ಜಿಲ್ಲಾಡಳಿತ ಭವನದಲ್ಲಿ ಆಗಸ್ಟ್ 28 ರಂದು ಶ್ರೀ ನುಲಿಯ ಚಂದಯ್ಯ ಜಯಂತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವತಿಯಿಂದ ಆಗಸ್ಟ್ 28 ರಂದು ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಮಧ್ಯಾಹ್ನ 12 ಗಂಟೆಗೆ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್. ತಂಗಡಗಿ, ಹೊಸಕೋಟೆ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್. ರವಿ, ಎನ್. ನೆಲಮಂಗಲ ಶಾಸಕ ಶ್ರೀನಿವಾಸ್, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್, ವಿಧಾನ ಪರಿಷತ್ ಸದಸ್ಯರಾದ ರಾಮೋಜಿ ಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ. ರಾಜಣ್ಣ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಾನೇಗೌಡ ಎಸ್ ಹೆಚ್, ದೇವನಹಳ್ಳಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ. ಜಗನ್ನಾಥ್, ಸರ್ಕಾರ ಕಾರ್ಯದರ್ಶಿ, ಆರ್ಥಿಕ ಇಲಾಖೆ ಹಾಗೂ ಆಡಳಿತಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಫಿ.ಸಿ ಜಾಫರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ದೇವನಹಳ್ಳಿ ಮಾಜಿ ಶಾಸಕ ಬಿ. ಚಂದ್ರಣ್ಣ, ದೇವನಹಳ್ಳಿ ತಾಲೂಕಿನ ಕೊರುಮ ಜನಾಂಗದ ಅಧ್ಯಕ್ಷ ಕೆ ನಾಗೇಶ್ ( ಎ.ಕೆ.ಪಿ), ಮಾಜಿ ಪುರಸಭೆ ಸದಸ್ಯರಾದ ಲೀಲಾವತಿ ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ.ಎನ್.ಅನುರಾಧ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಾಸಂತಿ ಅಮರ್.ಬಿ.ವಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಚಂದ್ರಕಾಂತ್.ಎಂ.ವಿ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕಲ್ಪನ ಆರ್. ದೇವನಹಳ್ಳಿ ತಾಲೂಕಿನ ತಹಶೀಲ್ದಾರ್ ಅನಿಲ್ ಕುಮಾರ್ ಹಾಗೂ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಎಲ್ಲಾ ನಾಮನಿರ್ದೇಶಿತ ಸದಸ್ಯರು ಎಲ್ಲಾ ಸಮುದಾಯದ ಮುಖಂಡರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

- ಮೊಳಕಾಲ್ಮುರು: ಭಗವಾನ್ ಶ್ರೀ ಜಿಹ್ವೇಶ್ವರ ಜಯಂತಿ ವಿಜೃಂಭಣೆಯಿಂದ ನೆರವೇರಿತು ಇಂದು ನಮ್ಮ ಸಮಾಜದ ಒಳತಿಗಾಗಿ ಆರ್ಥಿಕತೆ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿ ಹೊಂದಲು , ನಮ್ಮ ಒಗ್ಗಟ್ಟಿನ ಅನಿವಾರ್ಯತೆ ಇದೆ . ಶ್ರೀ ಜೀಹ್ವೇಶ್ವರ ಜಯಂತಿ ನಮ್ಮ ಧಾರ್ಮಿಕ ನೆಲೆ ಹಾಗೂ ಸಮಾಜದಲ್ಲಿ ಅಭಿವೃದ್ಧಿ ಗತಿ ಬಲಪಡಿಸುವ ಹಬ್ಬ.ವಾಗಿದೆ ಎಂದು ಪಟ್ಟಣದ ಸ್ವಕುಳಸಾಳಿ ಸಮಾಜ, ದುರ್ಗಾದೇವಿ ಮಹಿಳಾ ಮಂಡಳಿ, ಜಿಹ್ವೇಶ್ವರ ಯುವಕ ಸಂಘ ಸ್ವಕುಳಸಾಳಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೆಳಗಿನ ಈಶ್ವರ ದೇವಸ್ಥಾನ ಮಂಡಳಿ ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ್ ಜೀಹ್ವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸ್ವಕಳಸಾಳಿ ಸಮಾಜದ ಅಧ್ಯಕ್ಷರಾದ ನರೇಂದ್ರ ಗಾಯಕ್ವಾಡ್ ತಿಳಿಸಿದರು ಮಾತೇಯರಿಂದ ಗಂಗಾಪೂಜೆ, ಭಗವಾನ್ ಜೀಹ್ವೇಶ್ವರ ತೊಟ್ಟಿಲು ಪೂಜೆ, ಹಾಗೂ ಆಶೀರ್ವಾದ ಸ್ವೀಕಾರದ ಮೂಲಕ ದೈವಾನುಗ್ರಹ ಜರುಗಿತು ಭಕ್ತರು ಆಗಮಿಸಿ ಸಾಲು ಸರದಿಯಲ್ಲಿ ನಿಂತು ಭಗವಾನ್ ಜೀಹ್ವೇಶ್ವರ ಮತ್ತು ಪಾಂಡುರಂಗ ಸ್ವಾಮಿಯ ದರ್ಶನ ಪಡೆದರು ತದನಂತರ ಪಟ್ಟಣದ ಪಾಂಡುರಂಗ ದೇವಸ್ಥಾನದಿಂದ ಸ್ವಕುಳ ಸಾಳಿ ಸಮಾಜದ ಆರಾಧ್ಯ ದೈವ ಶ್ರೀ ಜಿಹ್ವೇಶ್ವರ ಜಯಂತಿ ಅಂಗವಾಗಿ ಭಕ್ತಿಪೂರ್ಣ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ಚಾಲನೆ ದೊರಕಿತು. ದೇವರ ಪಲ್ಲಕ್ಕಿ, ನಾದಸ್ವರ, ಡೊಳ್ಳುಕುಣಿತ, ಶ್ರದ್ಧಾವಂತ ಭಕ್ತರು ಮತ್ತು ಮಕ್ಕಳು ಭಾಗವಹಿಸಿದ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಎಲ್ಲೆಡೆ ಭಕ್ತಿಭಾವದ ಮೆರವಣಿಗೆಯಲ್ಲಿ ಯುವಕರ ಉತ್ಸಾಹ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಮಾತೇಯರು ಆರತಿ ಮತ್ತು ಕಳಸದೊಂದಿಗೆ ಆಗಮಿಸಿದ್ದು ವಿಶೇಷ ಗಮನಸೆಳೆದವು. ಮೆರವಣಿಗೆಯ ನಂತರ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನೂರಾರು ಭಕ್ತರಿಗೆ ಭಕ್ತಿಪೂರ್ವಕವಾಗಿ ಭೋಜನ ವಿತರಿಸಲಾಯಿತು. ಅನ್ನದಾಸೋಹದಲ್ಲಿ ಪಾಯಸ ಪಲಾವ್, ಮತ್ತು ಅನ್ನ ಮಜ್ಜಿಗೆ ಸಂಪೂರ್ಣ ಸತ್ಕಾರ ಸಮರ್ಪಕವಾಗಿ ನಡೆಯಿತು ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಕ್ಕಳು ಮಾತೆಯರು ಪುರುಷರು ಸಮಾಜದ ಬಂದು ಬಾಂಧವರು ಭಾಗವಹಿಸಿದ್ದರು1
- ಕೋಟೆ ನಾಡು ಚಿತ್ರದುರ್ಗದಲ್ಲಿ ರಾಕಿಂಗ್ ಸ್ಟಾರ್ ಯಶು ಅಭಿಮಾನಿಗಳ ಸಂಭ್ರಮ1
- ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ಪವಾಡ ಮತ್ತು ವೈವಿಧ್ಯತೆ ಇತಿಹಾಸದ ದಾಖಲೆ ಪುಟದಲ್ಲಿ ಸೇರಿದೆ. ಶಿರಾ : ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ಪವಾಡ ಮತ್ತು ವೈವಿಧ್ಯತೆ ಇತಿಹಾಸದ ದಾಖಲೆ ಪುಟದಲ್ಲಿ ಸೇರಿದೆ. ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ದೇವತಾ ಕಾರ್ಯಗಳಿಗೆ ಅತ್ಯಂತ ಉನ್ನತವಾದ ಸ್ಥಾನವಿದೆ. ಅನಾದಿ ಕಾಲದಿಂದಲೂ ಮಾನವನು ತನ್ನ ದೈನಂದಿನ ಜೀವನದ ಭಾಗವಾಗಿ ದೇವರನ್ನು ಆರಾಧಿಸುತ್ತಾ ಬಂದಿದ್ದಾನೆ. ದೇವತಾ ಕಾರ್ಯಗಳು ಎಂದರೆ ಕೇವಲ ಆಚರಣೆಗಳಲ್ಲ, ಅವು ಮಾನವನ ಮನಸ್ಸನ್ನು ಶುದ್ಧೀಕರಿಸುವ ಮತ್ತು ಸಮಾಜವನ್ನು ಒಟ್ಟಾಗಿ ಜೋಡಿಸುವ ಪವಿತ್ರ ವಿಧಿ ವಿಧಾನಗಳಾಗಿವೆ,ಧಾರ್ಮಿಕ ದೇವತಾ ಕಾರ್ಯಗಳು ಮನುಷ್ಯನಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತವೆ. ಇವುಗಳನ್ನು ಕೇವಲ ಮೂಢನಂಬಿಕೆಯಾಗಿ ನೋಡದೆ, ಅವುಗಳ ಹಿಂದಿರುವ ವೈಜ್ಞಾನಿಕ ಮತ್ತು ಸಾಮಾಜಿಕ ಮಹತ್ವವನ್ನು ಅರಿತು ಆಚರಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸುಖ-ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು. ಶಿರಾ ತಾಲೂಕಿನ ಗೌಡಗೆರೆ ಹೋಬಳಿ ಕಳವರಹಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀಜುಂಜಪ್ಪ ಸ್ವಾಮಿ ನೂತನ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಐತಿಹಾಸಿಕ ಪ್ರಸಿದ್ಧ ಶ್ರೀ ಜುಂಜಪ್ಪ ಸ್ವಾಮಿಗೆ ಎಲ್ಲರೂ ಒಗ್ಗೂಡಿ ಭವ್ಯ ದೇಗುಲ ನಿರ್ಮಾಣ ಮಾಡುತ್ತಿರುವುದು, ಕಳವರಹಳ್ಳಿಗೆ ದೊಡ್ಡ ಕಳಸವಿದ್ದಂತೆ. ನಾವು ಎಲ್ಲರೂ ಒಗ್ಗಟ್ಟಾಗಿ ದೇಗುಲ ನಿರ್ಮಾಣ ಮಾಡುವಂತ ಸಂಕಲ್ಪ ಮಾಡಬೇಕು. ರಾಜ್ಯದಲ್ಲಿ ಹಾಗೂ ಸಿರಾ ತಾಲೂಕಿನಲ್ಲಿ ಇನ್ನು ಮುಂದೆ ಯಾದರು ಉತ್ತಮ ಮಳೆಯಾಗಿ ಎಲ್ಲ ರೈತರ ಬದುಕು ಸುಂದರವಾಗಿರಲಿ ಎಂದು ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು. ಶ್ರೀ ಮದ್ದಮ್ಮ ದೇವಿ ದೇವಸ್ಥಾನದ ಪಟ್ಟದ ಪೂಜಾರ್ ದೊಡ್ಡರಾಜಪ್ಪ, ಹುಣಸೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹುಣಸೆಹಳ್ಳಿ ಶಶಿಧರ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಸಂಕಾಪುರ ಚಿದಾನಂದ, ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮುದ್ದು ಕೃಷ್ಣೆಗೌಡ, ಕಾರ್ಯದರ್ಶಿ ನರಸಿಂಹಮೂರ್ತಿ, ಭೂಕಾಂತೇ ಗೌಡ, ಕೃಷ್ಣಪ್ಪ, ಹೊಸೂರು ಮಂಜೇಗೌಡ, ಸಿದ್ದಣ್ಣ, ದೊಡ್ಡಯ್ಯ, ಸಿದ್ದಾಪುರ ಮಂಜುನಾಥ್, ನಾಗೇಂದ್ರ ಗೌಡ, ಭೂತಣ್ಣ ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು, 12 ಜನ ಕೈವಾಡಸ್ತರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.1
- ಚಿತ್ರದುರ್ಗದಲ್ಲಿ ‘ಸೀರತ್ ಅಭಿಯಾನ’! 🔥 ಪ್ರವಾದಿ ಮುಹಮ್ಮದ್ ﷺ ಸಂದೇಶ ಸಾರಲು ಸಜ್ಜು! #SeeratUnNabi #ಸೀರತ್_ಅಭಿಯಾನ #ಕ್ರಾಂತಿಯಜ್ಯೋತಿ #ಪ್ರವಾದಿಮುಹಮ್ಮದ್ﷺ #Muhammadﷺ #ProphetMuhammad #SeeratCampaign #JamaatEIslamiHind #ಚಿತ್ರದುರ್ಗ #Chitradurga #ChitradurgaNews #KarnatakaNews #KannadaNews #BreakingNews #ViralNews #LocalNews #CTownNews #CtownNews #NewsUpdate #ಸುದ್ದಿ #ಸುದ್ದಿವಾಹಿನಿ1
- ಶಿಡ್ಲಘಟ್ಟ ನಗರದಲ್ಲಿ ಅದ್ದೂರಿಯಾಗಿ ನಡೆದ ಈದ್ ಮಿಲಾದ್ ಸಂಭ್ರಮ...!1
- ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗನಿಗೆ ಧೈರ್ಯ ತುಂಬಿದ ಸಿಎಂ ಬೆಂಗಳೂರು: ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗ ಮಲ್ಲಿನಾಥ್ ಅವರೊಂದಿಗೆ ಸಿಎಂ ಡಿಕೆ ಶಿವಕುಮಾರ್ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ. ಸಂಕಷ್ಟದ ಸಮಯದಲ್ಲಿ ಕನ್ನಡಿಗರ ರಕ್ಷಣೆಗೆನಮ್ಮ ಸರ್ಕಾರವು ಅತ್ಯಂತ ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು, ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಕನ್ನಡಿಗನನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.1
- ನೇಪಾಳದಲ್ಲಿ ಭೀಕರ ಪ್ರವಾಹ: ಕ್ಷಣಾರ್ಧದಲ್ಲೇ ಕೊಚ್ಚಿಹೋದ ಮನೆ, ವಾಹನಗಳು1
- ಟಿ ನುಲೇನೂರು ಗೇಟ್ ಬಳಿ ಕಾರು ಬೈಕ್ ಬೀಕರ ಅಪಘಾತ ನಡೆದು ಇಬ್ಬರು ಸಾವು ಟಿ ನುಲೇನೂರು ಗೇಟ್ ಬಳಿ ಕಾರು ಬೈಕ್ ಬೀಕರ ಅಪಘಾತ ನಡೆದು ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಹೊಳಲ್ಕೆರೆ ತಾಲ್ಲೂಕಿನ ಟಿ ನುಲೇನೂರು ಗೇಟ್ ನ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆಸಿದ್ದು ಮಲೆನಳ್ಳಿ ಗ್ರಾಮದ ಉಪೇಂದ್ರ ಕುಮಾರ್ ಹಾಗೂ ಗೌತಮ್ ಬಾಬು ಎಂಬ ಇಬ್ಬರು ಮೃತಪಟ್ಟಿದ್ದಾರೆ. ಇನ್ನೂ ಚಿಕ್ಕಮಗಳೂರು ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಚಿತ್ರದುರ್ಗ ಕಡೆಯಿಂದ ಹೋಗುತ್ತಿದ್ದ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಬವಿಸಿದ್ದು ಬೈಕ್ ನಲ್ಲಿದ್ದ ಇಬ್ಬೆಉ ಮೃತಪಟ್ಟಿದ್ದಾರೆ. ಇನ್ನೂ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.1