Shuru
Apke Nagar Ki App…
ಮಡಿಕೇರಿಯ ಪ್ರತಿಭಾವಂತ ವಿದ್ಯಾರ್ಥಿನಿಗೆ ಶುಭ ಹಾರೈಕೆ ಹಾಗೂ ಅಭಿನಂದನೆಗಳು ಕೊಡಗು: ಮಡಿಕೇರಿ ಸಮೀಪದ ಕಡಗದಾಳು ಗ್ರಾಮದ ಗಿಲಬರ್ಟ್ ರೊಡ್ರಿ ಗಸ್ ಮತ್ತು ಲಾವಿಟ ರೋಡಗ್ರಸ್ ದಂಪತಿಗಳ ಪುತ್ರಿಯಾದ ರಿಯಾ ಜ್ಯೂಸಿನಾ ರೋಡರಿಗ್ರಸ್ ಇವರು ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 596 ಅಂಕಗಳನ್ನು ಪಡೆದು ಪ್ರೌಢಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಯಾಗಿದ್ದಾರೆ. ಈ ಪ್ರತಿಭಾವಂತ ವಿದ್ಯಾರ್ಥಿಯು ಇದೀಗ ತನ್ನ ವಿದ್ಯಾಭ್ಯಾಸವನ್ನು ಮಡಿಕೇರಿಯ ಸೇಂಟ್ ಮೈಕಲ್ಸ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗೆ ಮುಂದಿನ ಭವಿಷ್ಯ ಉನ್ನತವಾಗಿರಲಿ ಎಂದು ಪೋಷಕ ವರ್ಗ ಹಾಗೂ ಕಾಲೇಜಿನ ಮುಖ್ಯಸ್ಥರು ಉಪನ್ಯಾಸಕ ವರ್ಗ ರಾಷ್ಟ್ರ ಧ್ವನಿ ನ್ಯೂಸ್ ಮುಖಾಂತರ ಶುಭಾಶಯಗಳು, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹೆಚ ಟಿ ಸತ್ಯನಾರಾಯಣ ಪ್ರಸಾದ್
ಮಡಿಕೇರಿಯ ಪ್ರತಿಭಾವಂತ ವಿದ್ಯಾರ್ಥಿನಿಗೆ ಶುಭ ಹಾರೈಕೆ ಹಾಗೂ ಅಭಿನಂದನೆಗಳು ಕೊಡಗು: ಮಡಿಕೇರಿ ಸಮೀಪದ ಕಡಗದಾಳು ಗ್ರಾಮದ ಗಿಲಬರ್ಟ್ ರೊಡ್ರಿ ಗಸ್ ಮತ್ತು ಲಾವಿಟ ರೋಡಗ್ರಸ್ ದಂಪತಿಗಳ ಪುತ್ರಿಯಾದ ರಿಯಾ ಜ್ಯೂಸಿನಾ ರೋಡರಿಗ್ರಸ್ ಇವರು ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 596 ಅಂಕಗಳನ್ನು ಪಡೆದು ಪ್ರೌಢಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಯಾಗಿದ್ದಾರೆ. ಈ ಪ್ರತಿಭಾವಂತ ವಿದ್ಯಾರ್ಥಿಯು ಇದೀಗ ತನ್ನ ವಿದ್ಯಾಭ್ಯಾಸವನ್ನು ಮಡಿಕೇರಿಯ ಸೇಂಟ್ ಮೈಕಲ್ಸ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗೆ ಮುಂದಿನ ಭವಿಷ್ಯ ಉನ್ನತವಾಗಿರಲಿ ಎಂದು ಪೋಷಕ ವರ್ಗ ಹಾಗೂ ಕಾಲೇಜಿನ ಮುಖ್ಯಸ್ಥರು ಉಪನ್ಯಾಸಕ ವರ್ಗ ರಾಷ್ಟ್ರ ಧ್ವನಿ ನ್ಯೂಸ್ ಮುಖಾಂತರ ಶುಭಾಶಯಗಳು, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
More news from ಕರ್ನಾಟಕ and nearby areas
- All About,When any #Waqfland is made to desserted thereafter who will encroach *ಭಾರತ ನಲ್ಲಿ ವೈರಲ್*1
- 100 Crores of bank balance in the accounts of mysuru dist waqf committees says MDWAC Chairman Azeezulla Ajju 100 Crores of bank balance in the accounts of mysuru dist waqf committees says MDWAC Chairman Azeezulla Ajju1
- ಕುಡಿದ ಮತ್ತಿನಲ್ಲಿ ಜಗಳ, ದಿಕ್ಕು ತಪ್ಪಿಸಲು ಹೋದ ದಂಪತಿಗೆ ಬುದ್ಧಿಹೇಳಿದ ಪೊಲೀಸರು! ಮೈಸೂರು: ಕುಡಿದ ಮತ್ತಿನಲ್ಲಿ ಪತಿ-ಪತ್ನಿ ಜಗಳ ನಡೆದು, ದಿಕ್ಕು ತಪ್ಪಿಸಲು ಹೋದ ಮಹಿಳೆಗೆ ಪೊಲೀಸರು ಬುದ್ಧಿ ಹೇಳಿದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಬಂಕಹಳ್ಳಿ ಗ್ರಾಮದ ಗೋಪಮ್ಮ ಅಲಿಯಾಸ್ ಗೌರಮ್ಮ(52) ಹಾಗೂ ಪತಿ ಚೆಲುವ ಕುಡಿದ ಮತ್ತಿನಲ್ಲಿ ಸೋಮವಾರ ರಾತ್ರಿ ಜಗಳ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪತಿ, ಪತ್ನಿ ಗೌರಮ್ಮರಿಗೆ ಮುಖಕ್ಕೆ ಜೋರಾಗಿ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ. ನಂತರ ರಾತ್ರಿ ಹೆಡಿಯಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಎಚ್.ಡಿ.ಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮಹಿಳೆ ಗುಣಮುಖರಾಗುತ್ತಿದ್ದಾರೆ. ಕಥೆಕಟ್ಟಿದ ಮಹಿಳೆ: ಕುಡಿದ ಮತ್ತಿನಲ್ಲಿ ಪತಿ-ಪತ್ನಿ ಜಗಳ ನಡೆದಿದೆ.ಆದರೆ,ಜಮೀನಿಗೆ ಕೆಲಸಕ್ಕೆ ಬಂದಿಲ್ಲವೆಂದು ಹಲ್ಲೆ ಮಾಡಲಾಗಿದೆ ಎಂದು ಪೊಲೀಸರು ಮುಂದೆ ಗೌರಮ್ಮ ಹೇಳಿದ್ದಾರೆ. ಪೊಲೀಸರು ವಿಚಾರಣೆ ಮಾಡಿದಾಗ, ಕುಡಿದ ಮತ್ತಿ ಇಬ್ಬರ ಜಗಳ ನಡೆದು, ಪತಿ ಹಲ್ಲೆ ಮಾಡಿದ್ದಾನೆ ಎಂದು ಗೊತ್ತಾಗಿದೆ. ಪತ್ನಿ-ಪತಿ ಇಬ್ಬರಿಗೂ ಪೊಲೀಸರು ಬುದ್ಧಿ ಹೇಳಿ ರೀತಿ, ಸುಳ್ಳು ಹೇಳಬಾರದು ಎಂದು ತಿಳಿ ಹೇಳಿದ್ದಾರೆ.3
- ಮೈಸೂರು ಚಾರಿಟೇಬಲ್ ಟ್ರಸ್ಟ್ ಹಾಗೂ ಡಾ. ಇಮ್ರಾನ್ ಖಾನ್ ವತಿಯಿಂದ 'ಮೈಸೂರು ನ್ಯೂಸ್ ಹಬ್' ವರದಿಗಾರ ಸೈಯದ್ ಅತೀಕ್ ಅವರಿಗೆ ಅಂಗಡಿಗೆ ಕರೆಸಿ ಆತ್ಮೀಯ ಸನ್ಮಾನ! ಮೈಸೂರು ಚಾರಿಟೇಬಲ್ ಟ್ರಸ್ಟ್ ಹಾಗೂ ಡಾ. ಇಮ್ರಾನ್ ಖಾನ್ ವತಿಯಿಂದ 'ಮೈಸೂರು ನ್ಯೂಸ್ ಹಬ್' ವರದಿಗಾರ ಸೈಯದ್ ಅತೀಕ್ ಅವರಿಗೆ ಅಂಗಡಿಗೆ ಕರೆಸಿ ಆತ್ಮೀಯ ಸನ್ಮಾನ!1
- ಕಿಲಗೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಚಿವ ಪುಟ್ಟರಂಗಶೆಟ್ಟಿ ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಎಸ್ಇಪಿ ಯೋಜನೆಯಡಿ ಒಂದು ಕೋಟಿ ರೂ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರು ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ ಅವರು ರಸ್ತೆಗಳು ಗ್ರಾಮೀಣ ಜನರ ಜೀವನಾಡಿಯಾಗಿದೆ ಈ ನಿಟ್ಟಿನಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ರಸ್ತೆ, ಚರಂಡಿ ಸೇತುವೆ ಅಭಿವೃದ್ಧಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜನರ ಅಭಿವೃದ್ಧಿ ಕೆಲಸಗಳೆ ನನ್ನ ಗುರಿಯಾಗಿದ್ದು ವಿವಿಧ ಅಭಿವೃದ್ಧಿ ಯೋಜನೆಯಡಿ ಅನುದಾನ ತಂದು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು2
- ಜೆಎಸ್‌ಎಸ್ ನರ್ಸಿಂಗ್ ಕಾಲೇಜು ವತಿಯಿಂದ ವಿಶ್ವ ಆತ್ಮಹತ್ಯೆ ತಡೆದಿನಾಚರಣೆ ಕಾರ್ಯಕ್ರಮ ವರದಿ: ಹೊಮ್ಮನಂಜುಂಡನಾಯಕ ಜಿಲ್ಲೆಯನ್ನು ಆತ್ಮಹತ್ಯೆ ಮುಕ್ತ ಮಾಡಲು ಪಣ ತೊಡಿ: ಡಾ.ಪಿ.ಚಂದ್ರಶೇಖರ್ ಜೆಎಸ್‌ಎಸ್ ನರ್ಸಿಂಗ್ ಕಾಲೇಜು ವತಿಯಿಂದ ವಿಶ್ವ ಆತ್ಮಹತ್ಯೆ ತಡೆದಿನಾಚರಣೆ ಕಾರ್ಯಕ್ರಮ ಚಾಮರಾಜನಗರ: ಆತ್ಮಹತ್ಯೆ ತಡೆಗಟ್ಟಲು ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಪಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು. ನಗರದ ಜೆಎಸ್‌ಎಸ್ ಮಹಿಳಾಕಾಲೇಜು ಸಭಾಂಗಣದಲ್ಲಿ ಜೆಎಸ್‌ಎಸ್ ನರ್ಸಿಂಗ್ ಕಾಲೇಜು ವತಿಯಿಂದ ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸೋಣ' ಧ್ಯೇಯ ವಾಕ್ಯದಡಿ, ನಡೆದ 'ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಗಿಡಕ್ಕೆ ನೀರಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಶುಶ್ರೂಷಕರು ಆತ್ಮಹತ್ಯೆಗೆ ಪ್ರಯತ್ನ ಮಾಡುವವರ ಜತೆ ಸಮಾಲೋಚನೆ ನಡೆಸಿ, ಅವರಿಗೆ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿಸಬೇಕು, ಆ ಮೂಲಕ ಜಿಲ್ಲೆಯನ್ನು ಆತ್ಮಹತ್ಯೆ ಮುಕ್ತ ಮಾಡಲು ಪಣ ತೊಡಬೇಕು ಎಂದರು. ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಸಕಾರಾತ್ಮಕ ಚಿಂತನೆಗಳು ಎಲ್ಲದಕ್ಕೂ ಸೂಕ್ತ ಪರಿಹಾರ ನೀಡುತ್ತವೆ.ಮಾನಸಿಕ ಖಿನ್ನತೆ ಒಂಟಿತನ, ಕೌಟುಂಬಿಕ ಕಲಹ ಇದರಲ್ಲಿ ಸಿಲುಕುವವರು ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಇದೆ. ಇಲಾಖೆ ಸಂಗ್ರಹಿಸಿರುವ ಅಂಕಿ ಅಂಕಿಆಂಶಗಳ ಪ್ರಕಾರ ಜುಲೈನಲ್ಲಿ ಗಂಡುಮಕ್ಕಳು-61 ಹೆಣ್ಣುಮಕ್ಕಳು-66, ಆಗಸ್ಟ್ ನಲ್ಲಿ ಗಂಡುಮಕ್ಕಳು -66, ಹೆಣ್ಣು ಮಕ್ಕಳು -70 ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರ, ಶುಕ್ರವಾರ, ಬುಧವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮನೋಚೈತನ್ಯ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಆತ್ಮ ಹತ್ಯೆಗೆ ಪ್ರಯತ್ನಪಟ್ಟವರ ಜತೆ ಆಪ್ತಸಮಾಲೋಚನೆ ನಡೆಸುವ ಮೂಲಕ ಅವರ ಸಮಸ್ಯೆಗೆ ಪರಿಹಾರ ಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಮೈಸೂರು ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ.ಶಿವಾನಂದ ಜೆ.ಮನೋಹರ್, ರಕ್ಷಿತಾಪೂಜಾರಿ ಮಾತನಾಡಿದರು. ಅಧ್ಯಕ್ಷ ತೆ ವಹಿಸಿದ್ದ ಪ್ರಾಂಶುಪಾಲ ಜಿ.ವಿನಯಕುಮಾರ್ ಮಾತನಾಡಿದರು. ಉಪನ್ಯಾಸಕಿ ಹೇಮಾವತಿ, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳಾದ ನಿಧಿಶ್ರೀ ಪ್ರಾರ್ಥಿಸಿದರು.ದಿವ್ಯ ಸ್ವಾಗತಿಸಿದರು. ಮಾದಲಾಂಬಿಕೆ ವಂದಿಸಿದರು.4
- ಕಾವೇರಿ ತಟದಲ್ಲಿ ಪೂಜೆ: ಕರಿಮಣಿ, ಬಿಚ್ಚೋಲೆ–ಅರಸಿನ ಕೊನೆಯೊಂದಿಗೆ ಮೂಡಿದ ಗೌರಿ ದೇವಿ ಬನ್ನೂರು: ಗೌರಿ ಹಬ್ಬದ ಸಂಭ್ರಮ ಬನ್ನೂರಿನಲ್ಲಿ ಭಕ್ತಿ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಕಳೆಗಟ್ಟಿತು. ಪಟ್ಟಣದ ಕಾವೇರಿ ತಟದಲ್ಲಿ ಗೌರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಿಳೆಯರು ಮಂಗಳದ್ರವ್ಯಗಳೊಂದಿಗೆ ಭಕ್ತಿಭಾವ ಮೆರೆದರು. ಕರಿಮಣಿ, ಬಿಚ್ಚೋಲೆ, ಅರಸಿನ ಕೊನೆ ಸೇರಿದಂತೆ ಸಾಂಪ್ರದಾಯಿಕ ವಸ್ತುಗಳಿಂದ ಅಲಂಕರಿಸಲ್ಪಟ್ಟ ಗೌರಿ ದೇವಿ ವಿಶೇಷವಾಗಿ ಕಂಗೊಳಿಸಿದರು. ಕಾವೇರಿ ನದಿಯ ತಟದಲ್ಲಿ ಗೌರಿ ದೇವಿಯನ್ನು ಪ್ರತಿಷ್ಠಾಪಿಸಿ, ಸಂಪ್ರದಾಯಬದ್ಧವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮಹಿಳೆಯರು ಕುಟುಂಬದ ಸುಖ-ಸಮೃದ್ಧಿ, ಆರೋಗ್ಯ ಹಾಗೂ ನೆಮ್ಮದಿಗಾಗಿ ಗೌರಿ ದೇವಿಗೆ ಪ್ರಾರ್ಥಿಸಿ, ಅರಸಿನ, ಕುಂಕುಮ, ಹೂವು ಹಾಗೂ ವಿವಿಧ ಮಂಗಳದ್ರವ್ಯಗಳನ್ನು ಸಮರ್ಪಿಸಿದರು. ಇದೇ ವೇಳೆ ಬನ್ನೂರು ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೊಟ್ಟಿಲು ಗೌರಿ ಕೂರಿಸಿ ಮೆರವಣಿಗೆ ನಡೆಸಲಾಯಿತು. ಅಲಂಕೃತ ತೊಟ್ಟಿಲಿನಲ್ಲಿ ಗೌರಿ ದೇವಿಯನ್ನು ಕೂರಿಸಿ, ಮಹಿಳೆಯರು ಹಾಗೂ ಭಕ್ತರು ಭಜನೆ, ಮಂಗಳಗೀತೆಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರು ಗೌರಿ ದೇವಿಗೆ ನಮಸ್ಕರಿಸಿ ಪೂಜೆ ಸಲ್ಲಿಸಿದರು. ಮಹಿಳೆಯರು ಸಾಂಪ್ರದಾಯಿಕ ಉಡುಪು ಧರಿಸಿ, ಅರಸಿನ-ಕುಂಕುಮ ಹಾಗೂ ಹೂವುಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಾವೇರಿ ತಟದಲ್ಲಿ ನಡೆದ ಗೌರಿ ಪೂಜೆ ಹಾಗೂ ಬನ್ನೂರು ಸುತ್ತಮುತ್ತ ನಡೆದ ತೊಟ್ಟಿಲು ಗೌರಿ ಮೆರವಣಿಗೆ ಹಬ್ಬದ ಧಾರ್ಮಿಕ ಮಹತ್ವದ ಜೊತೆಗೆ ಸ್ಥಳೀಯ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯ ವೈಭವವನ್ನು ಸಾರಿತು. ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಗಳು ಇಂದಿಗೂ ಜನರ ಬದುಕಿನಲ್ಲಿ ಜೀವಂತವಾಗಿದ್ದು, ಹೊಸ ತಲೆಮಾರಿಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸುವ ಸೇತುವೆಯಾಗಿ ಪರಿಣಮಿಸಿವೆ. ಕಾವೇರಿ ತಟದ ಪ್ರಶಾಂತ ವಾತಾವರಣದಲ್ಲಿ ನಡೆದ ಗೌರಿ ಪೂಜೆ, ಅಲಂಕೃತ ಗೌರಿ ದೇವಿ ಹಾಗೂ ತೊಟ್ಟಿಲು ಗೌರಿಯ ಮೆರವಣಿಗೆ ಬನ್ನೂರಿನ ಗೌರಿ ಹಬ್ಬಕ್ಕೆ ವಿಶೇಷ ಮೆರುಗು ನೀಡಿತು.1
- All About,State of affairs of Congress Party organization members in #NRConstituency #Mysuru *ಭಾರತ ನಲ್ಲಿ ವೈರಲ್*1