logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿವಮೊಗ್ಗ-ತಹಶೀಲ್ದಾರ್ ರವರ ಕಾರ್ಯ ವೈಖರಿ: ಸಾಗರ ಶಾಸಕ ಬೇಳೂರು ಅಸಮಾಧಾನ ಶಿವಮೊಗ್ಗ: ಸಾಗರ ತಾಲೂಕಿನಲ್ಲಿ ನಿರಂತರ ದಾಳಿ ಹಾಗೂ ಕಾರ್ಯಾಚರಣೆ ನಡೆಸುತ್ತಿರುವ ತಹಶೀಲ್ದಾರ್ ಪ್ರತೀಭಾ ಅವರ ಕಾರ್ಯ ವೈಖರಿ ಕುರಿತು ಶಾಸಕ ಬೇಳೂರು ಗೋಪಾಲಕೃಷ್ಣ ನಿನ್ನೆ ಸಾಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆ ನಡೆಸುವ ವೇಳೆ ವಿಡಿಯೋ ಮಾಡಿ ಅದನ್ನು ಮಾಧ್ಯಮಗಳಿಗೆ ನೀಡುವ ಮೂಲಕ ಪ್ರಚಾರ ಪಡೆಯುವ ಕ್ರಮವನ್ನು ತಕ್ಷಣವೇ ನಿಲ್ಲಿಸುವಂತೆ ಅಧಿಕಾರಿಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚಿಸಿದ್ದಾರೆ. ಪ್ರಚಾರ ಮೊದಲು ಅಲ್ಲ, ಕೆಲಸ ಮೊದಲು. ಕಾರ್ಯಾಚರಣೆಗಳ ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡುವುದನ್ನು ನಿಲ್ಲಿಸಿ. ಪ್ರಚಾರದ ಧಾಟಿ ಬಿಟ್ಟು ನಿಯಮಾನುಸಾರ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಿ” ಎಂದು ಅಧಿಕಾರಿಗಳಿಗೆ ಸೂಚಿಸಿರುವುದು ಸಭೆಯಲ್ಲಿ ಗಮನ ಸೆಳೆಯಿತು.

7 hrs ago
user_ಆರ್.ವಿ.ಕೃಷ್ಣ
ಆರ್.ವಿ.ಕೃಷ್ಣ
Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
7 hrs ago

ಶಿವಮೊಗ್ಗ-ತಹಶೀಲ್ದಾರ್ ರವರ ಕಾರ್ಯ ವೈಖರಿ: ಸಾಗರ ಶಾಸಕ ಬೇಳೂರು ಅಸಮಾಧಾನ ಶಿವಮೊಗ್ಗ: ಸಾಗರ ತಾಲೂಕಿನಲ್ಲಿ ನಿರಂತರ ದಾಳಿ ಹಾಗೂ ಕಾರ್ಯಾಚರಣೆ ನಡೆಸುತ್ತಿರುವ ತಹಶೀಲ್ದಾರ್ ಪ್ರತೀಭಾ ಅವರ ಕಾರ್ಯ ವೈಖರಿ ಕುರಿತು ಶಾಸಕ ಬೇಳೂರು ಗೋಪಾಲಕೃಷ್ಣ ನಿನ್ನೆ ಸಾಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆ ನಡೆಸುವ ವೇಳೆ ವಿಡಿಯೋ ಮಾಡಿ ಅದನ್ನು ಮಾಧ್ಯಮಗಳಿಗೆ ನೀಡುವ ಮೂಲಕ ಪ್ರಚಾರ ಪಡೆಯುವ ಕ್ರಮವನ್ನು ತಕ್ಷಣವೇ ನಿಲ್ಲಿಸುವಂತೆ ಅಧಿಕಾರಿಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚಿಸಿದ್ದಾರೆ. ಪ್ರಚಾರ ಮೊದಲು ಅಲ್ಲ, ಕೆಲಸ ಮೊದಲು. ಕಾರ್ಯಾಚರಣೆಗಳ ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡುವುದನ್ನು ನಿಲ್ಲಿಸಿ. ಪ್ರಚಾರದ ಧಾಟಿ ಬಿಟ್ಟು ನಿಯಮಾನುಸಾರ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಿ” ಎಂದು ಅಧಿಕಾರಿಗಳಿಗೆ ಸೂಚಿಸಿರುವುದು ಸಭೆಯಲ್ಲಿ ಗಮನ ಸೆಳೆಯಿತು.

More news from ಕರ್ನಾಟಕ and nearby areas
  • ಸಮಗ್ರ ನೀರಾವರಿಗೆ ಆಗ್ರಹಿಸಿ ವಿವಿ ಪುರದಲ್ಲಿಂದು ಬೃಹತ್ ಪ್ರತಿಭಟನೆಗೆ ಚಾಲನೆ ಸಮಗ್ರ ನೀರಾವರಿಗೆ ಆಗ್ರಹಿಸಿ ವಿವಿ ಪುರದಲ್ಲಿಂದು ಬೃಹತ್ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಇನ್ನೂ ಬಯಲು ಸೀಮೆ ನೀರಾವರಿ ಹೋರಾಟ ಸಮಿತಿ ವತಿಯಿಂದ ವಿ ವಿ ಸಾಗರ ಜಲಾಶಯ ಉಳಿಸಿ ಎಂಬ ಘೋಷ ವಾಕ್ಯದ ಅಡಿಯಲ್ಲಿ ಕಪ್ಪು ಪಟ್ಟಿ ದರಿಸಿ ವಿ ವಿ ಪುರ ಗ್ರಾಮದಿಂದ ವಾಣಿ ವಿಲಾಸ ಸಾಗರ ಜಲಾಶಯದ ವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಮಧ್ಯ ಕರ್ನಾಟಕ ಬಯಲುಸೀಮೆ ಪ್ರದೇಶವಾದ ಚಿತ್ರದುರ್ಗ ಜಿಲ್ಲೆಗೆ ಸಮಗ್ರ ನೀರಾವರಿಗೆ ಆಗ್ರಹಿಸಿದ್ದಾರೆ. ಇನ್ನೂ ಸಮಿತಿಯ ಪ್ರಧಾನ ಸಂಚಾಲಕ ಲಕ್ಷ್ಮಣ್ ಹೂಗಾರ್ ಅವರ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಹಿರಿಯ ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದು ಈ ಒಂದು ಪಾದಯಾತ್ರೆಯು ವಾಣಿ ವಿಲಾಸ ಸಾಗರ ಜಲಾಶಯದ ಬಳಿ ತಲುಪಿ ನಂತರ ಜಲಾಶಯದ ಮುಂಬಾಗ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಸಹ ನಡೆಸಲಿದ್ದು ನೂರಾರು ರೈತ ಮುಖಂಡರು, ವಿವಿಧ ಪ್ರಗತಿಪರ ಸಂಘಟನೆಯ ಸದಸ್ಯರು, ಸಾರ್ವಜನಿಕರು ಹಾಗೂ ವಿಧ್ಯಾರ್ಥಿಗಳು ಮತ್ತು ನೀರಾವರಿ ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಅಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ.
    1
    ಸಮಗ್ರ ನೀರಾವರಿಗೆ ಆಗ್ರಹಿಸಿ ವಿವಿ ಪುರದಲ್ಲಿಂದು ಬೃಹತ್ ಪ್ರತಿಭಟನೆಗೆ ಚಾಲನೆ
ಸಮಗ್ರ ನೀರಾವರಿಗೆ ಆಗ್ರಹಿಸಿ ವಿವಿ ಪುರದಲ್ಲಿಂದು ಬೃಹತ್ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಇನ್ನೂ ಬಯಲು ಸೀಮೆ ನೀರಾವರಿ ಹೋರಾಟ ಸಮಿತಿ ವತಿಯಿಂದ ವಿ ವಿ ಸಾಗರ ಜಲಾಶಯ ಉಳಿಸಿ ಎಂಬ ಘೋಷ ವಾಕ್ಯದ ಅಡಿಯಲ್ಲಿ ಕಪ್ಪು ಪಟ್ಟಿ ದರಿಸಿ ವಿ ವಿ ಪುರ ಗ್ರಾಮದಿಂದ ವಾಣಿ ವಿಲಾಸ ಸಾಗರ ಜಲಾಶಯದ ವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಮಧ್ಯ ಕರ್ನಾಟಕ ಬಯಲುಸೀಮೆ ಪ್ರದೇಶವಾದ ಚಿತ್ರದುರ್ಗ ಜಿಲ್ಲೆಗೆ ಸಮಗ್ರ ನೀರಾವರಿಗೆ ಆಗ್ರಹಿಸಿದ್ದಾರೆ. ಇನ್ನೂ ಸಮಿತಿಯ ಪ್ರಧಾನ ಸಂಚಾಲಕ ಲಕ್ಷ್ಮಣ್ ಹೂಗಾರ್ ಅವರ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಹಿರಿಯ ರೈತ ಮುಖಂಡ ಈಚಘಟ್ಟದ ಸಿದ್ದವೀರಪ್ಪ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದು ಈ ಒಂದು ಪಾದಯಾತ್ರೆಯು ವಾಣಿ ವಿಲಾಸ ಸಾಗರ ಜಲಾಶಯದ ಬಳಿ ತಲುಪಿ ನಂತರ ಜಲಾಶಯದ ಮುಂಬಾಗ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಸಹ ನಡೆಸಲಿದ್ದು ನೂರಾರು ರೈತ ಮುಖಂಡರು, ವಿವಿಧ ಪ್ರಗತಿಪರ ಸಂಘಟನೆಯ ಸದಸ್ಯರು, ಸಾರ್ವಜನಿಕರು ಹಾಗೂ ವಿಧ್ಯಾರ್ಥಿಗಳು ಮತ್ತು ನೀರಾವರಿ ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಅಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    14 hrs ago
  • ಗೋಲ್ಡನ್ ಚಿಕನ್ ಫ್ಯಾಕ್ಟರಿ ವಿರುದ್ಧ ಆರೋಪ ಮಾಡಿದ ರೈತನ ಜೊತೆಗೆ ಕೈಜೋಡಿಸಿದ ತಾಲೂಕಿನ ರೈತ ಮುಖಂಡರು. ರಾಣೆಬೆನ್ನೂರು ತಾಲೂಕಿನ ತೆರದಲ್ಲಿ ಬೆಳೆ ಇರುವ ಗೋಲ್ಡನ್ ಚಿಕನ್ ಫ್ಯಾಕ್ಟರಿ ವಿರುದ್ಧ ಆರೋಪ ಮಾಡಿದ ರೈತನ ಜೊತೆಗೆ ಕೈಜೋಡಿಸಿದ ತಾಲೂಕಿನ ರೈತ ಮುಖಂಡ ಶಿವಪುತ್ರಪ್ಪ ಮಲ್ಲಾಡದ ನ್ಯಾಯ ಸಿಗುವವರೆಗೂ ಈ ಕುಟುಂಬದ ಬೆನ್ನೆಲುಬಾಗಿ ನಿಲ್ಲುತ್ತೇವೆ.
    1
    ಗೋಲ್ಡನ್ ಚಿಕನ್ ಫ್ಯಾಕ್ಟರಿ ವಿರುದ್ಧ ಆರೋಪ ಮಾಡಿದ ರೈತನ ಜೊತೆಗೆ ಕೈಜೋಡಿಸಿದ ತಾಲೂಕಿನ ರೈತ ಮುಖಂಡರು.
ರಾಣೆಬೆನ್ನೂರು ತಾಲೂಕಿನ ತೆರದಲ್ಲಿ ಬೆಳೆ ಇರುವ ಗೋಲ್ಡನ್ ಚಿಕನ್ ಫ್ಯಾಕ್ಟರಿ ವಿರುದ್ಧ ಆರೋಪ ಮಾಡಿದ ರೈತನ ಜೊತೆಗೆ ಕೈಜೋಡಿಸಿದ ತಾಲೂಕಿನ ರೈತ ಮುಖಂಡ ಶಿವಪುತ್ರಪ್ಪ ಮಲ್ಲಾಡದ ನ್ಯಾಯ ಸಿಗುವವರೆಗೂ ಈ ಕುಟುಂಬದ ಬೆನ್ನೆಲುಬಾಗಿ ನಿಲ್ಲುತ್ತೇವೆ.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    14 hrs ago
  • ಹುಟ್ಟು ಹಬ್ಬದ ಪ್ರಯುಕ್ತ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸಿದ ಪುತ್ತೂರು ಶಾಸಕ ಹುಟ್ಟು ಹಬ್ಬದ ಪ್ರಯುಕ್ತ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ..
    1
    ಹುಟ್ಟು ಹಬ್ಬದ ಪ್ರಯುಕ್ತ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸಿದ ಪುತ್ತೂರು ಶಾಸಕ
ಹುಟ್ಟು ಹಬ್ಬದ ಪ್ರಯುಕ್ತ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ..
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    2 hrs ago
  • ಜನಾರ್ದನ ರೆಡ್ಡಿ ಇತಿಹಾಸ ನನಗೆ 2002ರಿಂದ ಗೊತ್ತು– ಸಂಸದ ಈ. ತುಕಾರಾಂ ಕೂಡ್ಲಿಗಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಮೊದಲು ಏನಾಗಿದ್ದರು, ನಂತರ ಏನಾದರು, ಯಾವ ಕಂಪೌಂಡ್‌ಗೆ ಬಂದು ಏನು ಕೇಳಿದ್ದರು, ಆಗ ನಾನು ಅವರಿಗೆ ಯಾವ ರೀತಿಯ ಸಹಾಯ ಮಾಡಿದ್ದೆ ಎಂಬುದು ನನಗೆ ಗೊತ್ತಿದೆ ಎಂದು ಬಳ್ಳಾರಿ ಸಂಸದ ಈ. ತುಕಾರಾಂ ಹೇಳಿದರು. ಕೂಡ್ಲಿಗಿ ಪಟ್ಟಣದಲ್ಲಿ ಸೆ.5ರಂದು ನಡೆಯಲಿರುವ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2002ರಿಂದಲೂ ಜನಾರ್ದನ ರೆಡ್ಡಿ ಅವರ ಇತಿಹಾಸ ನನಗೆ ಗೊತ್ತು. ನಾನು ಅಕೌಂಟೆಂಟ್ ಆಗಿದ್ದಾಗಿನಿಂದ ಅವರನ್ನು ನೋಡುತ್ತಿದ್ದೇನೆ” ಎಂದರು. ಜನಾರ್ದನ ರೆಡ್ಡಿ ಅವರು ಯಾವ ಮೈನಿಂಗ್ ವಿಚಾರದಲ್ಲಿ ಏನು ಮಾಡಿದ್ದಾರೆ ಎಂಬುದೂ ನನಗೆ ತಿಳಿದಿದೆ. ಅವರ ರಾಜಕೀಯ ಜೀವನದ ಹಿಂದಿನ ವಿಚಾರಗಳ ಬಗ್ಗೆ ಮಾತನಾಡುವಷ್ಟು ಮಾಹಿತಿ ನನ್ನಲ್ಲಿದೆ. ಆದರೆ ನಾವು ಜನರಿಗೆ ಲೆಕ್ಕ ನೀಡಬೇಕೇ ಹೊರತು, ಜನಾರ್ದನ ರೆಡ್ಡಿ ಹೇಳಿದ ಪ್ರತಿಯೊಂದು ಮಾತಿಗೂ ಉತ್ತರ ನೀಡುತ್ತಾ ಕೂರುವ ಅಗತ್ಯವಿಲ್ಲ ಎಂದು ತುಕಾರಾಂ ತಿರುಗೇಟು ನೀಡಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಕ್ಷೇತ್ರದ ಅಭಿವೃದ್ಧಿ ಮಾಡುವುದು ಹಾಗೂ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದೇ ನಮ್ಮ ಮುಖ್ಯ ಉದ್ದೇಶ. ರಾಜಕೀಯವಾಗಿ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗಿಂತ ಜನರ ಮುಂದೆ ನಮ್ಮ ಕೆಲಸದ ಲೆಕ್ಕ ನೀಡುವುದು ಮುಖ್ಯ ಎಂದು ಅವರು ಹೇಳಿದರು.
    1
    ಜನಾರ್ದನ ರೆಡ್ಡಿ ಇತಿಹಾಸ ನನಗೆ 2002ರಿಂದ ಗೊತ್ತು– ಸಂಸದ ಈ. ತುಕಾರಾಂ

ಕೂಡ್ಲಿಗಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಮೊದಲು ಏನಾಗಿದ್ದರು, ನಂತರ ಏನಾದರು, ಯಾವ ಕಂಪೌಂಡ್‌ಗೆ ಬಂದು ಏನು ಕೇಳಿದ್ದರು, ಆಗ ನಾನು ಅವರಿಗೆ ಯಾವ ರೀತಿಯ ಸಹಾಯ ಮಾಡಿದ್ದೆ ಎಂಬುದು ನನಗೆ ಗೊತ್ತಿದೆ ಎಂದು ಬಳ್ಳಾರಿ ಸಂಸದ ಈ. ತುಕಾರಾಂ ಹೇಳಿದರು.
ಕೂಡ್ಲಿಗಿ ಪಟ್ಟಣದಲ್ಲಿ ಸೆ.5ರಂದು ನಡೆಯಲಿರುವ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2002ರಿಂದಲೂ ಜನಾರ್ದನ ರೆಡ್ಡಿ ಅವರ ಇತಿಹಾಸ ನನಗೆ ಗೊತ್ತು. ನಾನು ಅಕೌಂಟೆಂಟ್ ಆಗಿದ್ದಾಗಿನಿಂದ ಅವರನ್ನು ನೋಡುತ್ತಿದ್ದೇನೆ” ಎಂದರು.
ಜನಾರ್ದನ ರೆಡ್ಡಿ ಅವರು ಯಾವ ಮೈನಿಂಗ್ ವಿಚಾರದಲ್ಲಿ ಏನು ಮಾಡಿದ್ದಾರೆ ಎಂಬುದೂ ನನಗೆ ತಿಳಿದಿದೆ. ಅವರ ರಾಜಕೀಯ ಜೀವನದ ಹಿಂದಿನ ವಿಚಾರಗಳ ಬಗ್ಗೆ ಮಾತನಾಡುವಷ್ಟು ಮಾಹಿತಿ ನನ್ನಲ್ಲಿದೆ. ಆದರೆ ನಾವು ಜನರಿಗೆ ಲೆಕ್ಕ ನೀಡಬೇಕೇ ಹೊರತು, ಜನಾರ್ದನ ರೆಡ್ಡಿ ಹೇಳಿದ ಪ್ರತಿಯೊಂದು ಮಾತಿಗೂ ಉತ್ತರ ನೀಡುತ್ತಾ ಕೂರುವ ಅಗತ್ಯವಿಲ್ಲ ಎಂದು ತುಕಾರಾಂ ತಿರುಗೇಟು ನೀಡಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಕ್ಷೇತ್ರದ ಅಭಿವೃದ್ಧಿ ಮಾಡುವುದು ಹಾಗೂ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದೇ ನಮ್ಮ ಮುಖ್ಯ ಉದ್ದೇಶ. ರಾಜಕೀಯವಾಗಿ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗಿಂತ ಜನರ ಮುಂದೆ ನಮ್ಮ ಕೆಲಸದ ಲೆಕ್ಕ ನೀಡುವುದು ಮುಖ್ಯ ಎಂದು ಅವರು ಹೇಳಿದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    5 hrs ago
  • ಪುತ್ತೂರು ಶಾಸಕರು ತನ್ನ ರೌಡಿಗಳನ್ನು ಬಿಟ್ಟು ನನ್ನ ಕೊಲೆ ಮಾಡಲು ಯಾವ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿದೆ ಮಂಗಳೂರು:ಪುತ್ತೂರು ಶಾಸಕರು ತನ್ನ ರೌಡಿಗಳನ್ನು ಬಿಟ್ಟು ನನ್ನ ಕೊಲೆ ಮಾಡಲು ಯಾವ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಮತ್ತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರು ಶಾಸಕರು ಜಲೀಲ್ ಕರೋಪಾಡಿ ಕೊಲೆ ಆರೋಪಿ, ಬೆಳ್ಳಾರೆಯ ಮಸೂದ್ ಕೊಲೆ ಆರೋಪಿಗಳನ್ನು ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ಇಂಥವರನ್ನು ಇಟ್ಟುಕೊಂಡು ಕಾಂಗ್ರೇಸ್ ಪಕ್ಷ ಸಂಘಟಿಸಲು ಸಾಧ್ಯವಿದೆಯೇ. ಇದನ್ನು ನಾನು ಪ್ರಶ್ನಿಸಿದಕ್ಕೆ ನನ್ನ ವಿರುದ್ಧ ಶಾಸಕರು ತಮ್ಮ ಗೂಂಡಾಗಳನ್ನು ಬಿಟ್ಟು ಬೆದರಿಸುವ ಪ್ರಯತ್ನ ಮಾಡಿದರು. ಆದರೆ ಇಂತಹ ಬೆದರಿಕೆಗಳಿಗೆ ಬಗ್ಗುವ ವ್ಯಕ್ತಿ ನಾನಲ್ಲ ಎಂದ ಅವರು ನನ್ನನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಶ್ಯಕ್ಷ ಕೃಷ್ಣಪ್ರಸಾದ್ ಆಳ್ವ ಕಾಂಗ್ರೆಸ್ ಕಾರ್ಯಕರ್ತನೇ ಅಲ್ಲ ಎಂದಿದ್ದಾರೆ. ನಾನು ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅಶೋಕ್ ರೈ ಪರ ಮತಯಾಚನೆ ಮಾಡಿದವನು. ನಾನು ಕೃಷ್ಣಪ್ರಸಾದ್ ಆಳ್ವರ ಕಾಂಗ್ರೇಸ್ ಅಲ್ಲ, ನಾನು ರಾಹುಲ್ ಗಾಂಧಿಯ ನ್ಯಾಷನಲ್ ಕಾಂಗ್ರೆಸ್ ನ ಕಾರ್ಯಕರ್ತ. ಕೃಷ್ಣಪ್ರಸಾದ್ ಆಳ್ವರ ಅಕ್ಕನ ಮಗ ಬಿಜೆಪಿಯ ಬೆಳ್ತಙಗಡಿ ಶಾಸಕ ಹರೀಶ್ ಪೂಂಜಾ. ನಾನು ಕಳೆದ ಚುನಾವಣೆಯಲ್ಲಿ ಅಶೋಕ್ ರೈ ಪ್ರಚಾರಕ್ಕೆ ಹತ್ತು ದಿನ ನನ್ನ ಕಾರನ್ನು ನೀಡಿದ್ಧೇನೆ. ಪಶು ವೈದ್ಯಕೀಯ ಕಛೇರಿಯಲ್ಲಿ ಚಾಲಕನಾಗಿದ್ದ ಶಶಿ ಎಂಬಾತ ನನ್ನ ಕಾರನ್ನು ಚುನಾವಣೆಗಾಗಿ ಬಳಸಿದ್ದ. ಆ ವಿಚಾರವನ್ನು ಆತ ಕಾಂಗ್ರೆಸ್ ನ ಕೆಲವರಲ್ಲಿ ಹೇಳಿದ ಕಾರಣ ಆತನಿಗೆ ಶಾಸಕರ ಗೂಂಡಾಗಳು ಶಾಸಕರ ಕಛೇರಿಯಲ್ಲೇ ಹಲ್ಲೆ ನಡೆಸಿದ್ದಾರೆ. ಆತನಿಗೆ ಚಾಲಕನಾಗಿ ಕೆಲಸವನ್ನು ನೀಡಿದ್ದ ಶಾಸಕರೇ ಅವನನ್ನು ಕೆಲಸದಿಂದ ತೆಗೆದಿದ್ದಾರೆ. ನಾನು ಕಾಂಗ್ರೇಸ್ ನ ಎಲ್ಲಾ ಪ್ರತಿಭಟನೆಗಳಲ್ಲಿ ಭಾಗಿಯಾದವ. ಆದರೆ ಇಂದು ಶಾಸಕರಾಗಲೀ, ಅವರ ಬೆಂಬಲಿಗರ ಕಾರುಗಳಲ್ಲಿ ಕಾಂಗ್ರೆಸ್ ಪಕ್ಷದ ಒಂದು ಶಾಲು ಇದೆಯೋ ಎಂದು ಅವರು ಪ್ರಶ್ನಿಸಿದ್ದಾರೆ.
    1
    ಪುತ್ತೂರು ಶಾಸಕರು ತನ್ನ ರೌಡಿಗಳನ್ನು ಬಿಟ್ಟು ನನ್ನ ಕೊಲೆ ಮಾಡಲು ಯಾವ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿದೆ
ಮಂಗಳೂರು:ಪುತ್ತೂರು ಶಾಸಕರು ತನ್ನ ರೌಡಿಗಳನ್ನು ಬಿಟ್ಟು ನನ್ನ ಕೊಲೆ ಮಾಡಲು ಯಾವ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಮತ್ತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರು ಶಾಸಕರು ಜಲೀಲ್ ಕರೋಪಾಡಿ ಕೊಲೆ ಆರೋಪಿ, ಬೆಳ್ಳಾರೆಯ ಮಸೂದ್ ಕೊಲೆ ಆರೋಪಿಗಳನ್ನು ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ಇಂಥವರನ್ನು ಇಟ್ಟುಕೊಂಡು ಕಾಂಗ್ರೇಸ್ ಪಕ್ಷ ಸಂಘಟಿಸಲು ಸಾಧ್ಯವಿದೆಯೇ. ಇದನ್ನು ನಾನು ಪ್ರಶ್ನಿಸಿದಕ್ಕೆ ನನ್ನ ವಿರುದ್ಧ ಶಾಸಕರು ತಮ್ಮ ಗೂಂಡಾಗಳನ್ನು ಬಿಟ್ಟು ಬೆದರಿಸುವ ಪ್ರಯತ್ನ ಮಾಡಿದರು. ಆದರೆ ಇಂತಹ ಬೆದರಿಕೆಗಳಿಗೆ ಬಗ್ಗುವ ವ್ಯಕ್ತಿ ನಾನಲ್ಲ ಎಂದ ಅವರು ನನ್ನನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಶ್ಯಕ್ಷ ಕೃಷ್ಣಪ್ರಸಾದ್ ಆಳ್ವ ಕಾಂಗ್ರೆಸ್ ಕಾರ್ಯಕರ್ತನೇ ಅಲ್ಲ ಎಂದಿದ್ದಾರೆ. ನಾನು ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅಶೋಕ್ ರೈ ಪರ ಮತಯಾಚನೆ ಮಾಡಿದವನು. ನಾನು ಕೃಷ್ಣಪ್ರಸಾದ್ ಆಳ್ವರ ಕಾಂಗ್ರೇಸ್ ಅಲ್ಲ, ನಾನು ರಾಹುಲ್ ಗಾಂಧಿಯ ನ್ಯಾಷನಲ್ ಕಾಂಗ್ರೆಸ್ ನ ಕಾರ್ಯಕರ್ತ. ಕೃಷ್ಣಪ್ರಸಾದ್ ಆಳ್ವರ ಅಕ್ಕನ ಮಗ ಬಿಜೆಪಿಯ ಬೆಳ್ತಙಗಡಿ ಶಾಸಕ ಹರೀಶ್ ಪೂಂಜಾ. ನಾನು ಕಳೆದ ಚುನಾವಣೆಯಲ್ಲಿ ಅಶೋಕ್ ರೈ ಪ್ರಚಾರಕ್ಕೆ ಹತ್ತು ದಿನ ನನ್ನ ಕಾರನ್ನು ನೀಡಿದ್ಧೇನೆ. ಪಶು ವೈದ್ಯಕೀಯ ಕಛೇರಿಯಲ್ಲಿ ಚಾಲಕನಾಗಿದ್ದ ಶಶಿ ಎಂಬಾತ ನನ್ನ ಕಾರನ್ನು ಚುನಾವಣೆಗಾಗಿ ಬಳಸಿದ್ದ. ಆ ವಿಚಾರವನ್ನು ಆತ ಕಾಂಗ್ರೆಸ್ ನ ಕೆಲವರಲ್ಲಿ ಹೇಳಿದ ಕಾರಣ ಆತನಿಗೆ ಶಾಸಕರ ಗೂಂಡಾಗಳು ಶಾಸಕರ ಕಛೇರಿಯಲ್ಲೇ ಹಲ್ಲೆ ನಡೆಸಿದ್ದಾರೆ. ಆತನಿಗೆ ಚಾಲಕನಾಗಿ ಕೆಲಸವನ್ನು ನೀಡಿದ್ದ ಶಾಸಕರೇ ಅವನನ್ನು ಕೆಲಸದಿಂದ ತೆಗೆದಿದ್ದಾರೆ. ನಾನು ಕಾಂಗ್ರೇಸ್ ನ ಎಲ್ಲಾ ಪ್ರತಿಭಟನೆಗಳಲ್ಲಿ ಭಾಗಿಯಾದವ. ಆದರೆ ಇಂದು  ಶಾಸಕರಾಗಲೀ, ಅವರ ಬೆಂಬಲಿಗರ ಕಾರುಗಳಲ್ಲಿ ಕಾಂಗ್ರೆಸ್ ಪಕ್ಷದ ಒಂದು ಶಾಲು ಇದೆಯೋ ಎಂದು ಅವರು ಪ್ರಶ್ನಿಸಿದ್ದಾರೆ.
    user_UMAPRASAD
    UMAPRASAD
    ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    6 hrs ago
  • *ಕೂಡ್ಲಿಗಿ : " ಜನ ಸೇವಾ ಆಂದೋಲನ " ಯಶಸ್ವಿಗೊಳಿಸಿ - ಸಚಿವ ಬಸಂತಪ್ಪ ಕರೆ*_ ವಿಜಯನಗರ ಜಿಲ್ಲೆ ಕೂಡ್ಲಿಗಿ : ಮುಖ್ಯಮಂತ್ರಿಗಳ ವಿನೂತನ ಕನಸಿನ ಜನಪರ ಕಾರ್ಯಕ್ರಮ , ಜನಸೇವ‍ಾ ಆಂದೋಲನಕ್ಕೆ ಪಟ್ಟಣದಲ್ಲಿ ಮುಖ್ಯಮಂತ್ರಿಗಳು ಸೆ 5ರಂದು ಚಾಲನೆ ನೀಡಲಿದ್ದಾರೆ. ಪಕ್ಷದ ಮುಖಂಡರು ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವೀಗೊಳಿಸಿ ಎಂದು ಉಸ್ತುವಾರಿ ಸಚಿವರಾದ ಬಸಂತಪ್ಪ ಕರೆ ನೀಡಿದರು. ಅವರು ಸೆ 1ರಂದು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ , ಕ್ಷೇತ್ರದ ಪ್ರತಿಕುಟುಂಬದ ಸಮಸ್ಯೆಗೆ ಸ್ಪಂದಿಸುವ ಉದ್ಧೇಶದಿಂದ ಆಂದೋಲನ ಜರುಗಿಸಲಾಗುತ್ತಿದೆ ಎಂದರು. ರಾಜ್ಯಸರ್ಕಾರದಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ , ಸರದಿ ಪ್ರಕಾರ ಪ್ರತಿ ತಿಂಗಳೂ ಒಂದೊಂದು ತಾಲೂಕು ಕೇಂದ್ರದಲ್ಲಿ. ರಾಜ್ಯದ ಎಲ್ಲ‍ಾ ತಾಲೂಕು ಕೇಂದ್ರಗಳಲ್ಲಿ , ಜನ ಸೇವ‍ಾ ಆಂದೋಲನ ನಡೆಯಲಿದೆ. ಆಂದೋಲನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಉಪ ಮುಖ್ಯಮಂತ್ರಿಗಳು ಎಲ್ಲಾ ಮಂತ್ರಿಗಳು , ವಿಧಾನಸೌಧದ ಅಧಿಕಾರಿವರ್ಗ ಜಿಲ್ಲಾ ತಾಲೂಕು ಮಟ್ಟದ ಆಡಳಿತಾಧಿಕಾರಿಗಳು ಹಾಜರಿರುತ್ತಾರೆ. ಜನರಿದ್ದಲ್ಲಿಗೆ ಸರ್ಕಾರ ದಾವಿಸಿ ಖುದ್ದು ಅಹವಾಲು ಆಲಿಸುವ ಉದ್ಧೇಶದಿಂದ , ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗುವ ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು , ಅಹವ‍ಲುಗಳನ್ನು ನಿಗದಿತ ಅರ್ಜಿನಮೂನೆಯ ಮೂಲಕ ನೀಡಿದ್ದಲ್ಲಿ. ಸಂಬಂಧಿಸಿದ ಇಲಾಖೆಗಳ ಮೂಲಕ , ಆಧ್ಯತೆಯ ಮೇರೆಗೆ ಸಮಸ್ಯೆಗೆ ಸ್ಪಂಧನೆ ನೀಡಲ‌‍ಾಗುತ್ತದೆ ಎಂದು ವಿವರಿಸಿದರು. ಶಾಸಕರಾದ ಡ‍ಾ ॥ ಎನ್ ಟಿ ಶ್ರೀನಿವಾಸ್ ಮಾತನಾಡಿ , ಜನಸೇವಾ ಆಂದೋಲನ ಮುಖ್ಯಮಂತ್ರಿಗಳ ಕನಸಿನ ಕೂಸಾಗಿದ್ದು , ಇದು ಅವರ ಜನಪರ ಕಾಳಜಿಯ ಪ್ರತಿಕವಾಗಿದೆ. ಮುಖ್ಯಮಂತ್ರಿಗಳ ಮಹತ್ವದ ಕಾರ್ಯಕ್ರಮದಲ್ಲಿ , ಪಕ್ಷದ ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮುಖಂಡರಲ್ಲಿ ಕೋರಿದರು. ಶಾಸಕರಾದ ಶ್ರಿಮತಿ ಎಂ.ಪಿ.ಲತ‍ಮಲ್ಲಿಕಾರ್ಜುನ , ಜಿಲ್ಲ‍ಾಧಿಕಾರಿ ಕವಿತಾ ಎಸ್ ಮನ್ನಿಕೇರಿ , ಸೇರಿದಂತೆ ಜಿಲ್ಲ‍ಾ ಮಟ್ಟದ ತಾಲೂಕು ಮಟ್ಟದ ಅಧಿಕ‍ಾರಿಗಳು ಹಾಜರಿದ್ದರು. ಕೂಡ್ಲಿಗಿ ಹೊಸಹಳ್ಳಿ ಗುಡೇಕೋಟೆ ಹೋಬಳಿ ಮುಖಂಡರು , ಕ್ಷೇತ್ರದ ವಿವಿದೆಡೆಯ ಪ್ರಮುಖರು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು , ನೂರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    *ಕೂಡ್ಲಿಗಿ : " ಜನ ಸೇವಾ ಆಂದೋಲನ " ಯಶಸ್ವಿಗೊಳಿಸಿ - ಸಚಿವ ಬಸಂತಪ್ಪ ಕರೆ*_ ವಿಜಯನಗರ ಜಿಲ್ಲೆ ಕೂಡ್ಲಿಗಿ : ಮುಖ್ಯಮಂತ್ರಿಗಳ ವಿನೂತನ ಕನಸಿನ ಜನಪರ ಕಾರ್ಯಕ್ರಮ ,  ಜನಸೇವ‍ಾ ಆಂದೋಲನಕ್ಕೆ ಪಟ್ಟಣದಲ್ಲಿ ಮುಖ್ಯಮಂತ್ರಿಗಳು ಸೆ 5ರಂದು ಚಾಲನೆ ನೀಡಲಿದ್ದಾರೆ. ಪಕ್ಷದ ಮುಖಂಡರು ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವೀಗೊಳಿಸಿ ಎಂದು ಉಸ್ತುವಾರಿ ಸಚಿವರಾದ ಬಸಂತಪ್ಪ ಕರೆ ನೀಡಿದರು. ಅವರು ಸೆ 1ರಂದು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ,   ಕ್ಷೇತ್ರದ ಪ್ರತಿಕುಟುಂಬದ  ಸಮಸ್ಯೆಗೆ ಸ್ಪಂದಿಸುವ ಉದ್ಧೇಶದಿಂದ ಆಂದೋಲನ ಜರುಗಿಸಲಾಗುತ್ತಿದೆ ಎಂದರು. ರಾಜ್ಯಸರ್ಕಾರದಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ , ಸರದಿ ಪ್ರಕಾರ ಪ್ರತಿ ತಿಂಗಳೂ ಒಂದೊಂದು ತಾಲೂಕು ಕೇಂದ್ರದಲ್ಲಿ. ರಾಜ್ಯದ ಎಲ್ಲ‍ಾ ತಾಲೂಕು ಕೇಂದ್ರಗಳಲ್ಲಿ , ಜನ ಸೇವ‍ಾ ಆಂದೋಲನ ನಡೆಯಲಿದೆ. ಆಂದೋಲನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಉಪ ಮುಖ್ಯಮಂತ್ರಿಗಳು ಎಲ್ಲಾ ಮಂತ್ರಿಗಳು , ವಿಧಾನಸೌಧದ ಅಧಿಕಾರಿವರ್ಗ ಜಿಲ್ಲಾ ತಾಲೂಕು ಮಟ್ಟದ ಆಡಳಿತಾಧಿಕಾರಿಗಳು ಹಾಜರಿರುತ್ತಾರೆ. ಜನರಿದ್ದಲ್ಲಿಗೆ ಸರ್ಕಾರ  ದಾವಿಸಿ ಖುದ್ದು ಅಹವಾಲು ಆಲಿಸುವ ಉದ್ಧೇಶದಿಂದ , ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗುವ ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು , ಅಹವ‍ಲುಗಳನ್ನು ನಿಗದಿತ ಅರ್ಜಿನಮೂನೆಯ ಮೂಲಕ ನೀಡಿದ್ದಲ್ಲಿ. ಸಂಬಂಧಿಸಿದ ಇಲಾಖೆಗಳ ಮೂಲಕ , ಆಧ್ಯತೆಯ ಮೇರೆಗೆ ಸಮಸ್ಯೆಗೆ ಸ್ಪಂಧನೆ ನೀಡಲ‌‍ಾಗುತ್ತದೆ ಎಂದು ವಿವರಿಸಿದರು. ಶಾಸಕರಾದ ಡ‍ಾ ॥ ಎನ್ ಟಿ ಶ್ರೀನಿವಾಸ್ ಮಾತನಾಡಿ , ಜನಸೇವಾ ಆಂದೋಲನ ಮುಖ್ಯಮಂತ್ರಿಗಳ ಕನಸಿನ ಕೂಸಾಗಿದ್ದು , ಇದು ಅವರ ಜನಪರ ಕಾಳಜಿಯ ಪ್ರತಿಕವಾಗಿದೆ. ಮುಖ್ಯಮಂತ್ರಿಗಳ ಮಹತ್ವದ ಕಾರ್ಯಕ್ರಮದಲ್ಲಿ ,  ಪಕ್ಷದ ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮುಖಂಡರಲ್ಲಿ ಕೋರಿದರು. ಶಾಸಕರಾದ ಶ್ರಿಮತಿ ಎಂ.ಪಿ.ಲತ‍ಮಲ್ಲಿಕಾರ್ಜುನ , ಜಿಲ್ಲ‍ಾಧಿಕಾರಿ ಕವಿತಾ ಎಸ್ ಮನ್ನಿಕೇರಿ , ಸೇರಿದಂತೆ ಜಿಲ್ಲ‍ಾ ಮಟ್ಟದ ತಾಲೂಕು ಮಟ್ಟದ ಅಧಿಕ‍ಾರಿಗಳು ಹಾಜರಿದ್ದರು.
ಕೂಡ್ಲಿಗಿ ಹೊಸಹಳ್ಳಿ ಗುಡೇಕೋಟೆ ಹೋಬಳಿ  ಮುಖಂಡರು , ಕ್ಷೇತ್ರದ ವಿವಿದೆಡೆಯ ಪ್ರಮುಖರು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲಹೆ ಸೂಚನೆ ನೀಡಿದರು , ನೂರಾರು  ಕಾರ್ಯಕರ್ತರು  ಸಭೆಯಲ್ಲಿ ಭಾಗವಹಿಸಿದ್ದರು.
✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    6 hrs ago
  • ಮಲ್ಲೂರಹಳ್ಳಿಯಲ್ಲಿ ಎಸ್ಐಆರ್ ಸರ್ವೆ ಕಾರ್ಯದಲ್ಲಿ ಲೋಪ ಆಗಿದ್ದಾಗಿ ಗ್ರಾಮಸ್ಥರು ಆರೋಪ ಮಾಡಿದ್ದಾರೆ ಮಲ್ಲೂರಹಳ್ಳಿಯಲ್ಲಿ ಎಸ್ಐಆರ್ ಸರ್ವೆ ಕಾರ್ಯದಲ್ಲಿ ಲೋಪ ಆಗಿದ್ದಾಗಿ ಗ್ರಾಮಸ್ಥರು ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ಇತ್ತೀಚಿಗೆ ಎಸ್ಐಆರ್ ಸರ್ವೆ ಕಾರ್ಯ ಮಾಡಲಾಯಿತು. ರಾಜ್ಯದ ಪ್ರತಿ ಮನೆಮನೆಗೆ ಭೇಟಿ ನೀಡಿ ಮತ ಪರಿಷ್ಕರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲೂರಹಳ್ಳಿ ಗ್ರಾಮದಲ್ಲಿ ಎಸ್ಐಆರ್ ಸರ್ವೆ ಕಾರ್ಯದಲ್ಲಿ ಲೋಪವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ ಕಾಟಯ್ಯ ಆರೂಪಿಸಿದರು. ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು. 2026 ನೇ ಸಾಲಿನ ಎಸ್ಐಆರ್ ಪ್ರಕ್ರಿಯೆಯಲ್ಲಿ ಮಲ್ಲೂರಹಳ್ಳಿ ಬೂತ್ ಸಂಖ್ಯೆ 141ರ ಒಂದನೇ ವಾರ್ಡಿನಲ್ಲಿ 1375 ಮತದಾರರು ಪಟ್ಟಿಯಲ್ಲಿ ಇದ್ದರು ಆದರೆ ಎಸ್ಐಆರ್ ಪ್ರಕ್ರಿಯೆ ಮುಗಿದ ನಂತರ 941 ಮತದಾರರ ಪಟ್ಟಿಯಲ್ಲಿ ಇದ್ದಾರೆ ಇನ್ನು 434 ಮತದಾರರ ಪಟ್ಟಿ ಬೇರೆ ಕಡೆ ವರ್ಗಾವಣೆ ಮಾಡಿರುವುದು ತುಂಬಾ ನೋವಿನ ಸಂಗತಿ ಪಟ್ಟ ಅಧಿಕಾರಿಗಳು ಮತದಾರರ ಪಟ್ಟಿ ಸರಿಪಡಿಸುವಂತೆ ಆಗ್ರಹಿಸಿದರು. ಇನ್ನೂ ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಂ ಬಿ ಮಂಜಣ್ಣ, ರಾಜಣ್ಣ, ರುದ್ರಪ್ಪ,ಡಿ. ರಾಜಣ್ಣ, ಹಂಪಣ್ಣ,ಪಿ. ರುದ್ರೇಶ್ ಜಗದೀಶ್, ಮಲ್ಲಮ್ಮ ಅವರು ಹಾಜರಿದ್ದರು.
    1
    ಮಲ್ಲೂರಹಳ್ಳಿಯಲ್ಲಿ ಎಸ್ಐಆರ್ ಸರ್ವೆ ಕಾರ್ಯದಲ್ಲಿ ಲೋಪ ಆಗಿದ್ದಾಗಿ ಗ್ರಾಮಸ್ಥರು ಆರೋಪ ಮಾಡಿದ್ದಾರೆ
ಮಲ್ಲೂರಹಳ್ಳಿಯಲ್ಲಿ ಎಸ್ಐಆರ್ ಸರ್ವೆ ಕಾರ್ಯದಲ್ಲಿ ಲೋಪ ಆಗಿದ್ದಾಗಿ ಗ್ರಾಮಸ್ಥರು ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ಇತ್ತೀಚಿಗೆ ಎಸ್ಐಆರ್ ಸರ್ವೆ ಕಾರ್ಯ ಮಾಡಲಾಯಿತು. ರಾಜ್ಯದ ಪ್ರತಿ ಮನೆಮನೆಗೆ ಭೇಟಿ ನೀಡಿ ಮತ ಪರಿಷ್ಕರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲೂರಹಳ್ಳಿ ಗ್ರಾಮದಲ್ಲಿ ಎಸ್ಐಆರ್ ಸರ್ವೆ ಕಾರ್ಯದಲ್ಲಿ ಲೋಪವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ ಕಾಟಯ್ಯ ಆರೂಪಿಸಿದರು. ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು. 2026 ನೇ ಸಾಲಿನ ಎಸ್ಐಆರ್ ಪ್ರಕ್ರಿಯೆಯಲ್ಲಿ ಮಲ್ಲೂರಹಳ್ಳಿ ಬೂತ್ ಸಂಖ್ಯೆ 141ರ ಒಂದನೇ ವಾರ್ಡಿನಲ್ಲಿ 1375 ಮತದಾರರು ಪಟ್ಟಿಯಲ್ಲಿ ಇದ್ದರು ಆದರೆ ಎಸ್ಐಆರ್ ಪ್ರಕ್ರಿಯೆ ಮುಗಿದ ನಂತರ 941 ಮತದಾರರ ಪಟ್ಟಿಯಲ್ಲಿ ಇದ್ದಾರೆ ಇನ್ನು 434 ಮತದಾರರ ಪಟ್ಟಿ ಬೇರೆ ಕಡೆ ವರ್ಗಾವಣೆ ಮಾಡಿರುವುದು ತುಂಬಾ ನೋವಿನ ಸಂಗತಿ ಪಟ್ಟ ಅಧಿಕಾರಿಗಳು ಮತದಾರರ ಪಟ್ಟಿ ಸರಿಪಡಿಸುವಂತೆ ಆಗ್ರಹಿಸಿದರು. ಇನ್ನೂ ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಂ ಬಿ ಮಂಜಣ್ಣ, ರಾಜಣ್ಣ, ರುದ್ರಪ್ಪ,ಡಿ. ರಾಜಣ್ಣ, ಹಂಪಣ್ಣ,ಪಿ. ರುದ್ರೇಶ್ ಜಗದೀಶ್, ಮಲ್ಲಮ್ಮ ಅವರು ಹಾಜರಿದ್ದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    14 hrs ago
  • ಗೌರಸಮುದ್ರ ಮಾರಮ್ಮ ದೇವಿ ಪೂರ್ವಭಾವಿ ಸಭೆ ಇದು ರಾಜಕಾರಣ ಮಾಡಕ್ಕೆ ಬಂದಿಲ್ಲ ಇಷ್ಟ ಇದ್ದರೆ ಇರಬಹುದು, ಇಲ್ಲಾಂದ್ರೆ ಎದ್ದು ಹೋಗಬಹುದು. ಸಭೆಯಲ್ಲಿ ಗದ್ದಲಮಾಡುತ್ತಿದ್ದವರಿಗೆ ಶಾಸಕ ಎನ್ ವೈ ಗೋಪಾಲಕೃಷ್ಣ ಖಡಕ್ ಎಚ್ಚರಿಕೆ
    1
    ಗೌರಸಮುದ್ರ ಮಾರಮ್ಮ ದೇವಿ ಪೂರ್ವಭಾವಿ ಸಭೆ ಇದು ರಾಜಕಾರಣ ಮಾಡಕ್ಕೆ ಬಂದಿಲ್ಲ ಇಷ್ಟ ಇದ್ದರೆ ಇರಬಹುದು, ಇಲ್ಲಾಂದ್ರೆ ಎದ್ದು ಹೋಗಬಹುದು. ಸಭೆಯಲ್ಲಿ ಗದ್ದಲಮಾಡುತ್ತಿದ್ದವರಿಗೆ   ಶಾಸಕ ಎನ್ ವೈ ಗೋಪಾಲಕೃಷ್ಣ ಖಡಕ್ ಎಚ್ಚರಿಕೆ
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    16 hrs ago
  • ಹುಬ್ಬಳ್ಳಿಗೆ ಪ್ರಥಮ ಬಾರಿಗೆ ಆಗಮಿಸಿದ ಸಿಎಂ ಡಿ.ಕೆ. ಶಿವಕುಮಾರ್: ಕ್ಷೇತ್ರವನ್ನು ಬರಗಾಲ ಪೀಡಿತ ಎಂದು ಘೋಷಿಸಲು ಶಾಸಕ ಎನ್‌.ಎಚ್. ಕೋನರೆಡ್ಡಿ ಮನವಿ​ಹುಬ್ಬಳ್ಳಿ ಮುಖ್ಯಮಂತ್ರಿ ಆದ ಬಳಿಕ ಪ್ರಥಮ ಬಾರಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್. ಕೋನರೆಡ್ಡಿ ಅವರು ಆತ್ಮೀಯವಾಗಿ ಸ್ವಾಗತ ಕೋರಿದರು. ​ನಗರಕ್ಕೆ ಆಗಮಿಸಿದ ಅವರಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದ ಶಾಸಕರು, ತಮ್ಮ ಕ್ಷೇತ್ರದ ಸದ್ಯದ ಪರಿಸ್ಥಿತಿಯ ಕುರಿತು ಸುದೀರ್ಘ ಚರ್ಚೆ ನಡೆಸಿದರು. ​ಶಾಸಕ ಎನ್.ಎಚ್. ಕೋನರೆಡ್ಡಿ ಅವರ ಮನವಿಯನ್ನು ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು, ಕ್ಷೇತ್ರದ ರೈತರ ಸಮಸ್ಯೆಗೆ ಧನಾತ್ಮಕವಾಗಿ ಸ್ಪಂದಿಸುವುದಾಗಿ ಮತ್ತು ಈ ಕುರಿತು ಶೀಘ್ರವೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
    1
    ಹುಬ್ಬಳ್ಳಿಗೆ ಪ್ರಥಮ ಬಾರಿಗೆ ಆಗಮಿಸಿದ ಸಿಎಂ ಡಿ.ಕೆ. ಶಿವಕುಮಾರ್: ಕ್ಷೇತ್ರವನ್ನು ಬರಗಾಲ ಪೀಡಿತ ಎಂದು ಘೋಷಿಸಲು ಶಾಸಕ ಎನ್‌.ಎಚ್. ಕೋನರೆಡ್ಡಿ ಮನವಿ​ಹುಬ್ಬಳ್ಳಿ
ಮುಖ್ಯಮಂತ್ರಿ ಆದ ಬಳಿಕ ಪ್ರಥಮ ಬಾರಿಗೆ ವಾಣಿಜ್ಯ ನಗರಿ
ಹುಬ್ಬಳ್ಳಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್. ಕೋನರೆಡ್ಡಿ ಅವರು ಆತ್ಮೀಯವಾಗಿ ಸ್ವಾಗತ ಕೋರಿದರು.
​ನಗರಕ್ಕೆ ಆಗಮಿಸಿದ ಅವರಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದ ಶಾಸಕರು, ತಮ್ಮ ಕ್ಷೇತ್ರದ ಸದ್ಯದ ಪರಿಸ್ಥಿತಿಯ ಕುರಿತು ಸುದೀರ್ಘ ಚರ್ಚೆ ನಡೆಸಿದರು.
​ಶಾಸಕ ಎನ್.ಎಚ್. ಕೋನರೆಡ್ಡಿ ಅವರ ಮನವಿಯನ್ನು ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು, ಕ್ಷೇತ್ರದ ರೈತರ ಸಮಸ್ಯೆಗೆ ಧನಾತ್ಮಕವಾಗಿ ಸ್ಪಂದಿಸುವುದಾಗಿ ಮತ್ತು ಈ ಕುರಿತು ಶೀಘ್ರವೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    14 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.