*ರಾಜ್ಯದಲ್ಲಿ 𝗔𝗜 ಮತ್ತು ಕ್ವಾಂಟಮ್ ತಂತ್ರಜ್ಞಾನಗಳ ಬಳಕೆಗೆ ಪೂರಕ ಪರಿಸರ ನಿರ್ಮಾಣ: ಸಚಿವ ಎನ್ ಎಸ್ ಭೋಸರಾಜು* - ತಂತ್ರಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ *ಬೆಂಗಳೂರು ಏಪ್ರಿಲ್ 23* : ಕ್ವಾಂಟಮ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ನಂತಹ ಆಧುನಿಕ ತಂತ್ರಜ್ಞಾನಗಳ ಬಳಕೆಗೆ ಪೂರಕವಾದ ನೀತಿಗಳನ್ನು ರಾಜ್ಯ ಸರ್ಕಾರ ನಿರ್ಮಿಸಿದ್ದು, ಇದು ತಂತ್ರಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳನ್ನ ಕಲ್ಪಿಸಲಿದೆ *ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.* ಇಂದು ಏಟ್ರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (𝗔𝗧𝗥𝗜𝗔 𝗜𝗻𝘀𝘁𝗶𝘁𝘂𝘁𝗲 𝗼𝗳 𝗧𝗲𝗰𝗵𝗻𝗼𝗹𝗼𝗴𝘆) ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ 'ವಿಜ್ಞಾನರಂಗ್-2026' (𝗩𝗶𝗴𝗻𝗮𝗻𝗮𝗿𝗮𝗻𝗴-𝟮𝟬𝟮𝟲) ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾಷಣದ ಆರಂಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಬಿ. ಎನ್. ಚಿನ್ನಸ್ವಾಮಿ ರಾಜು ಅವರನ್ನು ಸ್ಮರಿಸಿದ ಸಚಿವರು, "ಒಬ್ಬ ಶ್ರೇಷ್ಠ ಶಿಕ್ಷಣತಜ್ಞ, ಸಮಾಜ ಸೇವಕ ಹಾಗೂ ಉದ್ಯಮಿಯಾಗಿ ಅವರು ಹಾಕಿಕೊಟ್ಟ ಭದ್ರ ಬುನಾದಿ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ," ಎಂದು ಬಣ್ಣಿಸಿದರು. "ಇಂದಿನ ತಾಂತ್ರಿಕ ಯುಗದಲ್ಲಿ ನಾವೀನ್ಯತೆ ಎನ್ನುವುದು ಕೇವಲ ಒಂದು ಆಯ್ಕೆಯಾಗಿರದೆ, ಸಮಾಜದ ಪ್ರಗತಿ ಹಾಗೂ ಅಭಿವೃದ್ದಿಗೆ ಅತ್ಯಗತ್ಯವಾಗಿದೆ. ಕೈಗಾರಿಕೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಜೊತೆಯಾಗಿ ಬೆಳೆಯುವಂತಹ ಅತ್ಯುತ್ತಮ ಪರಿಸರ ವ್ಯವಸ್ಥೆ ನಮ್ಮ ರಾಜ್ಯದಲ್ಲಿದೆ" ಎಂದರು. ಮಕ್ಕಳಲ್ಲಿ ಸಣ್ಣ ವಯಸ್ಸಿನಿಂದಲೇ ವೈಜ್ಞಾನಿಕ ಮನೋಭಾವ ಹಾಗೂ ಪ್ರಾಯೋಗಿಕ ಕಲಿಕೆಯನ್ನು ಬೆಳೆಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿಜ್ಞಾನ ಕೇಂದ್ರಗಳನ್ನು (𝗦𝗰𝗶𝗲𝗻𝗰𝗲 𝗖𝗲𝗻𝘁𝗿𝗲𝘀) ಸ್ಥಾಪಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು 'ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ' (𝗩𝗶𝘀𝗶𝗼𝗻 𝗚𝗿𝗼𝘂𝗽 𝗼𝗳 𝗦𝗰𝗶𝗲𝗻𝗰𝗲 𝗮𝗻𝗱 𝗧𝗲𝗰𝗵𝗻𝗼𝗹𝗼𝗴𝘆) ಮೂಲಕ ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುವ ಸಂಶೋಧನೆ ಹಾಗೂ ಹೊಸ ಆವಿಷ್ಕಾರಗಳಿಗೆ ಆರ್ಥಿಕ ಬೆಂಬಲ ನೀಡುತ್ತಿದೆ. ಅದೇ ರೀತಿ, ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ 𝗦𝗰𝗶𝗲𝗻𝗰𝗲 𝗖𝗶𝘁𝘆 (ಸೈನ್ಸ್ ಸಿಟಿ) ಹೊಸ ಆಲೋಚನೆಗಳು ಹಾಗೂ ನೈಜ-ಪ್ರಪಂಚದ ಸಾಧ್ಯತೆಗಳನ್ನು ಒಟ್ಟುಗೂಡಿಸುವ ಒಂದು ಬೃಹತ್ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂದರು. ಯುವ ಪೀಳಿಗೆ ಹುಟ್ಟು ಹಾಕುವ ಹೊಸ ಕಲ್ಪನೆಗಳು ಭವಿಷ್ಯದ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಬಲ್ಲವು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜದ ಒಳತಿಗಾಗಿ ತಮ್ಮ ಜ್ಞಾನವನ್ನು ಬಳಸಬೇಕು. ನೀರಿನ ನಿರ್ವಹಣೆ, ಸುಸ್ಥಿರ ಅಭಿವೃದ್ಧಿ (𝗦𝘂𝘀𝘁𝗮𝗶𝗻𝗮𝗯𝗹𝗲 𝗗𝗲𝘃𝗲𝗹𝗼𝗽𝗺𝗲𝗻𝘁) ಮತ್ತು ಡಿಜಿಟಲ್ ಬದಲಾವಣೆಯಂತಹ (𝗗𝗶𝗴𝗶𝘁𝗮𝗹 𝗧𝗿𝗮𝗻𝘀𝗳𝗼𝗿𝗺𝗮𝘁𝗶𝗼𝗻) ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯುವ ಸಮುದಾಯ ಪ್ರಮುಖ ಪಾತ್ರ ವಹಿಸಬೇಕು ಎಂದು ಸಚಿವ ಎನ್ ಎಸ್ ಭೋಸರಾಜು ಕರೆ ನೀಡಿದರು.

- Post by Naveedpasha1
- KOLAR KI.AWAAZ KOUSAR NEWS1
- Post by Venu Gopal2
- ಕೋಲಾರ ಜಿಲ್ಲಾ ಶಾಖೆ ಅಂಬೇಡ್ಕರ್ ಸ್ವಾಭಿಮಾನಿ ಮಾನಿ ಬಳಗದ ವತಿಯಿಂದ "ಕೋಲಾರ ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕರಾದ ರಮಾಮಣಿ ರವರ ಅಮಾನತ್ತಿಗೆ ಒತ್ತಾಯಿಸಿ. ಚಳುವಳಿಯ ಪ್ರತಿಭಟನೆ1
- ಹನೂರು: ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದ್ದು, ಜನತೆಗೆ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದ್ದೇನೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು. ತಾಲೂಕಿನ ಕಾಮಗೆರೆ, ಮಂಗಲ ಮತ್ತು ಕೊಂಗರಹಳ್ಳಿ ಗ್ರಾಮಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿ ಹಮ್ಮಿಕೊಳ್ಳಲಾದ ಒಟ್ಟು 2.70 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅಭಿವೃದ್ಧಿ ಕಾಮಗಾರಿಗಳ ವಿವರ: ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಈ ಕೆಳಕಂಡಂತೆ ಅನುದಾನ ವಿನಿಯೋಗಿಸಲಾಗುತ್ತಿದೆ: ಕಾಮಗೆರೆ ಹೊಸ ಬಡಾವಣೆ: ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 1 ಕೋಟಿ ರೂ. ಮಂಗಲ ಗ್ರಾಮದ ಹೊಸ ಬಡಾವಣೆ: ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 1 ಕೋಟಿ ರೂ. ಕಾಮಗೆರೆ ಆದಿಜಾಂಬವ ಬಡಾವಣೆ: ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ 50 ಲಕ್ಷ ರೂ. ಕೊಂಗರಹಳ್ಳಿ ಹೊಸ ಬಡಾವಣೆ: ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ರೂ. "ಕ್ಷೇತ್ರದ ನೀರಾವರಿ ಯೋಜನೆಗಳನ್ನು ಬಲಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ರಾಮನ ಗುಡ್ಡೆ ಕೆರೆ ಭರ್ತಿಯಾಗಿದ್ದು, ಶೀಘ್ರದಲ್ಲೇ ಉದ್ದನೂರು ಡ್ಯಾಮ್‌ಗೆ ನೀರು ಬರಲಿದೆ. ರಾಜ್ಯ ಸರ್ಕಾರವು 2026ರ ಬಜೆಟ್‌ನಲ್ಲಿ ಹನೂರು ಕ್ಷೇತ್ರದ ನೀರಾವರಿಗಾಗಿ 490 ಕೋಟಿ ರೂ. ಅನುದಾನ ನೀಡಿದ್ದು, ಇದು ರೈತರಿಗೆ ವರದಾನವಾಗಲಿದೆ." — ಎಂ.ಆರ್. ಮಂಜುನಾಥ್, ಶಾಸಕರು. ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಮುಖಂಡರಾದ ಸಿಂಗನಲ್ಲೂರು ರಾಜಣ್ಣ, ಮಹಾದೇವಣ್ಣ, ಡಾ. ಗುರುಮೂರ್ತಿ, ಶಿವು, ರಾಕೇಶ್, ಕಿಶೋರ್, ತೋಮಣ್ಣ, ಲಕ್ಷ್ಮಣ, ನಿಂಗರಾಜು, ರಾಜಪ್ಪ, ಶಿವಮ್ಮಲ್ಲು, ಮಹದೇವಸ್ವಾಮಿ, ಮಹೇಶ್, ಪ್ರವೀಣ್, ಸುದೀನ, ಚಿಕ್ಕಸ್ವಾಮಿ, ಮಲ್ಲಿಕಾರ್ಜುನ, ಶೇಖರ್, ಮಹಾದೇವ ಮರಿಸ್ವಾಮಿ, ರಾಜಮ್ಮ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.4
- ಹನೂರು :ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಜೋಡಿ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಿಂದ ಬಾಲಕನೊಬ್ಬ ಮೃತಪಟ್ಟ ದುರ್ಘಟನೆ ನಡೆದಿದೆ. ಕಾಡೋಲ ಗ್ರಾಮದ ರೋಹಿತ್ (16) ಎಂಬ ಬಾಲಕ ಮೃತಪಟ್ಟಿದ್ದಾನೆ. ಬೆಟ್ಟದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದನು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಘಟನೆಯ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮಹದೇಶ್ವರ ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.1
- ಅನುಮಾನಾಸ್ಪದ ಸಾವು: ಪತಿ ವಿರುದ್ಧ ದೂರು ದಾವಣಗೆರೆಯಲ್ಲಿ ಮಹಿಳೆ ಮೃತ್ಯು, ತನಿಖೆ ಆರಂಭ1
- ಹನೂರು: ಭಗೀರಥ ಮಹರ್ಷಿಗಳ ಅಪ್ರತಿಮ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ಧರೆಗೆ ಗಂಗೆಯನ್ನು ಹರಿಸಿದ ಪುಣ್ಯ ಕಾರ್ಯ ಸ್ಮರಣೀಯ. ಇಂತಹ ಮಹಾನ್ ಮಹರ್ಷಿಗಳ ಜಯಂತಿ ಆಚರಣೆಯು ಶ್ಲಾಘನೀಯ ಎಂದು ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಅಭಿಮತ ವ್ಯಕ್ತಪಡಿಸಿದರು. ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 'ಭಗೀರಥ ಮಹರ್ಷಿ ಜಯಂತಿ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಅದ್ಧೂರಿ ಆಚರಣೆ: ತಾಲೂಕು ಆಡಳಿತದ ವತಿಯಿಂದ ಪ್ರಸ್ತುತ ಸರಳವಾಗಿ ನಡೆಯುತ್ತಿರುವ ಈ ಜಯಂತಿಯನ್ನು ಮುಂದಿನ ದಿನಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಕ್ಷೇತ್ರದಲ್ಲಿ ಮಳೆ ಕೊರತೆಯಿಂದ ಕೆರೆ-ಕಟ್ಟೆಗಳು ಬರಿದಾಗಿವೆ. ಸಕಲ ಜೀವರಾಶಿಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮುಂದಿನ 4-5 ತಿಂಗಳಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀರಾವರಿ ಯೋಜನೆಗಳಿಗೆ ಒತ್ತು: ರಾಮನಗುಡ್ಡ ಕೆರೆಗೆ ನೀರು ಹರಿಸಿದ್ದರಿಂದ ಆ ಭಾಗದ ಸಮಸ್ಯೆ ದೂರವಾಗಿದೆ. ಇದೇ ಮಾದರಿಯಲ್ಲಿ ಕ್ಷೇತ್ರದ ಇತರೆ ಭಾಗಗಳಿಗೂ ಹಂತ-ಹಂತವಾಗಿ ನೀರಾವರಿ ಯೋಜನೆ ತರಲು ಕ್ರಮ ವಹಿಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು. ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೇಖಾ, ಇಂಜಿನಿಯರ್ ನಾಗರಾಜ್, ಆರಕ್ಷಕ ನಿರೀಕ್ಷಕ ಸಾಹೇಬ್ ಗೌಡ, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್ ಪಾಲ್ಗೊಂಡಿದ್ದರು. ಸಮುದಾಯದ ಮುಖಂಡರಾದ ಡಿ.ಪಿ. ಗೋವಿಂದ, ನಿಂಗಶೆಟ್ಟಿ, ನಾಗೇಶ್, ರಂಗಸ್ವಾಮಿ, ಅಜ್ಜೀಪುರ ಮಹಾದೇವ, ಮಂಜು, ಮರೀಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವರದಿ :ಉಸ್ಮಾನ್ ಖಾನ್1
- *ಭಾರತ ನಲ್ಲಿ ವೈರಲ್*1