ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದು, ಪಕ್ಷದ ಕಾರ್ಯಕರ್ತರು ನನ್ನ ಹೆಸರನ್ನು ಸೂಚಿಸಿ- ಸಿಎಂ ದ್ಯಾವಪ್ಪ ಮಂಡ್ಯ: ರಾಜ್ಯದಲ್ಲಿನ ಜಿಲ್ಲಾ ಅಧ್ಯಕ್ಷರ ಆಯ್ಕೆಗಾಗಿ ಎಐಸಿಸಿ ಕಾರ್ಯದರ್ಶಿ ಸೈಮನ್ ಅಲೆಕ್ಸ್ ಅವರು ಮಂಡ್ಯ ಜಿಲ್ಲೆಯಲ್ಲಿ ಆ.4ರಿಂದ 7ರವರೆಗೆ ಅವರು ಸಂಘಟನೆ, ಸೃಜನ್ ಅಭಿಯಾನ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದು, ಪಕ್ಷದ ಕಾರ್ಯಕರ್ತರು ತಮ್ಮ ಪರವಾಗಿ ಅಭಿಪ್ರಾಯಗಳನ್ನು ತಿಳಿಸುವಂತೆ ಮನವಿ ಮಾಡಿದರು. ಎಐಸಿಸಿ ಕಾರ್ಯದರ್ಶಿ ಸೈಮನ್ ಅಲೆಕ್ಸ್ ಅವರ ಸಹಾಯಕರಾಗಿ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಗಳಾದ ಎಂ.ಲಕ್ಷ್ಮಣ, ಮಂಜುಳಾ ನಾಯ್ಡು, ಗೋಪಿಕೃಷ್ಣ, ನೆರೇಂದ್ರ ಉಪಸ್ಥಿತರಿರುವರು. ಇವರ ತಂಡವು ಅಧ್ಯಕ್ಷ ಹುದ್ದೆಗೆ ಸಾಮಾನ್ಯ ವರ್ಗದಿಂದ 2, ಎಸ್ಸಿ, ಅಲ್ಪಸಂಖ್ಯಾತ, ಒಬಿಸಿ ಹಾಗೂ ಮಹಿಳೆ ವಿಭಾಗದಿಂದ ತಲಾ 1 ಸೇರಿ ಒಟ್ಟು ಆರು ಮಂದಿಯ ಹೆಸರಿನ್ನು ಎಐಸಿಸಿಗೆ ಶಿಫಾರಸ್ಸು ಮಾಡುವರು. ಈ ಸಂಬAಧ ಗ್ರಾಮಗಳ ಬೂತ್ ಮಟ್ಟದಿಂದಲೂ ಕಾರ್ಯಕರ್ತರು ಗೌಪ್ಯ ಅಭಿಪ್ರಾಯ ಸಂಗ್ರಹ ಮಾಡುವರು ಎಂದರು. ತAಡವು ಆ.4ರಂದು ಮಂಡ್ಯ ನಗರದ ಬ್ರಾಹ್ಮಣ ಸಮುದಾಯ ಭವನದಲ್ಲಿ ಬೆಳಗ್ಗೆ 9.30ಕ್ಕೆ, ಮಂಡ್ಯ ಗ್ರಾಮಾಂತರ ಭಾಗದಲ್ಲಿ ಮಧ್ಯಾಹ್ನ 1.30ಕ್ಕೆ ಅಭಿಪ್ರಾಯ ಸಂಗ್ರಹಿಸುವರು. ಆ.5ರಂದು ಶ್ರೀರಂಗಪಟ್ಟಣ, 6ರಂದು ಬೆಳಗ್ಗೆ 10ಕ್ಕೆ ನಾಮಗಂಗಲ, ಮಧ್ಯಾಹ್ನ 2ಕ್ಕೆ ಮದ್ದೂರಿನ ಕೊಪ್ಪದಲ್ಲಿ, 7ರಂದು ಬೆಳಗ್ಗೆ 10ಕ್ಕೆ ಪಾಂಡವಪುರ, ಮಧ್ಯಾಹ್ನ 2ಕ್ಕೆ ಮೇಲುಕೋಟೆ ಗ್ರಾಮಾಂತರ ಭಾಗದಿಂದ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹಲ್ಲೇಗೆರೆ ಶಿವರಾಂ, ನಾಗರಾಜು, ವರಲಕ್ಷಿö್ಮ, ಪ್ರಶಾಂತ್ ಇತರರಿದ್ದರು.

- ಶ್ರೀಆದಿಶಕ್ತಿ ಶ್ರೀ ಚಾಮುಂಡೇಶ್ವರಿಯ ಹುಟ್ಟು ಹಬ್ಬದಪ್ರಯುಕ್ತಉಚಿತ ಸಮವಸ್ತ್ರಹಾಗೂಸಿಹಿ ವಿತರಣೆ ಮಂಡ್ಯ- ಶ್ರೀಆದಿಶಕ್ತಿ ಶ್ರೀ ಚಾಮುಂಡೇಶ್ವರಿಯ ಹುಟ್ಟು ಹಬ್ಬದ ಮುನ್ನ ದಿನವಾದ ಇಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ ಅವರಿಂದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಸಿಹಿ ವಿತರಣೆ,ಮತ್ತು ಸಾರ್ವಜನಿಕ ರಿಗೆಉಚಿತವಾಗಿ ನೀಡುವ ಚಾಮುಂಡೇಶ್ವರಿಯ ಭಾವಚಿತ್ರವುಳ್ಳ ಗ್ರೀಟಿಂಗ್ಸ್ ಅನ್ನು ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು. ಮಂಡ್ಯ ರಕ್ಷಣಾವೇದಿಕೆ ಜಗದ ಮಾತೆ ಚಾಮುಂಡಿ ಕೃಪೆಯಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರ ಜೀವನದಲ್ಲಿ ಉತ್ತಮವಾಗಿರಲಿ ಬೇಡಿತು. ಈ ಸಂದರ್ಭದಲ್ಲಿ . ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ ,ಶಂಕರ ಬಾಬು ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ,ಎಚ್ ಜಗದೀಶ್ ಗೌಡ ರೈತರ ಶಾಲೆಯ ಸಂಸ್ಥಾಪಕರಾದ ಗಂಜಾಂಸತ್ಯಮೂರ್ತಿ ಜಗದೀಶ್ ಚಂದನ್ ಇತರಿದ್ದರು1
- ಪಿ ಎಂ ನರೇಂದ್ರಸ್ವಾಮಿ ಅವರು ಸಚಿವ ಸಂಪುಟ ಸೇರ್ಪಡೆ ಹಿನ್ನಲೆ, ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರಿಂದ ವಿಜಯೋತ್ಸವ ಆಚರಣೆ ಮಳವಳ್ಳಿ : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ನೂತನ ಮಂತ್ರಿಮಂಡಲದ ಪಟ್ಟಿಯಲ್ಲಿ ಕ್ಷೇತ್ರದ ಶಾಸಕ ಪಿ ಎಂ ನರೇಂದ್ರ ಸ್ವಾಮಿ ಅವರ ಹೆಸರನ್ನು ಎಐಸಿಸಿ ಘೋಷಣೆ ಮಾಡು ತ್ತಿದ್ದಂತೆ ಮಳವಳ್ಳಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾರಿ ಪಟಾಕಿ ಸಿಡಿಸಿ ಜಯಘೋಷಗಳನ್ನು ಕೂಗುವುದರೊಂದಿಗೆ ವಿಜ ಯೋತ್ಸವ ಆಚರಿಸಿದರು. ಸೋಮವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಇಲ್ಲಿನ ಪೇಟೆ ವೃತ್ತದಲ್ಲಿ ನೆರೆದ ನೂರಾರು ಮಂದಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾರಿ ಪಟಾಕಿ ಸಿಡಿಸಿ ಜೊತೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಶಾಸಕ ಪಿ ಎಂ ನರೇಂದ್ರಸ್ವಾಮಿ ಹಾಗೂ ಪಕ್ಷದ ನಾಯಕರ ಪರ ಜಯಘೋಷಗ ಳನ್ನು ಮೊಳಗಿಸಿದರು, ಜೊತೆಗೆ ಪರಸ್ಪರ ಸಿಹಿ ಹಂಚಿ ಸಂಭ್ರಮಿ ಸಿದರಲ್ಲದೆ ಹಷೋದ್ಗಾರಗಳೊಂ ದಿಂಗೆ ಕುಣಿದು ಕುಪ್ಪಳಿಸಿದರು. ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಪಿ ರಾಜು ಮಾಜಿ ಅಧ್ಯಕ್ಷ ಕೆ ಜೆ ದೇವ ರಾಜು, ಮನ್ ಮುಲ್ ನಿರ್ಧೇ ಶಕ ಆರ್ ಎನ್ ವಿಶ್ವಾಸ್ ಅವರುಗಳು ಹಲವಾರು ದಶಕ ಗಳಿಂದ ಕಾಂಗ್ರೆಸ್ ಪಕ್ಷದ ಏಳಿಗೆ ಗಾಗಿ ಅವಿರತ ಶ್ರಮಿಸಿದ ಶಾಸಕ ರಾದ ಪಿ ಎಂ ನರೇಂದ್ರ ಸ್ವಾಮಿ ಅವರ ದುಡಿಮೆ, ದಕ್ಷತೆ, ಸಂಘ ಟನಾ ಶಕ್ತಿಗೆ ಈಗ ಫಲ ಸಿಕ್ಕಿದ್ದು ಇದು ಇಡೀ ಕ್ಷೇತ್ರದ ಜನತೆಗೆ ಸಂದ ಗೌರವವಾಗಿದೆ ಎಂದರು. ಶಾಸಕರಾಗಿ ಸಚಿವರಾಗಿ ಸಾಕಷ್ಟು ಅನುಭವ ಹೊಂದಿ ರುವ ನರೇಂದ್ರಸ್ವಾಮಿ ಅವರಿಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವ ಶಕ್ತಿ ಅವರಿಗೆ ಇದೆ ಎಂದು ಹೇಳಿದರು. ಇಂದಿನ ವಿಜಯೋತ್ಸವದ ಪ್ರಮುಖ ಆಯೋಜಕರು ಕಾಂಗ್ರೆಸ್ ಮುಖಂಡರೂ ಆದ ಎಂ ಪಿ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಯುವ ಕಾಂಗ್ರೆಸ್ ಅದ್ಯಕ್ಷ ಶ್ರೀಕಾಂತ್, ಟಿಎಪಿಸಿಎಂಎಸ್ ಅಧ್ಯಕ್ಷರಾದ ಲಿಂಗರಾಜು, ಮುಖಂಡರಾದ ಬಂಕ್ ಮಹದೇವು, ಅಂಬರೀಶ್, ಸಿ ಎಂ ವೇದಮೂರ್ತಿ, ಮಾಜಿ ಪುರಸಭಾಧ್ಯಕ್ಷ ಗಂಗರಾಜು ಅರಸ್, ಅಯ್ಯೂಬ್ ಪಾಷಾ, ಸಂತೋಷ್, ಆನಂದ್ ಕುಮಾರ್, ವಿಶ್ವ, ಹೆಚ್ ಎಂ ಮಹೇಶ್, ಮಂಚನಹಳ್ಳಿ ಸಿದ್ದರಾಜು, ದುನಿಯಾ ಮಂಜು ಮತ್ತಿತರರು ಈ ವೇಳೆ ಹಾಜರಿದ್ದರು.1
- "ತನ್ವೀರ್ ಸೇಠ್ ಅಭಿಮಾನಿಗಳ ಪ್ರತಿಭಟನೆ. "ಬೆಂಗಳೂರು-ಮೈಸೂರು ರಸ್ತೆ ಬಂದ್: ಮಣಿಪಾಲ್ ಆಸ್ಪತ್ರೆ ವೃತ್ತದಲ್ಲಿ ತನ್ವೀರ್ ಸೇಠ್ ಅಭಿಮಾನಿಗಳ ಪ್ರತಿಭಟನೆ!" "ಬೆಂಗಳೂರು-ಮೈಸೂರು ರಸ್ತೆ ಬಂದ್: ಮಣಿಪಾಲ್ ಆಸ್ಪತ್ರೆ ವೃತ್ತದಲ್ಲಿ ತನ್ವೀರ್ ಸೇಠ್ ಅಭಿಮಾನಿಗಳ ಪ್ರತಿಭಟನೆ!"1
- All About,Who will be held Accountable for Irregularities related with #Telangana #WaqfBoard *ಭಾರತ ನಲ್ಲಿ ವೈರಲ್*1
- ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕುಣಿಗಲ್ ನ ರಂಗನಾಥ ಸ್ಕೇಟಿಂಗ್ ಕ್ಲಬ್ ನ ಮಕ್ಕಳು ಕುಣಿಗಲ್ ರಂಗನಾಥ ಸ್ಕೇಟಿಂಗ್ ಕ್ಲಬ್ ಮೇಲೆ ನಂಬಿಕೆ ಇಟ್ಟು ತಮ್ಮ ಮಕ್ಕಳನ್ನು ನಮ್ಮ ಬಳಿ ಸ್ಕೇಟಿಂಗ್ ತರಬೇತಿಗೆ ಕಳುಹಿಸಿದ್ದಿರಿ ನಾವು ನಮ್ಮ ಕುಣಿಗಲ್ ತಾಲ್ಲೂಕಿನಲ್ಲಿ ಇರುವ ಕಡಿಮೆ ಸವಲತ್ತು ಬಳಸಿ ಸ್ಕೇಟಿಂಗ್ ತರಬೇತಿ ಯನ್ನು ನೀಡುತ್ತಿದ್ದು ನಮ್ಮ ಸ್ಕೇಟಿಂಗ್ ಕ್ಲಬ್ ನ ಮಕ್ಕಳು ನಿಮ್ಮೆಲ್ಲರ ಸಹಕಾರದಿಂದ ರಾಜ್ಯಮಟ್ಟದ ಸ್ಕೇಟಿಂಗ್ನಲ್ಲಿ ಭಾಗವಹಿಸಿದ್ದಾರೆ1
- ಯಳಂದೂರು ನ್ಯೂಸ್ ಯಳಂದೂರು ಪಟ್ಟಣದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಯಳಂದೂರು ಪಟ್ಟಣದಲ್ಲಿ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಪಟ್ಟಣ ಪಂಚಾಯತಿ ಮುಂದಾಗಿದೆ. ಈಗಾಗಲೇ ಸಿದ್ದತೆ ಶುರುಮಾಡಿಕೊಂಡಿದ್ದಾರೆ.ಆಗಸ್ಟ್ 10 ರಂದು ಅಧಿಕೃತವಾಗಿ ಕಾರ್ಯಾಚರಣೆ ಆರಂಭಗೊಳ್ಳಲಿದ್ದು, ಈ ಸಂಬಂಧಿಸಿದಂತೆ ಈ ದಿನ ರಸ್ತೆ ಬದಿ ವ್ಯಾಪಾರಿಗಳ ಸಭೆ ಹಮ್ಮಿಕೊಳ್ಳಲಾಗಿದ್ದು ಪಾಲಿಕೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಪಾದಾಚಾರಿ ಮಾರ್ಗಗಳ ಒತ್ತುವರಿಯಿಂದಾಗಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಕೆಲವೊಂದು ಖಡಕ್ ಸೂಚನೆಗಳನ್ನು ನೀಡಿದ್ದರು. ನಗರದ ಹಲವು ರಸ್ತೆಗಳಲ್ಲಿ ಫುಟ್ ಪಾತ್ ಗಳ ಮೇಲೆ ವ್ಯಾಪಾರ- ವಹಿವಾಟು ನಡೆಸಲಾಗುತ್ತಿದೆ. ರಸ್ತೆ ಬೀದಿ ಬದಿ ವ್ಯಾಪಾರಸ್ಥರು ಇಲ್ಲಿ ಸಣ್ಣ ಪುಟ್ಟ ಅಂಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಫುಟ್ ಪಾತ್ ಗಳ ಒತ್ತುವರಿಯಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ನಡೆದುಕೊಂಡು ಹೋಗಲು ಪಾದಾಚಾರಿ ಮಾರ್ಗಗಳೇ ಇಲ್ಲದಂತಾಗಿದೆ. ಹೀಗಾಗಿ ಪ್ರಮುಖ ರಸ್ತೆಗಳಲ್ಲೇ ಜನರು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಇದೆ. ಇನ್ನು ಕೆಲವು ರಸ್ತೆಗಳಲ್ಲಿ ಫುಡ್ ಸ್ಟ್ರೀಟ್‌ಗಳೇ ಸೃಷ್ಟಿಯಾಗಿದ್ದು, ಇದರಿಂದ ವಾಹನ ಓಡಾಟಗಳಿಗೂ ಅಡ್ಡಿ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ನೀಡಲು ಸಜ್ಜಾಗಿದೆ. ಇದಕ್ಕೆ ಸಹಕಾರ ನೀಡುವಂತೆ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್ ಪಟ್ಟಣದ ರಸ್ತೆ ಬದಿ ವ್ಯಾಪಾರಿಗಳ ಜೊತೆ ಸಮಾಲೋಚನೆ ನೆಡೆಸಿ ಇನ್ನೂ ಒಂದು ವಾರದೊಳಗೆ ತಾವೇ ತೆರವು ಮಾಡಿಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ಸೋಮವಾರ ಪಟ್ಟಣ ಪಂಚಾಯತಿ ವತಿಯಿಂದ ಜೆ ಸಿ ಬಿ ಮೂಲಕ ತೆರವು ಕಾರ್ಯಚರಣೆ ನೆಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಭೆಯಲ್ಲಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್, ಅರೋಗ್ಯ ನಿರೀಕ್ಷಕ ರಾಘವೇಂದ್ರ, ಕಂದಾಯ ಅಧಿಕಾರಿ ಮಹದೇವ್, ಪರಶಿವಮೂರ್ತಿ ಹಾಗೂ ರಸ್ತೆ ಬೀದಿ ಬದಿ ವ್ಯಾಪಾರಸ್ಥರು ಸಿಬ್ಬಂದಿಗಳು ಹಾಜರಿದ್ದರು.2
- ಮಂಡ್ಯ ವಿಶ್ವವಿದ್ಯಾಲಯದಲ್ಲಿಅಧಿಕ ಶುಲ್ಕ ವಸೂಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರತಿಭಟನೆ. ಮಂಡ್ಯ- ಮಂಡ್ಯ ವಿಶ್ವವಿದ್ಯಾಲಯದಲ್ಲಿ ಪ್ರತಿಯೊಂದು ಶುಲ್ಕವನ್ನು ಯಾವ ಆಧಾರದ ಮೇಲೆ ನಿಗದಿಪಡಿಸಿದ್ದಾರೆಂದು ಗೊತ್ತಿಲ್ಲ ಅನಗತ್ಯ ಶುಲ್ಕವನ್ನು ವಿಧಿಸಲಾಗುತ್ತಿದ್ದು, ಇದು ವಿದ್ಯಾರ್ಥಿಗಳಿಗೆ ಬಾರಿ ಹೊರೆಯಾಗಿದೆ ಈ ಶುಲ್ಕವನ್ನು ತಕ್ಷಣವೇ ಹಿಂಪಡಿಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು. ಶಿಕ್ಷಣವು ವಿದ್ಯಾರ್ಥಿಯ ಮೂಲಭೂತ ಹಕ್ಕು ಆದರೆ ಹೆಚ್ಚುತ್ತಿರುವ ಶುಲ್ಕದ ಕಾರಣ ಅನೇಕ ವಿದ್ಯಾರ್ಥಿಗಳು ಪೋಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಈ ಅನ್ಯಾಯ ಖಂಡಿಸಿ ಅನಗತ್ಯ ಶುಲ್ಕವನ್ನು ಹಿಂಪಡೆದು,ವಿದ್ಯಾರ್ಥಿಗಳಿಗೆ ಕೈಗೆಟುಕುವ ರೀತಿ ಶಿಕ್ಷಣವನ್ನು ಖಚಿತಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ನಿರ್ದಿಷ್ಟ ಅವಧಿ ಮುಷ್ಕರ ನಡೆಸಿದರು1
- ನೂತನ ಸಚಿವರಾಗಿ ಸಿ.ಪುಟ್ಟರಂಗಶೆಟ್ಟಿ ಪ್ರಮಾಣವಚನ : ಚಾಮರಾಜನಗರದಲ್ಲಿ ಉಪ್ಪಾರ ಸಮುದಾಯದಿಂದ ಸಂಭ್ರಮ ನೂತನ ಸಚಿವರಾಗಿ ಸಿ.ಪುಟ್ಟರಂಗಶೆಟ್ಟಿ ಪ್ರಮಾಣವಚನ : ಚಾಮರಾಜನಗರದಲ್ಲಿ ಉಪ್ಪಾರ ಸಮುದಾಯದಿಂದ ಸಂಭ್ರಮ ಚಾಮರಾಜನಗರ: ನೂತನ ಸಚಿವರಾಗಿ ಸಿ.ಪುಟ್ಟರಂಗಶೆಟ್ಟಿ ಅವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಉಪ್ಪಾರ ಸಮುದಾಯ ಸಂಭ್ರಮಾಚರಣೆ ಮಾಡಿತು.. ನಗರದ ಸಂತೇಮರಹಳ್ಳಿ ವೃತ್ತದಲ್ಲಿ ಬೆಂಗಳೂರಿನ ರಾಜಭವನದಲ್ಲಿ ನೂತನ ಸಚಿವರಾಗಿ ಸಿ.ಪುಟ್ಟರಂಗಶೆಟ್ಟರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಉಪ್ಪಾರ ಸಮುದಾಯದ ಯಜಮಾನರು, ಮುಖಂಡರು, ಯುವಕರು ನೂತನ ಸಚಿವರಾದ ಸಿ.ಪುಟ್ಟರಂಗಶೆಟ್ಟರ ಭಾವಚಿತ್ರ ಹಿಡಿದು, ಪಟಾಕಿ ಸಿಡಿಸಿ, ಸಿಹಿ ಸಂಭ್ರಮಿಸಿದರು. ಕಾಂಗ್ರೆಸ್ ಪಕ್ಷವು ಉಪ್ಪಾರ ಸಮುದಾಯ ಏಕೈಕ ಸಚಿವರಾಗಿ ಸಿ.ಪುಟ್ಟರಂಗಶೆಟ್ಟಿ ಅವರನ್ನು ಮಾಡಿರುವುದು ತುಂಬಾ ಖುಷಿ ತಂದಿದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ವರಿಷ್ಠರಿಗೆ ಉಪ್ಪಾರ ಸಮುದಾಯ ವತಿಯಿಂದ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಯಜಮಾನರಾದ ನಾಗಶೆಟ್ಟಿ, ಮಸಣಶೆಟ್ಟಿ, ಪೈಲ್ವಾನ್ ನಂಜಪ್ಪ, ಚನ್ನಿಗಶೆಟ್ಟಿ, ಯುವಕರಾದ ನಟರಾಜು,ಮಹೇಶ್, ಮಂಜು ಹಾಜರಿದ್ದರು.3