logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ವಿಕಾಸದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಸ್ಮರಣೀಯ ಕೂಡ್ಲಿಗಿ: ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ವಿಕಾಸದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಸ್ಮರಣೀಯ ಎಂದು ಹಿರಿಯ ಸಾಹಿತಿ ಹಾಗೂ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ರವಿಕುಮಾರ್ ಹೇಳಿದರು. ತಾಲ್ಲೂಕಿನ ಕಾನಮಡುಗು ಶ್ರೀ ಶರಣಬಸವೇಶ್ವರ ಡಿ.ಎಲ್.ಇಡಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾನಹೊಸಹಳ್ಳಿ ಹೋಬಳಿ ಘಟಕದಿಂದ ಮಂಗಳವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಕ್ಕಸಾಲಿ ಹೂಲೆಮ್ಮ, ನೀಲಕಂಠಾಚಾರಿ ಹೆಸರಿನಲ್ಲಿ ನೀಡಿರುವ ದತ್ತಿ ವಿಷಯ ‘ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ವಿಶ್ವಕರ್ಮರ ಕೊಡುಗೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮೈಸೂರು ಸಂಸ್ಥಾನ, ಹೈದರಾಬಾದ್, ಮುಬಯಿ, ಮದ್ರಾಸ್ ಪ್ರಾಂತ್ಯವಾಗಿ ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಏಕೀಕರಣ ಹೋರಾಟದ ಮೂಲಕ ಒಗ್ಗೂಡಿದ್ದು, ಆ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಸಾಹಿತ್ಯ ಕ್ಷೇತ್ರವೂ ವಿಕೇಂದ್ರೀಕರಣವಾಗಲು ಹೋಬಳಿ, ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಪರಿಷತ್ತು ವಿಸ್ತರಿಸಲಾಯಿತು ಎಂದರಲ್ಲದೆ, ತಮ್ಮ ತಂದೆ, ತಾಯಿಯವರ ಹೆಸರಿನಲ್ಲಿ ಹಿರಿಯ ವಿದ್ವಾಂಸರಾದ ಕಾನಹೊಸಹಳ್ಳಿಯ ಡಾ.ಎ.ವೃಷಭೇಂದ್ರಾಚಾರ್ ಅವರು ಸಾಹಿತ್ಯ ಮತ್ತು ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಕುರಿತು ವಿಷಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿಯನ್ನು ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು. ವೆಂಕಮ್ಮ ಹಾಗೂ ಎಚ್.ಕೆ.ರಾಮರಾವ್ ಹೆಸರಿನ ದತ್ತಿ ವಿಷಯ ‘ಕುಮಾರವ್ಯಾಸ’ ಕುರಿತು ಕೆಂಚಮಲ್ಲನಹಳ್ಳಿ ಸರಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಎ.ಕರಿಬಸಪ್ಪ ಮಾತನಾಡಿ, ಮಹಾ ಕಾವ್ಯ ಬರೆದ ಕುಮಾರವ್ಯಾಸರು ಅತ್ಯಂತ ವಿನವಂತಿಕೆ ಉಳ್ಳವರು. ಕರ್ನಾಟ ಭಾರತ ಕಥಾ ಮಂಜರಿ ಎಂಬ ಕಾವ್ಯವು ಮಹಾಭಾರತದ ಕತೆಯಿದು. ಪ್ರಾಚೀನ ಕಾಲದಲ್ಲಿ ವೇದ ವ್ಯಾಸರು ಸಂಸ್ಕೃತದಲ್ಲಿ, ಆನಂತರ ಪಂಪಾ ಅವರು ವಿಕ್ರಮಾಧಿತ್ಯನ ವಿಜಯ, ರನ್ನ ಅವರು ಸಾಹಸಭೀಮ ವಿಜಯ ಎಂದು ಕಾವ್ಯವನ್ನು ರಚಿಸುತ್ತಾರೆ. ೧೫ನೇ ಶತಮಾನದಲ್ಲಿ ಭಾರತದ ಸತ್ಸಂಪ್ರದಾಯದ ಮಹತ್ವವೇ ಎಂಬುದನ್ನು ಸಾರುವಂತೆ ಕುಮಾರವ್ಯಾಸರು ಕಾವ್ಯವವನ್ನು ರಚಿಸುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವಿದ್ವಾಂಸ ಡಾ.ಎ.ವೃಷಭೇಂದ್ರಾಚಾರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ನಮ್ಮ ತಂದೆ ತಾಯಿಯ ಹೆಸರಿನಲ್ಲಿ ದತ್ತಿ ಕೊಡುಗೆ ನೀಡಿದ್ದೇನೆ. ೨೦೦೪ರಿಂದ ಪ್ರತಿವರ್ಷ ಉಪನ್ಯಾಸ ಕೈಗೊಂಡಿರುವುದು ಹರ್ಷದಾಯಕ. ಇಡೀ ರಾಜ್ಯದಲ್ಲಿ ಕಾನಹೊಸಹಳ್ಳಿ ಹೋಬಳಿ ಕಸಾಪ ಘಟಕವು ಸ್ವಂತ ನಿವೇಶನ ಹೊಂದಿರುವುದು ಅಪರೂಪದ ಸಂಗತಿ. ಕಾನಹೊಸಹಳ್ಳಿ ಹೋಬಳಿಯು ಸಾಹಿತ್ಯ ಪಂಡಿತರ ತವರೂರು. ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಕೋ.ಚನ್ನಬಸಪ್ಪ. ಡಾ.ಎಸ್.ಎಂ.ವೃಷಭೇAದ್ರ ಸ್ವಾಮಿ, ಸೋ.ಮ.ಚಂದ್ರಶೇಖರಯ್ಯ, ಹಿ.ಮ.ನಾಗಯ್ಯ, ಪ್ರೊ.ಎಸ್.ಎಂ.ಮರುಳಸಿದ್ದಯ್ಯ, ರುದ್ರಮುನಿ ಅಯ್ಯ, ಕುಂ.ವೀರಭದ್ರಪ್ಪ, ಎನ್.ಎಂ.ರವಿಕುಮಾರ್ ಸೇರಿ ಅನೇಕ ಸಾಹಿತಿಗಳು, ಕವಿಗಳಿರುವುದು ಸಾಹಿತ್ಯದ ಬೇರುಗಳು ಸಮೃದ್ಧವಾಗಿರುವುದನ್ನು ತಿಳಿಯಬಹುದಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲರಾದ ಎಲ್.ಪಿ.ಸುಭಾಷ್‌ಚಂದ್ರ ಅವರು ಮಾತನಾಡಿದರು. ಕಸಾಪ ಕಾನಹೊಸಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ಕಸಾಪ ತಾಲೂಕು ಕಾರ್ಯದರ್ಶಿ ಶ್ಯಾಮಸುಂದರ್ ಸಫಾರೆ, ಕೆಂಚಮಲ್ಲನಹಳ್ಳಿ ಶಂಕ್ರಪ್ಪ, ಶರಣನಗೌಡ, ಶಿಕ್ಷಕ ವೀರಭದ್ರಪ್ಪ, ನಿವೃತ್ತ ಮುಖ್ಯಶಿಕ್ಷಕ ಆನಂದ ಸೇರಿ ಇತರರಿದ್ದರು. ಉಪನ್ಯಾಸಕ ಕಾಶಿನಾಥ ಸ್ವಾಗತಿಸಿದರು. ಶರಣಬಸವೇಶ್ವರ ಪ್ರೌಢಶಾಲೆ ಶಿಕ್ಷಕ ಹುಲಿಕೆರೆ ಭದ್ರಪ್ಪ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

16 hrs ago
user_ಹೂಡೇಂ ಮಂಜುನಾಥ
ಹೂಡೇಂ ಮಂಜುನಾಥ
Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
16 hrs ago
df40358c-ebc7-42e1-975f-53d88e4d6d7e

ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ವಿಕಾಸದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಸ್ಮರಣೀಯ ಕೂಡ್ಲಿಗಿ: ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ವಿಕಾಸದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಸ್ಮರಣೀಯ ಎಂದು ಹಿರಿಯ ಸಾಹಿತಿ ಹಾಗೂ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ರವಿಕುಮಾರ್ ಹೇಳಿದರು. ತಾಲ್ಲೂಕಿನ ಕಾನಮಡುಗು ಶ್ರೀ ಶರಣಬಸವೇಶ್ವರ ಡಿ.ಎಲ್.ಇಡಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾನಹೊಸಹಳ್ಳಿ ಹೋಬಳಿ ಘಟಕದಿಂದ ಮಂಗಳವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಕ್ಕಸಾಲಿ ಹೂಲೆಮ್ಮ, ನೀಲಕಂಠಾಚಾರಿ ಹೆಸರಿನಲ್ಲಿ ನೀಡಿರುವ ದತ್ತಿ ವಿಷಯ ‘ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ವಿಶ್ವಕರ್ಮರ ಕೊಡುಗೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮೈಸೂರು ಸಂಸ್ಥಾನ, ಹೈದರಾಬಾದ್, ಮುಬಯಿ, ಮದ್ರಾಸ್ ಪ್ರಾಂತ್ಯವಾಗಿ ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಏಕೀಕರಣ ಹೋರಾಟದ ಮೂಲಕ ಒಗ್ಗೂಡಿದ್ದು, ಆ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಸಾಹಿತ್ಯ ಕ್ಷೇತ್ರವೂ ವಿಕೇಂದ್ರೀಕರಣವಾಗಲು ಹೋಬಳಿ, ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಪರಿಷತ್ತು ವಿಸ್ತರಿಸಲಾಯಿತು ಎಂದರಲ್ಲದೆ, ತಮ್ಮ ತಂದೆ, ತಾಯಿಯವರ ಹೆಸರಿನಲ್ಲಿ ಹಿರಿಯ ವಿದ್ವಾಂಸರಾದ ಕಾನಹೊಸಹಳ್ಳಿಯ ಡಾ.ಎ.ವೃಷಭೇಂದ್ರಾಚಾರ್ ಅವರು ಸಾಹಿತ್ಯ ಮತ್ತು ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಕುರಿತು ವಿಷಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿಯನ್ನು ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು. ವೆಂಕಮ್ಮ ಹಾಗೂ ಎಚ್.ಕೆ.ರಾಮರಾವ್ ಹೆಸರಿನ ದತ್ತಿ ವಿಷಯ ‘ಕುಮಾರವ್ಯಾಸ’ ಕುರಿತು ಕೆಂಚಮಲ್ಲನಹಳ್ಳಿ ಸರಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಎ.ಕರಿಬಸಪ್ಪ ಮಾತನಾಡಿ, ಮಹಾ ಕಾವ್ಯ ಬರೆದ ಕುಮಾರವ್ಯಾಸರು ಅತ್ಯಂತ ವಿನವಂತಿಕೆ ಉಳ್ಳವರು. ಕರ್ನಾಟ ಭಾರತ ಕಥಾ ಮಂಜರಿ ಎಂಬ ಕಾವ್ಯವು ಮಹಾಭಾರತದ ಕತೆಯಿದು. ಪ್ರಾಚೀನ ಕಾಲದಲ್ಲಿ ವೇದ ವ್ಯಾಸರು ಸಂಸ್ಕೃತದಲ್ಲಿ, ಆನಂತರ ಪಂಪಾ ಅವರು ವಿಕ್ರಮಾಧಿತ್ಯನ ವಿಜಯ, ರನ್ನ ಅವರು ಸಾಹಸಭೀಮ ವಿಜಯ ಎಂದು ಕಾವ್ಯವನ್ನು ರಚಿಸುತ್ತಾರೆ. ೧೫ನೇ ಶತಮಾನದಲ್ಲಿ ಭಾರತದ ಸತ್ಸಂಪ್ರದಾಯದ ಮಹತ್ವವೇ ಎಂಬುದನ್ನು ಸಾರುವಂತೆ ಕುಮಾರವ್ಯಾಸರು ಕಾವ್ಯವವನ್ನು ರಚಿಸುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವಿದ್ವಾಂಸ ಡಾ.ಎ.ವೃಷಭೇಂದ್ರಾಚಾರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ನಮ್ಮ ತಂದೆ ತಾಯಿಯ ಹೆಸರಿನಲ್ಲಿ ದತ್ತಿ ಕೊಡುಗೆ ನೀಡಿದ್ದೇನೆ. ೨೦೦೪ರಿಂದ ಪ್ರತಿವರ್ಷ ಉಪನ್ಯಾಸ ಕೈಗೊಂಡಿರುವುದು ಹರ್ಷದಾಯಕ. ಇಡೀ ರಾಜ್ಯದಲ್ಲಿ ಕಾನಹೊಸಹಳ್ಳಿ ಹೋಬಳಿ ಕಸಾಪ ಘಟಕವು ಸ್ವಂತ ನಿವೇಶನ ಹೊಂದಿರುವುದು ಅಪರೂಪದ ಸಂಗತಿ. ಕಾನಹೊಸಹಳ್ಳಿ ಹೋಬಳಿಯು ಸಾಹಿತ್ಯ ಪಂಡಿತರ ತವರೂರು. ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಕೋ.ಚನ್ನಬಸಪ್ಪ. ಡಾ.ಎಸ್.ಎಂ.ವೃಷಭೇAದ್ರ ಸ್ವಾಮಿ, ಸೋ.ಮ.ಚಂದ್ರಶೇಖರಯ್ಯ, ಹಿ.ಮ.ನಾಗಯ್ಯ, ಪ್ರೊ.ಎಸ್.ಎಂ.ಮರುಳಸಿದ್ದಯ್ಯ, ರುದ್ರಮುನಿ ಅಯ್ಯ, ಕುಂ.ವೀರಭದ್ರಪ್ಪ, ಎನ್.ಎಂ.ರವಿಕುಮಾರ್ ಸೇರಿ ಅನೇಕ ಸಾಹಿತಿಗಳು, ಕವಿಗಳಿರುವುದು ಸಾಹಿತ್ಯದ ಬೇರುಗಳು ಸಮೃದ್ಧವಾಗಿರುವುದನ್ನು ತಿಳಿಯಬಹುದಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶರಣಬಸವೇಶ್ವರ ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲರಾದ ಎಲ್.ಪಿ.ಸುಭಾಷ್‌ಚಂದ್ರ ಅವರು ಮಾತನಾಡಿದರು. ಕಸಾಪ ಕಾನಹೊಸಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ಕಸಾಪ ತಾಲೂಕು ಕಾರ್ಯದರ್ಶಿ ಶ್ಯಾಮಸುಂದರ್ ಸಫಾರೆ, ಕೆಂಚಮಲ್ಲನಹಳ್ಳಿ ಶಂಕ್ರಪ್ಪ, ಶರಣನಗೌಡ, ಶಿಕ್ಷಕ ವೀರಭದ್ರಪ್ಪ, ನಿವೃತ್ತ ಮುಖ್ಯಶಿಕ್ಷಕ ಆನಂದ ಸೇರಿ ಇತರರಿದ್ದರು. ಉಪನ್ಯಾಸಕ ಕಾಶಿನಾಥ ಸ್ವಾಗತಿಸಿದರು. ಶರಣಬಸವೇಶ್ವರ ಪ್ರೌಢಶಾಲೆ ಶಿಕ್ಷಕ ಹುಲಿಕೆರೆ ಭದ್ರಪ್ಪ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

More news from ಕರ್ನಾಟಕ and nearby areas
  • ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮನವಿ ಕೂಡ್ಲಿಗಿ: ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಂಗಳವಾರ ತಹಶೀಲ್ದಾರ್ ವಿ.ಕೆ. ನೇತ್ರಾವತಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಸಮಿತಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಹಲವು ವರ್ಷಗಳಿಂದ ಮಕ್ಕಳ ಪೌಷ್ಟಿಕತೆ, ಆರೋಗ್ಯ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕಂತೆ ಗೌರವಧನ ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ಸರ್ಕಾರ ಕೂಡಲೇ ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ತಂದು, ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ಗೌರವಧನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಜೀವನೋಪಾಯಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಬಿ.ಎಲ್.ಓ. ಜವಾಬ್ದಾರಿ ಹೊರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಅಂಗನವಾಡಿ ಉದ್ಯೋಗಿಗಳಿಗೆ ನಿವೃತ್ತಿ ನಂತರದ ಜೀವನಕ್ಕೆ ಅನುಕೂಲವಾಗುವಂತೆ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿ, ಶೀಘ್ರವೇ ನ್ಯಾಯಯುತವಾಗಿ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷೆ ಕೆ ಪದ್ಮಾವತಿ, ತಾಲೂಕ್ ಅಧ್ಯಕ್ಷರು ಎನ್ ಸುಮಾ, ಉಪಾಧ್ಯಕ್ಷರಾದ ಕೆಎನ್ ಕವಿತಾ, ಪಾರ್ವತಮ್ಮ, ಪ್ರಧನ ಕಾರ್ಯದರ್ಶಿ ಎಚ್ ಅನ್ನಪೂರ್ಣ, ಸಹ ಕಾರ್ಯದರ್ಶಿ ಬಿ ಪದ್ಮಾವತಿ, ಓ ಕರಿಬಸಮ್ಮ, ಖಜಾಂಚಿ ಜಯಮಾಲ ಜೆ, ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ, ಸದಸ್ಯರಾದ ಬಿ ಶಿವಲೀಲಾ, ಜಿ ಗಾಯತ್ರಿ, ರೇಣುಕಮ್ಮ, ಎಚ್ಎಸ್ ಚಂದ್ರಮ್ಮ, ಎಬಿ ಬಸಮ್ಮ, ಓ ಸುಜಾತ, ಸುಮಲತಾ, ಬಿ ರೇಖಾ, ದ್ಯಾಮಕ್ಕ, ಸಿ.ಬಿ ಅನುಸೂಯ ಸೇರಿದಂತೆ ತಾಲೂಕಿನ ಅಂಗನವಾಡಿ ಕಾರ್ಯಕರ್ತರು, ಸಹಾಯಕರು ಉಪಸಿದ್ಧರಿದ್ದರು.
    1
    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮನವಿ
ಕೂಡ್ಲಿಗಿ: ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಂಗಳವಾರ ತಹಶೀಲ್ದಾರ್ ವಿ.ಕೆ. ನೇತ್ರಾವತಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಸಮಿತಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಹಲವು ವರ್ಷಗಳಿಂದ ಮಕ್ಕಳ ಪೌಷ್ಟಿಕತೆ, ಆರೋಗ್ಯ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕಂತೆ ಗೌರವಧನ ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ಸರ್ಕಾರ ಕೂಡಲೇ ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ತಂದು, ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ಗೌರವಧನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಜೀವನೋಪಾಯಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಬಿ.ಎಲ್.ಓ. ಜವಾಬ್ದಾರಿ ಹೊರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಅಂಗನವಾಡಿ ಉದ್ಯೋಗಿಗಳಿಗೆ ನಿವೃತ್ತಿ ನಂತರದ ಜೀವನಕ್ಕೆ ಅನುಕೂಲವಾಗುವಂತೆ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿ, ಶೀಘ್ರವೇ ನ್ಯಾಯಯುತವಾಗಿ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷೆ ಕೆ ಪದ್ಮಾವತಿ, ತಾಲೂಕ್ ಅಧ್ಯಕ್ಷರು ಎನ್ ಸುಮಾ, ಉಪಾಧ್ಯಕ್ಷರಾದ ಕೆಎನ್ ಕವಿತಾ, ಪಾರ್ವತಮ್ಮ, ಪ್ರಧನ ಕಾರ್ಯದರ್ಶಿ ಎಚ್ ಅನ್ನಪೂರ್ಣ, ಸಹ ಕಾರ್ಯದರ್ಶಿ ಬಿ ಪದ್ಮಾವತಿ, ಓ ಕರಿಬಸಮ್ಮ, ಖಜಾಂಚಿ ಜಯಮಾಲ ಜೆ, ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ, ಸದಸ್ಯರಾದ ಬಿ ಶಿವಲೀಲಾ, ಜಿ ಗಾಯತ್ರಿ, ರೇಣುಕಮ್ಮ, ಎಚ್ಎಸ್ ಚಂದ್ರಮ್ಮ, ಎಬಿ ಬಸಮ್ಮ, ಓ ಸುಜಾತ, ಸುಮಲತಾ, ಬಿ ರೇಖಾ, ದ್ಯಾಮಕ್ಕ, ಸಿ.ಬಿ ಅನುಸೂಯ ಸೇರಿದಂತೆ ತಾಲೂಕಿನ ಅಂಗನವಾಡಿ ಕಾರ್ಯಕರ್ತರು, ಸಹಾಯಕರು ಉಪಸಿದ್ಧರಿದ್ದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    4 hrs ago
  • ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ *ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಆ 25ರಂದು ಪಟ್ಟಣದಲ್ಲಿ , (AITUC) ಕರ್ನಾಟಕ ರಾಜ್ಯವ ಅಂಗನವಾಡಿ ಕಾರ್ತಕರ್ತೆಯರು , ಮತ್ತು ಸಹಾಯಕಿಯರ ಪೆಡರೇಷನ್ ಕಾರ್ಯಕರ್ತೆಯರು. ತಮ್ಮ ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ , ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ , AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು. ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ , ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಮುಖಂಡ ಹೆಚ್. ವೀರಣ್ಣ ನೇತೃತ್ವದಲ್ಲಿ , ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ನೀಡಿದರು. ಹೆಚ್.ವೀರಣ್ಣ ಹಾಗೂ ತಾಲೂಕಾಧ್ಯಕ್ಷರಾದ , ಎನ್ ಸುಮಾ ಮಾತನಾಡಿದರು. ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ , ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರಿಗೆ ಹಾಗೂ ಸಿಡಿಪಿಒ ಮಾಲುಂಬೀರವರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. ತಾಲೂಕು ಪದಾಧಿಕಾರಿಗಳಾದ ಕೆ. ಪದ್ಮ‍ಾವತಿ , ಕೆ.ಹೆಚ್.ಕವಿತಾ , ಬಿ.ಪಾರ್ವತಮ್ಮ , ಹೆಚ್.ಅನ್ನಪೂರ್ಣ , ಜಿ.ಪದ್ಮಾವತಿ , ಓ. ಕರಿವಸಮ್ಮ , ಜೆ.ಜಯಮಾಲ , ಮೀನಾಕ್ಷಿ , ಶಿವಲೀಲಾ , ಗಾಯತ್ರಿ , ರೇಣುಕಮ್ಮ , ಚಂದ್ರಮ್ಮ , ಬಸಮ್ಮ , ಸುಜಾತ , ಸುಮಲತಾ , ರೇಣುಕಾ , ದ್ಯಾಮಕ್ಕ , ಅನಸೂಯ ಸೇರಿದಂತೆ. ಪಟ್ಟಣ ಸೇರಿದಂತೆ , ತಾಲೂಕಿನ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
*ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಆ 25ರಂದು ಪಟ್ಟಣದಲ್ಲಿ , (AITUC) ಕರ್ನಾಟಕ ರಾಜ್ಯವ ಅಂಗನವಾಡಿ ಕಾರ್ತಕರ್ತೆಯರು , ಮತ್ತು ಸಹಾಯಕಿಯರ ಪೆಡರೇಷನ್  ಕಾರ್ಯಕರ್ತೆಯರು. ತಮ್ಮ  ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ,  ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ , AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು. ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ , ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಮುಖಂಡ ಹೆಚ್. ವೀರಣ್ಣ  ನೇತೃತ್ವದಲ್ಲಿ ,  ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ನೀಡಿದರು. ಹೆಚ್.ವೀರಣ್ಣ ಹಾಗೂ ತಾಲೂಕಾಧ್ಯಕ್ಷರಾದ , ಎನ್ ಸುಮಾ ಮಾತನಾಡಿದರು. ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ , ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರಿಗೆ ಹಾಗೂ ಸಿಡಿಪಿಒ ಮಾಲುಂಬೀರವರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. ತಾಲೂಕು ಪದಾಧಿಕಾರಿಗಳಾದ  ಕೆ. ಪದ್ಮ‍ಾವತಿ ,  ಕೆ.ಹೆಚ್.ಕವಿತಾ , ಬಿ.ಪಾರ್ವತಮ್ಮ , ಹೆಚ್.ಅನ್ನಪೂರ್ಣ ,  ಜಿ.ಪದ್ಮಾವತಿ , ಓ. ಕರಿವಸಮ್ಮ , ಜೆ.ಜಯಮಾಲ ,  ಮೀನಾಕ್ಷಿ , ಶಿವಲೀಲಾ , ಗಾಯತ್ರಿ , ರೇಣುಕಮ್ಮ , ಚಂದ್ರಮ್ಮ , ಬಸಮ್ಮ , ಸುಜಾತ , ಸುಮಲತಾ , ರೇಣುಕಾ , ದ್ಯಾಮಕ್ಕ , ಅನಸೂಯ ಸೇರಿದಂತೆ. ಪಟ್ಟಣ ಸೇರಿದಂತೆ  , ತಾಲೂಕಿನ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    19 hrs ago
  • “ನನ್ನದೇ ಬೆಳೆ, ನನ್ನದೇ ಬೆಲೆ!” 🌾 ಬಳ್ಳಾರಿಯಲ್ಲಿ ನಾಳೆಯಿಂದ ರೈತ ಸಂತೆ ಆರಂಭ | ವಿಷಮುಕ್ತ ಆಹಾರಕ್ಕೆ ಒತ್ತು ಬಳ್ಳಾರಿಯಲ್ಲಿ ಆಗಸ್ಟ್ 26ರಿಂದ ‘ರೈತ ಸಂತೆ’ ಆರಂಭ! 🌾 ಗ್ರಾಹಕರಿಗೆ ನೈಸರ್ಗಿಕ ಹಾಗೂ ವಿಷಮುಕ್ತ ಕೃಷಿ ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಬಳ್ಳಾರಿಯ ಗಾಂಧಿ ಭವನದಲ್ಲಿ ರೈತ ಸಂತೆ ಆರಂಭವಾಗಲಿದೆ. “ನನ್ನದೇ ಬೆಳೆ, ನನ್ನದೇ ಬೆಲೆ, ನನ್ನದೇ ಮಾರಾಟ” ಎಂಬ ಪರಿಕಲ್ಪನೆಯಡಿ ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನೈಸರ್ಗಿಕ ಕೃಷಿಕರು ಭಾಗವಹಿಸಲಿದ್ದಾರೆ. 📍 ಸ್ಥಳ: ಗಾಂಧಿ ಭವನ, ಬಳ್ಳಾರಿ 📅 ದಿನಾಂಕ: ಆಗಸ್ಟ್ 26, 2026 ⏰ ಸಮಯ: ಬೆಳಿಗ್ಗೆ 11 ಗಂಟೆ 📆 ಮುಂದೆ: ಪ್ರತಿ ಬುಧವಾರ 🌱 ವಿಶೇಷತೆ: ನೈಸರ್ಗಿಕ ಮತ್ತು ವಿಷಮುಕ್ತ ಕೃಷಿ ಉತ್ಪನ್ನಗಳು ರೈತರ ಆರ್ಥಿಕ ಸ್ವಾವಲಂಬನೆ ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಈ ಪ್ರಯತ್ನದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. #Ballari #Bellary #ರೈತಸಂತೆ #ರೈತಸಂಪದ #ನೈಸರ್ಗಿಕಕೃಷಿ #ವಿಷಮುಕ್ತಆಹಾರ #ರೈತರು #ಕೃಷಿ #FarmersMarket #OrganicFarming #NaturalFarming #KarnatakaNews #BallariNews #KannadaNews #Karnataka #Farmers #OrganicFood #LocalFarmers #asnnews24kannada
    1
    “ನನ್ನದೇ ಬೆಳೆ, ನನ್ನದೇ ಬೆಲೆ!” 🌾 ಬಳ್ಳಾರಿಯಲ್ಲಿ ನಾಳೆಯಿಂದ ರೈತ ಸಂತೆ ಆರಂಭ | ವಿಷಮುಕ್ತ ಆಹಾರಕ್ಕೆ ಒತ್ತು
ಬಳ್ಳಾರಿಯಲ್ಲಿ ಆಗಸ್ಟ್ 26ರಿಂದ ‘ರೈತ ಸಂತೆ’ ಆರಂಭ! 🌾
ಗ್ರಾಹಕರಿಗೆ ನೈಸರ್ಗಿಕ ಹಾಗೂ ವಿಷಮುಕ್ತ ಕೃಷಿ ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಬಳ್ಳಾರಿಯ ಗಾಂಧಿ ಭವನದಲ್ಲಿ ರೈತ ಸಂತೆ ಆರಂಭವಾಗಲಿದೆ.
“ನನ್ನದೇ ಬೆಳೆ, ನನ್ನದೇ ಬೆಲೆ, ನನ್ನದೇ ಮಾರಾಟ” ಎಂಬ ಪರಿಕಲ್ಪನೆಯಡಿ ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ.
ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನೈಸರ್ಗಿಕ ಕೃಷಿಕರು ಭಾಗವಹಿಸಲಿದ್ದಾರೆ.
📍 ಸ್ಥಳ: ಗಾಂಧಿ ಭವನ, ಬಳ್ಳಾರಿ
📅 ದಿನಾಂಕ: ಆಗಸ್ಟ್ 26, 2026
⏰ ಸಮಯ: ಬೆಳಿಗ್ಗೆ 11 ಗಂಟೆ
📆 ಮುಂದೆ: ಪ್ರತಿ ಬುಧವಾರ
🌱 ವಿಶೇಷತೆ: ನೈಸರ್ಗಿಕ ಮತ್ತು ವಿಷಮುಕ್ತ ಕೃಷಿ ಉತ್ಪನ್ನಗಳು
ರೈತರ ಆರ್ಥಿಕ ಸ್ವಾವಲಂಬನೆ ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಈ ಪ್ರಯತ್ನದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.
#Ballari #Bellary #ರೈತಸಂತೆ #ರೈತಸಂಪದ #ನೈಸರ್ಗಿಕಕೃಷಿ #ವಿಷಮುಕ್ತಆಹಾರ #ರೈತರು #ಕೃಷಿ #FarmersMarket #OrganicFarming #NaturalFarming #KarnatakaNews #BallariNews #KannadaNews #Karnataka #Farmers #OrganicFood #LocalFarmers #asnnews24kannada
    user_AsnNews24Kannada
    AsnNews24Kannada
    Local News Reporter Ballari, Karnataka•
    11 hrs ago
  • ಮುಂಡರಗಿ ತಾಲೂಕಿನ ಸರ್ಕಾರಿ ತಾಲೂಕು ಆಸ್ಪತ್ರೆ ಕುರಿತು ಡಿ ಎಚ್ಚ ಒ ಅವರನ್ನು ಪ್ರಶ್ನೆ ಗದಗ್ ಜಿಲ್ಲಾ ಮುಂಡರಗಿ ತಾಲೂಕಿನ ತರಕಾರಿ ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಪ್ಯಾನ ವ್ಯವಸ್ಥೆ ಇಲ್ಲದೆ ಜಳದಿಂದ ರೋಗಿಗಳ ಪರದಾಟ ಬಟ್ಟೆಯಿಂದ ಗಾಳಿ ಪಡೆದುಕೊಳ್ಳುವ ರೋಗಿಗಳ ಕುರಿತು ಸಿಗರೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ
    1
    ಮುಂಡರಗಿ ತಾಲೂಕಿನ ಸರ್ಕಾರಿ ತಾಲೂಕು ಆಸ್ಪತ್ರೆ ಕುರಿತು ಡಿ ಎಚ್ಚ ಒ ಅವರನ್ನು ಪ್ರಶ್ನೆ 
ಗದಗ್ ಜಿಲ್ಲಾ ಮುಂಡರಗಿ ತಾಲೂಕಿನ ತರಕಾರಿ ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಪ್ಯಾನ ವ್ಯವಸ್ಥೆ ಇಲ್ಲದೆ ಜಳದಿಂದ ರೋಗಿಗಳ ಪರದಾಟ ಬಟ್ಟೆಯಿಂದ ಗಾಳಿ ಪಡೆದುಕೊಳ್ಳುವ ರೋಗಿಗಳ ಕುರಿತು ಸಿಗರೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    12 hrs ago
  • ಬಳ್ಳಾರಿ ನಗರದಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಬಳ್ಳಾರಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಈ ಕುರಿತು ಬಳ್ಳಾರಿ ಎಸ್ಪಿ ಸುಮನ್ ಡಿ.ಪನ್ನೇಕರ್ ಅವರಿಂದ ಸುದ್ದಿಗೋಷ್ಠಿ ಕೌಲ್ಬಜಾರ್ ಕರಿಮಾರೆಮ್ಮ ದೇವಸ್ಥಾನದ ನಿವಾಸಿ ಹನುಮಂತಪ್ಪ ಎಂಬ (28) ಮನೆಗಳ್ಳನ ಬಂಧನ ಇವನು ಬಳ್ಳಾರಿ, ವಿಜಯನಗರ, ದಾವಣಗೇರಿ,ಕೊಪ್ಪಳ, ದೊಡ್ಡ ಬಳ್ಳಾಪುರ,ಬೆಂಗಳೂರು ಹಾಗೂ ಗದಗನಲ್ಲಿ ಕಳ್ಳತನ ರಾಡ್ ಬಳಸಿ ಮನೆಗಳ್ಳತ ಮಾಡುತ್ತಿದ್ದ ಆರೋಪಿ ಹನುಮಂತ.... ಕಳ್ಳತನ ಮಾಡಿದ ಮಾಲನ್ನು ವಿವಿಧ ಶಾಪ್ಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಆರೋಪಿಯನ್ನು ವಶಕ್ಕೆ ಪಡೆದು ಬಂಗಾರದ ಒಡವೆ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ ಒಟ್ಟು ನಾಲ್ಕು ಕೇಸ್ಗಳಲ್ಲಿ ಆರೋಪಿಯಿಂದ 13,20,000 ಮೌಲ್ಯದ 110 ಗ್ರಾಂ ಬಂಗಾರ ಹಾಗೂ 10 ಲಕ್ಷ ನಗದು ವಶ ಆರೋಪಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಹೊರಗಿದ್ರು, ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಇವನ ವಿರುದ್ದ ರಾಜ್ಯದಾದ್ಯಂತ ಒಟ್ಟು 9 ಜಿಲ್ಲೆಗಳಲ್ಲಿ 40 ಪ್ರಕರಣಗಳು ಬೆಳಕಿಗೆ ಬಂದಿದೆ. -----------------
    1
    ಬಳ್ಳಾರಿ ನಗರದಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....!
ಬಳ್ಳಾರಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....!
ಈ ಕುರಿತು ಬಳ್ಳಾರಿ ಎಸ್ಪಿ ಸುಮನ್ ಡಿ.ಪನ್ನೇಕರ್ ಅವರಿಂದ ಸುದ್ದಿಗೋಷ್ಠಿ
ಕೌಲ್ಬಜಾರ್ ಕರಿಮಾರೆಮ್ಮ ದೇವಸ್ಥಾನದ ನಿವಾಸಿ ಹನುಮಂತಪ್ಪ ಎಂಬ (28) ಮನೆಗಳ್ಳನ ಬಂಧನ
ಇವನು ಬಳ್ಳಾರಿ, ವಿಜಯನಗರ, ದಾವಣಗೇರಿ,ಕೊಪ್ಪಳ, ದೊಡ್ಡ ಬಳ್ಳಾಪುರ,ಬೆಂಗಳೂರು ಹಾಗೂ ಗದಗನಲ್ಲಿ ಕಳ್ಳತನ
ರಾಡ್ ಬಳಸಿ ಮನೆಗಳ್ಳತ ಮಾಡುತ್ತಿದ್ದ ಆರೋಪಿ ಹನುಮಂತ....
ಕಳ್ಳತನ ಮಾಡಿದ ಮಾಲನ್ನು ವಿವಿಧ ಶಾಪ್ಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ
ಆರೋಪಿಯನ್ನು ವಶಕ್ಕೆ ಪಡೆದು ಬಂಗಾರದ ಒಡವೆ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ
ಒಟ್ಟು ನಾಲ್ಕು ಕೇಸ್ಗಳಲ್ಲಿ ಆರೋಪಿಯಿಂದ 13,20,000 ಮೌಲ್ಯದ 110 ಗ್ರಾಂ ಬಂಗಾರ ಹಾಗೂ 10 ಲಕ್ಷ ನಗದು ವಶ
ಆರೋಪಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಹೊರಗಿದ್ರು, ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ
ಇವನ ವಿರುದ್ದ ರಾಜ್ಯದಾದ್ಯಂತ ಒಟ್ಟು 9 ಜಿಲ್ಲೆಗಳಲ್ಲಿ 40 ಪ್ರಕರಣಗಳು ಬೆಳಕಿಗೆ ಬಂದಿದೆ.
-----------------
    user_Channakeshava Press ಗಡಿ ವಾಣಿ
    Channakeshava Press ಗಡಿ ವಾಣಿ
    ಕಂಪ್ಲಿ, ಬಳ್ಳಾರಿ, ಕರ್ನಾಟಕ•
    13 hrs ago
  • ಗ್ರಾಮ ಪಂಚಾಯತಿ ಜಾಬ್ ಕಾರ್ಡ್ ಕೂಲಿ ಕಾರ್ಮಿಕರಿಂದ ಬೆಳಗೆರೆ ಕೆರೆ ಹಳ್ಳಗಳ ಪುನರ್ ಚೇತನ ಕಾಮಗಾರಿ. ಚಳ್ಳಕೆರೆ ತಾಲೂಕಿನ ಬೆಳೆಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಏಳು ಹಳ್ಳಿಗಳಲ್ಲಿರುವ 1545 ಉದ್ಯೋಗ ಖಾತ್ರಿ ಕಾರ್ಮಿಕರ ಅನುಕೂಲಕ್ಕಾಗಿ ಬಿವಿ ಜೀ ರಾಮ್ ಜೀ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯದ ಕಾಮಗಾರಿಗಳನ್ನು ಕೈಗೊಂಡು ಸ್ಥಳೀಯವಾಗಿ ಕೂಲಿ ಕೆಲಸ ನೀಡಲಾಗಿದೆ. ಸಮೀಪದ ಹುಲಿಕುಂಟೆ ಸರ್ಕಾರಿ ಗೋಮಾಳ ಭೂಮಿಯಲ್ಲಿ ಸುಮಾರು 10 ಲಕ್ಷ ವೆಚ್ಚದ ಸಮುದಾಯ ಕಾಮಗಾರಿ ಆರಂಭಿಸಲಾಗಿದೆ. ಪ್ರತಿ ದಿನ 109 ಜನ ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಪಂಚಾಯತಿ ವ್ಯಾಪ್ತಿಯ ಬೆಳೆಗೆರೆ, ನಾರಾಯಣಪುರ, ರಂಗನಾಥಪುರ, ಕಲಮರಹಳ್ಳಿ, ಹುಲಿಕುಂಟೆ, ಭೋವಿ ಕಾಲನಿ, ಕ್ಯಾತನಮಾಳೆ ಸೇರಿದ ಹಳ್ಳಿಗಳಲ್ಲಿ ಒಟ್ಟು 1,545 ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡುಗಳನ್ನು ವಿತರಿಸಲಾಗಿದೆ. ಪ್ರಸ್ತುತ ಜಾಬ್ ಕಾರ್ಡುಗಳನ್ನು ನವೀಕರಣ ಮಾಡಿಕೊಂಡು, ವಿಬಿ ರಾಮ್ ಜೀ ಯೋಜನೆಯ 318 ವಿವಿಧ ಕಾಮಗಾರಿಗಳಲ್ಲಿ ದನ,ಕುರಿ,ಮೆಕೆಗಳ ಶೆಡ್ ನಿರ್ಮಾಣ ಸೇರಿ ಕೃಷಿ ಹೊಂಡ ಮತ್ತು ವೈಯಕ್ತಿಕ ರೈತರ ಜಮೀನ ಅಭಿವೃದ್ಧಿ ಕಾಮಗಾರಿ ಹಾಗೂ ಕೆರೆ,ಹಳ್ಳಗಳ ಪುನರ್ ಚೇತನ ಕಾಮಗಾರಿಗಳನ್ನು ಜಾರಿ ಮಾಡಲಾಗಿದೆ. ಪ್ರತಿ ದಿನ 120 ಕೂಲಿ ಕಾರ್ಮಿಕರಿಗೆ 382 ರೂ ದಿನದ ಕೂಲಿಯಂತೆ ಕೆಲಸ ನೀಡಲಾಗಿದೆ. ಈ ವರ್ಷ ಸಕಾಲಕ್ಕೆ ಮುಂಗಾರು ‌ಮಳೆ ಇಲ್ಲ. ರೈತರ ಹೊಲಗಳಲ್ಲಿ ಕೆಲಸ ಇಲ್ಲದಾಗಿದೆ. ಇದರಿಂದ ಇತರೆ ವರ್ಗದ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ಇಲ್ಲ. ವಲಸೆ ಹೋಗುವ ಪರಿಸ್ಥಿತಿಯಲ್ಲಿ ಸ್ಥಳೀಯ ಪಂಚಾಯತಿಯಿಂದ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆ. ಅಂತರ್ಜಲಕ್ಕೆ ಒತ್ತು: ಕೆರೆಗಳ ಹೂಳು ಎತ್ತುವ ಮತ್ತು ಕೆರೆಗೆ ನೀರು ಹರಿದು ಬರುವ ಹಳ್ಳಗಳ ಪುನರ್ ಚೇತನ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗಿದೆ. ಕೆರೆ,ಗೋಕಟ್ಟೆ ಅಭಿವೃದ್ಧಿಯಿಂದ ಹರಿಯುವ ಮಳೆ ನೀರು ತಡೆದು ನಿಲ್ಲಿಸುವ ಅನುಕೂಲ ಆಗುತ್ತದೆ. ಇದರಿಂದ ಅಡವಿಯಲ್ಲಿ ಜನ,ಜಾನುವಾರು ಸೇರಿ ಪ್ರಾಣಿ,ಪಕ್ಷಿಗಳಿಗೆ ಕುಡಿಯುವ ನೀರಿನ ಅನುಕೂಲ ಮತ್ತು ಅಂತರ್ಜಲ ವೃದ್ದಿಗೆ ಆಧಾರ ಆಗುತ್ತದೆ. ಬರಗಾಲ ಪರಿಸ್ಥಿತಿಗೆ ಕೆಲಸ ಹುಡುಕಿಕೊಂಡು ಬೇರೆ ಕಡೆ ಹೋಗದಂತೆ ಗ್ರಾಮ ಸಮೀಪ ಸಾಮೂಹಿಕವಾಗಿ ಮಾಡುವ ಸಮುದಾಯ ಕಾಮಗಾರಿ ಕೆಲಸ ನೀಡಲಾಗಿದೆ. ಕೆಲ ರೈತರು ವೈಯಕ್ತಿಕವಾಗಿಯೂ ತಮ್ಮ ಹೊಲಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿಕೊಂಡರೂ ಕೂಲಿ ಸಿಗುತ್ತದೆ ಎನ್ನುತ್ತಾರೆ ಪಿಡಿಒ ಸಿ.ಎಂ‌. ದೇವೇಂದ್ರಪ್ಪ. ತಾಲೂಕಿನ 40 ಗ್ರಾಮ ಪಂಚಾಯತಿಗಳಲ್ಲಿ ವಿಬಿ ರಾಮ್ ಜೀ ಯೋಜನೆಯಡಿ ಒಟ್ಟು 8,026 ಕಾಮಗಾರಿಗಳ ಅನುಮೋದನೆ ಮಾಡಲಾಗಿದೆ. ಇದರಲ್ಲಿ 1626 ವೈಯಕ್ತಿಕ ಕಾಮಗಾರಿ ಸೇರಿ ಉಳಿದಂತೆ ಸಮೂಹ ಕಾಮಗಾರಿಗಳಿಗೆ ಅವಕಾಶ ಇದೆ. ಪ್ರತಿದಿನ ಸರಾಸರಿ 4 ಸಾವಿರ ಕಾರ್ಮಿಕರು ದುಡಿಯಲು ಅನುಕೂಲ ಮಾಡಲಾಗಿದೆ. ಕೆಲಸಕ್ಕಾಗಿ ಗೂಳೆ ಹೋಗದಂತೆ ಪಂಚಾಯತಿಯಲ್ಲಿ ಕೆಲಸ ಪಡೆಯುವ ಅವಕಾಶ ಇದೆ. ಕೆಲ ಗ್ರಾಮಗಳಲ್ಲಿ ಡಂಗೂರ ಸಾರಿ ಕಾರ್ಮಿಕರಿಗೆ ಸ್ಥಳೀಯ ಕೂಲಿ ಕೆಲಸದ ಬಗ್ಗೆ ಜಾಗೃತಿಗೆ ಕ್ರಮ ವಹಿಸಲಾಗಿದೆ_ ಎಚ್. ಶಶಿಧರ್, ತಾಪಂ, ಇಒ, ಚಳ್ಳಕೆರೆ.
    1
    ಗ್ರಾಮ ಪಂಚಾಯತಿ ಜಾಬ್ ಕಾರ್ಡ್ ಕೂಲಿ ಕಾರ್ಮಿಕರಿಂದ ಬೆಳಗೆರೆ  ಕೆರೆ ಹಳ್ಳಗಳ ಪುನರ್ ಚೇತನ ಕಾಮಗಾರಿ.
ಚಳ್ಳಕೆರೆ ತಾಲೂಕಿನ ಬೆಳೆಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಏಳು ಹಳ್ಳಿಗಳಲ್ಲಿರುವ 1545 ಉದ್ಯೋಗ ಖಾತ್ರಿ ಕಾರ್ಮಿಕರ ಅನುಕೂಲಕ್ಕಾಗಿ ಬಿವಿ ಜೀ ರಾಮ್ ಜೀ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯದ ಕಾಮಗಾರಿಗಳನ್ನು ಕೈಗೊಂಡು ಸ್ಥಳೀಯವಾಗಿ ಕೂಲಿ ಕೆಲಸ ನೀಡಲಾಗಿದೆ. ಸಮೀಪದ ಹುಲಿಕುಂಟೆ ಸರ್ಕಾರಿ ಗೋಮಾಳ ಭೂಮಿಯಲ್ಲಿ ಸುಮಾರು 10 ಲಕ್ಷ ವೆಚ್ಚದ ಸಮುದಾಯ ಕಾಮಗಾರಿ ಆರಂಭಿಸಲಾಗಿದೆ. ಪ್ರತಿ ದಿನ 109 ಜನ ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಪಂಚಾಯತಿ ವ್ಯಾಪ್ತಿಯ ಬೆಳೆಗೆರೆ, ನಾರಾಯಣಪುರ, ರಂಗನಾಥಪುರ, ಕಲಮರಹಳ್ಳಿ, ಹುಲಿಕುಂಟೆ, ಭೋವಿ ಕಾಲನಿ, ಕ್ಯಾತನಮಾಳೆ ಸೇರಿದ ಹಳ್ಳಿಗಳಲ್ಲಿ ಒಟ್ಟು 1,545 ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡುಗಳನ್ನು ವಿತರಿಸಲಾಗಿದೆ. ಪ್ರಸ್ತುತ ಜಾಬ್ ಕಾರ್ಡುಗಳನ್ನು ನವೀಕರಣ ಮಾಡಿಕೊಂಡು, ವಿಬಿ ರಾಮ್ ಜೀ ಯೋಜನೆಯ 318 ವಿವಿಧ ಕಾಮಗಾರಿಗಳಲ್ಲಿ ದನ,ಕುರಿ,ಮೆಕೆಗಳ ಶೆಡ್ ನಿರ್ಮಾಣ ಸೇರಿ ಕೃಷಿ ಹೊಂಡ ಮತ್ತು ವೈಯಕ್ತಿಕ ರೈತರ ಜಮೀನ   ಅಭಿವೃದ್ಧಿ ಕಾಮಗಾರಿ ಹಾಗೂ ಕೆರೆ,ಹಳ್ಳಗಳ ಪುನರ್ ಚೇತನ ಕಾಮಗಾರಿಗಳನ್ನು ಜಾರಿ ಮಾಡಲಾಗಿದೆ. ಪ್ರತಿ ದಿನ 120 ಕೂಲಿ ಕಾರ್ಮಿಕರಿಗೆ 382 ರೂ ದಿನದ ಕೂಲಿಯಂತೆ ಕೆಲಸ ನೀಡಲಾಗಿದೆ. ಈ ವರ್ಷ ಸಕಾಲಕ್ಕೆ ಮುಂಗಾರು ‌ಮಳೆ ಇಲ್ಲ. ರೈತರ ಹೊಲಗಳಲ್ಲಿ ಕೆಲಸ ಇಲ್ಲದಾಗಿದೆ. ಇದರಿಂದ ಇತರೆ ವರ್ಗದ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸ ಇಲ್ಲ. ವಲಸೆ ಹೋಗುವ ಪರಿಸ್ಥಿತಿಯಲ್ಲಿ ಸ್ಥಳೀಯ ಪಂಚಾಯತಿಯಿಂದ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆ. 
ಅಂತರ್ಜಲಕ್ಕೆ ಒತ್ತು: ಕೆರೆಗಳ ಹೂಳು ಎತ್ತುವ ಮತ್ತು ಕೆರೆಗೆ ನೀರು ಹರಿದು ಬರುವ ಹಳ್ಳಗಳ ಪುನರ್ ಚೇತನ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗಿದೆ. ಕೆರೆ,ಗೋಕಟ್ಟೆ ಅಭಿವೃದ್ಧಿಯಿಂದ ಹರಿಯುವ ಮಳೆ ನೀರು ತಡೆದು ನಿಲ್ಲಿಸುವ ಅನುಕೂಲ ಆಗುತ್ತದೆ. ಇದರಿಂದ ಅಡವಿಯಲ್ಲಿ ಜನ,ಜಾನುವಾರು ಸೇರಿ ಪ್ರಾಣಿ,ಪಕ್ಷಿಗಳಿಗೆ ಕುಡಿಯುವ ನೀರಿನ ಅನುಕೂಲ ಮತ್ತು ಅಂತರ್ಜಲ ವೃದ್ದಿಗೆ ಆಧಾರ ಆಗುತ್ತದೆ. ಬರಗಾಲ ಪರಿಸ್ಥಿತಿಗೆ ಕೆಲಸ ಹುಡುಕಿಕೊಂಡು ಬೇರೆ ಕಡೆ ಹೋಗದಂತೆ ಗ್ರಾಮ ಸಮೀಪ ಸಾಮೂಹಿಕವಾಗಿ ಮಾಡುವ ಸಮುದಾಯ ಕಾಮಗಾರಿ ಕೆಲಸ ನೀಡಲಾಗಿದೆ. ಕೆಲ ರೈತರು ವೈಯಕ್ತಿಕವಾಗಿಯೂ ತಮ್ಮ ಹೊಲಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿಕೊಂಡರೂ ಕೂಲಿ ಸಿಗುತ್ತದೆ ಎನ್ನುತ್ತಾರೆ ಪಿಡಿಒ ಸಿ.ಎಂ‌. ದೇವೇಂದ್ರಪ್ಪ.
ತಾಲೂಕಿನ 40 ಗ್ರಾಮ ಪಂಚಾಯತಿಗಳಲ್ಲಿ ವಿಬಿ ರಾಮ್ ಜೀ ಯೋಜನೆಯಡಿ ಒಟ್ಟು 8,026 ಕಾಮಗಾರಿಗಳ ಅನುಮೋದನೆ ಮಾಡಲಾಗಿದೆ. ಇದರಲ್ಲಿ 1626 ವೈಯಕ್ತಿಕ ಕಾಮಗಾರಿ ಸೇರಿ ಉಳಿದಂತೆ ಸಮೂಹ ಕಾಮಗಾರಿಗಳಿಗೆ ಅವಕಾಶ ಇದೆ. ಪ್ರತಿದಿನ ಸರಾಸರಿ 4 ಸಾವಿರ ಕಾರ್ಮಿಕರು ದುಡಿಯಲು ಅನುಕೂಲ ಮಾಡಲಾಗಿದೆ. ಕೆಲಸಕ್ಕಾಗಿ ಗೂಳೆ ಹೋಗದಂತೆ ಪಂಚಾಯತಿಯಲ್ಲಿ ಕೆಲಸ ಪಡೆಯುವ ಅವಕಾಶ ಇದೆ. ಕೆಲ ಗ್ರಾಮಗಳಲ್ಲಿ ಡಂಗೂರ ಸಾರಿ ಕಾರ್ಮಿಕರಿಗೆ ಸ್ಥಳೀಯ ಕೂಲಿ ಕೆಲಸದ ಬಗ್ಗೆ ಜಾಗೃತಿಗೆ ಕ್ರಮ ವಹಿಸಲಾಗಿದೆ_ ಎಚ್. ಶಶಿಧರ್, ತಾಪಂ, ಇಒ, ಚಳ್ಳಕೆರೆ.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    24 min ago
  • ಕೋಟೆನಾಡು ಚಿತ್ರದುರ್ಗದಲ್ಲಿ ಯಶ್ ರ ಬಹೂ ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಗೆ ಅದ್ದೂರಿ ಸ್ವಾಗತ ಕೋಟೆನಾಡು ಚಿತ್ರದುರ್ಗದಲ್ಲಿ ಯಶ್ ರ ಬಹೂ ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ರ ಬಹೂ ನಿರೀಕ್ಷಿತ ಸಿನಿಮಾ ಟಾಕ್ಸಿ್ಕ ಎಲ್ಲೆಡೆ ಇಂದು ಅಬ್ಬರ ಆರಂಬಿಸಿದೆ. ಅದರಂತೆ ಕೋಟೆನಾಡು ಚಿತ್ರದುರ್ಗದ ಬಸವೇಶ್ವರ ಹಾಗೂ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಟಾಕ್ಸಿಕ್ ಸಿನಿಮಾ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದೆ. ಇನ್ನೂ ಬೆಳಗ್ಗೆ 5.30 ಕ್ಕೆ ಟಾಕ್ಸಿಕ್ ಮೊದಲ ಶೋ ಪ್ರಾರಂಬವಾಗಿದ್ದು ಮೊದಲ ದಿನವೇ ಟಾಕ್ಸಿಕ್ ಕೆ ಬಿಗ್ ರೆಸ್ಪಾನ್ಸ್ ದೊರೆತಿದ್ದು ಥಿಯೇಟರ್‌ ಗಳು ಹೌಸ್ ಫುಲ್ ಆಗಿವೆ. ಅಷ್ಟೇ ಅಲ್ಲದೆ ಸಿನಿಮಾ ಬಿಡುಗಡೆ ಹಿನ್ನೆಲೆ ಥಿಯೇಟರ್‌ ಅನ್ನ ಮದುವಣಗಿತ್ತಿಯಂತೆ ಸಿಂಗರಿಸಿದ್ದು ಯಶ್ ಅಭಿಮಾನಿಗಳು ಸಿನಿ ಪ್ರಿಯರು ಬೆಳಗ್ಗೆಯೇ ಆಗಮಿಸಿದ್ದು ದೊಡ್ಡದಾದ ಯಶ್ ತ ಕಟೌಟ್ ಗೆ ದೊಡ್ಡದಾದ ಹೂಮಾಲೆ ಹಾಕಿ ಪುಷ್ಪವೃಷ್ಟಿ ಮಾಡಿದ್ದು ಟಾಕ್ಸಿಕ್ ಸಿನಿಮಾದ ಪರ ಘೋಷಣೆಗಳನ್ನ ಕೂಗಿದ್ದು ಕುಂಬಳಕಾಯಿ ಒಡೆದು ಕರ್ಪೂರ ಬೆಳಗಿ ಟಾಕ್ಸಿಕ್ ಗೆ ಶುಭಹಾರೈಸಿದ್ದು ಶತದಿನೋತ್ಸವ ಆಚರಿಸಲಿ ಎಂದು ಶುಭಕೋರಿದ್ದಾರೆ. ಇನ್ನೂ ಥಿಯೇಟರ್ ನಲ್ಲಿ ಸಿನಿಮಾ ಆರಂಬವಾಗುತ್ತಿದ್ದಂತೆ ಯಶ್ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಹೂಮಳೆ ಸುರಿಸಿ ಸ್ಟೆಪ್ ಹಾಕಿದ ಅಭಿಮಾನಿಗಳು ಟಾಕ್ಸಿಕ್ ಸಿನಿಮಾವನ್ನ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ
    1
    ಕೋಟೆನಾಡು ಚಿತ್ರದುರ್ಗದಲ್ಲಿ ಯಶ್ ರ ಬಹೂ ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಗೆ ಅದ್ದೂರಿ ಸ್ವಾಗತ
ಕೋಟೆನಾಡು ಚಿತ್ರದುರ್ಗದಲ್ಲಿ ಯಶ್ ರ ಬಹೂ ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ರ ಬಹೂ ನಿರೀಕ್ಷಿತ ಸಿನಿಮಾ ಟಾಕ್ಸಿ್ಕ ಎಲ್ಲೆಡೆ ಇಂದು ಅಬ್ಬರ ಆರಂಬಿಸಿದೆ. ಅದರಂತೆ ಕೋಟೆನಾಡು ಚಿತ್ರದುರ್ಗದ ಬಸವೇಶ್ವರ ಹಾಗೂ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಟಾಕ್ಸಿಕ್ ಸಿನಿಮಾ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದೆ. ಇನ್ನೂ ಬೆಳಗ್ಗೆ 5.30 ಕ್ಕೆ ಟಾಕ್ಸಿಕ್ ಮೊದಲ ಶೋ ಪ್ರಾರಂಬವಾಗಿದ್ದು ಮೊದಲ ದಿನವೇ ಟಾಕ್ಸಿಕ್ ಕೆ ಬಿಗ್ ರೆಸ್ಪಾನ್ಸ್ ದೊರೆತಿದ್ದು ಥಿಯೇಟರ್‌ ಗಳು ಹೌಸ್ ಫುಲ್ ಆಗಿವೆ. ಅಷ್ಟೇ ಅಲ್ಲದೆ ಸಿನಿಮಾ ಬಿಡುಗಡೆ ಹಿನ್ನೆಲೆ ಥಿಯೇಟರ್‌ ಅನ್ನ ಮದುವಣಗಿತ್ತಿಯಂತೆ ಸಿಂಗರಿಸಿದ್ದು ಯಶ್ ಅಭಿಮಾನಿಗಳು ಸಿನಿ ಪ್ರಿಯರು ಬೆಳಗ್ಗೆಯೇ ಆಗಮಿಸಿದ್ದು ದೊಡ್ಡದಾದ ಯಶ್ ತ ಕಟೌಟ್ ಗೆ ದೊಡ್ಡದಾದ ಹೂಮಾಲೆ ಹಾಕಿ ಪುಷ್ಪವೃಷ್ಟಿ ಮಾಡಿದ್ದು ಟಾಕ್ಸಿಕ್ ಸಿನಿಮಾದ ಪರ ಘೋಷಣೆಗಳನ್ನ ಕೂಗಿದ್ದು ಕುಂಬಳಕಾಯಿ ಒಡೆದು ಕರ್ಪೂರ ಬೆಳಗಿ ಟಾಕ್ಸಿಕ್ ಗೆ ಶುಭಹಾರೈಸಿದ್ದು ಶತದಿನೋತ್ಸವ ಆಚರಿಸಲಿ ಎಂದು ಶುಭಕೋರಿದ್ದಾರೆ. ಇನ್ನೂ ಥಿಯೇಟರ್ ನಲ್ಲಿ ಸಿನಿಮಾ ಆರಂಬವಾಗುತ್ತಿದ್ದಂತೆ ಯಶ್ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಹೂಮಳೆ ಸುರಿಸಿ ಸ್ಟೆಪ್ ಹಾಕಿದ ಅಭಿಮಾನಿಗಳು ಟಾಕ್ಸಿಕ್ ಸಿನಿಮಾವನ್ನ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ರಾಯಚೂರು ಜಿಲ್ಲೆಯ ದಲಿತ ಮುಖಂಡ ಭೂಮಾನಂದನ ಕೊಲೆ ಮತ್ತು ಅಶ್ವಿನಿಅತ್ಯಾಚಾರ ಕೊಲೆ ಖಂಡಿಸಿ ನಗರದಲ್ಲಿ ಪ್ರತಿಭಟನೆ ಬಳ್ಳಾರಿ / ಕಂಪ್ಲಿ : ರಾಯಚೂರು ಜಿಲ್ಲೆಯ ದಲಿತ ಮುಖಂಡ ಭೂಮಾನಂದನ ಕೊಲೆ ಮತ್ತು ಅಶ್ವಿನಿ ಅತ್ಯಾಚಾರ ಕೊಲೆ ಖಂಡಿಸಿ, ಸಮಾನ ಮನಸ್ಕರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಕಂದಾಯ ಅಧಿಕಾರಿ ಸುರೇಶ್‌ಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ಕಾರಕ್ಕೆ ರವಾನಿಸಿದರು. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಯುವಕ ಭೂಮಾನಂದನ ಕೊಲೆ ಮತ್ತು ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಯುವತಿ ಅಶ್ವಿನಿ ಅತ್ಯಾಚಾರ ಮತ್ತು ಕೊಲೆಯನ್ನು ತೀವ್ರವಾಗಿ ಖಂಡಿಸಿದ್ದು ದಿನೇ ದಿನೇ ದಲಿತರ ಮೇಲೆ ದೌರ್ಜನ್ಯಗಳು, ಕೊಲೆಗಳು, ಅತ್ಯಾಚಾರಗಳು ಸಂಭವಿಸುತ್ತಿದ್ದು ಇದಕ್ಕೆ ನೇರ ಸರ್ಕಾರವೇ ಹೊಣೆ ಹಾಗೂ ನೊಂದ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಮತ್ತು ಸರ್ಕಾರವು ಉದ್ಯೋಗ ಮತ್ತು ಪರಿಹಾರ ಕೊಡಬೇಕು. ಹಾಗೂ ಆರೋಪಿಗಳನ್ನು ಕೂಡಲೆ ಬಂಧಿಸಿ ಕಾನೂನಾತ್ಮಕವಾಗಿ ತನಿಖೆ ನಡೆಸಿ, ಈ ಕೃತ್ಯವನ್ನು ಮಾಡಿದವರಿಗೆ ಸಂಪೂರ್ಣ ವಿಚಾರಣೆ ನಡೆಸಿ ಆದಷ್ಟು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಒತ್ತಾಯ ಮಾಡುತ್ತೇವೆ |
    1
    ರಾಯಚೂರು ಜಿಲ್ಲೆಯ ದಲಿತ
ಮುಖಂಡ ಭೂಮಾನಂದನ ಕೊಲೆ ಮತ್ತು ಅಶ್ವಿನಿಅತ್ಯಾಚಾರ ಕೊಲೆ ಖಂಡಿಸಿ ನಗರದಲ್ಲಿ ಪ್ರತಿಭಟನೆ 
ಬಳ್ಳಾರಿ / ಕಂಪ್ಲಿ : ರಾಯಚೂರು ಜಿಲ್ಲೆಯ ದಲಿತ
ಮುಖಂಡ ಭೂಮಾನಂದನ ಕೊಲೆ ಮತ್ತು ಅಶ್ವಿನಿ
ಅತ್ಯಾಚಾರ ಕೊಲೆ ಖಂಡಿಸಿ, ಸಮಾನ ಮನಸ್ಕರ
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು
ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಕಂದಾಯ
ಅಧಿಕಾರಿ ಸುರೇಶ್‌ಗೆ ಮನವಿ ಪತ್ರ ಸಲ್ಲಿಸುವ ಮೂಲಕ
ಸರ್ಕಾರಕ್ಕೆ ರವಾನಿಸಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ
ಸುಂಕೇಶ್ವರಹಾಳ ಗ್ರಾಮದ ಯುವಕ ಭೂಮಾನಂದನ
ಕೊಲೆ ಮತ್ತು ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ
ಯುವತಿ ಅಶ್ವಿನಿ ಅತ್ಯಾಚಾರ ಮತ್ತು ಕೊಲೆಯನ್ನು
ತೀವ್ರವಾಗಿ ಖಂಡಿಸಿದ್ದು ದಿನೇ ದಿನೇ ದಲಿತರ ಮೇಲೆ
ದೌರ್ಜನ್ಯಗಳು, ಕೊಲೆಗಳು, ಅತ್ಯಾಚಾರಗಳು
ಸಂಭವಿಸುತ್ತಿದ್ದು ಇದಕ್ಕೆ ನೇರ ಸರ್ಕಾರವೇ ಹೊಣೆ ಹಾಗೂ
ನೊಂದ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಮತ್ತು
ಸರ್ಕಾರವು ಉದ್ಯೋಗ ಮತ್ತು ಪರಿಹಾರ ಕೊಡಬೇಕು.
ಹಾಗೂ ಆರೋಪಿಗಳನ್ನು ಕೂಡಲೆ ಬಂಧಿಸಿ
ಕಾನೂನಾತ್ಮಕವಾಗಿ ತನಿಖೆ ನಡೆಸಿ, ಈ ಕೃತ್ಯವನ್ನು
ಮಾಡಿದವರಿಗೆ ಸಂಪೂರ್ಣ ವಿಚಾರಣೆ ನಡೆಸಿ ಆದಷ್ಟು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಒತ್ತಾಯ ಮಾಡುತ್ತೇವೆ 
|
    user_Channakeshava Press ಗಡಿ ವಾಣಿ
    Channakeshava Press ಗಡಿ ವಾಣಿ
    ಕಂಪ್ಲಿ, ಬಳ್ಳಾರಿ, ಕರ್ನಾಟಕ•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.