಕುನುಗ್ಗಲು ಟೇಕಲ್ ಕಾರ್ಯಕ್ರಮದಲ್ಲಿ ಗೊಂದಲ, ನಿಯಂತ್ರಣಕ್ಕೆ ಹರಸಾಹಸ
    1
    ಬಿರಿಯಾನಿ–ಸೀರೆಗೆ ಜನರ ನೂಕುನುಗ್ಗಲು
ಟೇಕಲ್ ಕಾರ್ಯಕ್ರಮದಲ್ಲಿ ಗೊಂದಲ, ನಿಯಂತ್ರಣಕ್ಕೆ ಹರಸಾಹಸ
    user_Veega News Kannada
    Veega News Kannada
    Media company ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    43 min ago
  • ಮಹಿಳಾ ಮೀಸಲಾತಿ ವಿರೋಧದ ಆರೋಪ: ಕಾಂಗ್ರೆಸ್‌ ವಿರುದ್ಧ ಕೋಲಾರ BJP ಬೃಹತ್‌ ಪ್ರತಿಭಟನೆ
    1
    ಮಹಿಳಾ ಮೀಸಲಾತಿ ವಿರೋಧದ ಆರೋಪ: ಕಾಂಗ್ರೆಸ್‌ ವಿರುದ್ಧ ಕೋಲಾರ BJP ಬೃಹತ್‌ ಪ್ರತಿಭಟನೆ
    user_Rownak Ali khan
    Rownak Ali khan
    Local News Reporter ಕೋಲಾರ, ಕೋಲಾರ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.