logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಕೌಟುಂಬಿಕ ಕಲಹಕ್ಕೆ ಬ*ಲಿಯಾದ ಸೊಸೆ : ನಾದಿನಿಯ 'ಖಾಸಗಿ ವಿಡಿಯೋ' ಬ್ಲ್ಯಾಕ್‌ಮೇಲ್‌ನ ಹಣಕ್ಕಾಗಿ ಹೆಣೆದಿದ್ದ ದರೋಡೆ ಕಥೆ ಬಯಲು! ​ದರೋಡೆಕೋರರು ಮನೆಗೆ ನುಗ್ಗಿ ಸೊಸೆಯನ್ನು ಕೊಲೆ ಮಾಡಿದ್ದಾರೆಂದು ಅತ್ತೆ, ನಾದಿನಿ ಮತ್ತು ಅಜ್ಜಿ ಸೃಷ್ಟಿಸಿದ್ದ ಹೈಡ್ರಾಮಾ ಕೇವಲ 24 ಗಂಟೆಗಳಲ್ಲಿ ಕರಗಿಹೋಗಿದೆ. ಕೌಟುಂಬಿಕ ಕಲಹ ಹಾಗೂ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಬಲಿಯಾದ ವಿವಾಹಿತ ಮಹಿಳೆ ಪುಷ್ಪಲತಾ ಕೊಲೆ ಪ್ರಕರಣವನ್ನು ಭೇದಿಸಿರುವ ಚಿಕ್ಕಬಳ್ಳಾಪುರ ಪೊಲೀಸರು, ನಾದಿನಿ ಭವ್ಯಾ ಮತ್ತು ಆಕೆಯ ಪ್ರಿಯಕರ ಲೋಹಿತ್ ಕುಮಾರ್‌ನನ್ನು ಬಂಧಿಸಿದ್ದಾರೆ. ​ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಹೋಗಿ ಇಡೀ ಕುಟುಂಬವೇ ಈಗ ಜೈಲು ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ​ಘಟನೆಯ ಹಿನ್ನೆಲೆ: ಒಂದೇ ಕಲ್ಲಿಗೆ ಎರಡು ಹಕ್ಕಿ! ​ಬೆಂಗಳೂರು ಮೂಲದ ಪುಷ್ಪಲತಾ ಅವರನ್ನು ನಾಲ್ಕು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಭರತ್ ಎಂಬುವವರಿಗೆ ಕೊಟ್ಟು ಮದುವೆ ಮಾಡಿಸಲಾಗಿತ್ತು. ಆದರೆ, ಮದುವೆಯಾದ ದಿನದಿಂದಲೂ ಅತ್ತೆ ವಿಜಯಲಕ್ಷ್ಮೀ ಮತ್ತು ನಾದಿನಿ ಭವ್ಯಾ ಕಿರುಕುಳ ನೀಡುತ್ತಿದ್ದರು. ಕೌಟುಂಬಿಕ ಕಲಹದಿಂದಾಗಿ ಭರತ್ ಮತ್ತು ಪುಷ್ಪಲತಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ​ಇದೇ ಸಮಯದಲ್ಲಿ, ನಾದಿನಿ ಭವ್ಯಾ ತನ್ನ ಬಾಯ್‌ಫ್ರೆಂಡ್ ಜೊತೆಗಿದ್ದ ಖಾಸಗಿ ಕ್ಷಣಗಳ ವಿಡಿಯೋವೊಂದು ಆಕೆಯ ಸೋದರಸಂಬಂಧಿ ಹೊಸಕೋಟೆಯ ಲೋಹಿತ್ ಕುಮಾರ್ (ಲೂಲ್ ಯಾದವ್) ಕೈಸೇರಿತ್ತು. ಆ ವಿಡಿಯೋ ಇಟ್ಟುಕೊಂಡು ಲೋಹಿತ್ ಈಗಾಗಲೇ ಭವ್ಯಾಳಿಂದ 4 ಲಕ್ಷ ರೂ. ಹಣ ಪೀಕಿದ್ದಲ್ಲದೆ, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ವಿಷಯ ತಾಯಿ ವಿಜಯಲಕ್ಷ್ಮೀಯವರಿಗೂ ತಿಳಿದಿತ್ತು. ಹಣ ಹೊಂದಿಸಲು ಮತ್ತು ತಮಗೆ ಬೇಡವಾದ ಸೊಸೆಯನ್ನು ಮುಗಿಸಲು ಅಮ್ಮ-ಮಗಳು ಸೇರಿ "ದರೋಡೆ"ಯ ಮಾಸ್ಟರ್ ಪ್ಲಾನ್ ರೂಪಿಸಿದ್ದರು. ​ಸುಪಾರಿ ಕೊಟ್ಟು ತಮಿಳುನಾಡಿಗೆ ಹೋದ ಅತ್ತೆ ​ಯೋಜನೆಯಂತೆ, ಮೇ 28 ರಂದು ಅತ್ತೆ ವಿಜಯಲಕ್ಷ್ಮೀ ತನ್ನ ಗಂಡ ನರಸಿಂಹಮೂರ್ತಿ ಹಾಗೂ ಮಗ ಭರತ್‌ನನ್ನು ಕರೆದುಕೊಂಡು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿದ್ದರು. ಗಂಡ ಊರಲ್ಲಿಲ್ಲದ ಕಾರಣ ಪುಷ್ಪಲತಾ ಅತ್ತೆ ಮನೆಗೆ ಬಂದು ಮಲಗಿದ್ದಳು. ಲೋಹಿತ್ ಮನೆಗೆ ಬರಲು ಅನುಕೂಲವಾಗುವಂತೆ ನಾದಿನಿ ಭವ್ಯಾ ರಾತ್ರಿ ಮನೆಯ ಬಾಗಿಲನ್ನು ತೆರೆದೇ ಮಲಗಿದ್ದಳು. ​ತಲೆದಿಂಬಿನಿಂದ ಉಸಿರುಗಟ್ಟಿಸಿ ಬರ್ಬರ ಹತ್ಯೆ ​ರಾತ್ರಿ ಮನೆಗೆ ನುಗ್ಗಿದ ಲೋಹಿತ್, ಗಾಢ ನಿದ್ರೆಯಲ್ಲಿದ್ದ ಪುಷ್ಪಲತಾಳ ಮುಖಕ್ಕೆ ತಲೆದಿಂಬು ಒತ್ತಿ ಉಸಿರುಗಟ್ಟಿಸಿ ಕೊಂದಿದ್ದಾನೆ. ತದನಂತರ ಅದು ದರೋಡೆ ಎಂದು ಬಿಂಬಿಸಲು ಚಾಕುವಿನಿಂದ ಇರಿದು, ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಮತ್ತು ಕಿವಿಯೋಲೆಯನ್ನು ದೋಚಿ ಪರಾರಿಯಾಗಿದ್ದಾನೆ. ​ಕೃತ್ಯ ನಡೆದ ಬಳಿಕ ಭವ್ಯಾ ತನ್ನ ಬಟ್ಟೆಗಳನ್ನು ಹರಿದುಕೊಂಡು, ಯಾರೋ ಮುಖಕ್ಕೆ ಸ್ಪ್ರೇ ಹೊಡೆದು ಪ್ರಜ್ಞೆ ತಪ್ಪಿಸಿದರು ಎಂದು ನಾಟಕವಾಡಿ ಆಸ್ಪತ್ರೆ ಸೇರಿದರೆ, ಅಜ್ಜಿ ನಾಗಮ್ಮ ಮನೆ ಹೊರಗೆ ಓಡಿಬಂದು "ಕಳ್ಳರು ಬಂದಿದ್ದಾರೆ" ಎಂದು ಕೂಗಾಡಿ ಸಾರ್ವಜನಿಕರನ್ನು ನಂಬಿಸಿದ್ದರು. ​ಪೊಲೀಸರ ತನಿಖೆಗೆ ಸಿಕ್ಕ ಸುಳಿವುಗಳು ​ಮೊದಲಿಗೆ ಇದೊಂದು ದರೋಡೆ ಎಂದೇ ಪೊಲೀಸರು ಭಾವಿಸಿದ್ದರು. ಆದರೆ ಮೃತಳ ಪೋಷಕರಾದ ಮಹೇಶ್ ಮತ್ತು ಲಕ್ಷ್ಮೀ ಅವರು, ಇದು ಅಳಿಯನ ಅಕ್ರಮ ಸಂಬಂಧ ಮತ್ತು ಅತ್ತೆ ಮನೆಯವರ ಸುಪಾರಿ ಕೊಲೆ ಎಂದು ಆರೋಪಿಸಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಕೆಲವು ಪ್ರಮುಖ ಸಂಶಯಗಳು ಎದುರಾದವು: ​ಬಾಗಿಲು ಮುರಿದಿರಲಿಲ್ಲ: ಮನೆಯ ಬಾಗಿಲನ್ನು ಬಲವಂತವಾಗಿ ಮುರಿದ ಯಾವುದೇ ಕುರುಹುಗಳಿರಲಿಲ್ಲ. ​ಮರಣೋತ್ತರ ಪರೀಕ್ಷೆ ವರದಿ: ಚಾಕುವಿನ ಗಾಯಗಳು ಆಳವಾಗಿರಲಿಲ್ಲ ಮತ್ತು ರಕ್ತಸ್ರಾವ ಹೆಚ್ಚಾಗಿರಲಿಲ್ಲ. ಪುಷ್ಪಲತಾ ಸತ್ತಿದ್ದು ಉಸಿರುಗಟ್ಟುವಿಕೆಯಿಂದ ಎಂಬುದು ಪಿಎಂ ರಿಪೋರ್ಟ್‌ನಲ್ಲಿ ಸ್ಪಷ್ಟವಾಗಿತ್ತು. ​ಹೇಳಿಕೆಗಳಲ್ಲಿದ್ದ ಗೊಂದಲ: ಆಸ್ಪತ್ರೆಯಲ್ಲಿದ್ದ ನಾದಿನಿ ಭವ್ಯಾ ನೀಡಿದ ಹೇಳಿಕೆಗಳು ಘಟನಾ ಸ್ಥಳದ ವಾಸ್ತವಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ​ಯಾವಾಗ ಪೊಲೀಸರು ಭವ್ಯಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದರೋ, ಆಕೆ ಬ್ಲ್ಯಾಕ್‌ಮೇಲ್ ಕಥೆ ಮತ್ತು ಕೊಲೆಯ ಅಸಲಿ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ​24 ಗಂಟೆಯಲ್ಲಿ ಆರೋಪಿಗಳ ಬಂಧನ ​ಘಟನೆ ನಡೆದ ಕೇವಲ 24 ಗಂಟೆಗಳಲ್ಲಿ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತಂದ ಚಿಕ್ಕಬಳ್ಳಾಪುರ ಪೊಲೀಸರು ಮುಖ್ಯ ಆರೋಪಿಗಳಾದ ಭವ್ಯಾ ಮತ್ತು ಲೋಹಿತ್ ಕುಮಾರ್‌ನನ್ನು ಬಂಧಿಸಿದ್ದಾರೆ. ಅತ್ತೆ ವಿಜಯಲಕ್ಷ್ಮೀಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೊಲೆಯಲ್ಲಿ ಗಂಡ ಭರತ್ ಹಾಗೂ ಮಾವ ನರಸಿಂಹಮೂರ್ತಿ ಪಾತ್ರವಿಲ್ಲ ಎಂದು ತಿಳಿದುಬಂದಿದೆ. ​ಸಮರ್ಥವಾಗಿ ತನಿಖೆ ನಡೆಸಿ ಆರೋಪಿಗಳನ್ನು ಕಟಾಕಟಿಗೆ ತಂದು ನಿಲ್ಲಿಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕುಶಾಲ್ ಚೌಕ್ಸೆ ಶ್ಲಾಘಿಸಿದ್ದಾರೆ. ಕೌಟುಂಬಿಕ ಕಲಹಕ್ಕೆ ಬ*ಲಿಯಾದ ಸೊಸೆ : ನಾದಿನಿಯ 'ಖಾಸಗಿ ವಿಡಿಯೋ' ಬ್ಲ್ಯಾಕ್‌ಮೇಲ್‌ನ ಹಣಕ್ಕಾಗಿ ಹೆಣೆದಿದ್ದ ದರೋಡೆ ಕಥೆ ಬಯಲು! ​ದರೋಡೆಕೋರರು ಮನೆಗೆ ನುಗ್ಗಿ ಸೊಸೆಯನ್ನು ಕೊಲೆ ಮಾಡಿದ್ದಾರೆಂದು ಅತ್ತೆ, ನಾದಿನಿ ಮತ್ತು ಅಜ್ಜಿ ಸೃಷ್ಟಿಸಿದ್ದ ಹೈಡ್ರಾಮಾ ಕೇವಲ 24 ಗಂಟೆಗಳಲ್ಲಿ ಕರಗಿಹೋಗಿದೆ. ಕೌಟುಂಬಿಕ ಕಲಹ ಹಾಗೂ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಬಲಿಯಾದ ವಿವಾಹಿತ ಮಹಿಳೆ ಪುಷ್ಪಲತಾ ಕೊಲೆ ಪ್ರಕರಣವನ್ನು ಭೇದಿಸಿರುವ ಚಿಕ್ಕಬಳ್ಳಾಪುರ ಪೊಲೀಸರು, ನಾದಿನಿ ಭವ್ಯಾ ಮತ್ತು ಆಕೆಯ ಪ್ರಿಯಕರ ಲೋಹಿತ್ ಕುಮಾರ್‌ನನ್ನು ಬಂಧಿಸಿದ್ದಾರೆ. ​ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಹೋಗಿ ಇಡೀ ಕುಟುಂಬವೇ ಈಗ ಜೈಲು ಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ. ​ಘಟನೆಯ ಹಿನ್ನೆಲೆ: ಒಂದೇ ಕಲ್ಲಿಗೆ ಎರಡು ಹಕ್ಕಿ! ​ಬೆಂಗಳೂರು ಮೂಲದ ಪುಷ್ಪಲತಾ ಅವರನ್ನು ನಾಲ್ಕು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಭರತ್ ಎಂಬುವವರಿಗೆ ಕೊಟ್ಟು ಮದುವೆ ಮಾಡಿಸಲಾಗಿತ್ತು. ಆದರೆ, ಮದುವೆಯಾದ ದಿನದಿಂದಲೂ ಅತ್ತೆ ವಿಜಯಲಕ್ಷ್ಮೀ ಮತ್ತು ನಾದಿನಿ ಭವ್ಯಾ ಕಿರುಕುಳ ನೀಡುತ್ತಿದ್ದರು. ಕೌಟುಂಬಿಕ ಕಲಹದಿಂದಾಗಿ ಭರತ್ ಮತ್ತು ಪುಷ್ಪಲತಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ​ಇದೇ ಸಮಯದಲ್ಲಿ, ನಾದಿನಿ ಭವ್ಯಾ ತನ್ನ ಬಾಯ್‌ಫ್ರೆಂಡ್ ಜೊತೆಗಿದ್ದ ಖಾಸಗಿ ಕ್ಷಣಗಳ ವಿಡಿಯೋವೊಂದು ಆಕೆಯ ಸೋದರಸಂಬಂಧಿ ಹೊಸಕೋಟೆಯ ಲೋಹಿತ್ ಕುಮಾರ್ (ಲೂಲ್ ಯಾದವ್) ಕೈಸೇರಿತ್ತು. ಆ ವಿಡಿಯೋ ಇಟ್ಟುಕೊಂಡು ಲೋಹಿತ್ ಈಗಾಗಲೇ ಭವ್ಯಾಳಿಂದ 4 ಲಕ್ಷ ರೂ. ಹಣ ಪೀಕಿದ್ದಲ್ಲದೆ, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ವಿಷಯ ತಾಯಿ ವಿಜಯಲಕ್ಷ್ಮೀಯವರಿಗೂ ತಿಳಿದಿತ್ತು. ಹಣ ಹೊಂದಿಸಲು ಮತ್ತು ತಮಗೆ ಬೇಡವಾದ ಸೊಸೆಯನ್ನು ಮುಗಿಸಲು ಅಮ್ಮ-ಮಗಳು ಸೇರಿ "ದರೋಡೆ"ಯ ಮಾಸ್ಟರ್ ಪ್ಲಾನ್ ರೂಪಿಸಿದ್ದರು. ​ಸುಪಾರಿ ಕೊಟ್ಟು ತಮಿಳುನಾಡಿಗೆ ಹೋದ ಅತ್ತೆ ​ಯೋಜನೆಯಂತೆ, ಮೇ 28 ರಂದು ಅತ್ತೆ ವಿಜಯಲಕ್ಷ್ಮೀ ತನ್ನ ಗಂಡ ನರಸಿಂಹಮೂರ್ತಿ ಹಾಗೂ ಮಗ ಭರತ್‌ನನ್ನು ಕರೆದುಕೊಂಡು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿದ್ದರು. ಗಂಡ ಊರಲ್ಲಿಲ್ಲದ ಕಾರಣ ಪುಷ್ಪಲತಾ ಅತ್ತೆ ಮನೆಗೆ ಬಂದು ಮಲಗಿದ್ದಳು. ಲೋಹಿತ್ ಮನೆಗೆ ಬರಲು ಅನುಕೂಲವಾಗುವಂತೆ ನಾದಿನಿ ಭವ್ಯಾ ರಾತ್ರಿ ಮನೆಯ ಬಾಗಿಲನ್ನು ತೆರೆದೇ ಮಲಗಿದ್ದಳು. ​ತಲೆದಿಂಬಿನಿಂದ ಉಸಿರುಗಟ್ಟಿಸಿ ಬರ್ಬರ ಹತ್ಯೆ ​ರಾತ್ರಿ ಮನೆಗೆ ನುಗ್ಗಿದ ಲೋಹಿತ್, ಗಾಢ ನಿದ್ರೆಯಲ್ಲಿದ್ದ ಪುಷ್ಪಲತಾಳ ಮುಖಕ್ಕೆ ತಲೆದಿಂಬು ಒತ್ತಿ ಉಸಿರುಗಟ್ಟಿಸಿ ಕೊಂದಿದ್ದಾನೆ. ತದನಂತರ ಅದು ದರೋಡೆ ಎಂದು ಬಿಂಬಿಸಲು ಚಾಕುವಿನಿಂದ ಇರಿದು, ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಮತ್ತು ಕಿವಿಯೋಲೆಯನ್ನು ದೋಚಿ ಪರಾರಿಯಾಗಿದ್ದಾನೆ. ​ಕೃತ್ಯ ನಡೆದ ಬಳಿಕ ಭವ್ಯಾ ತನ್ನ ಬಟ್ಟೆಗಳನ್ನು ಹರಿದುಕೊಂಡು, ಯಾರೋ ಮುಖಕ್ಕೆ ಸ್ಪ್ರೇ ಹೊಡೆದು ಪ್ರಜ್ಞೆ ತಪ್ಪಿಸಿದರು ಎಂದು ನಾಟಕವಾಡಿ ಆಸ್ಪತ್ರೆ ಸೇರಿದರೆ, ಅಜ್ಜಿ ನಾಗಮ್ಮ ಮನೆ ಹೊರಗೆ ಓಡಿಬಂದು "ಕಳ್ಳರು ಬಂದಿದ್ದಾರೆ" ಎಂದು ಕೂಗಾಡಿ ಸಾರ್ವಜನಿಕರನ್ನು ನಂಬಿಸಿದ್ದರು. ​ಪೊಲೀಸರ ತನಿಖೆಗೆ ಸಿಕ್ಕ ಸುಳಿವುಗಳು ​ಮೊದಲಿಗೆ ಇದೊಂದು ದರೋಡೆ ಎಂದೇ ಪೊಲೀಸರು ಭಾವಿಸಿದ್ದರು. ಆದರೆ ಮೃತಳ ಪೋಷಕರಾದ ಮಹೇಶ್ ಮತ್ತು ಲಕ್ಷ್ಮೀ ಅವರು, ಇದು ಅಳಿಯನ ಅಕ್ರಮ ಸಂಬಂಧ ಮತ್ತು ಅತ್ತೆ ಮನೆಯವರ ಸುಪಾರಿ ಕೊಲೆ ಎಂದು ಆರೋಪಿಸಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಕೆಲವು ಪ್ರಮುಖ ಸಂಶಯಗಳು ಎದುರಾದವು: ​ಬಾಗಿಲು ಮುರಿದಿರಲಿಲ್ಲ: ಮನೆಯ ಬಾಗಿಲನ್ನು ಬಲವಂತವಾಗಿ ಮುರಿದ ಯಾವುದೇ ಕುರುಹುಗಳಿರಲಿಲ್ಲ. ​ಮರಣೋತ್ತರ ಪರೀಕ್ಷೆ ವರದಿ: ಚಾಕುವಿನ ಗಾಯಗಳು ಆಳವಾಗಿರಲಿಲ್ಲ ಮತ್ತು ರಕ್ತಸ್ರಾವ ಹೆಚ್ಚಾಗಿರಲಿಲ್ಲ. ಪುಷ್ಪಲತಾ ಸತ್ತಿದ್ದು ಉಸಿರುಗಟ್ಟುವಿಕೆಯಿಂದ ಎಂಬುದು ಪಿಎಂ ರಿಪೋರ್ಟ್‌ನಲ್ಲಿ ಸ್ಪಷ್ಟವಾಗಿತ್ತು. ​ಹೇಳಿಕೆಗಳಲ್ಲಿದ್ದ ಗೊಂದಲ: ಆಸ್ಪತ್ರೆಯಲ್ಲಿದ್ದ ನಾದಿನಿ ಭವ್ಯಾ ನೀಡಿದ ಹೇಳಿಕೆಗಳು ಘಟನಾ ಸ್ಥಳದ ವಾಸ್ತವಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ​ಯಾವಾಗ ಪೊಲೀಸರು ಭವ್ಯಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದರೋ, ಆಕೆ ಬ್ಲ್ಯಾಕ್‌ಮೇಲ್ ಕಥೆ ಮತ್ತು ಕೊಲೆಯ ಅಸಲಿ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ​24 ಗಂಟೆಯಲ್ಲಿ ಆರೋಪಿಗಳ ಬಂಧನ ​ಘಟನೆ ನಡೆದ ಕೇವಲ 24 ಗಂಟೆಗಳಲ್ಲಿ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತಂದ ಚಿಕ್ಕಬಳ್ಳಾಪುರ ಪೊಲೀಸರು ಮುಖ್ಯ ಆರೋಪಿಗಳಾದ ಭವ್ಯಾ ಮತ್ತು ಲೋಹಿತ್ ಕುಮಾರ್‌ನನ್ನು ಬಂಧಿಸಿದ್ದಾರೆ. ಅತ್ತೆ ವಿಜಯಲಕ್ಷ್ಮೀಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೊಲೆಯಲ್ಲಿ ಗಂಡ ಭರತ್ ಹಾಗೂ ಮಾವ ನರಸಿಂಹಮೂರ್ತಿ ಪಾತ್ರವಿಲ್ಲ ಎಂದು ತಿಳಿದುಬಂದಿದೆ. ​ಸಮರ್ಥವಾಗಿ ತನಿಖೆ ನಡೆಸಿ ಆರೋಪಿಗಳನ್ನು ಕಟಾಕಟಿಗೆ ತಂದು ನಿಲ್ಲಿಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕುಶಾಲ್ ಚೌಕ್ಸೆ ಶ್ಲಾಘಿಸಿದ್ದಾರೆ.

3 hrs ago
user_SAMATA NEWS KANNADA 1
SAMATA NEWS KANNADA 1
Advertising agency ಬೆಳಗಾವಿ, ಬೆಳಗಾವಿ, ಕರ್ನಾಟಕ•
3 hrs ago
18216712-1b03-4e23-9468-dd8d3a96ce09

More news from ಕರ್ನಾಟಕ and nearby areas
  • ಗೋಕಾಕ ತಾಲ್ಲೂಕಿನಲ್ಲಿರುವ ದೊಡ್ಡ ಗ್ರಾಮ ಖನಗಾವ, ಸುತ್ತಮುತ್ತಲಿನ ಪುಟ್ಟ ಗ್ರಾಮಗಳಿಗೆ ಕೇಂದ್ರವಾಗಿರುವ ಕಾರಣ ಇದನ್ನು 'ಏಳೂರ ತಗ್ಗು' ಎಂದೂ ಕರೆಯಲಾಗುತ್ತದೆ. ಇಲ್ಲಿನ ಖನ್ನಮ್ಮ ದೇವಿ ದೇವಸ್ಥಾನಕ್ಕೆ ದೂರದ ಊರುಗಳಿಂದಲೂ ಭಕ್ತರು ಆಗಮಿಸುತ್ತಾರೆ. ಖನಗಾವ ಸುತ್ತಮುತ್ತಲಿನ ಗಿಳಿಹೊಸೂರ, ಮಿಡಕನಟ್ಟಿ, ಶಿಲ್ತಿಭಾವಿ, ಕೈತನಾಳ ಮುಂತಾದ ಊರುಗಳನ್ನು ಆವರಿಸಿರುವ ಅರಣ್ಯ ಪ್ರದೇಶವು ಚಿಕ್ಕಪುಟ್ಟ ಪ್ರಾಣಿಗಳು ಮತ್ತು ಗಿಡಮೂಲಿಕೆಗಳಿಗೆ ನೆಲೆಯಾಗಿದೆ. ಈ ಕಾಡಿನಲ್ಲಿ 'ಗುಡ್ಡದ ಹೊನ್ನಾರಿ' ಎಂಬ ವಿಶೇಷ ತರಕಾರಿ ದೊರೆಯುತ್ತದೆ. ಇಂದಿನ ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲವಾದರೂ, ಈ ಲೇಖನದ ಲೇಖಕರು ತಮ್ಮ ಬಾಲ್ಯದಲ್ಲಿ ಈ ತರಕಾರಿಯನ್ನು ನೋಡಿ ಅದರ ರುಚಿಯನ್ನು ಮರೆತಿರಲಿಲ್ಲ. ಕಾಲಕಾಲಕ್ಕೆ ಕಾಡಿನಲ್ಲಿ ಇದನ್ನು ಅನ್ವೇಷಿಸಿದರೂ, ಈ ತರಕಾರಿ ಸಿಕ್ಕಿರಲಿಲ್ಲ. ಆದರೆ, ಕಳೆದ ವಾರ ಲೇಖಕರು ಕೈತನಾಳ ಪಕ್ಕದ ಕಾಡಿನ ಬಳಿ ಇರುವ ತಮ್ಮ ಸ್ನೇಹಿತ ಸತೀಶ ಡಬ್ಬನವರ ಅವರ ಹೊಲಕ್ಕೆ ಭೇಟಿ ನೀಡಿದಾಗ, ಈ ಕುರಿತು ವಿಚಾರಿಸಿದರು. ಸತೀಶ ಅವರು 'ಗುಡ್ಡದ ಹೊನ್ನಾರಿ' ಗಿಡಗಳನ್ನು ತೋರಿಸಿ, ಈ ರುಚಿಕರ ತರಕಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನೂ ನೀಡಿದರು. ಈ ಮೂಲಕ ಹಲವು ವರ್ಷಗಳ ಹುಡುಕಾಟಕ್ಕೆ ಫಲ ದೊರೆತಿದೆ.
    4
    ಗೋಕಾಕ ತಾಲ್ಲೂಕಿನಲ್ಲಿರುವ ದೊಡ್ಡ ಗ್ರಾಮ ಖನಗಾವ, ಸುತ್ತಮುತ್ತಲಿನ ಪುಟ್ಟ ಗ್ರಾಮಗಳಿಗೆ ಕೇಂದ್ರವಾಗಿರುವ ಕಾರಣ ಇದನ್ನು 'ಏಳೂರ ತಗ್ಗು' ಎಂದೂ ಕರೆಯಲಾಗುತ್ತದೆ. ಇಲ್ಲಿನ ಖನ್ನಮ್ಮ ದೇವಿ ದೇವಸ್ಥಾನಕ್ಕೆ ದೂರದ ಊರುಗಳಿಂದಲೂ ಭಕ್ತರು ಆಗಮಿಸುತ್ತಾರೆ. ಖನಗಾವ ಸುತ್ತಮುತ್ತಲಿನ ಗಿಳಿಹೊಸೂರ, ಮಿಡಕನಟ್ಟಿ, ಶಿಲ್ತಿಭಾವಿ, ಕೈತನಾಳ ಮುಂತಾದ ಊರುಗಳನ್ನು ಆವರಿಸಿರುವ ಅರಣ್ಯ ಪ್ರದೇಶವು ಚಿಕ್ಕಪುಟ್ಟ ಪ್ರಾಣಿಗಳು ಮತ್ತು ಗಿಡಮೂಲಿಕೆಗಳಿಗೆ ನೆಲೆಯಾಗಿದೆ.

ಈ ಕಾಡಿನಲ್ಲಿ 'ಗುಡ್ಡದ ಹೊನ್ನಾರಿ' ಎಂಬ ವಿಶೇಷ ತರಕಾರಿ ದೊರೆಯುತ್ತದೆ. ಇಂದಿನ ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲವಾದರೂ, ಈ ಲೇಖನದ ಲೇಖಕರು ತಮ್ಮ ಬಾಲ್ಯದಲ್ಲಿ ಈ ತರಕಾರಿಯನ್ನು ನೋಡಿ ಅದರ ರುಚಿಯನ್ನು ಮರೆತಿರಲಿಲ್ಲ. ಕಾಲಕಾಲಕ್ಕೆ ಕಾಡಿನಲ್ಲಿ ಇದನ್ನು ಅನ್ವೇಷಿಸಿದರೂ, ಈ ತರಕಾರಿ ಸಿಕ್ಕಿರಲಿಲ್ಲ.

ಆದರೆ, ಕಳೆದ ವಾರ ಲೇಖಕರು ಕೈತನಾಳ ಪಕ್ಕದ ಕಾಡಿನ ಬಳಿ ಇರುವ ತಮ್ಮ ಸ್ನೇಹಿತ ಸತೀಶ ಡಬ್ಬನವರ ಅವರ ಹೊಲಕ್ಕೆ ಭೇಟಿ ನೀಡಿದಾಗ, ಈ ಕುರಿತು ವಿಚಾರಿಸಿದರು. ಸತೀಶ ಅವರು 'ಗುಡ್ಡದ ಹೊನ್ನಾರಿ' ಗಿಡಗಳನ್ನು ತೋರಿಸಿ, ಈ ರುಚಿಕರ ತರಕಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನೂ ನೀಡಿದರು. ಈ ಮೂಲಕ ಹಲವು ವರ್ಷಗಳ ಹುಡುಕಾಟಕ್ಕೆ ಫಲ ದೊರೆತಿದೆ.
    user_Basavraj Pattansheti
    Basavraj Pattansheti
    Artist ಗೋಕಾಕ, ಬೆಳಗಾವಿ, ಕರ್ನಾಟಕ•
    22 hrs ago
  • ಚಿಕ್ಕೋಡಿಯಲ್ಲಿ ಹೊಸ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ 'ಇ-ಡೀಲ್ ಇಂಡಿಯಾ' ಪ್ರಾರಂಭವಾಗಿದೆ. ಈ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರು ಖರೀದಿಸಿದ ವಸ್ತುಗಳ ಮೇಲೆ ಸ್ಪರ್ಧೆಗಳ ಮೂಲಕ ರಿವಾರ್ಡ್‌ಗಳನ್ನು ಪಡೆಯುವ 'ಬಂಪರ್ ಆಫರ್' ಅನ್ನು ಪಡೆದುಕೊಳ್ಳಬಹುದು ಎಂದು ಕಂಪನಿಯ ಸಿಓಓ ನಸಿರುದ್ದೀನ್ ಮತ್ತು ಸಿಇಓ ಆರಿಫ್ ನೂರ್ ಮೊಹಮ್ಮದ್ ಅಲಾಸ ಅವರು ತಿಳಿಸಿದ್ದಾರೆ. ಚಿಕ್ಕೋಡಿ ಪಟ್ಟಣದ ಆರ್ ಡಿ ಮೈದಾನದಲ್ಲಿ ನಡೆದ ಇ-ಡೀಲ್ ಇಂಡಿಯಾ ವತಿಯಿಂದ ಹಮ್ಮಿಕೊಂಡ ರಿವಾರ್ಡ್ ಕಾಂಟೆಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರಿಕರ ದೈನಂದಿನ ಶಾಪಿಂಗ್ ಅನ್ನು ಇನ್ನಷ್ಟು ಸುಲಭಗೊಳಿಸಲು ಅತ್ಯಾಧುನಿಕ 'ಇ-ಡೀಲ್ ಇಂಡಿಯಾ' ಇದೀಗ ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂದರು. ನಾಗರಿಕರಿಗೆ ಇದು ಸುವರ್ಣ ಅವಕಾಶವಾಗಿದ್ದು, ತಮ್ಮ ಮನೆಯಲ್ಲೇ ಕುಳಿತು ಗುಣಮಟ್ಟದ ದಿನಸಿ, ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ಸುಲಭವಾಗಿ ಖರೀದಿಸಬಹುದು. ಗ್ರಾಹಕರಿಗೆ ವಿಶೇಷ ರಿಯಾಯಿತಿಗಳು ಲಭ್ಯವಿದ್ದು, ಆಸಕ್ತರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಲು ಸಲಹೆ ನೀಡಲಾಯಿತು. ಅಲ್ಲದೆ, ಕಾಂಟೆಸ್ಟ್‌ನಲ್ಲಿ ಭಾಗವಹಿಸಿ ವಿವಿಧ ರೀತಿಯ ರಿವಾರ್ಡ್‌ಗಳನ್ನು ಪಡೆಯಬಹುದು. ಇ-ಡೀಲ್ ಇಂಡಿಯಾ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿ ಮನೆಯಲ್ಲಿ ಅಗತ್ಯವಿರುವ ವಸ್ತುಗಳನ್ನು ಖರೀದಿಸಬಹುದು. ಇದು ಚಿಕ್ಕೋಡಿಯಲ್ಲಿ ಪ್ರಾರಂಭವಾದ ಮೊದಲ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿಓಓ ನಸಿರುದ್ದೀನ್, ಸಿಇಓ ಆರಿಫ್ ನೂರ್ ಮೊಹಮ್ಮದ್ ಅಲಾಸ ಮತ್ತು ಪ್ರಾಯೋಜಕ ಇರ್ಫಾನ್ ಬೆಪ್ಪಾರಿ ಉಪಸ್ಥಿತರಿದ್ದರು.
    3
    ಚಿಕ್ಕೋಡಿಯಲ್ಲಿ ಹೊಸ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ 'ಇ-ಡೀಲ್ ಇಂಡಿಯಾ' ಪ್ರಾರಂಭವಾಗಿದೆ. ಈ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರು ಖರೀದಿಸಿದ ವಸ್ತುಗಳ ಮೇಲೆ ಸ್ಪರ್ಧೆಗಳ ಮೂಲಕ ರಿವಾರ್ಡ್‌ಗಳನ್ನು ಪಡೆಯುವ 'ಬಂಪರ್ ಆಫರ್' ಅನ್ನು ಪಡೆದುಕೊಳ್ಳಬಹುದು ಎಂದು ಕಂಪನಿಯ ಸಿಓಓ ನಸಿರುದ್ದೀನ್ ಮತ್ತು ಸಿಇಓ ಆರಿಫ್ ನೂರ್ ಮೊಹಮ್ಮದ್ ಅಲಾಸ ಅವರು ತಿಳಿಸಿದ್ದಾರೆ.

ಚಿಕ್ಕೋಡಿ ಪಟ್ಟಣದ ಆರ್ ಡಿ ಮೈದಾನದಲ್ಲಿ ನಡೆದ ಇ-ಡೀಲ್ ಇಂಡಿಯಾ ವತಿಯಿಂದ ಹಮ್ಮಿಕೊಂಡ ರಿವಾರ್ಡ್ ಕಾಂಟೆಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರಿಕರ ದೈನಂದಿನ ಶಾಪಿಂಗ್ ಅನ್ನು ಇನ್ನಷ್ಟು ಸುಲಭಗೊಳಿಸಲು ಅತ್ಯಾಧುನಿಕ 'ಇ-ಡೀಲ್ ಇಂಡಿಯಾ' ಇದೀಗ ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂದರು. ನಾಗರಿಕರಿಗೆ ಇದು ಸುವರ್ಣ ಅವಕಾಶವಾಗಿದ್ದು, ತಮ್ಮ ಮನೆಯಲ್ಲೇ ಕುಳಿತು ಗುಣಮಟ್ಟದ ದಿನಸಿ, ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ಸುಲಭವಾಗಿ ಖರೀದಿಸಬಹುದು. ಗ್ರಾಹಕರಿಗೆ ವಿಶೇಷ ರಿಯಾಯಿತಿಗಳು ಲಭ್ಯವಿದ್ದು, ಆಸಕ್ತರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಲು ಸಲಹೆ ನೀಡಲಾಯಿತು. ಅಲ್ಲದೆ, ಕಾಂಟೆಸ್ಟ್‌ನಲ್ಲಿ ಭಾಗವಹಿಸಿ ವಿವಿಧ ರೀತಿಯ ರಿವಾರ್ಡ್‌ಗಳನ್ನು ಪಡೆಯಬಹುದು.

ಇ-ಡೀಲ್ ಇಂಡಿಯಾ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿ ಮನೆಯಲ್ಲಿ ಅಗತ್ಯವಿರುವ ವಸ್ತುಗಳನ್ನು ಖರೀದಿಸಬಹುದು. ಇದು ಚಿಕ್ಕೋಡಿಯಲ್ಲಿ ಪ್ರಾರಂಭವಾದ ಮೊದಲ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿಓಓ ನಸಿರುದ್ದೀನ್, ಸಿಇಓ ಆರಿಫ್ ನೂರ್ ಮೊಹಮ್ಮದ್ ಅಲಾಸ ಮತ್ತು ಪ್ರಾಯೋಜಕ ಇರ್ಫಾನ್ ಬೆಪ್ಪಾರಿ ಉಪಸ್ಥಿತರಿದ್ದರು.
    user_ನದೀಮ  ನಾಯಕವಾಡಿ
    ನದೀಮ ನಾಯಕವಾಡಿ
    Voice of people Chikodi, Belagavi•
    12 hrs ago
  • ಧಾರ್ವಾಡ್ ನಗರದ ರವೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೀವ್ರ ವಿಳಂಬವಾಗಿದೆ. ಈ ಕುರಿತು 2015ರಿಂದ ವರದಿಗಳನ್ನು ಸಲ್ಲಿಸಲಾಗಿದ್ದರೂ, ಇಲ್ಲಿಯವರೆಗೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಈ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ರವೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ವಿಚಾರದಲ್ಲಿನ ಈ ಸಮಸ್ಯೆಯನ್ನು ಎತ್ತಿ ಹಿಡಿಯಲು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.
    1
    ಧಾರ್ವಾಡ್ ನಗರದ ರವೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೀವ್ರ ವಿಳಂಬವಾಗಿದೆ. ಈ ಕುರಿತು 2015ರಿಂದ ವರದಿಗಳನ್ನು ಸಲ್ಲಿಸಲಾಗಿದ್ದರೂ, ಇಲ್ಲಿಯವರೆಗೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಈ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ರವೀಂದ್ರ ನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ವಿಚಾರದಲ್ಲಿನ ಈ ಸಮಸ್ಯೆಯನ್ನು ಎತ್ತಿ ಹಿಡಿಯಲು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.
    user_Kushal Hiremath
    Kushal Hiremath
    ಧಾರವಾಡ, ಧಾರವಾಡ, ಕರ್ನಾಟಕ•
    18 hrs ago
  • ರಾಯಬಾಗದಲ್ಲಿ ಬಸವರಾಜ ಹೆಗಲೆ ಅವರು ತಮ್ಮ ಹಾಸ್ಯಮಯ ಚಟಾಕಿಗಳ ಮೂಲಕ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
    2
    ರಾಯಬಾಗದಲ್ಲಿ ಬಸವರಾಜ ಹೆಗಲೆ ಅವರು ತಮ್ಮ ಹಾಸ್ಯಮಯ ಚಟಾಕಿಗಳ ಮೂಲಕ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
    user_ಅಮರ ವಾಹಿನಿ ಕನ್ನಡ news
    ಅಮರ ವಾಹಿನಿ ಕನ್ನಡ news
    ರಾಯಬಾಗ, ಬೆಳಗಾವಿ, ಕರ್ನಾಟಕ•
    12 hrs ago
  • ಕಲಘಟಗಿಯಲ್ಲಿ ಬೆಳೆ ವಿಮೆಯಲ್ಲಿನ ತಾರತಮ್ಯದ ತನಿಖೆಗೆ ಆಗ್ರಹಿಸಿ ಭಾರತೀಯ ಕಿಸಾನ ಸಂಘ ನಡೆಸುತ್ತಿರುವ 11ನೇ ದಿನದ ಧರಣಿ ಸತ್ಯಾಗ್ರಹಕ್ಕೆ ದೇವರಕೊಂಡ ಗ್ರಾಮದ ಬಾಲಯೋಗಿ ಮಾಣಿಕ್ ವೃಷಭೇಂದ್ರ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ನಡೆಯುತ್ತಿರುವ ಈ ಪ್ರತಿಭಟನೆಗೆ ಆಶೀರ್ವಚನ ನೀಡಿದ ಸ್ವಾಮೀಜಿ, ರೈತರ ಮನಸ್ಸಿಗೆ ನೋವುಂಟು ಮಾಡಿದರೆ ಪಾಪ ಕರ್ಮಗಳು ಹೆಚ್ಚಾಗುತ್ತವೆ ಎಂದು ಎಚ್ಚರಿಕೆ ನೀಡಿದರು. ಸ್ವಾಮೀಜಿ ತಮ್ಮ ಭಾಷಣದಲ್ಲಿ, ಧರ್ಮದ ಹಾದಿಯಲ್ಲಿ ಸಾಗಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು. ಕೆಲವು ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಅವರಿಗೆ ವಿಮೆ ಹಣ ಬಂದಿದ್ದರೂ ಕೇಳುವವರಿಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಏಜೆಂಟರ ಮೂಲಕ ಹಣ ಜಮೆ ಮಾಡಿಸಿಕೊಂಡು ಶೇಕಡ 50ರಷ್ಟು ಕಮಿಷನ್ ಪಡೆಯುತ್ತಿರುವುದು ದೇಶದ ಅನ್ನದಾತನಿಗೆ ಬಗೆಯುತ್ತಿರುವ ದ್ರೋಹ ಎಂದು ಬಣ್ಣಿಸಿದ ಅವರು, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿದರು. ಈ ಧರಣಿ ಸತ್ಯಾಗ್ರಹಕ್ಕೆ ಪಟ್ಟಣದ ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಬಸನಗೌಡ್ರ, ತಾಲ್ಲೂಕು ಅಧ್ಯಕ್ಷ ಸಿದ್ದಪ್ಪ ಬೆಟಗೇರಿ, ಸಂಗ್ರಾಮ ಸೇನೆ ತಾಲ್ಲೂಕು ಅಧ್ಯಕ್ಷ ಸಾತಪ್ಪ ಕುಂಕೂರ, ಚಂದ್ರಗೌಡ ಪಾಟೀಲ, ಶಂಕರಗೌಡ ಪಾಟೀಲ, ಶಶಿಧರ ಹುಲಿಕಟ್ಟಿ, ಪರಶುರಾಮ ಹುಲಿಹೊಂಡ ಹಾಗೂ ಬಸವರಾಜ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
    1
    ಕಲಘಟಗಿಯಲ್ಲಿ ಬೆಳೆ ವಿಮೆಯಲ್ಲಿನ ತಾರತಮ್ಯದ ತನಿಖೆಗೆ ಆಗ್ರಹಿಸಿ ಭಾರತೀಯ ಕಿಸಾನ ಸಂಘ ನಡೆಸುತ್ತಿರುವ 11ನೇ ದಿನದ ಧರಣಿ ಸತ್ಯಾಗ್ರಹಕ್ಕೆ ದೇವರಕೊಂಡ ಗ್ರಾಮದ ಬಾಲಯೋಗಿ ಮಾಣಿಕ್ ವೃಷಭೇಂದ್ರ ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ನಡೆಯುತ್ತಿರುವ ಈ ಪ್ರತಿಭಟನೆಗೆ ಆಶೀರ್ವಚನ ನೀಡಿದ ಸ್ವಾಮೀಜಿ, ರೈತರ ಮನಸ್ಸಿಗೆ ನೋವುಂಟು ಮಾಡಿದರೆ ಪಾಪ ಕರ್ಮಗಳು ಹೆಚ್ಚಾಗುತ್ತವೆ ಎಂದು ಎಚ್ಚರಿಕೆ ನೀಡಿದರು.

ಸ್ವಾಮೀಜಿ ತಮ್ಮ ಭಾಷಣದಲ್ಲಿ, ಧರ್ಮದ ಹಾದಿಯಲ್ಲಿ ಸಾಗಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು. ಕೆಲವು ಅಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಅವರಿಗೆ ವಿಮೆ ಹಣ ಬಂದಿದ್ದರೂ ಕೇಳುವವರಿಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಏಜೆಂಟರ ಮೂಲಕ ಹಣ ಜಮೆ ಮಾಡಿಸಿಕೊಂಡು ಶೇಕಡ 50ರಷ್ಟು ಕಮಿಷನ್ ಪಡೆಯುತ್ತಿರುವುದು ದೇಶದ ಅನ್ನದಾತನಿಗೆ ಬಗೆಯುತ್ತಿರುವ ದ್ರೋಹ ಎಂದು ಬಣ್ಣಿಸಿದ ಅವರು, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿದರು.

ಈ ಧರಣಿ ಸತ್ಯಾಗ್ರಹಕ್ಕೆ ಪಟ್ಟಣದ ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಬಸನಗೌಡ್ರ, ತಾಲ್ಲೂಕು ಅಧ್ಯಕ್ಷ ಸಿದ್ದಪ್ಪ ಬೆಟಗೇರಿ, ಸಂಗ್ರಾಮ ಸೇನೆ ತಾಲ್ಲೂಕು ಅಧ್ಯಕ್ಷ ಸಾತಪ್ಪ ಕುಂಕೂರ, ಚಂದ್ರಗೌಡ ಪಾಟೀಲ, ಶಂಕರಗೌಡ ಪಾಟೀಲ, ಶಶಿಧರ ಹುಲಿಕಟ್ಟಿ, ಪರಶುರಾಮ ಹುಲಿಹೊಂಡ ಹಾಗೂ ಬಸವರಾಜ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
    user_Kallappa m mirji
    Kallappa m mirji
    Farmer ಕಳಘಟಗಿ, ಧಾರವಾಡ, ಕರ್ನಾಟಕ•
    13 hrs ago
  • ಜಮಖಂಡಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಗೆಲುವನ್ನು ಅದ್ದೂರಿಯಾಗಿ ಸಂಭ್ರಮಿಸಲಾಯಿತು. ತಾಲೂಕು ಕ್ರೀಡಾಂಗಣದ ಮುಂಭಾಗದಲ್ಲಿ ಹಾಕಲಾಗಿದ್ದ ದೊಡ್ಡ ಪರದೆಯ ಮೇಲೆ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಿದರು. ಆರ್‌ಸಿಬಿ ಗೆಲುವಿನ ನಂತರ, ಅಭಿಮಾನಿಗಳು ತಮ್ಮ ಹರ್ಷೋದ್ಗಾರವನ್ನು ಭರ್ಜರಿ ಬೈಕ್ ರ‍್ಯಾಲಿ ಮೂಲಕ ವ್ಯಕ್ತಪಡಿಸಿದರು. ಈ ಸಂಭ್ರಮಕ್ಕೆ ಶ್ರೀ ಕೃಷ್ಣಾನಂದ ಅವಧೂತರು ಪೂಜೆ ಸಲ್ಲಿಸಿದರು, ಹಾಗೂ ಗಣ್ಯರಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
    1
    ಜಮಖಂಡಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಗೆಲುವನ್ನು ಅದ್ದೂರಿಯಾಗಿ ಸಂಭ್ರಮಿಸಲಾಯಿತು. ತಾಲೂಕು ಕ್ರೀಡಾಂಗಣದ ಮುಂಭಾಗದಲ್ಲಿ ಹಾಕಲಾಗಿದ್ದ ದೊಡ್ಡ ಪರದೆಯ ಮೇಲೆ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಿದರು. ಆರ್‌ಸಿಬಿ ಗೆಲುವಿನ ನಂತರ, ಅಭಿಮಾನಿಗಳು ತಮ್ಮ ಹರ್ಷೋದ್ಗಾರವನ್ನು ಭರ್ಜರಿ ಬೈಕ್ ರ‍್ಯಾಲಿ ಮೂಲಕ ವ್ಯಕ್ತಪಡಿಸಿದರು. ಈ ಸಂಭ್ರಮಕ್ಕೆ ಶ್ರೀ ಕೃಷ್ಣಾನಂದ ಅವಧೂತರು ಪೂಜೆ ಸಲ್ಲಿಸಿದರು, ಹಾಗೂ ಗಣ್ಯರಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    7 hrs ago
  • ಧಾರವಾಡ ನಗರದಲ್ಲಿ ಪೆಟ್ರೋಲ್ ಬೆಲೆ ಗಣನೀಯವಾಗಿ ಏರಿಕೆಯಾದ ಬೆನ್ನಲ್ಲೇ ಪೆಟ್ರೋಲ್ ಕಳ್ಳರ ಹಾವಳಿ ಜೋರಾಗಿದೆ. ಧಾರವಾಡದ ಹಾಶ್ಮೀನಗರದ ಐಸ್ಕ್ರೀಮ್ ಪ್ಯಾಕ್ಟರಿ ಬಳಿ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಂದ ನಿರಂತರವಾಗಿ ಪೆಟ್ರೋಲ್ ಕದಿಯಲಾಗುತ್ತಿದೆ. ಕಳೆದ ಒಂದು ವಾರದಿಂದ ಈ ರೀತಿಯ ಪೆಟ್ರೋಲ್ ಕಳ್ಳತನಗಳು ವರದಿಯಾಗುತ್ತಿವೆ. ಈ ಕೃತ್ಯದ ಹಿಂದೆ ಮೂವರು ಯುವಕರ ತಂಡವಿದ್ದು, ಅವರ ಪೆಟ್ರೋಲ್ ಕದಿಯುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಜನರು ಹಾಗೂ ವಾಹನಗಳ ಓಡಾಟ ಕಡಿಮೆಯಾದ ರಾತ್ರಿ ಸಮಯದಲ್ಲಿ ಈ ಯುವಕರ ಗ್ಯಾಂಗ್ ಸಕ್ರಿಯವಾಗಿ, ಹೊರಗೆ ನಿಲ್ಲಿಸಲಾದ ಬೈಕ್‌ಗಳನ್ನು ಗುರಿಯಾಗಿಸಿಕೊಂಡು ಪೆಟ್ರೋಲ್ ಕದಿಯುತ್ತಿದೆ. ಈ ಘಟನೆಗಳು ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.
    1
    ಧಾರವಾಡ ನಗರದಲ್ಲಿ ಪೆಟ್ರೋಲ್ ಬೆಲೆ ಗಣನೀಯವಾಗಿ ಏರಿಕೆಯಾದ ಬೆನ್ನಲ್ಲೇ ಪೆಟ್ರೋಲ್ ಕಳ್ಳರ ಹಾವಳಿ ಜೋರಾಗಿದೆ. ಧಾರವಾಡದ ಹಾಶ್ಮೀನಗರದ ಐಸ್ಕ್ರೀಮ್ ಪ್ಯಾಕ್ಟರಿ ಬಳಿ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಂದ ನಿರಂತರವಾಗಿ ಪೆಟ್ರೋಲ್ ಕದಿಯಲಾಗುತ್ತಿದೆ. ಕಳೆದ ಒಂದು ವಾರದಿಂದ ಈ ರೀತಿಯ ಪೆಟ್ರೋಲ್ ಕಳ್ಳತನಗಳು ವರದಿಯಾಗುತ್ತಿವೆ.

ಈ ಕೃತ್ಯದ ಹಿಂದೆ ಮೂವರು ಯುವಕರ ತಂಡವಿದ್ದು, ಅವರ ಪೆಟ್ರೋಲ್ ಕದಿಯುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಜನರು ಹಾಗೂ ವಾಹನಗಳ ಓಡಾಟ ಕಡಿಮೆಯಾದ ರಾತ್ರಿ ಸಮಯದಲ್ಲಿ ಈ ಯುವಕರ ಗ್ಯಾಂಗ್ ಸಕ್ರಿಯವಾಗಿ, ಹೊರಗೆ ನಿಲ್ಲಿಸಲಾದ ಬೈಕ್‌ಗಳನ್ನು ಗುರಿಯಾಗಿಸಿಕೊಂಡು ಪೆಟ್ರೋಲ್ ಕದಿಯುತ್ತಿದೆ. ಈ ಘಟನೆಗಳು ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    46 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.